Tag: Strife

  • ಇಬ್ಬರು ಪತ್ನಿಯರ ನಡುವೆ ಕಲಹ ಓರ್ವಳ ಕೊಲೆಯಲ್ಲಿ ಅಂತ್ಯ

    ಇಬ್ಬರು ಪತ್ನಿಯರ ನಡುವೆ ಕಲಹ ಓರ್ವಳ ಕೊಲೆಯಲ್ಲಿ ಅಂತ್ಯ

    ಮಡಿಕೇರಿ: ಓರ್ವ ಇಬ್ಬರನ್ನು ಮದುವೆಯಾಗಿ ನಾಲ್ಕು ವರ್ಷಗಳ ಕಾಲ ಒಂದೇ ಮನೆಯಲ್ಲಿ ವಾಸವಾಗಿದ್ದು, ಇಬ್ಬರು ಪತ್ನಿಯರ ನಡುವೆ ಕಲಹ ಏರ್ಪಟ್ಟು ಮೊದಲನೆಯ ಪತ್ನಿ ಎರಡನೆಯ ಪತ್ನಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಕೊಡಗಿನಲ್ಲಿ ನಡೆದಿದೆ.

    ವಿರಾಜಪೇಟೆ ತಾಲೂಕಿನ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅರೆಕಾಡು ಗ್ರಾಮದ ಕಾಫಿ ತೋಟದಲ್ಲಿ ಶನಿವಾರ ಸಂಜೆ ನಡೆದಿದ್ದು, ಮೂಲತಃ ಜಾರ್ಖಂಡ್ ರಾಜ್ಯದ ದಯಾನಂದ್‍ನ ಮೊದಲನೆಯ ಪತ್ನಿ ಆಶಿಕಾ ಗುಪ್ತ (26) ಎಂಬಾಕೆ ಎರಡನೆಯ ಪತ್ನಿ ವಶಿಕಾ ದೇವಿ (27) ಯನ್ನು ಕತ್ತಿಯಿಂದ ಕುತ್ತಿಗೆ ಕಡಿದು ಕೊಲೆ ಮಾಡಿ ಪರಾರಿಯಾಗಿದ್ದಾಳೆ.

    ದಯಾನಂದ್ ಕಳೆದ 7 ವರ್ಷಗಳ ಹಿಂದೆ ಆಶಿಕಾ ಗುಪ್ತಳನ್ನು ಮದುವೆಯಾಗಿದ್ದು, ಬಳಿಕ ಒಂದು ವರ್ಷದ ನಂತರ ವಶಿಕಾ ದೇವಿಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಮೊದಲನೆಯ ಪತ್ನಿಗೆ ಒಂದು ಮಗು ಹಾಗೂ ಎರಡನೆಯ ಪತ್ನಿಗೆ ಇಬ್ಬರು ಮಕ್ಕಳಿದ್ದು, ಇಬ್ಬರು ಹೆಂಡತಿ ಮೂರು ಮಕ್ಕಳೊಂದಿಗೆ ಸಿದ್ದಾಪುರ ಸಮೀಪದ ಬಳಂಜಿಗೆರೆ ಖಾಸಗಿ ತೋಟದ ಲೈನ್ ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸವಾಗಿದ್ದರು.

    ಮೂವರು ಜೊತೆಯಲ್ಲಿ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಕೆಲ ದಿನಗಳಿಂದ ಇಬ್ಬರು ಹೆಂಡತಿಯರ ನಡುವೆ ವೈಮನಸ್ಸು ಉಂಟಾಗಿ ಸಣ್ಣ ಪುಟ್ಟ ಮಾತಿನ ಕಲಹಗಳು ಏರ್ಪಟ್ಟಿತು ಎನ್ನಲಾಗಿದೆ. ಶನಿವಾರ ಪತಿಯೊಂದಿಗೆ ಇಬ್ಬರು ತೋಟದ ಕೆಲಸಕ್ಕೆ ತೆರಳಿ ಲೈನ್ ಮನೆಗೆ ಹಿಂತಿರುಗಿದಾಗ ಇಬ್ಬರ ನಡುವೆ ಮಾತಿನ ಚಕಮಕಿಯಾಗಿ ಕಲಹ ಏರ್ಪಟ್ಟು ಆಶಿಕಾ ಗುಪ್ತ ವಶಿಕಾ ದೇವಿಯ ಕುತ್ತಿಗೆಗೆ ಕತ್ತಿಯಿಂದ ಕಡಿದು ಪರಾರಿಯಾಗಿದ್ದಾಳೆ. ತೀವ್ರ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾಳೆ.

    ದಯಾನಂದ್ ತೋಟದಿಂದ ಕೆಲಸ ಮುಗಿಸಿ ಮನೆಗೆ ಬಂದು ನೋಡಿದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ಮೃತದೇಹವನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸಿದ್ದಾಪುರ ಠಾಣಾಧಿಕಾರಿ ಬೋಜಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಹೊಂದಾಣಿಕೆ ಕೊರತೆ – ಮದುವೆಯಾದ 6 ತಿಂಗಳಲ್ಲಿ ಬಾವಿಗೆ ಹಾರಿದ ನವದಂಪತಿ

    ಹೊಂದಾಣಿಕೆ ಕೊರತೆ – ಮದುವೆಯಾದ 6 ತಿಂಗಳಲ್ಲಿ ಬಾವಿಗೆ ಹಾರಿದ ನವದಂಪತಿ

    ಬೀದರ್: ಮದುವೆಯಾದ 6 ತಿಂಗಳಲ್ಲಿಯೇ ನವ ದಂಪತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತಡೋಳಾ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

    ಗ್ರಾಮದ ಅಂಜಲಿ (25) ಹಾಗೂ ಅವರ ಪತಿ ಉಮೇಶ ಮಡಿವಾಳ (28) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಕಳೆದ ಮೇ ತಿಂಗಳಲ್ಲಿ ತಾಲೂಕಿನ ಮಂಠಾಳ ಗ್ರಾಮದ ಅಂಜಲಿಯನ್ನು ತಡೋಳ ಗ್ರಾಮದ ಉಮೇಶನಿಗೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯಾದಾಗಿನಿಂದ ದಂಪತಿ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ಆಗಾಗ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.

    ಗುರುವಾರ ತಡ ರಾತ್ರಿ ಇಬ್ಬರ ನಡುವೆ ಮತ್ತೆ ಜಗಳ ಆರಂಭವಾಗಿದ್ದು, ಇಬ್ಬರು ಕೂಡಿಯೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ತಿಳಿದು ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯರ ಸಹಾಯದೊಂದಿಗೆ ಬಾವಿಯಿಂದ ಶವಗಳನ್ನು ಮೇಲೆತ್ತಿದ್ದಾರೆ. ಸ್ಥಳಕ್ಕೆ ಮಂಠಾಳ ಸಿಪಿಐ ಮಹೇಶಗೌಡ ಪಾಟೀಲ, ಪಿಎಸ್‍ಐ ಅರುಣಕುಮಾರ ಆಗಮಿಸಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಜಮೀನಿಗಾಗಿ ದಾಯಾದಿಗಳ ಕಲಹ – ಕೊಡಲಿಯಿಂದ ಕೊಚ್ಚಿ ಮೂವರ ಬರ್ಬರ ಕೊಲೆ

    ಜಮೀನಿಗಾಗಿ ದಾಯಾದಿಗಳ ಕಲಹ – ಕೊಡಲಿಯಿಂದ ಕೊಚ್ಚಿ ಮೂವರ ಬರ್ಬರ ಕೊಲೆ

    ಕಲಬುರಗಿ: ಜಮೀನಿಗಾಗಿ ದಾಯಾದಿಗಳ ನಡುವೆ ನಡೆದ ಕಲಹ ಮೂವರ ಬರ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಜಿಲ್ಲೆಯ ಸೇಡಂ ತಾಲೂಕಿನ ಮೆದಕ್ ಗ್ರಾಮದ ಮಲ್ಕಪ್ಪ ಹಾಗೂ ಆತನ ಇಬ್ಬರು ಮಕ್ಕಳಾದ ಚಿನ್ನಯ್ಯ ಮತ್ತು ಶಂಕ್ರಪ್ಪ ಎಂಬುವವರನ್ನು ಕೊಡಲಿಯಿಂದ ಹೊಡೆದು ಅವರ ಜಮೀನಿನಲ್ಲೇ ಕೊಲೆ ಮಾಡಲಾಗಿದೆ.

    ಮಲ್ಕಪ್ಪ ಸಹೋದರರಾದ ಆಶಪ್ಪ ಹಾಗೂ ಶರಣಪ್ಪ ಅವರ ಮಧ್ಯೆ ಜಮೀನಿನ ವಿಚಾರದಲ್ಲಿ ಜಗಳ ನಡೆಯುತಿತ್ತು. ಅದ್ದರಿಂದ ಆಶಪ್ಪ ಹಾಗು ಶರಣಪ್ಪ ತಮ್ಮ ಕುಟುಂದವರ ಜೊತೆ ಸೇರಿ ಈ ಕೃತ್ಯ ನಡೆಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆಯ ನಂತರ ಆರೋಪಿಗಳು ಪರಾರಿಯಾಗಿದ್ದಾರೆ.

    ಈ ಸಂಬಂಧ ಮುಧೋಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.