Tag: stepwell

  • ಇಂದೋರ್ ದೇವಾಲಯ ದುರಂತ – ಸಾವಿನ ಸಂಖ್ಯೆ 35ಕ್ಕೆ ಏರಿಕೆ

    ಇಂದೋರ್ ದೇವಾಲಯ ದುರಂತ – ಸಾವಿನ ಸಂಖ್ಯೆ 35ಕ್ಕೆ ಏರಿಕೆ

    – 14 ಜನರ ರಕ್ಷಣೆ
    – ಮುಂದುವರಿದ ಹುಡುಕಾಟ ಕಾರ್ಯಾಚರಣೆ

    ಭೋಪಾಲ್: ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲಿ (Indore) ದೇವಾಲಯವೊಂದರಲ್ಲಿ (Temple) ನೆಲ ಕುಸಿದ ಪರಿಣಾಮ ಅದರಡಿಯಲ್ಲಿದ್ದ ಸುಮಾರು 40 ಅಡಿ ಆಳದ ಬಾವಿಗೆ (StepWell) ಭಕ್ತರು ಬಿದ್ದು ಸಾವನ್ನಪ್ಪಿರುವ ಘಟನೆ ದುರಂತವೇ ಎನಿಸಿಕೊಂಡಿದೆ. ಇಲ್ಲಿಯವರೆಗೆ ಸಾವನ್ನಪ್ಪಿರುವವರ ಸಂಖ್ಯೆ 35 ಕ್ಕೆ ಏರಿಕೆಯಾಗಿದೆ.

    ವರದಿಗಳ ಪ್ರಕಾರ ಗುರುವಾರ ರಾಮನವಮಿಯ (Ram Navami) ಹಿನ್ನೆಲೆ ನಗರದ ಬಾಳೇಶ್ವರ ಮಹಾದೇವ ದೇವಾಲಯದಲ್ಲಿ ಹೆಚ್ಚಿನ ಭಕ್ತರು ಆಗಮಿಸಿದ್ದರು. ದೇವಾಲಯದ ಆವರಣದಲ್ಲಿ ಮೆಟ್ಟಿಲು ಬಾವಿಯಿದ್ದು, ಅದಕ್ಕೆ ಮೇಲ್ಛಾವಣಿ ಹಾಕಿ ಮುಚ್ಚಲಾಗಿತ್ತು. ಆದರೆ ಕಳೆದ ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದ ಕಾರಣ ಬಾವಿಯ ಮೇಲ್ಛಾವಣಿ ಭಾರ ತಡೆದುಕೊಳ್ಳಲಾರದೇ ಕುಸಿದುಬಿಟ್ಟಿದೆ. ಈ ವೇಳೆ ಅಲ್ಲಿ ನೆರೆದಿದ್ದ ಭಕ್ತರು ಬಾವಿಯೊಳಗೆ ಬಿದ್ದಿದ್ದಾರೆ.

    ಘಟನೆ ನಡೆದ ತಕ್ಷಣಕ್ಕೆ ಪ್ರತ್ಯಕ್ಷದರ್ಶಿಗಳು ಸುಮಾರು 25 ಜನರು ಬಾವಿಯೊಳಗೆ ಬಿದ್ದಿದ್ದಾಗಿ ತಿಳಿಸಿದ್ದರು. ಆದರೆ ಅಂದಾಜಿಸಿದ್ದಕ್ಕಿಂತಲೂ ಹೆಚ್ಚು ಜನರು ಬಾವಿಯೊಳಗೆ ಬಿದ್ದಿದ್ದರು ಎಂಬುದು ತಿಳಿದುಬಂದಿದೆ. ಈಗಾಗಲೇ ಮೃತರ ಸಂಖ್ಯೆ 35ಕ್ಕೆ ಏರಿದೆ. ಬಾವಿಗೆ ಬಿದ್ದಿದ್ದ 14 ಜನರ ರಕ್ಷಣೆ ಮಾಡಲಾಗಿದೆ. ಒಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಅವರಿಗಾಗಿ ಹುಡುಕಾಟ ಮುಂದುವರಿಸಲಾಗಿದೆ. ಇದನ್ನೂ ಓದಿ: ಇಂದಿನಿಂದ SSLC ಪರೀಕ್ಷೆ ಪ್ರಾರಂಭ- ಎಕ್ಸಾಂಗೆ ಸಮವಸ್ತ್ರ ನಿಯಮ ಕಡ್ಡಾಯ

    ಈ ದೇವಾಲಯವನ್ನು ಖಾಸಗಿ ಟ್ರಸ್ಟ್ ನಿರ್ವಹಿಸುತ್ತಿದ್ದು, ಇಂದೋರ್‌ನ ಹಳೆಯ ವಸತಿ ಕಾಲೋನಿಗಳಲ್ಲಿ ಒಂದಾಗಿರುವ ಸ್ನೇಹ್ ನಗರದಲ್ಲಿ ನೆಲೆಗೊಂಡಿದೆ. ನಿವಾಸಿಗಳು ಈ ಹಿಂದೆಯೇ ದೇವಾಲಯದ ಅಭಿವೃದ್ಧಿಗೆ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಅದರಂತೆ ಇಂದೋರ್ ಮುನ್ಸಿಪಲ್ ಕಾರ್ಪೋರೇಷನ್ ಕ್ರಮ ಕೈಗೊಂಡಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು ಎಂದು ಮೂಲಗಳು ತಿಳಿಸಿವೆ.

    ಇದೀಗ ರಕ್ಷಿಸಲ್ಪಟ್ಟವರಲ್ಲಿ ಇಬ್ಬರು ಗಾಯಾಳುಗೆ ಚಿಕಿತ್ಸೆ ನೀಡಿದ ಬಳಿಕ ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಚೌಹಾಣ್ ಅವರೊಂದಿಗೆ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ. ಇದನ್ನೂ ಓದಿ: ಪತ್ನಿ ನೇಣುಬಿಗಿದುಕೊಂಡ ಬೆನ್ನಲ್ಲೇ ಪತಿಯೂ ಸೂಸೈಡ್

  • ರಾಮನವಮಿ ಆಚರಣೆ ವೇಳೆ ದೇವಾಲಯದ ನೆಲ ಕುಸಿತ – 13 ಮಂದಿ ಸಾವು

    ರಾಮನವಮಿ ಆಚರಣೆ ವೇಳೆ ದೇವಾಲಯದ ನೆಲ ಕುಸಿತ – 13 ಮಂದಿ ಸಾವು

    ಭೋಪಾಲ್: ರಾಮನವಮಿ (Ram Navami) ಆಚರಣೆ ನಡೆಯುತ್ತಿದ್ದ ವೇಳೆ ಇಂದೋರ್‌ನ (Indore) ದೇವಸ್ಥಾನದ (Temple) ನೆಲ ಕುಸಿದು ಅದರ ಅಡಿಯಲ್ಲಿದ್ದ ಬಾವಿಯೊಂದರಲ್ಲಿ ಮುಳುಗು 13 ಮಂದಿ ಸಾವನ್ನಪ್ಪಿದ ಘಟನೆ ಇಂದೋರ್‌ನಲ್ಲಿ ನಡೆದಿದೆ.

    ನಗರದ ಸ್ನೇಹನಗರ ಪ್ರದೇಶದಲ್ಲಿರುವ ಶ್ರೀ ಬಾಲೇಶ್ವರ ದೇವಸ್ಥಾನದಲ್ಲಿ ಈ ಘಟನೆ ವರದಿಯಾಗಿದೆ. ಘಟನೆಯ ಬಳಿಕ ದೇವಾಲಯದ ಆವರಣದಲ್ಲಿ ಉಂಟಾದ ಅವ್ಯವಸ್ಥೆಯ ಹಾಗೂ ರಕ್ಷಣಾ ಕಾರ್ಯಾಚರಣೆಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

    ಘಟನೆ ಬಗ್ಗೆ ಮಧ್ಯಪ್ರದೇಶದ  (Madhya Pradesh)  ಗೃಹಸಚಿವ ನರೋತ್ತಮ್ ಮಿಶ್ರಾ ಮಾತನಾಡಿ, 13 ಜನರು ಸಾವನ್ನಪ್ಪಿದ್ದು, 10 ಮಹಿಳೆಯರು ಸೇರಿದಂತೆ 11 ಮೃತದೇಹಗಳನ್ನು ಸ್ಥಳದಿಂದ ಹೊರತೆಗೆಯಲಾಗಿದೆ. 19 ಮಂದಿಯನ್ನು ಘಟನ ಸ್ಥಳದಿಂದ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಗಾಯಗೊಂಡವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಚುನಾವಣಾ ಅಕ್ರಮ ತಡೆಗೆ 16 ಚೆಕ್ ಪೋಸ್ಟ್ ಸ್ಥಾಪನೆ- ಐವರು ರೌಡಿಶೀಟರ್‌ಗಳ ಗಡಿಪಾರು

    ವರದಿಗಳ ಪ್ರಕಾರ ದೇವಾಲಯದ ಆವರಣದಲ್ಲಿ ಮೆಟ್ಟಿಲು ಬಾವಿಯಿದ್ದು, ಅದಕ್ಕೆ ಮೇಲ್ಛಾವಣಿ ಹಾಕಿ ಮುಚ್ಚಲಾಗಿತ್ತು. ರಾಮನವಮಿಯ ಹಿನ್ನೆಲೆ ದೇವಾಲಯದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಈ ವೇಳೆ ಮೆಟ್ಟಿಲು ಬಾವಿಯ ಮೇಲ್ಛಾವಣಿ ಕುಸಿದಿದೆ. ಇದನ್ನೂ ಓದಿ: ಮೋದಿಯನ್ನು ಪ್ರಕರಣದಲ್ಲಿ ಸಿಲುಕಿಸುವಂತೆ ನನ್ನ ಮೇಲೆ ಸಿಬಿಐ ಒತ್ತಡ ಹೇರಿತ್ತು: ಅಮಿತ್ ಶಾ

  • ರಾಮನವಮಿ ಆಚರಣೆ ವೇಳೆ ದೇವಾಲಯದ ನೆಲ ಕುಸಿತ – ಬಾವಿಗೆ ಬಿದ್ದ 25 ಜನ

    ರಾಮನವಮಿ ಆಚರಣೆ ವೇಳೆ ದೇವಾಲಯದ ನೆಲ ಕುಸಿತ – ಬಾವಿಗೆ ಬಿದ್ದ 25 ಜನ

    ಭೋಪಾಲ್: ರಾಮನವಮಿ (Ram Navami) ಆಚರಣೆ ವೇಳೆ ದೇವಾಲಯವೊಂದರ (Temple) ನೆಲ ಕುಸಿತವಾಗಿದ್ದು, ಅದರ ಅಡಿಯಲ್ಲಿದ್ದ ಬಾವಿಗೆ ಸುಮಾರು 25 ಜನರು ಬಿದ್ದಿರುವ ಘಟನೆ ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲಿ (Indore) ನಡೆದಿದೆ. ಬಾವಿಗೆ ಬಿದ್ದಿರುವ ಜನರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ.

    ಸ್ನೇಹನಗರ ಪ್ರದೇಶದಲ್ಲಿರುವ ಬಾಲೇಶ್ವರ ದೇವಾಲಯದಲ್ಲಿ ಈ ಘಟನೆ ವರದಿಯಾಗಿದೆ. ಘಟನೆಯ ಬಳಿಕ ದೇವಾಲಯದ ಆವರಣದಲ್ಲಿ ಉಂಟಾದ ಅವ್ಯವಸ್ಥೆಯ ಹಾಗೂ ರಕ್ಷಣಾ ಕಾರ್ಯಾಚರಣೆಯ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಇದನ್ನೂ ಓದಿ: ವಾಹನ ಸವಾರನ ಮೇಲೆ‌ ಎಕ್ಸ್‌ಪ್ರೆಸ್‌ ವೇ ಟೋಲ್ ಸಿಬ್ಬಂದಿ ಹಲ್ಲೆ

    ವರದಿಗಳ ಪ್ರಕಾರ ದೇವಾಲಯದ ಆವರಣದಲ್ಲಿ ಮೆಟ್ಟಿಲು ಬಾವಿಯಿದ್ದು, ಅದಕ್ಕೆ ಮೇಲ್ಛಾವಣಿ ಹಾಕಿ ಮುಚ್ಚಲಾಗಿತ್ತು. ರಾಮನವಮಿಯ ಹಿನ್ನೆಲೆ ದೇವಾಲಯದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಈ ವೇಳೆ ಮೆಟ್ಟಿಲು ಬಾವಿಯ (Stepwell) ಮೇಲ್ಛಾವಣಿ ಕುಸಿದಿದೆ. ಇದರಿಂದ ಅದರ ಮೇಲೆ ನಿಂತಿದ್ದ ಸುಮಾರು 25 ಜನರು ಬಾವಿಯೊಳಗೆ ಬಿದ್ದಿದ್ದಾರೆ.

    ಇದೀಗ ಬಾವಿಯೊಳಗೆ ಬಿದ್ದಿರುವವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಕುಸಿತದ ಸಂದರ್ಭ ಸ್ಥಳದಲ್ಲಿ 25ಕ್ಕೂ ಹೆಚ್ಚು ಜನರಿದ್ದರು ಎನ್ನಲಾಗಿದೆ. ಆದರೆ ಘಟನೆ ಬಗ್ಗೆ ಅಂಬುಲೆನ್ಸ್ ಹಾಗೂ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದರೂ ಅವರು ಸರಿಯಾದ ಸಮಯದಲ್ಲಿ ಆಗಮಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಬಾವಿಯೊಳಗೆ ಹಗ್ಗಗಳನ್ನು ಬಿಟ್ಟು ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿದೆ. ಇದನ್ನೂ ಓದಿ: ಪೋಸ್ಟರ್ ವಾರ್ – ಪ್ರಧಾನಿ ಶೈಕ್ಷಣಿಕ ಅರ್ಹತೆ ಕೆಣಕಿದ AAP

  • 17ನೇ ಶತಮಾನದ ಬನ್ಸಿಲಾಲ್‌ಪೇಟೆಯ ಮೆಟ್ಟಿಲು ಬಾವಿ ಮರುಸ್ಥಾಪನೆ

    ಹೈದರಾಬಾದ್: 17ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಬನ್ಸಿಲಾಲ್‌ಪೇಟೆ ಮೆಟ್ಟಿಲು ಬಾವಿಯನ್ನು ಮರು ಸ್ಥಾಪಿಸಲಾಗುತ್ತಿದ್ದು, ಈ ವರ್ಷದ ಸ್ವಾತಂತ್ರ್ಯ ದಿನದಂದು ಸಂಪೂರ್ಣವಾಗಿ ಅಭಿವೃದ್ಧಿಗೊಳಿಸಿ ಉದ್ಘಾಟನೆ ಮಾಡಲಾಗುತ್ತದೆ ಎಂದು ತೆಲಂಗಾಣ ಪಶುಸಂಗೋಪನಾ ಸಚಿವ ಟಿ ಶ್ರೀನಿವಾಸ್ ಯಾದವ್ ತಿಳಿಸಿದ್ದಾರೆ.

    ತೆಲಂಗಾಣದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಭೋಯಿಗುಡ ಜಿಲ್ಲೆಯ ಬನ್ಸಿಲಾಲ್‌ಪೇಟೆ ತೆರೆದ ಮೆಟ್ಟಿಲು ಬಾವಿಯ ಪುನಶ್ಚೇತನ ಕಾಮಗಾರಿಗೆ ಗುರುವಾರ ಚಾಲನೆ ಸಿಕ್ಕಿದೆ. 17ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಬಾವಿಯ ನೀರು ಕಲುಷಿತವಾಗಿದ್ದು, ಅದನ್ನು ಶುದ್ಧೀಕರಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದಿಂದ ವಾಲಿದ ವಿದ್ಯುತ್ ಕಂಬ – ಆತಂಕದಲ್ಲಿ ಸವಾರರು

    ಬರೋಬ್ಬರಿ 2 ಸಾವಿರ ಟನ್‌ಗಳಷ್ಟು ಹೂಳು ಹಾಗೂ ಅವಶೇಷಗಳನ್ನು ಬಾವಿಯಿಂದ ಎತ್ತಲಾಗಿದ್ದು, ನೀರಿನ ಶುದ್ಧೀಕರಣ ಮಾಡಲಾಗುತ್ತಿದೆ. ಹೈದರಬಾದ್‌ನ ಐತಿಹಾಸಿಕ ತಾಣವನ್ನು ಪ್ರಸಿದ್ಧ ಪ್ರವಾಸೋದ್ಯಮ ತಾಣವನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಹೈದರಾಬಾದ್ ಪ್ರವಾಸೋದ್ಯಮ ಸರ್ಕ್ಯೂಟ್ ಕೆಲಸ ಮಾಡುತ್ತಿದೆ. ಇದನ್ನೂ ಓದಿ: ಭಾರತ ಹಿಂದೂ ರಾಷ್ಟ್ರವಾಗುತ್ತಿದೆ, ಜನರಿಗೆ ಅಭದ್ರತೆ ಕಾಡುತ್ತಿದೆ: ಅನ್ಸಾರಿ