ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿರುವ ಕಂಪನಿಯ (Pune Company) ಕ್ಯಾಂಟೀನ್‌ನಲ್ಲಿ ಸಮೋಸಾದೊಳಗೆ (Samosa) ಬ್ಯಾಂಡೇಜ್, ಕಾಂಡೋಮ್, ಕಲ್ಲುಗಳು ಮತ್ತು ತಂಬಾಕು ಮುಂತಾದ ವಸ್ತುಗಳು ಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಐವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಪುಣೆಯ ಪಿಂಪ್ರಿ ಚಿಂಚ್ವಾಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಚಿಖಾಲಿ ಮೂಲದ ಕಂಪನಿಯೊಂದರ ಅಧಿಕಾರಿ ಕೀರ್ತಿಕುಮಾರ್ ಶಂಕರರಾವ್ ದೇಸಾಯಿ ಅವರು ಏ.7 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಚಿಖಾಲಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ, ತಮ್ಮ ಕಂಪನಿಯು ಚಿಖಾಲಿಯ ಮತ್ತೊಂದು ದೊಡ್ಡ ಕಂಪನಿಯಿಂದ ಆಹಾರ ಪೂರೈಕೆಗಾಗಿ ಆದೇಶವನ್ನು ಪಡೆದಿದೆ. ಅದರಂತೆ ಕೀರ್ತಿಕುಮಾರ್ ಅವರು ರಹೀಮ್ ಖಾನ್ ಮಾಲೀಕತ್ವದ SRS ಎಂಟರ್ ಪ್ರೈಸಸ್ ಹೆಸರಿನ ಕಂಪನಿಯೊಂದಿಗೆ ಸಮೋಸಾ ಪೂರೈಕೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಆಗಿದ್ದೇನು..?: ಕೀರ್ತಿಕುಮಾರ್ ಪ್ರಕಾರ , ಒಂದು ದಿನ SRS ಕಂಪನಿಯಿಂದ ಸರಬರಾಜಾಗುತ್ತಿದ್ದ ಸಮೋಸದಲ್ಲಿ ಗಾಯಗಳಿಗೆ ಹಾಕುವ ಬ್ಯಾಂಡೇಜ್ (Bandage) ಪತ್ತೆಯಾಗಿದೆ. ಸಿಬ್ಬಂದಿಯಿಂದ ಈ ಕುರಿತು ದೂರು ಸ್ವೀಕರಿಸಿದ ಕೀರ್ತಿಕುಮಾರ್ ಅವರ ಕಂಪನಿಯು ಎಸ್‌ಆರ್‌ಎಸ್‌ನೊಂದಿಗಿನ ಒಪ್ಪಂದವನ್ನು ಮುರಿದುಕೊಳ್ಳಲಾಯಿತು. ಬಳಿಕ ಪುಣೆ ಮೂಲದ ಮತ್ತೊಂದು ಕಂಪನಿಯಾದ ಮನೋಹರ್ ಎಂಟರ್‌ಪ್ರೈಸಸ್‌ಗೆ ಸಮೋಸಾಗಳನ್ನು ಪೂರೈಸಲು ಸೂಚನೆ ನೀಡಿತು. ಇದರಿಂದ ಸಿಟ್ಟಿಗೆದ್ದ SRS ಮಾಲೀಕ ರಹೀಮ್ ಖಾನ್ ತನ್ನ ಸಹಚರರಾದ ಅಜರ್ ಶೇಖ್ ಮತ್ತು ಮಜರ್ ಶೇಖ್ ಜೊತೆ ಸೇರಿ ದೊಡ್ಡ ಸಂಚು ರೂಪಿಸಿದ್ದ.
ಅದರಂತೆ ಮಾರ್ಚ್ 27 ರಂದು ರಹೀಮ್ ಖಾನ್, ತನ್ನ ಕೆಲಸಗಾರರಿಗೆ ಕಾಂಡೋಮ್‌ಗಳು (Condoms), ಗುಟ್ಕಾ (Gutkha) ಮತ್ತು ಕಲ್ಲುಗಳನ್ನು ಸಮೋಸಾಳ ಒಳಗೆ ತುಂಬಲು ಸೂಚಿಸಿದ್ದಾನೆ. ಬಳಿಕ ಒಪ್ಪದ ಕೊನೆಗೊಳಿಸಲು ಮುಂದಾದ ಕಂಪನಿಗೆ ಬೆಳಗ್ಗೆ 7:30 ರಿಂದ 9 ರ ನಡುವೆ ಈ ಸಮೋಸಗಳನ್ನು ವಿತರಿಸಿದರು. ಈ ವೇಳೆ ಕಾಂಡೋಮ್, ಗುಟ್ಕಾ ಮೊದಲಾದ ವಸ್ತುಗಳು ಸಿಕ್ಕಿವೆ. ಈ ಕುರಿತು ಸಿಬ್ಬಂದಿಯು ಕೀರ್ತಿಕುಮಾರ್ ಅವರಿಗೆ ದೂರು ನೀಡಿದ್ದಾರೆ. ಕೂಡಲೇ ಕೀರ್ತಿ ಕುಮಾರ್ ಅವರು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು ರಹೀಮ್ ಶೇಖ್, ಫಿರೋಜ್ ಶೇಖ್, ವಿಕ್ಕಿ ಶೇಖ್, ಅಜರ್ ಶೇಖ್ ಮತ್ತು ಮಜರ್ ಶೇಖ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 328 (ವಿಷದ ಮೂಲಕ ನೋವುಂಟುಮಾಡುವುದು), 120-ಬಿ (ಕ್ರಿಮಿನಲ್ ಪಿತೂರಿ) ಮತ್ತು 34 (ಸಾಮಾನ್ಯ ಉದ್ದೇಶದ ಮುಂದುವರಿಕೆಗಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣ ಸಂಬಂಧ ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಈ ಕುರಿತು ತನಿಖೆ ಮುಂದುವರಿದಿದೆ.
500 ವರ್ಷಗಳ ಮತ್ತೊಂದು ವನವಾಸ ಮುಗಿಸಿ ಭಗವಾನ್ ರಾಮ ಅಯೋಧ್ಯೆಯಲ್ಲಿ (Ayodhya) ಮತ್ತೆ ಪಟ್ಟಕ್ಕೇರಿ ವಿರಾಜಮಾನನಾಗಿದ್ದಾನೆ. ಧರ್ಮಭೂಮಿಯಲ್ಲಿ ಪ್ರತಿಷ್ಠಾಪನೆಗೊಂಡ ಆರಾಧ್ಯ ದೈವವನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡೇ ಅಯೋಧ್ಯೆ ಕಡೆ ಧಾವಿಸುತ್ತಿದೆ. ಸೋಮವಾರ ಪ್ರಾಣ ಪ್ರತಿಷ್ಠಾಪನೆಯಾಗಿದೆ. ದೇಶ-ವಿದೇಶಗಳಲ್ಲಿ ರಾಮ ಜಪ, ಭಜನೆ ಇನ್ನೂ ಮಾರ್ಧನಿಸುತ್ತಿದೆ. ಇದು ತೀರದ ಭಕ್ತಿ.
ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವನಕೆ – ಮಂಕುತಿಮ್ಮ
ಕನ್ನಡದ ಹಿರಿಯ ಸಾಹಿತಿ ಡಿ.ವಿ.ಗುಂಡಪ್ಪ ಅವರ ‘ಮಂಕುತಿಮ್ಮನ ಕಗ್ಗ’ದ ಸಾಲುಗಳಿಗೆ ಹೇಳಿಮಾಡಿಸಿದಂತೆ ಅಯೋಧ್ಯೆ ರಾಮಮಂದಿರ ವಿನ್ಯಾಸ. ಈ ಭವ್ಯ ದೇವಾಲಯ ನಿರ್ಮಾಣಕ್ಕೆ ಸಾಂಪ್ರದಾಯಿಕ ಭಾರತೀಯ ಪರಂಪರೆಯ ವಾಸ್ತುಶಿಲ್ಪ ಹಾಗೂ ಆಧುನಿಕ ವಿಜ್ಞಾನ, ಎಂಜಿನಿಯರಿಂಗ್, ತಾಂತ್ರಿಕ ವಿಧಾನವನ್ನು ಸಂಯೋಜಿಸಿ ರಾಮಮಂದಿರವನ್ನು ನಿರ್ಮಿಸಲಾಗಿದೆ. ಶತಶತಮಾನಗಳ ವರೆಗೂ ರಾಮಭಕ್ತಿಯ ಪ್ರತಿಬಿಂಬವಾಗಿ ಈ ದೇವಾಲಯ ಇರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ‘ದೇವಾಲಯವನ್ನು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಲಾಗಿದೆ. ಇದನ್ನು ಹಿಂದೆಂದೂ ಕಾಣದಂತಹ ಅಪ್ರತಿಮ ರಚನೆಯನ್ನಾಗಿ ಮಾಡಲು ಭಾರತದ ಉನ್ನತ ವಿಜ್ಞಾನಿಗಳು ಕೊಡುಗೆ ನೀಡಿದ್ದಾರೆ. ದೇವಾಲಯದಲ್ಲಿ ಇಸ್ರೋ ತಂತ್ರಜ್ಞಾನಗಳನ್ನು ಸೂಕ್ತವಾಗಿ ಬಳಸಲಾಗಿದೆ’ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ರಾಮಲಲ್ಲಾನಿಗೆ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಗುಜರಾತ್ ವ್ಯಾಪಾರಿ!
ನಾಗರ ಶೈಲಿ ದೇವಾಲಯ
ಅಯೋಧ್ಯೆಯಲ್ಲಿ ಈಗ ಕಟ್ಟಲಾಗಿರುವ ರಾಮಮಂದಿರ ಸಂಪೂರ್ಣ ನಾಗರ ವಾಸ್ತು ಶೈಲಿಯಲ್ಲಿದೆ. ಉತ್ತರ ಭಾರತದ ಪುರಾತನ ದೇವಸ್ಥಾನಗಳೆಲ್ಲ ನಾಗರ ಶೈಲಿಯಲ್ಲೇ ಇವೆ. ಮುಖ್ಯವಾಗಿ ಗುಪ್ತರ ಕಾಲದಲ್ಲಿ ಶೈಲಿಯ ಹಲವು ದೇವಾಲಯಗಳನ್ನು ಕಾಣಬಹುದು. ನಾಗರ ಶೈಲಿಯ ವಿಶೇಷ ಏನೆಂದರೆ, ಕಲ್ಲುಗಳಿಂದ ವಿಶಾಲವಾದ ಮತ್ತು ಎತ್ತರವಾದ ವೇದಿಕೆಯನ್ನು ನಿರ್ಮಿಸಿ ಅದರ ಮೇಲೆ ಮಂದಿರ ಕಟ್ಟಲಾಗುತ್ತದೆ. ದೊಡ್ಡ ಗೋಪುರದ ಕೆಳಗೆ ಗರ್ಭ ಗೃಹ ಇರುತ್ತದೆ. ಇದರ ಸುತ್ತ ಕೆಲವು ಮಂಟಪಗಳಿರುತ್ತವೆ (ರಾಮಮಂದಿರಕ್ಕೆ 5 ಮಂಟಪಗಳಿವೆ). ಉಳಿದಂತೆ ಗೋಪುರ, ಕಳಸ ಮತ್ತು ಅದರ ಮೇಲಿನ ಧ್ವಜ ದಕ್ಷಿಣ ಭಾರತದ ದೇವಾಲಯಗಳ ಶೈಲಿಯಲ್ಲೇ ಇರುತ್ತವೆ.
ಈ ದೇವಾಲಯದ ಶಿಲ್ಪಿ ಯಾರು?
ರಾಮಮಂದಿರ ವಾಸ್ತು ಶಿಲ್ಪಿ ಚಂದ್ರಕಾಂತ್ ಸೋಂಪುರ. ಅವರು ಗುಜರಾತ್‌ನ ಅಹಮದಾಬಾದ್‌ನ ಕರ್ಣಾವತಿಯವರು. ಅವರ ಅಜ್ಜ ಪ್ರಭಾಕರ್ ಸೋಂಪುರ ಗುಜರಾತ್‌ನ ಸೋಮನಾಥ ಮಂದಿರವನ್ನು ಕಟ್ಟಿದವರು. ನಾಗರ ಶೈಲಿಯಲ್ಲಿ ಮಂದಿರ ಕಟ್ಟುವ ಶಿಲ್ಪಿ ಅವರು. ತಲೆಮಾರುಗಳಿಂದ ಈ ಕುಟುಂಬ, ಸಂಪ್ರದಾಯದಂತೆ ಪರಂಪರೆಯ ದೇವಾಲಯ ರಚನೆಗಳನ್ನು ವಿನ್ಯಾಸಗೊಳಿಸಿಕೊಂಡು ಬಂದಿದೆ. ಈ ಕುಟುಂಬ 100 ಕ್ಕೂ ಹೆಚ್ಚು ದೇವಾಲಯಗಳನ್ನು ವಿನ್ಯಾಸಗೊಳಿಸಿದೆ. ಕೋಟ್ಯಂತರ ಭಾರತೀಯರ ಶತಶತಮಾನಗಳ ಕನಸಾಗಿದ್ದ ಭವ್ಯ ರಾಮಮಂದಿರವನ್ನು ವಿನ್ಯಾಸಗೊಳಿಸಿದ್ದು ಚಂದ್ರಕಾಂತ್ ಸೋಂಪುರ ಅವರ ಪುಣ್ಯ. ಇದನ್ನೂ ಓದಿ: ಸಾರ್ವಜನಿಕರಿಗೆ ತೆರೆಯುತ್ತಿದ್ದಂತೆಯೇ ರಾಮಮಂದಿರಕ್ಕೆ ಹರಿದು ಬರ್ತಿದೆ ಜನಸಾಗರ!
ವಾಸ್ತುಶಿಲ್ಪಿ ಹೇಳೋದೇನು?
ವಾಸ್ತುಶಿಲ್ಪದ ವಾರ್ಷಿಕಗಳಲ್ಲಿ ಶ್ರೀರಾಮ ದೇವಾಲಯವು ಭಾರತದಲ್ಲಿ ಮಾತ್ರವಲ್ಲ, ಭೂಮಿಯ ಮೇಲಿನ ಯಾವುದೇ ಸ್ಥಳದಲ್ಲಿ ಇದುವರೆಗೆ ಕಲ್ಪಿಸಲಾಗದ ಅಪರೂಪದ, ವಿಶಿಷ್ಟ ರೀತಿಯ ಭವ್ಯವಾದ ಸೃಷ್ಟಿಯಾಗಿದೆ ಎಂದು ಚಂದ್ರಕಾಂತ್ ಸೋಂಪುರ ಹೇಳುತ್ತಾರೆ.
ಮಂದಿರ ನಿರ್ಮಾಣಕ್ಕೆ ಕಬ್ಬಿಣ, ಸಿಮೆಂಟ್ ಬಳಕೆಯಿಲ್ಲ
ರಾಮಮಂದಿರದ ಮತ್ತೊಂದು ವೈಶಿಷ್ಟ್ಯವೆಂದರೆ, ಪುರಾತನ ಕಾಲದಲ್ಲಿ ಶಿಲೆಯನ್ನಷ್ಟೇ ಬಳಸಿ ನಿರ್ಮಿಸುತ್ತಿದ್ದಂತೆಯೇ ಇದನ್ನೂ ನಿರ್ಮಿಸಲಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಬೃಹತ್ ಗಾತ್ರದ ಕಲ್ಲುಗಳನ್ನಷ್ಟೇ ಬಳಸಲಾಗಿದೆ. ಕಬ್ಬಿಣ, ಸಿಮೆಂಟ್ ಯಾವುದನ್ನೂ ಬಳಸಿಲ್ಲ. ಪ್ರಾಕೃತಿಕ ವಿಕೋಪಗಳಿಂದ ಮಂದಿರ ಡ್ಯಾಮೇಜ್ ಆಗಬಾರದು. ಅದರ ಆಯುಷ್ಯವೂ ಹೆಚ್ಚಿನ ವರ್ಷ ಬರಬೇಕು ಎಂಬ ದೃಷ್ಟಿಯಿಂದ ನಿರ್ಮಾಣ ಕಾರ್ಯದಲ್ಲಿ ಪಾರಂಪರಿಕ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಬಾಲ`ರಾಮ’ನ ಪಾದ ಸೇರಿತು `ಕಮಲ’..!
ದೇವಾಲಯದ ಒಟ್ಟು ವಿಸ್ತೀರ್ಣ 2.7 ಎಕರೆ. ನಿರ್ಮಿತ ಪ್ರದೇಶವು ಸುಮಾರು 57,000 ಚದರ ಅಡಿಗಳಾಗಿದೆ. ಇದು ಮೂರು ಅಂತಸ್ತಿನ ರಚನೆಯಾಗಲಿದೆ. ಕಬ್ಬಿಣದ ಜೀವಿತಾವಧಿಯು ಕೇವಲ 80-90 ವರ್ಷಗಳಾಗಿರುತ್ತದೆ. ಹೀಗಾಗಿ, ದೇವಾಲಯದಲ್ಲಿ ಯಾವುದೇ ಕಬ್ಬಿಣ ಅಥವಾ ಉಕ್ಕು, ಸಿಮೆಂಟ್ ಬಳಸಿಲ್ಲ ಎಂದು ನೃಪೇಂದ್ರ ಮಿಶ್ರಾ ಹೇಳುತ್ತಾರೆ. ದೇವಾಲಯದ ಎತ್ತರವು 161 ಅಡಿ. ಅಂದರೆ, ಕುತಾಬ್ ಮಿನಾರ್‌ನ ಎತ್ತರದ ಸುಮಾರು 70% ಇದೆ.
ಉತ್ತಮ ಗುಣಮಟ್ಟದ ಗ್ರಾನೈಟ್, ಮರಳುಗಲ್ಲು ಮತ್ತು ಅಮೃತಶಿಲೆಯನ್ನು ಮಂದಿರ ನಿರ್ಮಾಣಕ್ಕೆ ಬಳಸಲಾಗಿದೆ. ಜಾಯಿಂಟ್ (joints) ಮಾಡುವಂತಹ ಭಾಗಗಳಲ್ಲಿ ಸಿಮೆಂಟ್ ಅಥವಾ ಸುಣ್ಣದ ಗಾರೆಗಳ ಬಳಕೆ ಮಾಡಿಲ್ಲ. ಸಂಪೂರ್ಣ ರಚನೆಯ ನಿರ್ಮಾಣದಲ್ಲಿ ಲಾಕ್ ಮತ್ತು ಕೀ ಯಾಂತ್ರಿಕ ವ್ಯವಸ್ಥೆಯನ್ನು ಮಾತ್ರ ಬಳಸಲಾಗಿದೆ ಎಂದು ನಿರ್ಮಾಣ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರೂರ್ಕಿಯ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಪ್ರದೀಪ್ ಕುಮಾರ್ ರಾಮಂಚಾರ್ಲ ತಿಳಿಸಿದ್ದಾರೆ. ಇದನ್ನೂ ಓದಿ: ಮನೆ-ಮನಗಳಲ್ಲಿ ದೀಪೋತ್ಸವ – ʻರಾಮ ಜ್ಯೋತಿʼ ಬೆಳಗಿಸಿದ ಪ್ರಧಾನಿ ಮೋದಿ
2,500 ವರ್ಷಗಳ ವರೆಗೆ ಎಷ್ಟೇ ಭೂಕಂಪವಾದ್ರೂ ತಡೆದುಕೊಳ್ಳುತ್ತೆ
ಪ್ರಾಕೃತಿಕ ವಿಕೋಪಗಳು ತಂದೊಡ್ಡಬಹುದಾದ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ರಾಮಮಂದಿರವನ್ನು ನಿರ್ಮಿಸಲಾಗಿದೆ. ಮಂದಿರದ ಆಯುಷ್ಯ ಹೆಚ್ಚು ವರ್ಷ ಇರಬೇಕು ಎಂಬ ದೃಷ್ಟಿಯಿಂದ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ ಕೆಲಸ ಮಾಡಿದೆ. 2,500 ವರ್ಷಗಳ ವರೆಗೆ ಎಷ್ಟೇ ಭೂಕಂಪವಾದರೂ ಮಂದಿರಕ್ಕೆ ಯಾವುದೇ ಅಪಾಯವಿರುವುದಿಲ್ಲ. ಅದೆಲ್ಲವನ್ನೂ ತಡೆದುಕೊಂಡು ಸುರಕ್ಷಿತವಾಗಿ ನಿಲ್ಲುವಂತೆ ಮೂರು ಅಂತಸ್ತಿನ ಭವ್ಯ ಮಂದಿರ ನಿರ್ಮಿಸಲಾಗಿದೆ (ಈಗಾಗಲೇ ಮೊದಲ ಅಂತಸ್ತಿನ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 2025 ರ ಹೊತ್ತಿಗೆ ಪೂರ್ಣಗೊಳ್ಳಲಿದೆ).
ರಾಮಮಂದಿರ ಹೇಗೆ ಕಟ್ಟಲಾಗ್ತಿದೆ?
ಇಡೀ ದೇವಾಲಯದ ಪ್ರದೇಶಕ್ಕೆ ಮಣ್ಣನ್ನು 15 ಮೀಟರ್ ಆಳಕ್ಕೆ ಅಗೆಯಲಾಗಿದೆ. 12-14 ಮೀಟರ್ ಆಳದಲ್ಲಿ ಇಂಜಿನಿಯರ್ಡ್ ಮಣ್ಣನ್ನು ಹಾಕಲಾಗಿದೆ. ಯಾವುದೇ ಕಬ್ಬಿಣದ ಸರಳುಗಳನ್ನು ಬಳಸಿಲ್ಲ. ರೋಲ್ ಮಾಡುವಾಗ 48 ಲೇಯರ್ (ಪದರ)ಗಳನ್ನು ಹಾಕಲಾಗಿದೆ. ಇದರ ಮೇಲೆ 1.5 ಮೀಟರ್ ದಪ್ಪದ M-35 ದರ್ಜೆಯ ಲೋಹ ಮುಕ್ತ ಕಾಂಕ್ರೀಟ್ ತೆಪ್ಪವನ್ನು ಬಲವರ್ಧನೆಯಾಗಿ ಹಾಕಲಾಗಿದೆ. ಅಡಿಪಾಯವನ್ನು ಮತ್ತಷ್ಟು ಬಲಪಡಿಸಲು ದಕ್ಷಿಣ ಭಾರತದಿಂದ ತಂದಿರುವ 6.3 ಮೀಟರ್ ದಪ್ಪದ ಗ್ರಾನೈಟ್ ಕಲ್ಲಿನ ಸ್ತಂಭವನ್ನು ಇರಿಸಲಾಗಿದೆ. ಈ ಕಲ್ಲುಗಳನ್ನು ಹೆಚ್ಚಾಗಿ ಕರ್ನಾಟಕದ್ದೇ ಬಳಸಲಾಗಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆಯುವ ಸಮಯ ಗೊತ್ತಾ..?
ರಾಜಸ್ಥಾನದ ಭರತ್‌ಪುರ ಜಿಲ್ಲೆ ಬಯಾನಾ ತಾಲೂಕಿನ ಒಂದು ಗುಡ್ಡದ ಪ್ರದೇಶದಲ್ಲಿ ಗುಲಾಬಿ ಬಣ್ಣದ ಸ್ಯಾಂಡ್ ಸ್ಟೋನ್ ಸಿಗುತ್ತದೆ. ಆ ಕಲ್ಲುಗಳನ್ನು ಬಳಸಿ ಈ ಮಂದಿರದ ನಿರ್ಮಾಣ ಆಗಿದೆ. ಕೆತ್ತನೆ ಆಗಿಯೇ ಬಂದಿರುವ ಕಲ್ಲುಗಳಿವು. ಇದರಿಂದಾಗಿ ಈ ಮಂದಿರಕ್ಕೆ ಪ್ರಾಚೀನತೆಯ ಮೆರುಗು ಸಿಕ್ಕಿದೆ. CBRI ಪ್ರಕಾರ, ನೆಲ ಅಂತಸ್ತಿನ ಒಟ್ಟು ಅಂಕಣಗಳ ಸಂಖ್ಯೆ 160, ಮೊದಲ ಮಹಡಿ 132 ಮತ್ತು ಎರಡನೇ ಮಹಡಿ 74. ಇವೆಲ್ಲವೂ ಮರಳುಗಲ್ಲಿನಿಂದ ಮಾಡಲ್ಪಟ್ಟಿವೆ. ಅಲಂಕರಿಸಿದ ಗರ್ಭಗುಡಿಯು ರಾಜಸ್ಥಾನದಿಂದ ತೆಗೆದ ಬಿಳಿ ಮಕ್ರಾನ ಅಮೃತಶಿಲೆಯಿಂದ ಕೂಡಿದೆ. ತಾಜ್‌ಮಹಲ್ ನಿರ್ಮಾಣಕ್ಕೂ ಇದೇ ಶಿಲೆ ಬಳಸಲಾಗಿದೆ. ತಾಜ್‌ಮಹಲ್ ಅನ್ನು ಮಕ್ರಾನಾ ಗಣಿಗಳಿಂದ ತೆಗೆದ ಅಮೃತಶಿಲೆ ಬಳಸಿ ನಿರ್ಮಿಸಲಾಗಿದೆ. CBRI ಸಂಸ್ಥೆಯು 2020 ರ ಆರಂಭದಿಂದಲೂ ರಾಮಮಂದಿರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ.
ಅತ್ಯಾಧುನಿಕ ಸಾಫ್ಟ್‌ವೇರ್ ಉಪಕರಣಗಳು ಮತ್ತು 21ನೇ ಶತಮಾನದ ಕಟ್ಟಡ ಸಂಕೇತಗಳು ರಾಮಮಂದಿರವನ್ನು ಪ್ರತಿನಿಧಿಸುತ್ತವೆ. ಈಗಿನ ಕಲೆಯ ಜ್ಞಾನದ ಆಧಾರದ ಮೇಲೆ ರಾಮಮಂದಿರವು ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚು ಕಾಲ ಉಳಿಯುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಅತ್ಯಂತ ಆನಂದದಾಯಕ ಅನುಭವ. ಉತ್ತಮ ಕಲಿಕೆಯ ಕಾರ್ಯವಾಗಿತ್ತು ಎಂದು ರಾಮಂಚಾರ್ಲ ತಿಳಿಸಿದ್ದಾರೆ. ಇದನ್ನೂ ಓದಿ: 35 ನಿಮಿಷದ ಭಾಷಣದಲ್ಲಿ 114 ಬಾರಿ ರಾಮ ನಾಮ ಸ್ಮರಿಸಿದ ಮೋದಿ!
ಕಾರವಾರ: ಕಲ್ಲಿನಲ್ಲಿ ಏಡಿ ಸಿಗೋದು ನೋಡಿರಬಹುದು. ಆದರೆ ಏಡಿಯೇ ಕಲ್ಲಾಗಿ ಸಿಕ್ಕರೆ ಇದು ಪ್ರಕೃತಿ ವಿಸ್ಮಯವಲ್ಲವೇ? ಹೌದು ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ ತಾಲೂಕಿನ ನುಸಿಕೋಟೆ ಬಳಿ ಮೀನುಗಾರರೊಬ್ಬರಿಗೆ ಕಲ್ಲಾಗಿ ರೂಪುಗೊಂಡ ಏಡಿಯ ದೇಹ ಸಿಕ್ಕಿದೆ. ಈ ಕಲ್ಲಾದ ಏಡಿ ನೂರಾರು ವರ್ಷಗಳ ಹಳೆಯ ಪಳೆಯುಳಿಕೆ ಇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಅಘನಾಶಿನಿ ನದಿಯಲ್ಲಿ (Aghanashini River) ಮೀನುಗಾರಿಕೆ ನಡೆಸುತಿದ್ದ ವೇಳೆ ಮೀನುಗಾರ ಈಶ್ವರ ಹರಿಕಂತ್ರ ಅವರಿಗೆ ಏಡಿ ಕಲ್ಲು (Crab Stone) ಸಿಕ್ಕಿದೆ. ಮೊದಲು ಇದು ಏಡಿ ಎಂದು ಕೈಯಲ್ಲಿ ಹಿಡಿದಾಗ ಸಾಮಾನ್ಯ ಏಡಿಯಂತೆ ಇರದೇ ಕಲ್ಲಿನಂತೆ ಸ್ಪರ್ಷ ಅನುಭವ ಆಗಿದೆ. ಹೀಗಾಗಿ ಈ ಏಡಿಯಲ್ಲಿ ವಿಶೇಷ ಏನೋ ಇದೆ ಎಂದು ಕಾರವಾರದ ಮೀನುಗಾರ ವಿನಾಯಕ ಹರಿಕಂತ್ರ ಎಂಬವರಿಗೆ ಅದನ್ನು ಕಳುಹಿಸಿ ಕೊಟ್ಟಿದ್ದಾರೆ. ಅವರು ಕಾರವಾರದ ಕಡಲ ಜೀವಶಾಸ್ತ್ರಜ್ಞರ ಗಮನಕ್ಕೆ ತಂದು ಹಸ್ತಾಂತರಿಸಿದ್ದಾರೆ. ಆಗಲೇ ತಿಳಿದಿದ್ದು ಈ ಏಡಿ ನದಿಯಲ್ಲಿ ನೂರಾರು ವರ್ಷಗಳು ಸವೆಸಿ ಕಲ್ಲಿನ ರೂಪ ಪಡೆದಿದೆ ಎಂದು.
ಏಡಿ ಕಲ್ಲು ಏಡಿಯ ಪಳಿಯುಳಿಕೆಯಾಗಿದೆ. ಇದು ನೂರು ವರ್ಷಗಳದ್ದು ಇರಬಹುದು. ಆದರೆ ಕಾರ್ಬನ್ ಡೇಟಿಂಗ್‌ಗೆ ಒಳಪಡಿಸದೇ, ಅದರ ನಿಖರ ಆಯಸ್ಸು ಎಷ್ಟು ಎಂದು ಹೇಳಲು ಆಗುವುದಿಲ್ಲ. ಹೀಗಾಗಿ ಕಡಲ ಜೀವಶಾಸ್ತ್ರಜ್ಞರ ಜೊತೆ ಇದೀಗ ಪುರಾತತ್ವ ಸಂಶೋಧಕರು ಸಹ ಈ ಏಡಿ ಹಿಂದೆ ಬಿದ್ದಿದ್ದು ಇದರ ನಿಜವಾದ ಆಯುಷ್ಯವನ್ನು ಹುಡುಕುವತ್ತ ಗಮನ ಹರಿಸಿದ್ದಾರೆ.
ರಾಂಚಿ: ಮದ್ಯ (Alcohol) ಹಾಗೂ ದನದ ಮಾಂಸವನ್ನು (Beef) ಸೇವಿಸಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬನಿಗೆ 5 ಜನರು ಸೇರಿ ದೊಣ್ಣೆ ಹಾಗೂ ಕಲ್ಲುಗಳಿಂದ ಥಳಿಸಿದ ಘಟನೆ ಜಾರ್ಖಂಡ್‍ನ (Jharkhand) ಸಾಹಿಬ್‍ಗಂಜ್‍ನ ರಾಧಾನಗರ ಗ್ರಾಮದಲ್ಲಿ ನಡೆದಿದೆ.
ಚಂದನ್ ರವಿದಾಸ್ ಹಲ್ಲೆಗೊಳಗಾದ ವ್ಯಕ್ತಿ. ದನದ ಮಾಂಸವನ್ನು ತಿನ್ನಲು ನಿರಾಕರಿಸಿದ್ದಕ್ಕಾಗಿ ಮಿಥುನ್ ಶೇಖ್ ಹಾಗೂ ಇತರ ನಾಲ್ವರು ಸೇರಿ ಥಳಿಸಿದ್ದಾರೆ ಎಂದು ಚಂದನ್ ರವಿದಾಸ್ ಆರೋಪಿಸಿದ್ದಾನೆ.
ಪಂಕಿಜ ಮೋರ್‌ನಲ್ಲಿರುವ ಅಂಗಡಿಯೊಂದಕ್ಕೆ ಚಂದನ್ ಹೋಗಿದ್ದ. ಆ ಅಂಗಡಿಯ ಹಿಂದೆ ಐವರು ಸೇರಿ ದನದ ಮಾಂಸವನ್ನು ಕುಡಿದು ಸೇವಿಸುತ್ತಿರುವುದು ಕಂಡು ಬಂದಿದೆ. ಇದೇ ವೇಳೆ ಚಂದನ್‍ಗೆ ಹಾಗೂ ಆ ಐವರಿಗೆ ತೀವ್ರ ವಾಗ್ವಾದ ನಡೆದಿದೆ. ಅದಾದ ಬಳಿಕ ಆ ಐವರು ಚಂದನ್‍ಗೆ ಬಲವಂತವಾಗಿ ಗೋಮಾಂಸ ತಿನ್ನಲು ಯತ್ನಿಸಿದ್ದಾರೆ. ಇದನ್ನೂ ಓದಿ: ಅನ್ಯ ಸಮುದಾಯದವರೊಂದಿಗೆ ಮಗ ಮಾತನಾಡಿದ್ದಕ್ಕೆ ನೆರೆಹೊರೆಯವರಿಂದ ತಂದೆಯ ಹತ್ಯೆ
ಕೋಲ್ಕತ್ತಾ: 4 ದಿನದ ಹಿಂದಷ್ಟೇ ಪ್ರಾರಂಭವಾದ ವಂದೇ ಭಾರತ ಎಕ್ಸ್‌ಪ್ರೆಸ್ (Vande Bharat Express) ರೈಲಿಗೆ ಕೆಲವು ದುಷ್ಕರ್ಮಿಗಳು ಕಲ್ಲು (Stone) ತೂರಾಟ ನಡೆಸಿದ ಘಟನೆ ಪಶ್ಚಿಮ ಬಂಗಾಳದ (West Bengal) ಮಾಲ್ಡಾದ ಕುಮಾರ್‌ಗಂಜ್ ನಿಲ್ದಾಣದ ಬಳಿ ನಡೆದಿದೆ.
ಶುಕ್ರವಾರವಷ್ಟೇ ಆನ್‍ಲೈನ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೌರಾದಿಂದ ನ್ಯೂ ಜಲ್ಪೈಗುರಿ ಜಂಕ್ಷನ್‍ಗೆ ಹೋಗುವ ಭಾರತದ 7ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಚಾಲನೆ ನೀಡಿದ್ದರು. ಇದಾದ 4 ದಿನದ ನಂತರ ಈ ಘಟನೆ ನಡೆದಿದ್ದು, ಕಲ್ಲು ತೂರಾಟದ ಪರಿಣಾಮವಾಗಿ ರೈಲಿನ ಕಿಟಕಿಯ ಗಾಜುಗಳು ಪುಡಿ ಪುಡಿಯಾಗಿವೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಪೂರ್ವ ರೈಲ್ವೇಸ್, ಮಂಗಳವಾರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚಲಿಸುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿದೆ. ಇದರ ಪರಿಣಾಮವಾಗಿ ಬಾಗಿಲಿನ ಗಾಜು ಬಿರುಕು ಬಿಟ್ಟಿತ್ತು. ಈ ವೇಳೆ ರೈಲಿನ ಬೆಂಗಾವಲು ಪಡೆ ಓರ್ವ ಎಎಸ್‍ಐ ಮತ್ತು 4 ಸಿಬ್ಬಂದಿ ಇದ್ದರು. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗೆ ತೊಂದರೆ ಆಗಲಿಲ್ಲ ಎಂದರು.
ಕತ್ತಲಲ್ಲಿ ಯಾರು ಕಲ್ಲು ಎಸೆದಿದ್ದಾರೆ. ಯಾವ ಉದ್ದೇಶಕ್ಕಾಗಿ ಕಲ್ಲು ಎಸೆದಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಡೀ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದರು. ಇದನ್ನೂ ಓದಿ: ಜ.31ಕ್ಕೆ ಸಂಸತ್ ಅಧಿವೇಶನ; ಫೆ.1ಕ್ಕೆ ಕೇಂದ್ರ ಬಜೆಟ್ ಮಂಡನೆ
Live Tv
[brid partner=56869869 player=32851 video=960834 autoplay=true]
ರಾಯಚೂರು: ಕ್ಷುಲ್ಲಕ ಕಾರಣಕ್ಕೆ ಹಾಡುಹಗಲೇ ಮಕ್ಕಳ ಮುಂದೆ ತಂದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಅಮಾನುಷ ಘಟನೆ ನಗರದ ಬೇರೂನ್ ಕಿಲ್ಲಾದಲ್ಲಿ ನಡೆದಿದೆ.
ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಇಬ್ಬರು ಯುವಕರು ಮಹಿಬೂಬ್ ಅಲಿಯನ್ನು ನಡುರಸ್ತೆಯಲ್ಲೇ ಕೊಲೆ ಮಾಡಿ ಪರಾರಿಯಾಗಿದ್ದಾರೆ. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಬಂದಿದ್ದು, ಪರಿಶೀಲನೆ ನಡೆಸಿದ್ದಾರೆ.
ಆಧುನಿಕ ಜೀವನ ಶೈಲಿ ಹಾಗೂ ಪ್ರತಿನಿತ್ಯ ಸೇವಿಸುವ ಆಹಾರದಿಂದಾಗಿ ಯುವ ಜನಾಂಗದವರಲ್ಲೂ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಕಿಡ್ನಿ ಸ್ಟೋನ್ ಎಂದರೆ ಯಾವಾಗ ಮೂತ್ರದಲ್ಲಿ ಅಧಿಕವಾಗಿ ಲವಣಾಂಶಗಳು ಶೇಖರಣೆ ಆಗುತ್ತದೆಯೋ ಅದು ಸ್ಫಟಿಕ ರೂಪಕ್ಕೆ ಮಾರ್ಪಟ್ಟು ಘನ ವಸ್ತುವಾಗಿ ರೂಪಗೊಳ್ಳುವುದಾಗಿದೆ.
ಮೂತ್ರದಲ್ಲಿನ ಅಂಶಗಳಿಂದ ರೂಪುಗೊಳ್ಳುವ ಈ ಕಲ್ಲು ಒಂದು ಮರಳಿನ ಕಣದಿಂದ ಹರಳುಗಳ ಗಾತ್ರದವರೆಗೂ ಬೆಳೆಯುತ್ತವೆ. ಈ ಕಲ್ಲುಗಳು ಮೂತ್ರನಾಳದಲ್ಲಿ ಸೇರಿಕೊಂಡು ಮೂತ್ರ ಹರಿವನ್ನು ನಿರ್ಬಂಧಿಸಿದರೆ ಆಗ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಹೋಗಲಾಡಿಸಲು ವೈದ್ಯರ ಸಲಹೆ ಜೊತೆಗೆ ಕೆಲವು ಮನೆ ಮದ್ದನ್ನು ಅನುಸರಿಸಿ.
ತುಳಸಿ: ತುಳಸಿಯಲ್ಲಿರುವ ಮೂತ್ರವರ್ಧಕ ಗುಣ ಮತ್ತು ಕಲ್ಮಶ ನಿವಾರಕಗಳ ಗುಣಗಳು ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ಹೊರಹಾಕಲು ನೆರವಾಗುತ್ತದೆ. ಅಷ್ಟೇ ಅಲ್ಲದೇ ತುಳಸಿ ಎಲೆಗಳ ರಸದಲ್ಲಿ ಅಸೆಟಿಕ್ ಆಮ್ಲವಿದ್ದು, ಈ ಆಮ್ಲದಿಂದಾಗಿ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ.
ಕಲ್ಲಂಗಡಿ ಬೀಜ: ನಿಮ್ಮ ಕಿಡ್ನಿ ಸ್ಟೋನ್ ಅನ್ನು ಹೊರಹಾಕಲು ಕಲ್ಲಂಗಡಿ ಮತ್ತು ಅದರ ಬೀಜ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಒಂದು ಲೀಟರ್‍ನಷ್ಟು ನೀರನ್ನು ಕುದಿಸಿಕೊಳ್ಳಿ ಹಾಗೂ ಬೀಜವನ್ನು ಪೇಸ್ಟ್ ರೂಪದಲ್ಲಿ ತಯಾರಿಸಿಕೊಂಡು ಈ ನೀರಿಗೆ ಮಿಶ್ರ ಮಾಡಿ. ಅರ್ಧ ಗಂಟೆಗಳ ಕಾಲ ಈ ನೀರನ್ನು ಕುದಿಸಿ ನಂತರ ತಣಿಸಿ ಕುಡಿಯುವರಿಂದ ಕಿಡ್ನಿ ಸ್ಟೋನ್ ನಿವಾರಣೆಯಾಗಿ ನೋವಿನಿಂದಲೂ ಮುಕ್ತಿ ಪಡೆಯುತ್ತಿರಿ.
ಬಾಳೆ ದಿಂಡು ಜ್ಯೂಸ್: ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ನಿತ್ಯವೂ ಬಾಳೆ ದಿಂಡು ಜ್ಯೂಸ್ ಅನ್ನು ಕುಡಿಯಿರಿ. ಹಾಗೂ ಇದರ ಜೊತೆಗೆ ದೇಹಕ್ಕೆ ನಿಯಮಿತಕ್ಕಿಂತಲೂ ಅಧಿಕವಾಗಿ ನೀರನ್ನು ಕುಡಿಯಿರಿ. ಇದರಿಂದಾಗಿ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದನ್ನೂ ಓದಿ:ಬೇಸಿಗೆಯಲ್ಲಿ ಕಾಮಕಸ್ತೂರಿ ಬೀಜ ಬಲು ಆರೋಗ್ಯಕಾರಿ
ಆ್ಯಪಲ್ ಸಿಡರ್ ವಿನೆಗರ್: ಒಂದು ಅಥವಾ ಎರಡು ಟೇಬಲ್ ಸ್ಪೂನ್‍ಗಳಷ್ಟು ಆ್ಯಪಲ್ ಸಿಡರ್ ವಿನೆಗರ್‍ಗೆ ಒಂದಿಷ್ಟು ನೀರನ್ನು ಬೆರೆಸಿ ಅದನ್ನು ಪ್ರತಿನಿತ್ಯ ಕುಡಿಯಿರಿ. ಇದರಿಂದಾಗಿ ಮೂತ್ರಪಿಂಡದಲ್ಲಿ ಆಗಿರುವ ಕಲ್ಲನ್ನು ಕರಗಿಸಲು ಸಹಾಯವಾಗುತ್ತದೆ. ಇದನ್ನೂ ಓದಿ:ನೋಡಲು ಪುಟ್ಟದಾಗಿರುವ ನೆಲನೆಲ್ಲಿಯಿಂದ ಬೆಟ್ಟದಷ್ಟು ಪ್ರಯೋಜನ
ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕಿಡಿಗೇಡಿಗಳು ಕಲ್ಲು ತೂರಿರುವ ಘಟನೆ ಬೆಳಗಾವಿ ತಾಲೂಕಿನ ಬೆಂಡಿಗೇರಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಬೆಂಡಿಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಾಯಣ್ಣನ ಮೂರ್ತಿಗೆ ಕಲ್ಲು ತೂರಿ, ಸ್ಥಳದಿಂದ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಘಟನೆಯಲ್ಲಿ ರಾಯಣ್ಣನ ಮೂರ್ತಿಯ ಕಾಲಿನ ಭಾಗದಲ್ಲಿ ಹಾನಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ರಾಯಣ್ಣ ಅಭಿಮಾನಿಗಳು ತೀವ್ರ ಆಕ್ರೋಶವನ್ನು ಹೊರ ಹಾಕಿದ್ದಾರೆ. ಇದನ್ನೂ ಓದಿ: ಪಾಪದ ಕೊಡ ನಮ್ಮದಾ ನಿಮ್ಮದಾ?: ಅಶೋಕ್‍ಗೆ ತಿರುಗೇಟು ಕೊಟ್ಟ ಸಿದ್ದು
ಬೆಂಡಿಗೇರಿ ಗ್ರಾಮಕ್ಕೆ ಹಿರೇಬಾಗೇವಾಡಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ರಾಯಣ್ಣನ ಮೂರ್ತಿಗೆ ಕಲ್ಲು ತೂರಿರುವ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಘಟನೆಯಿಂದ ಬೆಂಡಿಗೇರಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಇದನ್ನೂ ಓದಿ: ಆಜಾನ್‌ಗೆ ವಿರೋಧ ರಾಜ್ಯಾದ್ಯಂತ ಜೂ. 1ರಿಂದ ಎರಡನೇ ಸುತ್ತಿನ ಹೋರಾಟ: ಪ್ರಮೋದ್ ಮುತಾಲಿಕ್
ಹೈದರಾಬಾದ್: ಶಸ್ತ್ರ ಚಿಕಿತ್ಸೆ ಮೂಲಕ ರೋಗಿಯೊಬ್ಬರ ಮೂತ್ರಪಿಂಡದಲ್ಲಿದ್ದ 206 ಕಲ್ಲುಗಳನ್ನು ಒಂದು ಗಂಟೆಯಲ್ಲಿಯೇ ತೆಲಂಗಾಣದ ಹೈದರಾಬಾದ್‍ನಲ್ಲಿರುವ ಅವೇರ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರು ತೆಗೆದು ಹಾಕಿದ್ದಾರೆ.
ಕಳೆದ ಆರು ತಿಂಗಳಿನಿಂದ ಎಡ ಭಾಗದ ಸೊಂಟದ ನೋವಿನಿಂದ ಬಳಲುತ್ತಿದ್ದ ನಲ್ಗೊಂಡ ನಿವಾಸಿ 56 ವರ್ಷದ ವೀರಮಲ್ಲ ರಾಮಲಕ್ಷ್ಮಯ್ಯ ಅವರಿಗೆ ಬೇಸಿಗೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು. ಇದರಿಂದ ಏಪ್ರಿಲ್ 22 ರಂದು ವೀರಮಲ್ಲ ಅವರು ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದ್ದಾರೆ. ನಂತರ ಕೆಲವು ಔಷಧಿಗಳನ್ನು ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದರು. ಅದರಿಂದ ಅಲ್ಪಾವಧಿಯ ಪರಿಹಾರ ಮಾತ್ರ ದೊರೆಯಿತು. ಆದರೆ ದಿನದಿಂದ ದಿನೇ ನೋವು ವಿಪರೀತಗೊಂಡಿತು. ಇದನ್ನೂ ಓದಿ: ಚಾರ್ ಧಾಮ್ ಯಾತ್ರೆ – ಇಲ್ಲಿ ವರೆಗೆ 46 ಯಾತ್ರಿಕರು ಹೃದಯಾಘಾತದಿಂದ ಸಾವು
ನಂತರ ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ಹಿರಿಯ ಸಮಾಲೋಚಕ ಮೂತ್ರಶಾಸ್ತ್ರಜ್ಞ ಡಾ.ಪೂಲಾ ನವೀನ್ ಕುಮಾರ್ ಅವರು, ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿದಾಗ ರೋಗಿಯ ಎಡ ಮೂತ್ರಪಿಂಡದಲ್ಲಿ ಕಲ್ಲುಗಳಿರುವುದು ಕಂಡು ಬಂದಿದೆ. ಕೊನೆಗೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು.
ಬೇಸಿಗೆಯಲ್ಲಿ ಹೆಚ್ಚು ಬಿಸಿಲಿರೋ ಕಾರಣ ಅನೇಕ ಬಹುತೇಕರು ನಿರ್ಜಲೀಕರಣದಿಂದ ಬಳಲುತ್ತಿರುತ್ತಾರೆ. ಇದರಿಂದ ಮೂತ್ರಪಿಂಡದಲ್ಲಿ ಕಲ್ಲು ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಹೀಗಾಗಿ ಮುನ್ನೆಚ್ಚರಿಕೆಯಿಂದ ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯುವುದು ಮತ್ತು ಎಳನೀರು ಕುಡಿಯುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಶ್ರೀನಗರ: ಇಂದು ದೇಶದೆಲ್ಲೆಡೆ ಮುಸ್ಲಿಮರು ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಎಲ್ಲ ಮಸೀದಿಗಳಲ್ಲಿ ಜನರು ತುಂಬಿತುಳುಕುತ್ತಿದ್ದಾರೆ. ಈ ನಡುವೆ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಮಸೀದಿ ಬಳಿ ಇದ್ದ ಭದ್ರತಾ ಪಡೆಗಳ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ.
ಮುಂಜಾನೆ ಈದ್-ಉಲ್-ಫಿತರ್ ಪ್ರಾರ್ಥನೆಯ ಸಮಯದಲ್ಲಿ ಕೆಲವು ಕಿಡಿಗೇಡಿಗಳು ಕಾಶ್ಮೀರವನ್ನು ಮುಕ್ತಗೊಳಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಭದ್ರತಾ ಪಡೆಗಳ ಮೇಲೂ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಅಮಿತ್ ಶಾ ಭೇಟಿ – ಶೀಘ್ರವೇ ಹೊರಟ್ಟಿ ಬಿಜೆಪಿಗೆ ಸೇರ್ಪಡೆ
ಇದೀಗ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಮುಂಜಾಗ್ರತವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಘಟನೆ ಬಗ್ಗೆ ಕೆಲವರು ತಪ್ಪು ತಿಳಿದುಕೊಂಡಿದ್ದರು. ಆದರೆ ಇದೊಂದು ಸಣ್ಣ ಘರ್ಷಣೆಯಷ್ಟೇ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: 2024 ಮೋದಿ ಒನ್ಸ್‌ಮೋರ್ – ಜರ್ಮನಿ ಭಾರತೀಯರಿಂದ ಘೋಷಣೆ