Tag: stop

  • ಕ್ಯಾತಸಂದ್ರ ನಿಲ್ದಾಣದ ಬಳಿ ಪ್ರತಿ ರೈಲಿಗೆ ನಿಲುಗಡೆ!

    ಕ್ಯಾತಸಂದ್ರ ನಿಲ್ದಾಣದ ಬಳಿ ಪ್ರತಿ ರೈಲಿಗೆ ನಿಲುಗಡೆ!

    ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿ ಶಿವೈಕ್ಯಗೊಂಡ ಹಿನ್ನೆಲೆಯಲ್ಲಿ ಕ್ಯಾತಸಂದ್ರ ರೈಲ್ವೆ ನಿಲ್ದಾಣದ ಬಳಿ ಪ್ರತಿಯೊಂದು ರೈಲುಗಳು ಸ್ಟಾಪ್ ನೀಡುತ್ತಿವೆ.

    ಮಠದ ಸಮೀಪವೇ ಕ್ಯಾತಸಂದ್ರ ರೈಲ್ವೆ ನಿಲ್ದಾಣ ಇದೆ. ಈ ಹಿಂದೆ ಪ್ಯಾಸೆಂಜರ್ ರೈಲು ಮಾತ್ರ ಕ್ಯಾತಸಂದ್ರ ರೈಲು ನಿಲ್ದಾಣದಲ್ಲಿ ನಿಂತು ಮುಂದೆ ಸಾಗುತ್ತಿತ್ತು. ಆದರೆ ಈಗ ಲಕ್ಷಾಂತರ ಭಕ್ತರು ರೈಲಿನಲ್ಲಿ ಶ್ರೀಗಳ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕೆ ಕ್ಯಾತಸಂದ್ರದ ಬಳಿ ಸ್ಟಾಪ್ ನೀಡಲು ರೈಲ್ವೆ ಇಲಾಖೆ ವ್ಯವಸ್ಥೆ ಮಾಡಿದೆ.

    ಅಷ್ಟೇ ಅಲ್ಲದೇ ಮಠದ ಬಳಿ ಗಂಟೆಗೆ 20 ಕಿ.ಮೀ ವೇಗದಲ್ಲಿ ಮಾತ್ರ ರೈಲು ಸಂಚಾರ ಮಾಡುತ್ತಿದೆ. ಲಕ್ಷಾಂತರ ಭಕ್ತರು ರೈಲ್ವೆ ಹಳಿ ಕ್ರಾಸ್ ಮಾಡುತ್ತಿರುವ ಕಾರಣ ಮಠದ ಬಳಿ ರೈಲು ನಿಧಾನವಾಗಿ ಚಲಿಸುತ್ತಿದೆ. ಭಕ್ತರು ರೈಲ್ವೆ ಹಳಿ ದಾಟುವ ಜಾಗದಲ್ಲೂ ರೈಲ್ವೆ ಪೊಲೀಸರು ಭದ್ರತೆ ನಿಯೋಜನೆ ಮಾಡಿದ್ದಾರೆ.

    ಸುಮಾರು 60 ಜನ ರೈಲ್ವೆ ರಕ್ಷಣಾ ಸಿಬ್ಬಂದಿಯಿಂದ ಮಠದ ಬಳಿಯಿರುವ ರೈಲ್ವೆ ಹಳಿ ಬಳಿ ಭದ್ರತೆ ನೀಡುತ್ತಿದ್ದು, ರೈಲು ಬರುವಾಗ ಯಾರಾದರೂ ಹಳಿ ದಾಟುವಾಗ ಅವಸರ ಮಾಡಬಹುದೆಂದು ಮುನ್ನೆಚ್ಚರಿಕಾ ಕ್ರಮವಾಗಿ ರೈಲ್ವೆ ಹಳಿ ಪಕ್ಕದಲ್ಲೇ ರೈಲ್ವೆ ಪೊಲೀಸರು ರಕ್ಷಣೆಗೆ ನಿಂತಿದ್ದಾರೆ.

    https://www.youtube.com/watch?v=N87G5rvOTYs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಂಚ ಫಲಿತಾಂಶದಿಂದ ಸಿಎಂ ಎಚ್‍ಡಿಕೆ ನಿರಾಳ!

    ಪಂಚ ಫಲಿತಾಂಶದಿಂದ ಸಿಎಂ ಎಚ್‍ಡಿಕೆ ನಿರಾಳ!

    ಬೆಂಗಳೂರು: ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಮುಂದಾಗಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ರೆಡ್ ಸಿಗ್ನಲ್ ನೀಡಿದೆ. ಈ ಮೂಲಕ ಸಿಎಂ ಕುಮಾರಸ್ವಾಮಿ ನಿರಾಳರಾಗಿದ್ದಾರೆ.

    ಪಂಚರಾಜ್ಯ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ. ಈ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ಆಪರೇಷನ್ ಕಮಲ ನಡೆಸದಂತೆ ತಡೆ ಹಿಡಿದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಹೈಕಮಾಂಡ್ ನಿರ್ಧಾರದಿಂದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಮುಖ್ಯಮಂತ್ರಿಯಾಗುವ ಕನಸು ನನಸಾಗುವ ಸಾಧ್ಯತೆಗಳು ತೀರಾ ಕಡಿಮೆಯಾಗಿದೆ.

    ಬಿಜೆಪಿ ಹೈಕಮಾಂಡೇ ರಾಜ್ಯ ನಾಯಕರಿಗೆ ಆಪರೇಷನ್ ಕಮಲ ನಡೆಸದಂತೆ ಹೇಳಿದೆ. ಇದರಿಂದಾಗಿ ಸಿಎಂ ಕುಮಾರಸ್ವಾಮಿ ನಿರಾಳರಾಗಿದ್ದಾರೆ. ಒಂದು ವೇಳೆ ಈ ಚುನಾವಣೆಯಲ್ಲಿ ಜನ ಬಿಜೆಪಿಯ ಕೈ ಹಿಡಿದಿದ್ದರೆ ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯುವ ಸಾಧ್ಯತೆ ಇತ್ತು ಎನ್ನುವ ಮಾತು ಫಲಿತಾಂಶಕ್ಕೆ ಮೊದಲೇ ಹರಿದಾಡುತಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಚೀನಾದಲ್ಲಿ ಜನರಲ್ ಮೋಟಾರ್ಸ್ ಸಂಸ್ಥೆಯ ಕಾರು ಉತ್ಪಾದನೆ ನಿಲ್ಲಿಸಿ: ಡೊನಾಲ್ಡ್ ಟ್ರಂಪ್

    ಚೀನಾದಲ್ಲಿ ಜನರಲ್ ಮೋಟಾರ್ಸ್ ಸಂಸ್ಥೆಯ ಕಾರು ಉತ್ಪಾದನೆ ನಿಲ್ಲಿಸಿ: ಡೊನಾಲ್ಡ್ ಟ್ರಂಪ್

    ವಾಷಿಂಗ್ಟನ್: ಅಮೆರಿಕ ಮೂಲದ ಕಾರು ಉತ್ಪಾದಕ ಸಂಸ್ಥೆ ಜನರಲ್ ಮೋಟಾರ್ಸ್ ಗೆ ಚೀನಾದಲ್ಲಿ ಉತ್ಪಾದನೆ ನಿಲ್ಲಿಸುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ ಎನ್ನುವ ಮಾಹಿತಿಯನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಅಮೆರಿಕದ ಪ್ರಖ್ಯಾತ ಕಾರು ತಯಾರಿಕಾ ಸಂಸ್ಥೆಯಾದ ಜನರಲ್ ಮೋಟಾರ್ಸ್ ಚೀನಾದಲ್ಲಿ ಉತ್ಪಾದನಾ ಘಟಕವನ್ನು ಹೊಂದಿದೆ. ಆದರೆ ಈಗ ಈ ಘಟಕವನ್ನು ಸ್ಥಗಿತಗೊಳಿಸಿ ಅಮೆರಿಕದ ಬಹಿಯೊ ರಾಜ್ಯದಲ್ಲಿ ಘಟಕ ಸ್ಥಾಪಿಸಲು ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

    ಚೀನಾದಲ್ಲಿ ಸ್ಥಗಿತ ಮಾಡಲು ಹೇಳಿದ್ದೇಕೆ?
    ಇತ್ತೀಚೆಗೆ ಜನರಲ್ ಮೋಟಾರ್ಸ್ ಕಂಪನಿ ತನ್ನ ಅಮೆರಿಕ ಮತ್ತು ಕೆನಡಾ ಘಟಕಗಳಲ್ಲಿರುವ 14,800 ಉದ್ಯೋಗಗಳನ್ನು ಕಡಿತಗೊಳಿಸಲು ಚಿಂತನೆ ನಡೆಸುತ್ತಿದ್ದು, ಇದರಿಂದಾಗಿ 2020ರ ಅಂತ್ಯಕ್ಕೆ ಕಂಪನಿಗೆ ಸುಮಾರು 4.5 ಬಿಲಿಯನ್ ಡಾಲರ್ ಉಳಿತಾಯವಾಗುತ್ತದೆಂದು ಘೋಷಿಸಿತ್ತು.ಕಂಪನಿಯ ನಿರ್ಧಾರವನ್ನು ಡೊನಾಲ್ಡ್ ಟ್ರಂಪ್ ಖುದ್ದು ಶ್ವೇತ ಭವನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಜನರಲ್ ಮೋಟಾರ್ಸ್ ತೀರ್ಮಾನ ನಮಗೆ ಒಪ್ಪಿಗೆ ಆಗಲಿಲ್ಲ ಅಂತ ಅಸಮಾಧಾನ ಹೊರಹಾಕಿದ್ದರು.

    ಕಂಪನಿಯ ನಿರ್ಣಯದಿಂದ ಅಮೆರಿಕಾದ ಬಹಿಯೊ ಮತ್ತು ಮಿಚಿಗನ್ ರಾಜ್ಯಗಳ ಜನರ ಉದ್ಯೋಗದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹೀಗಾಗಿ ಜನರಲ್ ಮೋಟಾರ್ಸ್ ಚೀನಾದಲ್ಲಿರುವ ತಮ್ಮ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಿ ಬಹಿಯೊದಲ್ಲಿ ಹೊಸ ಘಟಕವನ್ನು ಸ್ಥಾಪಿಸುವಂತೆ ಹೇಳಿತ್ತು. ಈ ಬಗ್ಗೆ ಜನರಲ್ ಮೋಟಾರ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬರ್ರೆ ಅವರಿಗೆ ತಿಳಿಸಿದ್ದಾರೆಂದು ಸ್ಥಳೀಯ ಸಂಸ್ಥೆಯೊಂದು ವರದಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಶ್ವದ ಅಗ್ಗದ ಕಾರು `ನ್ಯಾನೋ’ ಸ್ಥಗಿತಕ್ಕೆ ಟಾಟಾ ಮೋಟಾರ್ಸ್ ತೀರ್ಮಾನ?

    ವಿಶ್ವದ ಅಗ್ಗದ ಕಾರು `ನ್ಯಾನೋ’ ಸ್ಥಗಿತಕ್ಕೆ ಟಾಟಾ ಮೋಟಾರ್ಸ್ ತೀರ್ಮಾನ?

    ನವದೆಹಲಿ: ಅಗ್ಗದ ಕಾರು ಎಂದೇ ಹೆಸರುಗಳಿಸಿದ್ದ ನ್ಯಾನೋ ಕಾರು ಸದ್ಯ ಮಾರುಕಟ್ಟೆಯಿಂದ ಮರೆಯಾಗುವ ಎಲ್ಲಾ ಲಕ್ಷಣಗಳು ಕಂಡುಬಂದಿದ್ದು, ನ್ಯಾನೋ ಮಾರಾಟದಲ್ಲಿ ದೀರ್ಘ ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್ ನ್ಯಾನೋ ಉತ್ಪಾದನೆಯನ್ನು ಸ್ಥಗಿತಗೊಳಿಸುವ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.

    ಟಾಟಾ ನ್ಯಾನೋ ಕಾರಿನ ಸ್ಥಗಿತ ಕುರಿತು ಇದುವರೆಗೂ ಯಾವುದೇ ಹೇಳಿಕೆಗಳನ್ನು ಟಾಟಾ ಕಂಪನಿ ನೀಡಿಲ್ಲ. ಆದರೆ ನ್ಯಾನೋ ಉತ್ಪಾದನೆ ಮಾಡುವ ಎಲ್ಲಾ ಘಟಕಗಳನ್ನು ಒಂದೊಂದಾಗಿ ನಿಲ್ಲಿಸುತ್ತಿರುವುದು ನ್ಯಾನೋ ಉತ್ಪಾದನೆಯ ಸ್ಥಗಿತ ಕುರಿತು ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.

    ಜೂನ್ ತಿಂಗಳಿನಲ್ಲಿ ಕೇವಲ 1 ನ್ಯಾನೋ ಕಾರು ಉತ್ಪಾದನೆಯಾಗಿದೆ. ಅಲ್ಲದೇ ಕಳೆದ ವರ್ಷ 2017ಕ್ಕೆ ಹೊಲಿಸಿದರೆ ಒಟ್ಟು 275 ಕಾರುಗಳನ್ನು ರಫ್ತಾಗಿದ್ದರೆ, ಈ ವರ್ಷ ಜೂನ್ ತಿಂಗಳಲ್ಲಿ ಕೇವಲ 25 ಕಾರುಗಳನ್ನು ರಫ್ತುಮಾಡಿದೆ. ಅಲ್ಲದೇ 2017ರಲ್ಲಿ ಒಟ್ಟು 167 ಕಾರುಗಳನ್ನು ಮಾರಾಟಗೊಂಡಿದ್ದವು. ಆದರೆ ಇಂದು 2018ರ ಜೂನ್ ತಿಂಗಳಲ್ಲಿ ನ್ಯಾನೋದ ಕೇವಲ ಮೂರು ಕಾರುಗಳು ಮಾರಾಟಗೊಂಡಿವೆ.

    ಈ ಕುರಿತು ಪ್ರತಿಕ್ರಿಯಿಸಿ ಟಾಟಾ ಮೋಟಾರ್ಸ್ ಕಂಪೆನಿಯ ಅಧಿಕಾರಿಗಳು, ಸದ್ಯ ಮಾರುಕಟ್ಟೆಯಲ್ಲಿರುವ ಪರಿಸ್ಥಿತಿಯಿಂದಾಗಿ ನ್ಯಾನೋ ನಿರ್ಮಾಣವನ್ನು 2019ಕ್ಕೆ ಮುಂದುವರಿಸಲು ಸಾಧ್ಯವಿಲ್ಲ. ಅಲ್ಲದೇ ನ್ಯಾನೋ ಸ್ಥಗಿತಗೊಳಿಸುವ ಕುರಿತು ಸಂಸ್ಥೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಗ್ರಾಹಕರ ಬೇಡಿಕೆಯನ್ನು ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ.

    2008ರ ಆಟೋ ಎಕ್ಸ್-ಪೋನಲ್ಲಿ ಮೊದಲ ಬಾರಿ ನ್ಯಾನೋ ಕಾರು ಕಾಣಿಸಿಕೊಂಡು 2009ರಲ್ಲಿ ವಿಶ್ವದ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ರತನ್ ಟಾಟಾರವರು ಭಾರತೀಯರಿಗೆ ಕೊಟ್ಟಿದ್ದ ಮಾತಿನಂತೆ 1 ಲಕ್ಷ ರೂಪಾಯಿಗೆ ನ್ಯಾನೋ ಕಾರನ್ನು ಗ್ರಾಹಕರಿಗೆ ನೀಡಿತ್ತು. ನ್ಯಾನೋ ಕಾರು ವಿಶ್ವದಲ್ಲಿಯೇ ಅಗ್ಗದ ಕಾರು ಎಂಬ ಹೆಸರು ಸಹ ಪಡೆದುಕೊಂಡಿತ್ತು.

    ಟಾಟಾ ಸನ್ಸ್ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ ಈ ಹಿಂದೆ, ಟಾಟಾ ನ್ಯಾನೋ ಉತ್ಪಾದನೆಯಿಂದ ಸಂಸ್ಥೆಗೆ 1,000 ಸಾವಿರ ಕೋಟಿ ರೂಪಾಯಿ ನಷ್ಟವಾಗಿದ್ದು, ನ್ಯಾನೋ ಕಾರು ಉತ್ಪಾದನೆಯಿಂದ ಸಂಸ್ಥೆಗೆ ಯಾವುದೇ ರೀತಿಯ ಲಾಭ ಸಹ ಗಳಿಸಿಲ್ಲ. ರತನ್ ಟಾಟಾರವರ ಕನಸಿನ ಕೂಸಗಿದ್ದರಿಂದ ನ್ಯಾನೋ ಕಾರನ್ನು ಭಾವನಾತ್ಮಕ ಕಾರಣಗಳಿಂದಾಗಿ ಇನ್ನೂ ಉತ್ಪಾದನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದರು.

  • ಬಸ್ ಡ್ರೈವರ್ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಶಿಕ್ಷಕಿ

    ಬಸ್ ಡ್ರೈವರ್ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಶಿಕ್ಷಕಿ

    ರಾಯಚೂರು: ನಿಲ್ದಾಣವಿಲ್ಲದ ಸ್ಥಳದಲ್ಲಿ ಬಸ್ ನಿಲ್ಲಿಸುವಂತೆ ಗಲಾಟೆ ಮಾಡಿ ಶಿಕ್ಷಕಿಯೊಬ್ಬಳು ಚಾಲಕನಿಗೆ ಚಪ್ಪಲಿಯಿಂದ ಥಳಿಸಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಪಾಮನಕಲ್ಲೂರಿನಲ್ಲಿ ನಡೆದಿದೆ.

    ಪಾಮನಕಲ್ಲೂರ ಪ್ರೌಢ ಶಾಲೆಯ ಶಿಕ್ಷಕಿ ಬಸಮ್ಮ, ಚಾಲಕ ಚನ್ನಪ್ಪನ ಮೇಲೆ ಹಲ್ಲೆ ಮಾಡಿದ್ದಾಳೆ. ಚಾಲಕ ಸ್ಟಾಪ್ ಬಂತು ಕೆಳಗೆ ಇಳಿರಿ ಎಂದಿದ್ದಾರೆ. ಅದಕ್ಕೆ ಶಿಕ್ಷಕಿ ಶಾಲೆಯ ಮುಂದೆಯೇ ಬಸ್ ನಿಲ್ಲಿಸುವಂತೆ ಕಿರಿಕಿರಿ ಮಾಡಿದ್ದಾಳೆ. ಬಳಿಕ ಚಾಲಕ ಶಾಲೆಯ ಮುಂದೆಯೇ ಬಸ್ ನಿಲ್ಲಿಸಿದ್ದಾರೆ. ಆದರೂ ಶಿಕ್ಷಕಿ ಗಲಾಟೆ ಮಾಡಿದ್ದಾಳೆ.

    ಲಿಂಗಸುಗೂರ ನಿಂದ ಕರ್ನೂಲ್ ಗೆ ಹೋಗುವ ಮಾರ್ಗದ ಎಕ್ಸಪ್ರೆಸ್ ಬಸ್ ನಲ್ಲಿ ಶಿಕ್ಷಕಿ ಕಿರಿಕಿರಿ ಮಾಡಿದ್ದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರಿಂದ ಚಾಲಕ ಸಹ ಬೈದಿದ್ದಾನೆ. ನಂತರ ಜಗಳ ವಿಕೋಪಕ್ಕೆ ಹೋಗಿ ಶಿಕ್ಷಕಿ ಚಪ್ಪಲಿಯಿಂದ ಚಾಲಕನಿಗೆ ಹೊಡೆದಿದ್ದಾಳೆ. ಬಸಮ್ಮಳ ದರ್ಪಕ್ಕೆ ಸಹ ಪ್ರಯಾಣಿಕರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಘಟನೆ ಹಿನ್ನೆಲೆಯಲ್ಲಿ ಕವಿತಾಳ ಪೊಲೀಸ್ ಠಾಣೆಯಲ್ಲಿ ಬಸ್ಸಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ.