Tag: Stuart Law

  • ಬೂಮ್ರಾ, ಭುವನೇಶ್ವರ್ ಕಮ್ ಬ್ಯಾಕ್ ನಮ್ಮಿಂದಲೇ!

    ಬೂಮ್ರಾ, ಭುವನೇಶ್ವರ್ ಕಮ್ ಬ್ಯಾಕ್ ನಮ್ಮಿಂದಲೇ!

    ಪುಣೆ: ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಮೂರು ಪಂದ್ಯಗಳಿಗೆ ಟೀಂ ಇಂಡಿಯಾ ತನ್ನ ಪ್ರಮುಖ ಬೌಲರ್ ಗಳನ್ನು ವಾಪಸ್ ಕರೆಸಿದ್ದು ನಮ್ಮ ತಂಡದ ಸಾಧನೆ ಎಂದು ವಿಂಡೀಸ್ ತಂಡದ ಕೋಚ್ ಸ್ಟುವರ್ಟ್ ಲಾ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.

    ಕಳೆದ ಎರಡೂ ಪಂದ್ಯಗಳಲ್ಲಿ ವಿಂಡೀಸ್ ತಂಡ 300 ರನ್ ಗಳ ಗಡಿ ದಾಟಿತ್ತು. ಇದರಿಂದಾಗಿಯೇ ಟೀಂ ಇಂಡಿಯಾ ಬೌಲರ್ ಗಳನ್ನು ವಾಪಸ್ ಕರೆಸಿಕೊಂಡಿದೆ ಎಂದು ಹೇಳಿದ್ದಾರೆ. ವಿಂಡೀಸ್ ವಿರುದ್ಧದ ಮೂರು ಪಂದ್ಯಗಳಿಗೆ ಟೀಂ ಇಂಡಿಯಾ ಜಸ್ಪ್ರೀತ್ ಬೂಮ್ರಾ ಹಾಗೂ ಭುವನೇಶ್ವರ್ ಕುಮಾರ್ ಅವರನ್ನು ವಾಪಸ್ ಕರೆಸಿಕೊಂಡಿತ್ತು. ಈ ಇಬ್ಬರು ಬೌಲರ್ ಗಳು ತಂಡಕ್ಕೆ ವಾಪಸ್ ಆಗುತ್ತಾರೆ ಎಂಬ ವಿಚಾರ ಮೊದಲೇ ಇದ್ದರೂ ಇದಕ್ಕೆ ನಾವೇ ಕಾರಣ ಎಂದು ಲಾ ಅಂದುಕೊಂಡಿದ್ದಾರೆ.

    ಕಳೆದ ಪಂದ್ಯಗಳಿಂದಾಗಿ ಟೀಂ ಇಂಡಿಯಾ ತಮ್ಮನ್ನು ತಾವೇ ಪ್ರಶ್ನೆ ಕೇಳಿಕೊಳ್ಳುವಂತೆ ಮಾಡಿದ್ದು ನಮ್ಮ ತಂಡದ ಹೆಗ್ಗಳಿಕೆ ಎಂದೂ ಅವರು ಇದೇ ವೇಳೆ ಹೇಳಿದರು.

    ಇದೇ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಬೇಗ ಔಟ್ ಮಾಡಲು ನಮ್ಮ ಬಳಿ ಕೆಲ ಪ್ಲಾನ್ ಗಳಿವೆ. ಕಳೆದ ಪಂದ್ಯದಲ್ಲೂ ಕೊಹ್ಲಿ 40 ರನ್ ಗಳಿಸಿದ್ದ ವೇಳೆ ಔಟ್ ಮಾಡುವ ಅವಕಾಶ ನೀಡಿದ್ದರು. ಆದರೆ ಕೊಹ್ಲಿ ಒಬ್ಬ ಅತ್ಯುತ್ತಮ ಆಟಗಾರ. ಕೊಹ್ಲಿ ತಂಡದ ಇನ್ನಿಂಗ್ಸ್ ಕಟ್ಟುವ ಶೈಲಿ ನನಗೆ ಅಚ್ಚುಮೆಚ್ಚು ಎಂದು ತಿಳಿಸಿದ ಅವರು, ವಿಂಡೀಸ್ ಆಟಗಾರ ಹೆಟ್ಮೆಯರ್ ಪ್ರದರ್ಶನಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv