Tag: stress

  • ಆಧುನಿಕ ಆರೋಗ್ಯ ಸಮಸ್ಯೆಗಳಿಗೆ ಯೋಗ ಮದ್ದು: ದಿನೇಶ್ ಗುಂಡೂರಾವ್

    ಆಧುನಿಕ ಆರೋಗ್ಯ ಸಮಸ್ಯೆಗಳಿಗೆ ಯೋಗ ಮದ್ದು: ದಿನೇಶ್ ಗುಂಡೂರಾವ್

    ಬೆಂಗಳೂರು: ಆಧುನಿಕ ಜೀವನ ಶೈಲಿಯ ಒತ್ತಡಗಳ (Stress) ಪರಿಹಾರಕ್ಕೆ ಯೋಗ ಸಹಕಾರಿಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.

    ವಿಧಾನಸೌಧದ (Vidhana Soudha) ಮುಂಭಾಗದಲ್ಲಿ ಬುಧವಾರ ನಡೆದ ಯೋಗ ದಿನಾಚರಣೆ (International Yoga Day) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗ ಪ್ರಪಂಚಕ್ಕೆ ಭಾರತ ಕೊಟ್ಟ ಕೊಡುಗೆಯಾಗಿದೆ. ವಿಶ್ವದಾದ್ಯಂತ ಯೋಗಕ್ಕೆ ಮನ್ನಣೆ ಸಿಗುತ್ತಿದೆ. ಇದರ ಅಭ್ಯಾಸದಿಂದ ದೈಹಿಕ ಮಾನಸಿಕ ಆರೋಗ್ಯ ಸುಧಾರಣೆಯೊಂದಿಗೆ ಉತ್ಸಾಹ ಮೂಡಲಿದೆ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಪತ್ನಿಗೆ ಅನಾರೋಗ್ಯ ಆಸ್ಪತ್ರೆಗೆ ದಾಖಲು

    ಇಂದಿನ ಜೀವನ ಶೈಲಿಯಿಂದ ಮಧುಮೇಹ, ಬಿಪಿ, ಕ್ಯಾನ್ಸರ್, ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿವೆ. ಯೋಗವನ್ನು ರೂಢಿಸಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ನಮ್ಮ ಸರ್ಕಾರದಿಂದ ಯೋಗಕ್ಕೆ ಪ್ರೋತ್ಸಾಹ ದೊರೆಯಲಿದೆ ಎಂದಿದ್ದಾರೆ.

    ಶಾಲೆಗಳು ಸೇರಿದಂತೆ ಎಲ್ಲಾ ಕಡೆ ಯೋಗಭ್ಯಾಸಕ್ಕೆ ಪ್ರೋತ್ಸಾಹವನ್ನು ಸರ್ಕಾರದ ವತಿಯಿಂದಲೂ ನೀಡಲಾಗುತ್ತದೆ. ಯುವ ಜನರು ಯೋಗದ ಮಹತ್ವವನ್ನು ಅರಿತು ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕು. ಇದರಿಂದಾಗಿ ಹಿರಿಯರು ನಮಗೆ ನೀಡಿರುವ ಕೊಡುಗೆ ಇನ್ನೂ ಬೆಳೆಯಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನೂ ಸಹ ಮೋದಿಯ ಅಭಿಮಾನಿಯಾಗಿದ್ದೇನೆ: ಎಲಾನ್ ಮಸ್ಕ್

  • ಕೆಲಸದ ಒತ್ತಡ – ಬ್ಯಾಂಕ್‍ನಲ್ಲಿಯೇ ನೇಣುಹಾಕಿಕೊಂಡ ಮ್ಯಾನೇಜರ್

    ಕೆಲಸದ ಒತ್ತಡ – ಬ್ಯಾಂಕ್‍ನಲ್ಲಿಯೇ ನೇಣುಹಾಕಿಕೊಂಡ ಮ್ಯಾನೇಜರ್

    ತಿರುವನಂತಪುರಂ: ಕೆಲಸ ಒತ್ತಡದಿಂದ ಮನನೊಂದ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿರುವ ಮ್ಯಾನೇಜರ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಕೆ. ಸ್ವಪ್ನಾ(38) ಮೃತ ಮಹಿಳೆಯಾಗಿದ್ದಾಳೆ. ಸ್ವಪ್ನಾ ಕಣ್ಣೂರು ಜಿಲ್ಲೆಯ ಕುಥುಪರಂಬರದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯೊಂದರ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲಸ ಒತ್ತಡದಿಂದ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ನನಗೆ ಕೆಲಸದ ಒತ್ತಡ ತಡೆಯಲಾಗುತ್ತಿಲ್ಲ. ಆದ್ದರಿಂದ ಹೀಗೆ ಮಾಡಿಕೊಂಡಿದ್ದೇನೆ ಎಂದು ಸ್ವಪ್ನ ಮರಣ ಪತ್ರದಲ್ಲಿ ಬರೆದಿದ್ದಾರೆ. ಕೆನರಾ ಬ್ಯಾಂಕ್‍ನ ಥೊಕ್ಕಿಲಂಗಡಿ ಶಾಖೆಯಲ್ಲಿ ಸ್ವಪ್ನಾ ನೇಣು ಬಿಗಿದುಕೊಂಡಿದ್ದರು. ಈ ವಿಚಾರ ತಿಳಿದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿಪಿದ್ದಾರೆ.

    ಸ್ವಪ್ನಾ ಅವರಿಗೆ ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಈ ಶಾಖೆಗೆ ವರ್ಗಾವಣೆಯಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.

  • ಕೊರೊನಾ ಎಫೆಕ್ಟ್- ಮನೆ ಖಾಲಿ ಮಾಡುವಂತೆ ಡಾಕ್ಟರ್, ನರ್ಸ್‍ಗಳ ಮೇಲೆ ಮಾಲೀಕರ ಒತ್ತಡ

    ಕೊರೊನಾ ಎಫೆಕ್ಟ್- ಮನೆ ಖಾಲಿ ಮಾಡುವಂತೆ ಡಾಕ್ಟರ್, ನರ್ಸ್‍ಗಳ ಮೇಲೆ ಮಾಲೀಕರ ಒತ್ತಡ

    ನವದೆಹಲಿ: ಜನತಾ ಕರ್ಫ್ಯೂ ದಿನದಂದು ಮನೆಗಳ ಬಾಲ್ಕನಿಯಲ್ಲಿ ನಿಂತು ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರಿಗೆ ಕೃತ್ಯಜ್ಞತೆ ಸಲ್ಲಿಸಿದ್ದ ಜನರು, ಈಗ ವೈದ್ಯರು ವಿರುದ್ಧವೇ ಮುಗಿ ಬಿದ್ದಿದ್ದಾರೆ. ಮನೆ ಬಾಡಿಗೆ ನೀಡಿದ್ದ ಮಾಲೀಕರ ಕೂಡಲೇ ಮನೆ ಖಾಲಿ ಮಾಡುವಂತೆ ಒತ್ತಡ ಹಾಕಿದ್ದಾರೆ.

    ನವದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಏಮ್ಸ್ ಆಸ್ಪತ್ರೆ ವೈದ್ಯರು ಮತ್ತು ನರ್ಸ್ ಗಳಿಗೆ ಮನೆ ಖಾಲಿ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ. ಕೊರೊನಾ ವೈರಸ್ ಶಂಕಿತರಿಗೆ ಏಮ್ಸ್ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆ ನೀಡುತ್ತಿರುವ ವೈದ್ಯರ ಮೂಲಕ ಸೋಂಕು ಹರಡುವ ಭೀತಿಯಲ್ಲಿ ಮನೆ ಮಾಲೀಕರಿದ್ದಾರೆ.

    ಪ್ರತಿನಿತ್ಯ ಸೋಂಕಿತರ ಮಧ್ಯೆಯೇ ವೈದ್ಯರು ಸೇವೆ ಸಲ್ಲಿಸುತ್ತಾರೆ. ಇವರು ಮನೆಗಳಿಗೆ ಬಂದಂತ ವೇಳೆ ಇವರ ಮೂಲಕ ಇತರರಿಗೂ ಕೊರೊನಾ ಸೋಂಕು ಹರಡಬಹುದು ಎಂಬುದು ಮನೆ ಮಾಲೀಕರು ಹಾಗೂ ಸ್ಥಳೀಯ ನಿವಾಸಿಗಳ ವಾದವಾಗಿದೆ. ನೆರೆ ಹೊರೆಯವರ ಒತ್ತಡದ ಹಿನ್ನೆಲೆ ವೈದ್ಯರು ಮತ್ತು ನರ್ಸ್ ಗಳ ಮೇಲೆ ಮನೆ ಮಾಲೀಕರ ಒತ್ತಡ ಹಾಕಿದ್ದು, ಮನೆ ಖಾಲಿ ಮಾಡಲು ಸೂಚಿಸಿದ್ದರು. ಇದರಿಂದ ರೋಸಿ ಹೋಗಿದ್ದು ವೈದ್ಯರು ಗೃಹ ಸಚಿವ ಅಮಿತ್ ಶಾ ಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದರು.

    ವೈದ್ಯರು ಪತ್ರಕ್ಕೆ ಸ್ಪಂದಿಸಿರುವ ಗೃಹ ಸಚಿವ ಅಮಿತ್ ಶಾ, ಮನೆ ಮಾಲೀಕರ ವಿರುದ್ಧ ಕ್ರಮಕ್ಕೆ ದೆಹಲಿ ಪೊಲೀಸ್ ಕಮಿಷನರ್ ಗೆ ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ಮನೆ ಖಾಲಿ ಮಾಡುವಂತೆ ವೈದ್ಯರ ಮೇಲೆ ಒತ್ತಡ ಹಾಕಬಾರದು. ಒಂದು ವೇಳೆ ಒತ್ತಡ ಹಾಕಿದ್ದಲ್ಲಿ ಡಾಕ್ಟರ್ ಗಳ ದೂರು ಆಧರಿಸಿ ಮನೆ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಅಮಿತ್ ಶಾ ಸೂಚಿಸಿದ್ದಾರೆ.

  • ಬೆಳಗ್ಗಿನ ಉಪಹಾರ ಆರೋಗ್ಯಕ್ಕೆ ಎಷ್ಟು ಮುಖ್ಯ ಎಂಬುದನ್ನು ಓದಿ

    ಬೆಳಗ್ಗಿನ ಉಪಹಾರ ಆರೋಗ್ಯಕ್ಕೆ ಎಷ್ಟು ಮುಖ್ಯ ಎಂಬುದನ್ನು ಓದಿ

    ಗಿನ ಕಾಲದಲ್ಲಿ ಜನರು ಕೆಲಸದ ಒತ್ತಡದಲ್ಲಿ ಬೆಳಗ್ಗಿನ ಉಪಹಾರ ಸೇವಿಸಲು ಹಿಂದೇಟು ಹಾಕುತ್ತಾರೆ. ಆದರೆ ಬೆಳಗ್ಗೆ ನಾವು ಸೇವಿಸುವ ಆಹಾರ ಆರೋಗ್ಯಕ್ಕೆ ಬಳಹ ಮುಖ್ಯವಾಗುತ್ತದೆ. ಯಾಕೆಂದರೆ ಬೆಳಗ್ಗೆ ತಿಂಡಿ ಮಾಡಿಲ್ಲ ಅಂದರೆ ಮೆಟೋಬಾಲಿಸಂ(ಚಯಾಪಚಯ ಕ್ರಿಯೆ) ಕಡಿಮೆ ಆಗುತ್ತದೆ ಹಾಗೂ ದೇಹದ ತೂಕ ಹೆಚ್ಚಾಗುತ್ತದೆ. ಬೆಳಗ್ಗೆ ತಿಂಡಿ ಸೇವಿಸಿದರೆ ದೇಹಕ್ಕೆ ಶಕ್ತಿ ಸಿಗುತ್ತದೆ ಅಲ್ಲದೆ, ರೋಗಗಳು ಕೂಡ ಬರುವುದಿಲ್ಲ. ಹಾಗಾಗಿ ಬೆಳಗ್ಗಿನ ಉಪಹಾರವನ್ನು ಸೇವಿಸಿದ್ರೆ ಒಳ್ಳೆಯದು.

    ಬೆಳಗ್ಗಿನ ಉಪಹಾರ ಸೇವಿಸಿದರೆ ನೆನಪಿನ ಶಕ್ತಿ ಸುಧಾರಿಸುತ್ತದೆ. ಮೆದುಳಿಗೆ ಮುಖ್ಯವಾಗಿ ಕಾರ್ಬೋಹೈಡ್ರೆಟ್ ಬೇಕಾಗುತ್ತದೆ. ಈ ಕಾರ್ಬೋಹೈಡ್ರೆಟ್ ಬೆಳಗ್ಗಿನ ಉಪಹಾರ ಸೇವಿಸುವುದರಿಂದ ಸಿಗುತ್ತದೆ. ಹಾಗಾಗಿ ಬೆಳಗ್ಗಿನ ಆಹಾರ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಜನರು ಹೇಳುತ್ತಾರೆ. ಬೆಳಗ್ಗಿನ ತಿಂಡಿ ಸೇವಿಸುವುದರಿಂದ ಟೆನ್ಷನ್ ದೂರವಾಗುತ್ತದೆ ಹಾಗೂ ಮನುಷ್ಯನ ಮೂಡ್ ನಲ್ಲೂ ಸುಧಾರಣೆ ಕಾಣುತ್ತದೆ.

    ಇದರಿಂದ ಡಯಾಬಿಟಿಸ್(ಮಧುಮೇಹ)ದ ಭಯ ಇರುವುದಿಲ್ಲ. ನೀವು ಆರೋಗ್ಯಕರ ಉಪಹಾರ ಸೇವನೆ ಮಾಡುವುದರಿಂದ ಡಯಾಬಿಟಿಸ್ ಬರುವುದಿಲ್ಲ. ದಿನಾ ಬೆಳಗ್ಗೆ ಉಪಹಾರ ಸೇವಿಸಿಲ್ಲ ಎಂದರೆ ನಿಮ್ಮ ದೇಹದ ತೂಕ ಹೆಚ್ಚುತ್ತದೆ. ಅಧ್ಯಯನದ ಪ್ರಕಾರ ಬೆಳಗ್ಗಿನ ಟಿಫಿನ್ ಸೇವಿಸಿದರೆ ದೇಹದ ತೂಕ ಹೆಚ್ಚಾಗುವುದಿಲ್ಲ ಎಂಬುದು ತಿಳಿದುಬಂದಿದೆ.

  • ಆಲೂಗೆಡ್ಡೆ ಸಿಪ್ಪೆ ಸುಲಿಯಿರಿ, ಒತ್ತಡ ಕಡಿಮೆ ಮಾಡಿ ಹಾಯಾಗಿ ಇರಿ!

    ಆಲೂಗೆಡ್ಡೆ ಸಿಪ್ಪೆ ಸುಲಿಯಿರಿ, ಒತ್ತಡ ಕಡಿಮೆ ಮಾಡಿ ಹಾಯಾಗಿ ಇರಿ!

    ಲಂಡನ್: ನೀವು ಸಿಕ್ಕಾಪಟ್ಟೆ ಒತ್ತಡದಲ್ಲಿದ್ದೀರಾ? ಒತ್ತಡ ಕಡಿಮೆ ಮಾಡಲು ನಾನಾ ತಂತ್ರ ಮಾಡ್ತಾ ಇದ್ದೀರಾ? ಹಾಗಾದ್ರೆ ನಿಮಗೆ ಇಲ್ಲಿದೆ ಸುಲಭದ ಉಪಾಯ. ಆಲೂಗೆಡ್ಡೆಯ ಸಿಪ್ಪೆಯನ್ನು ಸುಲಿದರೆ ನಿಮ್ಮ ಒತ್ತಡ ಕಡಿಮೆಯಾಗುತ್ತಂತೆ.

    ಹೌದು, ಇಂಗ್ಲೆಂಡಿನ ಲಂಡನ್ ನಗರದಲ್ಲಿರುವ ಪ್ರಸಿದ್ಧ ಅಂಗಡಿಯೊಂದು ಜನರಿಗೆ ಆಲೂಗೆಡ್ಡೆಯ ಸಿಪ್ಪೆಯನ್ನು ಸುಲಿಯುವುದು ಹೇಗೆ ಎನ್ನುವ ಪಾಠವನ್ನು ಹೇಳಿಕೊಡುತ್ತಿದ್ದು, ಸಕತ್ ಕ್ಲಿಕ್ ಆಗಿದ್ದು ವಿದೇಶಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ.

    ಡಬ್ ಆವರ್ ಹೆಸರಿನಲ್ಲಿ ಆಲೂಗೆಡ್ಡೆ ಸಿಪ್ಪೆ ಸುಲಿಯುವ ವಿಶಿಷ್ಟ ಕಾರ್ಯಕ್ರಮವನ್ನು ಅಂಗಡಿಯೊಂದು ಆಯೋಜಿಸಿದೆ. ಜನರಲ್ಲಿ ಒತ್ತಡ ಕಡಿಮೆ ಮಾಡಲು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದಾಗಿ ಅಂಗಡಿ ತಿಳಿಸಿದೆ.

    ಈ ವಿಶೇಷ ಕಾರ್ಯಕ್ರಮದಲ್ಲಿ ಸಿಪ್ಪೆಯನ್ನು ಸುಲಭವಾಗಿ ಸುಲಿಯಲು ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಗುವ ಸಾಧನಗಳನ್ನು ನೀಡಲಾಗುತ್ತಿಲ್ಲ. ಬದಲಾಗಿ ಕಷ್ಟಪಟ್ಟು ಸುಲಿಯಲೆಂದೇ ಜನರಿಗೆ ಇಲ್ಲಿ ಚಾಕು ನೀಡಲಾಗುತ್ತದೆ.

    ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದು, ನಾವು ಹುಟ್ಟಿದ ಬಳಿಕ ಇದೂವರೆಗೂ ಆಲೂಗೆಡ್ಡೆಯ ಸಿಪ್ಪೆಯನ್ನು ಸುಲಿದಿಲ್ಲ. ಈಗ ನನಗೆ ಬಹಳ ಸಂತೋಷವಾಗುತ್ತಿದೆ. ಸಿಪ್ಪೆ ಸುಲಿಯುವುದರಿಂದ ನನಗೆ ಧ್ಯಾನ ಮಾಡಿದಷ್ಟೇ ಅನುಭವ ಆಗಿದೆ ಎಂದು ಹೇಳಿದ್ದಾರೆ.

    ಮತ್ತೊಬ್ಬರು ಪ್ರತಿಕ್ರಿಯಿಸಿ, ಆಲೂಗೆಡ್ಡೆ ಸುಲಿಯವುದು ಎಷ್ಟು ಖುಷಿ ನೀಡಿದೆ ಎಂದರೆ ಈಗ ಇಮೇಲ್ ಚೆಕ್ ಮಾಡುವುದೇ ಮರೆತು ಹೋಗಿದೆ ಎಂದು ತಮಗೆ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.