Tag: students protest

  • ಮಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ – ಆಡಳಿತ ಸೌಧದ ಗಾಜು ಪುಡಿ

    ಮಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ – ಆಡಳಿತ ಸೌಧದ ಗಾಜು ಪುಡಿ

    – ಅವೈಜ್ಞಾನಿಕ ಕಾಲೇಜು, ಪರೀಕ್ಷಾ ಶುಲ್ಕ ಹೆಚ್ಚಳ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

    ಮಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಮಂಗಳೂರು ಹೊರವಲಯದ ಕೋಣಾಜೆಯ ಮಂಗಳೂರು ವಿಶ್ವವಿದ್ಯಾಲಯದ (Mangaluru University) ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಪರೀಕ್ಷಾ ಅಂಕಪಟ್ಟಿಯ ಸಮಸ್ಯೆ ಇದೆ. ಅವೈಜ್ಞಾನಿಕವಾಗಿ ಪರೀಕ್ಷಾ ಶುಲ್ಕಗಳ ಹೆಚ್ಚಳ ಮಾಡಲಾಗಿದೆ. ಹಾಸ್ಟೆಲ್ ಸಮಸ್ಯೆಗಳ ಪರಿಹಾರ ಆಗಬೇಕು ಎಂದು ವಿದ್ಯಾರ್ಥಿಗಳು ವಿವಿಧ ವಿಚಾರಗಳನ್ನು ಮುಂದಿಟ್ಟು ಪ್ರತಿಭಟಿಸಿದರು. ಇದನ್ನೂ ಓದಿ: 50 ಸಾವಿರ ಲಂಚ ಸ್ವೀಕಾರ – ಭಟ್ಕಳ ಪುರಸಭಾ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ

    ಕಚೇರಿಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರು ಕಚೇರಿ ಮುಂಭಾಗದ ಗಾಜನ್ನು ಒಡೆದು ಪುಡಿಗೈದರು. ಈ ವೇಳೆ ಓರ್ವ ವಿದ್ಯಾರ್ಥಿಗೆ ಒಡೆದ ಗಾಜಿನಿಂದ ಸಣ್ಣಪುಟ್ಟ ಗಾಯಗಳಾಗಿದೆ. ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ವಿವಿ ಉಪಕುಲಪತಿಗಳು, ಸಿಂಡಿಕೇಟ್ ಸದಸ್ಯರ ಜೊತೆ ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿ ಸಮಸ್ಯೆ ಪರಿಹಾರಕ್ಕೆ ಭರವಸೆ ನೀಡಿದರು.

    ವಿದ್ಯಾರ್ಥಿಗಳು ಪ್ರತಿಭಟನೆಯ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡೋದು ಸರಿಯಲ್ಲ ಎಂದ ಉಪಕುಲಪತಿ ಪಿ.ಎಲ್ ಧರ್ಮ, ಆದಷ್ಟು ಬೇಗ ಸರ್ಕಾರದ ಗಮನಕ್ಕೆ ತರೋದಾಗಿ ಹೇಳಿದರು. ತಮ್ಮ ಬೇಡಿಕೆ ಶೀಘ್ರದಲ್ಲಿ ಈಡೇರದೇ ಇದ್ದರೆ ಎಲ್ಲಾ ಕಾಲೇಜಿನ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: Waqf Land Row | ವಿವಾದಿತ ಜಮೀನಿನಲ್ಲಿ ಉಳುಮೆ – ರೈತರ ಮೇಲೆ ಕೇಸ್ ದಾಖಲು, ಟ್ರ್ಯಾಕ್ಟರ್ ಜಪ್ತಿ

  • ಸ್ನಾನದ ವೀಡಿಯೋ ಲೀಕ್‌ ಕೇಸ್‌ ಬೆನ್ನಲ್ಲೇ ಪಂಜಾಬ್‌ನ ಮತ್ತೊಂದು ವಿವಿ ವಿವಾದ – ವಿದ್ಯಾರ್ಥಿ ಆತ್ಮಹತ್ಯೆ, ಭಾರಿ ಪ್ರತಿಭಟನೆ

    ಸ್ನಾನದ ವೀಡಿಯೋ ಲೀಕ್‌ ಕೇಸ್‌ ಬೆನ್ನಲ್ಲೇ ಪಂಜಾಬ್‌ನ ಮತ್ತೊಂದು ವಿವಿ ವಿವಾದ – ವಿದ್ಯಾರ್ಥಿ ಆತ್ಮಹತ್ಯೆ, ಭಾರಿ ಪ್ರತಿಭಟನೆ

    ಚಂಡೀಗಢ: ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್‌ ಪ್ರಕರಣದಿಂದ ವಿವಾದಕ್ಕೆ ಕಾರಣವಾದ ಚಂಡೀಗಢ ವಿಶ್ವವಿದ್ಯಾಲಯದಂತೆ (Chandigarh University) ಈಗ ಮತ್ತೊಂದು ವಿವಿ ಭಾರೀ ಸುದ್ದಿಯಲ್ಲಿದೆ. ಪಂಜಾಬ್‌ನ (Punjab) ಜಲಂಧರ್‌ನಲ್ಲಿರುವ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ (Lovely Professional University) ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಕೇರಳ ಮೂಲದ 21 ವರ್ಷದ ವಿದ್ಯಾರ್ಥಿ ಮಂಗಳವಾರ ಸಂಜೆ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬ್ಯಾಚುಲರ್ ಆಫ್ ಡಿಸೈನಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದ ಅಗ್ನಿ ಎಸ್. ದಿಲೀಪ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್ ಪ್ರಕರಣ – ಬಾಯ್‌ಫ್ರೆಂಡ್‌ಗೆ ಹೆದರಿ ವೀಡಿಯೋ ಮಾಡಿದ್ಲು ಸಹಪಾಠಿ

    ಘಟನೆಯನ್ನು ಖಂಡಿಸಿ ವಿದ್ಯಾರ್ಥಿಗಳು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಳೀಸರು ತಿಳಿಸಿದ್ದಾರೆ.

    ಸದ್ಯ ಪ್ರತಿಭಟನೆಯನ್ನು ನಿಭಾಯಿಸಿದ್ದೇವೆ. ಆತ್ಮಹತ್ಯೆ ಬಗ್ಗೆ ಮೃತನ ಪೋಷಕರಿಗೆ ಮಾಹಿತಿ ನೀಡಿದ್ದೇವೆ. ಅವರ ಹೇಳಿಕೆ ಆಧರಿಸಿ ನಾವು ತನಿಖೆ ಮುಂದುವರಿಸುತ್ತೇವೆ ಎಂದು ಫಗ್ವಾರಾ ಪೊಲೀಸ್‌ ವರಿಷ್ಠಾಧಿಕಾರಿ ಮುಖ್ತಿಯಾರ್‌ ರೈ ತಿಳಿಸಿದ್ದಾರೆ. ಇದನ್ನೂ ಓದಿ: ಚಂಡೀಗಢ ವಿವಿ ಬಳಿಕ ಐಐಟಿ ಬಾಂಬೆ- ಹಾಸ್ಟೆಲ್ ಸ್ನಾನಗೃಹದಲ್ಲಿ ಇಣುಕಿದ ಕ್ಯಾಂಟೀನ್ ಸಿಬ್ಬಂದಿ ಬಂಧನ

    ಪ್ರತಿಭಟನೆಯಿಂದ ವಿವಿಯಲ್ಲಿ ಯಾವುದೇ ಅಹಿತಕರ ಘಟನೆ ಆಗದಂತೆ ಎಚ್ಚರ ವಹಿಸಲು ಕ್ಯಾಂಪಸ್‌ನಲ್ಲಿ ಹೆಚ್ಚಿನ ಪೊಲೀಸ್‌ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]