Tag: stump

  • ಧೋನಿಗೆ ಏಜ್‌ ಆಗಿದೆ ಅಂದವರ್ಯಾರು? – ಮತ್ತೆ ರಾಕೆಟ್‌ ಸ್ಪೀಡ್‌ನಲ್ಲಿ ಸ್ಟಂಪ್‌, ಸಾಲ್ಟ್‌ ಸ್ಟನ್‌!

    ಧೋನಿಗೆ ಏಜ್‌ ಆಗಿದೆ ಅಂದವರ್ಯಾರು? – ಮತ್ತೆ ರಾಕೆಟ್‌ ಸ್ಪೀಡ್‌ನಲ್ಲಿ ಸ್ಟಂಪ್‌, ಸಾಲ್ಟ್‌ ಸ್ಟನ್‌!

    ಚೆನ್ನೈ: ಎರಡನೇ ಪಂದ್ಯದಲ್ಲೂ ಧೋನಿ (Dhoni) ಸ್ಟಂಪ್‌ ಔಟ್‌ (Stump Out) ಮಾಡುವ ಮೂಲಕ ಮತ್ತೆ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ.

    ಆರ್‌ಸಿಬಿ (RCB) ಆರಂಭಿಕ ಆಟಗಾರ ಸಾಲ್ಟ್‌ (Phil Salt) ಅವರನ್ನು 43 ವರ್ಷದ ಧೊನಿ ಮಿಂಚಿನ ವೇಗದಲ್ಲಿ ಸ್ಟಂಪ್‌ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ಟ್ರೆಂಡ್‌ ಆಗಿದೆ.

     


    ಮೊದಲ ಮ್ಯಾಚ್‌ನಲ್ಲಿ ಮುಂಬೈ ತಂಡದ ಸೂರ್ಯಕುಮಾರ್‌ ಯಾದವ್‌ (Surya Kumar Yadav) ಅವರನ್ನು 0.12 ಸೆಕೆಂಡ್‌ನಲ್ಲಿ ಔಟ್‌ ಮಾಡಿದರೆ ಇಂದು ಸಾಲ್ಟ್‌ ಅವರನ್ನು 0.14 ಸೆಕೆಂಡ್‌ನಲ್ಲಿ ಸ್ಟಂಪ್‌ ಮಾಡಿ ಪೆವಿಲಿಯನ್‌ಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲೇ ಬಿಸಿಸಿಐ ಕೇಂದ್ರ ಗುತ್ತಿಗೆ – ಮತ್ತೆ ಶ್ರೇಯಸ್, ಇಶಾನ್ ಕಿಶನ್ ಕಂಬ್ಯಾಕ್?

     


    ಔಟಾಗುವ ಮುನ್ನ ಫಿಲ್‌ ಸಾಲ್ಟ್‌ 23 ಎಸೆತಗಳಲ್ಲಿ 1 ಸಿಕ್ಸ್‌, 5 ಬೌಂಡರಿ ಹೊಡೆದು 32 ರನ್‌ ಸಿಡಿಸಿದ್ದರು. ಇದನ್ನೂ ಓದಿ: ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಈ ಐಪಿಎಲ್‌ನಲ್ಲಿ ಪೂರನ್‌ ದಾಖಲೆ

     

     

  • ಪುಟ್ಟ ಬಾಲಕನ ಬ್ಯಾಟಿಂಗ್‍ಗೆ ಮನಸೋತ ಕ್ರಿಕೆಟ್ ಪ್ರಿಯರು

    ಪುಟ್ಟ ಬಾಲಕನ ಬ್ಯಾಟಿಂಗ್‍ಗೆ ಮನಸೋತ ಕ್ರಿಕೆಟ್ ಪ್ರಿಯರು

    ಪುಟ್ಟ ಬಾಲಕನೋರ್ವ ನುರಿತ ಕ್ರಿಕೆಟ್ ಬ್ಯಾಟ್ಸ್ ಮ್ಯಾನ್ ನಂತೆ ಕ್ರಿಕೆಟ್‍ನ ಎಲ್ಲಾ ವಿಧದ ಶಾಟ್‍ಗಳನ್ನು ಬ್ಯಾಟ್ ಇಲ್ಲದೆ ವಿಕೆಟ್‍ನಲ್ಲಿ ಹೊಡೆಯುವ ಮೂಲಕ ಕ್ರಿಕೆಟ್ ಪ್ರಿಯರ ಮನಗೆದ್ದಿದ್ದಾನೆ.

    ಬಾಲಕ ನೆಟ್ಸ್ ನಲ್ಲಿ ಬ್ಯಾಟ್ ಬಳಸದೆ ಒಂದು ವಿಕೆಟ್ ಹಿಡಿದುಕೊಂಡು ಕ್ರಿಕೆಟ್‍ನ ವಿವಿಧ ಮಾದರಿಯ ಶಾಟ್‍ಗಳನ್ನು ಸಖತ್ ಸಲಿಸಾಗಿ ಹೊಡೆಯುವ ವೀಡೀಯೊ ಒಂದನ್ನು ಟ್ವಿಟ್ಟರ್‍ ನಲ್ಲಿ ಗ್ರೇಡ್ ಕ್ರಿಕೆಟರ್ ಎಂಬ ಹೆಸರಿನ ಖಾತೆಯೊಂದು ಹಾಕಿಕೊಂಡಿದೆ. ಇದನ್ನು ಗಮನಿಸಿದ ಕ್ರಿಕೆಟ್ ಅಭಿಮಾನಿಗಳು ಈ ಪುಟ್ಟ ಬಾಲಕನ ಪತ್ರಿಭೆಯನ್ನು ಕಂಡು ಬೆರಗಾಗಿದ್ದಾರೆ.

    https://twitter.com/gradecricketer/status/1390831420663160832

    ವೀಡೀಯೊದಲ್ಲಿ ಬಾಲಕ ಕ್ರಿಕೆಟ್‍ನಲ್ಲಿ ಕಂಡು ಬರುವ ಸ್ವೀಪ್ ಶಾಟ್, ಡ್ರೈವ್, ಕವರ್ ಡ್ರೈವ್, ರಿವರ್ಸ್ ಸ್ವೀಪ್, ಕಟ್ ಶಾಟ್ ಮತ್ತು ಫ್ಲಿಕ್ ಶಾಟ್‍ಗಳನ್ನು ಬ್ಯಾಟ್ ಇಲ್ಲದೆ ವಿಕೆಟ್ ಮೂಲಕ ಬಾರಿಸುತ್ತಿದ್ದಾನೆ. ಬಾಲಕ ಸಿಮೆಂಟ್ ನೆಲದ ಮೇಲೆ ತಾಲೀಮು ಮಾಡುತ್ತಿದ್ದು ಹೆಲ್ಮೆಟ್, ಗ್ಲಾವ್ಸ್, ಪ್ಯಾಡ್ ಕಟ್ಟಿಕೊಂಡು ತನ್ನ ಅದ್ಭುತ ಪಾದ ಚಲನೆಯ ಮೂಲಕ ಉತ್ತಮವಾದ ಹೊಡೆತಗಳನ್ನು ಹೊಡೆಯುವ ಮೂಲಕ ತಾನೊಬ್ಬ ಭವಿಷ್ಯದ ಕ್ರಿಕೆಟ್ ಆಟಗಾರ ಎಂಬುದನ್ನು ಸಾಬೀತು ಪಡಿಸುತ್ತಿದ್ದಾನೆ.

  • ಸ್ಟಂಪ್ ಮೈಕ್‍ನಿಂದ ಆಸೀಸ್ ನಾಯಕಿ ಪಾರು- ವಿಡಿಯೋ

    ಸ್ಟಂಪ್ ಮೈಕ್‍ನಿಂದ ಆಸೀಸ್ ನಾಯಕಿ ಪಾರು- ವಿಡಿಯೋ

    ಮೆಲ್ಬರ್ನ್: ಆಸ್ಟ್ರೇಲಿಯಾ ಮತ್ತು ಭಾರತದ ಮಹಿಳೆಯರ ನಡುವೆ ನಡೆದ ಟಿ20 ಟೂರ್ನಿ ಫೈನಲ್ ಪಂದ್ಯದಲ್ಲಿ ಸ್ಟಂಪ್ ಮೈಕಿನಿಂದಾಗಿ ಆಸ್ಟ್ರೇಲಿಯಾದ ನಾಯಕಿ ಲ್ಯಾನಿಂಗ್ ಪಾರಾಗಿದ್ದಾರೆ.

    ಬುಧವಾರ ನಡೆದ ತ್ರಿಕೋನ ಸರಣಿಯ ಫೈನಲ್‍ನಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ಭಾರತವನ್ನು ಸೋಲಿಸಿತು. ಆಸ್ಟ್ರೇಲಿಯಾ ಇನ್ನಿಂಗ್ಸ್ ವೇಳೆ ಮೆಗ್ ಲ್ಯಾನಿಂಗ್ ಅವರು ಸ್ಟಂಪ್-ಮೈಕ್‍ನಿಂದಾಗಿ ವಿಕೆಟ್ ಉಳಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಇನ್ನಿಂಗ್ಸ್ ನ 14ನೇ ಓವರಿನಲ್ಲಿ ಮೆಗ್ ಲ್ಯಾನಿಂಗ್ ವೇಗವಾಗಿ ಒಂಟಿ ರನ್ ಕದಿಯಲು ಮುಂದಾದರು. ತಕ್ಷಣವೇ ಕೈಗೆ ಸಿಕ್ಕಿದ ಬಾಲ್ ಎತ್ತಿಕೊಂಡ ಶಿಖಾ ಪಾಂಡೆ ವಿಕೆಟ್ ಕಡೆಗೆ ಎಸೆದರು. ಆದರೆ ಬಾಲ್ ಸ್ಟಂಪ್ ಹಿಂದಿದ್ದ ಮೈಕ್‍ಗೆ ಬಿದ್ದು ಬೇರೆ ಕಡೆಗೆ ಹೋಯಿತು. ಇದರಿಂದಾಗಿ ಲ್ಯಾನಿಂಗ್ ಅವರಿಗೆ ಜೀವದಾನ ಸಿಕ್ಕಂತಾಯಿತು. ಈ ವಿಡಿಯೋವನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

    ಇದಕ್ಕೂ ಮುನ್ನ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಬೆಥ್ ಮೂನಿ ಅವರ ಅಜೇಯ 71 ರನ್‍ಗಳಿಂದ ಆಸ್ಟ್ರೇಲಿಯಾ ಮಹಿಳಾ ತಂಡ ಆರು ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತ್ತು. ಇದೇ ಸಮಯದಲ್ಲಿ ಭಾರತದ ಬೌಲರ್ ದೀಪ್ತಿ ಶರ್ಮಾ ಅವರು ನಾಲ್ಕು ಓವರ್ ಬೌಲಿಂಗ್ ಮಾಡಿ 30 ರನ್ ನೀಡಿ ಮೂರು ವಿಕೆಟ್ ಕಿತ್ತು ಮಿಂಚಿದರು.

    ಆಸ್ಟ್ರೇಲಿಯಾ ನೀಡಿದ್ದ 156 ರನ್‍ಗಳ ಗುರಿ ಬೆನ್ನಟ್ಟಿದ ಭಾರತವು ಕಳಪೆ ಆರಂಭಕ್ಕೆ ತುತ್ತಾಯಿತು. ಇನ್ನಿಂಗ್ಸ್ ಎರಡನೇ ಓವರಿನಲ್ಲಿ ಟೇಲಾ ವ್ಲೇಮಿಂಕ್ ಅವರು ಶಫಾಲಿ ವರ್ಮಾ ವಿಕೆಟ್ ಕಿತ್ತರು. ರಿಚಾ ಘೋಷ್ ಹಾಗೂ ಸ್ಮೃತಿ ಮಂಧನಾ ಎರಡನೇ ವಿಕೆಟ್‍ಗೆ 43 ರನ್ ಗಳಿಸಿದರು. 17 ರನ್ ಗಳಿಸಿದ್ದ ರಿಚಾ ಘೋಷ್ ಅವರನ್ನು ಅನ್ನಾಬೆಲ್ ಸದಲ್ರ್ಯಾಂಡ್ ಔಟ್ ಮಾಡಿದರು. ಆದರೆ ಮಂಧನಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ 12ನೇ ಅಂತರರಾಷ್ಟ್ರೀಯ ಟಿ20 ಅರ್ಧಶತಕವನ್ನು ಗಳಿಸಿದರು.

    ಭಾರತವು 14 ಓವರ್‌ಗಳ ನಂತರ ನಾಲ್ಕು ವಿಕೆಟ್‍ಗೆ 113 ರನ್ ಗಳಿಸಿತ್ತು. ಕೊನೆಯ ಐದು ಓವರ್‌ಗಳಲ್ಲಿ ನಾಯಕಿ ಹರ್ಮನ್‍ಪ್ರೀತ್ ಕೌರ್ ಮತ್ತು ಮಂಧನಾ 43 ರನ್ ಗಳಿಸಿದರು. ಮಂಧನಾ ವಿಕೆಟ್ ಒಪ್ಪಿಸಿದ ಬಳಿಕ ಭಾರತ ತಂಡವು ಆಘಾತಕ್ಕೆ ಒಳಗಾಯಿತು. ಪರಿಣಾಮ 11 ರನ್‍ಗಳಿಂದ ಸೋಲು ಕಂಡಿತು.

  • 0.099 ಸೆಕೆಂಡ್‍ಗಳಲ್ಲಿ ಧೋನಿ ಮ್ಯಾಜಿಕ್ ಸ್ಟಂಪಿಂಗ್ – ಕಿವೀಸ್ ಪಂದ್ಯದಲ್ಲಿ ವಿಶ್ವ ದಾಖಲೆ

    0.099 ಸೆಕೆಂಡ್‍ಗಳಲ್ಲಿ ಧೋನಿ ಮ್ಯಾಜಿಕ್ ಸ್ಟಂಪಿಂಗ್ – ಕಿವೀಸ್ ಪಂದ್ಯದಲ್ಲಿ ವಿಶ್ವ ದಾಖಲೆ

    ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಮಾಜಿ ನಾಯಕ, ವಿಕೆಟ್ ಕೀಪರ್ ಎಂಎಸ್ ಧೋನಿ ಮತ್ತೊಮ್ಮೆ ತಮ್ಮ ಸ್ಟಂಪಿಂಗ್ ಮೂಲಕ ಅಭಿಮಾನಿಗಳ ಮನಗೆದಿದ್ದು, ಕೇವಲ 0.099 ಸೆಕೆಂಡ್ ಗಳಲ್ಲಿ ಸಿಫರ್ಡ್ ಅವರನ್ನು ಸ್ಟಂಪಿಂಗ್ ಮಾಡಿದ್ದಾರೆ.

    37 ವರ್ಷದ ಧೋನಿ ತಮ್ಮ ವೇಗದ ಸ್ಟಂಪಿಂಗ್ ಗಳ ಮೂಲವೇ ಅಭಿಮಾನಿಗಳು ಮನಗೆದ್ದಿದ್ದು, ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿ ಕೇವಲ 25 ಎಸೆತಗಳಲ್ಲಿ 43 ರನ್ ಗಳಿಸಿ ತಂಡಕ್ಕೆ ಮಾರಕವಾಗುತ್ತಿದ್ದ ಸಿಫರ್ಡ್ ರನ್ನು ಪೆವಿಲಿಯನ್‍ಗಟ್ಟಲು ಯಶಸ್ವಿಯಾದರು. 7ನೇ ಓವರಿನ 4ನೇ ಎಸೆತದಲ್ಲಿ ಮ್ಯಾಜಿಕ್ ಸ್ಟಂಪಿಂಗ್ ದಾಖಲಾಗಿದ್ದು, ಈ ಮೂಲಕ ವೃತ್ತಿ ಜೀವನದಲ್ಲಿ 34ನೇ ಸ್ಟಂಪಿಂಗ್ ಪೂರ್ಣಗೊಳಸಿ ದಾಖಲೆ ಬರೆದರು.

    ಇದೇ ಟೂರ್ನಿಯಲ್ಲಿ ಧೋನಿ ನ್ಯೂಜಿಲೆಂಡ್ ತಂಡದ ಅನುಭವಿ ಆಟಗಾರ ರಾಸ್ ಟೇಲರ್ ಅವರನ್ನು ಮಿಂಚಿನ ವೇಗದಲ್ಲಿ ಸ್ಟಂಪ್ ಮಾಡಿದ್ದರು. ಸದ್ಯ ಧೋನಿ ಟಿ20 ಮಾದರಿಯಲ್ಲಿ 89 ಬಲಿ ಪಡೆದಿದ್ದು, ಈ ಮೂಲಕ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದ್ದಾರೆ. ಇದರಲ್ಲಿ 55 ಕ್ಯಾಚ್ ಗಳು ಸೇರಿದೆ. ಉಳಿದಂತೆ 337 ಏಕದಿನ ಪಂದ್ಯಗಳನ್ನು ಆಡಿರುವ ಧೋನಿ 311 ಕ್ಯಾಚ್ ಹಾಗೂ 119 ಸ್ಟಂಪಿಂಗ್ ಮಾಡಿದ್ದಾರೆ.

    https://twitter.com/RamLokendar/status/1094504403141156865?

    ಧೋನಿ ಇದುವರೆಗೂ 524 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, ಈ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಆಡಿರುವ ವಿಕೆಟ್ ಕೀಪರ್ ಎಂಬ ವಿಶ್ವ ದಾಖಲೆ ಬರೆದರು. 90 ಟೆಸ್ಟ್ ಪಂದ್ಯ, 338 ಏಕದಿನ ಹಾಗು 96 ಟಿ20 ಪಂದ್ಯಗಳಲ್ಲಿ ಧೋನಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ.

    ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಗಳು ಸೇರಿದಂತೆ ಧೋನಿ ಇದುವರೆಗೂ 300 ಟಿ20 ಪಂದ್ಯಗಳನ್ನು ಆಡಿದ್ದು, ಈ ಮಾದರಿಯಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಆಡಿದ ಭಾರತ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಪಟ್ಟಿಯಲ್ಲಿ 298 ಪಂದ್ಯಗಳಾಡಿರುವ ರೋಹಿತ್ 2ನೇ ಸ್ಥಾನದಲ್ಲಿದ್ದು, ರೈನಾ 296 ಪಂದ್ಯಗಳ ಮೂಲಕ 3ನೇ ಸ್ಥಾನ ಪಡೆದಿದ್ದಾರೆ.

    https://twitter.com/thota_deep/status/1094502082915250176?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಿವೀಸ್ ವಿರುದ್ಧ ರೋಚಕ ಸೋಲುಂಡ ಟೀಂ ಇಂಡಿಯಾ – ಟಿ20 ಸರಣಿ ಗೆಲುವಿನ ಕನಸು ಭಗ್ನ

    ಕಿವೀಸ್ ವಿರುದ್ಧ ರೋಚಕ ಸೋಲುಂಡ ಟೀಂ ಇಂಡಿಯಾ – ಟಿ20 ಸರಣಿ ಗೆಲುವಿನ ಕನಸು ಭಗ್ನ

    ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ 4 ರನ್ ಸೋಲು ಪಡೆಯಿತು. ಈ ಮೂಲಕ ಸರಣಿಯನ್ನು 2-1 ಅಂತರದಲ್ಲಿ ಸೋಲುಂಡಿತು. ಅಲ್ಲದೇ ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಟಿ20 ಸರಣಿಯನ್ನು ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು.

    213 ರನ್ ಗಳಿಸಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 208 ರನ್ ಗಳಿಸಲಷ್ಟೇ ಶಕ್ತವಾಯಿತು. ಏಕದಿನ ಸರಣಿ ಸೋಲಿನ ಸೇಡು ತಿರಿಸಿಕೊಂಡ ಕಿವೀಸ್ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿತು.

    ಕಿವೀಸ್ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ಟೀಂ ಇಂಡಿಯಾಗೆ ಮೊದಲ ಓವರಿನಲ್ಲೇ ಧವನ್ ವಿಕೆಟ್ ಪಡೆಯುವ ಮೂಲಕ ಮಿಚೆಲ್ ಅಘಾತ ನೀಡಿದರು. ಆದರೆ ನಾಯಕ ರೋಹಿತ್ ಶರ್ಮಾರನ್ನು ಕೂಡಿಕೊಂಡ ಯುವ ಆಟಗಾರ ವಿಜಯ್ ಶಂಕರ್ ಬಿರುಸಿನ ಆಟವಾಡಿ ತಂಡದ ರನ್ ಗಳಿಕೆಗೆ ವೇಗ ತುಂಬಿದರು. ಇತ್ತ ರೋಹಿತ್ ರಕ್ಷಣಾತ್ಮಕ ಆಟವಾಡಿ ವಿಕೆಟ್ ಕಾಯ್ದುಕೊಂಡರು. ಈ ಜೋಡಿ 2ನೇ ವಿಕೆಟ್‍ಗೆ 75 ರನ್ ಗಳ ಜೊತೆಯಾಟ ನೀಡಿತು. ಆದರೆ 28 ಎಸೆತಗಳಲ್ಲಿ 43 ರನ್ ಗಳಿಸಿದ್ದ ಶಂಕರ್ ಭಾರೀ ಹೊಡೆತಕ್ಕೆ ಕೈ ಹಾಕಿ ಔಟಾಗುವ ಮೂಲಕ ಅರ್ಧ ಶತಕ ವಂಚಿತರಾದರು.

    ಈ ಹಂತದಲ್ಲಿ ಕಣಕ್ಕೆ ಇಳಿದ ಪಂತ್ ಸ್ಫೋಟಕ ಆಟ ಪ್ರದರ್ಶಿಸಿದರು. ಕೇವಲ 12 ಎಸೆತಗಳಲ್ಲಿ 28 ರನ್ ಗಳಿಸಿದ ಪಂತ್ ರನ್ನು ಸ್ಕಾಟ್ ಕುಗೆಲಿಜಿನ್ ಪೆವಿಲಿಯನ್ ಗಟ್ಟಿದರು. ಈ ವೇಳೆಗೆ ಪಂತ್ 1 ಬೌಂಡರಿ ಹಾಗೂ ಭರ್ಜರಿ 3 ಸಿಕ್ಸರ್ ಸಿಡಿಸಿದ್ದರು. 9.2 ಓವರ ಗಳಲ್ಲೇ ಟೀಂ ಇಂಡಿಯಾ 100 ರನ್ ಗಡಿದಾಟಿತ್ತು.

    ಇದರ ಬೆನ್ನಲ್ಲೇ 38 ರನ್ ಗಳಿಸಿದ್ದ ರೋಹಿತ್ ಕೂಡ ಔಟಾದರು. ಬಳಿಕ ಬಂದ ಹಾರ್ದಿಕ್ ಪಾಂಡ್ಯ ಕೂಡ ಬಿರುಸಿನ ಆಟಕ್ಕೆ ಮುಂದಾದರು. ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದ ಹಾರ್ದಿಕ್ ಗೆಲುವಿನ ಆಸೆ ಚಿಗುರುವಂತೆ ಮಾಡಿದರು. ಆದರೆ ಭಾರೀ ಹೊಡೆತಕ್ಕೆ ಕೈ ಹಾಕಿದ್ದ ವೇಳೆ ಬ್ಯಾಟ್ ಕೈಯಿಂದ ಜಾರಿದ ಪರಿಣಾಮ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಹಾರ್ದಿಕ್ 11 ಎಸೆತಗಳಲ್ಲಿ 2 ಸಿಕ್ಸರ್ 1 ಬೌಂಡರಿ ಸಿಡಿಸಿ 21 ರನ್ ಗಳಿಸಿದರು. ಬಳಿಕ ಬಂದ ಧೋನಿ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದರು ಕೂಡ ಕೇವಲ 2 ರನ್ ಗಳಿಸಿ ಔಟಾದರು.

    ದಿನೇಶ್ ಹೋರಾಟ ವ್ಯರ್ಥ: ಅಂತಿಮ 25 ಎಸೆತಗಳಲ್ಲಿ ಟೀಂ ಇಂಡಿಯಾಗೆ ಗೆಲ್ಲಲ್ಲು 60 ಗಳಿಸುವ ಒತ್ತಡ ಸಮಯದಲ್ಲಿ ಕ್ರಿಸ್ ಎಂಟ್ರಿ ಕೊಟ್ಟ ದಿನೇಶ್ ಕಾರ್ತಿಕ್ ಮತ್ತೆ ತಮ್ಮ ಹಿಂದಿನ ಆಟವನ್ನು ನೆನಪು ಮಾಡುವಂತೆ ಮಾಡಿದರು. ಅಲ್ಲದೇ ಕಾರ್ತಿಕ್ ಗೆ ಕೃಣಾಲ್ ಪಾಂಡ್ಯ ಕೂಡ ಸಾಥ್ ನೀಡಿ ತಂಡ ಗೆಲುವಿನ ಸನಿಹ ಆಗಮಿಸಲು ಕಾರಣರಾದರು. ಆದರೆ ಅಂತಿಮವಾಗಿ ಕಾರ್ತಿಕ್ 16 ಎಸೆತಗಳಲ್ಲಿ 4 ಸಿಕ್ಸರ್ ಸಮೇತ 33 ರನ್ ಹಾಗೂ 13 ಎಸೆತಗಳಲ್ಲಿ ಕೃಣಾಲ್ ಪಾಂಡ್ಯ 2 ಸಿಕ್ಸರ್ ಸಿಡಿಸಿ 26 ರನ್ ಗಳಿಸಿದರು.

    ಅಂತಿಮ 25 ಎಸೆತ: 17ನೇ ಓವರಿನಲ್ಲಿ ಸಿಕ್ಸರ್ ಸಮೇತ 11 ರನ್, 18ನೇ ಓವರಿನಲ್ಲಿ 2 ಬೌಂಡರಿ, 1 ಸಿಕ್ಸರ್ ಸಮೇತ 18 ರನ್ ಬಂತು. ಅಂತಿಮ 12 ಎಸೆತಗಳಲ್ಲಿ ಟೀಂ ಇಂಡಿಯಾಗೆ 30 ರನ್ ಗಳ ಅಗತ್ಯವಿತ್ತು. ಸ್ಕಾಟ್ ಕುಗೆಲಿಜಿನ್ ಈ ಹಂತದಲ್ಲಿ ಬಿಗಿ ಬೌಲಿಂಗ್ ದಾಳಿ ನಡೆಸಿದರೂ ಕೂಡ 2 ಸಿಕ್ಸರ್ ಸಮೇತ 14 ರನ್ ಹರಿದು ಬಂತು. ಆದರೆ ಅಂತಿಮ ಓವರ್ ನಲ್ಲಿ 10 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಮೂಲಕ ನಿಗದಿತ 20 ಓವರ್ ಗಳಲ್ಲಿ 208 ರನ್ ಗಳಿಸಿ ಟೀಂ ಇಂಡಿಯಾ 4 ರನ್ ಗಳ ಸೋಲುಂಡಿತು.

    ಕಿವೀಸ್ ಪರ ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡದ ಮನ್ರೋ (72 ರನ್, 40 ಎಸೆತ) ಹಾಗೂ ಸಿಫಿರ್ಟ್ (43 ರನ್, 25 ಎಸೆತ) ಬಿರುಸಿನ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್‍ಗಳ ಸವಾಲಿನ ಮೊತ್ತ ಗಳಿಸಿತ್ತು. ಕಿವೀಸ್ ಪರ ಭರ್ಜರಿ ಆರಂಭ ನೀಡಿದ ಸಿಫರ್ಟ್, ಮನ್ರೋ ಜೋಡಿ ಮೊದಲ ವಿಕೆಟ್‍ಗೆ 80 ರನ್ ಗಳ ಜೊತೆಯಾಟ ನೀಡಿತು. ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 26 ರನ್ ನೀಡಿ 2 ವಿಕೆಟ್ ಪಡೆದರೆ, ಖಲೀಲ್ ಅಹ್ಮದ್, ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಧೋನಿ ಸ್ಮಾರ್ಟ್ ವಿಕೆಟ್ ಕೀಪಿಂಗ್‍ಗೆ ದಂಗಾದ ನೀಶಮ್ – ವಿಡಿಯೋ

    ಧೋನಿ ಸ್ಮಾರ್ಟ್ ವಿಕೆಟ್ ಕೀಪಿಂಗ್‍ಗೆ ದಂಗಾದ ನೀಶಮ್ – ವಿಡಿಯೋ

    ವೆಲಿಂಗ್ಟನ್: ಟೀಂ ಇಂಡಿಯಾ ಮಾಜಿ ನಾಯಕ 37 ವರ್ಷದ ಧೋನಿ ವಿಕೆಟ್ ಹಿಂದಿನ ತಮ್ಮ ಅನುಭವದ ಕೌಶಲ್ಯಗಳನ್ನು ಮತ್ತೆ ಸಾಬೀತುಪಡಿಸಿದ್ದು, ನ್ಯೂಜಿಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲೂ ಸ್ಮಾರ್ಟ್ ರನೌಟ್ ಮಾಡಿ ಪ್ರಶಂಸೆ ಪಡೆದಿದ್ದಾರೆ.

    ಪಂದ್ಯದ 37 ಓವರ್ ನಲ್ಲಿ ಸ್ಟ್ರೈಕ್ ನಲ್ಲಿದ್ದ ನೀಶಮ್ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಚೇತರಿಕೆ ನೀಡಲು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದರು. ಆದರೆ ಕೇದಾರ್ ಜಾಧವ್ ತಮ್ಮ ಬೌಲಿಂಗ್ ನಲ್ಲಿ ಎಲ್‍ಬಿಡಬ್ಲೂ ಗೆ ಅಂಪೈರ್ ಗೆ ಮನವಿ ಸಲ್ಲಿಸಿದರು. ಇದೇ ವೇಳೆ ಸಮಯ ಪ್ರಜ್ಞೆ ತೋರಿದ ಧೋನಿ ಮಿಂಚಿನ ವೇಗದಲ್ಲಿ ಬಾಲ್ ಪಡೆದು ಬ್ಯಾಟ್ಸ್ ಮನ್ ಕ್ರಿಸ್‍ಗೆ ಬರುವ ಮುನ್ನವೇ ಬೆಲ್ಸ್ ಉರುಳಿಸಲು ಯಶಸ್ವಿಯಾಗಿದರು. ಇದನ್ನು ಕಂಡ ಕ್ಷಣ ಕಾಲ ದಂಗಾದ ನೀಶಮ್ ನಿರಾಸೆಯಿಂದ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.

    ಗಾಯದ ಸಮಸ್ಯೆಯಿಂದ ಕಳೆದ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಧೋನಿ, ಅಂತಿಮ ಪಂದ್ಯದ ವೇಳೆಗೆ ಚೇತರಿಸಿಕೊಂಡು ಕಣಕ್ಕೆ ಇಳಿದಿದ್ದರು. ಆದರೆ ಬ್ಯಾಟಿಂಗ್ ನಲ್ಲಿ 1 ರನ್ ಗಳಿಸಿ ಔಟಾಗುವ ಮೂಲಕ ಧೋನಿ ನಿರಾಸೆ ಮೂಡಿಸಿದರೂ ಕೂಡ ವಿಕೆಟ್ ಹಿಂದೆ ನಿಂತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

    ಧೋನಿ ತಮ್ಮ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಮಾತ್ರ ಗಮನ ಸೆಳೆಯದೆ, ತಂಡದ ಬೌಲರ್ ಗಳಿಗೆ ಸೂಕ್ತ ಸಲಹೆ ನೀಡುವ ಮೂಲಕ ಸ್ಪಿನ್ನರ್ ಗಳ ಯಶಸ್ವಿಗೆ ಕಾರಣರಾಗಿದ್ದಾರೆ. ರವೀಂದ್ರ ಜಡೇಜಾ, ಕೇದಾರ್ ಜಾಧವ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್‍ರ ಯಶಸ್ಸಿನ ಹಿಂದೆ ಧೋನಿ ನೀಡಿದ ಸಲಹೆಗಳು ಮುಖ್ಯವಾಗಿದೆ. 2018 ಇಂಗ್ಲೆಂಡ್ ಸರಣಿಯಲ್ಲೂ ಧೋನಿ ಪ್ರಮುಖರಾಗಿದ್ದರು, ಏಕೆಂದರೆ ಈ ಸರಣಿಯ 6 ಪಂದ್ಯಗಳಲ್ಲಿ ಚಹಲ್, ಕುಲ್ದೀಪ್ 33 ವಿಕೆಟ್ ಪಡೆದಿದ್ದರು. ಪ್ರತಿ ಸಂದರ್ಭದಲ್ಲೂ ಧೋನಿ ನೀಡಿದ ಸಲಹೆ ಬಗ್ಗೆ ಬೌಲರ್ ಗಳು ಪ್ರಶಂಸೆ ವ್ಯಕ್ತಡಿಸುವಂತೆ ಬೌಲ್ ಮಾಡಿ ವಿಕೆಟ್ ಪಡೆಯುತ್ತಿದ್ದರು. ನ್ಯೂಜಿಲೆಂಡ್ ಸರಣಿಯಲ್ಲೂ ಧೋನಿ ಅವರ ಮಾಸ್ಟರ್ ಮೈಂಡ್ ಕೆಲಸ ಮಾಡಿತ್ತು.

    https://twitter.com/DoctorrSays/status/1091984081695367169

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕ್ಷಣಾರ್ಧದಲ್ಲಿ ಸ್ಟಂಪಿಂಗ್ – ಧೋನಿ ಕೀಪಿಂಗ್ ನೋಡಿ ಅಚ್ಚರಿಗೊಂಡ ಕೊಹ್ಲಿ

    ಕ್ಷಣಾರ್ಧದಲ್ಲಿ ಸ್ಟಂಪಿಂಗ್ – ಧೋನಿ ಕೀಪಿಂಗ್ ನೋಡಿ ಅಚ್ಚರಿಗೊಂಡ ಕೊಹ್ಲಿ

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಂತಿಮ ಹಾಗೂ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ, ವಿಕೆಟ್ ಕೀಪರ್ ಎಂಎಸ್ ಧೋನಿ ಮತ್ತೊಮ್ಮೆ ಮಿಂಚು ಹರಿಸಿದ್ದು, ಕ್ಷಣಾರ್ಧದಲ್ಲಿ ಸ್ಟಂಪ್ ಔಟ್ ಮಾಡಿದ್ದಾರೆ.

    ವರ್ಷದ ಆರಂಭದ ಬಳಿಕ ನಡೆದ 2 ಏಕದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ಮೂಲಕ ಮಿಂಚಿದ್ದ ಧೋನಿ ಈ ಪಂದ್ಯದಲ್ಲಿ ತಮ್ಮ ಚಾಣಾಕ್ಷತೆ ತೋರಿ ಕಳೆದ ಪಂದ್ಯದಲ್ಲಿ ಶತಕದ ಸಾಧನೆ ಮಾಡಿದ್ದ ಮಾರ್ಷ್ ವಿಕೆಟ್ ಪಡೆದು ಮಿಂಚಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://twitter.com/UB399/status/1086140484152635392?

    ಪಂದ್ಯದಲ್ಲಿ 3 ಬೌಂಡರಿ ಸಿಡಿಸಿ 39 ರನ್ ಗಳಿಸಿದ್ದ ಮಾರ್ಷ್ ಚಹಲ್ ಬೌಲಿಂಗ್ ನಲ್ಲಿ ಬ್ಯಾಟ್ ಬೀಸಲು ಯತ್ನಿಸಿ ವಿಫಲರಾಗಿದ್ರು. ಈ ವೇಳೆ ಚೆಂಡು ಧೋನಿ ಕೈ ಸೇರುತ್ತಿದಂತೆ ವಿಕೆಟ್ ಗೆ ಮುಟ್ಟಿಸಿದರು. ಇತ್ತ ಧೋನಿ ಸ್ಟಂಪ್ ಮಾಡುತ್ತಿದಂತೆ ನಾಯಕ ವಿರಾಟ್ ಕೊಹ್ಲಿ ಅಚ್ಚರಿ ವ್ಯಕ್ತಪಡಿಸಿ ಅಂಪೈರ್ ಔಟ್ ಎಂದು ತೀರ್ಪು ನೀಡುವ ಮೂಲಕವೇ ಆತ್ಮವಿಶ್ವಾಸದಿಂದ ಸಂಭ್ರಮಿಸಿದರು.

    ಸದ್ಯ ಸರಣಿಯಲ್ಲಿ 1-1ರ ಮೂಲಕ ಸಮಬಲ ಸಾಧಿಸಿರುವ ಟೀಂ ಇಂಡಿಯಾ ಅಂತಿಮ ಪಂದ್ಯ ಗೆಲ್ಲುವ ಮೂಲಕ ಇತಿಹಾಸ ನಿರ್ಮಾಣ ಮಾಡುವ ವಿಶ್ವಾಸದಲ್ಲಿದೆ. ಟೀಂ ಇಂಡಿಯಾ ಪಂದ್ಯದಲ್ಲಿ ಜಯಗಳಿಸಿದರೆ ಆಸೀಸ್ ನೆಲದಲ್ಲಿ ನಡೆದ ದ್ವೀಪಕ್ಷಿಯ ಸರಣಿಯಲ್ಲಿ ಮೊದಲ ಬಾರಿಗೆ ಗೆಲುವು ಪಡೆದ ದಾಖಲೆ ನಿರ್ಮಿಸಲಿದೆ. ಅಲ್ಲದೇ ಆಸೀಸ್ ಪ್ರವಾಸದಲ್ಲಿ ಸರಣಿ ಸೋಲದೇ ಅಜೇಯರಾಗಿ ಉಳಿದ ಹೆಗ್ಗಳಿಕೆ ಪಡೆಯಲಿದೆ. ಇದನ್ನು ಓದಿ: ಧೋನಿಯ ಶರವೇಗದ ಸ್ಟಂಪಿಂಗ್ – ವೈರಲ್ ಆಗಿದೆ ವಿಡಿಯೋ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv