Tag: Subramanian Swam

  • ಸುಶಾಂತ್ ಸಾವಿಗೆ ಭೂಗತ ಲೋಕದ ಲಿಂಕ್: ಸುಬ್ರಮಣಿಯನ್ ಸ್ವಾಮಿ

    ಸುಶಾಂತ್ ಸಾವಿಗೆ ಭೂಗತ ಲೋಕದ ಲಿಂಕ್: ಸುಬ್ರಮಣಿಯನ್ ಸ್ವಾಮಿ

    -ನಿಧನದ ದಿನ ಡ್ರಗ್ ಡೀಲರ್ ಜೊತೆ ಸುಶಾಂತ್ ಭೇಟಿ

    ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನಕ್ಕೆ ಭೂಗತಲೋಕದ ನಂಟಿದೆ ಎಂದು ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.

    ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದು ಕೊಲೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಮಾಧ್ಯಮಗಳ ಚರ್ಚೆಯಲ್ಲಿ ಪಾಲ್ಗೊಂಡ ವೇಳೆ ಹಲವು ಬಾರಿ ಇದೇ ರೀತಿಯ ಆರೋಪಗಳನ್ನು ಮಾಡಿದ್ದಾರೆ. ಇದನ್ನೂ ಓದಿ: ಪ್ರಕರಣಕ್ಕೆ ಹೊಸ ತಿರುವು ನೀಡಿದ ಸುಶಾಂತ್ ಪಕ್ಕದ್ಮನೆ ಮಹಿಳೆ ಹೇಳಿಕೆ

    ಸುಶಾಂತ್ ನಿಧನದ ದಿನ ದುಬೈ ಮೂಲದ ಡ್ರಗ್ ಡೀಲರ್ ಅಯಾಶ್ ಖಾನ್ ನನ್ನ ಭೇಟಿಯಾಗಿದ್ದೇಕೆ? ನಟಿ ಶ್ರೀದೇವಿ ಅವರ ಸಾವಿನ ರೀತಿ ಸುಶಾಂತ್ ಪ್ರಕರಣ ನಿಗೂಢವಾಗಿದೆ. ಸುನಂದಾ ಪುಷ್ಕರ್ ಮರಣೋತ್ತರ ಪರೀಕ್ಷೆ ವೇಳೆ ಏಮ್ಸ್ ಅವರ ಹೊಟ್ಟೆಯಲ್ಲಿ ಸಿಕ್ಕ ವಸ್ತು ಏನು? ಅದೇ ರೀತಿ ಶ್ರೀದೇವಿ ಮತ್ತು ಸುಶಾಂತ್ ಪ್ರಕರಣಗಳಲ್ಲಿ ನಡೆದಿಲ್ಲ. ಸಾವಿನ ದಿನ ಅಂದ್ರೆ ಜೂನ್ 14ರಂದು ಸುಶಾಂತ್ ದುಬೈನ ಡ್ರಗ್ ಡೀಲರ್ ಅಯಾಶ್ ಖಾನ್ ಭೇಟಿಯಾಗಿದ್ದು ಯಾಕೆ ಪ್ರಶ್ನೆಗೆ ಉತ್ತರ ಬೇಕಿದೆ ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

    ಸದ್ಯ ಸುಶಾಂತ್ ಪ್ರಕರಣ ಸಿಬಿಐಗೆ ವರ್ಗಾವಣೆಯಾಗಿದೆ. ಸಿಬಿಐ ಅಧಿಕಾರಿಗಳು ಮುಂಬೈ ಪೊಲೀಸರಿಂದ ತನಿಖೆಯ ಎಲ್ಲ ದಾಖಲಾತಿಗಳನ್ನು ಪಡೆದುಕೊಂಡಿದ್ದಾರೆ. ಸುಶಾಂತ್ ವಾಸವಾಗಿದ್ದ ಮನೆಗೆ ಭೇಟಿ ನೀಡಿದ ಅಧಿಕಾರಿಗಳು ಘಟನೆಯನ್ನ ಮರುಸೃಷ್ಟಿ ಮಾಡಿ ಮಾಹಿತಿ ಕಲೆ ಹಾಕಿದ್ದಾರೆ. ಸುಶಾಂತ್ ಆಪ್ತ ಸಿದ್ಧಾರ್ಥ್ ಪಿಠಾಣಿ ಮತ್ತು ಅಡುಗೆಯಾತ ನೀರಜ್ ಸಿಂಗ್ ಸಮ್ಮುಖದಲ್ಲಿ ಕ್ರೈಂ ಸೀನ್ ಮರುಸೃಷ್ಟಿ ಮಾಡಲಾಗಿತ್ತು. ಸುಶಾಂತ್ ಆಪ್ತರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದ್ದಾರೆ.