Tag: street light

  • ತುಮಕೂರು | ಬೀದಿ ದೀಪ ಆರಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿ ಶಿಕ್ಷಕ ಸಾವು

    ತುಮಕೂರು | ಬೀದಿ ದೀಪ ಆರಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿ ಶಿಕ್ಷಕ ಸಾವು

    ತುಮಕೂರು: ಬೀದಿ ದೀಪ (Street Light) ಆರಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿ ಶಿಕ್ಷಕ (Teacher) ಸಾವನ್ನಪ್ಪಿದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.

    ಗುಬ್ಬಿ ತಾಲೂಕಿನ ಬ್ಯಾಡಗೆರೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ನಿಟ್ಟೂರು ಗ್ರಾಮದ ಲೋಕೇಶ್ ರಾವ್ (35) ವಿದ್ಯುತ್ ಸ್ಪರ್ಶಿಸಿ ಸೋಮವಾರ ಮೃತಪಟ್ಟಿದ್ದಾರೆ. ಬೆಳಗ್ಗೆ ಮನೆ ಸಮೀಪದ ಬೀದಿ ದೀಪ ಆರಿಸಲು ಹೋದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: Chamarajanagar | ಕೌಟುಂಬಿಕ ಕಲಹ – 2 ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

    ಬೀದಿ ದೀಪಗಳಿಗೆ ಅಳವಡಿಸಿರುವ ವೈರ್‌ಗೆ ಸ್ವಿಚ್ ಹಾಕುವಂತೆ ಅನೇಕ ಬಾರಿ ಸಂಬಂಧಿಸಿದ ಬೆಸ್ಕಾಂ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ  ತಿಳಿಸಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಸ್ವಿಚ್ ಅಳವಡಿಸುವುದಕ್ಕೆ ಬದಲಾಗಿ ವೈರನ್ನೇ ಒಂದಕ್ಕೊಂದು ಸ್ಪರ್ಶಿಸಿ ಇಟ್ಟಿರುವುದೇ ಅನಾಹುತಕ್ಕೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಾತಿ ಜನಗಣತಿ ಯಾವುದೇ ಸಮಾಜದ ಪರ, ವಿರೋಧ ನಿರ್ಣಯ ಮಾಡೋದಲ್ಲ: ಶಿವಾನಂದ ಪಾಟೀಲ್

    ಮೃತರು ಪತ್ನಿ, ಎರಡು ವರ್ಷದ ಹೆಣ್ಣು ಮಗು ಹಾಗೂ ಒಂದು ತಿಂಗಳ ಮಗುವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ಸಂಜೆ ಸ್ವಗ್ರಾಮದಲ್ಲಿ ನೆರವೇರಿತು. ಇದನ್ನೂ ಓದಿ: ಮೋದಿ ಇನ್ನೊಂದು ವರ್ಷವಷ್ಟೇ ಪ್ರಧಾನಿಯಾಗಿರುತ್ತಾರೆ: ಸಂತೋಷ್ ಲಾಡ್

  • ಇಡೀ ರಾಜ್ಯಕ್ಕೆ ಬೆಳಕು ನೀಡುವ ರಾಯಚೂರಿನಲ್ಲೇ ಬೆಳಕಿಲ್ಲ – ಸಾರ್ವಜನಿಕರಿಂದ ತೀವ್ರ ಆಕ್ರೋಶ

    ಇಡೀ ರಾಜ್ಯಕ್ಕೆ ಬೆಳಕು ನೀಡುವ ರಾಯಚೂರಿನಲ್ಲೇ ಬೆಳಕಿಲ್ಲ – ಸಾರ್ವಜನಿಕರಿಂದ ತೀವ್ರ ಆಕ್ರೋಶ

    -ಬಡಾವಣೆ, ಮುಖ್ಯರಸ್ತೆಗೆ ಹೋದರೂ ಬೀದಿ ದೀಪಗಳಿಲ್ಲ

    ರಾಯಚೂರು: ಇತ್ತೀಚಿಗೆ ಕಲಬುರಗಿಯಲ್ಲಿ (Kalaburagi) ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಯಚೂರು (Raichuru) ನಗರಸಭೆಯನ್ನು ಪಾಲಿಕೆಯಾಗಿ ಸರ್ಕಾರ ಮೇಲ್ದರ್ಜೆಗೆ ಏರಿಸಿದೆ. ನಗರದ ಜನರು ಇದಕ್ಕೆ ಒಂದೆಡೆ ಖುಷಿ ವ್ಯಕ್ತಪಡಿಸಿದರೆ, ಇನ್ನೊಂದೆಡೆ ನಗರಸಭೆಯ ನಿರ್ಲಕ್ಷ್ಯಕ್ಕೆ ನಿತ್ಯ ಹಿಡಿಶಾಪ ಹಾಕುವಂತಾಗಿದೆ. ರಾತ್ರಿಯಾದರೆ ಸಾಕು ಬಡಾವಣೆಗಳಲ್ಲಿ ಜನ ಓಡಾಡಲು ಹೆದರುವ ಪರಸ್ಥಿತಿಯಿದೆ. ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳಿಗೆ ನಗರಸಭೆ ನಿರ್ಲಕ್ಷ್ಯ ಕಾರಣವಾಗುತ್ತಿದೆ.

    ಬಿಸಿಲನಾಡು ರಾಯಚೂರಿನ ಜಿಲ್ಲಾ ಕೇಂದ್ರ ಈಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನಗರದ ಯಾವುದೇ ಬಡಾವಣೆ, ಮುಖ್ಯರಸ್ತೆಗೆ ಹೋದರೂ ಬೀದಿ ದೀಪಗಳಿಲ್ಲ. ಕೇವಲ ಕಂಬಗಳು ಮಾತ್ರ ನಿಂತಿವೆ. ಬೀದಿದೀಪಗಳು ಹಾಳಾಗಿ ಸುಮಾರು ತಿಂಗಳುಗಳೇ ಕಳೆದರೂ ಜಿಲ್ಲಾಡಳಿತ ಹಾಗೂ ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸಂಜೆಯಾದರೆ ಸಾಕು ಜನ ಮನೆಯಿಂದ ಹೊರಬರಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿಗೆ ಫುಲ್‌ ಡಿಮ್ಯಾಂಡ್‌ – 69 ಪ್ರಶಸ್ತಿಗೆ 2,000ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ

    ಮಹಿಳೆಯರಿಗಂತೂ ಸುರಕ್ಷತೆಯೇ ಇಲ್ಲವಾಗಿದೆ. ಕಳೆದ ಕೆಲ ತಿಂಗಳುಗಳಿಂದ ನಗರದಲ್ಲಿ ಕಳ್ಳತನ, ಅಪಹರಣ ಯತ್ನ, ದರೋಡೆಯಂತ ಪ್ರಕರಣಗಳು ನಡೆಯುತ್ತಿದ್ದರೂ ನಗರಸಭೆ ಕಣ್ಮುಚ್ಚಿ ಕುಳಿತಿದೆ. ಇನ್ನೂ ಸಿಸಿ ಕ್ಯಾಮರಾಗಳನ್ನು ಅಲ್ಲಲ್ಲಿ ಅಳವಡಿಸಿದ್ದರೂ ಯಾವುದೇ ಕೆಲಸ ಮಾಡುತ್ತಿಲ್ಲ. ನಗರಸಭೆಯನ್ನು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಿದ್ದರೂ ಜನರಲ್ಲಿ ಖುಷಿ ಕಾಣುತ್ತಿಲ್ಲ. ಜನರನ್ನು ಕಳ್ಳಕಾಕರಿಂದ ರಕ್ಷಿಸಲು, ರಾತ್ರಿ ವೇಳೆ ಸುರಕ್ಷಿತವಾಗಿ ಓಡಾಡಲು ಕೂಡಲೇ ಬೀದಿದೀಪಗಳನ್ನು ಅಳವಡಿಸಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೀದಿದೀಪಗಳ ನಿರ್ವಹಣೆಗಾಗಿ ಫೆಬ್ರವರಿಯಲ್ಲಿ ಒಂದುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿತ್ತು. ಗುತ್ತಿಗೆದಾರರು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆ ಗುತ್ತಿಗೆ ರದ್ದು ಮಾಡಲಾಗಿತ್ತು.

    ಇದಕ್ಕೆ ಸಂಬಂಧಿಸಿದಂತೆ ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಮಾತನಾಡಿ, ಹೊಸ ಟೆಂಡರ್ ಕರೆಯುತ್ತೇವೆ. ಇನ್ನೂ ಎರಡು ಮೂರು ದಿನಗಳಲ್ಲಿ ಹೊಸ ಟೆಂಡರ್ ಕರೆಯುತ್ತಿದ್ದೇವೆ. ಆದಷ್ಟು ಬೇಗ ಬೀದಿದೀಪ ಅಳವಡಿಸುತ್ತೇವೆ ಎಂದು ಹೇಳಿದ್ದಾರೆ

    ಒಟ್ಟಿನಲ್ಲಿ ನಗರಸಭೆಯ ನಿಧಾನಗತಿಯ ಧೋರಣೆ ಜನರಲ್ಲಿ ಅಸುರಕ್ಷಿತೆಯ ಭಾವನೆ ಮೂಡಿಸಿದೆ. ರಾತ್ರಿಯಾದರೆ ಸಾಕು ಜನ ರಸ್ತೆಯಲ್ಲಿ ಓಡಾಡಲು ಹೆದರುವ ಪರಸ್ಥಿತಿ ಉಂಟಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಬೀದಿದೀಪಗಳ ಅಳವಡಿಕೆಗೆ ಮುಂದಾಗಬೇಕಿದೆ.ಇದನ್ನೂ ಓದಿ: ಇಡೀ ವಿಶ್ವದಲ್ಲಿ ಜನರ ಖಾತೆಗೆ ಹಣ ಹಾಕುತ್ತಿರುವ ಏಕೈಕ ಸರ್ಕಾರ ನಮ್ಮದು – ಯತೀಂದ್ರ

  • ಬೀದಿ ದೀಪದಡಿಯಲ್ಲಿ ಓದು ಬರಹ- ನೆಟ್ಟಿಗರ ಮನಗೆದ್ದ ವಿದ್ಯಾರ್ಥಿನಿ!

    ಬೀದಿ ದೀಪದಡಿಯಲ್ಲಿ ಓದು ಬರಹ- ನೆಟ್ಟಿಗರ ಮನಗೆದ್ದ ವಿದ್ಯಾರ್ಥಿನಿ!

    ವಿದ್ಯೆಗೆ ಬಡತನವಿಲ್ಲ ಎಂಬಂತೆ ವಿದ್ಯಾರ್ಥಿನಿ (Student) ಯೊಬ್ಬಳು ಬೀದಿದೀಪದಡಿ ಬರೆಯುತ್ತಾ ಕುಳಿತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನಗೆದ್ದಿದೆ.

    ಹೌದು. ಉತ್ತಮ ಶಿಕ್ಷಣದಿಂದ ಮಾತ್ರ ವ್ಯಕ್ತಿ ಈ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಪ್ರತಿಯೊಬ್ಬರೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಅಥವಾ ಹೆಸರಾಂತ ಶಾಲೆಗಳಲ್ಲಿ ಪ್ರವೇಶ ಪಡೆಯಲು ಸಾಕಷ್ಟು ಅದೃಷ್ಟ ಅಥವಾ ಸವಲತ್ತು ಹೊಂದಿರುವುದಿಲ್ಲ. ಬಡತನ ಅವರ ಬೆನ್ನು ಬಿಡದ ಬೇತಾಳನಂತೆ ಕಾಡುತ್ತೆ. ಈ ಮಧ್ಯೆಯೂ ವಿದ್ಯಾರ್ಥಿನಿಯೊಬ್ಬಳು ಬೀದಿ ದೀಪದ ಕೆಳಗೆ ಕೂತು ವಿದ್ಯಾರ್ಜನೆ ಮಾಡುತ್ತಿರುವುದು ಎಲ್ಲರ ಗಮನಸೆಳೆಯುವಂತೆ ಮಾಡಿದೆ. ಇದನ್ನೂ ಓದಿ: ಟೀ ನಿರಾಕರಿಸಿದ ಡಿಸಿಗೆ ಮದ್ಯ ಕುಡಿತೀರಾ ಅಂದ ಮಹಾರಾಷ್ಟ್ರ ಕೃಷಿ ಸಚಿವ – ವೀಡಿಯೋ ವೈರಲ್

     

    View this post on Instagram

     

    A post shared by Stutes Zone 987 (@stutes_zone_987)

    ವಿದ್ಯಾರ್ಥಿನಿ ಶಾಲಾ ಮಸವಸ್ತ್ರದಲ್ಲಿಯೇ ರಸ್ತೆ ಬದಿಯಲ್ಲಿರುವ ಬೀದಿ ದೀಪದಡಿಯಲ್ಲಿ ಕುಳಿತು ಬರೆಯುತ್ತಿದ್ದಾಳೆ. ಇದರ ವೀಡಿಯೋವನ್ನು ಆ ಮಾರ್ಗದಲ್ಲಿ ಸಂಚರಿಸುತ್ತಿರುವರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೇ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. ಆಕೆಯ ಮುಂದೆ ವಾಹನ ಚಲಿಸುತ್ತಿದ್ದರೂ ತಲೆ ಎತ್ತಿ ನೋಡದೇ ಬರೆಯುತ್ತಿರುವುದನ್ನು ಮಗ್ನಳಾಗಿರುವುದು ಕಾಣಹುದಾಗಿದೆ.

    ಒಟ್ಟಿನಲ್ಲಿ ವಿದ್ಯಾರ್ಥಿನಿಯ ಶ್ರದ್ಧೆ ಹಾಗೂ ಆಕೆ ಅಧ್ಯಯನಕ್ಕೆ ಕೊಡುವ ಗಮನ ಸೋಶಿಯಲ್ ಮೀಡಿಯಾದಲ್ಲಿ ಅನೇಕರನ್ನು ಪ್ರೇರೇಪಿಸಿದೆ. ಅಲ್ಲದೆ ಈ ಪೋಸ್ಟ್ ಅನೇಕರನ್ನು ಭಾವನಾತ್ಮಕವಾಗಿಸಿದೆ. ವಿದ್ಯಾರ್ಥಿನಿ ತನ್ನ ಅಧ್ಯಯನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಕ್ಕಾಗಿ ನೆಟ್ಟಿಗರು ಆಕೆಯನ್ನು ಶ್ಲಾಘಿಸಿದ್ದಾರೆ. ಹಲವರು ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದು ಆಸೀರ್ವದಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್‍ಇಡಿ ಬೀದಿ ದೀಪಗಳ ಅಳವಡಿಕೆಗೆ ಜನಪ್ರತಿನಿಧಿಗಳ ಅಡ್ಡಗಾಲು

    ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್‍ಇಡಿ ಬೀದಿ ದೀಪಗಳ ಅಳವಡಿಕೆಗೆ ಜನಪ್ರತಿನಿಧಿಗಳ ಅಡ್ಡಗಾಲು

    -847 ಕೋಟಿ ರೂಪಾಯಿಗಳ ತೆರಿಗೆ ಹಣ ನಷ್ಟ

    ಬೆಂಗಳೂರು: ಪ್ರತಿವರ್ಷ ಕೋಟ್ಯಂತರ ರೂಪಾಯಿಗಳಷ್ಟು ತೆರಿಗೆ ಹಣವನ್ನು ಉಳಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿದ್ದ ಬೀದಿ ದೀಪಗಳಿಗೆ ಎಲ್‍ಇಡಿ ಬಲ್ಬ್ ಅಳವಡಿಕೆ ಕಾರ್ಯಕ್ಕೆ ನಗರದ ಸಚಿವರು ಹಾಗೂ ಜನಪ್ರತಿನಿಧಿಗಳು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

    ನಗರದ ಪ್ರೆಸ್‍ಕ್ಲಬ್ ನಲ್ಲಿಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಎಪಿ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್‍ಇಡಿ ಬಲ್ಬ್ ಗಳ ಅಳವಡಿಕೆಗೆ ಷಹಾಪೋರ್ಜಿ ಪಲ್ಲೊಂಜಿ, ಎಸ್‍ಎಮ್‍ಎಸ್ ಇನ್ಪ್ರಾಸ್ಟ್ರಕ್ಚರ್ ಮತ್ತು ಸಮುದ್ರ ಎಲೆಕ್ಟ್ರಾನಿಕ್ ಸಿಸ್ಟಮ್ಸ್ – ಈ ಮೂರು ಕಂಪನಿಗಳ ಕನ್ಸೋರ್ಷಿಯಮ್ ಗೆ 2018 ರಲ್ಲಿ ಟೆಂಡರ್ ನೀಡಲಾಗಿತ್ತು. ನಗರದಲ್ಲಿ ಬೀದಿ ದೀಪಗಳ ವಿದ್ಯುತ್ ಬಳಕೆಯ ಬಗ್ಗೆ ಅಧ್ಯಯನ ಮಾಡುವ ಉದ್ದೇಶದಿಂದ ಪಿಡಬ್ಲೂಸಿ ಸಂಸ್ಥೆಯನ್ನೂ ನೇಮಿಸಲಾಗಿತ್ತು. ಈ ಸಂಸ್ಥೆಯ ವತಿಯಿಂದ ನಡೆಸಲಾದ ಅಧ್ಯಯನದಲ್ಲಿ ಬಿಬಿಎಂಪಿ ಪ್ರತಿವರ್ಷ ತನ್ನ 4.85 ಲಕ್ಷ ಬೀದಿದೀಪಗಳ ನಿರ್ವಹಣೆಗೆ 240 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ. ಅದರಲ್ಲಿ ಸುಮಾರು 200 ಕೋಟಿ ರೂಪಾಯಿಗಳನ್ನು ಬೆಸ್ಕಾಂಗೆ ನೀಡಲಾಗುತ್ತಿದೆ. ವರ್ಷಪೂರ್ತಿ ಬೀದಿ ದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ಈ ವೆಚ್ಚ ಸುಮಾರು 330 ಕೋಟಿಗಳಿಗೆ ತಲುಪುತ್ತದೆ ಎನ್ನುವುದನ್ನು ಸ್ಥಳೀಯ ಆಡಳಿತ ಅಂದಾಜು ಕೂಡಾ ಮಾಡಿದೆ. ಇದನ್ನೂ ಓದಿ: ಕೆಮಿಕಲ್ ಕಾರ್ಖಾನೆಯಲ್ಲಿ ಸ್ಫೋಟ- 8 ಜನಕ್ಕೆ ಗಾಯ, ಓರ್ವ ಸಾವಿನ ಶಂಕೆ

    ಜಾಗತಿಕ ಟೆಂಡರ್ ಕರೆಯುವ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ವೆಚ್ಚವನ್ನು 233 ಕೋಟಿ ರೂಪಾಯಿಗಳಿಗೆ ಇಳಿಸುವ ಅಂದಾಜು ಮಾಡಲಾಗಿತ್ತು. ಈ ಉಳಿತಾಯ ಎಲ್‍ಇಡಿ ವಿದ್ಯುತ್ ದೀಪಗಳ ಅಳವಡಿಕೆಯಿಂದಾಗುವ ವಿದ್ಯುತ್ ಬಳಕೆಯಲ್ಲಿನ ಇಳಿಕೆಯಿಂದ ಸಾಧ್ಯವಾಗುತ್ತಿತ್ತು. ವಿದ್ಯುತ್ ಬಳಕೆಯ ಪ್ರಮಾಣ 290 ಕೋಟಿ ರೂಪಾಯಿಗಳಿಂದ 33 ಕೋಟಿ ರೂಪಾಯಿಗಳಿಗೆ ಇಳಿಕೆಯಾಗುತ್ತಿತ್ತು. 5 ಲಕ್ಷ ಎಲ್‍ಇಡಿ ವಿದ್ಯುತ್ ದೀಪಗಳನ್ನು ಅಳವಡಿಸಿ ಅವುಗಳ ಸಮರ್ಪಕ ನಿರ್ವಹಣೆಯಿಂದ ಶೇಕಡಾ 85.50% ರಷ್ಟು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಈ ಕನ್ಸೋರ್ಷಿಯಮ್ ಸುಮಾರು 175 ಕೋಟಿ ರೂಪಾಯಿಗಳನ್ನು ಆದಾಯ ಪಡೆದುಕೊಳ್ಳುತ್ತಿತ್ತು ಎಂದರು.

    ನಗರದಲ್ಲಿ ಉತ್ತಮ ಯೋಜನೆ ಕಾರ್ಯಗತಗೊಳಿಸುವಲ್ಲಿ ಅನಗತ್ಯ ವಿಳಂಬವಾಗುತ್ತಿದೆ. ಇದಕ್ಕೆ ನಮ್ಮ ರಾಜಕೀಯ ವ್ಯವಸ್ಥೆಯ ದುಷ್ಟ ಶಕ್ತಿಗಳ ಕಾರಣ. ಸೆಪ್ಟೆಂಬರ್ 9 ರಂದು ಯಶವಂತಪುರದಲ್ಲಿ ಎಲ್‍ಇಡಿ ಬೀದಿ ದೀಪಗಳನ್ನು ಅಳವಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದ ನೌಕರರ ಮೇಲೆ ನಗರದ ಕೆಲ ಸಚಿವರು ಹಾಗೂ ಮಾಜಿ ಕಾರ್ಪೋರೇಟರ್‌ ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಅಲ್ಲದೆ, ಪ್ರತಿನಿತ್ಯ ಅವರ ಕಾರ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ವಿಶ್ವವಿಖ್ಯಾತ ಬೆಂಗಳೂರು ನಗರದಲ್ಲೇ ಇಂತಹ ಕ್ರಾಂತಿಕಾರಿ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ವಿಷಾಧನೀಯ. ಕಳೆದ ಮೂರು ವರ್ಷಗಳಲ್ಲಿ ಈ ಯೋಜನೆ ಕಾರ್ಯಗತವಾಗಿದ್ದರೆ ಸುಮಾರು 847 ಕೋಟಿ ರೂಪಾಯಿಗಳ ಉಳಿತಾಯ ಆಗುತ್ತಿತ್ತು. ಆದರೆ ರಾಜಕೀಯ ಪ್ರತಿನಿಧಿಗಳ ದುಷ್ಟ ಮನಸ್ಥಿತಿಯಿಂದ ಇದು ಸಾಧ್ಯವಾಗಿಲ್ಲ. ಈ ನಷ್ಟವನ್ನು ಕಳೆದ ಮೂರು ವರ್ಷಗಳಲ್ಲಿ ಬಿಬಿಎಂಪಿ ಆಡಳಿತ ನಡೆಸಿದ ಪಕ್ಷಗಳಿಂದ ವಸೂಲು ಮಾಡಿಕೊಳ್ಳಬೇಕು ಎಂದು ಮೋಹನ್ ದಾಸರಿ ಆಗ್ರಹಿಸಿದರು. ಇದನ್ನೂ ಓದಿ: ಕೋರ್ಟ್ ಒಳಗೆ ಗುಂಡಿನ ಮೊರೆತ – ಗ್ಯಾಂಗ್ ಸ್ಟರ್ ಜಿತೇಂದ್ರ ಗೋಗಿ ಹತ್ಯೆ

    ನಗರದ ಜನತೆಯ ಕೊಟ್ಯಂತರ ರೂಪಾಯಿ ಹಣವನ್ನು ಉಳಿಸುವಂತಹ ಯೋಜನೆಗೆ ಅಡ್ಡಗಾಲು ಹಾಕುವ ಮೂಲಕ ರಾಜಕಾರಣಿಗಳು ಅಭಿವೃದ್ದಿಯ ಪರವಲ್ಲ ಎನ್ನುವ ಧೋರಣೆಯನ್ನು ತೋರಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಈ ಕೂಡಲೇ ಮಧ್ಯ ಪ್ರವೇಶಿಸಿಬೇಕು ಹಾಗೂ ಬೀದಿ ದೀಪಗಳ ಎಲ್‍ಇಡಿ ಅಳವಡಿಕೆಗೆ ಯಾವುದೇ ತೊಂದರೆ ಆಗದಂತೆ ಕ್ರಮವಹಿಸಬೇಕು ಎಂದು ಅವರು ಆಗ್ರಹಿಸಿದರು. ಇದನ್ನೂ ಓದಿ: LOVE YOU MY SON: ನಿಖಿಲ್ ಕುಮಾರಸ್ವಾಮಿ

  • ದಾರಿದೀಪ ಇಲ್ಲದ್ದಕ್ಕೆ ಗ್ರಾಮಸ್ಥರಿಂದ ಗ್ಯಾಸ್ ಲೈಟ್ ಫಿಕ್ಸ್

    ದಾರಿದೀಪ ಇಲ್ಲದ್ದಕ್ಕೆ ಗ್ರಾಮಸ್ಥರಿಂದ ಗ್ಯಾಸ್ ಲೈಟ್ ಫಿಕ್ಸ್

    ಉಡುಪಿ: ದಾರಿದೀಪ ಕೆಟ್ಟು ತಿಂಗಳಾದರೂ ಸರಿಪಡಿಸದ ಮೆಸ್ಕಾಂ ವಿರುದ್ಧ ಜಿಲ್ಲೆಯ ಕುಕ್ಕಿಕಟ್ಟೆಯ ಜನ ವಿಶಿಷ್ಟ ಪ್ರತಿಭಟನೆ ಮಾಡಿದ್ದಾರೆ.

    ಉಡುಪಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಕ್ಕಿಕಟ್ಟೆಯ ಕಲ್ಯಾಣನಗರ ಸಮೀಪ ಬೀದಿ ದೀಪ ಕೆಟ್ಟು ತಿಂಗಳುಗಳೇ ಕಳೆದಿದೆ. ರಿಪೇರಿ ಮಾಡಿ ಎಂದು ಸಾರ್ವಜನಿಕರು ಎಷ್ಟೇ ಅಂಗಲಾಚಿದರೂ ಅಧಿಕಾರಿಗಳು ಮಾತ್ರ ದಾರಿದೀಪ ಸರಿಮಾಡುವ ಗೋಜಿಗೇ ಹೋಗಿರಲಿಲ್ಲ.

    ಇತ್ತೀಚೆಗೆ ಮಳೆ ಸಂದರ್ಭದಲ್ಲಿ ಹೈ ಮಾಸ್ಕ್ ದೀಪದ ಕಂಬ ಶಾಕ್ ಹೊಡೆಯಲಾರಂಭಿಸಿದೆ. ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ವಿಳಂಬ ನೀತಿಯಿಂದ ಬೇಸತ್ತ ಸ್ಥಳೀಯರು ಗ್ಯಾಸ್ ಲೈಟ್ ನೇತುಹಾಕಿ ಪ್ರತಿಭಟನೆ ಮಾಡಿದ್ದಾರೆ. ಮೆಸ್ಕಾಂ ದೀಪ ಸರಿ ಮಾಡಿಕೊಡದಿದ್ದರೆ ಗ್ಯಾಸ್ ಲೈಟ್ ಉರಿಸಿ ಸಾರ್ವಜನಿಕರ ಓಡಾಟಕ್ಕೆ ಸಹಕಾರಿಯಾಗುವಂತೆ ಮಾಡುತ್ತೇವೆ ಎಂದು ಅಧಿಕಾರಿಗಳಿಗೆ ಸ್ಥಳೀಯರು ನೇರ ಟಾಂಗ್ ಕೊಟ್ಟಿದ್ದಾರೆ.

    ಈ ಕುರಿತು ಸ್ಥಳೀಯ ನಿವಾಸಿ ರಾಜೇಶ್ ಶೆಟ್ಟಿಯವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಯಾವುದೇ ಒಂದು ಸರ್ಕಾರಿ ಸಂಸ್ಥೆಗೆ ಜನಪ್ರತಿನಿಧಿ ಎಂದು ಆಯ್ಕೆಯಾದವರು ಇದ್ದರೆ ಮಾತ್ರ ಅದು ಮುಂದುವರಿಯಲು ಸಾಧ್ಯ. ಇದಕ್ಕೆ ಉಡುಪಿಯ ನಗರಸಭೆ ಉತ್ತಮ ನಿದರ್ಶನವಾಗಿದೆ. ಉಡುಪಿ ನಗರ ಸಭೆ ಪ್ರಾರಂಭವಾಗಿ ಇಷ್ಟು ವರ್ಷವಾದರೂ ಯಾವೊಬ್ಬ ಚುನಾಯಿತರೂ ಅಧಿಕಾರ ಸ್ವೀಕಾರ ಮಾಡಿಲ್ಲ ಎಂದರು.

    ಸಮೀಪದ ಕುಕ್ಕಿಕಟ್ಟೆಯಲ್ಲಿ ಬೀದಿ ದೀಪ ಇದ್ದು, ಹೈ ಮಾಸ್ಕ್ ಲೈಟ್‍ಗಳಿವೆ. ಇವುಗಳನ್ನು ಬಿಚ್ಚಿ ತೆಗೆದುಕೊಂಡು ಹೋಗಿ ಈಗಾಗಲೇ 3 ತಿಂಗಳು ಕಳೆದಿದೆ. ಈ ಮೂರು ತಿಂಗಳು ನಿರಂತವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಕಂಬದಲ್ಲಿ ವಯರ್ ಗಳು ತಾಗಿ ಕರೆಂಟ್ ಶಾಕ್ ಹೊಡೆಯುತ್ತಿದೆ. ಕಂಬದ ಪಕ್ಕವೇ ಶಾಲೆಯ ಮಕ್ಕಳು ಸಂಚರಿಸುತ್ತಾರೆ. ಟೆಂಪೋಗಳ ನಿಲುಗಡೆಯಾಗುತ್ತದೆ. ಅಲ್ಲದೆ ರಿಕ್ಷಾ ನಿಲ್ದಾಣವೂ ಇದೆ. ಯಾರದರೂ ಅಲ್ಲಿ ಕರೆಂಟ್ ಶಾಕ್ ಹೊಡೆದು ಸಾಯೋದನ್ನು ಮೆಸ್ಕಾಂ ಮತ್ತು ನಗರಸಭೆ ಕಾಯುತ್ತಿದೆ ಎಂದು ರಾಜೇಶ್ ಕಿಡಿಕಾರಿದ್ದಾರೆ.

    ಈ ಹಿನ್ನೆಲೆಯಲ್ಲಿ ಸ್ಥಳೀಯರು ಒಗ್ಗಟ್ಟಾಗಿ ಸೋಮವಾರ ಗ್ಯಾಸ್ ಲೈಟನ್ನು ಕಟ್ಟಿ ರಸ್ತೆಯಲ್ಲಿ ಹೋಗುವವರಿಗೆ ಬೆಳಕು ನೀಡಿದ್ದಾರೆ. ಈ ಮೂಲಕ ಸ್ಥಳೀಯರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಉಡುಪಿ ನಗರದಲ್ಲಿ ಅರ್ಧಕರ್ಧ ವಿದ್ಯುತ್ ದೀಪಗಳೇ ಉರಿಯುತ್ತಿಲ್ಲ. ಜನನ-ಮರಣ ಪತ್ರಕ್ಕೆ ಹೋದವರಿಂದ ಹಣ ವಸೂಲಿ ಮಾಡುವುದು ಬಿಟ್ಟರೆ ಇಡೀ ನಗರಸಭೆಯಿಂದ ಬೇರೆ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ರಾಜೇಶ್ ಗಂಭೀರ ಆರೋಪ ಮಾಡಿದರು.

  • ಬೀದಿ ದೀಪಗಳಿಲ್ಲದೇ ಕತ್ತಲಲ್ಲಿ ಮುಳುಗಲಿದೆ ಬೆಂಗಳೂರು!

    ಬೀದಿ ದೀಪಗಳಿಲ್ಲದೇ ಕತ್ತಲಲ್ಲಿ ಮುಳುಗಲಿದೆ ಬೆಂಗಳೂರು!

    ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಬುಧವಾರ ರಾತ್ರಿ ಬೀದಿ ದೀಪ ಉರಿಯುವುದು ಅನುಮಾನ.

    ಬಿಬಿಎಂಪಿ ವಿರುದ್ದ ಮುನಿಸಿಕೊಂಡಿರುವ ಬೀದಿ ದೀಪ ನಿರ್ವಹಣೆಯ ಗುತ್ತಿಗೆದಾರರು ಪ್ರತಿಭಟನೆಗೆ ಇಳಿದಿದ್ದಾರೆ. ಹೀಗಾಗಿ ಬುಧವಾರ ನಗರದ ದೀಪಗಳನ್ನು ಬಂದ್ ಮಾಡಿ ಮುಷ್ಕರ ನಡೆಸಲು ವಿದ್ಯುತ್  ಗುತ್ತಿಗೆದಾರರ ಸಂಘ ನಿರ್ಧರಿಸಿದೆ.

    2016 ರಿಂದ ಒಟ್ಟು 40 ಕೋಟಿ ರೂ. ಹಣವನ್ನು ಬಿಬಿಎಂಪಿ ಬೀದಿದೀಪ ನಿರ್ವಹಣೆಗಾರರಿಗೆ ನೀಡಬೇಕಿತ್ತು. ಆದರೆ ಇಲ್ಲಿಯವರೆಗೆ ಈ ಹಣವನ್ನು ಪಾವತಿ ಮಾಡದ ಕಾರಣ ಇಂದು ರಾತ್ರಿಯಿಂದಲೇ 4 ಲಕ್ಷ ಬೀದಿ ದೀಪಗಳನ್ನು ಬಂದ್ ಮಾಡಿ ಪ್ರತಿಭಟಿಸಲು ಗುತ್ತಿಗೆದಾರರು ನಿರ್ಧರಿಸಿದ್ದಾರೆ.

    ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ವಾಹನಗಳೊಂದಿಗೆ ಗುತ್ತಿಗೆದಾರರು ಜಮಾಯಿಸಿದ್ದು, ಬಿಬಿಎಂಪಿ ಹಣವನ್ನು ಪಾವತಿ ಮಾಡುವ ಬಗ್ಗೆ ಭರವಸೆ ನೀಡಿದರೆ ಬುಧವಾರ ಬೆಂಗಳೂರು ನಗರದಲ್ಲಿ ಬೀದಿದೀಪ ಉರಿಯಲಿದೆ.

  • ಚಿರತೆ ಕಾರ್ಯಾಚರಣೆ ಬಳಿಕ ತುಮಕೂರಿನ ಜಯನಗರ ಏರಿಯಾಗೆ ಸಿಕ್ತು ಕರೆಂಟ್ ಭಾಗ್ಯ

    ಚಿರತೆ ಕಾರ್ಯಾಚರಣೆ ಬಳಿಕ ತುಮಕೂರಿನ ಜಯನಗರ ಏರಿಯಾಗೆ ಸಿಕ್ತು ಕರೆಂಟ್ ಭಾಗ್ಯ

    ತುಮಕೂರು: ಶನಿವಾರದಂದು ಚಿರತೆ ಮನೆಯೊಳಗೆ ನುಗ್ಗಿ ಅವಾಂತರ ಸೃಷ್ಟಿಸಿದ ತುಮಕೂರಿನ ಜಯನಗರದಲ್ಲಿ ಬೀದಿ ದೀಪಗಳೇ ಇರಲ್ವಂತೆ. ಚಿರತೆ ನುಗ್ಗಿದ ರಂಗನಾಥ್ ಮನೆಯ ಬೀದಿಯಲ್ಲೂ ಕಳೆದ 2-3 ದಿನದಿಂದ ಲೈಟ್ ಉರಿಯುತ್ತಿರಲಿಲ್ಲ. ಚಿರತೆ ಯಾವಾಗ ಅವಾಂತರ ಸೃಷ್ಟಿಸಿತೊ ಪಾಲಿಕೆಯವರು ದೀಪ ದುರಸ್ಥಿ ಮಾಡಿದ್ದಾರೆ.

    ಚಿರತೆ ನೆಪದಲ್ಲಿ ಬೀದಿ ದೀಪಗಳಿಗೂ ಕಾಯಕಲ್ಪ ಸಿಕ್ಕಿದೆ. ಕಳಪೆ ಗುಣಮಟ್ಟದ ಬೀದಿ ದೀಪಗಳನ್ನು ಅಳವಡಿಸುವುದರಿಂದ ಪದೇ ಪದೇ ಕೆಟ್ಟು ಹೋಗುತ್ತವೆ. ತಿಂಗಳಾನುಗಟ್ಟಲೆ ರೀಪೇರಿ ಮಾಡೋದೇ ಇಲ್ಲ ಅಂತಾರೆ ಇಲ್ಲಿನ ನಿವಾಸಿ ವಿನುತ. ಪರಿಣಾಮ ರಾತ್ರಿ ವೇಳೆ ಪ್ರಾಣಿಗಳಷ್ಟೆ ಅಲ್ಲ ಕಳ್ಳರು ಬಂದು ಮನೆಗೆ ನುಗ್ಗಿದ್ರು ಗೊತ್ತಾಗದೇ ಬಡಾವಣೆ ಜನರು ಭಯದಿಂದ ಬದುಕುತ್ತಿದ್ದರು.

    ಅಲ್ಲದೆ ಜಯನಗರದಲ್ಲಿ ಬರೀ ಗಿಡಗಂಟೆಗಳದ್ದೇ ದರ್ಬಾರ್. ಬಡಾವಣೆಯಲ್ಲಿರುವ ಖಾಲಿ ಸೈಟ್ ಗಳಲ್ಲಿ ಗಿಡಗಂಟೆಗಳು ತುಂಬಿಕೊಂಡಿವೆ. ಈ ಪೊದೆಗಳಲ್ಲಿ ಹಂದಿ, ನಾಯಿಗಳು ಸೇರಿದಂತೆ ವಿಷ ಜಂತುಗಳು ಸೇರಿಕೊಳ್ಳುತಿವೆ. ಹಾಗಾಗಿ ಆಹಾರ ಹುಡುಕಿ ಬರುವ ಚಿರತೆ, ಕರಡಿಗಳು ಈ ಪೊದೆಯೊಳಗೆ ಸೇರಿಕೊಳ್ಳುತ್ತವೆ. ಪಾಲಿಕೆಯಾಗಲಿ ಅಥವಾ ಸೈಟ್ ಮಾಲೀಕರಾಗಲಿ ತಮ್ಮ ನಿವೇಶನವನ್ನು ಕ್ಲೀನ್ ಮಾಡದೇ ಇದ್ದುದಕ್ಕೆ ಬಡಾವಣೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=oFB8KfenrhU

    https://www.youtube.com/watch?v=H1CCjKaUyoA

    https://www.youtube.com/watch?v=yJW45zM7OJ4

  • ವಿದ್ಯುತ್ ಬೀದಿದೀಪದಲ್ಲಿ ಕಾಣಿಸಿಕೊಂಡ ಹಾವುಗಳು!

    ವಿದ್ಯುತ್ ಬೀದಿದೀಪದಲ್ಲಿ ಕಾಣಿಸಿಕೊಂಡ ಹಾವುಗಳು!

    ಬಳ್ಳಾರಿ: ಹಾವುಗಳು ಹುತ್ತದಲ್ಲಿ ಇಲ್ಲವೇ ತಗ್ಗು ಗುಂಡಿಗಳಲ್ಲಿ ಇರೋದು ಮಾಮೂಲು. ಆದ್ರೆ ಎರಡು ಹಾವುಗಳು ವಿದ್ಯುತ್ ಬಲ್ಬ್ ನಲ್ಲಿ ಕಾಣಿಸಿಕೊಂಡ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

    ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಖಾನಾಹೊಸಹಳ್ಳಿಯ 5ನೇ ವಾರ್ಡ್‍ನ ಬೀದಿ ದೀಪದ ಬಲ್ಬ್ ನೊಳಗೆ ಹಾವುಗಳು ಆಶ್ರಯ ಪಡೆದ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ವಿದ್ಯುತ್ ಕಂಬದಲ್ಲಿನ ಚಿಕ್ಕದಾದ ಬೀದಿ ದೀಪದ ಲೈಟಿನಲ್ಲಿ ಎರಡು ಹಾವುಗಳು ಪ್ರತ್ಯಕ್ಷವಾಗಿರುವುದನ್ನು ನೋಡಿದ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಚಿಕ್ಕದಾದ ಜಾಗದಲ್ಲಿ ಎರಡು ಹಾವುಗಳಿದ್ದರೂ ಸ್ವಲ್ಪವೂ ಜಗಳವಾಡದೇ ಇರುವುದು ನಿಜಕ್ಕೂ ವಿಶೇಷವಾಗಿದೆ. ಮೇಲಿನ ಮರದಿಂದ ಕೆಳಗಿನ ವಿದ್ಯುತ್ ಕಂಬದ ಬಲ್ಬ್ ನೊಳಗೆ ಹಾವುಗಳು ಹೋಗಿರಬಹುದು ಎಂದು ಹೇಳಲಾಗಿದೆ.