Tag: STF

  • ಯೋಗಿ ಡೀಪ್‌ಫೇಕ್ ವೀಡಿಯೋ ಶೇರ್ ಮಾಡಿದ ಆರೋಪ – ಓರ್ವ ಅರೆಸ್ಟ್

    ಯೋಗಿ ಡೀಪ್‌ಫೇಕ್ ವೀಡಿಯೋ ಶೇರ್ ಮಾಡಿದ ಆರೋಪ – ಓರ್ವ ಅರೆಸ್ಟ್

    ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರ ಡೀಪ್‌ಫೇಕ್ (Deep Fake) ವೀಡಿಯೋವನ್ನು ಪೋಸ್ಟ್ ಮಾಡಿ ಶೇರ್ ಮಾಡಿದ ಆರೋಪದ ಮೇಲೆ ಉತ್ತರಪ್ರದೇಶ (Uttar Pradesh) ಎಸ್‌ಟಿಎಫ್ (STF) ತಂಡ ಓರ್ವನನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದಾರಿತಪ್ಪಿಸುವ ಸಂಗತಿಗಳನ್ನು ಹರಡಲು, ದೇಶ ವಿರೋಧಿ ಅಂಶಗಳನ್ನು ಬಲಪಡಿಸಲು ಈ ವಿಡಿಯೋವನ್ನು ಬಳಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮಿತಾಬ್ ಯಶ್ ಹೇಳಿದ್ದಾರೆ. ಮೇ 1ರಂದು ಉತ್ತರ ಪ್ರದೇಶ ಮುಖ್ಯಮಂತ್ರಿಯ ಎಐ ಡೀಪ್‌ಫೇಕ್ ವೀಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಬಳಿಕ ಇದು ವೈರಲ್ ಆಗಿದೆ ಎಂದು ಯಶ್ ತಿಳಿಸಿದ್ದಾರೆ. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

    ಭಾರತೀಯ ದಂಡ ಸಂಹಿತೆಯ ಸೆಕ್ಷನ್ 468 (ವಂಚನೆಗಾಗಿ ಫೋರ್ಜರಿ), 505(2) (ಸಾರ್ವಜನಿಕ ಕಿಡಿಗೇಡಿತನದ ಹೇಳಿಕೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ನೋಯ್ಡಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಎಸ್‌ಟಿಎಫ್ ಈ ಬಗ್ಗೆ ತನಿಖೆ ಆರಂಭಿಸಿತ್ತು. ಇದನ್ನೂ ಓದಿ: KSET -23 ತಾತ್ಕಾಲಿಕ ಅಂಕ ಪ್ರಕಟ

    ಆರೋಪಿ ಶ್ಯಾಮ್ ಕಿಶೋರ್ ಗುಪ್ತಾನನ್ನು ಗುರುವಾರ ಬಂಧಿಸಲಾಗಿದೆ. ನೋಯ್ಡಾದ ಸ್ಥಳೀಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದು ಯಶ್ ಹೇಳಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬ್ರಿಜ್‌ಭೂಷಣ್‌ಗೆ ಟಿಕೆಟ್‌ ಇಲ್ಲ – ಪುತ್ರನಿಗೆ ಬಿಜೆಪಿ ಮಣೆ

  • ಐಸಿಸ್ ಸೇರಿ ಉಗ್ರನಾಗಲು ಬಯಸಿದ್ದ ಐಐಟಿ ವಿದ್ಯಾರ್ಥಿ ಅರೆಸ್ಟ್ – ಕರ್ನಾಟಕಕ್ಕಿದೆಯಾ ಲಿಂಕ್?

    ಐಸಿಸ್ ಸೇರಿ ಉಗ್ರನಾಗಲು ಬಯಸಿದ್ದ ಐಐಟಿ ವಿದ್ಯಾರ್ಥಿ ಅರೆಸ್ಟ್ – ಕರ್ನಾಟಕಕ್ಕಿದೆಯಾ ಲಿಂಕ್?

    – ವಿಚಾರಣೆ ವೇಳೆ ಬೆಚ್ಚಿ ಬೀಳಿಸುವ ಮಾಹಿತಿ ಸ್ಫೋಟ

    ಗುವಾಹಟಿ: ಭಯೋತ್ಪಾದಕ ಗುಂಪು ಐಸಿಎಸ್ ಸಂಘಟನೆ (ISIS) ಸೇರಿ ಉಗ್ರನಾಗಲು ಮುಂದಾಗಿದ್ದ ಐಐಟಿ ವಿದ್ಯಾರ್ಥಿಯನ್ನು ಅಸ್ಸಾಂ ಪೊಲೀಸರು (Assam Police) ಬಂಧಿಸಿರುವ ಘಟನೆ ನಡೆದಿದೆ. ವಿದ್ಯಾರ್ಥಿಯನ್ನು ಬಂಧಿಸಿದ ಬಳಿಕ ಗುವಾಹಟಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

    ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗುವಾಹಟಿಯಲ್ಲಿ ಜೈವಿಕ ತಂತ್ರಜ್ಞಾನ ಓದುತ್ತಿದ್ದ ಅಂತಿಮ ವರ್ಷದ ವಿದ್ಯಾರ್ಥಿ ತೌಸೀಫ್ ಅಲಿ ಫಾರೂಕಿಯನ್ನು (Tauseef Ali Farooqui) ವಿಚಾರಣೆ ನಡೆಸುವ ವೇಳೆ ಬೆಚ್ಚಿ ಬೀಳಿಸುವ ಮಾಹಿತಿಗಳು ಬೆಳಕಿಗೆ ಬಂದಿವೆ.

    ಕರ್ನಾಟಕದಲ್ಲೂ ಮಾಡ್ಯೂಲ್ ಸ್ಥಾಪಿಸಿದ್ದ:
    ಈತ 2019ರಿಂದಲೇ ಐಸಿಸ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಅಲ್ಲದೇ ಪಾಣಿಪತ್‌ಗೆ ಸೇರಿದ ಫಾರೂಕಿ ಸಹಚರ ಅನುರಾಗ್ ಸಿಂಗ್ ಅಲಿಯಾಸ್ ರೆಹಾನ್ ಇಸ್ಲಾಂಗೆ ಮತಾಂತರಗೊಂಡಿದ್ದ. ರೆಹಾನ್ ಪತ್ನಿ ಬಾಂಗ್ಲಾದೇಶದ ಪ್ರಜೆ. ಆದ್ದರಿಂದ ಬಾಂಗ್ಲಾದೇಶದಲ್ಲಿ ತಲೆ ಮರೆಸಿಕೊಂಡಿದ್ದು, ಭಾರತೀಯರನ್ನು ಐಸಿಸ್‌ಗೆ ಆಮೂಲಾಗ್ರೀಕರಣಗೊಳಿಸುತ್ತಿದ್ದ ಎಂದು ಶಂಕಿಸಲಾಗಿದೆ. ಅಲ್ಲದೇ ಕರ್ನಾಟಕ, ಜಾರ್ಖಂಡ್, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗೋವಾ, ಪಂಜಾಬ್, ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಮಾಡ್ಯೂಲ್‌ಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಎನ್‌ಐಎ ಮೂಲಗಳು ತಿಳಿಸಿವೆ.

    ಪೊಲೀಸರು ಹೇಳಿದ್ದೇನು?
    ಐಸಿಸ್‌ಗೆ ಸೇರಿರುವುದಾಗಿ ಹೇಳಿದ್ದ ಐಐಟಿ-ಜಿ ವಿದ್ಯಾರ್ಥಿ ತೌಸೀಫ್ ಅಲಿ ಫಾರೂಕಿಯನ್ನು ಅಸ್ಸಾಂ ಎಸ್‌ಟಿಎಫ್ ಬಂಧಿಸಿದೆ. ಶನಿವಾರ ಬೆಳಗ್ಗೆಯಿಂದ ವಿದ್ಯಾರ್ಥಿ ನಾಪತ್ತೆಯಾಗಿದ್ದ. ಐಸಿಸ್ ಸೇರುವ ಬಗ್ಗೆ ಆತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ. ನಾವು ಆತನನ್ನು ಅಸ್ಸಾಂನ ಕಾಮ್ರೂಪ್ ಜಿಲ್ಲೆಯ ಹಾಜೋದಲ್ಲಿ ಪತ್ತೆ ಹಚ್ಚಿದ್ದೇವೆ ಎಂದು ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್) ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಲ್ಯಾಣ್ ಕುಮಾರ್ ಪಾಠಕ್ ತಿಳಿಸಿದ್ದರು.

    ತೌಸೀಫ್ ಕ್ಯಾಂಪಸ್‌ನಲ್ಲಿ ಹೆಚ್ಚು ಸ್ನೇಹಿತರನ್ನು ಹೊಂದಿರಲಿಲ್ಲ. ಹೆಚ್ಚಿನ ಸಮಯವನ್ನು ಆತ ಹಾಸ್ಟೆಲ್‌ನಲ್ಲೇ ಕಳೆಯುತ್ತಿದ್ದ. ಆತನ ಕೊಠಡಿಯಲ್ಲಿ ಐಸಿಸ್ ಧ್ವಜವನ್ನು ಹೋಲುವ ಕಪ್ಪು ಧ್ವಜ ಮತ್ತು ಧರ್ಮದ ಕೆಲವು ಪ್ರತಿಗಳು ಸಿಕ್ಕಿವೆ. ವಶಪಡಿಸಿಕೊಂಡ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ತಿಳಿಸಿದ್ದರು.

    ಫಾರೂಕಿ ಏನಂತ ಬರೆದುಕೊಂಡಿದ್ದ?
    ಸೋಮವಾರ ಲಿಕ್ಡಿಇನ್‌ನಲ್ಲಿ ತೌಸೀಫ್ ಅಲಿ ಬಹಿರಂಗ ಪತ್ರವನ್ನು ಬರೆದಿದ್ದ. ಭಾರತೀಯ ಸಂವಿಧಾನ, ಅದರ ಸಂಸ್ಥೆಗಳು ಮತ್ತು ಮುಂತಾದವುಗಳಿಂದ ನಾನು ಹೊರ ಬಂದಿದ್ದೇನೆ. ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾಂತ್ಯ ಎಂದು ಕರೆಯಲ್ಪಡುವ ಪ್ರದೇಶಕ್ಕೆ ನಾನು ವಲಸೆ ಹೋಗುತ್ತಿದ್ದೇನೆ. ಮುಸ್ಲಿಂ-ನಾಯಕತ್ವಕ್ಕೆ ನಾನು ಪ್ರತಿಜ್ಞೆ ಮಾಡಿದ ಮೊದಲ ಹೆಜ್ಜೆ ಇದಾಗಿದೆ. ಇದು ಮುಸ್ಲಿಮರು (ಅಲ್ಲಾಗೆ ಶರಣಾದವರು) ಮತ್ತು ಕಾಫೀರ್ (ನಾಸ್ತಿಕರು) ನಡುವಿನ ಹೋರಾಟ ಎಂದು ಬರೆದುಕೊಂಡಿದ್ದ.

  • ಉಗ್ರನಾಗಲು ಐಸಿಸ್‌ ಸೇರಲು ಮುಂದಾಗಿದ್ದ ಐಐಟಿ ವಿದ್ಯಾರ್ಥಿ ವಶಕ್ಕೆ

    ಉಗ್ರನಾಗಲು ಐಸಿಸ್‌ ಸೇರಲು ಮುಂದಾಗಿದ್ದ ಐಐಟಿ ವಿದ್ಯಾರ್ಥಿ ವಶಕ್ಕೆ

    ಗುವಾಹಟಿ: ಭಯೋತ್ಪಾದಕ ಗುಂಪು ಐಸಿಎಸ್‌ಗೆ (ISIS) ಸೇರಲು ಮುಂದಾಗಿದ್ದ ಐಐಟಿ ವಿದ್ಯಾರ್ಥಿಯನ್ನು (IIT Student) ಅಸ್ಸಾಂ ಪೊಲೀಸರು (Assam Police) ವಶಕ್ಕೆ ಪಡೆದಿದ್ದಾರೆ.

    ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಗುವಾಹಟಿಯಲ್ಲಿ (IIT) ಜೈವಿಕ ತಂತ್ರಜ್ಞಾನ ಓದುತ್ತಿದ್ದ ಅಂತಿಮ ವರ್ಷದ ವಿದ್ಯಾರ್ಥಿ ತೌಸೀಫ್ ಅಲಿ ಫಾರೂಕಿಯನ್ನು (Tauseef Ali Farooqui) ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ

     ಸುದ್ದಿಗೋಷ್ಠಿ ನಡೆಸಿದ ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್) ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಲ್ಯಾಣ್ ಕುಮಾರ್ ಪಾಠಕ್ ಅವರು, ಐಸಿಸ್‌ಗೆ ಸೇರಿರುವುದಾಗಿ ಹೇಳಿದ ಐಐಟಿ-ಜಿ ವಿದ್ಯಾರ್ಥಿ ತೌಸೀಫ್ ಅಲಿ ಫಾರೂಕಿಯನ್ನು ಅಸ್ಸಾಂ ಎಸ್‌ಟಿಎಫ್‌ ಬಂಧಿಸಿದೆ. ಶನಿವಾರ ಬೆಳಗ್ಗೆಯಿಂದ ವಿದ್ಯಾರ್ಥಿ ನಾಪತ್ತೆಯಾಗಿದ್ದ. ಐಸಿಸ್ ಸೇರುವ ಬಗ್ಗೆ ಆತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದ. ನಾವು ಆತನನ್ನು ಅಸ್ಸಾಂನ ಕಾಮ್ರೂಪ್ ಜಿಲ್ಲೆಯ ಹಾಜೋದಲ್ಲಿ ಪತ್ತೆ ಹಚ್ಚಿದ್ದೇವೆ ಎಂದು ತಿಳಿಸಿದರು.

    ತೌಸೀಫ್ ಕ್ಯಾಂಪಸ್‌ನಲ್ಲಿ ಹೆಚ್ಚು ಸ್ನೇಹಿತರನ್ನು ಹೊಂದಿರಲಿಲ್ಲ. ಹೆಚ್ಚಿನ ಸಮಯವನ್ನು ಆತ ಹಾಸ್ಟೆಲ್‌ನಲ್ಲೇ ಕಳೆಯುತ್ತಿದ್ದ. ಆತನ ಕೊಠಡಿಯಲ್ಲಿ ಐಸಿಸ್‌ ಧ್ವಜವನ್ನು ಹೋಲುವ ಕಪ್ಪು ಧ್ವಜ ಮತ್ತು ಧರ್ಮದ ಕೆಲವು ಪ್ರತಿಗಳು ಸಿಕ್ಕಿವೆ. ವಶಪಡಿಸಿಕೊಂಡ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ಅವರು ಹೇಳಿದರು. ಇದನ್ನೂ ಓದಿ: ಕಾವೇರಿ ನೀರಿನಲ್ಲಿ ಕಾರು ವಾಶ್‌: ಮಾಲೀಕರಿಗೆ 5 ಸಾವಿರ ದಂಡ ವಿಧಿಸಿದ ಜಲಮಂಡಳಿ

    ಸೋಮವಾರ ಲಿಕ್ಡಿಇನ್‌ನಲ್ಲಿ ತೌಸೀಫ್ ಅಲಿ ಬಹಿರಂಗ ಪತ್ರವನ್ನು ಬರೆದಿದ್ದ. ಭಾರತೀಯ ಸಂವಿಧಾನ, ಅದರ ಸಂಸ್ಥೆಗಳು ಮತ್ತು ಮುಂತಾದವುಗಳಿಂದ ನಾನು ಹೊರ ಬಂದಿದ್ದೇನೆ. ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾಂತ್ಯ ಎಂದು ಕರೆಯಲ್ಪಡುವ ಪ್ರದೇಶಕ್ಕೆ ನಾನು ವಲಸೆ ಹೋಗುತ್ತಿದ್ದೇನೆ. ಮುಸ್ಲಿಂ-ನಾಯಕತ್ವಕ್ಕೆ ನಾನು ಪ್ರತಿಜ್ಞೆ ಮಾಡಿದ ಮೊದಲ ಹೆಜ್ಜೆ ಇದಾಗಿದೆ. ಇದು ಮುಸ್ಲಿಮರು(ಅಲ್ಲಾಗೆ ಶರಣಾದವರು) ಮತ್ತು ಕಾಫೀರ್‌ (ನಾಸ್ತಿಕರು) ನಡುವಿನ ಹೋರಾಟ ಎಂದು ಬರೆದುಕೊಂಡಿದ್ದ.

     

    ಅಸ್ಸಾಂ ಎಸ್‌ಟಿಎಫ್ ಇತ್ತೀಚೆಗೆ ಭಾರತದಲ್ಲಿ ಐಸಿಸ್‌ಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿತ್ತು. ಡೆಹ್ರಾಡೂನ್‌ನ ಚಕ್ರತಾ ಮೂಲದ ಹ್ಯಾರಿಸ್ ಭಾರತದಲ್ಲಿ ಐಸಿಸ್ ಮುಖ್ಯಸ್ಥನಾಗಿದ್ದರೆ ಪಾಣಿಪತ್‌ನ ಅನುರಾಗ್ ಸಿಂಗ್ ಅಲಿಯಾಸ್ ರೆಹಾನ್ ಇಸ್ಲಾಂಗೆ ಮತಾಂತರಗೊಂಡಿದ್ದ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ನಾಲ್ವರು ಭಯೋತ್ಪಾದಕರ ಬಂಧನ – ಅಪಾರ ಶಸ್ತ್ರಾಸ್ತ್ರ ವಶ

     ಐಸಿಸ್‌ನ ನೇಮಕಾತಿ, ಭಯೋತ್ಪಾದಕ ನಿಧಿ ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಬಳಸಿ ಭಾರತದಾದ್ಯಂತ ದಾಳಿಗಳನ್ನು ನಡೆಸುವುದು ಸೇರಿದಂತೆ ವಿವಿಧ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಇಬ್ಬರೂ ತೊಡಗಿಸಿಕೊಂಡಿದ್ದರು. ಹೆಚ್ಚಿನ ತನಿಖೆಗಾಗಿ ಇಬ್ಬರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಹಸ್ತಾಂತರಿಸಲಾಗಿದೆ.

     

  • ಸ್ಪೆಷಲ್ ಟೊಮೆಟೋ ಫೋರ್ಸ್ ರಚಿಸಿ: ಅಖಿಲೇಶ್ ಯಾದವ್

    ಸ್ಪೆಷಲ್ ಟೊಮೆಟೋ ಫೋರ್ಸ್ ರಚಿಸಿ: ಅಖಿಲೇಶ್ ಯಾದವ್

    ನವದೆಹಲಿ: ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಕಂಡಾಗ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬೀಳುತ್ತಿದ್ದ ಕೆಂಪು ಸುಂದರಿ ಟೊಮೆಟೋಗೆ ಇದೀಗ ಭರ್ಜರಿ ಬೇಡಿಕೆ ಇದೆ. ದೇಶಾದ್ಯಂತ ಟೊಮೆಟೋ (Tomato) ಬೆಲೆ ಗಗನಕ್ಕೇರಿದ್ದು, ಇದೀಗ ಗನ್ ಮ್ಯಾನ್‍ಗಳನ್ನಿಟ್ಟುಕೊಂಡು ಮಾರಾಟ ಮಡುವ ಪರಿಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಎಸ್‍ಟಿಎಫ್ ಗೆ ಹೊಸ ನಾಮಕರಣವೊಂದನ್ನು ಮಾಡುವಂತೆ ಸಲಹೆ ನೀಡಿದ್ದಾರೆ.

    ಹೌದು. ಟೊಮೆಟೋ ಬಂಗಾರ ಬೆಲೆ ಪಡೆಯುತ್ತಿದ್ದಂತೆಯೇ ಕಳ್ಳತನದ ಸುದ್ದಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಸ್ಪೆಷಲ್ ಟಾಸ್ಕ್ ಫೋರ್ಸ್ (STF) ಅನ್ನು ಸ್ಪೆಷನ್ ಟೊಮೆಟೋ ಫೋರ್ಸ್ ಎಂದು ಕರೆಯುವಂತೆ ಸಲಹೆ ನೀಡಿದ್ದಾರೆ. ಈ ಮೂಲಕ ರಾಜ್ಯ ಪೊಲೀಸರನ್ನು ಅಖಿಲೇಶ್ (Akhilesh Yadav) ಕಿಚಾಯಿಸಿದ್ದಾರೆ.

    ಉತ್ತರಪ್ರದೇಶದ ಫತೇಪುರ್ ಜಿಲ್ಲೆಯ ಮಾರ್ಕೆಟ್‍ನಲ್ಲಿರುವ ಅಂಗಡಿಯೊಂದರಿಂದ 26 ಕೆ.ಜಿ ಟೊಮೆಟೋ, 25 ಕೆ.ಜಿ ಹಸಿ ಮೆಣಸಿನ ಕಾಯಿ ಹಾಗೂ 8 ಕೆ.ಜಿ ಶುಂಠಿ ಗುರುವಾರ ಕಳ್ಳತನವಾಗಿತ್ತು. ಈ ಸಂಬಂಧ ಇಬ್ಬರನ್ನು ಬಂಧನ ಕೂಡ ಮಾಡಲಾಗಿತ್ತು. ಇದನ್ನೂ ಓದಿ: ಇನ್ನು ಮುಂದೆ ಫ್ರಾನ್ಸ್‌ನಲ್ಲೂ ರೂಪಾಯಿಯಲ್ಲೇ ವ್ಯವಹಾರ ಮಾಡಬಹುದು

    ಜುಲೈ 10 ಸೋಮವಾರದಂದು ಅಂಗಡಿ ಮಾಲೀಕರಾದ ರಾಮ್‍ಜಿ ಹಾಗೂ ನೈಮ್ ಖಾನ್ ಎಂದಿನಂತೆ ವ್ಯಾಪಾರ ಮುಗಿಸಿ ರಾತ್ರಿ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದರು. ಬಳಿಕ ಮರುದಿನ ಬೆಳಗ್ಗೆ ಬಂದು ಅಂಗಡಿ ಓಪನ್ ಮಾಡಿದಾಗ ಟೊಮೆಟೋ, ಹಸಿಮೆಣಸಿನ ಕಾಯಿ ಹಾಗೂ ಶುಂಠಿ ಕಳ್ಳತನವಾಗಿರುವುದು ಬಯಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

    ಕಳ್ಳತನ ಗೊತ್ತಾದ ತಕ್ಷಣವೇ ಇಬ್ಬರೂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಗಣಿಸಿ ಕಾಂತ ಪ್ರಸಾದ್ ಹಾಗೂ ಮೊಹಮ್ಮದ್ ಇಸ್ಲಾಮ್ ಅನ್ನು ಬಂಧಿಸಿ, ಐಪಿಸಿ ಸೆಕ್ಷನ್ 379ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ಸುದ್ದಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅಖಿಲೆಶ್ ಯಾದವ್, ‘ಸ್ಪೆಷಲ್ ಟಾಸ್ಕ್ ಫೋರ್ಸ್’ ಅನ್ನು ‘ಸ್ಪೆಷಲ್ ಟೊಮೆಟೋ ಫೋರ್ಸ್’ ಎಂದು ಬದಲಾಯಿಸುವಂತೆ ಸಲಹೆ ನೀಡಿ ಕಿಚಾಯಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 60ಕ್ಕೂ ಹೆಚ್ಚು ಪ್ರಕರಣ- ಯುಪಿಯಲ್ಲಿ ಮತ್ತೊಬ್ಬ ಗ್ಯಾಂಗ್‌ಸ್ಟರ್‌ ಎನ್‍ಕೌಂಟರ್

    60ಕ್ಕೂ ಹೆಚ್ಚು ಪ್ರಕರಣ- ಯುಪಿಯಲ್ಲಿ ಮತ್ತೊಬ್ಬ ಗ್ಯಾಂಗ್‌ಸ್ಟರ್‌ ಎನ್‍ಕೌಂಟರ್

    ಲಕ್ನೋ: 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದ ಗ್ಯಾಂಗ್‌ಸ್ಟರ್‌ನನ್ನು ಉತ್ತರಪ್ರದೇಶದ (Uttar Pradesh) ವಿಶೇಷ ಪೊಲೀಸ್ ಪಡೆ (STF) ಎನ್‍ಕೌಂಟರ್‌ನಲ್ಲಿ (Encounter) ಹೊಡೆದುರುಳಿಸಿದೆ.

    ದೆಹಲಿಯ ನೋಯ್ಡಾ, ಘಾಜಿಯಾಬಾದ್ ಮತ್ತು ಇತರ ಪ್ರದೇಶಗಳಲ್ಲಿ ಜನರನ್ನು ಭಯಭೀತರನ್ನಾಗಿಸಿ ದರೋಡೆಯಲ್ಲಿ ಕುಖ್ಯಾತಿ ಪಡೆದಿದ್ದ ಅನಿಲ್ ದುಜಾನಾ ಸಾವಿಗೀಡಾದ ವ್ಯಕ್ತಿ. ದುಜಾನಾ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ವಾರದ ಹಿಂದೆಯಷ್ಟೇ ಜೈಲಿನಿಂದ (Jail) ಬಿಡುಗಡೆಯಾಗಿದ್ದ. ನಂತರ ಅವನು ತನ್ನ ವಿರುದ್ಧ ದಾಖಲಾದ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬನಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದ್ದ. ಅಲ್ಲದೆ ಸಾಕ್ಷಿಯನ್ನು ಕೊಲ್ಲಲು ನಿರ್ಧರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಯಾವುದೇ ಸಮಸ್ಯೆ ಇದ್ದಲ್ಲಿ ಕೆಳ ನ್ಯಾಯಾಲಯಕ್ಕೆ ಹೋಗಿ: ಕುಸ್ತಿಪಟುಗಳಿಗೆ ಸುಪ್ರೀಂ ಸೂಚನೆ

    ಈ ವಿಚಾರ ತಿಳಿದು ಎಸ್‍ಟಿಎಫ್ (STF) ತಂಡವು ಮೀರತ್‍ನಲ್ಲಿ (Meerut) ಅವನನ್ನು ಬಂಧಿಸಲು ತೆರಳಿತ್ತು. ಈ ವೇಳೆ ಪೊದೆಯಲ್ಲಿ ಅಡಗಿದ್ದ ದುಜಾನಾ ಮತ್ತು ಅವನ ಗ್ಯಾಂಗ್ ಪೊಲೀಸರ ಮೇಲೆ ಗುಂಡು ಹಾರಿಸಿದೆ. ಪ್ರತಿಯಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ದುಜಾನ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸೈಕಲಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳ – ವಿಡಿಯೋ ವೈರಲ್ ಬೆನ್ನಲ್ಲೇ ಪೇದೆ ಅಮಾನತು

  • ಬುಲಂದಶಹರ್ ಹಿಂಸಾಚಾರ ಪ್ರಕರಣ: ಪೊಲೀಸ್ ಅಧಿಕಾರಿ ಗುಂಡೇಟು – ಶಂಕಿತ ಆರೋಪಿ ಯೋಧನ ಬಂಧನ

    ಬುಲಂದಶಹರ್ ಹಿಂಸಾಚಾರ ಪ್ರಕರಣ: ಪೊಲೀಸ್ ಅಧಿಕಾರಿ ಗುಂಡೇಟು – ಶಂಕಿತ ಆರೋಪಿ ಯೋಧನ ಬಂಧನ

    ಲಕ್ನೋ: ಉತ್ತರಪ್ರದೇಶದ ಬುಲಂಧಶಹರ್ ನಲ್ಲಿ ನಡೆದ ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿಯ ಹತ್ಯೆಗೆ ಸಂಬಂಧಿಸಿದಂತೆ ಶಂಕಿತ ಆರೋಪಿ ಯೋಧನನ್ನು ಎಸ್‍ಟಿಎಫ್ ಬಂಧಿಸಿದೆ.

    ಈ ಕುರಿತು ಮಾಹಿತಿ ನೀಡಿರುವ ಎಸ್‍ಟಿಎಫ್ ಅಧಿಕಾರಿ ಅಭಿಷೇಕ್ ಸಿಂಗ್, ಬುಲಂದಶಹರ್ ಪ್ರಕರಣದ ಶಂಕಿತ ಆರೋಪಿ `ಜಿತು ಫೌಜಿ’ಯನ್ನು ಬಂಧಿಸಿದ್ದೇವೆ. ಶನಿವಾರ ಮಧ್ಯರಾತ್ರಿ ಸೇನೆ ಜಿತು ಫೌಜಿಯನ್ನು ನಮ್ಮ ವಶಕ್ಕೆ ನೀಡಿತ್ತು. ಸದ್ಯ ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸಿದ್ದೇವೆ. ಬಂಧಿತ ಜಿತುರನ್ನು ಬುಲಂದಶಹರ್ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

    ಯಾರಿದು ಜಿತು ಫೌಜಿ?
    ಜಿತೆಂದರ್ ಮಲ್ಲಿಕ್ ಅಲಿಯಾಸ್ ಜಿತು ಫೌಜಿ ಭಾರತೀಯ ಸೇನೆಯ 22ನೇ ರಾಷ್ಟ್ರೀಯ ರೈಫಲ್ಸ್ ಪಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಜಿತು ಮೂಲತಃ ಬುಲಂದಶಹರ್ ನಿವಾಸಿಯಾಗಿದ್ದರು. 15 ದಿನಗಳ ರಜೆ ಮೇರೆಗೆ ಊರಿಗೆ ಬಂದಿದ್ದಾಗ, ಹಿಂಸಾಚಾರ ನಡೆದ ಸಂದರ್ಭದಲ್ಲಿ ಜಿತು ಅಲ್ಲಿಯೇ ಇದ್ದರು. ಹಿಂಸಾಚಾರದಂದು ಅವರ ಚಲನವಲನಗಳು ವಿಡಿಯೋದಲ್ಲಿ ದಾಖಲಾಗಿತ್ತು.

    ಪೊಲೀಸ್ ಅಧಿಕಾರಿ ಸುಭೋದ್ ಕುಮಾರ್ ಹಾಗೂ ಯುವಕ ಮೃತಪಟ್ಟ ನಂತರ ನೇರವಾಗಿ ಜಿತು ಕಾಶ್ಮೀರದ ಸೋಪೂರ್‍ಗೆ ತೆರಳಿದ್ದರು. ಬುಲಂದಶಹರ್ ಹಿಂಸಾಚಾರ ಪ್ರಕರಣದಲ್ಲಿ ಯೋಧನ ಕೈವಾಡ ಹಿನ್ನೆಲೆಯಲ್ಲಿ, ಸೇನೆ ಶುಕ್ರವಾರ ಜಮ್ಮು ಕಾಶ್ಮೀರದ ಸೋಪೂರ್ ಪಟ್ಟಣದಲ್ಲಿ ವಶಕ್ಕೆ ಪಡೆದಿತ್ತು. ಬಳಿಕ ಶನಿವಾರ ಎಸ್‍ಟಿಎಫ್‍ಗೆ ಹಸ್ತಾಂತರಿಸಿತ್ತು.

    ಏನಿದು ಬುಲಂದಶಹರ್ ಪ್ರಕರಣ?
    ಕಳೆದ ಸೋಮವಾರ ಬುಲಂದ್‍ಶಹರ್ ಗ್ರಾಮದ ಹೊರವಲಯದಲ್ಲಿ ಪ್ರಾಣಿಯ ಪಳಿಯುಳಿಕೆ ಪತ್ತೆಯಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕೆಲ ಬಲಪಂಥಿಯ ಮುಖಂಡರು ಮತ್ತು ಗ್ರಾಮಸ್ಥರು ಸಯನಾ ರೋಡ್ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಸ್ತೆ ಸಂಚಾರ ಸುಗಮಗೊಳಿಸಲು ಪ್ರಯತ್ನಿಸಿದ್ದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ಆರಂಭವಾಗಿ, ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಉದ್ರಿಕ್ತರು ಪೊಲೀಸ್ ಠಾಣೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಗಲಭೆಯಿಂದಾಗಿ ಪೊಲೀಸ್ ಅಧಿಕಾರಿ ಹಾಗೂ ಇಬ್ಬರು ಮೃತಪಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv