Tag: Sub inspector

  • Ramanagara | 2 ಬೈಕ್‌ಗಳಿಗೆ ಗುದ್ದಿ ಹಳ್ಳಕ್ಕೆ ಬಿದ್ದ KSRTC ಬಸ್ – ಸಬ್ ಇನ್ಸ್‌ಪೆಕ್ಟರ್ ಸಾವು

    Ramanagara | 2 ಬೈಕ್‌ಗಳಿಗೆ ಗುದ್ದಿ ಹಳ್ಳಕ್ಕೆ ಬಿದ್ದ KSRTC ಬಸ್ – ಸಬ್ ಇನ್ಸ್‌ಪೆಕ್ಟರ್ ಸಾವು

    ರಾಮನಗರ: ತಿರುವಿನಲ್ಲಿ ನಿಯಂತ್ರಣ ತಪ್ಪಿ ಎರಡು ಬೈಕ್‌ಗಳಿಗೆ ಗುದ್ದಿ ಕೆಎಸ್‌ಆರ್‌ಟಿಸಿ ಬಸ್ (KSRTC Bus) ಹಳ್ಳಕ್ಕೆ ಮಗುಚಿದ ಪರಿಣಾಮ ಬೈಕ್‌ನಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ (Sub Inspector) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು-ಕನಕಪುರ ಮುಖ್ಯರಸ್ತೆಯ ಕಗ್ಗಲೀಪುರ ಪೊಲೀಸ್ ಠಾಣೆ ಸಮೀಪ ನಡೆದಿದೆ.

    ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ (Electronic City) ಸಬ್ ಇನ್ಸ್‌ಪೆಕ್ಟರ್ ನಾಗರಾಜು ಮೃತ ದುರ್ದೈವಿ. ಘಟನೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಸ್ತೆ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಎದುರಿಗೆ ಬರುತ್ತಿದ್ದ ಬೈಕ್‌ಗೆ ಬಸ್ ಡಿಕ್ಕಿ ಹೊಡೆದಿದ್ದು, ಬಳಿಕ ಹಳ್ಳಕ್ಕೆ ಮಗುಚಿ ಬಿದ್ದಿದೆ. ಇದನ್ನೂ ಓದಿ: ಐಪಿಎಲ್‌ ಪ್ಲೇಆಫ್‌ – 4ನೇ ಸ್ಥಾನಕ್ಕೆ 3 ತಂಡಗಳ ಮಧ್ಯೆ ರೇಸ್‌

    ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಕಗ್ಗಲೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಳೆಯ ಅವಾಂತರ – ಸಾಯಿ ಲೇಔಟ್‌ಗೆ ಜಲದಿಗ್ಭಂದನ

  • ಹೆತ್ತ ತಾಯಿಯ ಮೇಲೆ ಹಲ್ಲೆ ಆರೋಪ – ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಎಫ್‌ಐಆರ್ ದಾಖಲು

    ಹೆತ್ತ ತಾಯಿಯ ಮೇಲೆ ಹಲ್ಲೆ ಆರೋಪ – ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಎಫ್‌ಐಆರ್ ದಾಖಲು

    ಬೆಂಗಳೂರು: ಹೆತ್ತ ತಾಯಿ ಮೇಲೆ ರಾಮಮೂರ್ತಿ ನಗರ (Ramamurthy Nagar) ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (Sub Inspector) ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

    ಮಂಜುನಾಥ್ ಹಲ್ಲೆ ಮಾಡಿದ ಸಬ್ ಇನ್ಸ್‌ಪೆಕ್ಟರ್. ಈ ಸಂಬಂಧ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ತಾಯಿ ಮಂಗಳಮ್ಮ ದೂರು ದಾಖಲಿಸಿದ್ದಾರೆ. ಸಬ್ ಇನ್ಸ್ಪೆಕ್ಟರ್ ಮಂಜುನಾಥ್‌ಗೆ ಮದುವೆಯಾಗಿದ್ದು, ಕೆಆರ್ ಪುರದ (KR Puram) ಅಯ್ಯಪ್ಪ ನಗರದಲ್ಲಿ ಮಹಿಳೆಯೊಬ್ಬರ ಜೊತೆಗೆ ಅನೈತಿಕ ಸಂಬಂಧ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ತಾಯಿ ಮಂಗಳಮ್ಮ ಮತ್ತು ಮಂಜುನಾಥನ ಇಬ್ಬರು ಸಹೋದರಿಯರು ಆ ಮಹಿಳೆಯ ಮನೆಯ ಬಳಿ ಹೋಗಿ ಗಲಾಟೆ ಮಾಡಿದ್ದಾರೆ. ಈ ವಿಚಾರ ತಿಳಿದ ಸಬ್ ಇನ್ಸ್ಪೆಕ್ಟರ್ ಮಂಜುನಾಥ್, ಸ್ಥಳಕ್ಕೆ ಹೋಗಿ ತಾಯಿ ಮಂಗಳಮ್ಮ ಮೇಲೆ ಹಲ್ಲೆ ಮಾಡಿ ಇಲ್ಲಿಂದ ಹೋಗುವಂತೆ ಗಲಾಟೆ ಮಾಡಿದ್ದಾರೆ. ಇದನ್ನೂ ಓದಿ: 270 ಕೆಜಿ ರಾಡ್‌ ಕುತ್ತಿಗೆಗೆ ಬಿದ್ದು ಚಿನ್ನದ ಪದಕ ವಿಜೇತ ಪವರ್‌ಲಿಫ್ಟರ್‌ ಸಾವು

    ಈ ಸಂಬಂಧ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಮಗ ಮಂಜುನಾಥ್, ಮಹಿಳೆ ಮತ್ತು ಮತ್ತೊಬ್ಬ ವ್ಯಕ್ತಿಯ ಮೇಲೆ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: 7 ತಿಂಗಳ ಮಗು ರೇಪ್ ಮಾಡಿದವನಿಗೆ ಗಲ್ಲು ಶಿಕ್ಷೆ – ಕೋಲ್ಕತ್ತಾ ವಿಶೇಷ ಕೋರ್ಟ್‌ನಿಂದ ತೀರ್ಪು

  • ಸಬ್‍ಇನ್‍ಸ್ಪೆಕ್ಟರ್ ಪತ್ನಿ ಅನುಮಾನಾಸ್ಪದ ಸಾವು – ಪತಿಯ ವಿರುದ್ಧ ಕೊಲೆ ಆರೋಪ

    ಸಬ್‍ಇನ್‍ಸ್ಪೆಕ್ಟರ್ ಪತ್ನಿ ಅನುಮಾನಾಸ್ಪದ ಸಾವು – ಪತಿಯ ವಿರುದ್ಧ ಕೊಲೆ ಆರೋಪ

    ಬೆಂಗಳೂರು: ನಗರದ ಸಬ್‍ಇನ್‍ಸ್ಪೆಕ್ಟರ್  (Sub Inspector) ಒಬ್ಬರ ಮೇಲೆ ಪತ್ನಿಗೆ (Wife) ಕಿರುಕುಳ ನೀಡಿ ಕೊಲೆಗೈದ ಆರೋಪ ಕೇಳಿ ಬಂದಿದೆ.

    ಮೃತ ಮಹಿಳೆಯನ್ನು ಶಿಲ್ಪಾ (33) ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ರಮೇಶ್ ಅವರ ಮೇಲೆ ಶಿಲ್ಪಾ ಪೊಷಕರು ಕೊಲೆ ಆರೋಪ ಹೊರಿಸಿದ್ದಾರೆ. ಅಲ್ಲದೆ ನಿರಂತರ ಪತ್ನಿಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಸಹ ಕೇಳಿ ಬಂದಿದೆ. ಇದನ್ನೂ ಓದಿ: ಎಲ್ಲರಿಗೂ ಎಐ, ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಅನ್ನೋ ಆಲೋಚನೆ ಬೇಡ: ಹೆಚ್‌.ಆರ್.ರಂಗನಾಥ್‌

    ರಮೇಶ್ ಹಾಗೂ ಶಿಲ್ಪಾ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಳೆದ ಐದಾರು ವರ್ಷಗಳಿಂದ ಲಿವಿಂಗ್ ಟುಗೇದರ್ (Living Together) ರಿಲೇಶನ್‍ಶಿಪ್‍ನಲ್ಲಿದ್ದರು. ಆದರೆ ಮದುವೆಯಾಗಲು (Marriage) ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಬಳಿಕ ಹಠಬಿಡದೆ ಪೊಲೀಸರ ಸಮ್ಮುಖದಲ್ಲಿ ಶಿಲ್ಪಾ, ರಮೇಶ್‍ನನ್ನು ಮದುವೆಗೆ ಒಪ್ಪಿಸಿದ್ದಳು.

    ಮದುವೆ ಬಳಿಕ ಮನೆಯವರು ಒಪ್ಪುತ್ತಿಲ್ಲ ಎಂದು ಪತ್ನಿಗೆ ಪ್ರತ್ಯೇಕ ಮನೆ ಮಾಡಿಕೊಟ್ಟಿದ್ದ. ಆದರೆ ಜೀವನಕ್ಕೆ ಯಾವುದೇ ಅರ್ಥಿಕ ನೆರವು ನೀಡುತ್ತಿರಲಿಲ್ಲ. ಪದೇ ಪದೇ ಜಾತಿ ನಿಂದನೆ ಮಾಡಿ, ತನ್ನ ಅಕ್ಕನ ಮಗಳನ್ನು ಮದುವೆಯಾಗಲು ನೀನು ಅಡ್ಡಿಯಾಗಿದ್ದೀಯಾ ಮನೆಬಿಟ್ಟು ಹೋಗು ಎಂದು ಕಿರುಕುಳ ನೀಡುತ್ತಿದ್ದ ಎಂದು ಮಹಿಳೆಯ ಪೋಷಕರು ದೂರಿದ್ದಾರೆ.

    ಶುಕ್ರವಾರ ರಾತ್ರಿ ಕುಟುಂಬದವರ ಜೊತೆ ಫೋನಿನಲ್ಲಿ ಮಾತನಾಡಿದ್ದ ಶಿಲ್ಪಾ ಖರ್ಚಿಗೆ ಹಣ ಬೇಕು ಎಂದು ಹಾಕಿಸಿಕೊಂಡಿದ್ದಳು. ಆದರೆ ಇಂದು ಬೆಳಗ್ಗೆ ಮನೆಯ ಮಾಲೀಕರು ಬಾಗಿಲು ತೆರೆಯುತ್ತಿಲ್ಲ ಎಂದು ಕುಟುಂಬದವರಿಗೆ ತಿಳಿಸಿದ್ದಾರೆ. ಕುಟುಂಬದವರು ಬರುವ ಮುನ್ನವೇ ಶವವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಶಿಲ್ಪಾ ಕುಟುಂಬ ಆಗ್ರಹಿಸಿದೆ. ಇದನ್ನೂ ಓದಿ: ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ ಪತಿ

  • ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಟ್ರಕ್‌ ಹತ್ತಿಸಿ ಕೊಲೆ – 24 ಗಂಟೆಯಲ್ಲಿ 3ನೇ ದುರ್ಘಟನೆ

    ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಟ್ರಕ್‌ ಹತ್ತಿಸಿ ಕೊಲೆ – 24 ಗಂಟೆಯಲ್ಲಿ 3ನೇ ದುರ್ಘಟನೆ

    ಗಾಂಧೀನಗರ: ತಡೆಯಲು ಮುಂದಾದ ಗುಜರಾತ್‌ ಪೊಲೀಸ್‌ಗೆ ಟ್ರಕ್‌ ಹತ್ತಿಸಿ ಕೊಲೆ ಮಾಡಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಕಳೆದ 24 ಗಂಟೆಯಲ್ಲಿ ಪೊಲೀಸ್‌ ಅಧಿಕಾರಿಗಳನ್ನು ಹತ್ಯೆ ಮಾಡಿದ ಮೂರನೇ ಘಟನೆ ಇದಾಗಿದೆ.

    ಪೊಲೀಸ್‌ ಕಾನ್‌ಸ್ಟೇಬಲ್‌ ಕಿರಣ್‌ ರಾಜ್‌ ಹತ್ಯೆಯಾದವರು. ಗುಜರಾತ್‌ನ ಬೋರ್ಸಾದ್‌ನಲ್ಲಿ ಪೊಲೀಸ್ ಪೇದೆ ಮೇಲೆ ಟ್ರಕ್‌ ಹತ್ತಿಸಿ ಕೊಲೆ ಮಾಡಲಾಯಿತು. ಇದನ್ನೂ ಓದಿ: DSP‌ ಮಾದರಿಯಲ್ಲೇ ಮಹಿಳಾ PSI ಹತ್ಯೆ?- ತಪಾಸಣೆಗೆ ಮುಂದಾದ ಅಧಿಕಾರಿಗೆ ವಾಹನ ಡಿಕ್ಕಿ ಹೊಡೆದು ಸಾವು

    ವಾಹನದಲ್ಲಿ ರಾಜಸ್ಥಾನದ ನಂಬರ್‌ ಪ್ಲೇಟ್‌ ಹೊಂದಿದ್ದ ಅನುಮಾನಾಸ್ಪದ ಟ್ರಕ್ ಅನ್ನು ನಿಲ್ಲಿಸಲು ಕಾನ್‌ಸ್ಟೇಬಲ್‌ ಪ್ರಯತ್ನಿಸಿದ್ದಾರೆ. ಆದರೆ ಟ್ರಕ್ ಚಾಲಕ ನಿಲ್ಲಿಸುವ ಬದಲು ವೇಗವನ್ನು ಹೆಚ್ಚಿಸಿ ಅವರ ಮೇಲೆ ಹತ್ತಿಸಿದ್ದಾರೆ. ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡಿದ್ದ ಕಾನ್‌ಸ್ಟೇಬಲ್‌ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ಟ್ರಕ್ ಚಾಲಕನನ್ನು ಗುರುತಿಸಲಾಗಿದ್ದು, ಆತನನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ- ತಡೆಯಲು ಹೋದ DSP ಮೇಲೆ ಟ್ರಕ್ ಹರಿಸಿ ಬರ್ಬರ ಹತ್ಯೆ

    ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯನ್ನು ತಡೆಯಲು ಹೋದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಕಲ್ಲು ತುಂಬಿದ ಟ್ರಕ್ ಹರಿಸಿ ಬರ್ಬರ ಹತ್ಯೆ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿತ್ತು. ಈ ಘಟನೆ ಬೆನ್ನಲ್ಲೇ ಮತ್ತೊಬ್ಬರು ಅಧಿಕಾರಿಯನ್ನು ಹತ್ಯೆ ಮಾಡಿರುವ ಘಟನೆ ಈಚೆಗೆ ನಡೆದಿತ್ತು. ಅಂತೆಯೇ ಜಾರ್ಖಂಡ್‌ನಲ್ಲಿ ತಪಾಸಣೆಗೆ ಮುಂದಾದ ಮಹಿಳಾ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ಗೆ ವಾಹನದಿಂದ ಡಿಕ್ಕಿ ಹೊಡೆದು ಹತ್ಯೆ ಮಾಡಿರುವ ಘಟನೆಯೂ ಬೆಳಕಿಗೆ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಆತ್ಮಹತ್ಯೆಗೆ ಶರಣಾದ ಬೆಂಗಳೂರಿಗೆ ಸಬ್‍ ಇನ್ಸ್‌ಪೆಕ್ಟರ್

    ಆತ್ಮಹತ್ಯೆಗೆ ಶರಣಾದ ಬೆಂಗಳೂರಿಗೆ ಸಬ್‍ ಇನ್ಸ್‌ಪೆಕ್ಟರ್

    ಬೆಂಗಳೂರು: ಸೌತ್ ಸೆನ್ ಠಾಣೆಯ ಸಬ್‍ ಇನ್ಸ್‌ಪೆಕ್ಟರ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಸುದರ್ಶನ್(51) ಆತ್ಮಹತ್ಯೆಗೆ ಶರಣಾಗಿರುವ ಸಬ್‍ ಇನ್ಸ್‌ಪೆಕ್ಟರ್. ಸುದರ್ಶನ್ ಅವರು ಸೌತ್ ಸೆನ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ತಮ್ಮ ಮನೆಯಲ್ಲಿಯೇ ಸುದರ್ಶನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಸೊಸೆ ಮೇಲೆ ಕೋಪಗೊಂಡು 45 ಸುತ್ತು ಪೊಲೀಸರ ಮೇಲೆಯೇ ಗುಂಡು ಹಾರಿಸಿದ ಮಾವ

    ಸುದರ್ಶನ್ ಅವರು ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಯಾವುದೇ ರೀತಿಯ ಮಾಹಿತಿ ಸಿಕ್ಕಿಲ್ಲ. ಪ್ರಾಥಮಿಕ ತನಿಖೆ ವೇಳೆ ಸುದರ್ಶನ್ ಅವರು ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.

    Live Tv

  • ಅಕ್ರಮ ಸಂಬಂಧ ಪ್ರಶ್ನಿಸಿ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಪತ್ನಿಯಿಂದಲೇ ದೂರು

    ಅಕ್ರಮ ಸಂಬಂಧ ಪ್ರಶ್ನಿಸಿ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಪತ್ನಿಯಿಂದಲೇ ದೂರು

    ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಪತ್ನಿಯೇ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.

    ಸೂಲಿಬೆಲೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಮೇಶ್ ಅವರ ಪತ್ನಿ, ನಕಲಿ ಪೋಷಕರನ್ನು ಸೃಷ್ಟಿಸಿ ರಮೇಶ್ ಯುವತಿಯೊಬ್ಬಳನ್ನು ಮದುವೆಯಾಗಿದ್ದರು. ಈ ವಿಚಾರ ತಿಳಿದು ಯುವತಿ ದೂರವಾಗಲು ತೀರ್ಮಾನಿಸಿ, ಬೇರೊಬ್ಬರ ಜೊತೆಗೆ ಮದುವೆ ನಿಶ್ಚಯ ಮಾಡಿಸಿಕೊಂಡು, ಎಂಗೇಜ್ ಮೆಂಟ್ ಮಾಡಿಕೊಳ್ಳುವ ದಿನ ಚೌಟ್ರಿಗೆ ಬಂದು ಮದುವೆ ಮುರಿದಿದ್ದರು. ನಂತರ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ ಮೇಲೆ ಯುವತಿಯನ್ನ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿ ಜೊತೆಗಿನ ಶಿಕ್ಷಕನ ಲವ್ವಿಡವ್ವಿ – ಅಶ್ಲೀಲ ಫೋಟೋ ವೈರಲ್

    police (1)

    ರಮೇಶ್‍ಗೆ ಬೇರೆ, ಬೇರೆ ಅಕ್ರಮ ಸಂಬಂಧಗಳಿವೆ. ಈ ಬಗ್ಗೆ ಆತನ ಮೊಬೈಲ್‍ನಲ್ಲಿ ಅಶ್ಲೀಲ ವೀಡಿಯೋ, ಅರೆಬೆತ್ತಲೆ ಫೋಟೊಗಳು, ಮಾಟ ಮಂತ್ರದಂತ ಫೋಟೊಗಳಿದ್ದು ಕೆಲ ವೀಡಿಯೋಗಳು ವೈರಲ್ ಆಗಿವೆ. ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಬೇರೆ, ಬೇರೆ ಯುವತಿಯರನ್ನು ಮದುವೆಯಾಗಿದ್ದಾರೆ ಎಂದು ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪತಿಯಿಂದಲೇ ಮಾನಸಿಕ ಕಿರುಕುಳವಾಗುತ್ತಿದ್ದು, ರಮೇಶ್ ಜೊತೆ ಚನ್ನರಾಯಪಟ್ಟಣ ಸಬ್ ಇನ್ಸ್‍ಪೆಕ್ಟರ್ ಶರಣಪ್ಪ ಸಹ ಕೈ ಜೋಡಿಸಿದ್ದು ನ್ಯಾಯ ಕೊಡಿಸಬೇಕು ಅಂತಾ ದೂರು ನೀಡಿದ್ದಾರೆ.

    ಸದ್ಯ ಪ್ರಕರಣ ಸಂಬಂಧ ಕೆಲಸ ನಿರ್ವಹಿಸುತ್ತಿದ್ದ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿಯೇ ಸಬ್ ಇನ್ಸ್‌ಪೆಕ್ಟರ್ ರಮೇಶ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಕೆಎಸ್‍ಆರ್‌ಟಿಸಿ ಬಸ್ ಚಾಲಕನ ನಿರ್ಲಕ್ಷ್ಯ- ಕಾಲೇಜು ಬಸ್‍ಗೆ ಡಿಕ್ಕಿ

  • ಸಬ್‍ಇನ್ಸ್‌ಪೆಕ್ಟರ್ ಮೇಲೆ ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿ

    ಸಬ್‍ಇನ್ಸ್‌ಪೆಕ್ಟರ್ ಮೇಲೆ ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿ

    ಚಂಡೀಗಢ: ಸಬ್‍ಇನ್ಸ್‌ಪೆಕ್ಟರ್ ಗಸ್ತು ತಿರುಗುತ್ತಿದ್ದ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಹರಿಯಾಣದ ಯುಮುನಾನಗರದಲ್ಲಿ ನಡೆದಿದೆ.

    ಯಮುನಾನಗರದ ರಾಡೌರ್ ಪ್ರದೇಶದಲ್ಲಿ ಸಬ್‍ಇನ್ಸ್‌ಪೆಕ್ಟರ್ ಸತೀಶ್ ಕಾಂಬೋಜ್ ತಮ್ಮ ತಂಡದೊಂದಿಗೆ ಗಸ್ತು ತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಬಸ್ ನಿಲ್ದಾಣದ ಬಳಿ ಸತೀಶ್ ಅವರು ಗಸ್ತು ತಿರುಗುತ್ತಿದ್ದರು. ಈ ವೇಳೆ ಬ್ಯಾಂಕ್‍ನ ಹೊರಗೆ ಬೈಕ್‍ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ನಿಂತಿರುವುದು ಅವರ ಗಮನಕ್ಕೆ ಬಂದಿದೆ. ಆದರೆ ಪೊಲೀಸರ ತಂಡವನ್ನು ಕಂಡ ಇಬ್ಬರು ಯುವಕರು ರದೌರಿ ರಸ್ತೆಯತ್ತ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಮಗಳ ಲಿವಿಂಗ್ ಟುಗೆದರ್ ಸಂಬಂಧಕ್ಕೆ ತಾಯಿ ವಿರೋಧ – ಪ್ರಿಯಕರನಿಂದ ತಾಯಿ ಹತ್ಯೆ

    police (1)

    ಅನುಮಾನಗೊಂಡ ಪೊಲೀಸ್ ತಂಡವು ದುಷ್ಕರ್ಮಿಗಳನ್ನು ಬೆನ್ನಟ್ಟಿದ್ದು, ರಾಡೌರಿ ರಸ್ತೆಯಲ್ಲಿರುವ ಎಫ್‍ಸಿಐ ಗೋಡೌನ್‍ಗಳ ಬಳಿ ಬೈಕ್ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಮುಸುಕುಧಾರಿ ಯುವಕರು ಬೈಕ್ ನಿಲ್ಲಿಸುವ ಬದಲು ಎಸ್‍ಐ ಸತೀಶ್ ಕಾಂಬೋಜ್ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ.

    ಬೈಕ್ ಸವಾರರು ಸ್ಥಳದಿಂದ ಪರಾರಿಯಾಗಿದ್ದು, ಸತೀಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸಿಎಂ ಪೋಸ್ಟ್‌ಗಾಗಿ 2,500 ಕೋಟಿ ರೂ. ಬೇಡಿಕೆ ವಿಚಾರ- ತನಿಖೆಗೆ ಡಿಕೆಶಿ ಒತ್ತಾಯ

    ಮತ್ತೊಂದೆಡೆ ದಾಳಿಕೋರರನ್ನು ಬಂಧಿಸುವುದಾಗಿ ಭರವಸೆ ನೀಡಿದ ಸುರೀಂದರ್ ಪಾಲ್ ಸಿಂಗ್, ಎಸ್ಪಿ ಸ್ವತಃ ಘಟನಾ ಸ್ಥಳವನ್ನು ಪರಿಶೀಲಿಸಿ ಜಿಲ್ಲೆಯಾದ್ಯಂತ ರಸ್ತೆಗಳನ್ನು ನಿರ್ಬಂಧಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

  • ಭಾವಿಪತಿಯನ್ನೇ ಅರೆಸ್ಟ್ ಮಾಡಿದ ಇನ್ಸ್‌ಪೆಕ್ಟರ್

    ಭಾವಿಪತಿಯನ್ನೇ ಅರೆಸ್ಟ್ ಮಾಡಿದ ಇನ್ಸ್‌ಪೆಕ್ಟರ್

    ಡಿಸ್ಪುರ್: ತಾನು ಮದುವೆಯಾಗುತ್ತಿರುವವನು ವಂಚಕ ಎಂದು ತಿಳಿದ ನಂತರ ಭಾವಿಪತಿ ವಿರುದ್ಧವೇ ಸಬ್ ಇನ್ಸ್‌ಪೆಕ್ಟರ್ ಎಫ್‍ಐಆರ್ ದಾಖಲಿಸಿದ್ದಾರೆ. ಈ ಸುದ್ದಿ ಅಸ್ಸಾಂನಲ್ಲಿ ವೈರಲ್ ಆಗುತ್ತಿದೆ.

    ವಂಚಕ ರಾಣಾ ಪೊಗಾಗ್ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್(ಒಎನ್‍ಜಿಸಿ)ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಎಲ್ಲರನ್ನು ನಂಬಿಸಿದ್ದನು. ಅಷ್ಟೇ ಅಲ್ಲದೇ ಒಎನ್‍ಜಿಸಿನಲ್ಲಿ ಕೆಲಸ ಮಾಡಲು ಇಷ್ಟಪಡುವವರಿಗೆ ಕೆಲಸ ಕೊಡಿಸುವುದಾಗಿ ಭರವಸೆ ಕೊಟ್ಟು ಹಲವರನ್ನು ವಂಚಿಸುತ್ತಿದ್ದನು. ಈ ಹಿನ್ನೆಲೆ ಸತ್ಯ ಬಯಲಿಗೆ ಬಂದ ನಂತರ ಪೊಗಾಗ್‍ನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿರುವಾಗಲೇ ಇಂಟರ್ವ್ಯೂ ಅಟೆಂಡ್ ಮಾಡಿದ ಹಠವಾದಿ 

    ಏನಿದು ಪ್ರಕರಣ?
    ಅಸ್ಸಾಂನ ನಾಗಾಂವ್ ಜಿಲ್ಲೆಯ ಸಬ್ ಇನ್ಸ್‍ಪೆಕ್ಟರ್ ಆಗಿದ್ದ ಜುನ್ಮೋನಿ ರಾಭಾ ಅವರೊಂದಿಗೆ ರಾಣಾ ಪೊಗಾಗ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದನು. ಈ ಹಿನ್ನೆಲೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನವೆಂಬರ್‍ನಲ್ಲಿ ಮದುವೆಯಾಗಲು ನಿರ್ಧರಿಸಲಾಗಿತ್ತು.

    police (1)

    ಆದರೆ ಈತ ಒಬ್ಬ ವಂಚಕ ಎಂದು ತಿಳಿದ ತಕ್ಷಣ ಜುನ್ಮೋನಿ, ಆತನ ವಿರೋಧ ಎಫ್‍ಐಆರ್ ದಾಖಲಿಸಿದ್ದಾರೆ. ಈ ಕುರಿತು ಮಾತನಾಡಿದ ಜುನ್ಮೋನಿ, ಅವನು(ರಾಣಾ ಪೊಗಾಗ್) ಎಷ್ಟು ದೊಡ್ಡ ವಂಚಕ ಎಂದು ನನಗೆ ಮಾಹಿತಿ ಕೊಟ್ಟ ಮೂರು ಜನರಿಗೆ ನಾನು ಆಭಾರಿಯಾಗಿದ್ದೇನೆ. ಅವರು ನನ್ನ ಕಣ್ಣುಗಳನ್ನು ತೆರೆಸಿದರು ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: 90 ವರ್ಷದ ಬುದ್ಧಿಮಾಂದ್ಯ ತಾಯಿ, ಮಗನನ್ನು ಗುರುತಿಸುವ ಭಾವನಾತ್ಮಕ ವೀಡಿಯೋ ವೈರಲ್ 

    ಪ್ರಸ್ತುತ ಪೊಗಾಗ್‍ನನ್ನು ಪೊಲೀಸರು ಬಂಧಿಸಿದ್ದು, ಜನರನ್ನು ವಂಚಿಸಿ ಕೋಟ್ಯಂತರ ರೂ. ಸಂಗ್ರಹಿಸಿದ್ದಾನೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

  • ರಸ್ತೆಯಲ್ಲಿ ನಿಂತ ಐವರು ಮಹಿಳೆಯರಿಗೆ ಕಿರುಕುಳ- ಎಸ್‍ಐ ಅರೆಸ್ಟ್

    ರಸ್ತೆಯಲ್ಲಿ ನಿಂತ ಐವರು ಮಹಿಳೆಯರಿಗೆ ಕಿರುಕುಳ- ಎಸ್‍ಐ ಅರೆಸ್ಟ್

    – 200 ಸಿಸಿಟಿವಿ ಪರಿಶೀಲಿಸಿದಾಗ ಪತ್ತೆಯಾದ ಎಸ್‍ಐ

    ನವದೆಹಲಿ: ರಸ್ತೆಯಲ್ಲಿ ನಿಂತಿದ್ದ ಐವರು ಮಹಿಳೆಯರ ಜೊತೆ ಅಸಭ್ಯವಾಗಿ ನಡೆದುಕೊಂಡು ಕಿರುಕುಳ ನೀಡಿದ ಆರೋಪದಡಿಯಲ್ಲಿ ದೆಹಲಿ ಪೊಲೀಸರು ಸಬ್ ಇನ್‍ಸ್ಪೆಕ್ಟರ್ ಒಬ್ಬರನ್ನ ಬಂಧಿಸಿದ್ದಾರೆ.

    ಪುನಿತ್ ಗ್ರೋವಲ್ ಬಂಧಿತ ಸಬ್ ಇನ್‍ಸ್ಪೆಕ್ಟರ್. ಕಳೆದ ಕೆಲ ದಿನಗಳಿಂದ ದೆಹಲಿಯ ದ್ವಾರಕಾ ನಗರದಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ಓರ್ವ ನಡೆದುಕೊಳ್ಳುತ್ತಿರುವ ಬಗ್ಗೆ ಕೆಲವರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮೌಖಿಕ ದೂರು ಸಲ್ಲಿಸಿದ್ದರು. ಇದನ್ನೂ ಓದಿ: 190 ಪುರುಷರನ್ನು ರೇಪ್‍ಗೈದಿದ್ದ ಸಲಿಂಗಕಾಮಿಗೆ ಶಿಕ್ಷೆ ಪ್ರಕಟ

    ಮೌಖಿಕ ದೂರಿನ ಅನ್ವಯ ಎಫ್‍ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗಾಗಿ ದ್ವಾರಕಾ ನಗರದಲ್ಲಿಯ 200ಕ್ಕೂ ಅಧಿಕ ಸಿಸಿಟಿವಿ ಫೂಟೇಜ್ ಸಂಗ್ರಹಿಸಿದ್ದಾರೆ. ಸಿಸಿಟಿವಿ ಫೂಟೇಜ್ ನಲ್ಲಿ ನಂಬರ್ ಪ್ಲೇಟ್ ಇಲ್ಲದ ಕಾರ್ ಪತ್ತೆಯಾಗಿದ್ದು, ಅದರ ಮೂಲ ಹಿಡಿದು ತೆರಳಿದ ಪೊಲೀಸರಿಗೆ ಆರೋಪಿ ಓರ್ವ ಸಬ್ ಇನ್‍ಸ್ಪೆಕ್ಟರ್ ಅನ್ನೋ ವಿಷಯ ತಿಳಿದಿದೆ. ಇದನ್ನೂ ಓದಿ: ಇಬ್ಬರೂ ಪತ್ನಿಯರೊಂದಿಗಿನ ಕಾಮದಾಟ ಲೈವ್ ಮಾಡುತ್ತಿದ್ದವನ ಬಂಧನ – ಲೈವ್ ಮಾಡಿ ಹಣಗಳಿಸುತ್ತಿದ್ದ ಆರೋಪಿ

    ಅಕ್ಟೋಬರ್ 17 ಮತ್ತು ಅಕ್ಟೋಬರ್ 20ರ ನಡುವೆ ಈ ಘಟನೆಗಳು ಬೆಳಗ್ಗೆ 8 ರಿಂದ 9 ಗಂಟೆಯೊಳಗೆ ನಡೆದಿವೆ. ಬೆಳಗ್ಗೆ ಕಲರ್ ಬಟ್ಟೆ ಧರಿಸಿ ಕಾರಿನಲ್ಲಿ ಬರುತ್ತಿದ್ದ ಪುನೀತ್, ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದನು. ಮಾತನಾಡುವ ನೆಪದಲ್ಲಿ ಮಹಿಳೆಯರ ಬಳಿ ತೆರಳುತ್ತಿದ್ದ ಪುನೀತ್ ಕಿರುಕುಳ ನೀಡುತ್ತಿದ್ದನು.ಹಲವರು ಈತನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ರೆ, ಕೆಲವರು ಪೊಲೀಸ್ ಹೆಲ್ಪ್ ಲೈನ್ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಇದನ್ನೂ ಓದಿ: ಸಲಿಂಗ ಕಾಮ ಮುಚ್ಚಿಡಲು ವಿವಾಹವಾದ- ಯಾರಿಗೂ ಹೇಳದಂತೆ ಪತ್ನಿಗೆ ಕೊಲೆ ಬೆದರಿಕೆ

    ಘಟನೆ ಸಂಬಂಧ ತನಿಖೆಗಿಳಿದ ಪೊಲೀಸರು ಸ್ಥಳೀಯ 200ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ದೃಶ್ಯದಲ್ಲಿ ನಂಬರ್ ಪ್ಲೇಟ್ ಇಲ್ಲದ ಬೂದು ಬಣ್ಣದ ಕಾರು ಪತ್ತೆಯಾಗಿತ್ತು. ಕಾರ್ ಮಾಲೀಕನೇ ಎಸ್‍ಐ ಪುನೀತ್ ವಿಷಯ ಗೊತ್ತಾಗುತ್ತಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 354 ಡಿ, 354 ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಇದನ್ನೂ ಓದಿ: ಸಲಿಂಗಕಾಮದಾಸೆಗೆ ಮರ್ಮಾಂಗಕ್ಕೆ ವಿದ್ಯಾರ್ಥಿಯಿಂದಲೇ ಕತ್ತರಿ – ಪೊಲೀಸರ ತಂತ್ರದಿಂದ ಅಸಲಿ ಕೃತ್ಯ ಬೆಳಕಿಗೆ

  • ಡ್ಯೂಟಿಗೆ ತೆರಳುವ ಮುನ್ನ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡ್ತಿರೋ ಪೊಲೀಸ್

    ಡ್ಯೂಟಿಗೆ ತೆರಳುವ ಮುನ್ನ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡ್ತಿರೋ ಪೊಲೀಸ್

    – ಸಬ್ ಇನ್ಸ್‌ಪೆಕ್ಟರ್ ಕಾರ್ಯಕ್ಕೆ ನೆಟ್ಟಗರು ಪಿಧಾ

    ಬೆಂಗಳೂರು: ಡ್ಯೂಟಿಗೆ ಹೋಗುವ ಮುನ್ನ ಕಾರ್ಮಿಕರ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕಾರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

    ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶಾಂತಪ್ಪ ಜಡೆಮ್ಮನವರ್, ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಸ್ಮಾರ್ಟ್‍ಫೋನ್ ಮತ್ತು ಲ್ಯಾಪ್‍ಟಾಪ್‍ಗಳು ಇಲ್ಲದ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಇವರ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನು ಓದಿ: 3 ಕಿ.ಮೀ ಕಾಲುವೆಯನ್ನು 30 ವರ್ಷ ಅಗೆದು ಗ್ರಾಮಕ್ಕೆ ನೀರು ಹರಿಸಿದ ರೈತ

    ಪ್ರತಿದಿನ ಶಾಂತಪ್ಪ ಅವರು ಬೆಳಗ್ಗೆ 7 ಗಂಟೆಗೆ ಕರ್ತವ್ಯಕ್ಕೆ ತೆರಳುತ್ತಾರೆ. ಆದರೆ ಇದಕ್ಕೂ ಮುಂಚೆ ಅವರು, ಪಶ್ಚಿಮ ಬೆಂಗಳೂರಿನ ನಾಗರಬಾವಿಯಲ್ಲಿ ವಾಸವಿರುವ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡುತ್ತಾರೆ. ಸುಮಾರು 30 ಮಕ್ಕಳಿಗೆ ಒಂದು ಗಂಟೆ ಪಾಠ ಮಾಡಿ ಕೆಲಸಕ್ಕೆ ಹೋಗುತ್ತಾರೆ. ಶಾಲೆಯ ಪಠ್ಯಕ್ಕೆ ಅನುಗುಣವಾಗಿ ಪಾಠ ಮಾಡಲು ಸಾಧ್ಯವಾಗದೇ ಇರುವ ಕಾರಣ, ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಗಣಿತದ ಬಗ್ಗೆ ಪಾಠವನ್ನು ಮಾಡುತ್ತಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಶಾಂತಪ್ಪ, ನಾನು 20 ದಿನಗಳಿಂದ ಈ ಕೆಲಸವನ್ನು ಮಾಡುತ್ತಿದ್ದೇನೆ. ಇಲ್ಲಿರುವ ಕಾರ್ಮಿಕರ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಪಡೆದುಕೊಳ್ಳುವ ಸೌಲಭ್ಯವಿಲ್ಲ. ಈ ಕಾರಣದಿಂದ ನಾನು ಡ್ಯೂಟಿಗೆ ಹೋಗುವ ಒಂದು ಗಂಟೆ ಮುಂಚಿತವಾಗಿ ಇಲ್ಲಿಗೆ ಬಂದು ಮಕ್ಕಳಿಗೆ ಪಾಠ ಹೇಳಿಕೊಡುತ್ತೇನೆ ಎಂದಿದ್ದಾರೆ. ಶಾಂತಪ್ಪ ಪಾಠ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

    ಬೆಂಗಳೂರಿಗೆ ಹೆಚ್ಚು ಕಾರ್ಮಿಕರು ಬರುವುದು ಉತ್ತರ ಕರ್ನಾಟಕ ಬಳ್ಳಾರಿ, ಗದಗ, ಕೊಪ್ಪಳ ಮತ್ತು ರಾಯಚೂರು ಭಾಗಗಳಿಂದ. ನಾನು ಅದೇ ಭಾಗದವನಾದ ಕಾರಣ ಅಲ್ಲಿನ ಕಾರ್ಮಿಕರ ಮಕ್ಕಳ ಕಷ್ಟಗಳೇನು ಎಂಬುದು ನನಗೆ ಚೆನ್ನಾಗಿ ಗೊತ್ತು. ಈ ಕಾರಣಕ್ಕೆ ನಾನು ಈ ಮಕ್ಕಳಿಗೆ ಪಾಠ ಮಾಡಲೂ ನಿರ್ಧಾರ ಮಾಡಿದ್ದೇನೆ ಎಂದು ಶಾಂತಪ್ಪ ತಿಳಿಸಿದ್ದಾರೆ. ಇವರ ಕಾರ್ಯಕ್ಕೆ ಮೆಚ್ಚಿ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ಇವರನ್ನು ಭೇಟಿ ಮಾಡಿದ್ದಾರೆ.