Tag: street dog

  • ಬೀದಿ ನಾಯಿಗಳ ಸ್ಥಳಾಂತರ; ಸುಪ್ರೀಂ ಆದೇಶಕ್ಕೆ ರಾಹುಲ್ ಗಾಂಧಿ ಆಕ್ಷೇಪ

    ಬೀದಿ ನಾಯಿಗಳ ಸ್ಥಳಾಂತರ; ಸುಪ್ರೀಂ ಆದೇಶಕ್ಕೆ ರಾಹುಲ್ ಗಾಂಧಿ ಆಕ್ಷೇಪ

    ನವದೆಹಲಿ: ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳನ್ನು (Street dogs) ಹಿಡಿದು ಅವುಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸೂಚಿಸಿದ ಸುಪ್ರೀಂಕೋರ್ಟ್ (Supreme Court) ನಿರ್ದೇಶನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರೋಧಿಸಿದ್ದಾರೆ.

    ಈ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ ಅವರು, ಈ ನಿರ್ಧಾರವು ಹಲವು ವರ್ಷಗಳಿಂದ ಅನುಸರಿಸುತ್ತಿರುವ ಮಾನವೀಯ ಹಾಗೂ ವಿಜ್ಞಾನಾಧಾರಿತ ನೀತಿಯಿಂದ ಹಿಂದಕ್ಕೆ ಸರಿದಂತಾಗಿದೆ. ಮೂಖ ಜೀವಿಗಳು ಅಳಿಸಬೇಕಾದ ಸಮಸ್ಯೆಗಳಲ್ಲ. ಶಸ್ತ್ರಚಿಕಿತ್ಸೆ, ಲಸಿಕೆ ಹಾಗೂ ಸಮುದಾಯದ ಕಾಳಜಿ ಮೂಲಕ ಬೀದಿಗಳನ್ನು ಕ್ರೂರತೆ ಇಲ್ಲದೆ ಸುರಕ್ಷಿತವಾಗಿರಿಸಬಹುದು ಎಂದಿದ್ದಾರೆ. ಇದನ್ನೂ ಓದಿ: ನಗರಗಳಲ್ಲಿನ ಬೀದಿನಾಯಿ, ಅನಾಥ ಪ್ರಾಣಿಗಳ ತೆರವಿಗೆ ವಿಶೇಷ ಅಭಿಯಾನ – ರಾಜಸ್ಥಾನ ಹೈಕೋರ್ಟ್

    ಸಾಮೂಹಿಕವಾಗಿ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವುದು ಕ್ರೂರ, ದೂರದೃಷ್ಟಿಯಿಲ್ಲದ ಕ್ರಮವಾಗಿದೆ. ಸುಪ್ರೀಂಕೋರ್ಟ್ ಮಾನವೀಯತೆ ಹಾಗೂ ಸಹಾನುಭೂತಿಯಿಲ್ಲದ ಕಾನೂನನ್ನು ಪಕ್ಕಕ್ಕೆ ಸರಿಸಿದೆ. ಸಾರ್ವಜನಿಕ ಸುರಕ್ಷತೆ ಮತ್ತು ಪ್ರಾಣಿಗಳ ಕಾಳಜಿ ಎರಡನ್ನೂ ಒಟ್ಟಿಗೆ ಮಾಡಬಹುದು ಎಂದು ಹೇಳಿದ್ದಾರೆ.

    ಬೀದಿ ನಾಯಿ ಕಡಿತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಮೂರ್ತಿಗಳಾದ ಪಾರ್ದಿವಾಲಾ ಮತ್ತು ಆರ್.ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠವು, ನಗರದ ಹೊರವಲಯವನ್ನು ಬೀದಿನಾಯಿಗಳಿಂದ ಮುಕ್ತಗೊಳಿಸುವುದು ಮೊಟ್ಟ ಮೊದಲ ಆದ್ಯತೆಯಾಗಬೇಕು. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿತ್ತು.

  • ʻಕೈʼ ಸರ್ಕಾರದಿಂದ ಬೀದಿ ನಾಯಿಗಳಿಗೂ ಗ್ಯಾರಂಟಿ – ಬಾಡೂಟಕ್ಕಾಗಿ ಬಿಬಿಎಂಪಿಯಿಂದ 2.80 ಕೋಟಿ ಟೆಂಡರ್

    ʻಕೈʼ ಸರ್ಕಾರದಿಂದ ಬೀದಿ ನಾಯಿಗಳಿಗೂ ಗ್ಯಾರಂಟಿ – ಬಾಡೂಟಕ್ಕಾಗಿ ಬಿಬಿಎಂಪಿಯಿಂದ 2.80 ಕೋಟಿ ಟೆಂಡರ್

    – ದೇಶದಲ್ಲೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳಿಂದ ನಾಯಿಗಳಿಗೆ ಬಾಡೂಟ

    ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ (Bengaluru) ಬೀದಿನಾಯಿಗಳಿಗೆ ಕಾಂಗ್ರೆಸ್ (Congress) ಸರ್ಕಾರ ಬಾಡೂಟದ ಭಾಗ್ಯ ಕಲ್ಪಿಸುತ್ತಿದೆ.ಇದನ್ನೂ ಓದಿ: ತಾಯಿಯನ್ನು ಬಿಟ್ಟು ವಸತಿ ನಿಲಯದಲ್ಲಿ ಇರಲಾರೆ ಎಂದ ಬಾಲಕ ನೇಣಿಗೆ ಶರಣು!

    ಕಾಂಗ್ರೆಸ್ ಸರ್ಕಾರ ಬೀದಿ ನಾಯಿಗಳಿಗೂ (Street Dogs) ಗ್ಯಾರಂಟಿ ಯೋಜನೆಯನ್ನು ಕೊಡುತ್ತಿದೆ. ಈ ಮೂಲಕ ಬೀದಿ ನಾಯಿಗಳಿಗೆ ಮಾಂಸ, ಚಿಕನ್, ಎಗ್‌ರೈಸ್ ನೀಡಲಾಗುತ್ತದೆ. ಪಾಲಿಕೆಯ 8 ವಲಯಗಳಲ್ಲಿ ನಿತ್ಯ 600-700 ಬೀದಿ ನಾಯಿಗಳಿಗೆ ಬಾಡೂಟ ನೀಡಲು ಬಿಬಿಎಂಪಿ (BBMP)  2.80 ಕೋಟಿ ರೂ. ಟೆಂಡರ್ ಕರೆದಿದೆ.

    ಕಾಂಗ್ರೆಸ್ ಸರ್ಕಾರದ ಈ ಬಾಡೂಟ ಭಾಗ್ಯಕ್ಕೆ ತೆರಿಗೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಜನರಿಗೆ ಹೊಟ್ಟೆಗೆ ಹಿಟ್ಟಿಲ್ಲ, ಬೀದಿನಾಯಿಗೆ ಬಾಡೂಟ ಕೊಡುತ್ತಿದ್ದಾರೆ. ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಈ ಐಡಿಯಾ ಮಾಡಿದ್ದಾರೆ. ನಾಯಿಗಳ ಮೇಲೆ ಪ್ರೀತಿ ಇರಲಿ, ಆದರೆ ಇದೆಲ್ಲಾ ಹೇಗೆ? ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ರೀಲ್ಸ್‌ಗಾಗಿ ಕಂಪ್ಲಿ ಸೇತುವೆಯಿಂದ ಜಿಗಿದು ಹುಚ್ಚಾಟ

  • ಇಳಕಲ್‌ನಲ್ಲಿ 4 ವರ್ಷದ ಬಾಲಕನ ಮೇಲೆ ನಾಯಿ ದಾಳಿ

    ಇಳಕಲ್‌ನಲ್ಲಿ 4 ವರ್ಷದ ಬಾಲಕನ ಮೇಲೆ ನಾಯಿ ದಾಳಿ

    ಬಾಗಲಕೋಟೆ: ಇಳಕಲ್ ನಗರದಲ್ಲಿ (Ilkal City) ಬೀದಿ ನಾಯಿಗಳ (Street Dog) ಹಾವಳಿ ಮಿತಿ ಮೀರಿದ್ದು ನಾಲ್ಕು ವರ್ಷದ ಬಾಲಕ (Boy) ಮೇಲೆ ದಾಳಿ ಮಾಡಿದೆ.

    ವಿದ್ಯಾನಗರದಲ್ಲಿ ಮನೆ ಮುಂದೆ ಆಟವಾಡಲು ಬಂದ ಬಾಲಕನ ಮೇಲೆ ಎರಗಿದೆ. ಕಾಲು, ಹೊಟ್ಟೆ ಭಾಗಕ್ಕೆ ಕಚ್ಚಿದ್ದರಿಂದ ಬಾಲಕ ಕೆಳಗೆ ಬಿದ್ದು ಒದ್ದಾಡಿದ್ದಾನೆ. ಬಾಲಕನ ಮೇಲೆ ದಾಳಿ ಮಾಡಿ ಕಚ್ಚುತ್ತಿರುವ ದೃಶ್ಯ ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

     

    ಬಾಲಕ ಮನೆ ಗೇಟ್ ದಾಟಿ ರಸ್ತೆಗೆ ಬರುತ್ತಿದ್ದಂತೆ ಬೀದಿಯಲ್ಲಿ ಮಲಗಿದ್ದ ಶ್ವಾನ ಒಮ್ಮೆಲೆ ಎರಗಿದೆ. ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದಾಗ ಆತನ ಅಜ್ಜಿ ಬಂದು ನಾಯಿಯನ್ನು ಓಡಿಸಿದ್ದಾರೆ. ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಸೇವಾ ಶುಲ್ಕ ಹೆಚ್ಚಳ ಆಸ್ಪತ್ರೆಗಳ ಅಭಿವೃದ್ಧಿಗೆ ಹೊರತು ಗ್ಯಾರಂಟಿಗಲ್ಲ: ದಿನೇಶ್ ಗುಂಡೂರಾವ್ ಸಮರ್ಥನೆ

    ಕೆಲ ದಿನಗಳ ಹಿಂದೆಯೂ ಇತರೆ ಮಕ್ಕಳ ಮೇಲೂ ನಡೆದ ಶ್ವಾನಗಳು ದಾಳಿ ಮಾಡಿತ್ತು. ಈ ವೇಳೆ ಇಳಕಲ್ ನಗರಸಭೆ ಕಾರ್ಯಾಚರಣೆ ನಡೆಸಿದ ಬಳಿಕ ಸ್ವಲ್ಪ ನಿಯಂತ್ರಣಕ್ಕೆ ಬಂದಿತ್ತು. ಈಗ ಮತ್ತೆ ಬೀದಿನಾಯಿಗಳ ಹಾವಳಿ ಆರಂಭವಾಗಿದೆ. ಬೀದಿನಾಯಿಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

     

  • ಬೀದಿ ನಾಯಿಗಳಿಗೆ ಊಟ ನೀಡುವ ಕಾಯಕ – BCCI ಅಧ್ಯಕ್ಷರ ಶ್ವಾನ ಪ್ರೀತಿಗೆ ಜನರ ಮೆಚ್ಚುಗೆ

    ಬೀದಿ ನಾಯಿಗಳಿಗೆ ಊಟ ನೀಡುವ ಕಾಯಕ – BCCI ಅಧ್ಯಕ್ಷರ ಶ್ವಾನ ಪ್ರೀತಿಗೆ ಜನರ ಮೆಚ್ಚುಗೆ

    ಚಾಮರಾಜನಗರ: ಶ್ವಾನಗಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಅವು ಸಹ ಮನುಷ್ಯರ ಭಾವನೆಗಳಿಗೆ ಸ್ಪಂದಿಸುತ್ತವೆ, ಮನುಷ್ಯರಂತೆಯೇ ಪ್ರೀತಿ, ಕಾಳಜಿ, ಗುಣಮಟ್ಟದ ಸಮಯವನ್ನು ಬಯಸುತ್ತವೆ. ಹಾಗಾಗಿಯೇ ನಗರ ಭಾಗದ ಬಹುತೇಕ ಮನೆಗಳಲ್ಲಿ ಶ್ವಾನವೂ (Dog) ಮನೆ ಸದಸ್ಯರ ಭಾಗವಾಗಿಬಿಟ್ಟಿವೆ.

    ಅದೇ ರೀತಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ರೋಜರ್‌‌ ಬಿನ್ನಿ‌‌ಗೆ (Roger Binny) ಬೀದಿನಾಯಿಗಳೆಂದರೆ ಬಲು ಪ್ರೀತಿ. ಆದ್ದರಿಂದಲೇ ಸಮಯ ಸಿಕ್ಕಾಗೆಲ್ಲ ಬೀದಿ ನಾಯಿಗಳಿಗೂ (Street Dog) ಊಟ ನೀಡುವ ಕಾಯಕವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಅರಣ್ಯದಂಚಿನಲ್ಲಿ ಬಹಳ ಹಿಂದೆಯೇ ಜಮೀನು ಖರೀದಿಸಿದ್ದಾರೆ. ತಮ್ಮ ಜಮೀನಿಗೆ ಹೋಗುವಾಗೆಲ್ಲಾ ಮಾರ್ಗದ ಉದ್ದಕ್ಕೂ ದಾರಿಯಲ್ಲಿ ಸಿಗುವ ಬೀದಿ ನಾಯಿಗಳಿಗೆ ಆಹಾರ ನೀಡುವ ಮೂಲಕ‌ ಮಾನವೀಯತೆ ಮೆರೆಯುತ್ತಿದ್ದಾರೆ ಬಿನ್ನಿ. ಬೀದಿ ನಾಯಿಗಳನ್ನು ಕಂಡ ತಕ್ಷಣ ಕಾರು ನಿಲ್ಲಿಸಿ ಅವುಗಳ ಹಸಿವು ನೀಗಿಸುತ್ತಿದ್ದಾರೆ. ಹಸಿದ ಶ್ವಾನಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆಯುವ ಕೆಲಸ ಮಾಡ್ತಿದ್ದಾರೆ. ಬಿಸಿಸಿಐ ಅಧ್ಯಕ್ಷರಿಗಿರುವ ಶ್ವಾನ ಪ್ರೀತಿಯನ್ನು ಕಂಡು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾ ಬೆಂಬಲಿಸಿದ್ದ ಗೀರ್ಟ್ ವೈಲ್ಡರ್ಸ್‌ಗೆ ಚುನಾವಣೆಯಲ್ಲಿ ಗೆಲುವು – ನೆದರ್ಲೆಂಡ್ಸ್ ಪ್ರಧಾನಿಯಾಗಲು ಸಜ್ಜು

    ಸದ್ಯ ರೋಜರ್‌ ಬಿನ್ನಿ ಬೀದಿನಾಯಿಯೊಂದಕ್ಕೆ ಆಹಾರ ನೀಡುತ್ತಿರುವ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಲ ದಿನಗಳ ಹಿಂದೆ ಚಾಮರಾಜನಗರದಲ್ಲಿ ಜಮೀನಿನ ಉಳುಮೆಗಾಗಿ ಟ್ರ್ಯಾಕ್ಟರ್‌ ಕೂಡ ಖರೀದಿ ಮಾಡಿದ್ದರು. ಇದನ್ನೂ ಓದಿ: T20 ಕದನಕ್ಕೆ ವಿಶ್ವಕಪ್‌ ದಾಖಲೆ ಉಡೀಸ್‌ – ಏಕಕಾಲಕ್ಕೆ ಕರ್ನಾಟಕದ ಜನಸಂಖ್ಯೆಗಿಂತಲೂ ಅಧಿಕ ಮಂದಿ ವೀಕ್ಷಣೆ

  • ಬೀದಿ ನಾಯಿ ಮೇಲೆ ಅತ್ಯಾಚಾರಗೈದ ವೃದ್ಧ

    ಬೀದಿ ನಾಯಿ ಮೇಲೆ ಅತ್ಯಾಚಾರಗೈದ ವೃದ್ಧ

    ಜೈಪುರ: ರಾಜಸ್ಥಾನದ ಭರತ್‍ಪುರ ಪ್ರದೇಶದಲ್ಲಿ ಬೀದಿ ನಾಯಿಯ ಮೇಲೆ ವೃದ್ಧನೋರ್ವ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

    ಈ ಬಗ್ಗೆ ಜಿಲ್ಲಾ ಪ್ರಾಣಿ ಹಿಂಸೆ ತಡೆ ಸಮಿತಿಯ ಸದಸ್ಯೆ ಕವಿತಾ ಸಿಂಗ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಯಾಮ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದು, ವೃದ್ಧ ಹಲವು ಬಾರಿ ಹೆಣ್ಣು ನಾಯಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಳಿ ಕೂದಲು, ಬೊಜ್ಜು ಸೇರಿ ಹಲವು ರೋಗಗಳಿಗೆ ಕರಿಬೇವಿನಲ್ಲಿದೆ ಪರಿಹಾರ

    RAPE CASE

    ಆರೋಪಿಯನ್ನು ಚಂಪಾಲಾಲ್ ಗುಪ್ತಾ ಎಂದು ಗುರುತಿಸಲಾಗಿದ್ದು, ಊಟ ನೀಡುವ ನೆಪದಲ್ಲಿ ನಾಯಿಯನ್ನು ಮನೆಗೆ ಕರೆದೊಯ್ದು ವಿಕೃತ ಕೃತ್ಯ ವೆಸಗಿದ್ದಾನೆ. ಕಳೆದ 2 ದಿನಗಳಿಂದ ಒಂದೇ ಸಮನೆ ಅಳುತ್ತಿದ್ದ ನಾಯಿಯನ್ನು ಮಥುರಾ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿಗಳು ಗಮನಿಸಿದ್ದು, ರಕ್ತದ ಮಡುವಿನಲ್ಲಿ ಬಿದ್ದು ನಾಯಿ ಒದ್ದಾಡುತ್ತಿರುವುದನ್ನು ಕಂಡು ಶಾಕ್ ಆಗಿದ್ದಾರೆ. ನಂತರ ಸತ್ಯ ಬೆಳಕಿಗೆ ಬಂದಿದೆ.  ಕೊನೆಗೆ ಗಾಯಗೊಂಡಿದ್ದ ನಾಯಿಯನ್ನು ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದ ಚಿಕಿತ್ಸೆ ಕೊಡಿಸಲಾಯಿತು.

    ತಪಾಸಣೆ ವೇಳೆ ನಾಯಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದ್ದು, ಸದ್ಯ ಈ ಸಂಬಂಧ ತನಿಖೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಇದನ್ನೂ ಓದಿ: ಬೇಸಿಗೆಯಲ್ಲಿ ಕಾಮಕಸ್ತೂರಿ ಬೀಜ ಬಲು ಆರೋಗ್ಯಕಾರಿ

    Live Tv

  • ಬೀದಿ ನಾಯಿಯನ್ನ ದೊಣ್ಣೆಯಿಂದ ಹೊಡೆದು ಎರಡನೇ ಪ್ಲೋರ್‌ನಿಂದ ಬಿಸಾಕಿದ ಪಾಪಿ – ಪ್ರಕರಣ ದಾಖಲು

    ಬೀದಿ ನಾಯಿಯನ್ನ ದೊಣ್ಣೆಯಿಂದ ಹೊಡೆದು ಎರಡನೇ ಪ್ಲೋರ್‌ನಿಂದ ಬಿಸಾಕಿದ ಪಾಪಿ – ಪ್ರಕರಣ ದಾಖಲು

    ಬೆಂಗಳೂರು: ಈ ಭೂಮಿಯಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಅದೇ ರೀತಿ ಪ್ರಾಣಿಗಳಿಗೂ ಸಹ ಬದುಕುವ ಹಕ್ಕಿದೆ. ಆದರೇ ಬೆಂಗಳೂರಿನ ಜನ ಬೀದಿ ನಾಯಿಗಳನ್ನು ಕೊಲ್ಲುವ ಮಟ್ಟಕ್ಕೆ ಹೋಗ್ತಿದ್ದಾರೆ. ಅತಂಹ ಅನೇಕ ಘಟನೆಗಳು ನಡೆದಿವೆ. ಈಗ ಬೆಂಗಳೂರಿನ ಕೊಟ್ಟಿಗೆ ಪಾಳ್ಯದ ಬಳಿ ಇರುವ ಟೆಲಿಕಾಮ್ ಲೇಔಟ್‍ನಲ್ಲಿ ಯುವಕನೊಬ್ಬ ಕಳೆದ ವಾರ ಬೀದಿ ನಾಯಿಯೊಂದನ್ನು ಅಟ್ಟಾಡಿಸಿಕೊಂಡು ದೊಣ್ಣೆಯಿಂದ ಹೊಡೆದು ಎರಡನೇ ಪ್ಲೋರ್‌ನಿಂದ ಬಿಸಾಕಿದ್ದಾನೆ.

    ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಪ್ರಾಣಿ ದಯಾ ಸಂಘದವರು ದೂರು ನೀಡಲು ಹೋದಾಗ ಪೊಲೀಸರು ಮೊದಲಿಗೆ ದೂರು ದಾಖಲಿಸಲು ಹಿಂದೇಟು ಹಾಕಿದ್ರು. ಬಳಿಕ ದೂರು ದಾಖಲಿಸಿಕೊಂಡಿದ್ದಾರೆ. ನಂತರ ನಾಯಿ ಮೇಲೆ ಹಲ್ಲೆ ಮಾಡಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೇ ಆ ನಾಯಿ ಏನಾಗಿದೆ ಎಂಬುದು ತಿಳಿದುಬಂದಿಲ್ಲ. ಇದನ್ನೂ ಓದಿ: ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳೋದಾದ್ರೆ ನಿಮ್ಮ ಅಭ್ಯರ್ಥಿಯನ್ನ ಕಣದಿಂದ ಹಿಂದೆ ಸರಿಸಿ: JDSಗೆ ಸಿದ್ದು ಸವಾಲ್ 

    ಬೀದಿ ನಾಯಿ ಮೇಲೆ ಹೀಗೆ ಹಲ್ಲೆ ಮಾಡಿ ಪ್ರಾಣ ತಗಿಯೋದು ಕ್ರಿಮಿನಲ್ ಅಪರಾಧ ಎಂದು ಕಾನೂನಿದೆ. ಜನ ಅದನ್ನು ಪಾಲಿಸಬೇಕು. ಪ್ರಾಣಿಗಳನ್ನು ಮಾನವೀಯತೆಯಿಂದ ನೋಡಬೇಕು ಎಂದು ಪ್ರಾಣಿ ದಯಾ ಸಂಘದ ಸದಸ್ಯರು ಮನವಿ ಮಾಡಿದ್ದಾರೆ.

    ಒಂದು ಜೀವವನ್ನು ತೆಗೆಯುವ ಹಕ್ಕು ಯಾರಿಗೂ ಇಲ್ಲ. ಪರಿಸರದಲ್ಲಿ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ನಿಯತ್ತಿನ ಪ್ರಾಣಿ ಅಂತಲೇ ಕರೆಸಿಕೊಳ್ಳೋ ನಾಯಿಯನ್ನ ಯಾಕೇ ಹೀಗೆ ಮಾಡ್ತಾರೆ. ಇನ್ಯಾರೂ ಈ ರೀತಿ ಮಾಡಬಾರದು ಅಂತಹ ಶಿಕ್ಷೆಯನ್ನ ಕಾನೂನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಧೀಮಂತ ಜನ ನಾಯಕ: ಪ್ರಚಾರ ಸಮಯದಲ್ಲಿ ತಂದೆ ಸಾಧನೆಯನ್ನು ಗುಣಗಾನ ಮಾಡಿದ ವಿಜಯೇಂದ್ರ 

  • ಬೀದಿ ನಾಯಿಗಳ ಅಟ್ಟಹಾಸಕ್ಕೆ 3 ವರ್ಷದ ಬಾಲಕಿ ಬಲಿ

    ಬೀದಿ ನಾಯಿಗಳ ಅಟ್ಟಹಾಸಕ್ಕೆ 3 ವರ್ಷದ ಬಾಲಕಿ ಬಲಿ

    ಭೋಪಾಲ್: ಮೂರು ವರ್ಷದ ಬಾಲಕಿ ಮೇಲೆ ಬೀದಿನಾಯಿಗಳು ದಾಳಿ ನಡೆಸಿ ಕೊಂದಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪಾಡ್ಲಿಯಾ ಗ್ರಾಮದಲ್ಲಿ ನಡೆದಿದೆ.

    ಜಿಲ್ಲಾ ಕೇಂದ್ರದಿಂದ ಸುಮಾರು ಏಳು ಕಿಮೀ ದೂರದಲ್ಲಿರುವ ಗ್ರಾಮದ ಜಮೀನೊಂದರಲ್ಲಿ ಗುರುವಾರ ಸಂಜೆ ಮಗು ಆಟವಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮಾವನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಪರ್ಣಾ ಯಾದವ್

    ಬಾಲಕಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಬೀದಿನಾಯಿಗಳ ಹಿಂಡು ಏಕಾಏಕಿ ಆಕೆಯ ಮೇಲೆ ದಾಳಿ ನಡೆಸಿದೆ. ಆಕೆಯ ಕಿರುಚಾಟವನ್ನು ಕೇಳಿ ಅಕ್ಕಪಕ್ಕದಲ್ಲಿಯೇ ಕೆಲಸ ಮಾಡುತ್ತಿದ್ದ ಆಕೆಯ ಪೋಷಕರು ಗಾಬರಿಯಿಂದ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಅವರು ನಾಯಿಗಳನ್ನು ಓಡಿಸುವಷ್ಟರಲ್ಲಿ ಮಗು ರಕ್ತಸ್ರಾವ ಮತ್ತು ತೀವ್ರವಾಗಿ ಗಾಯಗೊಂಡಿತ್ತು.

    ಬಾಲಕಿಯನ್ನು ನಂದಿನಿ ಎಂದು ಗುರುತಿಸಲಾಗಿದ್ದು, ಆಕೆಯನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಪೋಸ್ಟ್ ನ ಉಸ್ತುವಾರಿ ಬಿ.ಆರ್. ಪಾಲ್ ತಿಳಿಸಿದ್ದಾರೆ. ಇದನ್ನೂ ಓದಿ: 16ರ ಹುಡುಗಿ ಮೇಲೆ ತಂದೆ, ಸಹೋದರನಿಂದಲೇ 2ವರ್ಷ ನಿರಂತರ ಅತ್ಯಾಚಾರ

     

  • ಅದ್ಧೂರಿಯಾಗಿ ಬೀದಿ ನಾಯಿಯ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ ಸ್ನೇಹಿತರು

    ಅದ್ಧೂರಿಯಾಗಿ ಬೀದಿ ನಾಯಿಯ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ ಸ್ನೇಹಿತರು

    ಚಿಕ್ಕಬಳ್ಳಾಪುರ: ಬೀದಿ ನಾಯಿಯೊಂದರ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರದ ನಾಲ್ಕನೇ ವಾರ್ಡ್ ನಲ್ಲಿ ನಡೆದಿದೆ.

    ನಗರದ ನಾಲ್ಕನೇ ವಾರ್ಡಿನ ಎಡಿ ಕಾಲೋನಿಯ ಸ್ನೇಹಿತರ ಬಳಗದಿಂದ ಬೀದಿ ನಾಯಿಗೆ ಸನ್ಮಾನ ಮಾಡಲಾಗಿದೆ. ಕೆಲವು ವರ್ಷಗಳ ಹಿಂದೆ ಸಾಕು ನಾಯಿಯನ್ನು ತಂದು ದೇವಸ್ಥಾನದ ಆವರಣದಲ್ಲಿ ಬಿಟ್ಟು ಅದಕ್ಕೆ ಶೇರ್ ಖಾನ್ ಎಂದು ಹೆಸರು ಸಹ ಇಡಲಾಗಿತ್ತು. ಈಗ ಅದೇ ಶೇರ್ ಖಾನ್ ಹುಟ್ಟು ಹಬ್ಬದ ಪ್ರಯುಕ್ತ ಪ್ರಮುಖ ಬೀದಿಗಳಲ್ಲಿ ಫ್ಲೆಕ್ಸ್ ಕಟ್ಟಿ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ. ಈ ವೇಳೆ ಪಟಾಕಿ ಹೊಡೆದು ಯುವಕರು ಸಂಭ್ರಮಿಸಿದ್ದಾರೆ. ಇದನ್ನೂ ಓದಿ:  ಮೋದಿ ಸರ್ಕಾರದಿಂದ ಲವ್ ಲೆಟರ್ ಬಂದಿದೆ – ಆಪ್ ನಾಯಕ

    ಥೇಟ್ ರಾಜಕೀಯ ಮುಖಂಡರಿಗೆ ಅದ್ಧೂರಿ ಸನ್ಮಾನ ಮಾಡುವ ರೀತಿಯಲ್ಲಿ, ಸ್ಥಳೀಯ ಯುವಕರ ಶೇರ್ ಖಾನ್‍ಗೆ ಮಾಡಿದ್ದಾರೆ. ಕೇಕ್ ಮೇಲೆ ನಾಯಿಯ ಭಾವಚಿತ್ರ ಹಾಕಿಸಿ ಕಟ್ ಮಾಡಿಸಿದ್ದಾರೆ. ತಮ್ಮ ಅಚ್ಚುಮೆಚ್ಚಿನ ನಾಯಿಗೆ ಶಾಲು ತೋಡಿಸಿ ಹೂವಿನ ಹಾರ ಹಾಕಿ ಸಂಭ್ರಮಿಸುವ ಮೂಲಕ ವಿನೂತನವಾಗಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಇದನ್ನೂ ಓದಿ:  ಮೀನು ಹಿಡಿಯಲು ಹೋದ ಯುವಕ ನೀರುಪಾಲು

    ಹುಟ್ಟುಹಬ್ಬಕ್ಕೆ ಏರಿಯಾದ ಗೆಳೆಯರೆಲ್ಲ ಒಂದೆಡೆ ಸೇರಿ ನಾಯಿಯನ್ನು ಕರೆ ತಂದು ಮನುಷ್ಯನ ರೀತಿಯಲ್ಲಿ ಗೌರವ ನೀಡಿದ್ದು ವಿಶೇಷವಾಗಿದೆ. ಇದನ್ನೂ ಓದಿ:  ಪೆಟ್ರೋಲ್ ಸುರಿದು ಪತಿಯನ್ನು ಹತ್ಯೆಗೈದು ಚರಂಡಿಗೆ ಶವ ಎಸೆದ್ಳು

    ಈ ಕುರಿತು ಪ್ರತಿಕ್ರಿಯಿಸಿದ ಯುವಕರು, ನಮ್ಮ ಏರಿಯಾದಲ್ಲಿ ಪೊಲೀಸರ ತರ ಕೆಲಸವನ್ನು ಈ ಶೇರ್ ಖಾನ್ ಮಾಡುತ್ತೆ. ತಮ್ಮ ಏರಿಯಾಗೆ ಬೀಟ್ ಪೊಲೀಸರ ಅವಶ್ಯಕತೆಯಿಲ್ಲ. ವಾರ್ಡಿನಲ್ಲಿ ಕಳ್ಳ ಖದೀಮರನ್ನು ಬೆನ್ನತ್ತಿ ಹಿಡಿಯುತ್ತೆ. ಬೇರೆ ಬೀದಿ ನಾಯಿಗಳು ಬಂದರೆ ವಾಪಸ್ ಓಡಿಸುತ್ತೆ. ಅದಕ್ಕೆ ನಾವು ನಾಯಿಗೂ ಗೌರವ ಕೊಟ್ಟು ಮಾನವೀಯತೆ ಮೆರೆದಿದ್ದೇವೆ ಎಂದು ಹೇಳಿದ್ದಾರೆ.

  • ನಗರದ ಬೀದಿನಾಯಿಗಳಿಗೆ ಬಿಬಿಎಂಪಿಯಿಂದಲೇ ಚಿಕನ್, ಮೊಟ್ಟೆ, ಹಾಲು, ಅನ್ನ

    ನಗರದ ಬೀದಿನಾಯಿಗಳಿಗೆ ಬಿಬಿಎಂಪಿಯಿಂದಲೇ ಚಿಕನ್, ಮೊಟ್ಟೆ, ಹಾಲು, ಅನ್ನ

    ಬೆಂಗಳೂರು: ಲಾಕ್ ಡೌನ್ ಸಂಧರ್ಭದಲ್ಲಿ ಬೀದಿನಾಯಿಗಳು ಹಸಿವಿನಿಂದ ಒದ್ದಾಡಬಾರದೆಂದು ಬಿಬಿಎಂಪಿ ವತಿಯಿಂದ ಎರಡು ದಿನಕ್ಕೊಮ್ಮೆ ಅನ್ನ, ಚಿಕನ್, ಮೊಟ್ಟೆಯ ಊಟವನ್ನು ನೀಡಲಾಗುತ್ತಿದೆ.

    ಲಾಕ್‍ಡೌನ್ ಸಂದರ್ಭದಲ್ಲಿ ಬೀದಿಬದಿ ಹೋಟೆಲ್‍ಗಳ ಸಂಖ್ಯೆ ಕಡಿಮೆ, ಸಭೆ ಸಮಾರಂಭಗಳು ಸ್ಥಗಿತವಾಗಿ ಬೀದಿನಾಯಿಗಳಿಗೂ ಆಹಾರ ಸಿಗದಂತಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಸುಮಾರು 3 ಲಕ್ಷ ಬೀದಿ ನಾಯಿಗಳಿಗೂ ಬಿಬಿಎಂಪಿಯೇ, ಎಬಿಸಿ ಚಿಕಿತ್ಸೆಯ ಗುತ್ತಿಗೆದಾರರ ಮೂಲಕ ಆಹಾರ ತಯಾರಿಸಿ ನೀಡುತ್ತಿದೆ.

    ಈ ಬಗ್ಗೆ ಮಾಹಿತಿ ನೀಡಿದ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕರಾದ ಎಸ್ ಎಂ ಮಂಜುನಾಥ ಶಿಂಧೆ, ಲಾಕ್ ಡೌನ್ ಆರಂಭ ಆದಾಗಿನಿಂದ ಮುಗಿಯುವವರೆಗೆ ಆಹಾರ ನೀಡಲು 15 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಪ್ರತಿ ಎಂಟು ವಲಯಗಳಲ್ಲಿಯೂ ಸಹ ಪ್ರತಿನಿತ್ಯ 3000 ಬೀದಿನಾಯಿಗಳಿಗೆ ಆಹಾರ ಕೊಡಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೀದಿ ನಾಯಿಯ ಕಣ್ಣೀರಿನ ಕೃತಜ್ಞತೆ -ವಿಡಿಯೋ ವೈರಲ್

    ಆಹಾರ ತಯಾರಿಸಲು ಹಾಲು, ಅಕ್ಕಿ, ಚಿಕನ್, ಮೊಟ್ಟೆ ಕೊಡಲಾಗ್ತಿದೆ. ಬೇಯಿಸಲು ಸಾಧ್ಯವಾಗದ ಕಡೆ ತಯಾರಿಸಿದ ನಾಯಿಗಳ ರೆಡಿಮೇಡ್ ಆಹಾರ ಕೊಡಲಾಗ್ತಿದೆ. ಪ್ರತಿ ವಲಯಗಳಲ್ಲಿ 30-40 ಪ್ರಾಣಿಪ್ರಿಯರು ಈ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

    ಕಳೆದ ಬಾರಿ ಲಾಕ್ ಡೌನ್ ನಲ್ಲಿ ಎಬಿಸಿ ಚಿಕಿತ್ಸೆ ನಡೆಯದ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಆಹಾರ ಕೊಡುವಂತೆ ತಿಳಿಸಲಾಗಿತ್ತು. ಆದರೆ ಈ ಬಾರಿ ಲಾಕ್ ಡೌನ್ ನಲ್ಲೂ ಎಬಿಸಿ, ರೇಬೀಸ್ ಚುಚ್ಚುಮದ್ದು ನೀಡಲಾಗುತ್ತಿದೆ ಎಂದು ತಿಳಿಸಿದರು.

  • ಬೀದಿನಾಯಿಗಳಿಗೆ ಊಟ ನೀಡಿ ಮಾನವೀಯತೆ ಮೆರೆದ ಪ್ರಾಣಿಪ್ರೀಯರು

    ಬೀದಿನಾಯಿಗಳಿಗೆ ಊಟ ನೀಡಿ ಮಾನವೀಯತೆ ಮೆರೆದ ಪ್ರಾಣಿಪ್ರೀಯರು

    ಬೆಂಗಳೂರು: ಕೊರೊನಾ ಸಂಕಷ್ಟದಿಂದಾಗಿ ಒಂದು ಹೊತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿ ಇರುವಾಗ ಇಲ್ಲೊಂದು ಸಂಸ್ಥೆಯ ಪ್ರಾಣಿ ಪ್ರೀಯರು ಬೀದಿ ನಾಯಿಗಳಿಗೆ ಊಟವನ್ನು ನೀಡುತ್ತಾ ಮಾನವೀಯತೆಯನ್ನು ಮೆರೆಯುತ್ತಿದ್ದಾರೆ.

    ಲಾಕ್‍ಡೌನ್‍ ಎಫೆಕ್ಟ್ ನಿಂದಾಗಿ, ಆಹಾರಕ್ಕಾಗಿ ಪ್ರಾಣಿ, ಪಕ್ಷಿಗಳು ಪರದಾಡುವಂತಾಗಿದೆ. ತುತ್ತು ಅನ್ನ, ಬೊಗಸೆ ನೀರಿಗಾಗಿ ಬೀದಿ ನಾಯಿಗಳು, ಪಕ್ಷಿಗಳು ಅಲೆದಾಡುತ್ತಿವೆ. ಬೀದಿನಾಯಿಗಳಿಗೆ ಊಟ ಹಾಕೋರು ಇಲ್ಲ. ಇದನ್ನ ಅರಿತ ರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಸಂಸ್ಥೆ, ನಗರದ ಹಲವು ಭಾಗಗಳಿಗೆ ತೆರಳಿ ಬೀದಿ ನಾಯಿಗಳಿಗೆ ಊಟ ನೀಡುತ್ತಿದ್ದಾರೆ.

    ನಗರದ ಅಗ್ರಹಾರ ದಾಸರಹಳ್ಳಿ, ರಾಜಾಜಿನಗರ ಸೇರಿದಂತೆ ಹಲವೆಡೆ ಪ್ರತಿದಿನ 150ಕ್ಯೂ ಹೆಚ್ಚು ಬೀದಿ ನಾಯಿಗಳಿಗೆ ಮೂರು ಹೊತ್ತಿನ ಊಟ ನೀಡುತ್ತಿದ್ದಾರೆ. ಜೊತೆಗೆ ಪುಟ್ಟ ಪುಟ್ಟ ನಾಯಿ ಮರಿಗಳಿಗೂ ಊಟ ವಿತರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಡಿ ಬಾಸ್ ಮನವಿಗೆ ಭರ್ಜರಿ ಪ್ರತಿಕ್ರಿಯೆ-2 ದಿನದಲ್ಲಿ 25 ಲಕ್ಷ ಸಂಗ್ರಹ

    ಮನುಷ್ಯರಿಗೆ ಊಟ ಸಿಗುತ್ತದೆ. ಆದರೆ ಬೀದಿ ನಾಯಿಗಳು ಊಟ ಸಿಗದೇ ಪರದಾಡುತ್ತಿವೆ. ಅದರಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಕೈಗಾರಿಕೆಗಳು ಆರಂಭವಾಗದೇ ಇರೋದ್ರಿಂದ ಹಸಿವಿನಿಂದ ಸಾಯುತ್ತಿವೆ. ಹೀಗಾಗಿ ಪ್ರಾಣಿಗಳಿಗೆ ಆಹಾರವನ್ನು ನೀಡುತ್ತಿದ್ದೇವೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಸಂಸ್ಥೆಯ ಅಧ್ಯಕ್ಷ, ಅಭಿಷೇಕ್ ಹೇಳಿದ್ದಾರೆ.