Tag: subham film

  • ಚಾಕ್ಲೇಟ್ ಕಲರ್ ಕಟ್ ಔಟ್ ಡ್ರೆಸ್‌ನಲ್ಲಿ ಸಮಂತಾ ಮಿಂಚಿಂಗ್- ಬೆಂಕಿ ಲುಕ್ ಎಂದ ಫ್ಯಾನ್ಸ್

    ಚಾಕ್ಲೇಟ್ ಕಲರ್ ಕಟ್ ಔಟ್ ಡ್ರೆಸ್‌ನಲ್ಲಿ ಸಮಂತಾ ಮಿಂಚಿಂಗ್- ಬೆಂಕಿ ಲುಕ್ ಎಂದ ಫ್ಯಾನ್ಸ್

    ಸೌತ್ ಬ್ಯೂಟಿ ಸಮಂತಾ (Samantha) ಹೊಸ ಫೋಟೋಶೂಟ್‌ನಿಂದ ಮತ್ತೆ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಚಾಕ್ಲೇಟ್ ಕಲರ್ ಕಟ್ ಔಟ್ ಡ್ರೆಸ್‌ನಲ್ಲಿ ಸ್ಯಾಮ್ ಮಿಂಚಿದ್ದಾರೆ. ಇದನ್ನೂ ಓದಿ:ಮತ್ತೆ ಸೂಪರ್ ಹೀರೋ ಆಗಿ ತೇಜ್ ಸಜ್ಜಾ ಎಂಟ್ರಿ; ‘ಮಿರಾಯ್’ ಟೀಸರ್ ರಿಲೀಸ್‌ಗೆ ಡೇಟ್ ಫಿಕ್ಸ್

    ಸಮಂತಾ ಚಿತ್ರರಂಗಕ್ಕೆ ಬಂದು 15 ವರ್ಷಗಳಾಗಿದೆ. ಕಾಲಕ್ಕೆ ತಕ್ಕಂತೆ ನಟಿ ಕೂಡ ಹೊಸ ಬಗೆಯ ಔಟ್‌ಫಿಟ್ ಮೂಲಕ ಆಗಾಗ ಸಂಚಲನ ಮೂಡಿಸುತ್ತಲೇ ಇರುತ್ತಾರೆ. ಈಗ ಚಾಕ್ಲೇಟ್ ಡ್ರೆಸ್‌ನಲ್ಲಿ ನಟಿ ಕಂಗೊಳಿಸಿದ್ದಾರೆ. ವಿವಿಧ ಭಂಗಿಯಲ್ಲಿ ಪೋಸ್ ಕೊಟ್ಟಿರುವ ಸಮಂತಾರನ್ನು ನೋಡಿ ಫ್ಯಾನ್ಸ್ ಬೆಂಕಿ ಅವತಾರ ಎಂದು ಕೊಂಡಾಡಿದ್ದಾರೆ.

    ನಿನ್ನೆ (ಮೇ 26) ಕಾರ್ಯಕ್ರಮವೊಂದರಲ್ಲಿ ನಟಿ ಕಟ್ ಔಟ್ ಬಾಡಿಕಾನ್ ಡ್ರೆಸ್ ಧರಿಸಿ ಬಂದಿದ್ದರು. ಸಮಂತಾ ಹೊಸ ಲುಕ್ ನೋಡಿ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ಪವನ್ ಕಲ್ಯಾಣ್ ನಟನೆಯ ‘ಓಜಿ’ ಚಿತ್ರದ ರಿಲೀಸ್ ಡೇಟ್ ಅನೌನ್ಸ್

    ಸಮಂತಾ ಇತ್ತೀಚೆಗೆ ‘ಶುಭಂ’ (Subham) ಎಂಬ ಸಿನಿಮಾ ನಿರ್ಮಾಣ ಮಾಡಿದ್ದರು. ಮೊದಲ ನಿರ್ಮಾಣದ ಸಿನಿಮಾದಲ್ಲೇ ನಟಿ ಸಕ್ಸಸ್ ಕಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ನಟಿ ಅವಕಾಶ ನೀಡಿದ್ದಾರೆ. ಈ ಚಿತ್ರದಲ್ಲಿ ಸಮಂತಾ ಕೂಡ ಅತಿಥಿ ಪಾತ್ರ ಮಾಡಿದ್ದರು.

    ಸಿನಿಮಾ ಬಿಟ್ಟು ವೈಯಕ್ತಿಕ ವಿಚಾರವಾಗಿಯೂ ನಟಿ ಭಾರೀ ಸುದ್ದಿಯಾಗ್ತಿದ್ದಾರೆ. ಇತ್ತೀಚೆಗೆ ನಿರ್ಮಾಪಕ ರಾಜ್ ನಿಡಿಮೋರು ತೋಳಲ್ಲಿ ಸಮಂತಾ ತಲೆಯಿಟ್ಟು ಮಲಗಿದ ಫೋಟೋವನ್ನು ಹಂಚಿಕೊಂಡಿದ್ದರು. ಅದಷ್ಟೇ ಅಲ್ಲ, ಸಾಕಷ್ಟು ಕಾರ್ಯಕ್ರಮಗಳಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಬ್ಬರು ಮದುವೆಯಾಗ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

    ನಾಗಚೈತನ್ಯ ಜೊತೆ 2017ರಲ್ಲಿ ಪ್ರೀತಿಸಿ ಸಮಂತಾ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ ನಟಿ 2021ರಲ್ಲಿ ಡಿವೋರ್ಸ್ ಪಡೆದರು. ಬಳಿಕ ನಟಿ ಶೋಭಿತಾ ಜೊತೆ ಮಾಜಿ ಪತಿ ಹಸೆಮಣೆ ಏರಿದರು. ಅವರಂತೆಯೇ ಸಮಂತಾ ಕೂಡ ಮತ್ತೆ ಮದುವೆಯಾಗಲಿ, ಹೊಸ ಜೀವನ ಶುರು ಮಾಡಲಿ ಎಂದು ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ಸಮಂತಾ ನಿರ್ಮಾಣದ ‘ಶುಭಂ’ ಚಿತ್ರದ ಸಾಂಗ್ ರಿಲೀಸ್

    ಸಮಂತಾ ನಿರ್ಮಾಣದ ‘ಶುಭಂ’ ಚಿತ್ರದ ಸಾಂಗ್ ರಿಲೀಸ್

    ಮಂತಾ ನಿರ್ಮಾಣದ ‘ಶುಭಂ’ (Subham Film) ಸಿನಿಮಾದ ಸಾಂಗ್ ರಿಲೀಸ್ ಆಗಿದೆ. ಇದರ ಪ್ರಮೋಷನಲ್ ಹಾಡಿನಲ್ಲಿ ಸಮಂತಾ ಕೂಡ ಹೆಜ್ಜೆ ಹಾಕಿದ್ದಾರೆ. ಯೂಟ್ಯೂಬ್‌ನಲ್ಲಿ ಈ ಚಿತ್ರದ ಹಾಡು ಭರ್ಜರಿ ವಿವ್ಸ್ ಗಿಟ್ಟಿಸಿಕೊಳ್ತಿದೆ. ಇದನ್ನೂ ಓದಿ:ಚಿರಂಜೀವಿ ಜೊತೆ ನಟಿಸಲು ಅಬ್ಬಬ್ಬಾ 18 ಕೋಟಿ ಡಿಮ್ಯಾಂಡ್ ಮಾಡಿದ್ರಾ ನಯನತಾರಾ?

    ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕು ಎಂಬ ನಿಟ್ಟಿನಲ್ಲಿ ಸಮಂತಾ (Samantha) ಚಿತ್ರ ನಿರ್ಮಾಣ ಸಂಸ್ಥೆ ಶುರು ಮಾಡಿದ್ದಾರೆ. ಈ ನಿರ್ಮಾಣ ಸಂಸ್ಥೆಯ ಮೂಲಕ ‘ಶುಭಂ’ ಚಿತ್ರವನ್ನು ನಟಿ ನಿರ್ಮಾಣ ಮಾಡಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಹೀಗಾಗಿ ವಿಶೇಷ ಪಾತ್ರ ಮಾಡುವ ಮೂಲಕ ಚಿತ್ರತಂಡ ಸಾಥ್ ನೀಡಿದ್ದಲ್ಲದೇ ಈಗ ಹಾಡೋದಕ್ಕೆ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:ಫಾರ್ಮ್‌ಹೌಸ್‌ನಲ್ಲಿ ದರ್ಶನ್‌ ಪತ್ನಿ ರಿಲ್ಯಾಕ್ಸ್‌- ಕುದುರೆ ಜೊತೆ ವಿಜಯಲಕ್ಷ್ಮಿ ಪೋಸ್

    ‘ಜನ್ಮ ಜನ್ಮಮಲಾ ಬಂಧಂ’ ಹಾಡಿನಲ್ಲಿ ಹೊಸ ಪ್ರತಿಭೆಗಳ ಜೊತೆ ಸಮಂತಾ ಕೂಡ ಡ್ಯಾನ್ಸ್ ಮಾಡಿದ್ದಾರೆ. ಮಸ್ತ್ ಆಗಿ ಹೆಜ್ಜೆ ಹಾಕಿರೋ ನಟಿಯನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ನಿಮ್ಮಗೋಸ್ಕರ ಈ ಚಿತ್ರವನ್ನು ನಾವು ನೋಡ್ತೀವಿ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.

    ‘ಶುಭಂ’ ಚಿತ್ರ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಹೊಸದಾಗಿ ಮದುವೆಯಾದ ಗಂಡಸರು, ತಮ್ಮ ಹೆಂಡ್ತಿಯನ್ನು ಕಂಟ್ರೋಲ್‌ನಲ್ಲಿ ಇಡಬೇಕು ಎಂದು ಬಯಸುತ್ತಾರೆ. ಆದರೆ ಅದು ನಡೆಯೋದು ರಾತ್ರಿ 9 ಗಂಟೆವರೆಗೂ ಮಾತ್ರವೇ ಆಗಿರುತ್ತದೆ. ಏಕೆಂದರೆ 9 ಗಂಟೆಗೆ ಶುರುವಾಗುವ ಸೀರಿಯಲ್ ನೋಡೋದ್ರಿಂದ ಪತ್ನಿಯರೆಲ್ಲ ಹೇಗೆ ದೆವ್ವ ಆಗುತ್ತಾರೆ. ಇದೇ ಈ ಸಿನಿಮಾ ಇಂಟೆಸ್ಟಿಂಗ್ ಕಥೆಯಾಗಿದೆ. ಇದರಲ್ಲಿ ನಟಿ ಸಮಂತಾ ಮಂತ್ರವಾದಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

    ಆ ಧಾರಾವಾಹಿಗೂ, ದೆವ್ವದ ಕಾಟಕ್ಕೂ ಏನು ಸಂಬಂಧ ಎಂಬುದನ್ನು ತಿಳಿಯುವ ಕೌತುಕ ಪ್ರೇಕ್ಷಕರಲ್ಲಿ ಮೂಡಿದೆ. ಮೇ 9ರಂದು ಸಮಂತಾ ನಿರ್ಮಾಣದ ‘ಶುಭಂ’ ಸಿನಿಮಾ ಬಿಡುಗಡೆ ಆಗಲಿದೆ. ಅದರಲ್ಲಿ ನಟಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರವನ್ನು ಪ್ರವೀಣ್ ಕಂಡ್ರೆಗುಲಾ ನಿರ್ದೇಶನ ಮಾಡಿದ್ದಾರೆ.