Tag: Strawberry

  • ಡೈರೆಕ್ಷನ್ ಮಾಡಲು ನಟಿ ಶ್ರುತಿ ಹರಿಹರನ್ ಸಿದ್ಧತೆ

    ಡೈರೆಕ್ಷನ್ ಮಾಡಲು ನಟಿ ಶ್ರುತಿ ಹರಿಹರನ್ ಸಿದ್ಧತೆ

    ಲೂಸಿಯಾ (Lucia) ಮೂಲಕ ನಾಯಕಿಯಾಗಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿರುವ ನಟಿ ಶ್ರುತಿ ಹರಿಹರನ್ (Shruti Hariharan), ನಿರ್ದೇಶನಕ್ಕೂ (Director) ಮುಂದಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ತಾಯಿಯಾದ ನಂತರ ಸಿನಿಮಾ ರಂಗದಿಂದ ದೂರವಾಗಿದ್ದ ಶ್ರುತಿ, ಇದೀಗ ಮತ್ತೆ ಸಕ್ರೀಯರಾಗಿದ್ದಾರೆ. ಮೂರು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಸದ್ಯದಲ್ಲೇ ಅವರು ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದಾರಂತೆ.

    ಸ್ಟ್ರಾಬೆರಿ, ಈಗ ಮತ್ತು ಸಾರಾಂಶ ಸಿನಿಮಾಗಳಲ್ಲಿ ಮಹತ್ವದ ಪತ್ರಗಳನ್ನು ಮಾಡುತ್ತಿರುವ ಶ್ರುತಿ ಹರಿಹರನ್ ಮುಂದಿನ ದಿನಗಳಲ್ಲಿ ನಿರ್ದೇಶನವನ್ನೂ ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲೇ ಅವರೇ ಹೆಚ್ಚಿನ ಮಾಹಿತಿಯನ್ನೂ ನೀಡಲಿದ್ದಾರೆ. ಈ ಮೂಲಕ ನಟಿಯೊಬ್ಬರು ನಿರ್ದೇಶನಕ್ಕೆ ಇಳಿದ ಯಾದಿಗೆ ಅವರು ಸೇರ್ಪಡೆಯಾಗಲಿದ್ದಾರೆ. ಸಂಪೂರ್ಣ ತಯಾರಿಯೊಂದಿಗೆ ಅಖಾಡಕ್ಕೆ ಇಳಿಯುವ ಮಾತುಗಳನ್ನೂ ಅವರು ಆಡಿದ್ದಾರೆ. ಇದನ್ನೂ ಓದಿ: ಅಪಘಾತವಾಗಿ ಎರಡು ವರ್ಷ: ನಟಿ ರಿಷಿಕಾ ಸಿಂಗ್ ಬದುಕುಳಿದಿದ್ದೇ ಪವಾಡ

    ಕನ್ನಡ ಸಿನಿಮಾ ರಂಗಕಂಡ ಪ್ರತಿಭಾವಂತೆ ಶ್ರುತಿ ಹರಿಹರನ್, ಸಿನಿಮಾ ರಂಗದ ಯಾವುದೇ ಹಿನ್ನೆಲೆ ಇಲ್ಲದೇ, ವಿಭಿನ್ನ ಎನಿಸುವಂತಹ ಚಿತ್ರಗಳಲ್ಲಿ ನಟಿಸಿದವರು. ನಾತಿಚರಾಮಿ ಸಿನಿಮಾದ ನಟನೆಗಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಅವರು ಪಡೆದವರು. ಅಲ್ಲದೇ, ಕನ್ನಡ ಸಿನಿಮಾ ರಂಗದ ಹೆಸರಾಂತ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ಕನ್ನಡದಲ್ಲಿ ಮಾತ್ರವಲ್ಲ, ಇತರ ಭಾಷೆಗಳ ಚಿತ್ರದಲ್ಲೂ ಅವರು ನಟಿಸಿದ್ದಾರೆ. ವ್ಯಾಪಾರಿ ಮತ್ತು ಕಲಾತ್ಮಕ ಚಿತ್ರಗಳ ಮೂಲಕ ಗುರುತಿಸಿಕೊಂಡ ಪ್ರತಿಭಾನ್ವಿತ ನಟಿ ಕೂಡ ಇವರಾಗಿದ್ದಾರೆ.

    ನಟಿಯಾಗಿ ಸಾಕಷ್ಟು ಹೆಸರು ಮಾಡಿರುವ ಶ್ರುತಿ ಹರಿಹರನ್, ಇದೀಗ ನಿರ್ದೇಶಕಿಯಾಗಿ ಅಭಿಮಾನಿಗಳ ಎದುರು ನಿಲ್ಲುತ್ತಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಸೂಕ್ಷ್ಮ ಕಥೆ ಮತ್ತು ಪಾತ್ರಗಳ ಮೂಲಕವೇ ಗುರುತಿಸಿಕೊಂಡವರು, ತಮ್ಮ ನಿರ್ದೇಶನದ ಸಿನಿಮಾಗೆ ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವುದು ಸದ್ಯಕ್ಕೀರುವ ಕುತೂಹಲ. ಮುಂದಿನ ದಿನಗಳಲ್ಲಿ ಈ ಕುರಿತು ಅವರೇ ಹೇಳಲಿದ್ದಾರಂತೆ. ಅಲ್ಲಿವರೆಗೂ ಕಾಯಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 290 ಗ್ರಾಂ ತೂಕದ ಸ್ಟ್ರಾಬೆರಿ ಬೆಳೆದು ವಿಶ್ವ ದಾಖಲೆ

    290 ಗ್ರಾಂ ತೂಕದ ಸ್ಟ್ರಾಬೆರಿ ಬೆಳೆದು ವಿಶ್ವ ದಾಖಲೆ

    ಜೆರುಸಲೇಮ್: ಸಾಮಾನ್ಯವಾಗಿ ಸ್ಟ್ರಾಬೆರಿ ತೂಕ ಎಷ್ಟಿರುತ್ತದೆ? 10 ರಿಂದ 20 ಗ್ರಾಂ? ಇನ್ನೂ ಹೆಚ್ಚೆಂದರೆ 30 ಗ್ರಾಂ ಇರಬಹುದು. ಆದರೆ ಇಲ್ಲಿ ಒಬ್ಬ ವ್ಯಕ್ತಿ ಬರೋಬ್ಬರಿ 290 ಗ್ರಾಂನ ಸ್ಟ್ರಾಬೆರಿ ಬೆಳೆದು ದಾಖಲೆ ಬರೆದಿದ್ದಾನೆ.

    290 ಗ್ರಾಂ ತೂಕದ ದೈತ್ಯ ಸ್ಟ್ರಾಬೆರಿ ಬೆಳೆದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೇರಿರುವ ಘಟನೆ ಇಸ್ರೇಲ್ ದೇಶದ ಕಡಿಮಾ-ಜೋರಾನ್‌ನಲ್ಲಿ ನಡೆದಿದೆ. ಏರಿಯಲ್ ಚಾಹಿ ಈ ದೈತ್ಯ ಸ್ಟ್ರಾಬೆರಿ ಬೆಳೆದ ವ್ಯಕ್ತಿ.

    ಇಸ್ರೆಲ್‌ನ ವ್ಯಕ್ತಿ ಬೆಳೆದಿರುವ ಸ್ಟ್ರಾಬೆರಿ 290 ಗ್ರಾಂ ತೂಗಿದ್ದು, ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಇದನ್ನು ವಿಶ್ವದ ಅತ್ಯಂತ ಭಾರವಾದ ಸ್ಟ್ರಾಬೆರಿ ಎಂದು ತಿಳಿಸಿದೆ. ಇದನ್ನೂ ಓದಿ: ಉತ್ತರ ಪ್ರದೇಶದ ಅಲಿಗಢ ಕಾಲೇಜಿನಲ್ಲಿ ಹಿಜಬ್‌ ಬ್ಯಾನ್‌

    ಈ ದೈತ್ಯ ಸ್ಟ್ರಾಬೆರಿಇಲಾನ್ ಪ್ರಬೇಧಕ್ಕೆ ಸೇರಿದ್ದು, ಏರಿಯಲ್‌ನ ಕುಟುಂಬದ ವ್ಯಾಪಾರ ಸಂಸ್ಥೆ ಸ್ಟ್ರಾಬೆರಿ ಇನ್ ದ ಫೀಲ್ಡ್ ಎಂಬಲ್ಲಿಂದ ಬೆಳೆಸಲಾಗಿದೆ. ಇದನ್ನೂ ಓದಿ: ನೀವು ಮನಸ್ಸು ಬದಲಾಯಿಸುವಿರಿ ಎಂಬ ನಂಬಿಕೆ ಇದೆ – ಲಸಿಕೆ ಬಗ್ಗೆ ಜೊಕೊವಿಕ್‍ಗೆ ಪೂನಾವಾಲ ಸಂದೇಶ

    ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್‌ನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ದೈತ್ಯ ಸ್ಟ್ರಾಬೆರಿಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ವೀಡಿಯೋದಲ್ಲಿ ಮೊದಲಿಗೆ ಐಫೋನ್ ಎಕ್ಸ್ಆರ್‌ನ ತೂಕವನ್ನು ನೋಡಿ ಬಳಿಕ ಸ್ಟ್ರಾಬೆರಿಯ ತೂಕವನ್ನು ನೋಡಲಾಗಿದೆ. ಐಫೋನ್ ಕೇವಲ 194 ಗ್ರಾಂ ತೂಗಿದೆ. ಬಳಿಕ ಸ್ಟ್ರಾಬೆರಿಯ ಉದ್ದ, ಅಗಲ ಹಾಗೂ ಸುತ್ತಳತೆ ನೋಡಿದ್ದು ಅದು ಕ್ರಮವಾಗಿ 18 ಸೆಂ.ಮೀ, 4 ಸೆಂ.ಮೀ, ಹಾಗೂ 34 ಸೆಂ.ಮೀ ಇರುವುದನ್ನು ತೋರಿಸಲಾಗಿದೆ.

  • ಕೃಷಿಯಲ್ಲಿ ಯಶಸ್ಸು ಕಂಡ ಕಾನೂನು ಪದವೀಧರೆ – ದಿನಕ್ಕೆ 30 ಸಾವಿರ ರೂ. ವ್ಯಾಪಾರ

    ಕೃಷಿಯಲ್ಲಿ ಯಶಸ್ಸು ಕಂಡ ಕಾನೂನು ಪದವೀಧರೆ – ದಿನಕ್ಕೆ 30 ಸಾವಿರ ರೂ. ವ್ಯಾಪಾರ

    – ಬರಡು ಭೂಮಿಯಲ್ಲಿ ಸ್ಟ್ರಾಬೆರ್ರಿ ಬೆಳೆದ ಯುವತಿ
    – ಪ್ರಧಾನಿ ಮೋದಿಯಿಂದ ಮೆಚ್ಚುಗೆ

    ತ್ತರ ಪ್ರದೇಶದ ಕಾನೂನು ಪದವೀಧರೆ ಲಾಕ್‍ಡೌನ್ ಸಮಯವನ್ನ ಸದುಪಯೋಗ ಮಾಡಿಕೊಂಡಿದ್ದು, ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಈಗ ಬರಡು ಭೂಮಿಯಿಂದಲೇ ಲಕ್ಷ ಲಕ್ಷ ಹಣವನ್ನ ಯುವತಿ ಸಂಪಾದನೆ ಮಾಡುತ್ತಿದ್ದಾರೆ.

    ಝಾನ್ಸಿಯಲ್ಲಿ ಸ್ಟ್ರಾಬೆರ್ರಿ ಗರ್ಲ್: ಝಾನ್ಸಿ ನಿವಾಸಿ 23 ವರ್ಷದ ಗುರ್ಲಿನ್ ಚಾವ್ಲಾ ಕೃಷಿಯನ್ನ ಕಂಡ ಯುವತಿ. ಇದೀಗ ಝಾನ್ಸಿಯಲ್ಲಿ ಸ್ಟ್ರಾಬೆರ್ರಿ ಗರ್ಲ್ ಅಂತಾನೇ ಗುರುತಿಸಿಕೊಂಡಿದ್ದಾರೆ. ಕಳೆದ ಭಾನುವಾರ ಮನ್ ಕೀ ಬಾತ್ ನಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಸಹ ಗುರ್ಲಿನ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವರ್ಷ ಮಹಾರಾಷ್ಟ್ರದ ಪುಣೆಯಿಂದ ಕಾನೂನು ಪದವಿ ಪಡೆದುಕೊಂಡಿದ್ದಾರೆ. ನಾನು ಕೃಷಿಯಲ್ಲಿ ತೊಡಗಿಕೊಳ್ಳುತ್ತೇನೆಂದು ಕಲ್ಪನೆ ಸಹ ಮಾಡಿಕೊಂಡಿರಲಿಲ್ಲ. ಲಾಕ್‍ಡೌನ್ ವೇಳೆ ಊರಿಗೆ ಬಂದು ಮನೆಯಲ್ಲಿ ಖಾಲಿ ಕುಳಿತುಕೊಂಡಿದ್ದೆ. ಗಾಡರ್ನಿಂಗ್ ನಲ್ಲಿ ಈ ಸಮಯ ಬಳಸಿಕೊಳ್ಳಬೇಕೆಂದು ನಿರ್ಧರಿಸಿದೆ. ಹಾಗಾಗಿ ಮನೆಯಲ್ಲಿಯೆ ಕೆಲ ಸ್ಟ್ರಾಬೆರಿ ಪ್ಲಾಂಟಿಂಗ್ ಮಾಡಿದೆ. ಕೆಲವೇ ದಿನಗಳಲ್ಲಿ ಹಣ್ಣುಗಳ ಮೂಲಕ ಪ್ರತಿಫಲ ನನ್ನದಾಯ್ತು ಎಂದು ಗುರ್ಲಿನ್ ಹೇಳುತ್ತಾರೆ.

    ಆನ್‍ಲೈನ್ ನಲ್ಲಿ ಸ್ಟ್ರಾಬೆರ್ರಿ ಪ್ಲಾಂಟ್ ಹೇಗೆ ಬೆಳೆಯಬೇಕೆಂದು ಗುರ್ಲಿನ್ ಕಲಿತುಕೊಂಡಿದ್ದರು. ಇನ್ನು ಗುರ್ಲಿನ್ ಸಾಧನೆಗೆ ಅವರ ತಂದೆ ಬೆನ್ನಲುಬಾಗಿ ನಿಂತಿದ್ದರು. ಗುರ್ಲಿನ್ ಆಸೆಯಂತೆ ನಾಲ್ಕು ಎಕರೆ ಜಮೀನಿನ ಪೈಕಿ ಒಂದೂವರೆ ಎಕರೆ ಭೂಮಿಯಲ್ಲಿ 20 ಸಾವಿರ ಸ್ಟ್ರಾಬೆರ್ರಿ ಪ್ಲಾಂಟ್ ತಂದು ನೆಟ್ಟಿದ್ದರು. ಅಂದಿನಿಂದ ಗುರ್ಲಿನ್ ರೈತ ಮಹಿಳೆಯಾಗಿ ಪ್ಲಾಂಟ್ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅದರೆಲ್ಲರ ಪರಿಣಾಮ ಡಿಸೆಂಬರ್ ವೇಳೆಗೆ ಸ್ಟ್ರಾಬೆರ್ರಿ ಹಣ್ಣುಗಳ ಗುರ್ಲಿನ್ ಕೈ ಸೇರಿದ್ದವು.

    ದಿನಕ್ಕೆ 250ಕ್ಕೂ ಹೆಚ್ಚು ಆರ್ಡರ್, 30 ಸಾವಿರ ವ್ಯಾಪಾರ:
    ಹಣ್ಣುಗಳು ಬಿಡಲು ಆರಂಭಿಸುತ್ತಿದ್ದಂತೆ ಸ್ಟ್ರಾಬೆರ್ರಿ ಮಾರಾಟಕ್ಕಾಗಿ ಸ್ಥಳೀಯ ಮಾರುಕಟ್ಟೆಯ ಸಂಪರ್ಕ ಮಾಡಿದ್ದರು. ವ್ಯಾಪಾರಸ್ಥರು ಹಣ್ಣುಗಳ ಗುಣಮಟ್ಟಕ್ಕೆ ಮೆಚ್ಚುಗೆ ಸೂಚಿಸಿ ಆರ್ಡರ್ ನೀಡಲಾರಂಭಿಸಿದರು. ಇದೀಗ ಹಲವು ಸೂಪರ್ ಮಾರ್ಕೆಟ್ ಗಳು ಗುರ್ಲಿನ್ ಅವರಿಂದ ಹಣ್ಣುಗಳನ್ನ ಖರೀದಿಸುತ್ತಿವೆ. ಇದೀಗ ತಮ್ಮದೇ ವೆಬ್‍ಸೈಟ್ ಆರಂಭಿಸಿರುವ ಗುರ್ಲಿನ್ ಆನ್‍ಲೈನ್ ಮೂಲಕ ಸಹ ಆರ್ಡರ್ ಗಳನ್ನ ಪಡೆದುಕೊಳ್ಳುತ್ತಿದ್ದಾರೆ. ಪ್ರತಿದಿನ ಸುಮಾರು 70 ಕೆಜಿ ಸ್ಟ್ರಾಬೆರ್ರಿ ಸಿಗುತ್ತೆ. 250ಕ್ಕೂ ಹೆಚ್ಚು ಆರ್ಡರ್ ಪಡೆಯುವ ಗುರ್ಲಿನ್ ಪ್ರತಿನಿತ್ಯ 30 ಸಾವಿರ ರೂ.ನಷ್ಟು ವ್ಯಾಪಾರ ಮಾಡುತ್ತಾರೆ. ಮಿಶ್ರ ಬೇಸಾಯ ಪದ್ಧತಿಯನ್ನ ಅಳವಡಿಸಿಕೊಂಡಿರುವ ಗುರ್ಲಿನ್ ತರಕಾರಿಯನ್ನ ಸಹ ಬೆಳೆಯುತ್ತಾರೆ.

    ಕುಣಿದು ಕುಪ್ಪಳಿಸಿದ ಗುರ್ಲಿನ್ ತಂದೆ:
    ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಐದು ತಿಂಗಳು ಕಳೆಯುವಷ್ಟರಲ್ಲಿಯೇ ಝಾನ್ಸಿಯಲ್ಲಿ ಆಯೋಜಿಸಿದ ಸ್ಟ್ರಾಬೆರ್ರಿ ಫೆಸ್ಟಿವಲ್ ಗೆ ರಾಯಭಾರಿಯನ್ನಾಗಿ ಸಿಎಂ ಯೋಗಿ ಆದಿತ್ಯನಾಥ್ ನೇಮಕ ಮಾಡಿದ್ರು. ಗುರ್ಲಿನ್ ತಂದೆ ಹರ್ಜಿತ್ ಸಿಂಗ್ ಸಾರಿಗೆ ಉದ್ಯಮಿಯಾಗಿದ್ದಾರೆ. ಪ್ರಧಾನಿಗಳು ಮಗಳ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಕ್ಕೆ ಕುಣಿದು ಕುಪ್ಪಳಿಸಿದ್ದಾರೆ. ಇನ್ನು ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಕಚೇರಿಗೆ ಗುರ್ಲಿನ್ ಹಾಗೂ ಅವರ ಕುಟುಂಬವನ್ನ ಕರೆಸಿಕೊಂಡಿದ್ದರು. ಈ ವೇಳೆ ಗುರ್ಲಿನ್ ತಾವು ಬೆಳೆದ ಸ್ಟ್ರಾಬೆರ್ರಿಗಳನ್ನ ಉಡುಗೊರೆಯಾಗಿ ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ.

    ಸ್ಟ್ರಾಬೆರ್ರಿ ಬೆಳೆಯೋದು ಹೇಗೆ?:
    ಸ್ಟ್ರಾಬೆರ್ರಿಯನ್ನು ಲೋಮಿ ಮಣ್ಣಿನಲ್ಲಿ ಬೆಳೆಯೋದು ಸೂಕ್ತ. ಈ ಮಣ್ಣು ಸರಿಯಾದ ಆಮ್ಲಿಯತೆ ಕಾಪಾಡುವ ಖನಿಜ ಅಂಶಗಳನ್ನ ಹೊಂದಿರುತ್ತೆ. ಈ ಮಣ್ಣಿನ ಸ್ಥಿತಿಯನ್ನ ಕಾಪಾಡಿಕೊಳ್ಳಲು ಸಾವಯವ ಗೊಬ್ಬರಗಳನ್ನ ವಾರ್ಷಿಕವಾಗಿ ಬಳಕೆ ಮಾಡಿಕೊಂಡಿರಬೇಕು. ಆಗಸ್ಟ್-ಸೆಪ್ಟೆಂಬರ್ ನಲ್ಲಿ ಸ್ಟ್ರಾಬೆರ್ರಿಗಳನ್ನ ಪ್ಲಾಂಟ್ ಮಾಡಬೇಕು. ಸಸಿಗಳ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಶಾಖ ಹೆಚ್ಚಾದ್ರೆ ಪ್ಲಾಂಟ್ ಒಣಗಿ, ಹಣ್ಣುಗಳ ಕೆಡುತ್ತವೆ. ಆದ್ರೆ ಬುಂದೇಲಖಂಡ್ ನಲ್ಲಿ ಸಾಮಾನ್ಯ ವಾಗಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತೆ. ಅದ್ರೂ ಛಲ ಬಿಡದ ಗುರ್ಲಿನ್ ವೈಜ್ಞಾನಿಕ ನಿಯಮಗಳನ್ನು ಪಾಲಿಸಿ ಸ್ಟ್ರಾಬೆರ್ರಿ ಬೆಳೆದಿದ್ದಾರೆ.