Tag: sub-variant

  • ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಹೊಸ ತಳಿ ಪ್ರಕರಣ ಪತ್ತೆ – 7 ಪಾಸಿಟಿವ್

    ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಹೊಸ ತಳಿ ಪ್ರಕರಣ ಪತ್ತೆ – 7 ಪಾಸಿಟಿವ್

    ಮುಂಬೈ: ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಕೋವಿಡ್ ರೂಪಾಂತರಿಯಾಗಿರುವ ಓಮಿಕ್ರಾನ್ ಬಿಎ.4 ಉಪತಳಿ 4 ರೋಗಿಗಳಲ್ಲಿ ಪತ್ತೆಯಾಗಿದೆ. ಇನ್ನೊಂದು ಓಮಿಕ್ರಾನ್‌ನ ಹೊಸ ಉಪತಳಿ ಬಿಎ.5 3 ರೋಗಿಗಳಲ್ಲಿ ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

    ಓಮಿಕ್ರಾನ್‌ನ ಈ ಹೊಸ ಉಪತಳಿಗಳು ಹೆಚ್ಚು ಅಪಾಯಕಾರಿ ಅಲ್ಲದಿರುವುದರಿಂದ ಜನರು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಓಮಿಕ್ರಾನ್‌ನ ಈ ಹೊಸ ಉಪತಳಿಗಳು ಮೊದಲ ಬಾರಿಗೆ ಏಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾ ಸೇರಿದಂತೆ ವಿಶ್ವದ ಕೆಲವು ಭಾಗಗಳಲ್ಲಿ ಕಂಡುಬಂದಿವೆ. ಕಳೆದ ವಾರ ತಮಿಳುನಾಡು ಹಾಗೂ ತೆಲಂಗಾಣದಲ್ಲಿ ಬಿಎ.4 ರೂಪಂತರಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಇದನ್ನೂ ಓದಿ: ಒಟ್ಟು 196 ಕೇಸ್ – ಬೆಂಗ್ಳೂರಲ್ಲಿ 125 ಮಂದಿ ಆಸ್ಪತ್ರೆಯಿಂದ ಬಿಡುಗಡೆ

    ರೋಗಿಗಳ ಜೀನೋಮ್ ಪರೀಕ್ಷೆಯನ್ನು ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಆ್ಯಂಡ್ ರಿಸರ್ಚ್ ನಡೆಸಿದೆ. ಫರಿದಾಬಾದ್‌ನ ಭಾರತೀಯ ಜೈವಿಕ ದತ್ತಾಂಶ ಕೇಂದ್ರ ಸೋಂಕನ್ನು ದೃಢಪಡಿಸಿದೆ. ಈ ಬಗ್ಗೆ ಪುಣೆಯ ಎಲ್ಲಾ 7 ರೋಗಿಗಳಲ್ಲಿ ಓಮಿಕ್ರಾನ್ ಉಪತಳಿ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಲ್ತುಳಿತಕ್ಕೆ ಗರ್ಭಿಣಿ, ಮಕ್ಕಳು ಸೇರಿ 31 ಜನ ಸಾವು

    7 ಮಂದಿ ಸೋಕಿತರಲ್ಲಿ 6 ಮಂದಿ ವಯಸ್ಕರಾಗಿದ್ದು, ಒಬ್ಬ 9 ವರ್ಷದ ಬಾಲಕನೂ ಸೇರಿದ್ದಾನೆ. 6 ವಯಸ್ಕರಲ್ಲಿ ಎಲ್ಲರೂ 2 ಡೋಸ್ ಲಸಿಕೆ ಪಡೆದಿದ್ದು, ಒಬ್ಬರು ಬೂಸ್ಟರ್ ಡೋಸ್ ಸಹ ಪಡೆದಿದ್ದಾರೆ. ಬಾಲಕನಿಗೆ ಯಾವುದೇ ಲಸಿಕೆ ನೀಡಲಾಗಿಲ್ಲ. ಸದ್ಯ ರೋಗಿಳಲ್ಲಿ ಸೌಮ್ಯ ರೋಗದ ಲಕ್ಷಣ ಇದ್ದು, ತಮ್ಮ ಮನೆಯಲ್ಲಿಯೇ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

  • ಒಮಿಕ್ರಾನ್ ಉಪ ರೂಪಾಂತರಿ ಬಿಎ.2 – 57 ದೇಶಗಳಲ್ಲಿ ಪತ್ತೆ: WHO

    ಒಮಿಕ್ರಾನ್ ಉಪ ರೂಪಾಂತರಿ ಬಿಎ.2 – 57 ದೇಶಗಳಲ್ಲಿ ಪತ್ತೆ: WHO

    ಬರ್ನ್: ಓಮಿಕ್ರಾನ್ ಉಪ-ರೂಪಾಂತರಿ ಬಿಎ.2 ಇಲ್ಲಿಯವರೆಗೆ ವಿಶ್ವದ 57 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ತಿಳಿಸಿದೆ.

    ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ಮೂಲ ಆವೃತ್ತಿಗಿಂತಲೂ ಬಿಎ.2 ಅತ್ಯಂತ ವೇಗದಲ್ಲಿ ಹರಡಬಲ್ಲ ಸಾಂಕ್ರಾಮಿಕ ರೋಗವಾಗಿದೆ. ಈಗಾಗಲೇ ಇದು ವಿಶ್ವದ 57 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ತಿಳಿಸಿದೆ. ಇದನ್ನೂ ಓದಿ: ದೇಶದ ಪ್ರಗತಿಗಾಗಿ ಬಿಜೆಪಿಯನ್ನು ಬಂಗಾಳಕೊಲ್ಲಿಗೆ ಎಸೆಯಿರಿ: ಸಿಎಂ ಕೆಸಿಆರ್

    10 ವಾರಗಳ ಹಿಂದೆಯಷ್ಟೇ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಓಮಿಕ್ರಾನ್ ಅತ್ಯಂತ ವೇಗವಾಗಿ ಹರಡಿರುವ ಕೊರೊನಾ ರೂಪಾಂತರಿಗಳಲ್ಲಿ ಮೊದಲನೆಯದ್ದು. ಕಳೆದ ತಿಂಗಳ ಕೋವಿಡ್ ಕೇಸ್‌ಗಳಲ್ಲಿ ಶೇ.93 ಕ್ಕಿಂತಲೂ ಹೆಚ್ಚಿನ ಪಾಲನ್ನು ಓಮಿಕ್ರಾನ್ ಹೊಂದಿದೆ. ಅವುಗಳಲ್ಲಿ ಉಪ-ರೂಪಾಂತರಿಗಳಾಗಿ ಬಿಎ.1, ಬಿಎ.1.1, ಬಿಎ.2, ಹಾಗೂ ಬಿಎ.3ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಸಾಪ್ತಾಹಿಕ ಎಪಿಡೆಮಿಯೋಲಾಜಿಕಲ್ ವರದಿಯಲ್ಲಿ ತಿಳಿಸಿದೆ.

    ಓಮಿಕ್ರಾನ್ ಪ್ರಕರಣಗಳಲ್ಲಿ ಶೇ.96 ರಷ್ಟು ಪಾಲನ್ನು ಮೊದಲ ಬಾರಿಗೆ ಗುರುತಿಸಿದ ಆವೃತ್ತಿಗಳಾದ ಬಿಎ.1 ಹಾಗೂ ಬಿಎ.1.1ಗಳೇ ಹೊಂದಿವೆ. ಆದರೆ ಬಿಎ.2 ಪ್ರಕರಣಗಳಲ್ಲಿ ಸ್ಪಷ್ಟ ಏರಿಕೆ ಕಂಡುಬರುತ್ತಿದ್ದು, ಇದು ತೀವ್ರ ಗತಿಯಲ್ಲಿ ಇನ್ನೂ ಹಲವು ಉಪ-ರೂಪಾಂತರಿಗಳನ್ನು ಹುಟ್ಟು ಹಾಕುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇದನ್ನೂ ಓದಿ: ಕಲ್ಲಿದ್ದಲು ಗಣಿ ಕುಸಿತ – 13 ಮಂದಿ ಬಲಿ

    ಇದೀಗ ಬಿಎ.2 ಪ್ರಕರಣಗಳು 57 ದೇಶಗಳಲ್ಲಿ ಕಂಡುಬಂದಿದ್ದು, ಓಮಿಕ್ರಾನ್‌ನ ಎಲ್ಲಾ ಆವೃತ್ತಿಗಳನ್ನು ಒಟ್ಟು ಸೇರಿಸಿದರೆ ಅರ್ಧಕ್ಕಿಂತಲೂ ಹೆಚ್ಚಿನ ಪಾಲನ್ನು ಈ ಆವೃತ್ತಿ ಒಳಗೊಂಡಿದೆ ಎನ್ನಲಾಗಿದೆ. ಓಮಿಕ್ರಾನ್‌ಗಿಂತಲೂ ಅತ್ಯಂತ ವೇಗವಾಗಿ ಬಿಎ.2 ಹರಡಬಲ್ಲದು ಎಂದು ಇತ್ತೀಚಿನ ಹಲವು ಅಧ್ಯಯನಗಳು ತಿಳಿಸಿವೆ.