Tag: street dog

  • ಯಾವ ಸ್ವಾರ್ಥವೂ ಇಲ್ಲದೆ ಬೀದಿನಾಯಿಗಳ ಸಂರಕ್ಷಣೆ ಮಾಡ್ತಿದೆ `ಲವ್ ಫಾರ್ ಫರ್ಗಟನ್’ ಸಂಸ್ಥೆ

    ಯಾವ ಸ್ವಾರ್ಥವೂ ಇಲ್ಲದೆ ಬೀದಿನಾಯಿಗಳ ಸಂರಕ್ಷಣೆ ಮಾಡ್ತಿದೆ `ಲವ್ ಫಾರ್ ಫರ್ಗಟನ್’ ಸಂಸ್ಥೆ

    ಬೆಂಗಳೂರು: ಬೀದಿ ನಾಯಿ ಅಂದರೆ ಸಾಕು ಜನರಿಗೆ ಕಚ್ಚುತ್ತೆ, ಗಲೀಜು ಅಂತಾ ದೂರ ಹೋಗುತ್ತಾರೆ. ಆದರೆ ಬೀದಿ ನಾಯಿಗಳ ಸಂರಕ್ಷಣೆಗಾಗಿಯೇ ಒಂದು ಸಂಸ್ಥೆಯನ್ನು ಸ್ಥಾಪಿಸಿ ಅವುಗಳನ್ನು ರಕ್ಷಿಸುತ್ತಿದ್ದಾರೆ.

    ಬೆಂಗಳೂರಿನ ಜೆಪಿನಗರದಲ್ಲಿ ಲವ್ ಫಾರ್ ಫರ್ಗಟನ್ ಎನ್ನುವ ಸಂಸ್ಥೆ ಇದೆ. ಕಳೆದ ಒಂದು ವರ್ಷದಿಂದ ಸುಕನ್ಯ ಮತ್ತು ಅವರ ತಂಡ ಈ ಸಂಸ್ಥೆಯನ್ನು ಸ್ಥಾಪಿಸಿ ಬೀದಿ ನಾಯಿಗಳ ರಕ್ಷಣೆಯಲ್ಲಿ ತೊಡಗಿದ್ದಾರೆ. ಹಸಿವಿನಿಂದ, ಅನಾರೋಗ್ಯದಿಂದ ಮತ್ತು ಅಪಘಾತವಾದ ಬೀದಿನಾಯಿಗಳಿಗೆ ಚಿಕಿತ್ಸೆ ಕೊಡಿಸಿ, ತಮ್ಮ ಶೇಲ್ಟರ್ನಲ್ಲಿ ರಕ್ಷಣೆ ನೀಡುತ್ತಿದ್ದಾರೆ. ಅವುಗಳು ಸಂಪೂರ್ಣವಾಗಿ ಚೇತರಿಸಿಕೊಂಡ ಮೇಲೆ ಅವುಗಳ ಮೂಲ ಸ್ಥಳಕ್ಕೆ ಬಿಟ್ಟುಬರುತ್ತಾರೆ.

    ಒಂದು ವರ್ಷದಲ್ಲಿ ಸುಮಾರು 150 ಕ್ಕೂ ಹೆಚ್ಚು ಬೀದಿ ನಾಯಿಗಳ ರಕ್ಷಣೆ ಮಾಡಿದ್ದೇವೆ. ನಮ್ಮ ದೊಡ್ಡಮ್ಮನಿಂದ ಉತ್ತೇಜನ ಪಡೆದು ಈ ಕೆಲಸ ಮಾಡುತ್ತಿದ್ದಾನೆ. ಅನಾರೋಗ್ಯದಿಂದ ನರಳುವ ಬೀದಿನಾಯಿಗಳಿಗಾಗಿಯೇ ಶೇಲ್ಟರ್ ನಿರ್ಮಿಸಿದ್ದೇವೆ. ಈಗ ಸುಮಾರು 25 ಕ್ಕೂ ಹೆಚ್ಚಿನ ನಾಯಿಗಳು ಇಲ್ಲಿವೆ. ನಿಮ್ಮ ಏರಿಯಾಗಳಲ್ಲಿ ಅನಾರೋಗ್ಯ ಪೀಡಿತ ನಾಯಿಗಳ ಕಂಡರೆ ನಮಗೆ ತಿಳಿಸಿ ನಾವು ಅವುಗಳ ಕೇರ್ ತಗೋತ್ತೀವೆ ಎಂದು ಟ್ರೇಸ್ಟಿ ಸುಕನ್ಯಾ ಹೇಳಿದರು.

    ಯಾವ ಸ್ವಾರ್ಥವೂ ಇಲ್ಲದೆ ತಮ್ಮ ಸಂಪಾದನೆಯಲ್ಲವನು ಇತಂಹ ಬೀದಿನಾಯಿಗಳ ರಕ್ಷಣೆಗೆ ಬಳಸುತ್ತಿರುವ ಸುಕನ್ಯಾ ಮತ್ತು ಅವರ ತಂಡಕ್ಕೆ ಧನ್ಯವಾದಗಳು.

  • ತಾಯಿ ಹಸು ಜನ್ಮ ನೀಡ್ತಿದ್ದಾಗಲೇ ಕರುವನ್ನ ಕಚ್ಚಿ ತಿಂದ ನಾಯಿಗಳು- ಕೊಪ್ಪಳದಲ್ಲಿ ಹೃದಯ ವಿದ್ರಾವಕ ಘಟನೆ

    ತಾಯಿ ಹಸು ಜನ್ಮ ನೀಡ್ತಿದ್ದಾಗಲೇ ಕರುವನ್ನ ಕಚ್ಚಿ ತಿಂದ ನಾಯಿಗಳು- ಕೊಪ್ಪಳದಲ್ಲಿ ಹೃದಯ ವಿದ್ರಾವಕ ಘಟನೆ

    ಕೊಪ್ಪಳ: ಆಕಳು ಕರುವೊಂದು ಭೂಮಿಗೆ ಬಂದು ಕಣ್ಣು ಬಿಡುವ ಮೊದಲೇ ಬೀದಿ ನಾಯಿಗಳ ಪಾಲಾಗಿರುವ ಹೃದಯ ವಿದ್ರಾವಕ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಗಂಗಾವತಿಯ ವಲಯ ಅರಣ್ಯ ಇಲಾಖೆಯ ಕಚೇರಿ ಹಿಂದೆ ಹಸುವೊಂದು ಕರು ಹಾಕುತ್ತಿರುವಾಗಲೇ ಬೀದಿನಾಯಿಗಳು ಕಚ್ಚಿ ತಿಂದಿವೆ.

    ನಡೆದಿದ್ದೇನು?: ಬೀದಿ ಆಕಳೊಂದು ನಿರ್ಜನ ಪ್ರದೇಶದಲ್ಲಿ ಕರುವಿಗೆ ಜನ್ಮ ನೀಡುತ್ತಿತ್ತು. ತಾಯಿ ಹಸುವಿನ ಜನನಾಂಗದಿಂದ ಕರುವಿನ ಮುಖ ಹೊರ ಬರುತ್ತಿದ್ದಂತೆಯೇ ಬೀದಿ ನಾಯಿಗಳು ಕಚ್ಚಿ ತಿಂದಿವೆ. ಹೃದಯ ವಿದ್ರಾವಕ ಘಟನೆ ಕಂಡ ಜನರು ಮಮ್ಮಲ ಮರುಗಿದ್ದಾರೆ. ಬೀದಿ ನಾಯಿಗಳು ಕರು ಮಾತ್ರವಲ್ಲದೇ ತಾಯಿ ಹಸುವಿನ ಜನನಾಂಗವನ್ನೂ ಕಚ್ಚಿದ್ದರಿಂದ ಆಕಳು ಸಾವು ಬದುಕಿನ ನಡುವೆ ಹೋರಾಡುತ್ತಿದೆ.

    ಸ್ಥಳೀಯರು ಹೃದಯ ವಿದ್ರಾವಕ ದೃಶ್ಯ ಕಂಡು ಬೀದಿ ನಾಯಿಗಳನ್ನು ಓಡಿಸಿದ್ದಾರೆ. ಈ ವೇಳೆ ಕರು ಅರ್ಧ ಹೊರ ಬಂದಿದ್ದರೆ ಇನ್ನರ್ಧ ಆಕಳಿನ ದೇಹದಲ್ಲೇ ಉಳಿದಿತ್ತು. ಈ ವೇಳೆ ಸ್ಥಳೀಯರು ಕರುವಿನ ಉಳಿದ ದೇಹವನ್ನು ಹೊರತೆಗೆದಿದ್ದಾರೆ. ಸ್ಥಳೀಯರು ಪಶು ವೈದ್ಯರಿಗೆ ಮಾಹಿತಿ ನೀಡಿದ್ದು, ಸದ್ಯ ಹಸುವಿನ ಸ್ಥಿತಿ ಚಿಂತಾಜನಕವಾಗಿದೆ.

    https://youtu.be/wPf_48UsjdI

     

  • ಹುಬ್ಬಳ್ಳಿಯಲ್ಲಿ ನಡೆಯ್ತು ಅಚ್ಚರಿಯ ಘಟನೆ: ಸತ್ತಿದ್ದಾನೆಂದು ಭಾವಿಸಿದ್ದ ಬಾಲಕ ಸ್ಮಶಾನದಲ್ಲಿ ಉಸಿರಾಡಿದ..!

    ಹುಬ್ಬಳ್ಳಿಯಲ್ಲಿ ನಡೆಯ್ತು ಅಚ್ಚರಿಯ ಘಟನೆ: ಸತ್ತಿದ್ದಾನೆಂದು ಭಾವಿಸಿದ್ದ ಬಾಲಕ ಸ್ಮಶಾನದಲ್ಲಿ ಉಸಿರಾಡಿದ..!

    ಹುಬ್ಬಳ್ಳಿ: ರಾಜ್ಯದಲ್ಲಿ ಅಪರೂಪದಲ್ಲೇ ಅಪರೂಪ ಎನ್ನುವಂತಹ ಘಟನೆಯೊಂದು ಧಾರವಾದ ಮನಗುಂಡಿ ಗ್ರಾಮದಲ್ಲಿ ನಡೆದಿದೆ. ಬಾಲಕನೊಬ್ಬ ಸತ್ತಿದ್ದಾನೆಂದು ತಿಳಿದು, ಇನ್ನೇನು ಆತನ ಮೃತದೇಹವನ್ನು ಸುಡಲು ರೆಡಿ ಮಾಡುತ್ತಿದ್ದ ಸಂದರ್ಭದಲ್ಲಿ ಬಾಲಕ ಉಸಿರಾಡಿದ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ.

    ಹೌದು. ಜಿಲ್ಲೆಯ ಮನಗುಂಡಿ ಗ್ರಾಮದ ನಿಂಗಪ್ಪ ಅವರ ಪುತ್ರ ಕುಮಾರ್ ಎಂಬ ಬಾಲಕನಿಗೆ ಇತ್ತೀಚೆಗೆ ಬೀದಿ ನಾಯಿಗಳು ಕಚ್ಚಿದ್ದವು. ಇದರಿಂದ ಗಂಭೀರ ಗಾಯಗೊಂಡ ಕುಮಾರ್ ಮೂರ್ಛೆ ಹೋಗಿದ್ದನು. ಸ್ಥಳೀಯ ಎಸ್‍ಡಿಎಂ ಆಸ್ಪತ್ರೆಯಲ್ಲಿ 4 ದಿನ ನಿರಂತರವಾಗಿ ಚಿಕಿತ್ಸೆ ನೀಡಿದರೂ, ಪ್ರಯೋಜನವಾಗಿರಲಿಲ್ಲ. 4 ದಿನಾದ್ರೂ ಚಿಕಿತ್ಸೆಗೆ ಸ್ಪಂದಿಸದೇ ಇರುವುದನ್ನು ಮನಗಂಡ ಕುಮಾರ್ ಪೋಷಕರು ಆತನ ಉಸಿರಾಟ, ನಾಡಿಮಿಡಿತ ನಿಂತಿತ್ತು ಅಂತಾ ಖಚಿತಪಡಿಸಿದ್ದರು. ಅಂತೆಯೇ ಆತನ ಅಂತ್ಯ ಸಂಸ್ಕಾರಕ್ಕಾಗಿ ಮೃತದೇಹವನ್ನು ಸಶಾನಕ್ಕೆ ತಂದಿದ್ದರು. ಈ ವೇಳೆ ಬಾಲಕನ ದೇಹದಲ್ಲಿ ಚಲನವಲನ ಕಂಡು ಬಂದಿದ್ದು, ಬಾಲಕ ಉಸಿರಾಡುತ್ತಿರುವುದು ತಿಳಿದುಬಂತು.

    ಕೂಡಲೇ ಪೋಷಕರು ಆತನನ್ನು ಹುಬ್ಬಳ್ಳಿಯ ಸುಚಿತರಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸಾವು ಗೆದ್ದ ಬಾಲಕ ಕುಮಾರ್‍ಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.