Tag: Subba Reddy

  • 2029ಕ್ಕೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರ್ತೀವಿ, ಬಿಜೆಪಿ ನಾಯಕರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

    2029ಕ್ಕೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರ್ತೀವಿ, ಬಿಜೆಪಿ ನಾಯಕರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

    ಬೆಂಗಳೂರು: 2029ಕ್ಕೆ ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ಆಗ ಬಿಜೆಪಿ ನಾಯಕರನ್ನು (BJP Leaders) ತಿಹಾರ್ ಜೈಲಿಗೆ (Tihar Jail) ತುಂಬೋದು ಖಚಿತ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೇಳಿದ್ದಾರೆ.

    ಶಾಸಕ ಸುಬ್ಬಾರೆಡ್ಡಿ ನಿವಾಸದ ಮೇಲೆ ಇಡಿ ದಾಳಿ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಮಿತ್ ಶಾ ಮಗ ಜಯ್ ಶಾ ಅಂತ ಇದ್ದಾರೆ. ಅವರ ಕಂಪನಿಗಳು ಪಾರದರ್ಶಕವಾಗಿ ಇದ್ಯಾ? ನಿತಿನ್ ಗಡ್ಕರಿ ಅವರದ್ದೂ 16 ಸಕ್ಕರೆ ಕಾರ್ಖಾನೆ ಇದೆ, ಅಲ್ಲಿ ಇ.ಡಿ, ಐಟಿ ಹೋಗಲ್ಲ. ಬರೀ ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಚಿಕ್ಕಮಗಳೂರು-ತಿರುಪತಿ ನಡುವೆ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೇವೆ ಪ್ರಾರಂಭ

    ಸುಬ್ಬಾರೆಡ್ಡಿಯವರು ತುಂಬಾ ಕಷ್ಟಪಟ್ಟು ಬಡತನದಲ್ಲಿ ಮೇಲೆಬಂದು ಬೆಂಗಳೂರಿನಲ್ಲಿ ತನ್ನದೇ ಆದ ಸಾಮ್ರಾಜ್ಯವನ್ನು ಕಟ್ಟಿಕೊಂಡು ಮೂರು ಬಾರಿ ಶಾಸಕರಾಗಿದ್ದಾರೆ. ಸುಬ್ಬಾರೆಡ್ಡಿ ಅಂದರೆ ಪಕ್ಷನಿಷ್ಠೆ, ಪಕ್ಷನಿಷ್ಠೆ ಅಂದರೆ ಅದು ಸುಬ್ಬಾರೆಡ್ಡಿ. ಅಂತಹ ವ್ಯಕ್ತಿಯ ಮನೆಮೇಲೆ ಇಂದು ಇಡಿ ರೇಡ್ ಮಾಡಿದೆ. ಅದಾನಿ, ಅಂಬಾನಿ ಮೇಲೆ ಇಡಿ ದಾಳಿ ಆಗಲ್ಲ. ಬಿಜೆಪಿ, ವಿಜಯೇಂದ್ರ ಮೇಲೆ ರೇಡ್ ಆಗಲ್ಲ. ಐಟಿ, ಇಡಿಯವರಿಗೆ ಕಾಂಗ್ರೆಸ್‌ನವರ ಮೇಲೆ ಬಹಳ ಪ್ರೀತಿ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಎಷ್ಟೇ ಟಾರ್ಗೆಟ್ ಮಾಡಿದರೂ ನಾವು ಹೆದರಲ್ಲ ಎಂದರು. ಇದನ್ನೂ ಓದಿ: ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆ, ಚರ್ಚೆ ಇಲ್ಲ: ಹೆಚ್.ಸಿ.ಮಹದೇವಪ್ಪ

    2029ರಲ್ಲಿ ಅಧಿಕಾರಕ್ಕೆ ಬಂದಾಗ ಬಿಜೆಪಿಯವರನ್ನು ಹುಡುಕಿ ಹುಡುಕಿ ತಿಹಾರ್ ಜೈಲನ್ನು ತುಂಬಿಸುತ್ತೇವೆ. ಅವರು ಫ್ಲವರ್ ಹಾಕಿದರೆ ನಾವು ಪಾಟ್ ಸೇರಿಸಿ ಹಾಕುತ್ತೇವೆ. ಕಾಂಗ್ರೆಸ್ ಶಾಸಕರನ್ನು ಪದೇ ಪದೇ ಟಾರ್ಗೆಟ್ ಮಾಡಲಾಗುತ್ತಿದೆ. ಇದು ಬಿಜೆಪಿಯವರಿಗೆ ಒಳ್ಳೆಯದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: SSLC ಫಲಿತಾಂಶ ಹೆಚ್ಚಳಕ್ಕೆ ಕ್ರಮ – 29 ಅಂಶಗಳ ಕಾರ್ಯಕ್ರಮ ಅನುಷ್ಠಾನಗೊಳಿಸಿದ ಶಿಕ್ಷಣ ಇಲಾಖೆ

  • ವಿದೇಶದಲ್ಲಿ ಹೂಡಿಕೆ – ಕೈ ಶಾಸಕ ಸುಬ್ಬಾರೆಡ್ಡಿ ನಿವಾಸದ ಮೇಲೆ ಇಡಿ ದಾಳಿ

    ವಿದೇಶದಲ್ಲಿ ಹೂಡಿಕೆ – ಕೈ ಶಾಸಕ ಸುಬ್ಬಾರೆಡ್ಡಿ ನಿವಾಸದ ಮೇಲೆ ಇಡಿ ದಾಳಿ

    ಬೆಂಗಳೂರು: ಚಿಕ್ಕಬಳ್ಳಾಪುರದ ಬಾಗೆಪಲ್ಲಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ (Congress) ಸುಬ್ಬಾರೆಡ್ಡಿ (Subba Reddy) ಅವರ ಬೆಂಗಳೂರು ನಿವಾಸ, ಕಚೇರಿ ಸೇರಿದಂತೆ ಅವರಿಗೆ ಸೇರಿದ ಐದು ಸ್ಥಳಗಳ ಮೇಲೆ‌ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ವಿದೇಶದಲ್ಲಿ ಹಣ ಹೂಡಿಕೆ ಮತ್ತು ವ್ಯವಹಾರದ ಹಿನ್ನೆಲೆಯಲ್ಲಿ ದೆಹಲಿಯ ಇಡಿ ಅಧಿಕಾರಿಗಳ ತಂಡ ಸುಬ್ಬಾರೆಡ್ಡಿ ಅವರ  ಮಾರತ್ ಹಳ್ಳಿಯ ಮನೆ,  ಭಗಿನಿ ಆಸ್ಪತ್ರೆ ಮತ್ತು ಕುಟುಂಬಸ್ಥರ ಮನೆಯ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ.  ಇದನ್ನೂ ಓದಿ: ರಾಜಕೀಯ ನಿವೃತ್ತಿ ಬಳಿಕ ಕೃಷಿಯಲ್ಲಿ ತೊಡಗಿಕೊಳ್ತೀನಿ: ಅಮಿತ್ ಶಾ‌

    ಮಲೇಷ್ಯಾದಲ್ಲಿ ಆರ್ಥಿಕ ವ್ಯವಹಾರ ಹೊಂದಿರುವ ಸುಬ್ಬಾರೆಡ್ಡಿ, ಕುಟುಂಬದ ಹೆಸರಲ್ಲಿ ಮನೆಗಳನ್ನು ಐಷಾರಾಮಿ ಕಾರುಗಳನ್ನು ಖರೀದಿ ಮಾಡಿದ್ದಾರೆ. ಉದ್ಯಮಿಯೂ ಆಗಿರುವ ಸುಬ್ಬಾರೆಡ್ಡಿ ವಿವಿಧ ದೇಶಗಳಲ್ಲಿ ಆಸ್ತಿ ಮತ್ತು ವಿದೇಶಗಳಲ್ಲಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ.

    ಸುಬ್ಬಾರೆಡ್ಡಿ ಮಲೇಷ್ಯಾ, ಹಾಂಕಾಂಗ್​​, ಜರ್ಮನಿಯಲ್ಲಿ ಆಸ್ತಿ ಹೊಂದಿದ್ದಾರೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಸುಬ್ಬಾರೆಡ್ಡಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಭಾರತದಾದ್ಯಂತ 37, ಬೆಂಗಳೂರಿನ 5 ಕಡೆ ಇಡಿ ದಾಳಿ ನಡೆಸಿದೆ.