Tag: stolen

  • ಐಷಾರಾಮಿ ಮನೆಗಳಲ್ಲಿ ಕಳವುಗೈದು ಚರ್ಚ್‍ಗಳಿಗೆ ಹೋಗಿ ಭಿಕ್ಷುಕರಿಗೆ ದಾನ- ಬೆಂಗ್ಳೂರಿನಲ್ಲಿ ಡಿಫರೆಂಟ್ ಕಳ್ಳ

    ಐಷಾರಾಮಿ ಮನೆಗಳಲ್ಲಿ ಕಳವುಗೈದು ಚರ್ಚ್‍ಗಳಿಗೆ ಹೋಗಿ ಭಿಕ್ಷುಕರಿಗೆ ದಾನ- ಬೆಂಗ್ಳೂರಿನಲ್ಲಿ ಡಿಫರೆಂಟ್ ಕಳ್ಳ

    ಬೆಂಗಳೂರು: ಸಾಮಾನ್ಯವಾಗಿ ಕಳ್ಳರು ತಮ್ಮ ಉಪಯೋಗಕ್ಕೆ ಕಳ್ಳತನ ಮಾಡುತ್ತಾರೆ. ಆದರೆ ಸಿಲಿಕಾನ್ ಸಿಟಿಯಲ್ಲೊಬ್ಬ (Bengaluru) ಡಿಫರೆಂಟ್ ಕಳ್ಳ (Thief) ಇದ್ದಾನೆ. ಈತ ತಾನು ಕದ್ದ ಹಣವನ್ನು ಭಿಕ್ಷುಕರಿಗೆ ನೀಡುವ ಮೂಲಕ ಗಮನ ಸೆಳೆದಿದ್ದಾನೆ.

    ಹೌದು. ಕದ್ದ (Stolen) ಹಣವನ್ನು ತಾನೊಬ್ಬನೇ ಬಳಸದೆ ದಾನ ಧರ್ಮ ಮಾಡುತ್ತಿದ್ದ ವಿಚಿತ್ರ ಕಳ್ಳನನ್ನು ಇದೀಗ ಅಶೋಕ ನಗರದ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಜಾನ್ ಅಲಿಯಾಸ್ ಮಂಜುನಾಥ ಎಂದು ಗುರುತಿಸಲಾಗಿದೆ. ಈತ ತಾನು ಕದ್ದ ಬೆಲೆಬಾಳುವ ವಸ್ತು ಹಾಗೂ ಹಣದ (Money) ಅರ್ಧ ಭಾಗ ದಾನವಾಗಿ ಹಂಚುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕುರಿತ ಹೇಳಿಕೆಗೆ ಅಶ್ವಥ್ ನಾರಾಯಣ್ ವಿಷಾದ

    ಕದ್ದ ಹಣ-ಒಡವೆಗಳಲ್ಲಿ ಆರೋಪಿ ದೇವಸ್ಥಾನ ಹಾಗೂ ಚರ್ಚ್‍ಗಳಿಗೆ ಕಾಣಿಕೆ ಸಲ್ಲಿಸಿ ತನ್ನ ತಪ್ಪಿಗೆ ದೇವರ ಬಳಿ ಕ್ಷಮೆಯಾಚಿಸಿ ಬರುತ್ತಿದ್ದ. ಅಲ್ಲದೆ ಭಿಕ್ಷುಕರಿಗೆ ಕೈಲಾದಷ್ಟು ಹಣ ಕೊಟ್ಟು ಬರುತ್ತಿದ್ದನು.

    ಆರೋಪಿ ಈ ಹಿಂದೆ ಸಂಬಳ ಜಾಸ್ತಿ ಮಾಡಿಲ್ಲ ಎಂದು ತಾನು ಕೆಲಸ ಮಾಡಿಕೊಂಡಿದ್ದ ಮಾಲೀಕನ ಮನೆಯಲ್ಲಿಯೇ 2 ಲಕ್ಷ ರೂ.ಗಳನ್ನು ಕದ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತವರು ಜಿಲ್ಲೆಯಲ್ಲೇ ಸಿದ್ದರಾಮಯ್ಯಗೆ ಭಾರೀ ಅಪಮಾನ!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಸೀದಿ ಗುಮ್ಮಟದ ಮೇಲಿದ್ದ 100 ವರ್ಷದಷ್ಟು ಹಳೆಯ ಚಿನ್ನದ ಭಾಗ ಕಳ್ಳತನ

    ಮಸೀದಿ ಗುಮ್ಮಟದ ಮೇಲಿದ್ದ 100 ವರ್ಷದಷ್ಟು ಹಳೆಯ ಚಿನ್ನದ ಭಾಗ ಕಳ್ಳತನ

    ಭೋಪಾಲ್: (Bhopal) ಇಲ್ಲಿನ ತಲೈಯಾ ಪ್ರದೇಶದ ಐತಿಹಾಸಿಕ ಮೋತಿ ಮಸೀದಿಯ (Moti Masjid) ಮೇಲಿನ ಗುಮ್ಮಟದ ಚಿನ್ನದ ಲೇಪಿತ ಒಂದು ಭಾಗವನ್ನು ಗುರುವಾರ ನಸುಕಿನಲ್ಲಿ ಕಳವು ಮಾಡಲಾಗಿದೆ.

    ಗುಮ್ಮಟದ ಭಾಗಕ್ಕೆ ಅಲಂಕಾರ ಮಾಡಲಾಗಿದ್ದ ಏಳು ಅಡಿ ಎತ್ತರದ ಚಿನ್ನ ಲೇಪಿತ ಭಾಗ ಕಳ್ಳತನವಾಗಿದೆ. ಕಳ್ಳರು ಇಡೀ ವಸ್ತುವನ್ನು ಸಾಗಿಸಲು ಸಾಧ್ಯವಾಗದೇ ಒಂದು ಭಾಗವನ್ನು ಮಾತ್ರ ತೆಗೆದುಕೊಂಡು ಹೋಗಿದ್ದಾರೆ. ಉಳಿದ ಭಾಗವನ್ನು ಛಾವಣಿಯ ಮೇಲೆಯೇ ಬಿಟ್ಟಿದ್ದಾರೆ. ಇದನ್ನೂ ಓದಿ: ಮಸೀದಿ ಮೇಲೆ ಭಗವಾಧ್ವಜದ ಫೋಟೋ- ಸ್ಟೇಟಸ್ ಹಾಕಿದ್ದ 8 ಮಂದಿ ವಿರುದ್ಧ ಪ್ರಕರಣ

    ಕಳ್ಳರ ಕೃತ್ಯಕ್ಕೆ ಜನಾಕ್ರೋಶ ವ್ಯಕ್ತವಾಗಿದೆ. ಪೊಲೀಸರಿಗೆ ಇನ್ನೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಕಳ್ಳರನ್ನು ಗುರುತಿಸಲು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ.

    ಸೆಕ್ಯೂರಿಟಿ ಮೊಹಮ್ಮದ್ ಲಯೀಕ್ (50), ಅವರು ಮತ್ತು ಅವರ ಸಹೋದ್ಯೋಗಿಗಳು ಗುರುವಾರ ಬೆಳಗ್ಗೆ ನಮಾಜ್ ಸಲ್ಲಿಸಿದ ನಂತರ ಮಲಗಿದ್ದರು. ಬೆಳಗ್ಗೆ 10 ಗಂಟೆಯ ಸುಮಾರಿಗೆ ಮಸೀದಿಯ ಮುಂಭಾಗದಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ನಮ್ಮನ್ನು ಎಚ್ಚರಿಸಿ ಕಳ್ಳತನವಾಗಿರುವ ಬಗ್ಗೆ ತಿಳಿಸಿದ್ದಾರೆ ಎಂದು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಮುರ್ಮುಗೆ ಚಮಚಾಗಿರಿ ಎಂದ ಕಾಂಗ್ರೆಸ್ ನಾಯಕ

    ಕಳುವಾದ ಚಿನ್ನದ ಭಾಗವು ಕನಿಷ್ಠ 100 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ. ಪೊಲೀಸರಿಗೆ ದೂರು ನೀಡಿದ ನಂತರ ಸಮಾಜದ ಹಿರಿಯರು ಮಸೀದಿಗೆ ಧಾವಿಸಿದರು. ತಲೈಯಾ ಪೊಲೀಸ್ ಮತ್ತು ಅಪರಾಧ ವಿಭಾಗದ ಹಲವು ತಂಡಗಳು ಕಳ್ಳತನದ ತನಿಖೆ ನಡೆಸುತ್ತಿವೆ.

    ಮೋತಿ ಮಸೀದಿಯನ್ನು 1860 ರಲ್ಲಿ ಖುದ್ಸಿಯಾ ಬೇಗಂ ಅವರ ಮಗಳು ಸಿಕಂದರ್ ಜಹಾನ್ ಬೇಗಂ ನಿರ್ಮಿಸಿದ್ದರು. 160 ವರ್ಷಗಳ ಕಾಲ ಕೆಂಪು ಮರಳುಗಲ್ಲಿನ ಗೋಪುರಗಳು, ಮುತ್ತಿನ ಬಿಳಿ ಗುಮ್ಮಟಗಳು ಮತ್ತು ಹೊಳೆಯುವ ಗೋಲ್ಡನ್ ಸ್ಪೈಕ್‌ಗಳು ಭೋಪಾಲ್ ಸ್ಕೈಲೈನ್‌ನಲ್ಲಿ ಮೋಡಿ ಮಾಡುವ ದೃಶ್ಯವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪೊಲೀಸ್ ಠಾಣೆ, ಕೋರ್ಟ್ ಆವರಣದಲ್ಲೇ ಗಂಧದ ಮರ ಕಳವು

    ಪೊಲೀಸ್ ಠಾಣೆ, ಕೋರ್ಟ್ ಆವರಣದಲ್ಲೇ ಗಂಧದ ಮರ ಕಳವು

    ದಾವಣರೆಗೆ: ಪೊಲೀಸ್ ಠಾಣೆ ಹಾಗೂ ಕೋರ್ಟ್ ಆವರಣದಲ್ಲಿರುವ ಗಂಧದ ಮರ ಕಳವಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ.

    ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಎರಡು ಗಂಧದ ಮರಗಳು ಹಾಗೂ ಕೋರ್ಟ್ ಪಕ್ಕದಲ್ಲಿರುವ ಗಂಧದ ಮರ ಕಳವುವಾಗಿವೆ. ಎರಡು ವರ್ಷಗಳ ಹಿಂದೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಒಂದು ಗಂಧದ ಮರ ಕಳವುವಾಗಿತ್ತು. ಈಗ ಮತ್ತೆ ಅಲ್ಲಿ ಗಂಧದ ಮರ ಕಳ್ಳತನವಾಗಿರುವುದರಿಂದ ಹಲವು ಅನುಮಾನಕ್ಕೆ ಕಾರಣವಾಗಿವೆ.

    ಸರ್ಕಾರಿ ಕಚೇರಿಗಳಾದ ಕೋರ್ಟ್ ಆವರಣ ಹಾಗೂ ಪೊಲೀಸ್ ಠಾಣೆಯಲ್ಲಿಯೇ ಗಂಧದ ಮರಗಳು ಕಳವುವಾಗುತ್ತಿವೆ. ಅಲ್ಲಿಯೇ ಮರಗಳಿಗೆ ರಕ್ಷಣೆ ಇಲ್ಲ. ಇನ್ನೂ ಬೇರೆ ಯಾವ ಕಡೆ ಮರಗಳಿಗೆ ರಕ್ಷಣೆ ಇರುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪೊಲೀಸ್ ಠಾಣೆಯ ಮುಂಭಾಗವೇ ಗಂಧದ ಮರ ಕಳವಿನಿಂದ ಪೊಲೀಸರು ತಲೆಕೆಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸುಳ್ಯದಲ್ಲಿ ರಾತ್ರೋರಾತ್ರಿ ದನಕಳ್ಳತನ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಸುಳ್ಯದಲ್ಲಿ ರಾತ್ರೋರಾತ್ರಿ ದನಕಳ್ಳತನ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಮಂಗಳೂರು: ಕರಾವಳಿಯಲ್ಲಿ ದನಗಳ್ಳರ ಹಾವಳಿ ಮುಂದುವರಿದಿದೆ. ರಾತ್ರಿ ರಸ್ತೆ ಬದಿ ಮಲಗುವ ದನಗಳನ್ನು ದುಷ್ಕರ್ಮಿಗಳು ಕಾರಿನಲ್ಲಿ ಹಾಕಿ ಅಪಹರಿಸಿ ಹತ್ಯೆ ಮಾಡುತ್ತಿದ್ದು, ನಿರಂತರವಾಗಿ ದನ ಕಳ್ಳತನ ಮಾಡುತ್ತಿದ್ದಾರೆ.

    ಫೆಬ್ರವರಿ 16 ರಂದು ಸುಳ್ಯ ತಾಲೂಕಿನ ಚೆನ್ನಕೇಶವ ದೇವಸ್ಥಾನದ ಮುಂಭಾಗ ಸ್ಕಾರ್ಪಿಯೋ ಮತ್ತು ಮಾರುತಿ 800 ಕಾರ್ ನಲ್ಲಿ ಬಂದ ದುಷ್ಕರ್ಮಿಗಳು ದನಗಳನ್ನು ಓಡಿಸಿಕೊಂಡು ಹೋಗಿ ಅಪಹರಿಸಿ ಕಾರ್ ನಲ್ಲಿ ತುಂಬಿಕೊಂಡು ಹೋಗಿದ್ದಾರೆ. ಸುಳ್ಯ ಠಾಣೆಯಿಂದ ಕೇವಲ 200 ಮೀಟರ್ ದೂರದಲ್ಲಿ ಘಟನೆ ನಡೆದಿದ್ದು, ಮಧ್ಯರಾತ್ರಿಯೇ ದುಷ್ಕರ್ಮಿಗಳು ಕೃತ್ಯ ನಡೆಸಿದ್ದಾರೆ.

    ಬಿಡಾಡಿ ದನಗಳನ್ನು ಮಾರುತಿ 800 ಕಾರ್ ನಲ್ಲಿ ಅಮಾನುಷವಾಗಿ ತುಂಬಿಕೊಂಡು ಹೋಗಿ ಹತ್ಯೆ ಮಾಡುತ್ತಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ರೂ ಕಳ್ಳತನ ಮಾತ್ರ ನಿಂತಿಲ್ಲ. ರಸ್ತೆ ಬದಿಯ ದನಗಳ ಸ್ಥಿತಿ ಈ ರೀತಿಯಾದ್ರೆ ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಲ್ಲೂ ಕಳ್ಳರು ಅಟ್ಟಹಾಸ ಮೆರೆಯುತ್ತಿದ್ದರು. ಅಲ್ಲದೇ ಕೊಟ್ಟಿಗೆಗೆ ನುಗ್ಗಿ ದನಕಳ್ಳತನ ನಡೆಸುತ್ತಿದ್ದಾರೆ ಅಂತ ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.

    https://www.youtube.com/watch?v=jBR9MhxRPEQ