Tag: Subhash Guttedar

  • ಸಮುದಾಯ ನಂಬದೇ ಅಭಿವೃದ್ಧಿ ಕೆಲಸದಿಂದ ಜಯ: ಇದು ಕಲಬುರಗಿ ವಿಶೇಷತೆ

    ಸಮುದಾಯ ನಂಬದೇ ಅಭಿವೃದ್ಧಿ ಕೆಲಸದಿಂದ ಜಯ: ಇದು ಕಲಬುರಗಿ ವಿಶೇಷತೆ

    ಕಲಬುರಗಿ: ‌ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಸಮುದಾಯದ ಜನರ ಸಂಖ್ಯೆ ಹೆಚ್ಚಿರಬೇಕು ಎಂಬ ಮಾತು ಪ್ರಚಲಿತದಲ್ಲಿದೆ. ಆದರೆ  ಸೂಫಿ ಸಂತರ ನಾಡು ಎಂದೇ ಖ್ಯಾತಿ ಪಡೆದಿರುವ ಕಲಬುರಗಿ (Kalaburagi) ಜಿಲ್ಲೆಯ ಹಲವು ನಾಯಕರು ಅವರ ಸಮುದಾಯದ (Community) ಮತಗಳು ಬೆರಳೆಣಿಕೆಯಷ್ಟಿದ್ದರೂ ಕ್ಷೇತ್ರದಲ್ಲಿ ಹಲವು ಬಾರಿ ಜಯಗಳಿಸಿದ್ದಾರೆ.‌ ಅಂತಹ ಸಾಲಿಗೆ‌ ಮಾಜಿ ಸಿಎಂ ದಿವಂಗತ ಧರಂ ಸಿಂಗ್ ಆಳಂದ ಶಾಸಕ ಸುಭಾಶ್ ಗುತ್ತೇದಾರ ಹಾಗೂ ಹಾಲಿ ಜೇವರ್ಗಿ ಶಾಸಕ ಧರಂಸಿಂಗ್ ಪುತ್ರ ಅಜಯ್ ಸಿಂಗ್ ಸಮುದಾಯ‌ ನಂಬದೇ ಅಭಿವೃದ್ಧಿ ಕೆಲಸಗಳಿಂದ ಜಯಗಳಿಸಿದವರು ಎಂದರೇ ತಪ್ಪಾಗಲಾರದು.

    ಧರಂಸಿಂಗ್: ರಾಜಕೀಯದಲ್ಲಿ ಅಜಾತ ಶತ್ರು ಎಂದೇ ಖ್ಯಾತಿ ಹೊಂದಿದ ಮಾಜಿ ಸಿಎಂ ಧರಂಸಿಂಗ್ (Dharam Singh) ಜೇವರ್ಗಿ ಕ್ಷೇತ್ರದಿಂದ ಸತತ 8 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಈ ಕ್ಷೇತ್ರದಲ್ಲಿ ಧರಂ ಸಿಂಗ್ ಅವರ ರಜಪೂತ ಜನಾಂಗದ ಮತಗಳು ಇರುವ ಮನೆಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ ಇದೆ. ಹೀಗಿದ್ದರೂ ಧರಂಸಿಂಗ್ ಅವರು ಜನಪರ‌ ಕಾಳಜಿ ಹಾಗೂ ಅಭಿವೃದ್ಧಿ ಹೆಚ್ಚು ಒತ್ತು ನೀಡಿದ್ದರು. ಎಲ್ಲಾ ಸಮುದಾಯದ ಜೊತೆ ಉತ್ತಮ ಸಂಬಂಧದಿಂದ ಅವರ ಸಮುದಾಯದ‌ ಜನಸಂಖ್ಯೆ ಇಲ್ಲದಿದ್ದರೂ ಸತತ ಜಯಗಳಿಸಿದ್ದರು. ಇದನ್ನೂ ಓದಿ: ಗೌರಿಬಿದನೂರು ಕ್ಷೇತ್ರದಲ್ಲಿ ಪಕ್ಷೇತರರದ್ದೇ ನಿರ್ಣಾಯಕ ಪಾತ್ರ – ಈ ಬಾರಿ ಶಿವಶಂಕರ ರೆಡ್ಡಿ ಗೆಲ್ತಾರಾ?

    ಸುಭಾಶ್ ಗುತ್ತೇದಾರ್: ಸದ್ಯ ಬಿಜೆಪಿಯ (BJP) ಆಳಂದ ಕ್ಷೇತ್ರದ ಶಾಸಕರಾದ ಸುಭಾಶ್ ಗುತ್ತೇದಾರ್ (Subhash Guttedar) ಅವರು ಈಡಿಗ ಸಮುದಾಯಕ್ಕೆ ಸೇರಿದ್ದಾರೆ. ಆಳಂದ ಕ್ಷೇತ್ರದಲ್ಲಿ 500 ರಿಂದ 600 ಮತಗಳು ಮಾತ್ರ ಅವರ ಸಮುದಾಯಕ್ಕೆ ಸೇರಿದ ಮತಗಳಾಗಿವೆ. ಆದರೆ ಸಮುದಾಯದ‌ ಮತ ಇಲ್ಲದಿದ್ದರೂ ಕ್ಷೇತ್ರದ ಬಹುಸಂಖ್ಯಾತ ಲಿಂಗಾಯತ, ದಲಿತ ಸೇರಿದಂತೆ ಹಿಂದುಳಿದ ವರ್ಗದ ಮತ ಪಡೆದು ಕ್ಷೇತ್ರದಲ್ಲಿ ಇಲ್ಲಿಯವರೆಗೆ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ.

    ಅಜಯ್‌ಸಿಂಗ್: ಸದ್ಯ ಜೇವರ್ಗಿ (Jevargi) ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಅಜಯ್ ಸಿಂಗ್ (Dr Ajay Singh) ಸಹ ತಂದೆ ಹಾಕಿಕೊಟ್ಟ ಮಾರ್ಗದಲ್ಲಿಯೇ ಸಾಗಿದ್ದು, ತಂದೆಯ ಬಳಿಕ ಎರಡನೇ ಬಾರಿ ಜೇವರ್ಗಿ ಕ್ಷೇತ್ರದ ಶಾಸಕರಾಗಿದ್ದಾರೆ. 2023ರಲ್ಲಿ ಮತ್ತೆ ಸ್ಪರ್ಧಿಸಿ ಹ್ಯಾಟ್ರಿಕ್ ಜಯಗಳಿಸಲು ಪ್ರಯತ್ನಿಸುತ್ತಿದ್ದಾರೆ.

  • 2 ದಶಕಗಳಿಂದ ಹಾಲಿ ಶಾಸಕರಿಗೆ ಸೋಲು – ಇದು ಆಳಂದ ವಿಶೇಷತೆ

    2 ದಶಕಗಳಿಂದ ಹಾಲಿ ಶಾಸಕರಿಗೆ ಸೋಲು – ಇದು ಆಳಂದ ವಿಶೇಷತೆ

    ಕಲಬುರಗಿ: ಕಲಬುರಗಿ (kalaburagi) ಜಿಲ್ಲೆಯ 9 ವಿಧಾನಸಭೆ ಮತಕ್ಷೇತ್ರಗಳಿದ್ದು ಅದರಲ್ಲಿ ಆಳಂದ ವಿಧಾನಸಭಾ ಕ್ಷೇತ್ರ ಮಾತ್ರ ಬಹಳ ವಿಶೇಷವಾಗಿ ಗುರುತಿಸಲ್ಪುಡುತ್ತಿದೆ. ಕಳೆದ ಎರಡು ದಶಕಗಳಿಂದ ಈ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಸತತ ಎರಡು ಬಾರಿ ಯಾವೊಬ್ಬ ವ್ಯಕ್ತಿಯೂ ಆಯ್ಕೆಯಾಗಿಲ್ಲ.

    ಈ ಕ್ಷೇತ್ರದಲ್ಲಿ 1999ರಿಂದ ಇಲ್ಲಿಯವರೆಗೆ ಸುಭಾಶ್ ಗುತ್ತೇದಾರ್ ಹಾಗೂ ಬಿ.ಆರ್.ಪಾಟೀಲ್ ಇಬ್ಬರ ನಡುವೆ ನೇರಾ ನೇರ ಹಣಾಹಣಿಯಿದ್ದು ಈ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿಗೆ ಮಹತ್ವ ಜಾಸ್ತಿಯಾಗಿದೆ. ಹೀಗಾಗಿ ಈ ಇಬ್ಬರು ನಾಯಕರು ಯಾವ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಆ ಎರಡು ಪಕ್ಷಗಳ‌ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ.

    1999 ರಲ್ಲಿ ಜನತಾದಳ(ಎಸ್) (Janata Dal) ಸುಭಾಶ್ ಗುತ್ತೇದಾರ್‌ (Subhash Guttedar) ಸ್ಪರ್ಧಿಸಿದರೆ ಇತ್ತ ಲೋಕಶಕ್ತಿಯಿಂದ ಬಿ.ಆರ್.ಪಾಟೀಲ್ (B.R Patel) ಸ್ಪರ್ಧಿಸಿದ್ದರು. ಆಗ 2 ಸಾವಿರ ಮತಗಳ ಆಸುಪಾಸಿನಲ್ಲಿ ಸುಭಾಶ್ ಗುತ್ತೇದಾರ್‌ ಜಯಗಳಿಸಿದ್ದರು. ನಂತರ 2004ರಲ್ಲಿ ಬಿ.ಆರ್.ಪಾಟಿಲ್ ಜೆಡಿಎಸ್ ನಿಂದ ಸ್ಪರ್ಧಿಸಿದ್ದರೆ ಸುಭಾಶ್ ಗುತ್ತೇದಾರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು.‌ ಆಗ ಕೈ ಅಭ್ಯರ್ಥಿ ವಿರುದ್ಧ 17 ಸಾವಿರ ಮತಗಳ ಅಂತರದಿಂದ ಬಿ.ಆರ್.ಪಾಟೀಲ್ ಜಯಗಳಿಸಿದ್ದರು. ಇದನ್ನೂ ಓದಿ: ಬೇಸಿಗೆಯಲ್ಲಿ ಆಲಿಕಲ್ಲು ಮಳೆ – ಕಲಬುರಗಿಯಲ್ಲಿ ‘ಹಿಮಾಲಯದ ರಸ್ತೆ’!

    2008ರಲ್ಲಿ ಜೆಡಿಎಸ್ ನಿಂದ ಸುಭಾಶ್ ಗುತ್ತೇದಾರ್ ಸ್ಪರ್ಧೆ ಮಾಡಿದರೆ ಬಿ.ಆರ್.ಪಾಟೀಲ್‌ ಕಾಂಗ್ರೆಸ್ ಸ್ಪರ್ಧಿಸಿದ್ದರು. ಆ ಸಮಯದಲ್ಲಿ ಬಿ.ಆರ್.ಪಾಟೀಲ್ ವಿರುದ್ಧ ಸುಭಾಶ್ ಗುತ್ತೇದಾರ್‌ ಅವರು 4 ಸಾವಿರ ಮತಗಳಿಂದ ಜಯಗಳಿಸಿದ್ದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಕೆಜೆಪಿಯಿಂದ ಬಿ.ಆರ್.ಪಾಟೀಲ್ ಸ್ಪರ್ಧಿಸಿದರೆ ಜೆಡಿಎಸ್ ನಿಂದ ಸುಭಾಶ್ ಗುತ್ತೇದಾರ್‌ ಸ್ಪರ್ಧೆ ಮಾಡಿದ್ದರು. ಆಗ ಗುತ್ತೇದಾರ್‌ ವಿರುದ್ಧ ಬಿ.ಆರ್.ಪಾಟೀಲ್ ಅವರು 17 ಸಾವಿರ ಮತಗಳ‌ ಅಂತರದಿಂದ ಜಯಗಳಿಸಿದ್ದರು.

    2018ರಲ್ಲಿ ಕಾಂಗ್ರೆಸ್‌ನಿಂದ (Congress) ಬಿ.ಆರ್.ಪಾಟೀಲ್ ಹಾಗೂ ಬಿಜೆಪಿಯಿಂದ (BJP) ಸುಭಾಶ್ ಗುತ್ತೇದಾರ್ ಇಬ್ಬರು ಮತ್ತೆ ಸ್ಪರ್ಧಿಸಿದ್ದಾಗ ಕೇವಲ 697 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸುಭಾಶ್ ಗುತ್ತೇದಾರ್‌ ಜಯಗಳಿಸಿದ್ದರು.

    ಈ ಮೂಲಕ ಕಳೆದ ಎರಡು ದಶಕಗಳಿಂದ ಈ ಇಬ್ಬರು ರಾಜಕೀಯ ಬದ್ದ ವೈರಿಗಳ ಹೋರಾಟದಲ್ಲಿ ಮತದಾರ ಪ್ರಭು ಮಾತ್ರ ಸತತ ಎರಡನೇ ಬಾರಿಗೆ ಗೆಲ್ಲಿಸಿರುವ ಉದಾಹರಣೆಯೆ ಇಲ್ಲ. ಹೀಗಾಗಿ 2023ರಲ್ಲಿ ಇದೇ ಇತಿಹಾಸ ಮುಂದುವರಿಯುತ್ತಾ? ಅಥವಾ ಇದಕ್ಕೆ ಸುಭಾಶ್ ಗುತ್ತೇದಾರ ಬ್ರೇಕ್ ಹಾಕಿ ಎರಡನೇ ಬಾರಿ ಜಯಗಳಿಸುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ: ಭಾರತದ ಆಂತರಿಕ ಸವಾಲುಗಳನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಚರ್ಚಿಸಲಾರೆ: ವರುಣ್ ಗಾಂಧಿ

  • ಚಾಣಕ್ಯ ಬೇಕಾಗಿಲ್ಲ, ಚಹಾ ಮಾರುವವರನ್ನು ಕೇಳಿದ್ರು ಆಳಂದದಲ್ಲಿ ಗೆಲ್ಲೋದು ಯಾರು ಅನ್ನೋದನ್ನು ಹೇಳ್ತಾರೆ: ಚಂದ್ರಶೇಖರ್ ಹಿರೇಮಠ್

    ಚಾಣಕ್ಯ ಬೇಕಾಗಿಲ್ಲ, ಚಹಾ ಮಾರುವವರನ್ನು ಕೇಳಿದ್ರು ಆಳಂದದಲ್ಲಿ ಗೆಲ್ಲೋದು ಯಾರು ಅನ್ನೋದನ್ನು ಹೇಳ್ತಾರೆ: ಚಂದ್ರಶೇಖರ್ ಹಿರೇಮಠ್

    ಕಲಬುರಗಿ: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿಯ 72 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದಂತೆ ಎಲ್ಲೆಡೆ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ಸದ್ಯ ಜಿಲ್ಲೆಯ ಆಳಂದ್ ಕ್ಷೇತ್ರದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದ ಚಂದ್ರಶೇಖರ್ ಹಿರೇಮಠ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕ್ಷೇತ್ರದಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್‍ಗೆ ಟಿಕೆಟ್ ನೀಡಿದ್ದಕ್ಕೆ ಚಂದ್ರಶೇಖರ್ ಹಿರೇಮಠ್ ತಮ್ಮ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿಎಸ್‍ವೈ ಸೇರಿದಂತೆ ಎಲ್ಲಾ ನಾಯಕರು ತಮಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇಂದು ಯಾವ ಮಾನದಂಡದ ಮೇಲೆ ಸುಭಾಷ್ ಗುತ್ತೇದಾರ್‍ಗೆ ಟಿಕೆಟ್ ನೀಡಲಾಗಿದೆ ಎಂದು ಪ್ರಶ್ನಿಸಿದರು.

    ಇದೇ ವೇಳೆ ಸುಭಾಷ್ ಗುತ್ತೇದಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಸುಭಾಷ್ ಗುತ್ತೇದಾರ್ ಓರ್ವ ಮದ್ಯ ಮಾರಾಟಗಾರ. ಮದ್ಯ ಮಾರಾಟಗಾರನಿಗೆ ಟಿಕೆಟ್ ನೀಡುವ ಮೂಲಕ ಪಕ್ಷ ನೈತಿಕತೆ ಮರೆತಿದೆ. ಪಕ್ಷದ ನಾಯಕರು ಈ ಕುರಿತು ಎಚ್ಚೆತ್ತುಕೊಂಡು ಆಳಂದ್ ಟಿಕೆಟ್ ನೀಡುವ ನಿರ್ಧಾರದ ಕುರಿತು ಪರಾಮರ್ಶಿಸಬೇಕು. ಆಳಂದ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎಂದು ಹೇಳಲು ಚಾಣಕ್ಯ ಬೇಕಾಗಿಲ್ಲ, ಚಹಾ ಮಾರುವರನ್ನು ಕೇಳಿದರೂ ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.