ಚಿಕ್ಕಬಳ್ಳಾಪುರ: ಇಲ್ಲಿನ ಜಿಲ್ಲಾಡಳಿತ ಭವನದಲ್ಲೇ ನಾಯಿಗಳ ಹಾವಳಿ ಹೆಚ್ಚಾಗಿದೆ. ಪ್ರತಿದಿನ ಕೆಲಸ ಕಾರ್ಯಗಳಿಗೆ ಆ ಜಿಲ್ಲೆಯ ಜನ ಅಲ್ಲಿಗೆ ಭೇಟಿ ನೀಡ್ತಾರೆ. ಮತ್ತೊಂದೆಡೆ ಅಲ್ಲಿಯ ಅಧಿಕಾರಿ ಸಿಬ್ಬಂದಿ, ಅಲ್ಲೆ ಕರ್ತವ್ಯ ಮಾಡ್ತಾರೆ. ಇಂಥದರಲ್ಲಿ ಆ ಭವನಕ್ಕೂ ನಾಯಿಗಳಿಗೂ ಅದೇನ್ ನಂಟೊ ಗೊತ್ತಿಲ್ಲ, ಹಿಂಡು ಹಿಂಡು ನಾಯಿಗಳು ಆ ಜಿಲ್ಲಾಡಳಿತ ಭವನವನ್ನೇ ತಮ್ಮ ಆಶ್ರಯ ತಾಣಗಳನ್ನಾಗಿ ಮಾಡಿಕೊಂಡಿವೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಒಂದಲ್ಲ ಎರಡಲ್ಲ 18ಕ್ಕೂ ಹೆಚ್ಚು ನಾಯಿಗಳು ಇವೆ. ಒಂದೊಂದು ನಾಯಿಗಳು ಒಂದೊಂದು ಕಚೇರಿಯನ್ನು ಹಂಚಿಕೊಂಡಂತೆ ಕಂಡು ಬಂದಿದೆ. ಆ ಕಚೇರಿ ಹತ್ತಿರ ಹೊದ್ರೆ, ಅಲ್ಲೊಂದು ಬೌ ಎನ್ನುತ್ತೆ, ಈ ಕಡೆ ಕಚೇರಿಗೆ ಬಂದ್ರೆ ಇಲ್ಲೊಂದು ಬೌ ಬೌ ಎನ್ನುತ್ತೆ, ಇಲ್ಲಿರುವ ನಾಯಿಗಳು ಕೆಲವು ಸಿಬ್ಬಂದಿಗಳಿಗೆ ಅಭ್ಯಾಸವಾಗಿದ್ರೆ. ಕಚೇರಿಗೆ ಬರೊ ಸಾರ್ವಜನಿಕರನ್ನ ಕಂಡ್ರೆ ಬೌ ಬೌ ಮಾಡ್ತಿವೆ.
ಸ್ವತಃ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ನಾಯಿಗಳಿಂದ ಎಚ್ಚರಿಕೆಯಿಂದ ಇರುವಂತೆ ಡಿಸಿ ಪಿ.ಎನ್ ರವೀಂದ್ರ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ದಿನದಿಂದ ದಿನಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ನಾಯಿಗಳ ಸಂತತಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರಿಗೆ ಅಪಾಯ ಆಗುವ ಮುನ್ನ ಎಚ್ಚರ ವಹಿಸಬೇಕಿದೆ.
ಚಿಕ್ಕಮಗಳೂರು: ಸಾಮಾಜಿಕ – ಶೈಕ್ಷಣಿಕ ಸರ್ವೇ (Caste Survey) ಕಾರ್ಯಕ್ಕೆ ತೆರಳಿದ್ದ ಶಿಕ್ಷಕನ ಮೇಲೆ ಬೀದಿ ನಾಯಿ (Stray Dog) ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಬನ್ನೂರು ಗ್ರಾಮದಲ್ಲಿ ನಡೆದಿದೆ.
ಸರ್ವೇ ಕಾರ್ಯದ ಭಾಗವಾಗಿ ಕೆಲ ಮನೆಗಳಲ್ಲಿನ ಯು.ಹೆಚ್.ಐ.ಡಿ. ನಂಬರ್ ಪೆಂಡಿಂಗ್ ತೋರಿಸುತ್ತಿತ್ತು. ಈ ಕಾರಣಕ್ಕೆ ಮೀಟರ್ ಬೋರ್ಡಿನಲ್ಲಿರುವ ಆರ್.ಆರ್ ನಂಬರ್ ಪಡೆಯಲು ಕೃಷ್ಣಪ್ಪ ಅವರು ತೆರಳಿದ್ದರು. ಈ ಸಂದರ್ಭದಲ್ಲಿ ನಾಯಿ ದಾಳಿ ನಡೆಸಿದೆ.
ಕೃಷ್ಣಪ್ಪ ಅವರ ಪರವಾಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿರುವ ಕೆಲ ಶಿಕ್ಷಕರು, ಸರ್ವೇಯಲ್ಲಿನ ತಾಂತ್ರಿಕ ಅಡಚಣೆಗಳೇ ನಾಯಿ ದಾಳಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. ತಾಂತ್ರಿಕ ಸಮಸ್ಯೆಗಳು ಮತ್ತು ಸುರಕ್ಷತಾ ಕೊರತೆಯಿಂದಾಗಿ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಹೊಳೆನರಸೀಪುರ | ಜಾತಿಗಣತಿಗೆ ತೆರಳುವಾಗ ನಾಯಿಗೆ ಸ್ಕೂಟರ್ ಡಿಕ್ಕಿ – ಶಿಕ್ಷಕಿಗೆ ಗಂಭೀರ ಗಾಯ
– ಏಡ್ಸ್ ಬಂದ್ರೂ 10-15 ವರ್ಷ ಬದುಕಬಹುದು, ನಾಯಿ ಕಡಿತ ಅದಕ್ಕಿಂತಲೂ ಗಂಭೀರ!
ದಾವಣಗೆರೆ: ನಗರದಲ್ಲಿ (Davanagere) ಬೀದಿ ನಾಯಿಗಳ (Stray Dog) ಹಾವಳಿ ಹೆಚ್ಚಳವಾಗಿದ್ದು, ಜನರು ರಸ್ತೆಯಲ್ಲಿ ಒಡಾಡುವುದಕ್ಕೂ ಭಯ ಪಡುವಂತಾಗಿದೆ. ಇನ್ನೂ ದಾವಣಗೆರೆ ಜಿಲ್ಲಾಧಿಕಾರಿಗಳನ್ನೇ ಬಿಡದೇ ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ಬಂದಿದ್ದು, ಅವುಗಳನ್ನು ಕಲ್ಲು ಹೊಡೆದು ಓಡಿಸಿದ್ದೇನೆ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಜಿ.ಎಂ ಗಂಗಾಧರಸ್ವಾಮಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ, ಜಿಲ್ಲೆಯಲ್ಲಿ ವರ್ಷಕ್ಕೆ 5 ರಿಂದ 6 ಸಾವಿರ ಜನರು ಬೀದಿ ನಾಯಿಗಳ ದಾಳಿಗೆ ತುತ್ತಾಗುತ್ತಿದ್ದಾರೆ. ನನಗೂ ಅದರ ಅನುಭವ ಆಗಿದೆ. ಬೆಳಿಗ್ಗೆ ಜಾಗಿಂಗ್ ಹೋಗುತ್ತಿದ್ದಾಗ ಐದಾರು ನಾಯಿಗಳು ನನ್ನನ್ನು ಅಟ್ಟಾಡಿಸಿಕೊಂಡು ಬಂದಿದ್ದವು. ಅವುಗಳನ್ನು ನಾನು ಕಲ್ಲು ತೆಗೆದುಕೊಂಡು ಓಡಿಸಿದ್ದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದಾವಣಗೆರೆ | ನಾಲ್ವರು ಮಕ್ಕಳು, ಓರ್ವ ವೃದ್ಧನ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಬೀದಿ ನಾಯಿ
ಈಗಾಗಲೇ ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಲು ಸಭೆ ಕರೆಯಲಾಗಿದೆ. ನಗರ ಹಾಗೂ ತಾಲೂಕು ಮಟ್ಟದಲ್ಲಿ ಕೂಡ ಸಭೆ ನಡೆಸಲಾಗಿದೆ. ಏಡ್ಸ್ ಕಾಯಿಲೆ ಬಂದರೂ 10-50 ವರ್ಷ ಮನುಷ್ಯ ಬದುಕುತ್ತಾನೆ. ಆದರೆ ನಾಯಿ ಕಡಿತ ಅದಕ್ಕಿಂತ ಗಂಭೀರವಾದದ್ದು. ಅದಕ್ಕೆ ಔಷಧಿಯೇ ಇಲ್ಲ ಹಾಗಾಗಿ ತಡೆಗಟ್ಟಲು ಅಗತ್ಯವಾದ ಕ್ರಮ ಕೈಗೊಳ್ಳಲಾಗಿದೆ. ನಾಯಿಗಳನ್ನು ಕೊಲ್ಲಲು ಬರುವುದಿಲ್ಲ. ಹಾಗಾಗಿ ಎನ್‌ಜಿಒ ಜೊತೆ ಮಾತನಾಡಲಾಗಿದೆ ಅವುಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ | ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷೆ!
ಬಾಗಲಕೋಟೆ: ಕೈ,ಕಾಲುಗಳ ಮೇಲೆ ಜಿನುಗುತ್ತಿರುವ ರಕ್ತ, ಗಂಭೀರ ಗಾಯಗೊಂಡವರಿಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರು, ಏನೋ ದುರಂತ ನಡೆದಿದೆ ಎಂದು ಗಾಬರಿಯಿಂದ ಮುಗಿಬಿದ್ದಿರುವ ಜನತೆ.
ಅಂದ ಹಾಗೆ ಈ ದೃಶ್ಯಗಳು ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ. ಕಳೆದ ನಾಲ್ಕೈದು ದಿನಗಳ ಹಿಂದೆ ನವನಗರದ ಎಪಿಎಂಸಿ ಬಳಿ ಹುಚ್ಚು ನಾಯಿಯೊಂದು (Stray Dog) ಕೆಲಸಕ್ಕೆಂದು ಹೊರಟವರ, ಬಸ್‌ಗಾಗಿ ಕಾಯುತ್ತಿದ್ದವರ ಸುಮಾರು ಹತ್ತು ಜನರ ಮೇಲೆ ತೀವ್ರ ದಾಳಿ ನಡೆಸಿ ಗಾಯಗೊಳಿಸಿತ್ತು. ಸಾಲದು ಎಂಬಂತೆ ಪಕ್ಕದಲ್ಲೇ ಎಪಿಎಂಸಿ ಯಾರ್ಡ್‌ನಲ್ಲಿರುವ ಅಂಧ ಶಾಲಾ ಮಕ್ಕಳ ಮೇಲೂ ದಾಳಿ ನಡೆಸಿ ಕೈ, ಕಾಲು ಸೇರಿ ದೇಹದ ಬೇರೆ ಬೇರೆ ಭಾಗದಲ್ಲಿ ತೀವ್ರವಾಗಿ ಕಚ್ಚಿತ್ತು.
ಒಟ್ಟು 15 ಜನರಿಗೆ ಗಂಭೀರವಾದ ಗಾಯಗಳಾಗಿದ್ದು ಅವರೆಲ್ಲಾ ಜಿಲ್ಲಾಸ್ಪತ್ರೆಗೆ (Bagalkote District Hospital) ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ಘಟನೆಯಿಂದ ನಗರದ ಜನತೆ ಆತಂಕಕ್ಕೊಳಗಾಗಿತ್ತು. ಸಾಮಾನ್ಯ ನಾಯಿಗಳು ಬಳಿ ಬಂದರು ಸಹ ಭಯದಿಂದ ದೂರ ಸರಿಯುವ ರೀತಿಯಾಗಿತ್ತು. ಕಣ್ಣಿದ್ದವರು ಹೇಗೋ ವಾಸಿಯಾಗಿ ಬಿಡುತ್ತಾರೆ. ಆದರೆ ಜಗತ್ತೇ ಕತ್ತಲಾಗಿದ್ದವರ ಗತಿ ಏನು? ಹೀಗಾಗಿ ಹುಚ್ಚು ನಾಯಿ ಕಡಿತಕ್ಕೊಳಗಾದ ಅಂಧ ಶಾಲಾ ಶಿಕ್ಷಕಿ ಹೇಮಾವತಿ ಹಾಗೂ ಸ್ಥಳೀಯರು ಹುಚ್ಚು ನಾಯಿ, ಬೀದಿ ನಾಯಿಗಳ ಹಾವಳಿಯಿಂದ ನಮ್ಮನ್ನು ರಕ್ಷಿಸಿ, ಮೇಲಿಂದ ಮೇಲೆ ನಾಯಿ ದಾಳಿ ನಡೆಯುತ್ತಿದೆ. ಭಯದಲ್ಲೇ ಜೀವನ ಮಾಡಬೇಕಿದೆ. ಬೀದಿ ನಾಯಿಗಳಿಗೆ ಕಡಿವಾಣ ಹಾಕುವಂತೆ ಜಿಲ್ಲಾಡಳಿತ, ನಗರಸಭೆಗೆ ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಬಾಗಲಕೋಟೆ ನಗರದಲ್ಲಿ ನಾಯಿ ಕಡಿತದ ಪ್ರಕರಣಗಳು ಹೆಚ್ಚಾಗಿವೆ ಎಂದು ಅಂಕಿ ಅಂಶಗಳೇ ಹೇಳುತ್ತಿವೆ.ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 1669 ಜನರಿಗೆ ನಾಯಿ ಕಡಿತವಾಗಿದೆ.ಇದನ್ನೂಓದಿ: Bengaluru | ಆಟೋಗೆ ಕಸ ನೀಡದ ಮನೆಗಳಿಗೆ ನೋಟಿಸ್
ಸಾಂದರ್ಭಿಕ ಚಿತ್ರ
ಪ್ರತಿ ತಿಂಗಳು ಸರಾಸರಿ 200 ಜನ ನಾಯಿ ಕಡಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಇಬ್ಬರೂ ನಾಯಿ ಕಡಿತದಿಂದ ಸಾವನ್ನಪ್ಪಿದ್ದು ಭಯ ಮೂಡಿಸುತ್ತದೆ. ಒಂದೇ ತಿಂಗಳಲ್ಲಿ ಬಾಗಲಕೋಟೆ ನಗರದಲ್ಲಷ್ಟೇ 30ಕ್ಕೂ ಹೆಚ್ಚು ಜನರ ಮಾರಣಾಂತಿಕ ನಾಯಿ ದಾಳಿಗೆ ಒಳಗಾಗಿದ್ದಾರೆ.
ಜಿಲ್ಲಾಸ್ಪತ್ರೆಗೆ ಮೂರು ಕೆಟಗೆರಿಗೆಯಲ್ಲಿ ಪ್ರಕರಣ ದಾಖಲಾಗುತ್ತವೆ. ಕೆಟಗೆರಿ ಮೂರರ ಪ್ರಕರಣಗಳೇ ಜಿಲ್ಲಾಸ್ಪತ್ರೆಗೆ ಹೆಚ್ಚು ದಾಖಲಾಗಿವೆ. ಮೊದಲ ಕೆಟಗೆರಿಯಲ್ಲಿ ಕೇವಲ ಟಿಟಿ ಇಂಜೆಕ್ಷನ್ ಮಾತ್ರ, ಎರಡರಲ್ಲಿ ಟಿಟಿ+ಇಂಟ್ರಾ ಮಸಿಕ್ಯೂಲರ್ ಇಂಜೆಕ್ಷನ್ ಕೊಡಲಾಗುತ್ತೆ. ಕೆಟಗರಿ ಮೂರರ ವ್ಯಕ್ತಿಗಳಿಗೆ ಟಿಟಿ,ಇಂಟ್ರಾ ಮಸಿಕ್ಯೂಲರ್, ಎಆರ್ 5 ಡೋಸ್ ಇಂಜೆಕ್ಷನ್ ಕೊಡಲಾಗುತ್ತೆ ಎಂದು ನಾಯಿ ಕಡಿತಕ್ಕೆ ಒಳಗಾಗು ವ್ಯಕ್ತಿಗಳ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು.
ಸದ್ಯದಲ್ಲೇ ಸ್ಥಳೀಯ ಸಂಸ್ಥೆಗಳು, ಆರೋಗ್ಯ ಇಲಾಖೆ ಮತ್ತು ಪಸು ಸಂಗೋಪನೆ ಇಲಾಖೆಯಿಂದ ತಂಡ ರಚನೆ ಮಾಡಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವುದಾಗಿ ಮಹೇಶ್ ಕೋಣಿ ತಿಳಿಸಿದರು.
ದಾವಣಗೆರೆ: ಬೀದಿ ನಾಯಿ ದಾಳಿಗೆ ಒಳಗಾಗಿ ರೇಬಿಸ್ (Rabies) ಕಾಯಿಲೆಯಿಂದ 4 ತಿಂಗಳಿಂದ ಆಸ್ಪತ್ರೆಯಲ್ಲಿದ್ದ ಬಾಲಕಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ (Davanagere) ನಗರದ ಶಾಸ್ತ್ರಿ ಲೇಔಟ್‌ನ ನಿವಾಸಿ ಮೊಹಮ್ಮದ್ ಶಾಕೀರ್ ಆಲಿ, ಅತೀಹಾ ಖಾನಂ ದಂಪತಿಯ ಮಗಳು ಖದೀರಾ ಬಾನು (4) ಮೃತ ಬಾಲಕಿ.
ಈಕೆ ಮೇಲೆ ಬೀದಿ ನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಳು. ಆಗ ಪೋಷಕರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಹೆಚ್ಚಿನ ಚಿಕಿತ್ಸೆಯನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಕೊಡಿಸಿ ಮನೆಗೆ ಕರೆತಂದಿದ್ದರು. ಆದರೆ ಒಂದು ತಿಂಗಳ ಹಿಂದೆ ಬಾಲಕಿ ವಾಂತಿ ಮಾಡಿಕೊಂಡು ಅಸ್ವಸ್ಥಳಾಗಿದ್ದಳು. ಗಾಬರಿಗೊಂಡ ಪೋಷಕರು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿದ್ದು, ತಪಾಸಣೆ ನಡೆಸಿದ ವೈದ್ಯರು ಮಗುವಿಗೆ ರೇಬಿಸ್ ತಗಲಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಈ ದೇಶಗಳಲ್ಲಿ ಬೀದಿ ನಾಯಿಗಳಿಗೆ ಗ್ಯಾಸ್ ಚೇಂಬರ್, ದಯಾಮರಣ ಶಿಕ್ಷೆ – ಯಾವ ದೇಶದಲ್ಲಿ ಏನು ಕಾನೂನು?
ಕೂಡಲೇ ಐಸಿಯುನಲ್ಲಿ ಚಿಕಿತ್ಸೆ ನೀಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ. ಪೋಷಕರು ಅಘಾತಕ್ಕೆ ಒಳಗಾಗಿದ್ದಾರೆ. ಇದ್ದ ಒಬ್ಬ ಮಗಳು ಈಗ ಬೀದಿ ನಾಯಿಗಳ ಹಾವಳಿಗೆ ಸಾವನ್ನಪ್ಪಿದ್ದಾಳೆಂದು ಕಣ್ಣೀರಿಟ್ಟಿದ್ದಾರೆ.
ಹಲವು ವರ್ಷಗಳಿಂದ ದಾವಣಗೆರೆಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮತ್ತೊಂದು ಮಗುವಿಗೆ ಈ ರೀತಿ ಆಗುವ ಮೊದಲೇ ಮುನ್ನೆಚ್ಚರಿಕೆ ವಹಿಸಿ ಎಂದು ಮೃತ ಮಗುವಿನ ತಂದೆ ಪಾಲಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು: ನಗರದ ಕುಮಾರಪಾರ್ಕ್ (Kumarapark) ಬಳಿ ನಾಪತ್ತೆಯಾಗಿರುವ 3 ಬೀದಿ ನಾಯಿಗಳಿಗಾಗಿ (Stray Dog) ಭಾರೀ ಹುಡುಕಾಟ ನಡೆಸಲಾಗುತ್ತಿದೆ. ಕಾಣೆಯಾದ ನಾಯಿಗಳ ಪತ್ತೆಗೆ 4 ತಂಡಗಳಿಂದ ತೀವ್ರ ಶೋಧ ನಡೆಸಲಾಗುತ್ತಿದೆ. ನಾಪತ್ತೆಯಾದ ನಾಯಿಗಳನ್ನು ಹುಡುಕಿ ಕೊಟ್ಟವರಿಗೆ ಬರೋಬ್ಬರಿ 35 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ.
ಹೌದು, ಕುಮಾರಪಾರ್ಕ್ ಬಳಿ ಕಳೆದ 10 ವರ್ಷದಿಂದ ಇದ್ದ ಈ 3 ಬೀದಿ ನಾಯಿಗಳನ್ನು ವಕೀಲೆ ವಿಪ್ಲವಿ ಮಹೇಂದ್ರ ಅವರು ಪೋಷಣೆ ಮಾಡುತ್ತಿದ್ದರು. ಸದ್ಯ ವಿಪ್ಲವಿ ಮಹೇಂದ್ರ ಇಂಗ್ಲೆಂಡ್‌ನಲ್ಲಿರುವ ಕಾರಣ ಅವರ ಅನುಪಸ್ಥಿತಿಯಲ್ಲಿ ಅವರ ಕಚೇರಿ ಸಿಬ್ಬಂದಿಯಿಂದ ನಾಯಿಗಳ ಪೋಷಣೆ ಮಾಡಲಾಗುತ್ತಿತ್ತು. ವಿಶೇಷವೆಂದರೆ ಈ 3 ನಾಯಿಗಳಿಂದ ಈ ಪ್ರದೇಶದಲ್ಲಿ ಅಪರಾಧ ಕೃತ್ಯಗಳಿಗೆ ಬ್ರೇಕ್ ಬಿದ್ದಿತ್ತು. ಆದರೆ ಅಕ್ಟೋಬರ್ 4 ರಿಂದ 20 ರ ನಡುವೆ ಲೋಬಿ, ದಂತ, ರಿಬಾ ಹೆಸರಿನ ಈ 3 ನಾಯಿಗಳು ಕಣ್ಮರೆಯಾಗಿವೆ. ಇದನ್ನೂ ಓದಿ: ನಿಧಿ ನಿಕ್ಷೇಪ ತೋರಿಸುವುದಾಗಿ 16 ಲಕ್ಷ ರೂ. ನಾಮ – ವಂಚಿತರಿಂದ ಜ್ಯೋತಿಷಿಯ ಕಿಡ್ನಾಪ್
ವಕೀಲೆ ವಿಪ್ಲವಿ ಮಹೇಂದ್ರ
ಕಾಣೆಯಾದ ಬೀದಿ ನಾಯಿಗಳಿಗಾಗಿ ಭಾರೀ ಶೋಧ:
ಇದೀಗ ಕಣ್ಮರೆಯಾಗಿರುವ 3 ಬೀದಿ ನಾಯಿಗಳಿಗಾಗಿ ಭಾರೀ ಹುಡುಕಾಟ ನಡೆಸಲಾಗುತ್ತಿದೆ. ಈ ಬಗ್ಗೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕಚೇರಿ ಸಿಬ್ಬಂದಿ ಪ್ರಕರಣ ದಾಖಲಿಸಿದ್ದಾರೆ. ಕಾಣೆಯಾದ ನಾಯಿಗಳ ಪತ್ತೆಗೆ 4 ತಂಡಗಳಿಂದ ಶೋಧ ನಡೆಸಲಾಗುತ್ತಿದೆ. ಬೀದಿ ನಾಯಿಗಳ ಪೋಷಣೆ ಮಾಡುತ್ತಿದ್ದ ವಿಪ್ಲವಿ ಮಹೇಂದ್ರ ಅವರಿಂದಲೂ ಪ್ರತ್ಯೇಕ ತಂಡ ರಚಿಸಿ ಹುಡುಕಾಟ ನಡೆಸಲಾಗುತ್ತಿದೆ. ಒಂದೊಂದು ತಂಡದಲ್ಲಿ ಇಬ್ಬರು ವ್ಯಕ್ತಿಗಳಿಂದ ಶೋಧ ಕಾರ್ಯ ನಡೆಯುತ್ತಿದೆ.
ಪ್ರತಿ ದಿನ 11 ಗಂಟೆಗಳ ಕಾಲ ನಾಯಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಟೀಂಗಳು ಮೆಜೆಸ್ಟಿಕ್ ಸುತ್ತಮುತ್ತ 2 ದಿನ, ಗೂಡ್ಸ್ ಶೆಡ್ ರಸ್ತೆಯಲ್ಲಿ 3 ದಿನ ಹುಡುಕಾಡಿದೆ. ಕಾಣೆಯಾದ ನಾಯಿಗಳು ಎಲೆಕ್ಟ್ರಾನಿಕ್ ಸಿಟಿಯಲ್ಲಿವೆ ಎಂದು ಸ್ಥಳೀಯರು ಫೋಟೋ ಕಳುಹಿಸಿದ್ದರು. ಈ ಹಿನ್ನೆಲೆ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ನಾಯಿಗಳಿಗಾಗಿ ಭಾರೀ ಹುಡುಕಾಟ ನಡೆಸಲಾಗುತ್ತಿದೆ. ವಿದೇಶದಲ್ಲಿರುವ ವಿಪ್ಲವಿ ಮಹೇಂದ್ರ ಕೂಡಾ ಈ ಟೀಂಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಇದನ್ನೂ ಓದಿ: ಕೆಪಿಎಸ್‍ಸಿ ಪರೀಕ್ಷೆಗೆ ತಾಳಿ, ಕಾಲುಂಗುರ ತೆಗೆಸಿ ಸಿಬ್ಬಂದಿ ಯಡವಟ್ಟು – ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು
ನವದೆಹಲಿ: ಬೀದಿ ನಾಯಿಯ (Stray Dog) ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ (Rape) ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ರಾಷ್ಟ್ರ ರಾಜಧಾನಿ ದೆಹಲಿಯ (Delhi) ಹರಿ ನಗರ ಪ್ರದೇಶದ ಪಾರ್ಕ್‍ನಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಈ ಕೃತ್ಯ ಎಸಗಿದ್ದಾನೆ. ಘಟನೆಗೆ ಸಂಬಂಧಿಸಿ ವೀಡಿಯೋವೊಂದು ವೈರಲ್ ಆದ ಬಳಿಕ ಹರಿ ನಗರದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಬಿಎಸ್‍ವೈಗೆ ಹೈಕಮಾಂಡ್ ಬಹುಪರಾಕ್ – ಸಕ್ಸಸ್ ಆಗುತ್ತಾ ನಮೋ ಗೇಮ್‍ಪ್ಲಾನ್?
ಹೈದರಾಬಾದ್: ಇತ್ತೀಚೆಗೆ ಬೀದಿ ನಾಯಿಗಳ (Stray Dog) ಉಪಟಳ ಹೆಚ್ಚಾಗುತ್ತಿದ್ದು, ಜನರ ಮೇಲೆ ದಾಳಿ ಮಾಡುವಂತಹ ಘಟನೆಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಇದೀಗ 4ರ ಪುಟ್ಟ ಬಾಲಕನೊಬ್ಬ (Boy) ಬೀದಿ ನಾಯಿಗಳ ಅಟ್ಟಹಾಸಕ್ಕೆ ಬಲಿಯಾಗಿರುವ ಮನಕಲಕುವ ಘಟನೆ ತೆಲಂಗಾಣದಲ್ಲಿ (Telangana) ವರದಿಯಾಗಿದೆ.
ವರದಿಗಳ ಪ್ರಕಾರ ಮೃತ ಬಾಲಕನ ತಂದೆ ಗಂಗಾಧರ್ ಘಟನೆ ನಡೆದ ವಸತಿ ಪ್ರದೇಶದ ಆವರಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಬಾಲಕ ಅದೇ ವಸತಿ ಪ್ರದೇಶದಲ್ಲಿ ಆಟವಾಡುತ್ತಾ ಸಾಗುತ್ತಿದ್ದಾಗ ಏಕಾಏಕಿ ಕೆಲ ಬೀದಿ ನಾಯಿಗಳು ಬಾಲಕನ ಮೇಲೆ ದಾಳಿ ನಡೆಸಿವೆ. ಇದನ್ನೂ ಓದಿ: ಹಳೆಯ ಪೀಠೋಪಕರಣ ನೀಡಿದ್ದಕ್ಕೆ ಮದುವೆಯನ್ನು ರದ್ದುಪಡಿಸಿದ ವರ
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಲಕ ನಡೆದುಕೊಂಡು ಹೋಗುತ್ತಿದ್ದಾಗ 3 ನಾಯಿಗಳು ಆತನನ್ನು ಸುತ್ತುವರಿದಿವೆ. ಬಾಲಕ ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬಳಿಕ ಆತನನ್ನು ನಾಯಿಗಳು ಬೀಳಿಸಿ, ಬಟ್ಟೆಯನ್ನು ಎಳೆದಾಡಿವೆ. ಬಾಲಕ ಎಷ್ಟೇ ಪ್ರಯತ್ನಪಟ್ಟರೂ ಅಲ್ಲಿಂದ ಏಳಲು ಸಾಧ್ಯವಾಗದೇ ಹೋಗುತ್ತಾನೆ. ಬಳಿಕ ನಾಯಿಗಳು ಬಾಲಕನ ಇಡೀ ದೇಹಕ್ಕೆ ಕಚ್ಚಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ. ಇದನ್ನೂ ಓದಿ: ಕಡಬದಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆ ಆರಂಭ
ಬಳಿಕ ಬಾಲಕನ ಚೀರಾಟ ಕೇಳಿದ ಗಂಗಾಧರ್ ಸ್ಥಳಕ್ಕೆ ದಾವಿಸಿದ್ದಾರೆ. ತಕ್ಷಣವೇ ಅವರು ಮಗನನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲೇ ಬಾಲಕ ಸಾವನ್ನಪ್ಪಿದ್ದಾನೆ. ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LIVE TV
[brid partner=56869869 player=32851 video=960834 autoplay=true]
ಬಳ್ಳಾರಿ: ನಗರದಲ್ಲಿ ಕಳೆದ 2 ತಿಂಗಳ ಹಿಂದೆ ಅಷ್ಟೇ ನಾಯಿ ಕಡಿತಕ್ಕೆ (Dog Bite) ಇಬ್ಬರು ಅಮಾಯಕ ಬಾಲಕರು ಬಲಿಯಾಗಿದ್ದರು. ಘಟನೆ ಮಾಸುವ ಮುನ್ನವೇ ಮತ್ತೊಂದು ಹುಚ್ಚು ನಾಯಿ ದಾಳಿ ಘಟನೆ ವರದಿಯಾಗಿದೆ.
ರಾತ್ರಿ ತಮ್ಮ ಮನೆ ಮುಂದೆ ಮಲಗಿದ್ದವರ ಮೇಲೆ ನಾಯಿ ದಾಳಿ ಮಾಡಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ 2 ತಿಂಗಳ ಹಿಂದೆ ಬಳ್ಳಾರಿ (Bellary) ಬಾದನಟ್ಟಿ ಗ್ರಾಮದಲ್ಲಿ ಇಬ್ಬರು ಮಕ್ಕಳ ಮೇಲೆ ನಾಯಿ ದಾಳಿ ಮಾಡಿದ್ದು, ಇದರಿಂದ ಇಬ್ಬರು ಮಕ್ಕಳು ಅಸುನೀಗಿದ್ದರು. ಈಗ ಮತ್ತೆ ನಾಯಿ ದಾಳಿಯಿಂದಾಗಿ ಬಳ್ಳಾರಿಯ ಜನತೆ ಬೆಚ್ಚಿ ಬಿದ್ದಿದೆ. ಮಂಗಳವಾರ ಮುಂಜಾನೆ ಬಳ್ಳಾರಿಯ ಕೌಲ್ ಬಜಾರ್ ವ್ಯಾಪ್ತಿಯ ವಾರ್ಡ್ ನಂಬರ್ 30 ರಲ್ಲಿ ವಟ್ಟಲಗೇರಿ ಏರಿಯಾದಲ್ಲಿ ನಾಯಿ ದಾಳಿ ಮಾಡಿದೆ. ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಹುಚ್ಚು ನಾಯಿ ದಾಳಿ ಮಾಡಿದ್ದು, 25 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮನೆ ಮುಂದೆ ರಾತ್ರಿ ಮಲಗಿದ್ದ ಜನರ ಮೇಲೆ ನಾಯಿ ದಾಳಿ ಮಾಡಿದ್ದು, 6 ಮಹಿಳೆಯರು 7 ಮಕ್ಕಳು ಸೇರಿದಂತೆ ಒಟ್ಟು 25 ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದೆ. ನಾಯಿ ಕಡಿತದ ಬಳಿಕ ಬಳ್ಳಾರಿ ಜಿಲ್ಲೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ನಾಯಿ ದಾಳಿಗೊಳಗಾದ ಜನರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಬೀದಿ ನಾಯಿ ಹಾವಳಿ ನಿಯಂತ್ರಣಕ್ಕೆ ಸರ್ಕಾರದಿಂದ ಮಹತ್ವದ ನಿರ್ಧಾರ
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಮಕ್ಕಳಿಗೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 21 ಜನರಿಗೆ ವಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಂದಾಜಿನ ಪ್ರಕಾರ ಬಳ್ಳಾರಿಯಲ್ಲಿ ಸುಮಾರು 10,000ಕ್ಕೂ ಅಧಿಕ ಬೀದಿ ನಾಯಿಗಳಿವೆ. ನಾಯಿಗಳ ಸಂತಾನ ತಡೆಗಟ್ಟಲು ಬಳ್ಳಾರಿ ಮಹಾನಗರ ಪಾಲಿಕೆ ವಿಫಲವಾಗಿದೆ. ಇದನ್ನೂ ಓದಿ: Turkey – Syria Earthquake- ಕಟ್ಟಡದ ಅವಶೇಷಗಳಡಿಯೇ ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಮೂಕಪ್ರಾಣಿ ಶ್ವಾನದ (Dog) ಮೇಲೆ ಕಾರ್ (Car) ಹತ್ತಿಸಿ ಭೂಪನೊಬ್ಬ ಪರಾರಿಯಾಗಿರುವ ಘಟನೆ ಬೆಂಗಳೂರಿನ (Bengaluru) ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮುತ್ತುರಾಯ ನಗರದ ಸಪ್ತಗಿರಿ ರೆಸಿಡೆನ್ಸಿ ಮುಂಭಾಗದ ರಸ್ತೆಯಲ್ಲಿ ಮಲಗಿದ್ದ ಶ್ವಾನದ ಮೇಲೆ ಭೂಪ ಕಾರ್ ಹತ್ತಿಸಿದ್ದಾನೆ. ಜನವರಿ 7ರ ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿರುವ ಘಟನೆ ಇದಾಗಿದ್ದು, ಕಾರ್ ಮೈಮೇಲೆ ಹತ್ತುತ್ತಿದ್ದಂತೆ ನಡು ರಸ್ತೆಯಲ್ಲೇ ಶ್ವಾನ ಬಿದ್ದು ಒದ್ದಾಡಿದೆ. ಇದನ್ನೂ ಓದಿ: ಪಾರ್ಕಿಂಗ್ ಕಿರಿಕ್ – ಕೇಕ್ ಶಾಪ್ ಮ್ಯಾನೇಜರ್ ಮೇಲೆ ಹಲ್ಲೆ
KA 05 MP 5836 ರಿಜಿಸ್ಟರ್ ನಂಬರ್‌ನ ಕಾರ್ ಚಾಲಕ ಈ ಅಮಾನವೀಯ ಕೃತ್ಯ ಎಸಗಿದ್ದಾನೆ. ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಆಸಾಮಿ, ಕಾರ್ ಹತ್ತಿಸಲೇಬೇಕು ಅನ್ನೊ ಉದ್ದೇಶದಿಂದ ಶ್ವಾನದ ಮೇಲೆ ಕಾರ್ ಹತ್ತಿಸಿದಂತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳೀಯರು ನೀಡಿದ ದೂರಿನ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ. ಇದನ್ನೂ ಓದಿ: ಅತ್ಯಾಚಾರ ಎಸಗಿ ಮದ್ವೆ ಆಗಿದ್ದ – ಜಡ್ಜ್ ಮುಂದೆ ಸ್ಯಾಂಟ್ರೋ ರವಿ ಪತ್ನಿ ಹೇಳಿಕೆ
Live Tv
[brid partner=56869869 player=32851 video=960834 autoplay=true]