Tag: stroke

  • 5 ಬಾರಿ ಮರುಜನ್ಮ ಪಡೆದಿದ್ದೇನೆ, ನನ್ನ ಜೀವನದ ಬಗ್ಗೆ ಕನಿಕರದಿಂದ ನೋಡಿ: ಹೆಚ್‌ಡಿಕೆ ರಿಯಾಕ್ಷನ್

    5 ಬಾರಿ ಮರುಜನ್ಮ ಪಡೆದಿದ್ದೇನೆ, ನನ್ನ ಜೀವನದ ಬಗ್ಗೆ ಕನಿಕರದಿಂದ ನೋಡಿ: ಹೆಚ್‌ಡಿಕೆ ರಿಯಾಕ್ಷನ್

    ಬೆಂಗಳೂರು: ನಾನು 5 ಬಾರಿ ಮರುಜನ್ಮ ಪಡೆದಿದ್ದೇನೆ, ಈ ಬಾರಿ ಸ್ವಲ್ಪ ತಡ ಮಾಡಿದ್ದರೂ ಇವತ್ತು ನಿಮ್ಮ ಜೊತೆ ಮಾತನಾಡಲು ಆಗುತ್ತಿರಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಆಘಾತಕಾರಿ ಅನುಭವಗಳನ್ನ ಹಂಚಿಕೊಂಡಿದ್ದಾರೆ.

    ಪಾರ್ಶ್ವವಾಯು (Stroke) ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಚ್.ಡಿ ಕುಮಾರಸ್ವಾಮಿ ಅವರಿಂದು ಡಿಸ್ಚಾರ್ಜ್ ಆಗಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ (Hospital) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಂದೆ-ತಾಯಿ ಅಶೀರ್ವಾದದಿಂದ ನಾನು ಇಲ್ಲಿದ್ದೇನೆ, ನನಗೆ ಪುನರ್ಜನ್ಮ ಬಂದಿದೆ. ದೇವರ ದಯೆಯಿಂದ ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.

    ಅಂದು ರಾತ್ರಿ 2 ಗಂಟೆ ವೇಳೆಗೆ ನನಗೆ ಎಚ್ಚರವಾಯ್ತು, ತಕ್ಷಣ ನನ್ನ ದೇಹದಲ್ಲಿ ಬದಲಾವಣೆ ಕಂಡುಬಂದಿತು, ಧ್ವನಿಯಲ್ಲೂ ಬದಲಾವಣೆ ಕಂಡುಬಂದಿತು. ಕೂಡಲೇ ಡಾ.ಮಂಜುನಾಥ್ ಹಾಗೂ ಡಾ.ಯತೀಶ್ ಅವರಿಗೆ ಕರೆ ಮಾಡಿ, ಬಿಡದಿಯ ತೋಟದಿಂದ ಇಪ್ಪತ್ತೇ ನಿಮಿಷಕ್ಕೆ ಆಸ್ಪತ್ರೆಗೆ ಬಂದೆ ಎಂದು ಆಕ್ಷಣದಲ್ಲಾದ ಕಹಿ ಅನುಭವವನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅತಿಥಿ ಶಿಕ್ಷಕಿ, ವಿದ್ಯಾರ್ಥಿನಿಯರಿಗೆ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕನಿಂದ ಲೈಂಗಿಕ ಕಿರುಕುಳ

    ಮುಂದುವರಿದು.. ನಾನಿಂದು ರಾಜಕೀಯ ಬಿಟ್ಟು ಕೆಲ ಮಾತನ್ನ ಮಾತನಾಡಬೇಕಿದೆ, ನನಗಾದ ಜೀವನ್ಮರಣದ ಹೋರಾಟದ ಬಗ್ಗೆ ಹೇಳಬೇಕಿದೆ. ತುಂಬಾ ಕ್ಲಿಷ್ಟಕರ ಸನ್ನಿವೇಶ ಎದುರಿಸಿದ್ದೇನೆ, ಈ ರೀತಿಯ ಆರೋಗ್ಯ ಸಮಸ್ಯೆಯಾದಾಗ ಯಾರೂ ನಿರ್ಲಕ್ಷ್ಯ ಮಾಡಬಾರದು.. ಗೋಲ್ಡನ್ ಅವರ್‌ನಲ್ಲಿ ನಾವು ಚಿಕಿತ್ಸೆ ಪಡೆಯದೇ ಇದ್ರೇ ಜೀವನ ಪರ್ಯಂತ ಮತ್ತೊಬ್ಬರ ಮೇಲೆ ಅವಲಂಬಿತರಾಗಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.

    ರಾಜ್ಯದ ಸಾವಿರಾರು ಕುಟುಂಬಗಳ ಆಶೀರ್ವಾದ, ಪ್ರಾರ್ಥನೆಯಿಂದ ನಾನು ಮತ್ತೆ ಬಂದಿದ್ದೇನೆ, ವೈದ್ಯರು ನನಗೆ ಎಚ್ಚರಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ದಿನಚರಿ ಬದಲಾಗಲಿದೆ. ನನ್ನ ಜೀವನದ ಬಗ್ಗೆ ಸ್ವಲ್ಪ ಕನಿಕರದಿಂದ ನೀವೆಲ್ಲ ನೋಡಿ. ಮೊದಲ ರೀತಿ ನಿಮಗೆ ಸಿಗುವುದು ಕಷ್ಟವಾಗಬಹುದು. ನೀವು ನನ್ನ ಆರೋಗ್ಯ ಸ್ಥಿತಿ ಅರ್ಥ ಮಾಡಿಕೊಳ್ಳಿ. ನನ್ನ ಜೀವನ ಶೈಲಿ ಬದಲಿಸಿಕೊಳ್ಳಲು ವೈದ್ಯರು ಸೂಚಿಸಿದ್ದಾರೆ, ನನಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ – ಅಭಿಮಾನಿಯಿಂದ ಕುಂಕುಮ ಅಕ್ಷತೆ ಸ್ವೀಕರಿಸಿದ ಮಾಜಿ ಸಿಎಂ

    5 ಬಾರಿ ಮರುಜನ್ಮ ಪಡೆದಿರುವೆ: 5 ಬಾರಿ ನಾನು ಮರುಜನ್ಮ ಪಡೆದಿದ್ದೇನೆ, ಅದಕ್ಕೆ ಕಾರಣ ವೈದ್ಯರು. ನಾನು ಅಂದು ಸ್ವಲ್ಪ ತಡ ಮಾಡಿದ್ರೂ ಈ ರೀತಿ ನಿಮ್ಮ ಜೊತೆ ಮಾತನಾಡಲು ಆಗ್ತಿರಲಿಲ್ಲ. ನಾನು ಬಿಡದಿಯಿಂದ ಬಂದ ಕೂಡಲೇ ವೈದ್ಯ‌ರೆಲ್ಲ ಬಂದಿದ್ರು ಬಂದ ಕೂಡಲೇ ಚಿಕಿತ್ಸೆ ಶುರು ಮಾಡಿದ್ರು. ನನ್ನ ಅದೃಷ್ಟ ಎಲ್ಲಾ ವೈದ್ಯರು ಆಸ್ಪತ್ರೆಗೆ ಬರುವಂತಾಯ್ತು, ಮೂರ್ನಾಲ್ಕು ತಿಂಗಳು ಹಾಸಿಗೆ ಹಿಡಿಯಬೇಕಾದವನನ್ನ ಒಂದು ಗಂಟೆಯಲ್ಲೇ ಮೊದಲಿನ ಸ್ಥಿತಿಗೆ ಬರುವಂತೆ ಮಾಡಿದರು ಎಂದು ತಿಳಿಸಿದ್ದಾರೆ.

    ಇದು ನನಗೆ 2ನೇ ಬಾರಿ ಪಾರ್ಶ್ವವಾಯು ಆಗಿರೋದು. ಈ ಹಿಂದೆ ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಒಂದು ಸುದ್ದಿ ನೋಡ್ತಾ ಕುಳಿತಿದ್ದೆ. ಆಗ ನಾನು ಮಾನಸಿಕ ಆಘಾತಕ್ಕೆ ಒಳಗಾಗಿದ್ದೆ. ಆಗ ಮೊದಲ ಬಾರಿ ಸ್ಟ್ರೋಕ್ ಆಗಿತ್ತು, ಇದು 2ನೇ ಬಾರಿ. ನಾನು ಬೆಳಗ್ಗೆ ಹೋದ್ರೆ ಆಯ್ತು ಅಂತಾ ನಿರ್ಲಕ್ಷ್ಯ ಮಾಡಿದ್ದರೆ ಲೈಫ್‌ಟೈಂ ಹಾಸಿಗೆ ಹಿಡಿಯುತ್ತಿದ್ದೆ ಎಂದು ಕಹಿ ಅನುಭವ ಹಂಚಿಕೊಂಡಿದ್ದಾರೆ.

    ನಮ್ಮ ರಾಜ್ಯದಲ್ಲಿ ಪರಿಣತ ವೈದ್ಯರಿದ್ದಾರೆ, ಜೀವದ ಮುಂದೆ ಹಣ ಮುಖ್ಯವಲ್ಲ. ಯಾವುದೇ ಕಾರಣಕ್ಕೂ ತಡ ಮಾಡದೇ ಈ ರೀತಿ ಸಮಸ್ಯೆಯಾದಾಗ ಆಸ್ಪತ್ರೆಗೆ ಹೋಗಿ ಎಂದು ಸಲಹೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಂಬೈನ ಎಲ್ಫಿನ್ ಸ್ಟೋನ್ ರೈಲು ನಿಲ್ದಾಣದ ಕಾಲ್ತುಳಿತ ದುರಂತ-ವಿಡಿಯೋ ನೋಡಿ

    ಮುಂಬೈನ ಎಲ್ಫಿನ್ ಸ್ಟೋನ್ ರೈಲು ನಿಲ್ದಾಣದ ಕಾಲ್ತುಳಿತ ದುರಂತ-ವಿಡಿಯೋ ನೋಡಿ

    ಮುಂಬೈ: ಮುಂಬೈನ ಎಲ್ಫಿನ್ ಸ್ಟೋನ್ ರೈಲು ನಿಲ್ದಾಣದ ಪಾದಚಾರಿಗಳ ಸಂಚಾರ ಮಾರ್ಗ ಸೇತುವೆಯಲ್ಲಿ ಇಂದು ಬೆಳಗ್ಗೆ ಕಾಲ್ತುಳಿತ ಸಂಭವಿಸಿದೆ. ದುರಂತದಲ್ಲಿ 22 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕಾಲ್ತುಳಿತ ದೃಶ್ಯವನ್ನು ರೈಲ್ವೇ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಸೆರೆಹಿಡಿದಿದ್ದು ವಿಡಿಯೋ ವೈರಲ್ ಆಗಿದೆ.

    ಇಂದು ಬೆಳಗ್ಗೆ ಎಲ್ಫಿನ್ ಸ್ಟೋನ್ ರೈಲು ನಿಲ್ದಾಣದಲ್ಲಿ ಜನರು ಕ್ಕಿಕ್ಕಿರಿದು ನಿಂತಿದ್ದರು. ಮಳೆ ಜೋರಾದ ಹಿನ್ನೆಲೆಯಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಸೇತುವೆಯತ್ತ ಧಾವಿಸಿದ್ದರಿಂದ ಈ ದುರಂತವಾಗಿದೆ. ದುರಂತದಲ್ಲಿ 22 ಮಂದಿ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿತ್ತು. ಅಲ್ಲದೇ ಕಾಲ್ತುಳಿತದ ದೃಶ್ಯಗಳು ಅಲ್ಲಿದ್ದ ಕೆಲವರು ಸೆರೆ ಹಿಡಿದಿದ್ದು ಕಾಲ್ತುಳಿತದ ವಿಡಿಯೋದಲ್ಲಿ ಸೇತುವೆಯಲ್ಲಿದ್ದ ಜನರು ಕಾಲು ಕೆಳಗೆ ಸಿಕ್ಕಿ ಒದ್ದಾಡಿ ತಮ್ಮ ಪ್ರಾಣ ಉಳಿಸುವಂತೆ ಕೂಗುತ್ತಿರುವುದು ಮೊಬೈಲ್‍ನಲ್ಲಿ ಸೆರೆಯಾಗಿವೆ.

     ನೂಕು ನುಗ್ಗಲು ಆದ ಪರಿಣಾಮವಾಗಿ ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ತಮ್ಮ ಪ್ರಾಣ ಉಳಿಸಿಕೊಳ್ಳಲು ಬಿದ್ದವರ ಮೇಲೆ ಓಡಾಡಿದ್ದಾರೆ. ಅಲ್ಲದೇ ಸೇತುವೆ ಕಂಬಿ ಹಿಡಿದು ನೇತಾಡಿ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿವೆ. ಸದ್ಯ ಕಾಲ್ತುಳಿತಕ್ಕೆ ಒಳಗಾಗಿದ್ದವರ ಪೈಕಿ 22 ಜನ ಮೃತಪಟ್ಟಿದ್ದು ತೀವ್ರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಎರಡು ಫ್ಲಾಟ್ ಫಾರಂ ಹೊಂದಿಕೊಂಡಿರುವ ಸೇತುವೆಗೆ ಜನ ನುಗ್ಗಿದ್ದಾರೆ. ತೀವ್ರ ನೂಕು ನುಗ್ಗಲು ಆದ ಕಾರಣ ಒಬ್ಬರ ಮೇಲೆ ಒಬ್ಬರು ಬಿದ್ದರು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಭಾರೀ ಸಂಖ್ಯೆಯಲ್ಲಿ ಜನ ಸೇತುವೆ ಮೇಲೆ ಇದ್ದ ಕಾರಣ ಈ ದುರಂತ ಸಂಭವಿಸಿದೆ.

  • ವ್ಯಕ್ತಿಯ ಪಾರ್ಶ್ವವಾಯು ನಿವಾರಣೆಗಾಗಿ 10 ವರ್ಷದ ಬಾಲಕಿಯನ್ನು ಬಲಿ ಕೊಟ್ರು!

    ವ್ಯಕ್ತಿಯ ಪಾರ್ಶ್ವವಾಯು ನಿವಾರಣೆಗಾಗಿ 10 ವರ್ಷದ ಬಾಲಕಿಯನ್ನು ಬಲಿ ಕೊಟ್ರು!

    ರಾಮನಗರ: ಪಾರ್ಶ್ವವಾಯು ರೋಗ ನಿವಾರಣೆಗಾಗಿ ಮುದ್ದಾದ ಬಾಲಕಿಯನ್ನು ಕೊಲೆ ಮಾಡಿರುವ ಆರೊಪಿಗಳನ್ನು ಬಂಧಿಸುವಲ್ಲಿ ಮಾಗಡಿ ಪೊಲೀಸರು ಯಶ್ವಸಿಯಾಗಿದ್ದಾರೆ.

    10 ವರ್ಷ ವಯಸ್ಸಿನ ಆಯೇಶಾ ವಾಮಾಚಾರಕ್ಕೆ ಬಲಿಯಾದ ಮಗು. ಮಾಗಡಿ ಪಟ್ಟಣದ ಹೊಸ ಮಸೀದಿ ಮೊಹಲ್ಲಾದ ನಿವಾಸಿಯಾದ ಮಹಮದ್ ನೂರುಲ್ಲಾ ಹಾಗು ಜಮೀಲಾ ದಂಪತಿಯ ಪುತ್ರಿ ಆಯೇಶಾ ಮಾರ್ಚ್ 1 ರಂದು ಕಾಣೆಯಾಗಿದ್ದಳು. ಕಾಣೆಯಾದ ಎರಡು ದಿನಗಳ ನಂತರ ಮಾರ್ಚ್ 3, ಶುಕ್ರವಾರದಂದು ಮಾಗಡಿ ಪಟ್ಟಣದ ಕಲ್ಯಾಗೇಟ್ ಸಮೀಪದ ಹೊಸಳ್ಳಿ ರಸ್ತೆಯ ದರ್ಗಾ ಬಳಿ ಆಯೇಶಾಳ ಶವ ಪತ್ತೆಯಾಗಿತ್ತು.

    ಪ್ರಕರಣದ ಬೆನ್ನತ್ತಿದ ಮಾಗಡಿ ಪೊಲೀಸರು ಪಟ್ಟಣದ ಮಹಮದ್ ವಾಸೀಲ್, ರಾಶಿದುನ್ನಿಸ್ಸಾ ಹಾಗೂ ನಸೀಂ ತಾಜ್ ಜೊತೆಗೆ ಓರ್ವ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ. ಮಹಮದ್ ವಾಸೀಲ್ ಮೃತ ಆಯೇಶಾಳ ಸೋದರ ಸಂಬಂಧಿ. ವಾಸೀಲ್ ಸಹೋದರ ಮಹಮದ್ ರಫೀ ಎಂಬವರು ಪಾರ್ಶ್ವವಾಯುವಿಗೆ ಒಳಗಾಗಿದ್ರು. 40 ದಿನಗಳಲ್ಲಿ ವಾಮಾಚಾರ ನಡೆಸಿದ್ರೆ ಸಹೋದರ ಗುಣಮುಖವಾಗುತ್ತಾರೆಂದು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

    ವಾಮಾಚಾರಕ್ಕೂ ಮೊದಲು ಬಾಲಕಿಯನ್ನು ವಶೀಕರಣಗೊಳಿಸಿ ಬಾಯಿಗೆ ಬಟ್ಟೆ ತುರುಕಿ ಕೊಲೆ ಮಾಡಲಾಗಿತ್ತು. ನಂತರ ಬಾಲಕಿಯ ದೇಹವನ್ನು ಚೀಲದಲ್ಲಿ ತುಂಬಿ ಕಸದ ರಾಶಿಯಲ್ಲಿ ಎಸೆದು ಹೋಗಿದ್ದರು. ಈ ಸಂಬಂಧ ಪೊಲೀಸರು ಈಗ ನಾಲ್ವರನ್ನು ಬಂಧಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ.