Tag: stray dog

  • ಪುರಸಭೆ ಸದಸ್ಯೆ ಮೇಲೆ ಬೀದಿನಾಯಿಗಳ ದಾಳಿ – ಈಗ್ಲಾದ್ರೂ ಸಮಸ್ಯೆಗೆ ಪರಿಹಾರ ನೀಡಿ ಎಂದ ಜನ

    ಪುರಸಭೆ ಸದಸ್ಯೆ ಮೇಲೆ ಬೀದಿನಾಯಿಗಳ ದಾಳಿ – ಈಗ್ಲಾದ್ರೂ ಸಮಸ್ಯೆಗೆ ಪರಿಹಾರ ನೀಡಿ ಎಂದ ಜನ

    ಚಿಕ್ಕೋಡಿ: ಬೀದಿನಾಯಿಗಳು (Stray Dog) ಪುರಸಭೆ ಸದಸ್ಯೆ (Municipal Council Member) ಮೇಲೆ ದಾಳಿ ಮಾಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಜರುಗಿದೆ.

    dog

    ಹುಕ್ಕೇರಿ ಪುರಸಭೆ ವಾರ್ಡ್ ನಂ.16ರ ಸದಸ್ಯೆ ಡಲಾಯತ್ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಕೂಡಲೇ ಹುಕ್ಕೇರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಇದನ್ನೂ ಓದಿ: ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ

    ಹುಕ್ಕೇರಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಗಲ್ಲಿ ಗಲ್ಲಿಗಳಲ್ಲಿ ಬೀದಿನಾಯಿಗಳ ಗುಂಪು ಸಾರ್ವಜನಿಕರ ಮೇಲೆ ದಾಳಿಗೆ ಮುಂದಾಗುತ್ತಿವೆ. ಚಿಕ್ಕ ಮಕ್ಕಳು, ವಯೋವೃದ್ಧರು ರಸ್ತೆಗಳಲ್ಲಿ ಓಡಾಡಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಪುರಸಭೆ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಪಾರ್ಟ್‍ಮೆಂಟ್‍ನ 19ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು

    Live Tv
    [brid partner=56869869 player=32851 video=960834 autoplay=true]

  • ಬೀದಿ ನಾಯಿಗಳಿಗೆ ತೊಂದರೆ ಕೊಡೋರ ವಿರುದ್ಧ ಕ್ರಮಕೈಗೊಳ್ಳಿ – ಪ್ರಧಾನಿಗೆ ಪತ್ರ ಬರೆದ ಕುಟುಂಬ

    ಬೀದಿ ನಾಯಿಗಳಿಗೆ ತೊಂದರೆ ಕೊಡೋರ ವಿರುದ್ಧ ಕ್ರಮಕೈಗೊಳ್ಳಿ – ಪ್ರಧಾನಿಗೆ ಪತ್ರ ಬರೆದ ಕುಟುಂಬ

    ಬೆಳಗಾವಿ: ಬೀದಿ ನಾಯಿಗಳಿಗೆ (Stray Dog) ತೊಂದರೆ ಕೊಡುವುದಲ್ಲದೇ ಅವುಗಳಿಗೆ ಉಚಿತವಾಗಿ ಆಹಾರ ಕೊಡುತ್ತಿರುವ ಕುಟುಂಬದವರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿರುವುದಾಗಿ ಬೆಳಗಾವಿ ಪೊಲೀಸರಿಗೆ ದೂರು ನೀಡಿದರೂ, ಕ್ರಮಕೈಗೊಳ್ಳದ ಹಿನ್ನೆಲೆ ಸಂತ್ರಸ್ತರು ಪ್ರಧಾನಿಗೆ (Prim Minister) ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

    ಬೆಳಗಾವಿಯ (Belgavi) ಖಾಸಭಾಗನ ಮಾರುತಿ ಗಲ್ಲಿಯ ನಿವಾಸಿ ಅನಿತಾ ದೊಡ್ಡಮನಿ ಕುಟುಂಬಸ್ಥರ ಮೇಲೆ ವಕೀಲ ವಿನಾಯಕ್ ವಲೇಪೂರಕರ ಎಂಬುವವರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ಪ್ರಕರಣ ಹಿನ್ನೆಲೆ: ಅನಿತಾ ದೊಡ್ಡಮನಿ ಕುಟುಂಬಸ್ಥರು ಕಳೆದ ಹಲವಾರು ವರ್ಷಗಳಿಂದ ಬೆಳಗಾವಿ ಅನಿಮಲ್ ವೇಲ್ಫೇರ್ ಅಸೋಸಿಯೇಷನ್ (ಎನ್‌ಜಿಓ) ತೆಗೆದುಕೊಂಡು ಸರ್ಕಾರದ ಅನುಮತಿ ಪಡೆದು ನಗರದಲ್ಲಿರುವ ಬೀದಿ ನಾಯಿಗಳಿಗೆ ಉಚಿತವಾಗಿ ಊಟ ಹಾಕುತ್ತಿದ್ದಾರೆ. ಆದರೆ, ಬೀದಿ ನಾಯಿಗಳಿಗೆ ಊಟ ನೀಡದಂತೆ ಅನಿತಾ ಕುಟುಂಬಸ್ಥರಿಗೆ ವಕೀಲ ವಿನಾಯಕ್ ದಬ್ಬಾಳಿಕೆ ಮಾಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕಳೆದ ಒಂಭತ್ತು ತಿಂಗಳ ಹಿಂದೆಯೇ ಶಾಹಾಪುರ ಪೊಲೀಸ್ ಠಾಣೆಯಲ್ಲಿ ಅನಿತಾ ಅವರು ದೂರು ದಾಖಲಿಸಿದ್ದಾರೆ.

    ಆದರೆ ನಾಯಿಗಳಿಗೆ ತೊಂದರೆ ಹಾಗೂ ನಮಗೆ ಮಾನಸಿಕ ಹಿಂಸೆ ನೀಡುತ್ತಿದ್ದರೂ ಪೊಲೀಸರು ಸೂಕ್ತಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಹೀಗಾಗಿ ನಾವು ಬೀದಿ ನಾಯಿಗಳಿಗೆ ತೊಂದರೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ, ರಾಜ್ಯಪಾಲ ಹಾಗೂ ಪ್ರಧಾನಮಂತ್ರಿವರೆಗೂ ದೂರು ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ. ನಾಯಿಗಳಿಗೆ ಹಾಗೂ ನಮಗೆ ಕಿರುಕುಳ ನೀಡುತ್ತಿರುವ ವಿನಾಯಕ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶ ಚುನಾವಣೆ – `ಕೈ’ ನಾಯಕರ ಪಟ್ಟಿ ರಿಲೀಸ್

    Live Tv
    [brid partner=56869869 player=32851 video=960834 autoplay=true]

  • ಕರುಳು ಹರಿದು ಮಗುವನ್ನು ಕೊಂದ ಬೀದಿ ನಾಯಿಗಳು – ನಿವಾಸಿಗಳಿಂದ ಆಕ್ರೋಶ

    ಕರುಳು ಹರಿದು ಮಗುವನ್ನು ಕೊಂದ ಬೀದಿ ನಾಯಿಗಳು – ನಿವಾಸಿಗಳಿಂದ ಆಕ್ರೋಶ

    ಲಕ್ನೋ: 7 ತಿಂಗಳ ಮಗುವನ್ನು (Child) ಬೀದಿ ನಾಯಿಗಳು (Stray Dog) ಕ್ರೂರವಾಗಿ ಕಚ್ಚಿ ಕೊಂದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ನೋಯ್ಡಾ (Noida) ಸೆಕ್ಟರ್ 100ನ ಐಷಾರಾಮಿ ಲೋಟಸ್ ಬೌಲೆವಾರ್ಡ್ ಸೊಸೈಟಿಯಲ್ಲಿ ನಡೆದಿದೆ. ಘಟನೆಯಿಂದ ಬೆಚ್ಚಿ ಬಿದ್ದಿರುವ ನಿವಾಸಿಗಳು ಶ್ವಾನ ಪ್ರಿಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ವರದಿಗಳ ಪ್ರಕಾರ ಬೀದಿ ನಾಯಿಗಳ ದಾಳಿಗೆ ಬಲಿಯಾದ 7 ತಿಂಗಳ ಮಗುವನ್ನು ಅರವಿಂದ್ ಎಂದು ಗುರುತಿಸಲಾಗಿದೆ. ಮಗುವಿನ ತಾಯಿ ಸಪ್ನಾ ದೇವಿ ದಿನಗೂಲಿ ಕೆಲಸಕ್ಕೆ ಹೋಗುವಾಗ ಮಗುವನ್ನು ಆಟವಾಡಲು ಸೊಸೈಟಿಯೊಳಗೆ ಬಿಟ್ಟು ಹೋಗಿದ್ದಳು ಎನ್ನಲಾಗಿದೆ.

    ಈ ವೇಳೆ ಬೀದಿ ನಾಯಿಗಳು ಮಗುವಿನ ಮೇಲೆ ದಾಳಿ ನಡೆಸಿವೆ. ಮಗುವಿನ ಕಿರುಚಾಟ ಕೇಳಿ ಸೊಸೈಟಿ ನಿವಾಸಿಗಳು ಹೊರಬಂದಾಗ ಮಗು ಗಂಭೀರವಾಗಿ ಗಾಯಗೊಂಡಿತ್ತು. ಆಘಾತಕಾರಿ ವಿಷಯ ಎಂದರೆ ನಾಯಿಗಳು ಮಗುವಿನ ಹೊಟ್ಟೆಯನ್ನು ಸೀಳಿ ಕರುಳನ್ನೇ ಹರಿದು ಹಾಕಿವೆ. ತಕ್ಷಣ ಮಗುವನ್ನು ಸ್ಥಳೀಯರು ನೋಯ್ಡಾದ ಯಥಾರ್ಥ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಗು ಗಂಭೀರ ಗಾಯಗಳಿಂದಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ. ಇದನ್ನೂ ಓದಿ: ಕೇದಾರನಾಥ ಬಳಿ ಹೆಲಿಕಾಪ್ಟರ್ ಪತನ- ಇಬ್ಬರು ಪೈಲಟ್‌ ಸೇರಿ 6 ಮಂದಿ ದುರ್ಮರಣ

    ಬೀದಿ ನಾಯಿಗಳು ಹಲವು ವರ್ಷಗಳಿಂದ ಸೊಸೈಟಿಯಲ್ಲಿ ಹಲವರ ಮೇಲೆ ದಾಳಿ ಮಾಡಿವೆ ಎಂದು ನಿವಾಸಿಗಳು ಹೇಳಿದ್ದಾರೆ. ಆದರೆ ಕೆಲ ಶ್ವಾನ ಪ್ರಿಯರ ಅಡ್ಡಿಯಿಂದಾಗಿ ಬೀದಿ ನಾಯಿಗಳನ್ನು ಅಲ್ಲಿಂದ ಬೇರೆಡೆಗೆ ಒಯ್ಯಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಈ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಪಿಟ್‌ಬುಲ್ ತಳಿಯ ನಾಯಿ ತನ್ನ ಮಾಲೀಕನನ್ನೇ ಕೊಂದಿತ್ತು. ಇತ್ತೀಚೆಗೆ ಘಾಜಿಯಾಬಾದ್ ಪುರಸಭೆ ಪಿಟ್‌ಬುಲ್, ರಾಟ್‌ವೀಲರ್‌ನಂತಹ ಆಕ್ರಮಣಕಾರಿ ಸ್ವಭಾವದ ನಾಯಿಗಳನ್ನು ಸಾಕುವುದನ್ನು ನಿಷೇಧಿಸಿದೆ. ಇದನ್ನೂ ಓದಿ: ನಮಾಜ್ ವಿಷಯಕ್ಕೆ ಗಲಾಟೆ – ವಿವಿಯಿಂದ ಹೊರನಡೆದ 60 ನೈಜೀರಿಯಾ ವಿದ್ಯಾರ್ಥಿಗಳು

    Live Tv

    [brid partner=56869869 player=32851 video=960834 autoplay=true]

  • ಬೀದಿನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿ ಅಂದ್ರೆ ಕಾಡುಪ್ರಾಣಿಗಳ ಆಹಾರಕ್ಕಾಗಿ ಕಾಡಿಗೆ ಬಿಟ್ಟ ಪುರಸಭೆ

    ಬೀದಿನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿ ಅಂದ್ರೆ ಕಾಡುಪ್ರಾಣಿಗಳ ಆಹಾರಕ್ಕಾಗಿ ಕಾಡಿಗೆ ಬಿಟ್ಟ ಪುರಸಭೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನಗರ ಪ್ರದೇಶದಲ್ಲಿ ಬೀದಿ ನಾಯಿಗಳ (Stray Dog) ಕಾಟ ಮಿತಿಮೀರಿದೆ. ಜಿಲ್ಲೆಯಲ್ಲಿ ಬೀದಿ ನಾಯಿಗಳಿಂದ ಕಚ್ಚಿಸಿಕೊಂಡವರು ಬರೋಬ್ಬರಿ 6,533 ಜನ. ಹೀಗಾಗಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸ್ಥಳೀಯ ಆಡಳಿತ ನಾಯಿಗಳ ಸಂತಾನ ಹರಣ (Treatment for infertility) ಚಿಕಿತ್ಸೆಗೆ ಮುಂದಾಗಿದೆ.

    ಇದರ ಭಾಗವಾಗಿ ಖಾಸಗಿಯವರೊಂದಿಗೆ ಸ್ಥಳೀಯ ಆಡಳಿತದ ಸಿಬ್ಬಂದಿ ಸೇರಿ ಬೀದಿನಾಯಿಗಳನ್ನು ಹಿಡಿದು ಸಂತಾನ ಹರಣ ಚಿಕಿತ್ಸೆಗೆ ಮುಂದಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದ ಪುರಸಭೆಯ ಸಿಬ್ಬಂದಿ ಮಾತ್ರ ಬೀದಿನಾಯಿಗಳನ್ನು ಹಿಡಿಯುವುದರಲ್ಲಿ ರಾಕ್ಷಸತನ ತೋರಿದ್ದಾರೆ. ಇದನ್ನೂ ಓದಿ: IMA ನಡೆಸುತ್ತಿದ್ದ ಸ್ಕೂಲ್ ಬಂದ್‍ಗೆ ಹೈಕೋರ್ಟ್ ಆದೇಶ- ಮಕ್ಕಳ ಭವಿಷ್ಯದ ಬಗ್ಗೆ ಕಂಗಾಲಾದ ಪೋಷಕರು

    ಹೌದು ಹಳಿಯಾಳ ನಗರದಲ್ಲಿ ಬೀದಿ ಬೀದಿಗಳನ್ನು ಜಾಲಾಡಿದ ಪುರಸಭೆ ಸಿಬ್ಬಂದಿ ಬೇಕಾ ಬಿಟ್ಟಿ ಬೀದಿನಾಯಿಗಳನ್ನು ನಿಯಮ ಮೀರಿ ಹಿಂಸಾತ್ಮಕ ರೀತಿಯಲ್ಲಿ ಹಿಡಿದಿದ್ದಾರೆ. ಇನ್ನೂರಕ್ಕೂ ಹೆಚ್ಚು ಬೀದಿನಾಯಿಗಳನ್ನು ಹಿಡಿದ ಪುರಸಭೆ (Municipality) ಸಿಬ್ಬಂದಿ ಮಾಡಿದ್ದ ಕೆಲಸ ಮಾತ್ರ ಎಡವಟ್ಟಿನದ್ದು. ಬೀದಿ ನಾಯಿಗಳನ್ನು ಹಿಂಸಾತ್ಮಕವಾಗಿ ಹಿಡಿದು ಹಳಿಯಾಳದಿಂದ ಯಲ್ಲಾಪುರ ಭಾಗದ ಕಾಡಿನಲ್ಲಿ 80ಕ್ಕೂ ಹೆಚ್ಚು ನಾಯಿಗಳನ್ನು ತಂದು ಬಿಟ್ಟಿದ್ದಾರೆ.

    ಈ ಭಾಗದಲ್ಲಿ ಹೆಚ್ಚು ಕಾಡು (Wild) ಇದ್ದು, ಚಿರತೆ, ಹುಲಿಗಳಿವೆ. ಹೀಗೆ ಬೇಕಾಬಿಟ್ಟಿ ಕಾಡಿನಲ್ಲಿ ಬಿಟ್ಟಿದ್ದರಿಂದ ಇದೀಗ ಬೀದಿ ನಾಯಿಗಳಿಗೆ ಆಹಾರ ವಿಲ್ಲದೇ ಸಾಯುವ ಆತಂಕವಿದ್ದರೆ, ಕಾಡುಪ್ರಾಣಿಗಳಿಗೆ (Wild Animal) ಸುಲಭವಾಗಿ ಆಹಾರವಾಗುತ್ತಿವೆ. ಪುರಸಭೆ ಸಿಬ್ಬಂದಿಗಳು ಮಾಡಿದ ಅಚಾತುರ್ಯದ ಕೆಲಸಕ್ಕೆ ಪ್ರಾಣಿ ಪ್ರಿಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.  ಇದನ್ನೂ ಓದಿ: ಭಾರತ ಎಂದಿಗೂ ಹಿಂದೂರಾಷ್ಟ್ರ – ಮುಸ್ಲಿಂ ರಾಷ್ಟ್ರವಾಗಿಸಲು ಸಾಧ್ಯವಿಲ್ಲ: ಸುನಿಲ್ ಕುಮಾರ್

    ಹಳಿಯಾಳದ ಮಾತೃಭೂಮಿ ಪ್ರತಿಷ್ಠಾನದ ಉಪಾಧ್ಯಕ್ಷ ಎಸ್.ಕೆ ಯೋಗರಾಜ್‍ರವರು ಪುರಸಭೆ ಸಿಬ್ಬಂದಿ ಅಮಾನುಷ ವರ್ತನೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಇದಲ್ಲದೇ ಪಶುಸಂಗೋಪನ ಇಲಾಖೆಯಿಂದಲೂ ಪುರಸಭೆ ಸಿಬ್ಬಂದಿ ಕೃತ್ಯಕ್ಕೆ ನೋಟಿಸ್ ಜಾರಿಮಾಡಿದ್ದು, ಇದೀಗ ಹಳಿಯಾಳ ತಾಲೂಕಿನಲ್ಲಿ ಪುರಸಭೆ ಕಾರ್ಯಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೇರಳದಲ್ಲಿ ಹೆಚ್ಚಿದ ಬೀದಿ ನಾಯಿ ಹಾವಳಿ: ಗನ್ ಹಿಡಿದು ಮಕ್ಕಳನ್ನು ಮದರಸಾಗೆ ಕಳುಹಿಸಿದ ವ್ಯಕ್ತಿ

    ಕೇರಳದಲ್ಲಿ ಹೆಚ್ಚಿದ ಬೀದಿ ನಾಯಿ ಹಾವಳಿ: ಗನ್ ಹಿಡಿದು ಮಕ್ಕಳನ್ನು ಮದರಸಾಗೆ ಕಳುಹಿಸಿದ ವ್ಯಕ್ತಿ

    ತಿರುವನಂತಪುರಂ: ಕೇರಳದಲ್ಲಿ(Kerala) ಬೀದಿ ನಾಯಿಗಳ(Stray Dog) ಹಾವಳಿ ಹೆಚ್ಚುತ್ತಿರುವುದರೊಂದಿಗೆ ಅವುಗಳಿಂದ ಜನರ ಮೇಲೆ ದಾಳಿ ನಡೆಯುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಇದರ ಹಿನ್ನೆಲೆ ವ್ಯಕ್ತಿಯೊಬ್ಬರು ಮಕ್ಕಳ ಮೇಲೆ ನಾಯಿಗಳಿಂದ ಯಾವುದೇ ದಾಳಿಯಾಗಬಾರದು ಎಂಬ ಕಾರಣಕ್ಕೆ ಕೋವಿ(Gun) ಹಿಡಿದು ಅವರನ್ನು ಮದರಸಾಗೆ ಕಳುಹಿಸಿದ ಘಟನೆ ನಡೆದಿದೆ.

    ಕಾಸರಗೋಡಿನ(Kasaragod) ವ್ಯಕ್ತಿ ಸಮೀರ್ ನಾಯಿಗಳಿಂದ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದೆಂಬ ಕಾರಣಕ್ಕೆ ಕೋವಿ ಹಿಡಿದು, ಮಕ್ಕಳನ್ನು ಮದರಸಾಗಳಿಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಪಾಳು ಬಾವಿಗೆ ಎಸೆದಿದ್ದ ಹಸುಗೂಸಿಗೆ ಹಾಲುಣಿಸಿ ವಾತ್ಸಲ್ಯ ಮೆರೆದ ಗ್ರಾಮದ ಮಹಿಳೆ

    dog

    ಬೀದಿ ನಾಯಿಗಳ ಕಾಟದಿಂದಾಗಿ ಜನರು ರಸ್ತೆಗಳಲ್ಲಿ ಓಡಾಡಲು ಕಷ್ಟಪಡುವಂತಾಗಿದೆ. ಕಾಸರಗೋಡಿನ ಬೇಕಲ ಪ್ರದೇಶದಲ್ಲಿಯೇ ಕಳೆದ 1 ವಾರದಲ್ಲಿ 10 ನಾಯಿ ಕಡಿತ ಪ್ರಕರಣಗಳು ವರದಿಯಾಗಿದೆ. ಕೇರಳದಲ್ಲಿ ಈ ವರ್ಷ ಬೀದಿ ನಾಯಿ ದಾಳಿ ಪ್ರಕರಣಗಳು ಏರಿಕೆಯಾಗಿವೆ. ಇದನ್ನೂ ಓದಿ: 70 ವರ್ಷಗಳ ನಂತರ ಭಾರತಕ್ಕೆ ಮರಳಿದ ಚೀತಾ – ನಮೀಬಿಯಾದ 8 ಚೀತಾಗಳನ್ನು ಬಿಡುಗಡೆ ಮಾಡಿದ ಮೋದಿ

    Live Tv
    [brid partner=56869869 player=32851 video=960834 autoplay=true]

  • ದಾಳಿ ನಡೆಸುವ ನಾಯಿಗಳನ್ನು ಕೊಲ್ಲಲು ಸುಪ್ರೀಂ ಕೋರ್ಟ್ ಅನುಮತಿಗೆ ಕೇರಳ ಸರ್ಕಾರ ನಿರ್ಧಾರ

    ದಾಳಿ ನಡೆಸುವ ನಾಯಿಗಳನ್ನು ಕೊಲ್ಲಲು ಸುಪ್ರೀಂ ಕೋರ್ಟ್ ಅನುಮತಿಗೆ ಕೇರಳ ಸರ್ಕಾರ ನಿರ್ಧಾರ

    ತಿರುವನಂತಪುರಂ: ಬೀದಿ ನಾಯಿಗಳ(Stray Dog) ದಾಳಿಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕ್ರೋಧೋನ್ಮತ್ತ ಮತ್ತು ಹಿಂಸಾತ್ಮಕ ನಾಯಿಗಳನ್ನು ಕೊಲ್ಲಲು ಕೇರಳ(Kerala) ಸರ್ಕಾರ ಸುಪ್ರೀಂ ಕೋರ್ಟ್‌(Supreme Court)ನಿಂದ ಅನುಮತಿ ಪಡೆಯಲು ನಿರ್ಧರಿಸಿದೆ.

    ಕೇರಳದಲ್ಲಿ ದಿನೇ ದಿನೇ ಬೀದಿ ನಾಯಿಗಳು ಜನರ ಮೇಲೆ ದಾಳಿ ನಡೆಸುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದನ್ನು ತಡೆಗಟ್ಟಲು ಕೇರಳ ಸರ್ಕಾರ ದಾಳಿ ನಡೆಸುವಂತಹ ನಾಯಿಗಳನ್ನು ಕೊಲ್ಲಲು ಸುಪ್ರೀಂ ಕೋರ್ಟ್‌ನ ಅನುಮತಿ ಕೇಳಲು ನಿರ್ಧರಿಸಿದೆ. ಮಾತ್ರವಲ್ಲದೇ ನಾಯಿಗಳ ಹಾವಳಿಯನ್ನು ತಡೆಯಲು ಸೆಪ್ಟೆಂಬರ್ 20 ರಿಂದ 1 ತಿಂಗಳ ಕಾಲ ಅಭಿಯಾನವನ್ನು ನಡೆಸಲು ಯೋಜಿಸಿದೆ.

    ಪರಿಸ್ಥಿತಿ ನಿಜವಾಗಿಯೂ ಗಂಭೀರವಾಗುತ್ತಿದೆ. ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದೇವೆ. ಹೆಚ್ಚುತ್ತಿರುವ ನಾಯಿ ಕಚ್ಚುವಿಕೆಯ ಪ್ರಕರಣಗಳನ್ನು ತಡೆಯಲು ಹಲವಾರು ಯೋಜನೆಗಳನ್ನು ರೂಪಿಸಲು ನಿರ್ಧರಿಸಿದ್ದೇವೆ ಎಂದು ಸಚಿವ ಎಂ.ಬಿ ರಾಜೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ಮದ್ಯಪಾನ ತಡೆ ನೀತಿ ಜಾರಿಗೆ ತರಲು ಮನವಿ – ಈ ವಿಷಯವನ್ನು ಮುಟ್ಟುವುದಿಲ್ಲ ಎಂದ ಸುಪ್ರೀಂಕೋರ್ಟ್

    ಕೇರಳದಲ್ಲಿ ಹೆಚ್ಚುತ್ತಿರುವ ನಾಯಿ ಕಚ್ಚುವಿಕೆಯ ಪ್ರಕರಣಗಳ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಇದರಿಂದ ಹಿಂಸಾತ್ಮಕ ದಾಳಿ ಮತ್ತು ರೇಬಿಸ್ ಸೋಂಕನ್ನು ತೊಡೆದುಹಾಕಲು ಅನುಮತಿಗಾಗಿ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಲಾಗಿದೆ ಎಂದರು.

    1 ತಿಂಗಳ ಅಭಿಯಾನದಲ್ಲಿ ನಾವು ಪ್ರಾಣಿಗಳ ಜನನ ನಿಯಂತ್ರಣ(ಎಬಿಸಿ) ಕ್ರಮಗಳನ್ನು ತೀವ್ರವಾಗಿ ಹೆಚ್ಚಿಸುತ್ತೇವೆ. ಬೀದಿ ನಾಯಿಗಳಿರುವ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ, ಅವುಗಳಿಗೆ ಆಶ್ರಯಗಳನ್ನು ನಿರ್ಮಿಸುತ್ತೇವೆ. ರೋಗ ತಡೆಗಟ್ಟಲು ಸಾಕಷ್ಟು ಲಸಿಕೆಗಳನ್ನು ಸಂಗ್ರಹಿಸುತ್ತೇವೆ ಎಂದು ರಾಜೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ಬೆನ್ನಟ್ಟಿಕೊಂಡು ಬಂದ ಬೀದಿ ನಾಯಿಗಳು- ಬಾಲಕರು ಗ್ರೇಟ್ ಎಸ್ಕೇಪ್

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ನಾಯಿಗಳಿಂದ ಮಹಿಳೆಯ ಮೇಲೆ ಏಕಾಏಕಿ ದಾಳಿ

    ಬೆಂಗಳೂರಿನಲ್ಲಿ ನಾಯಿಗಳಿಂದ ಮಹಿಳೆಯ ಮೇಲೆ ಏಕಾಏಕಿ ದಾಳಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಾಯಿಗಳ ಹಾವಳಿ ಮತ್ತೆ ಜಾಸ್ತಿಯಾಗಿದೆ. ಬುಧವಾರ ಬೆಳಗ್ಗೆ ಎಂಎಸ್ ರಾಮಯ್ಯ ಆಸ್ಪತ್ರೆಯ ಪಕ್ಕದ ರಸ್ತೆಯಲ್ಲಿ ಮನೆಕೆಲಸಕ್ಕೆ ಹೋಗುತ್ತಿದ್ದ ಮಹಿಳೆ ಮೇಲೆ ಏಕಾಏಕಿ ದಾಳಿ ಮಾಡಿರುವ ಭಯಾನಕ ದೃಶ್ಯಗಳು ಸಿಸಿಟವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

    ಕಳೆದ ಒಂದು ವಾರದಿಂದ 5 ರಿಂದ 6 ಜನರಿಗೆ ದಾಳಿ ಬೀದಿ ನಾಯಿಗಳು ದಾಳಿ ಮಾಡಿದ್ದು ಈಗ ಮತ್ತೊಮ್ಮೆ ದಾಳಿ ನಡೆದ ಕಾರಣ ಜನರು ಭಯಗೊಂಡಿದ್ದಾರೆ.

    ಪಾಲಿಕೆ ಸದಸ್ಯೆ ಸುಮಂಗಲ ಅವರು ಪತ್ರ ಬರೆದರೂ ಇದುವರೆಗೂ ಬಿಬಿಎಂಪಿ ಅಧಿಕಾರಿಗಳು ಈ ಕಡೆ ತಲೆ ಹಾಕಿಲ್ಲ ಎಂದು ಜನರು ಹೇಳಿದ್ದಾರೆ.