Tag: strangled

  • ಮಹಿಳೆ ಕತ್ತು ಹಿಸುಕಿ ಸಮಾಧಿ ಮಾಡಲು ಹೋಗಿ ತಾನೇ ಸತ್ತ

    ಮಹಿಳೆ ಕತ್ತು ಹಿಸುಕಿ ಸಮಾಧಿ ಮಾಡಲು ಹೋಗಿ ತಾನೇ ಸತ್ತ

    ವಾಷಿಂಗ್ಟನ್: ಮಹಿಳೆಯ ಕತ್ತು ಹಿಸುಕಿ 60ರ ವೃದ್ಧ ಕೊಂದಿದ್ದಾನೆ. ಆಕೆಯನ್ನು ಸಮಾಧಿ ಮಾಡಲು ಹೋಗಿ 60ರ ವೃದ್ಧನೂ ಸಾವನ್ನಪ್ಪಿರುವ ವಿಲಕ್ಷಣ ಘಟನೆ ಯುಎಸ್‍ನಲ್ಲಿ ನಡೆದಿದೆ.

    ದಕ್ಷಿಣ ಕೆರೊಲಿನಾದ ತನ್ನ ಮನೆಯ ಹಿಂಭಾಗದಲ್ಲಿ ಮಹಿಳೆಯನ್ನು 60 ವರ್ಷದ ವೃದ್ಧ ಕತ್ತು ಹಿಸುಕಿ ಸಾಯಿಸಿದ್ದಾನೆ. ನಂತರ ಮಹಿಳೆಯನ್ನು ಸಮಾಧಿ ಮಾಡುವಾಗ ವೃದ್ಧನಿಗೆ ಕಾರ್ಡಿಯಾಕ್ ಅಟ್ಯಾಕ್‌ನಿಂದ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: 80ಕ್ಕೂ ಹೆಚ್ಚು ಮಕ್ಕಳನ್ನ ಕಾಡುತ್ತಿದೆ ಟೊಮೆಟೊ ಜ್ವರ – ಏನಿದರ ಲಕ್ಷಣ? 

    ಈ ಕುರಿತು ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, 60 ವರ್ಷದ ಜೋಸೆಫ್ ಮೆಕಿನ್ನನ್ ಮೃತಪಟ್ಟಿದ್ದಾರೆ. ಮೆಕಿನ್ನನ್‍ಗೆ ಯಾವುದೇ ರೀತಿಯ ಆಘಾತದ ಲಕ್ಷಣಗಳಿರಲಿಲ್ಲ. ಆದರೆ ನೈಸರ್ಗಿಕ ಕಾರಣಗಳಿಂದ ಈ ಸಾವು ಸಂಭವಿಸಿದೆ. ಈ ಕುರಿತು ಜೋಸೆಫ್ ಸಂಬಂಧಿಕರಿಗೆ ತಿಳಿಸಿದ್ದೇವೆ ಎಂದು ತಿಳಿಸಿದರು.

    ಮೆಕಿನ್ನನ್ ಮನೆಯನ್ನು ಶೋಧಿಸುತ್ತಿರುವ ವೇಳೆ ಸಮಾಧಿಯೊಂದು ಸಿಕ್ಕಿದ್ದು, ಪಕ್ಕದಲ್ಲಿ 65 ವರ್ಷದ ವೃದ್ಧೆ ಮೃತದೇಹ ಪತ್ತೆಯಾಗಿದೆ. ಮೃತದೇಹದ ಬಗ್ಗೆ ತನಿಖೆ ಮಾಡಿದಾಗ ಆಕೆ ಪೆಟ್ರೀಷಿಯಾ ರುತ್ ಡೆಂಟ್ ಎಂದು ತಿಳಿಸಿದುಬಂದಿದೆ ಎಂದು ವಿವರಿಸಿದರು.

    ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಪೆಟ್ರೀಷಿಯಾ ರುತ್ ಡೆಂಟ್ ಸಹಜ ಸಾವಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಈ ಕುರಿತು ಪರಿಶೀಲಿಸಿದಾಗ ಮೆಕಿನ್ನನ್ ಅವರು ಪೆಟ್ರೀಷಿಯಾ ರುತ್ ಡೆಂಟ್ ಮೇಲೆ ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳು ಸಿಕ್ಕಿವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳಲು ಟವರ್ ಹತ್ತಿದ್ದ ಮಹಿಳೆ ಪ್ರಾಣ ಉಳಿಸಿದ ಕಣಜಗಳು

  • ಗುಪ್ತಾಂಗ ಸೇರಿ ದೇಹದಲ್ಲಿ 86 ಗಾಯಗಳನ್ನು ಮಾಡಿ 9ರ ಬಾಲಕಿಯನ್ನು ಕತ್ತು ಹಿಸುಕಿ ಕೊಲೆಗೈದ್ರು!

    ಗುಪ್ತಾಂಗ ಸೇರಿ ದೇಹದಲ್ಲಿ 86 ಗಾಯಗಳನ್ನು ಮಾಡಿ 9ರ ಬಾಲಕಿಯನ್ನು ಕತ್ತು ಹಿಸುಕಿ ಕೊಲೆಗೈದ್ರು!

    ಗಾಂಧಿನಗರ: ಕಥುವಾದಲ್ಲಿ ನಡೆದ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿರೋ ಬೆನ್ನಲ್ಲೇ ಇದೀಗ ಸೂರತ್ ನಲ್ಲಿ ಅಂತಹದ್ದೇ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಗುಜರಾತ್ ರಾಜ್ಯದ ಸೂರತ್‍ನ ಭೆಸ್ತಾನ ಪ್ರದೇಶದಲ್ಲಿ ಏಪ್ರಿಲ್ 6ರಂದು 9 ವರ್ಷದ ಬಾಲಕಿಯ ಶವ ಸಿಕ್ಕಿದ್ದು, ಆಕೆಯ ಮೇಲೆ ನಿರಂತರ 5 ದಿನ ಅತ್ಯಾಚಾರ ಮಾಡಿ, 8 ದಿನ ಚಿತ್ರಹಿಂಸೆ ನೀಡಿ, ನಂತರ ಕೊಲೆ ಮಾಡಲಾಗಿದೆ ಎಂಬುದಾಗಿ ವರದಿಯಾಗಿದೆ.

    ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಸಿದಾಗ, ಆಕೆಯ ಮೇಲೆ ನಿರಂತರವಾಗಿ 5 ದಿನ ಅತ್ಯಾಚಾರ ಮಾಡಿ, ಮರದ ಆಯುಧಗಳಿಂದ ಚುಚ್ಚಿ ಚಿತ್ರ ಹಿಂಸೆ ನೀಡಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಗುಪ್ತಾಂಗ ಸೇರಿದಂತೆ ದೇಹದ ವಿವಿಧ ಭಾಗದಲ್ಲಿ 80 ಗಾಯಗಳಾಗಿವೆ ಎಂದು 5 ಗಂಟೆ ನಡೆಸಲಾದ ಪರೀಕ್ಷೆಯಲ್ಲಿ ತಿಳಿದು ಬಂದಿದೆ.

    ಏಳು ದಿನಗಳಿಂದಲೇ ನಿರಂತರವಾಗಿ ಆಕೆಗೆ ಚಿತ್ರಹಿಂಸೆ ನೀಡಿದ್ದು, ದೇಹದ ಹೊರಭಾಗದಲ್ಲಿ ಸುಮಾರು 86 ಗಾಯಗಳಿವೆ ಎಂದು ಸಿವಿಲ್ ಆಸ್ಪತ್ರೆಯ ಫಾರೆನ್ಸಿಸ್ ಮುಖ್ಯಸ್ಥ ಗಣೇಶ ಗೊವೇಕರ್ ತಿಳಿಸಿದ್ದಾರೆ.

    ಆದರೆ, ಮೃತ ಬಾಲಕಿಯ ಕುರಿತಾಗಿದೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.