Tag: Study Report

  • 10-14 ವಾರಗಳ ಅಂತರದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆಯುವುದು ಉತ್ತಮ- ಅಧ್ಯಯನ ವರದಿ

    10-14 ವಾರಗಳ ಅಂತರದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆಯುವುದು ಉತ್ತಮ- ಅಧ್ಯಯನ ವರದಿ

    ನವದೆಹಲಿ: ನಾಲ್ಕರಿಂದ ಆರು ವಾರಗಳ ಅಂತರಕ್ಕಿಂತ 10-14 ವಾರಗಳ ಅಂತರದಲ್ಲಿ ಕೊರೊನಾ ಲಸಿಕೆ ಪಡೆಯುವುದು ಒಳಿತು ಎಂದು ಅಧ್ಯಯನ ವರದಿಯೊಂದು ಹೇಳಿದೆ.

    ಕ್ಲಿನಿಕಲ್ ಇಮ್ಯುನೊಲೊಜಿಸ್ಟ್ ಮತ್ತು ರುಮಾಟಾಲಜಿಸ್ಟ್ ಡಾ.ಪದ್ಮನಾಭ ಶೆಣೈ ಮತ್ತು ಅವರ ತಂಡದಿಂದ ನಡೆಸಿದ ಅಧ್ಯಯನದಿಂದ ಈ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‍ಗಳ ನಡುವಿನ ಅಂತರ ಹೆಚ್ಚಳ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಕೇರಳ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಅಫಿಡೆವಿಟ್ ಸಲ್ಲಿಸುವಂತೆ ಸೂಚನೆ ನೀಡಿತ್ತು. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಅಪಘಾತ – ನಿನ್ನೆಯಷ್ಟೇ ಕೆಲಸಕ್ಕೆ ಸೇರಿದ್ದ ಕೃತಿಕ ರಾಮಾನ್

    ಹೈಕೋರ್ಟ್ ಸೂಚನೆ ಹಿನ್ನಲೆ ಎರಡು ಡೋಸ್‍ಗಳ ಅಂತರ ಹೆಚ್ಚಿಸುವುದರಿಂದಾಗುವ ಲಾಭಗಳ ಬಗ್ಗೆ ಕೊಚ್ಚಿಯ CARE ಆಸ್ಪತ್ರೆಯಲ್ಲಿ ಅಧ್ಯಯನ ನಡೆಸಲಾಗಿತ್ತು. 4-6 ವಾರಗಳಲ್ಲಿ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದ 102, 10-12 ವಾರಗಳ ಅಂತರದಲ್ಲಿ ವ್ಯಾಕ್ಸಿನ್ ಪಡೆದ 111 ಜನರ ಮೇಲೆ ಈ ಅಧ್ಯಯನ ನಡೆಸಲಾಗಿತ್ತು.

    ಅಧ್ಯಯನದಲ್ಲಿ 4-6 ವಾರಗಳ ಅಂತರದಲ್ಲಿ ವ್ಯಾಕ್ಸಿನ್ ಪಡೆದವರಿಗಿಂತ 10-14 ವಾರಗಳ ಅಂತರದಲ್ಲಿ ಲಸಿಕೆ ಪಡೆದವರಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿ ಇರುವುದು ದೃಢವಾಗಿದೆ. ಈ ಜನರಲ್ಲಿ ಉತ್ತಮ ಪ್ರತಿರಕ್ಷಣಾ ಶಕ್ತಿ ದೊರೆತಿದೆ. ಜನರಲ್ಲಿ ಶೇ.3.5ರಷ್ಟು ಹೆಚ್ಚು ಪ್ರತಿಕಾಯಗಳು ಉತ್ಪತಿಯಾಗಿದೆ ಎಂದು ಅಧ್ಯಯನದಲ್ಲಿ ಸಾಬೀತಾಗಿದೆ. ಈ ವರದಿಯಲ್ಲಿ ರಾಜ್ಯ ಸರ್ಕಾರ ಅಫಿಡೆವಿಟ್ ರೂಪದಲ್ಲಿ ಹೈಕೋರ್ಟ್ ಗೆ ಸಲ್ಲಿಸಿದೆ.

  • ಬಾಯಿ ಮುಕ್ಕಳಿಸಿದ ನೀರಿನಿಂದಲೂ ಕೊರೊನಾ ಪರೀಕ್ಷೆ ಮಾಡಬಹುದು – ಐಸಿಎಂಆರ್

    ಬಾಯಿ ಮುಕ್ಕಳಿಸಿದ ನೀರಿನಿಂದಲೂ ಕೊರೊನಾ ಪರೀಕ್ಷೆ ಮಾಡಬಹುದು – ಐಸಿಎಂಆರ್

    – ಹೊಸ ಅಧ್ಯಯನ ವರದಿಯಲ್ಲಿ ಮಾಹಿತಿ

    ನವದೆಹಲಿ: ಮೂಗು, ಗಂಟಲು ದ್ರವ ಮಾತ್ರವಲ್ಲದೆ ಬಾಯಿ ಮುಕ್ಕಳಿಸಿದ ನೀರಿನಿಂದಲೂ ಕೊರೊನಾ ಪರೀಕ್ಷೆ ನಡೆಸಬಹುದು ಎಂದು ಐಸಿಎಂಆರ್ ತನ್ನ ಹೊಸ ಅಧ್ಯಯನ ವರದಿಯಲ್ಲಿ ತಿಳಿಸಿದೆ.

    ಕೊರೊನಾ ಟೆಸ್ಟ್ ವಿಚಾರದಲ್ಲಿ ಹೊಸ ಅಧ್ಯಯನ ಮಾಡಿರುವ ಐಸಿಎಂಆರ್, ಗಂಟಲು ಸ್ವಾಬ್ ಸ್ಯಾಂಪಲ್ ಗೆ ಪರ್ಯಾಯ ಮಾರ್ಗ ಹುಡುಕಿದ್ದು, ಇನ್ನು ಮುಂದೆ ಬಾಯಿ ಮುಕ್ಕಳಿಸಿದ ನೀರನ್ನೂ ಸ್ಯಾಂಪಲ್ ಗೆ ಪಡೆಯಬಹುದು ಎಂದು ತಿಳಿಸಿದೆ.

    ಅಧ್ಯಯನ ವರದಿ ಪ್ರಕಟಿಸುವ ಮುನ್ನ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಈ ಪ್ರಯೋಗ ನಡೆಸಲಾಗಿತ್ತು. ಸುಮಾರು 50 ರೋಗಿಗಳ ಮೇಲೆ ನಡೆದ ಪರೀಕ್ಷೆಯಲ್ಲಿ ಬಾಯಿ ಮುಕ್ಕಳಿಸಿದ ನೀರಿನಲ್ಲಿ ಕೊರೊನಾ ಪ್ರಾಥಮಿಕ ಲಕ್ಷಣಗಳಿರಿವುದು ಪತ್ತೆಯಾದ ಬಳಿಕ ಐಸಿಎಂಆರ್ ಈ ನಿರ್ಧಾರಕ್ಕೆ ಬಂದಿದೆ.

    ಬಾಯಿ ಮುಕ್ಕಳಿಸುವ ನೀರಿನ ಪರೀಕ್ಷೆಯಿಂದ ಅಪಾಯಗಳು ಕಡಿಮೆ. ಕೊರೊನಾ ವಾರಿಯರ್ಸ್ ಸುರಕ್ಷತೆಯಲ್ಲಿಯೂ ಇದು ವಿಧಾನ ಅನುಕೂಲ. ಗಂಟಲು ಅಥಾವ ಮೂಗಿನ ಸ್ವಾಬ್ ಪಡೆಯುವಾಗ ಹೆಲ್ತ್ ವಾರಿಯರ್ಸ್ ಗೆ ಸೋಂಕು ಹರಡುವ ಅಪಾಯಗಳು ಹೆಚ್ಚು. ಇದಕ್ಕಾಗಿ ಪಿಪಿಇ ಕಿಟ್ ಗಳನ್ನು ಧರಿಸಬೇಕು ಎಂದು ಐಸಿಎಂಆರ್ ಅಭಿಪ್ರಾಯಪಟ್ಟಿದೆ.

    ಬಾಯಿ ಮುಕ್ಕಳಿಸಿದ ನೀರನ್ನು ಸ್ಯಾಂಪಲ್ ಪಡೆಯುವುದರಿಂದ ಅಪಾಯ ಕಡಿಮೆ. ರೋಗಿಗಳೇ ಬಾಯಿ ಮುಕ್ಕಳಿಸಿದ ನೀರಿನ ಸ್ಯಾಂಪಲ್ ಕೊಡುತ್ತಾರೆ ಇದರಿಂದ ಹೆಲ್ತ್ ವಾರಿಯರ್ಸ್ ಗೆ ಸೋಂಕು ಹರಡುವುದಿಲ್ಲ. ಅಲ್ಲದೆ ಪಿಪಿಇ ಕಿಟ್ ಸೇರಿದಂತೆ ಇತರೆ ಮುನ್ನೆಚ್ಚರಿಕಾ ಸಾಧನಗಳ ಬಳಕೆ ಕಡಿಮೆಯಾಗುವುದರಿಂದ ಇದಕ್ಕಾಗಿ ಖರ್ಚು ಮಾಡುವ ಹಣ ಸಹ ಉಳಿತಾಯ ಆಗಲಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

    ಮಕ್ಕಳು, ತೀವ್ರ ಆರೋಗ್ಯ ತೊಂದರೆಗೆ ಒಳಗಾದವರು ಹಾಗೂ ಉಸಿರಾಟದ ಸಮಸ್ಯೆ ಇರುವವರಿಂದ ಈ ಸ್ಯಾಂಪಲ್ ಪಡೆಯುವಂತಿಲ್ಲ ಇದರಿಂದ ಅಪಾಯ ಹೆಚ್ಚು ಎಂದು ಎಚ್ಚರಿಸಿರುವ ಐಸಿಎಂಆರ್ ಸಾಮಾನ್ಯ ವ್ಯಕ್ತಿಗಳಿಗೆ ಮಾತ್ರ ಈ ಪರೀಕ್ಷೆ ಮಾದರಿ ಬಳಸಬಹುದು ಎಂದು ತಿಳಿಸಿದೆ.