Tag: Store

  • ಕ್ಷಣಾರ್ಧದಲ್ಲಿ 18 ಸಾವಿರ ರೂ. ಎಗರಿಸಿದ ಮಕ್ಕಳು!

    ಕ್ಷಣಾರ್ಧದಲ್ಲಿ 18 ಸಾವಿರ ರೂ. ಎಗರಿಸಿದ ಮಕ್ಕಳು!

    ಬೆಂಗಳೂರು: ರಾಜ್ಯವೇ ಬೆಚ್ಚಿ ಬೀಳುವಂತಹ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಚಿಕ್ಕ ಮಕ್ಕಳನ್ನು ಕಳುಹಿಸಿ ಕಳ್ಳತನ ಮಾಡುವ ಘಟನೆ ನೆಲಮಂಗಲ ಸಮೀಪದ ಅಡಕಿಮಾರನಹಳ್ಳಿಯಲ್ಲಿ ನಡೆದಿದೆ.

    ಇಬ್ಬರು ಚಿಕ್ಕ ಮಕ್ಕಳು ಮೊಬೈಲ್ ಅಂಗಡಿಗೆ ಬಂದು, ಕೌಂಟರ್‍ನಲ್ಲಿ ಇರುವ ವಸ್ತು ಹಾಗೂ ಹಣವನ್ನು ತೆಗೆದುಕೊಂಡು ಹೋಗಿದ್ದರು. ಬಳಿಕ ಕಳ್ಳತನವಾಗಿದೆ ಎಂದು ಅರಿತ ಅಂಗಡಿಯ ಮಾಲೀಕ ಮಂಜುನಾಥ್ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ನೋಡಿದಾಗ ಮಕ್ಕಳ ಕೈ ಚಳಕ ಬಯಲಾಗಿದೆ.

    ವಿಡಿಯೋದಲ್ಲಿ ಏನಿದೆ?
    ಮಧ್ಯಾಹ್ನ ವೇಳೆಗೆ ಮೊದಲು ಒಬ್ಬ ಬಾಲಕ ಮಾತ್ರ ಅಂಗಡಿಯ ಒಳಗೆ ಬರುತ್ತಾನೆ. ತನ್ನ ಕೈಗೆ ಸಿಕ್ಕ ಹಣ ಹಾಗೂ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾನೆ. ಬಳಿಕ ತನ್ನ ಅಣ್ಣನನ್ನು ಕರೆದುಕೊಂಡು ಬಂದು ಮತ್ತಷ್ಟು ಹಣ ಹಾಗೂ ಸಿಮ್ ಕಾರ್ಡ್ ಪ್ಯಾಕೆಟ್ ತೆಗೆದುಕೊಂಡು ಹೋಗುತ್ತಾರೆ. ಕ್ಷಣಾರ್ಧದಲ್ಲಿ ತಮ್ಮ ಕೈ ಚಳಕ ತೋರಿಸಿ ಪರಾರಿಯಾಗಿರುತ್ತಾರೆ.

    ಮಕ್ಕಳು ಸ್ಥಳೀಯ ನಿವಾಸಿಗಳು ಎಂದು ಅರಿತ ಅಂಗಡಿ ಮಾಲೀಕ ಮಂಜುನಾಥ್ ಅವರ ಪತ್ತೆಗಾಗಿ ಹುಡುಕಾಟ ನಡೆಸುತ್ತಾರೆ. ಸ್ಥಳೀಯ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರನ್ನು ವಿಚಾರಿಸಿದಾಗ, ಅಲ್ಪ ಸ್ವಲ್ಪ ಮಾಹಿತಿ ದೊರೆಯುತ್ತದೆ. ಇದನ್ನು ಆಧಾರಿಸಿ ಮಂಜನಾಥ್ ಕಳ್ಳತನ ಮಾಡಿದ ಮಕ್ಕಳ ಮನೆಗೆ ಹೋದಾಗ ಒಬ್ಬ ಬಾಲಕ ಮಾತ್ರ ಸಿಕ್ಕಿಬಿದ್ದಿದ್ದಾನೆ. ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿದ್ದ 18 ಸಾವಿರ ರೂ. ತಂದುಕೊಡುತ್ತಾನೆ. ಈ ಘಟನೆಯು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಪ್ಪಳದಲ್ಲಿ ಬೆಳ್ಳಂಬೆಳಗ್ಗೆ ಧಾರಾಕಾರ ಮಳೆ- ಕಾಂಪ್ಲೆಕ್ಸ್ ಗೆ ಚರಂಡಿ ನೀರು ನುಗ್ಗಿ ಅವಾಂತರ

    ಕೊಪ್ಪಳದಲ್ಲಿ ಬೆಳ್ಳಂಬೆಳಗ್ಗೆ ಧಾರಾಕಾರ ಮಳೆ- ಕಾಂಪ್ಲೆಕ್ಸ್ ಗೆ ಚರಂಡಿ ನೀರು ನುಗ್ಗಿ ಅವಾಂತರ

    ಕೊಪ್ಪಳ: ಈ ಬಾರಿ ಬಿಸಿಲಿನ ಬೆಗೆಯಿಂದ ತತ್ತರಿಸಿದ್ದ ಜನತೆಗೆ ಇಂದು ಮುಂಜಾನೆ ಸುರಿದ ಬಾರಿ ಮಳೆ ಜನರಿಗೆ ಸಂತಸ ಮೂಡಿಸಿದೆ. ಆದರೆ ಇನ್ನೊಂದೆಡೆ ಕಾಂಪ್ಲೆಕ್ಸ್ ಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

    ಕೊಪ್ಪಳ ನಗರ ಸೇರಿದಂತೆ ಹಲವೆಡೆ ಇಂದು ನಸುಕಿನ ಜಾವ ಸುರಿದ ಬಾರಿ ಮಳೆ ಅವಾಂತರವನ್ನು ಸೃಷ್ಟಿ ಮಾಡಿದೆ. ಕೊಪ್ಪಳದ ಗಡಿಯಾರ ಕಂಬದ ಬಳಿ ಇರುವ ನಗರ ಸಭೆಯ ಮಳಿಗೆಗಳಿಗೆ ಚರಂಡಿ ನೀರು ನುಗ್ಗಿದ್ದು ಭಾರೀ ಪ್ರಮಾಣದ ಎಲೆಕ್ಟ್ರಾನಿಕ್ಸ್ ವಸ್ತುಗಳು ಚರಂಡಿ ನೀರಲ್ಲಿ ತೇಲುತ್ತಿವೆ. ಅಷ್ಟೇ ಅಲ್ಲದೇ ನಗರಸಭೆಯ ಒಳಚರಂಡಿ ವ್ಯವಸ್ಥೆಯ ದುರಸ್ಥಿ ಕಾಮಗಾರಿಯ ಅವ್ಯವಸ್ಥೆಯಿಂದ ಅಂಗಡಿ ಮುಂಗಟ್ಟುಗಳಿಗೆ ಚರಂಡಿ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.

    ಒಳಚರಂಡಿ ದುರಸ್ತಿ ಕಾಮಗಾರಿ ಸರಿಯಾಗಿ ಮಾಡದೆ ಇರುವುದು ಇದಕ್ಕೆಲ್ಲಾ ಕಾರಣವಾಗಿದ್ದು, ಈ ಕುರಿತು ಬಾಡಿಗೆದಾರರು ಸಾಕಷ್ಟು ಬಾರಿ ನಗರಸಭೆಗೆ ದೂರು ನೀಡಿದ್ದರೂ ಅಧಿಕಾರಿಗಳು ಮಾತ್ರ ಇದನ್ನು ಸರಿಪಡಿಸುವ ಗೋಜಿಗೆ ಹೋಗದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

  • ಸ್ವಾಭಿಮಾನಿ ಬದುಕಿಗೆ ಹಂಬಲಿಸುತ್ತಿರುವ ವಿಕಲಚೇತನಿಗೆ ಬೇಕಿದೆ ಸಹಾಯ

    ಸ್ವಾಭಿಮಾನಿ ಬದುಕಿಗೆ ಹಂಬಲಿಸುತ್ತಿರುವ ವಿಕಲಚೇತನಿಗೆ ಬೇಕಿದೆ ಸಹಾಯ

    ತುಮಕೂರು: ಸ್ವಾಭಿಮಾನದಿಂದ ಬದುಕಬೇಕು ಎಂದು ಹಂಬಲಿಸುವ ವಿಕಲಚೇತನ ವ್ಯಕ್ತಿಯೊಬ್ಬರು ತನಗೊಂದು ಅಂಗಡಿ ಮಳಿಗೆ ಕೊಡಿ ಎಂದು ಎಪಿಎಂಸಿ ಅಧಿಕಾರಿಗಳ ಬಳಿ ಅಂಗಲಾಚಿದ್ದಾರೆ. ಆದರೆ ಕರುಣೆ ಇಲ್ಲದ ಅಧಿಕಾರಿಗಳು ಸತತ ಮೂರು ವರ್ಷಗಳಿಂದ ಕಾಯಿಸಿ ಸಹಾಯವನ್ನು ಮಾಡದೇ ಬಾಳಿನಲ್ಲಿ ಕಣ್ಣೀರು ಹಾಕಿಸಿದ್ದಾರೆ.

    ಹೌದು, ತುಮಕೂರಿನ ಗಂಗರಾಜು ಬದುಕು ಕಟ್ಟಿಕೊಳ್ಳಲು ಒಂದು ಅಂಗಡಿಗಾಗಿ ಅಲೆಯತ್ತಿದ್ದಾರೆ. ಗಂಗರಾಜು ಸ್ವಂತ ಉದ್ಯೋಗಕ್ಕಾಗಿ ತುಮಕೂರು ನಗರದಲ್ಲಿರುವ ಅಂತರಸನಹಳ್ಳಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ನಡೆಸಲು ಇಚ್ಚಿಸಿದ್ದರು. ಹಾಗಾಗಿ ಅಂಗವಿಕಲ ಮೀಸಲಾತಿ ಅಡಿಯಲ್ಲಿ ಅಂಗಡಿ ಮಳಿಗೆ ಮಂಜೂರು ಮಾಡಿ ಎಂದು ಕಳೆದ ಮೂರು ವರ್ಷಗಳಿಂದ ಮನವಿ ಮಾಡಿದ್ದಾರೆ. ಎಪಿಎಂಸಿ ಅಧಿಕಾರಿಗಳು, ಅಧ್ಯಕ್ಷರು ಸೇರಿದಂತೆ ಎಲ್ಲರಲ್ಲೂ ಮನವಿ ಮಾಡಿಕೊಂಡಿದ್ದರೂ ಸಹಾಯ ಮಾತ್ರ ಆಗಲೇ ಇಲ್ಲ.

    ಗಂಗರಾಜು ಅವರಿಗೆ ಅಂಗಡಿ ಮಳಿಗೆ ನೀಡುವಂತೆ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು ಶಿಫಾರಸ್ಸು ಪತ್ರವನ್ನೂ ನೀಡಿದ್ದಾರೆ. ಇಷ್ಟಾದರೂ ಅವರಿಗೆ ಅಂಗಡಿ ಮಳಿಗೆ ಲಭಿಸಿಲ್ಲ. ಸುಮಾರು 10 ಕ್ಕೂ ಹೆಚ್ಚು ಮಳಿಗೆಗಳು ಮಾರುಕಟ್ಟೆಯಲ್ಲಿ ಖಾಲಿ ಇದೆ. ಮಾನವೀಯತೆ ದೃಷ್ಟಿಯಿಂದ ಒಂದಾದರೂ ಕೊಟ್ಟರೆ ತಾನು ಬದುಕು ಕಟ್ಟಿಕೊಳ್ಳುತ್ತೇನೆ ಎನ್ನುವುದು ಗಂಗರಾಜು ಅವರ ವಾದ.

    ಪ್ರಸ್ತುತ ಗಂಗರಾಜು ಒಳ ಬಾಡಿಗೆ ಅಂಗಡಿ ಪಡೆದು ಹೆಚ್ಚಿನ ಬಾಡಿಗೆ ನೀಡಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಗಂಗರಾಜು ಅವರಿಗೆ ಆರ್ಥಿಕವಾಗಿ ಹೆಚ್ಚು ಹೊರೆಯಾಗುತ್ತಿದೆ. ಸರ್ಕಾರದಿಂದ ಅಂಗಡಿ ಮಳಿಗೆ ಮಂಜೂರಾದರೆ ವ್ಯಾಪಾರದಲ್ಲಿ ಲಾಭ ಉಳಿಸಿಕೊಳ್ಳಬಹುದು ಎಂಬುದು ಗಂಗರಾಜು ಅವರ ಇಂಗಿತ.

    ಎಪಿಎಂಸಿ ಕಾರ್ಯದರ್ಶಿ ಕೋಡಿಗೌಡರು ಹೇಳುವುದು ಬೇರೆ. ಕಳೆದ ಬಾರಿ ಲೈಸನ್ಸ್ ಇಲ್ಲದ ಕಾರಣ ಅಂಗಡಿ ಮಳಿಗೆ ನೀಡಲು ಸಾಧ್ಯವಾಗಿಲ್ಲ. ಈ ಬಾರಿ ಹರಾಜು ಕರೆದಿದ್ದರಿಂದ ಅಂಗವಿಕಲರಿಗೆ ಮೀಸಲಾತಿ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಮಾನವೀಯತೆ ದೃಷ್ಟಿಯಿಂದ ಮಾರುಕಟ್ಟೆಯ ಆವರಣದಲ್ಲೇ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಹೂವಿನ ವ್ಯಾಪಾರ ನಡೆಸಲು ಅನುವು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.

    https://www.youtube.com/watch?v=2ZcwlRPENE8

  • ಬ್ರೈನ್ ಟ್ಯೂಮರ್ ನಿಂದ ದೃಷ್ಟಿ ಕಳೆದುಕೊಂಡ ಯುವತಿಗೆ ಬೇಕಿದೆ ಸಹಾಯ ಹಸ್ತ

    ಬ್ರೈನ್ ಟ್ಯೂಮರ್ ನಿಂದ ದೃಷ್ಟಿ ಕಳೆದುಕೊಂಡ ಯುವತಿಗೆ ಬೇಕಿದೆ ಸಹಾಯ ಹಸ್ತ

    ರಾಮನಗರ: ಬ್ರೈನ್ ಟ್ಯೂಮರ್ ನಿಂದ ಕಣ್ಣು ಕಳೆದುಕೊಂಡಿರುವ ಯುವತಿಯ ಜೀವನಾಧರಕ್ಕೆ ಸಹಾಯ ಕೋರಿ ಆಕೆಯ ಕುಟುಂಬಸ್ಥರು ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕೋಟೆ ನಿವಾಸಿ ಪ್ರೇಮಾ ಅವರ ಮಗಳು ಚಂದ್ರಿಕಾ 13 ವಯಸ್ಸಿನಲ್ಲಿರುವಾಗಲೇ ಬ್ರೈನ್ ಟ್ಯೂಮರ್ ಕಾಣಿಸಿಕೊಂಡಿತ್ತು. ನಂತರ ಶಸ್ತ್ರಚಿಕಿತ್ಸೆ ಮಾಡಿದ ವೇಳೆ ಚಂದ್ರಿಕಾ ದೃಷ್ಟಿ ಕಳೆದುಕೊಂಡಿದ್ದಾರೆ. ತಾನು ಸಾಧಿಸಬೇಕೆಂಬ ಛಲದಿಂದ ರಾಮನಗರದ ಬಿಜಿಎಸ್ ಅಂಧರ ಶಾಲೆಯಲ್ಲಿ ಪಿಯುಸಿ ತನಕ ಚಂದ್ರಿಕಾ ವ್ಯಾಸಂಗ ಮಾಡಿದ್ದಾರೆ. ಬ್ರೈನ್ ಟ್ಯೂಮರ್‍ನಿಂದ ತತ್ತರಿಸಿ ಹೋಗಿರುವ ಚಂದ್ರಿಕಾರಿಗೆ ಆಗಾಗ ಮೂರ್ಚೆರೋಗ ಸಹ ಬರುತ್ತಿದೆ.

    ತಾಯಿ ಪ್ರೇಮಾರಿಗೆ ಒಂದೆಡೆ ಮಗಳನ್ನು ಸಾಕುವ ಹೊಣೆಯಿದ್ರೆ, ಹೊಟ್ಟೆ ಹೊರೆಯುವುದಕ್ಕೆ ಮನೆ ಕೆಲಸ ಮಾಡಲೇಬೇಕಿದೆ. ಹಾಗಾಗಿ ತನ್ನ ತಾಯಿ ಜೊತೆಯಲ್ಲಿಯೇ ಇದ್ದು ನೋಡಿಕೊಳ್ಳುವುದರ ಜೊತೆಗೆ ಏನಾದ್ರೂ ಸಣ್ಣ ಸಂಪಾದನೆ ಮಾಡೋಕೆ ಸಣ್ಣದೊಂದು ಅಂಗಡಿ ಹಾಕಿಕೊಟ್ಟರೆ ಕುರುಡು ಹುಡುಗಿಗೆ ಊರುಗೋಲು ನೀಡಿದಂತಾಗುತ್ತದೆ ಅನ್ನೋದು ಚಂದ್ರಿಕಾ ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಒಟ್ಟಾರೆ ಸ್ವಂತದ್ದು ಅಂತಾ ಯಾವುದೇ ಆಸ್ತಿಯನ್ನು ಹೊಂದಿರದ ಪ್ರೇಮಾರಿಗೆ ಮಗಳೇ ಆಸ್ತಿಯಾಗಿದ್ದಾಳೆ. ಮಗಳ ಮದುವೆ ಮಾಡಿ ಮೊಮ್ಮಕ್ಕಳನ್ನು ಕಾಣುವ ಕನಸು ಕಂಡಿದ್ದವರಿಗೆ ಇದೀಗ ಮಗಳನ್ನೇ ಕಣ್ಣಲ್ಲಿ ಕಣ್ಣಿಟ್ಟು ಕಾಯುವಂತಾಗಿದೆ. ಹಾಗಾಗಿ ಯಾರಾದ್ರೂ ದಾನಿಗಳು ಈ ಬಡ ಕುಟುಂಬಕ್ಕೆ ನೆರವಾಗಿ ಜೀವನಾಧಾರಕ್ಕೊಂದು ಊರುಗೋಲಿನಿಂತಾದ್ರೆ, ಕುಟುಂಬವೊಂದಕ್ಕೆ ನೆಮ್ಮದಿ ನೆಲೆ ಕಲ್ಪಿಸಿ ಅನ್ನೋದು ಪಬ್ಲಿಕ್ ಟಿವಿಯ ಆಶಯ.

    https://www.youtube.com/watch?v=hfAkaAbDnWU

  • ಸ್ವಾಭಿಮಾನಿ ಜೀವನವನ್ನು ನಡೆಸುತ್ತಿರುವ ಮಹಿಳೆಗೆ ಬೇಕಿದೆ ಸಹಾಯ

    ಸ್ವಾಭಿಮಾನಿ ಜೀವನವನ್ನು ನಡೆಸುತ್ತಿರುವ ಮಹಿಳೆಗೆ ಬೇಕಿದೆ ಸಹಾಯ

    ಬಾಗಲಕೋಟೆ: ಒಂದು ಕಡೆ ಬೆಂಬಿಡದೇ ಕಾಡ್ತಿರೋ ಬಡತನ, ಮತ್ತೊಂದೆಡೆ ಗಂಡನನ್ನ ಕಳೆದುಕೊಂಡು, ರಸ್ತೆ ಬದಿ ಅಂಗಡಿ ವ್ಯಾಪಾರ ಮಾಡಿಕೊಂಡು ಮನೆ ಸಾಗಿಸುತ್ತಿರುವ ದಿಟ್ಟ ಮಹಿಳೆ. ಆದರೆ ಇಬ್ಬರು ಗಂಡು ಮಕ್ಕಳ ತಾಯಿಯಾಗಿರುವ ಮಹಿಳೆಗೆ ರಸ್ತೆ ಬದಿ ತಿಂಡಿ ತಿನಿಸುಗಳ ವ್ಯಾಪಾರ ಮಾಡಿ ಜೀವನ ಸಾಗಿಸಲು ಕಷ್ಟವಾಗತ್ತಿದೆ. ಅಂದ ಹಾಗೆ ಇದು ಬಾಗಲಕೋಟೆ ಪಟ್ಟಣದ ಬಿಲಾಲ್ ಮಸೀದಿ ಹತ್ತಿರ ಇರುವ ಫಾತೀಮಾ ಮುಲ್ಲಾ ಎಂಬುವರ ಕರುಣಾಜನಕ ಕಥೆ.

    ಫಾತೀಮಾ ಮುಲ್ಲಾ ಬಾಗಲಕೋಟೆಯ ವಾರ್ಡ ನಂಬರ್ 10ರ ನಿವಾಸಿ. ಈ ದಿಟ್ಟ ಮಹಿಳೆಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಒಬ್ಬ ಸಾದಿಕ್ ಪೆಂಡಲ್ ಹಾಕೋ ಕೆಲಸ ಮಾಡ್ತಾನೆ, ಇನ್ನೊಬ್ಬ ಸಮೀರ್ ವ್ಯಾಸಂಗ ಮಾಡುತ್ತಿದ್ದಾನೆ. ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಗಂಡ ತೀರಿಹೋಗಿ 15 ವರ್ಷಗಳಾಯ್ತು. ಗಂಡ ತೀರಿಹೋಗಿದ್ದಾಗಿನಿಂದ ಮನೆಯ ಜವಾಬ್ದಾರಿಯನ್ನ ತಾವೇ ನಿರ್ವಹಿಸುತ್ತಿದ್ದಾರೆ. ಈ ಮಹಿಳೆಗೆ ಕಾಲೋನಿ ಜನರೆಲ್ಲ ಸೇರಿ ಒಂದು ಒತ್ತುವ ಗಾಡಿ ಕೊಡಿಸಿಕೊಟ್ಟರು. ಆದರೆ ಸದ್ಯ ಆ ಒತ್ತುವ ಗಾಡಿ ದುರಸ್ತಿ ಅಂಚಿಗೆ ತಲುಪಿದ್ದು, ಮಳೆ ಗಾಳಿ ಬಂದರೆ ವ್ಯಾಪಾರ ಬಂದ್ ಆಗುತ್ತದೆ.

    ಒಂದು ದಿನ ವ್ಯಾಪಾರ ನಡಿಲಿಲ್ಲ ಎಂದರೆ ಮನೆಯ ಎಲ್ಲರಿಗೂ ಉಪವಾಸವೇ ಗತೀ. ಆದರೆ ರಸ್ತೆ ಬದಿ ಸಣ್ಣ ಅಂಗಡಿ ಹಾಕಿಕೊಂಡಿರೆ ಮಹಿಳೆಗೆ ಸ್ವಂತ ಮನೆ ಇಲ್ಲ. ಇರುವ ಬಾಡಿಗೆ ಶೆಡ್ ಗೆ ಬಾಡಿಕೆ ನೀಡಲು ಆಗುತ್ತಿಲ್ಲ. ಮಕ್ಕಳಿಗೆ ಒಂದು ಒಳ್ಳೆ ಶಿಕ್ಷಣ ಕೊಡಿಸಬೇಕು ಎನ್ನುವ ಕನಸು ಹೊಂದಿರುವ ಫಾತೀಮಾ ಅವರಿಗೆ ಒಂದು ಆಶ್ರಯ ಮನೆ ಹಾಗೂ ಕಬ್ಬಿಣದಿಂದ ತಯಾರಿಸಲ್ಪಟ್ಟ ಕಪಾಟ್ ಅಂಗಡಿ ಕೊಡಿಸಿದ್ರೆ ಸ್ವಾಭಿಮಾನಿ ಜೀವನಕ್ಕೆ ಅಧಾರವಾಗುತ್ತದೆ.

  • ಕಿಡಿಗೇಡಿಗಳಿಂದ ತರಕಾರಿ ಅಂಗಡಿಗಳಿಗೆ ಬೆಂಕಿ

    ಕಿಡಿಗೇಡಿಗಳಿಂದ ತರಕಾರಿ ಅಂಗಡಿಗಳಿಗೆ ಬೆಂಕಿ

    ಚಾಮರಾಜನಗರ: ಕಿಡಿಗೇಡಿಗಳು ತರಕಾರಿ ಅಂಗಡಿಗಳಿಗೆ ಬೆಂಕಿ ಹಚ್ಚಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ.

    ರವಿ ಹಾಗೂ ಮರಿಶೆಟ್ಟಿ ಎಂಬವರಿಗೆ ಸೇರಿದ ಮೂರು ತರಕಾರಿ ಅಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ರಾತ್ರಿ ಯಾರೋ ಕಿಡಿಗೇಡಿಗಳು ಅಂಗಡಿಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದ ಅಂಗಡಿ ಒಳಗಿದ್ದ ತರಕಾರಿ ಸುಟ್ಟು ಭಸ್ಮವಾಗಿದೆ.

    ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.