Tag: StuntMan

  • ಕ್ರೀಡಾ ಉತ್ಸವದಲ್ಲಿ ಟ್ರ್ಯಾಕ್ಟರ್ ಅಡಿಗೆ ಸಿಲುಕಿ ವ್ಯಕ್ತಿ ಸಾವು – ಟ್ರ್ಯಾಕ್ಟರ್ ಸ್ಟಂಟ್ ಬ್ಯಾನ್ ಮಾಡಿದ ಪಂಜಾಬ್

    ಕ್ರೀಡಾ ಉತ್ಸವದಲ್ಲಿ ಟ್ರ್ಯಾಕ್ಟರ್ ಅಡಿಗೆ ಸಿಲುಕಿ ವ್ಯಕ್ತಿ ಸಾವು – ಟ್ರ್ಯಾಕ್ಟರ್ ಸ್ಟಂಟ್ ಬ್ಯಾನ್ ಮಾಡಿದ ಪಂಜಾಬ್

    ಚಂಡೀಗಢ: ಪಂಜಾಬ್‌ನ (Punjab) ಗುರುದಾಸ್‌ಪುರ ಜಿಲ್ಲೆಯಲ್ಲಿ ನಡೆದ ಕ್ರೀಡಾ ಉತ್ಸವವೊಂದರಲ್ಲಿ ಸ್ಟಂಟ್‌ಮ್ಯಾನ್ (Stuntman) ಒಬ್ಬರು ಟ್ರ‍್ಯಾಕ್ಟರ್‌ನಡಿ ಸಿಲುಕಿಸಿ ಭೀಕರವಾಗಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಿಂದ ಎಚ್ಚೆತ್ತ ಪಂಜಾಬ್ ಸರ್ಕಾರ ಸೋಮವಾರ ಯಾವುದೇ ರೀತಿಯ ಸ್ಟಂಟ್ ಅಥವಾ ಟ್ರ‍್ಯಾಕ್ಟರ್‌ನೊಂದಿಗೆ ಅಪಾಯಕಾರಿ ಸಾಹಸ ಪ್ರದರ್ಶನ ನೀಡುವುದನ್ನು ನಿಷೇಧಿಸಿದೆ.

    ಈ ಬಗ್ಗೆ ಎಕ್ಸ್‌ನಲ್ಲಿ ಬರೆದಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann), ಪ್ರಿಯ ಪಂಜಾಬಿಗಳೇ, ಟ್ರಾಕ್ಟರ್ ಅನ್ನು ಗದ್ದೆಗಳ ರಾಜ ಎಂದು ಕರೆಯಲಾಗುತ್ತದೆ. ಆದರೆ ಅದನ್ನು ಸಾವಿನ ದೇವತೆಯನ್ನಾಗಿ ಮಾಡಬೇಡಿ. ಟ್ರಾಕ್ಟರ್ ಮತ್ತು ಸಂಬಂಧಿತ ಉಪಕರಣಗಳೊಂದಿಗೆ ಯಾವುದೇ ರೀತಿಯ ಸಾಹಸ ಅಥವಾ ಅಪಾಯಕಾರಿ ಪ್ರದರ್ಶನವನ್ನು ಪಂಜಾಬ್‌ನಲ್ಲಿ ನಿಷೇಧಿಸಲಾಗಿದೆ. ಈ ಸಂಬಂಧ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಹೇಳಿದ್ದಾರೆ.

    ವರದಿಗಳ ಪ್ರಕಾರ ಪಂಜಾಬ್‌ನ ಗುರುದಾಸ್‌ಪುರದ ಬಟಾಲಾದಲ್ಲಿ ನಡೆದ ಜಾತ್ರೆಯಲ್ಲಿ ಸಾಹಸ ಪ್ರದರ್ಶಿಸುತ್ತಿದ್ದ 29 ವರ್ಷದ ಸ್ಟಂಟ್‌ಮ್ಯಾನ್‌ನ ಮೇಲೆ ಟ್ರ‍್ಯಾಕ್ಟರ್ (Tractor) ಹರಿದು ಸಾವನ್ನಪ್ಪಿದ್ದಾರೆ. ಸ್ಟಂಟ್‌ಮ್ಯಾನ್ ಅನ್ನು ಸುಖ್ಮನ್‌ದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಅವರು ಕ್ರೀಡಾ ಉತ್ಸವದ ಸಮಯದಲ್ಲಿ ಸಾಹಸ ಪ್ರದರ್ಶಿಸುತ್ತಿದ್ದ ಟ್ರ್ಯಾಕ್ಟರ್‌ನ ಅಡಿಗೆ ಸಿಲುಕಿ ಭೀಕರವಾಗಿ ಸಾವನ್ನಪ್ಪಿದ್ದಾರೆ. ದುರ್ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಪ್ರಚಾರದ ವೇಳೆ ಬಿಆರ್‌ಎಸ್‌ ಸಂಸದನಿಗೆ ಚಾಕು ಇರಿತ

    ವೀಡಿಯೋದಲ್ಲೇನಿದೆ?
    ಸರಚೂರು ಗ್ರಾಮದ ಕ್ರೀಡಾ ಮೈದಾನದಲ್ಲಿ ನಡೆಯುತ್ತಿದ್ದ ಉತ್ಸವದಲ್ಲಿ ಸಾಹಸ ಪ್ರದರ್ಶಿಸಲು ಸುಖ್ಮನ್‌ದೀಪ್ ಸಿಂಗ್ ತಮ್ಮ ಟ್ರ‍್ಯಾಕ್ಟರ್‌ನೊಂದಿಗೆ ಆಗಮಿಸಿದ್ದರು. ಅವರು ತಮ್ಮ ಟ್ರಾಕ್ಟರ್‌ನ ಮುಂಭಾಗದ ಚಕ್ರಗಳನ್ನು ಮೇಲಕ್ಕೆತ್ತಿ, ಹಿಂಬದಿಯ ಟೈರ್‌ಗಳನ್ನು ನೆಲದ ಮೇಲೆ ಒತ್ತಿ, ಮತ್ತು ಟ್ರ‍್ಯಾಕ್ಟರ್‌ನೊಂದಿಗೆ ಓಡಲು ಪ್ರಾರಂಭಿಸಿದ್ದರು. ಆದರೆ ಟ್ರ‍್ಯಾಕ್ಟರ್ ನಿಯಂತ್ರಣ ತಪ್ಪಿ ಜನರತ್ತ ಓಡಲಾರಂಭಿಸಿತು. ಸುಖ್ಮನ್‌ದೀಪ್ ಅದರ ನಿಯಂತ್ರಣ ಸಾಧಿಸಲು ಟ್ರ‍್ಯಾಕ್ಟರ್ ಬಳಿ ಬಂದಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಟ್ರ‍್ಯಾಕ್ಟರ್‌ನ ಅಡಿಗೆ ಅವರು ಸಿಲುಕಿದ್ದಾರೆ. ಮೈದಾನದಲ್ಲಿದ್ದ ಇಬ್ಬರು ಟ್ರ‍್ಯಾಕ್ಟರ್ ಅಡಿಯಲ್ಲಿ ಸಿಲುಕಿದ್ದ ಸುಖ್ಮನ್‌ದೀಪ್ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದರು. ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಭಾರತದ ನೆಲದಲ್ಲಿ ಹಮಾಸ್‌ ಕಾರ್ಯಕ್ರಮ ಬೇಕಿತ್ತಾ? – ಕೇರಳ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಸ್ತೆಯಲ್ಲೇ ಬಾಲಕಿ ಮುಂದೆ ಪ್ಯಾಂಟ್ ಬಿಚ್ಚಿದ – ಸ್ಟಂಟ್‍ಮ್ಯಾನ್ ಸಮಯಪ್ರಜ್ಞೆಯಿಂದ ಕಾಮುಕ ಅರೆಸ್ಟ್

    ರಸ್ತೆಯಲ್ಲೇ ಬಾಲಕಿ ಮುಂದೆ ಪ್ಯಾಂಟ್ ಬಿಚ್ಚಿದ – ಸ್ಟಂಟ್‍ಮ್ಯಾನ್ ಸಮಯಪ್ರಜ್ಞೆಯಿಂದ ಕಾಮುಕ ಅರೆಸ್ಟ್

    – ಕಾಮುಕನನ್ನು ಪೊಲೀಸರಿಗೆ ಒಪ್ಪಿಸಿದ ಬಾಲಿವುಡ್ ಸ್ಟಂಟ್ ಮ್ಯಾನ್

    ಮುಂಬೈ: ಅಪ್ರಾಪ್ತೆಗೆ ಪೋರ್ನ್ ವಿಡಿಯೋ ತೋರಿಸಿ ಆಕೆಯ ದೇಹ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಬಾಲಿವುಡ್ ಸಾಹಸ ನಿರ್ದೇಶಕ, ಸಹ ನಿರ್ದೇಶಕ ಅಸೀಫ್ ರಶೀದ್ ಮೆಹ್ತಾ ಅವರು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಭಾನುವಾರ ಅಸೀಫ್ ಮನೆಯ ಹೊರಗೆ 20 ವರ್ಷದ ಯುವಕನೊಬ್ಬ 9 ವರ್ಷದ ಬಾಲಕಿಗೆ ತನ್ನ ಮೊಬೈಲಿನಲ್ಲಿ ಪೋರ್ನ್ ವಿಡಿಯೋ ತೋರಿಸುತ್ತಿದ್ದನು. ಈ ವೇಳೆ ಅಸೀಫ್ ತನ್ನ ಮನೆಗೆ ಹೋಗುತ್ತಿದ್ದಾಗ ಯುವಕ ಬೈಕಿನ ಮೇಲೆ ಕುಳಿತುಕೊಂಡಿರುವುದನ್ನು ಗಮನಿಸಿದ್ದಾರೆ. ಅಲ್ಲದೇ ಬಾಲಕಿ ಯುವಕನ ಪಕ್ಕದಲ್ಲೇ ನಿಂತು ಆತನ ಮೊಬೈಲ್‍ನಲ್ಲಿ ಇಣುಕಿ ನೋಡುತ್ತಿದ್ದಾಗ ಅವರಿಗೆ ಅನುಮಾನ ಬಂದಿದೆ.

    ನಾನು ಮನೆಗೆ ಹೋಗುವ ಸಂದರ್ಭದಲ್ಲಿ ಅಲ್ಲಿ ನಿಂತಿದ್ದ ಯುವಕ ಹಾಗೂ ಬಾಲಕಿಯನ್ನು ನೋಡಿ ಅನುಮಾನ ಬಂತು. ಬಳಿಕ ನಾನು ಮನೆಗೆ ಹೋಗಿ ಕಿಟಕಿಯಿಂದ ಹೊರಗೆ ನೋಡಿದ್ದಾಗ ಯುವಕ ಬಾಲಕಿಯ ದೇಹವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದನು. ನಾನು ಆತನ ಬಳಿ ಹೋಗಿ ನಿನಗೆ ಈ ಬಾಲಕಿ ಗೊತ್ತಾ ಎಂದು ಪ್ರಶ್ನಿಸಿದೆ. ಆಗ ಯುವಕ ಈಕೆ ನನ್ನ ತಂಗಿ ಎಂದು ಹೇಳಿದ್ದಾನೆ ಅಂತಾ ಅಸೀಫ್ ಹೇಳಿದ್ದಾರೆ.

    ನಾನು ಯುವಕನನ್ನು ವಿಚಾರಿಸುತ್ತಿದ್ದಾಗ ಆತನ ಪ್ಯಾಂಟ್ ಜಿಪ್ ಓಪನ್ ಇರುವುದನ್ನು ಗಮನಿಸಿದೆ ಹಾಗೂ ಬಾಲಕಿ ಕೂಡ ಆಘಾತಕ್ಕೊಳಗಾಗಿದ್ದಳು. ಬಳಿಕ ಬಾಲಕಿಗೆ ಆಕೆಯ ತಾಯಿ ಬಗ್ಗೆ ಕೇಳಿದ್ದಾಗ ನನ್ನ ತಾಯಿ ಇಲ್ಲಿಯೇ ಎಲ್ಲೋ ಇದ್ದಾರೆ ಎಂದು ಹೇಳಿದ್ದಳು. ನಂತರ ಈತ ನಿನ್ನ ಸಹೋದರನಾ ಎಂದು ಕೇಳಿದ್ದಾಗ ಆಕೆ ಇಲ್ಲ ಎಂದು ಹೇಳಿದ್ದಾಳೆ. ಆಗ ನನಗೆ ಅನುಮಾನ ಬಂದು ಆತನ ಮೊಬೈಲ್ ಪರಿಶೀಲಿಸಿದ್ದಾಗ ಕೇವಲ ಪೋರ್ನ್ ವಿಡಿಯೋಗಳಿತ್ತು.

    ನಾನು ಯುವಕನನ್ನು ವಿಚಾರಿಸುತ್ತಿದ್ದಾಗ ಅಲ್ಲಿ ಜನರೆಲ್ಲರು ಸೇರಿದ್ದರು. ಅದರಲ್ಲಿ ನನ್ನ ಪರಿಚಯಸ್ಥರು ಇದ್ದರು. ಜನರು ಸೇರುತ್ತಿದ್ದಂತೆ ಬಾಲಕಿ ತನ್ನ ತಾಯಿಯನ್ನು ಹುಡುಕಲು ಅಲ್ಲಿಂದ ಹೋಗುತ್ತಿದ್ದಳು. ನಾನು ಕೂಡ ಯುವಕನನ್ನು ಬಾಲಕಿ ಜೊತೆ ಕರೆದುಕೊಂಡು ಹೋಗಿ ಆಕೆಯ ತಾಯಿಗೆ ಈ ವಿಷಯವನ್ನು ತಿಳಿಸಿದೆ. ಈ ವಿಷಯ ಜನರಿಗೆ ತಿಳಿಯುತ್ತಿದ್ದಂತೆ ಅವರು ಯುವಕನನ್ನು ಮಹೀಮ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು ಎಂದು ಅಸೀಫ್ ತಿಳಿಸಿದ್ದಾರೆ.

    ಬಳಿಕ ಪೊಲೀಸ್ ಠಾಣೆಗೆ ಬಾಲಕಿ ಹಾಗೂ ಆಕೆಯ ತಾಯಿ ಭೇಟಿ ಭೇಟಿ ನೀಡಿದ್ದಾರೆ. ಸಾಕ್ಷಿಗಾಗಿ ನಾನು ಯುವಕನ ಜೊತೆ ನಡೆದ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ಅದನ್ನು ಪೊಲೀಸರಿಗೆ ನೀಡಿದೆ. ಪೊಲೀಸರು ಬಾಲಕಿಯನ್ನು ವಿಚಾರಿಸಿದರು. ಆಗ ಬಾಲಕಿ ಯುವಕ ತನ್ನ ಖಾಸಗಿ ಅಂಗವನ್ನು ಮುಟ್ಟು ಎಂದು ಹೇಳುತ್ತಿದ್ದ ಎಂದು ಹೇಳಿದ್ದಾಳೆ. ಬಾಲಕಿಯ ಹೇಳಿಕೆ ಪಡೆದ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಿಕೊಂಡಿದ್ದಾರೆ. ಸೋಮವಾರ ಆತನನ್ನು ನ್ಯಾಯಲಕ್ಕೆ ಹಾಜರುಪಡಿಸಿದ್ದಾರೆ.

    ಅಸೀಫ್ ‘ಜೋಧಾ ಅಖ್ಬರ್’, ‘ರೇಸ್-3’ ಚಿತ್ರ ಹಾಗೂ ಬಿಡುಗಡೆಗೆ ಸಿದ್ಧವಾಗಿರುವ ‘ಚೀಟ್ ಇಂಡಿಯಾ’ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv