Tag: stree 2

  • ಮತ್ತೆ ಐಟಂ ಹಾಡಿಗೆ ಸೊಂಟ ಬಳುಕಿಸಿದ ‘ಕಾವಾಲಯ್ಯ’ ನಟಿ ತಮನ್ನಾ

    ಮತ್ತೆ ಐಟಂ ಹಾಡಿಗೆ ಸೊಂಟ ಬಳುಕಿಸಿದ ‘ಕಾವಾಲಯ್ಯ’ ನಟಿ ತಮನ್ನಾ

    ಹಾಟ್ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ನಟನೆಗೂ ಸೈ ಕುಣಿತಕ್ಕೂ ಜೈ ಈಗಾಗಲೇ ಎಂಬುದನ್ನು ಪ್ರೂವ್ ಮಾಡಿದ್ದಾರೆ. ‘ಸ್ತ್ರಿ 2’ (Stree 2) ಸಿನಿಮಾದಲ್ಲಿ ಹೊಸ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಮತ್ತೆ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ನಟಿಯ ಹೊಸ ಸಾಂಗ್ ಈಗ ಸದ್ದು ಮಾಡುತ್ತಿದೆ.

    ತಮನ್ನಾ ಯಾವುದಾದರೂ ಹಾಡಿಗೆ ಹೆಜ್ಜೆ ಹಾಕ್ತಾರೆ ಅಂದರೆ ಆ ಹಾಡು ಸೂಪರ್ ಹಿಟ್ ಎಂದೇ ಅರ್ಥ. ಅದಕ್ಕೆ ‘ಕೆಜಿಎಫ್’ (KGF) ಸಿನಿಮಾದ ಜೋಕೆ ಸಾಂಗ್ ಮತ್ತು ‘ಜೈಲರ್’ (Jailer) ಸಿನಿಮಾದ ಕಾವಾಲಯ್ಯ ಹಾಡುಗಳೇ ಸಾಕ್ಷಿ. ಇದೀಗ ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ (Shraddha Kapoor) ನಟನೆಯ ‘ಸ್ತ್ರಿ 2’ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ‘ಆಜ್ ಕಿ ರಾತ್’ ಎಂಬ ಹಾಡಿನಲ್ಲಿ ನಟಿ ಸಖತ್ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

    ಈ ಸಾಂಗ್‌ ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆದರೆ ಕಾವಾಲಯ್ಯ ಸಾಂಗ್‌ ರೀತಿಯೇ ಮತ್ತೆ ತಮನ್ನಾ ಕೆರಿಯರ್‌ಗೆ ಬ್ರೇಕ್ ಸಿಗುತ್ತಾ? ಕಾಯಬೇಕಿದೆ. ಅಮರ್ ಕೌಶಿಕ್ ನಿರ್ದೇಶನದ ‘ಸ್ತ್ರಿ 2’ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗಲಿದೆ.

    ಇನ್ನೂ ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಸಿನಿಮಾಗಳು ತಮನ್ನಾ ಕೈಯಲ್ಲಿವೆ. ಹೊಸ ಬಗೆಯ ಪಾತ್ರಗಳ ಮೂಲಕ ನಟಿ ಆಗಾಗ ಸದ್ದು ಮಾಡುತ್ತಲೇ ಇರುತ್ತಾರೆ.