Tag: Struggle

  • ದ್ರಾವಿಡ ಪಕ್ಷಗಳು ಕರ್ನಾಟಕ ಅಂದ್ರೆ ಪಾಕಿಸ್ತಾನ ಅಂದ್ಕೊಂಡಿವೆ: ಕಾವೇರಿ ಕುರಿತು ಅನಂತ್ ಕಿಡಿ

    ದ್ರಾವಿಡ ಪಕ್ಷಗಳು ಕರ್ನಾಟಕ ಅಂದ್ರೆ ಪಾಕಿಸ್ತಾನ ಅಂದ್ಕೊಂಡಿವೆ: ಕಾವೇರಿ ಕುರಿತು ಅನಂತ್ ಕಿಡಿ

    ನಿನ್ನೆಯಿಂದ ಕಾವೇರಿ ಹೋರಾಟದ ಕುರಿತಂತೆ ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು ಮಾತನಾಡುತ್ತಿದ್ದಾರೆ. ಬಹುತೇಕರು ಸೋಷಿಯಲ್ ಮೀಡಿಯಾ ಮೂಲಕ ಕರ್ನಾಟಕದ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಅದರಲ್ಲೂ ಹಿರಿಯ ನಟ ಅನಂತ್ ನಾಗ್ (Anant Nag), ಕಾವೇರಿ ಹೋರಾಟದ ಬಗ್ಗೆ ಸುದೀರ್ಘವಾಗಿ ಮಾತನಾಡಿದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತಮಿಳು ನಾಡು ನಿಲುವನ್ನು ಕಟು ಭಾಷೆಯಲ್ಲಿ ಟೀಕಿಸಿದ್ದಾರೆ.

    ಮಳೆ ಇಲ್ಲದ ಸಂದರ್ಭದಲ್ಲಿ ಕಾವೇರಿ ಗಲಾಟೆ ಆಗುವುದು ಸಹಜ ಎನ್ನುವಂತಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ತಮಿಳು ನಾಡಿ ಕಾವೇರಿ ವಿಷಯದಲ್ಲಿ ಖ್ಯಾತೆ ತೆಗೆದಿದೆ. 60 ವರ್ಷದಿಂದಲೂ ನಾನು ಇದನ್ನು ನೋಡುತ್ತಾ ಬಂದಿರುವೆ. ಈ ದ್ರಾವಿಡ ಪಕ್ಷಗಳು ಪದೇ ಪದೇ ಅಲ್ಲಿನ ಜನರನ್ನು ಕಾವೇರಿ ವಿಷಯದಲ್ಲಿ ತಪ್ಪು ದಾರಿಗೆ ಎಳೆಯುತ್ತಿವೆ ಎಂದು ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ.

    ನಾವು ಪ್ರತಿ ವರ್ಷವೂ ಅಗತ್ಯಕ್ಕಿಂತಲೂ ಹೆಚ್ಚಿನ ನೀರನ್ನು ಕೊಡುತ್ತಲೇ ಬಂದಿದ್ದೇವೆ. ದ್ರಾವಿಡ ಪಕ್ಷಗಳು ಕರ್ನಾಟಕವನ್ನು ಪಾಕಿಸ್ತಾನ, ಶ್ರೀಲಂಕಾದಂತೆ ನೋಡುತ್ತಿವೆ. ಅವರು ಒಟ್ಟಾಗಿ ಹೋಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುತ್ತಾನೆ. ನಮ್ಮಲ್ಲಿ ಹಾಗೆ ಆಗುತ್ತಿಲ್ಲ. ಈ ಕೆಲಸವನ್ನು ನಾವು ಮಾಡಬೇಕಿದೆ ಎಂದು ಅನಂತ್ ನಾಗ್ ವಿಡಿಯೋದಲ್ಲಿ ಹೇಳಿದ್ದಾರೆ.

    ಕಾವೇರಿ ಹೋರಾಟಕ್ಕೆ ಸ್ಯಾಂಡಲ್ ವುಡ್ ಬೆಂಬಲ

    ಸ್ಯಾಂಡಲ್ ವುಡ್ (Sandalwood) ತಾರೆಯರ ಮೇಲೆ ಕಾವೇರಿ (Cauvery) ಹೋರಾಟಗಾರರು ಮುಗಿ ಬೀಳುತ್ತಿದ್ದಂತೆಯೇ ಒಬ್ಬೊಬ್ಬರೇ ಈ ಕುರಿತು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕನ್ನಡ ನಾಡು, ನುಡಿ, ಜಲದ ಬಗ್ಗೆ ಸದಾ ಅಪಾರ ಗೌರವವನ್ನು ಇಟ್ಟುಕೊಂಡು ಬಂದಿರುವ ಡಾ.ರಾಜ್ ಕುಮಾರ್ ಕುಟುಂಬ ಕೂಡ ಕಾವೇರಿ ಕುರಿತಂತೆ ಪ್ರತಿಕ್ರಿಯೆ ನೀಡಿದೆ. ಬೆಳಗ್ಗೆಯಷ್ಟೇ ರಾಘವೇಂದ್ರ ರಾಜಕುಮಾರ್ ಮಾತನಾಡಿದ್ದರು. ಇದೀಗ ಶಿವರಾಜ್ ಕುಮಾರ್  (Shivaraj Kumar) ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

    ‘ರೈತನ ಬೆನ್ನೆಲುಬು ಕಾವೇರಿ. ರಾಜ್ಯದಲ್ಲಿ ಈಗಾಗಲೇ ಮಳೆಯ ಅಭಾವ ಇರುವ ಕಾರಣದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಎರಡು ರಾಜ್ಯಗಳ ನಾಯಕರು, ನ್ಯಾಯಾಲಯ ಇದಕ್ಕೊಂದು ಸಮಾಧಾನಕರ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಇದು ನನ್ನ ಪ್ರಾರ್ಥನೆ ಕೂಡ ಆಗಿದೆ’ ಎಂದಿದ್ದಾರೆ.

    ಹಲವು ದಿನಗಳಿಂದ ಮಂಡ್ಯ ಭಾಗದ ರೈತರು ಕಾವೇರಿ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ರೈತರು, ರೈತ ಸಂಘಗಳು ಮತ್ತು ಕನ್ನಡಪರ ಹೋರಾಟಗಾರು ಈ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡಿದ್ದರೂ, ಕನ್ನಡ ಸಿನಿಮಾ ರಂಗದವರು ಮಾತ್ರ ಮೌನವಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಇವತ್ತು ಹಲವು ಕಡೆ ಚಿತ್ರರಂಗದವರ ವಿರುದ್ಧ ಪ್ರತಿಭಟನೆ ಕೂಡ ಮಾಡಿದ್ದರು. ವಿರೋಧದ ಹೋರಾಟ ಹೆಚ್ಚಾಗುತ್ತಿದ್ದಂತೆಯೇ ಒಬ್ಬೊಬ್ಬ ನಟರು ಸೋಷಿಯಲ್ ಮೀಡಿಯಾ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.

    ಹಿರಿಯ ನಟಿ, ಮಂಡ್ಯ ಕ್ಷೇತ್ರದ ಸಂಸದೆಯೂ ಆಗಿರುವ ಸುಮಲತಾ ಅಂಬರೀಶ್ ಅವರು ನಿರಂತರವಾಗಿ ರೈತರ ಹೋರಾಟಗಳಿಗೆ ಬೆಂಬಲ ಸೂಚಿಸುತ್ತಾ ಬಂದಿದ್ದಾರೆ. ಜಲಶಕ್ತಿ ಸಚಿವರನ್ನು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ನಿನ್ನೆಯಷ್ಟೇ ಭೇಟಿ ಮಾಡಿ ಕ್ಷೇತ್ರದ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಅಲ್ಲದೇ, ನೇರವಾಗಿ ಅವರು ಹೋರಾಟಕ್ಕೂ ಇಳಿದಿದ್ದರು. ಇವರ ಹೊರತಾಗಿ ಬೇರೆ ಯಾವ ಕಲಾವಿದರೂ ಹೋರಾಟದಲ್ಲಿ ಭಾಗಿಯಾಗಿಲ್ಲ ಎನ್ನುವ ಅಸಮಾಧಾನ ಹೋರಾಟಗಾರರಲ್ಲಿ ಇತ್ತು.

    ಬೆಳಗ್ಗೆ ನಟ ದರ್ಶನ್ ಟ್ವೀಟ್ ಮಾಡಿ, ‘ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ, ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ’ ಎಂದು ಬರೆದಿದ್ದರು.

     

    ಸುದೀಪ್ (Sudeep) ಕೂಡ ಟ್ವೀಟ್ ಮಾಡಿದ್ದು, ‘ಸ್ನೇಹಿತರೆ, ನಮ್ಮ ಕಾವೇರಿ ನಮ್ಮ ಹಕ್ಕು. ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು  ನಾನು ನಂಬಿದ್ದೇನೆ . ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ . ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ. ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ’ ಎಂದು ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಂದಿನಿ ‘ನಮ್ಮವಳು’ ಅಲ್ಲ, ‘ನನ್ನವಳು’ : ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್

    ನಂದಿನಿ ‘ನಮ್ಮವಳು’ ಅಲ್ಲ, ‘ನನ್ನವಳು’ : ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್

    ಮೂಲ್ (Amul) ಮತ್ತು ನಂದಿನಿ (Nandini) ಹಾಲಿನ ಜಟಾಪಟಿ ತಾರಕಕ್ಕೇರಿದೆ. ಕರ್ನಾಟಕದಲ್ಲಿ ತನ್ನ ಉದ್ಯಮವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಅಮೂಲ್ ಹಲವು ರೀತಿಯಲ್ಲಿ ಕಸರತ್ತು ಮಾಡುತ್ತಿದೆ. ಇದಕ್ಕೆ ತೀವ್ರ ವಿರೋಧವು ವ್ಯಕ್ತವಾಗಿದೆ. ವಿರೋಧದ ಕಾವು ಜೋರಾಗುತ್ತಿದ್ದಂತೆಯೇ  ಅಮೂಲ್ ಕಂಪೆನಿಯ ಎಂ.ಡಿ ಸದ್ಯಕ್ಕೆ ಒಂದಷ್ಟು ಕೆಲಸವನ್ನು ಸ್ಥಗಿತಗೊಳಿಸಿದ್ದೇವೆ ಎಂದು ಹೇಳಿದರೂ, ಹೋರಾಟಗಾರರು ಮಾತ್ರ ಸುಮ್ಮನಾಗಿಲ್ಲ.

    ನಂದಿನಿ ಉಳಿವಿಗಾಗಿ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಮಾತನಾಡಿದ್ದು, ನಿರ್ದೇಶಕ ಮಂಸೋರೆ, ಚಿತ್ರಸಾಹಿತಿ ಕವಿರಾಜ್ ಸೇರಿದಂತೆ ಹಲವರು ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ. ಇನ್ನೂ ಹಲವರು ಡಾ.ರಾಜ್ ಕುಟುಂಬ ನಂದಿನಿ ಡೈರಿಗೆ ಸಪೋರ್ಟ್ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ, ರೈತರ ಉಳಿವಿಗಾಗಿ ಎಂತಹ ಹೋರಾಟಕ್ಕೂ ಸಿದ್ಧ ಎಂದು ಕನ್ನಡಪರ ಹೋರಾಟಗಾರರು ಕರೆಕೊಟ್ಟಿದ್ದಾರೆ. ಈ ನಡುವೆ ನಾಗತಿಹಳ್ಳಿ ಚಂದ್ರಶೇಖರ್ (Nagatihalli Chandrasekhar) , ನಂದಿನಿ ಜೊತೆಗಿನ ಸಂಬಂಧವನ್ನು ಹೇಳಿಕೊಂಡಿದ್ದಾರೆ.

    ನಂದಿನಿ ಕುರಿತಾಗಿ ಟ್ವೀಟ್ ಮಾಡಿರುವ ನಾಗತಿಹಳ್ಳಿ, ‘ನಂದಿನಿ ನಮ್ಮವಳು ಅಲ್ಲ, ನನ್ನವಳು. ಆರೋಗ್ಯದಾಯಿನಿ. ನಾನು ಕೆಎಂಎಫ್ ನ ಮೈಸೂರು ಡೈರಿಯಲ್ಲಿ ಆರು ವರ್ಷ ದಿನಗೂಲಿ ಜತೆ ವ್ಯಾಸಂಗ ಮಾಡಿ ಬದುಕು ಕಟ್ಟಿಕೊಂಡವನು. ನಾಗತಿಹಳ್ಳಿಯಲ್ಲಿ ಹೆಣ್ಣು ಮಕ್ಕಳಿಗಾಗಿ ಮಾಡಿಕೊಟ್ಟ ಅಭಿವ್ಯಕ್ತಿ ಹಾಲು ಉತ್ಪಾದಕರ ಸಂಘ ಯಶಸ್ವಿಯಾಗಿ ನಡೆಯುತ್ತಿದೆ. ನಂದಿನಿ ಇಲ್ಲದ ಗ್ರಾಮ್ಯ ಬದುಕನ್ನು ಕಲ್ಪಿಸಿಕೊಳ್ಳುವುದೂ ಕಷ್ಟ’ ಎಂದು ಬರೆದಿದ್ದಾರೆ. ಇದನ್ನೂ ಓದಿ: ಬೋಲ್ಡ್ ಅವತಾರ ತಾಳಿದ ‘ಕಬ್ಜ’ ಸುಂದರಿ ಶ್ರೀಯಾ

    ನಾಗತಿಹಳ್ಳಿ ಮೇಷ್ಟ್ರು ಶಾಲಾ ದಿನಗಳಲ್ಲಿ ನಂದಿನಿ ಡೈರಿಯಲ್ಲಿ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಆರು ವರ್ಷಗಳ ಕಾಲ ಡೈರಿಯಲ್ಲಿ ಅವರು ಕೆಲಸ ಮಾಡಿದ್ದಾರಂತೆ. ಹಾಗಾಗಿ ಅದರೊಂದಿಗೆ ತಮ್ಮದು ಭಾವನಾತ್ಮಕ ಸಂಬಂಧವಿದೆ ಎಂದು ಹೇಳಿಕೊಂಡಿದ್ದಾರೆ. ಅದು ಎಲ್ಲರ ಬದುಕನ್ನು ಕಟ್ಟಿಕೊಟ್ಟಿದೆ ಎಂದು ವಿವರಿಸಿದ್ದಾರೆ.

  • ನಟ ಚೇತನ್ ಗಡಿಪಾರು? : ಹೋರಾಟಗಳೇ ನಟನಿಗೆ ಮುಳುವಾಗುತ್ತಾ..?

    ನಟ ಚೇತನ್ ಗಡಿಪಾರು? : ಹೋರಾಟಗಳೇ ನಟನಿಗೆ ಮುಳುವಾಗುತ್ತಾ..?

    ಸಾಮಾಜಿಕ ಹೋರಾಟಗಾರ, ನಟ ಚೇತನ್ ಅವರನ್ನು ಭಾರತದಿಂದ ಗಡಿಪಾರು ಮಾಡುವಂತಹ ವರದಿ ಸಿದ್ಧವಾಗಿದೆ ಎಂದು ಈ ಹಿಂದೆ ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಯನ್ನು ಬ್ರೇಕ್ ಮಾಡಿತ್ತು. ಈಗ ಆ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಚೇತನ್ ಸಮುದಾಯಗಳ ನಡುವೆ ಸಾಮರಸ್ಯ ಕದಡುತ್ತಿದ್ದಾರೆ ಎಂದು ಪೊಲೀಸ್ ಇಲಾಖೆಯು ಸರಕಾರಕ್ಕೆ ವರದಿ ನೀಡಿದೆ. ಕರ್ನಾಟಕ ಸರಕಾರವು ಸಿದ್ಧಪಡಿಸಿದ ವರದಿಯನ್ನು, ಕೇಂದ್ರಕ್ಕೆ ಕಳುಹಿಸಲಿ ಹೊರಟಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಕಂಗನಾಳನ್ನು ಹೀರೋಯಿನ್ ಮಾಡಿದ್ದು ಆ ಜ್ಯೋತಿಷಿ: ಅಸಲಿ ಸತ್ಯ ಬಾಯ್ಬಿಟ್ಟ ನಟ ಪ್ರಭಾಸ್

    ಸಾಗರೋತ್ತರ ಭಾರತೀಯ ನಾಗರಿಕ ಪತ್ರ (ಓಸಿಎ) ನಿಯಮಗಳನ್ನು ಚೇತನ್ ಉಲ್ಲಂಘನೆ ಮಾಡಿದ್ದಾರೆ ಎಂದು ಪೊಲೀಸ್ ಇಲಾಖೆಯು ಸರಕಾರಕ್ಕೆ ವರದಿ ಸಲ್ಲಿಸಿತ್ತು. ಈಗದು ಕೇಂದ್ರ ಸರಕಾರದ ವಿದೇಶಾಂಗ  ಇಲಾಖೆಗೆ ರವಾನೆ ಆಗಲಿದೆಯಂತೆ.  ಇದನ್ನೂ ಓದಿ: ಎಂಟು ವರ್ಷಗಳ ನಂತರ ಒಂದಾದ ನೀನಾಸಂ ಸತೀಶ್ ಮತ್ತು ಸಿಂಧು

    ಓಸಿಎ ನಿಯಮದ ಪ್ರಕಾರ ಸಾಗರೋತ್ತರ ನಾಗರಿಕರು ಸಾರ್ವಜನಿಕ ಪ್ರತಿಭಟನೆ, ಸರಕಾರದ ವಿರುದ್ಧ ಚಟುವಟಿಕೆ ಮ್ತು ರಾಜಕೀಯ ಚಟುವಟಿಕೆಗಳಲ್ಲೂ ಭಾಗಿಯಾಗುವಂತಿಲ್ಲ. ಚೇತನ್ ಭಾರತಿಯ ಪ್ರಜೆಯಲ್ಲ. ಅಮೆರಿಕದ ಪೌರತ್ವ ಹೊಂದಿದ್ದಾರೆ. ಹೀಗಾಗಿ ಓಸಿಎ ನಿಯಮವನ್ನು ಚೇತನ್ ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎನ್ನುತ್ತಿದೆಯಂತೆ ಪೊಲೀಸ್ ಇಲಾಖೆ ಕೊಟ್ಟ ವರದಿ. ಇದನ್ನೂ ಓದಿ: ಉಪೇಂದ್ರ ಹೊಸ ಸಿನಿಮಾ ಮಾಡಲು ಸ್ಟಾರ್ ನಟಿ ನಯನತಾರಾ ಕಾರಣ : ಏನಿದು ಅಸಲಿ ಗುಟ್ಟು?

    ಈ ಹಿಂದೆ ಚೇತನ್ ಒಂದು ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂದು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಲ್ಲದೇ, ಚೇತನ್ ಸರಕಾರದ ವಿರುದ್ಧ ಸಾಕಷ್ಟು ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲವನ್ನೂ ದಾಖಲೆ ಸಮೇತ ವರದಿ ಸಿದ್ಧವಾಗಿದೆಯಂತೆ. ಇದನ್ನೂ ಓದಿ: ಸಮಂತಾ ಯಾಕಿಂಗ್ ಆದೆ? ಗರಂ ಆದ ಅಭಿಮಾನಿಗಳು

    ಈ ಕುರಿತು ಮೊನ್ನೆಯೇ ಮಾಧ್ಯಮಗಳಿಗೆ ಸ್ಪಷ್ಟನೆ ಕೊಟ್ಟಿರುವ ಚೇತನ್, “ಈ ವರದಿ, ಗಡಿಪಾರಿನ ವಿಷಯವೇ ಅವರಿಗೆ ಗೊತ್ತಿಲ್ಲವಂತೆ.

  • ಕಾಂಗ್ರೆಸ್ ಅಧಿಕಾರದಲ್ಲಿ ಇರದಿದ್ದಾಗ ಬೆಂಕಿ ಹಚ್ಚೋ ಕೆಲಸ ಮಾಡುತ್ತೆ: ನಳಿನ್

    ಕಾಂಗ್ರೆಸ್ ಅಧಿಕಾರದಲ್ಲಿ ಇರದಿದ್ದಾಗ ಬೆಂಕಿ ಹಚ್ಚೋ ಕೆಲಸ ಮಾಡುತ್ತೆ: ನಳಿನ್

    ಹಾವೇರಿ: ಕಾಂಗ್ರೆಸ್ ಅಧಿಕಾರದಲ್ಲಿ ಇರದಿದ್ದಾಗ ಬೆಂಕಿ ಹಚ್ಚುವ ಕೆಲಸ ಮಾಡುತ್ತೆ. ಈ ಹಿಂದೆಯೂ ಮಾಡಿದೆ, ಈಗಲೂ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದರು. ಇದನ್ನೂ ಓದಿ: ಮಾಜಿ ಸಿಎಂ ಆಗಿ ಗೌರವಯುತವಾಗಿ ನಡೆದುಕೊಳ್ಳುವಂತೆ ಸಿದ್ದುಗೆ ನಳಿನ್ ಸಲಹೆ

    ನಗರದಲ್ಲಿ ಮಾತನಾಡಿದ ನಳಿನ್ ಕುಮಾರ್, ದಿವಂಗತ ಸುರೇಶ್ ಅಂಗಡಿ ಮತ್ತು ನಾನು ಆತ್ಮೀಯರು. ಅವರು ಏನೇ ಇದ್ದರೂ ನನಗೆ ಹೇಳುತ್ತಿದ್ದರು. ಸಿಎಂ ಬದಲಾವಣೆ ವ್ಯವಸ್ಥೆ ಇಲ್ಲವೇ ಇಲ್ಲ. ಈ ಬಗ್ಗೆ ಎಲ್ಲಿಯೂ ಚರ್ಚೆಗಳು ನಡೆದಿಲ್ಲ. ಹೀಗಾಗಿ ಸಿಎಂ ಬದಲಾವಣೆ ಇಲ್ಲ. ಉಳಿದ ಮೂರು ವರ್ಷದ ಅವಧಿಯಲ್ಲಿ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಇನ್ನೂ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಸೂಕ್ತ ಕಾಲಘಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ರೈತರು ಸೋಮವಾರ ಕರ್ನಾಟಕ ಬಂದ್ ಮಾಡಿದ್ದರು. ಹೀಗಾಗಿ ಕಾಂಗ್ರೆಸ್ ನಿನ್ನೆ ರೈತರ ಪರವಾಗಿ ಹೋರಾಟ ಮಾಡಿತ್ತು. ಆದರೆ ನಿನ್ನೆಯ ಹೋರಾಟದ ಮೂಲಕ ಕಾಂಗ್ರೆಸ್ ವಿಫಲವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇರದಿದ್ದಾಗ ಬೆಂಕಿ ಹಚ್ಚುವ ಕೆಲಸ ಮಾಡುತ್ತೆ. ಈ ಹಿಂದೆಯೂ ಮಾಡಿದೆ, ಈಗಲೂ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದರು.

    ರೈತಪರವಾದ ಮಸೂದೆಗಳ ವಿರುದ್ಧ ಕಾಂಗ್ರೆಸ್ ರೈತರನ್ನ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಈ ಮೂಲಕ ಕಾಂಗ್ರೆಸ್ ಹೀನ ರಾಜಕಾರಣ ಮಾಡುತ್ತಿದೆ. ಈಗ ಜಾರಿಗೆ ತಂದಿರುವ ಮಸೂದೆಯಿಂದ ಬಿಜೆಪಿಗೆ ಲಾಭ ಆಗುತ್ತೆ ಅಂತ ಕಾಂಗ್ರೆಸ್ ರೈತರನ್ನ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ದಲ್ಲಾಳಿಗಳ ಪರವಾಗಿ ಬ್ಯಾಟಿಂಗ್ ಮಾಡುತ್ತಿದೆ ಎಂದರು.