Tag: stree Shakti Association

  • ಡಿಸಿಸಿ ಬ್ಯಾಂಕ್ ಅಕ್ರಮ ಮುಚ್ಚಲು ಕಾಂಗ್ರೆಸ್‌ನಿಂದಲೇ ಸ್ತ್ರೀ ಶಕ್ತಿ ಸಂಘಗಳ ಪ್ರತಿಭಟನೆ: ಹೆಚ್‌ಡಿಕೆ ಬಾಂಬ್

    ಡಿಸಿಸಿ ಬ್ಯಾಂಕ್ ಅಕ್ರಮ ಮುಚ್ಚಲು ಕಾಂಗ್ರೆಸ್‌ನಿಂದಲೇ ಸ್ತ್ರೀ ಶಕ್ತಿ ಸಂಘಗಳ ಪ್ರತಿಭಟನೆ: ಹೆಚ್‌ಡಿಕೆ ಬಾಂಬ್

    ಬೆಂಗಳೂರು: ಕೋಲಾರದ (Kolar) ಡಿಸಿಸಿ ಬ್ಯಾಂಕ್‌ನಲ್ಲಿ (DCC Bank) ದೊಡ್ಡ ಅಕ್ರಮ ನಡೆದಿದೆ. ಇದನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ನವರೇ (Congress) ಮಹಿಳಾ ಸ್ತ್ರೀ ಶಕ್ತಿ ಸಂಘಗಳಿಂದ (Stree Shakti Association) ಪ್ರತಿಭಟನೆ ಮಾಡಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (H.D.Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ.

    ಕೋಲಾರದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಂದ ಸಾಲ ಕಟ್ಟಲ್ಲ ಎಂಬ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಅವರು, ಕೋಲಾರದಲ್ಲಿ ಸ್ತ್ರೀ ಶಕ್ತಿ ಸಂಘಗಳು ಸಾಲಮನ್ನಾ ಮಾಡಿ ಎಂದು ಗಲಾಟೆ ಮಾಡುತ್ತಿದ್ದಾರೆ. ಅದನ್ನು ಮಾಡಿಸುತ್ತಾ ಇರುವವರೇ ಕಾಂಗ್ರೆಸ್‌ನವರು ಎಂದು ಆರೋಪ ಮಾಡಿದರು. ಇದನ್ನೂ ಓದಿ: ಗೃಹಲಕ್ಷ್ಮೀ ಆ್ಯಪ್ ಹ್ಯಾಕ್ ಬಗ್ಗೆ ಜಾರಕಿಹೊಳಿಯನ್ನೇ ಕೇಳಿ ಎಂದ ಜಾರ್ಜ್

    ಕೋಲಾರದ ಡಿಸಿಸಿ ಬ್ಯಾಂಕ್‌ನಲ್ಲಿ ಅಕ್ರಮ ಆಗಿದೆ. ಅದೊಂದು ದೊಡ್ಡ ಕರ್ಮಕಾಂಡ. ಡಿಸಿಸಿ ಬ್ಯಾಂಕ್‌ನಲ್ಲಿ ಲೂಟಿ ಹೊಡೆದಿದ್ದಾರೆ. ಅದು ತನಿಖೆ ನಡೆದರೆ ಯಾರು ಯಾರು ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ. ಹೀಗಾಗಿ ಸ್ತ್ರೀ ಶಕ್ತಿ ಗುಂಪುಗಳನ್ನು ಮುಂದೆ ಬಿಟ್ಟು ಕಾಂಗ್ರೆಸ್‌ನವರು, ನಿರ್ದೇಶಕರು ಪ್ರತಿಭಟನೆ ಮಾಡಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಎಂದು ಒತ್ತಾಯ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್‍ನಿಂದಲೇ ಸರ್ವರ್ ಹ್ಯಾಕ್ – ಇವಿಎಂ ಹ್ಯಾಕ್ ಮಾಡಿ ಕಾಂಗ್ರೆಸ್ ಗೆದ್ದಿರಬಹುದು ಎಂದ ಮುನಿಸ್ವಾಮಿ

  • ವಿಧವೆಗೆ ಪೆಟ್ರೋಲ್ ಬಂಕ್ ಕೊಡಿಸುವುದಾಗಿ 12 ಲಕ್ಷ ರೂ. ನಾಮ

    ವಿಧವೆಗೆ ಪೆಟ್ರೋಲ್ ಬಂಕ್ ಕೊಡಿಸುವುದಾಗಿ 12 ಲಕ್ಷ ರೂ. ನಾಮ

    ದಾವಣಗೆರೆ: ಪೆಟ್ರೋಲ್ ಬಂಕ್ ಕೊಡಿಸುವ ಆಮೀಷ ನೀಡಿ ಸ್ತ್ರೀ ಶಕ್ತಿ ಸಂಘದ ಒಕ್ಕೂಟದ ಅಧ್ಯಕ್ಷೆಯೊಬ್ಬಳು ಸದಸ್ಯೆಗೆ ವಂಚನೆ ಮಾಡಿರುವ ಪ್ರಕರಣ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

    ತಾಲೂಕಿನ ಕಾಕನೂರು ಗ್ರಾಮ ದಿವ್ಯಾ ವಂಚನೆ ಮಾಡಿರುವ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ. ದಿವ್ಯಾ ಸಂಘದ ಸದಸ್ಯೆ ಯಕ್ಕೆಗುಂದಿಯ ಪದ್ಮಾವತಿ ಎಂಬವರಿಗೆ ಸುಮಾರು 12 ಲಕ್ಷ ರೂ. ವಂಚಿಸಿದ್ದಾಳೆ ಎನ್ನುವ ಆರೋಪ ಕೇಳಿ ಬರುತ್ತಿದೆ. ದಿವ್ಯಾ ಹಾಗೂ ಪದ್ಮಾವತಿ ಸ್ತ್ರೀ ಶಕ್ತಿ ಸಂಘದ ಪ್ರಮುಖರಾಗಿದ್ದು, ಕಳೆದ ಆರು ವರ್ಷಗಳಿಂದ ಇಬ್ಬರು ಪರಿಚಯಸ್ಥರಾಗಿದ್ದರು. ಈ ವೇಳೆ ದಿವ್ಯಾ, ಪದ್ಮಾವತಿಗೆ ವಿಧವೆಯರಿಗೆ ಸರ್ಕಾರಿಂದ ಸಬ್ಸಿಡಿಯಾಗಿ ಪೆಟ್ರೋಲ್ ಬಂಕ್ ಮಾಡಿಸಿಕೊಡುವುದಾಗಿ ಆಮೀಷ ತೋರಿಸಿದ್ದಾಳೆ.

    ಮೋಸ ಹೋದ ಪದ್ಮಾವತಿ

    ಪೆಟ್ರೋಲ್ ಬಂಕ್ ಬಂದರೆ ಜೀವನೋಪಾಯಕ್ಕೆ ದಾರಿಯಾಗುತ್ತೆ ಎಂದು ಇದನ್ನು ನಂಬಿದ ಪದ್ಮಾವತಿ ನಿರಂತರವಾಗಿ ಒಟ್ಟು ಬ್ಯಾಂಕ್ ಹಾಗೂ ಮುಂಗಡವಾಗಿ ಒಟ್ಟು ಸುಮಾರು 12 ಲಕ್ಷ ರೂ. ಹಣ ನೀಡಿದ್ದಾರೆ. ಆದರೆ ಒಂದು ವರ್ಷ ಕಳೆದರೂ ಅವರಿಂದ ಯಾವುದೇ ಕೆಲಸವಾಗಿಲ್ಲ. ಪೆಟ್ರೋಲ್ ಬಂಕ್ ಬಗ್ಗೆ ಕೇಳಿದರೆ ಹಾರಿಕೆ ಉತ್ತರ ನೀಡಿ ತಪ್ಪಿಸಿಕೊಂಡಿದ್ದಾಳೆ.

    ಪದ್ಮಾವತಿ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದಿದ್ದು, ದಿವ್ಯಾ ತಪ್ಪಿಸಿಕೊಂಡು ಓಡಾಡುತ್ತಿದ್ದಾಳೆ. ಅಲ್ಲದೆ, ನೀವೇನಾದರೂ ತೀವ್ರ ಒತ್ತಾಯ ಮಾಡಿದರೆ ನಾನು ಏನಾದರೂ ಮಾಡಿಕೊಳ್ಳುತ್ತೇನೆ. ನಂತರ ಇದಕ್ಕೆ ನೀವೇ ಹೊಣೆಗಾರರು ಎಂದು ಬೆದರಿಕೆ ಹಾಕುತ್ತಿದ್ದಾಳೆ. ಹೀಗಾಗಿ ಪದ್ಮಾವತಿಗೆ ದಿಕ್ಕು ತೋಚದಂತಾಗಿದೆ. ಇದೀಗ ಪದ್ಮಾವತಿ ತಾವು ಕಳೆದುಕೊಂಡಿರುವ ತಮ್ಮ ಹಣ ಕೊಡಿಸುವಂತೆ ಕೋರಿ ಚನ್ನಗಿರಿಯ ಸಂತೆಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.