Tag: Stephen Fleming

  • ಫ್ಲೆಮಿಂಗ್‌ ಟೀಂ ಇಂಡಿಯಾ ಕೋಚ್‌ ಆಗ್ತಾರಾ? – ಧೋನಿ ಸಹಾಯ ಕೇಳಿದ ಬಿಸಿಸಿಐ

    ಫ್ಲೆಮಿಂಗ್‌ ಟೀಂ ಇಂಡಿಯಾ ಕೋಚ್‌ ಆಗ್ತಾರಾ? – ಧೋನಿ ಸಹಾಯ ಕೇಳಿದ ಬಿಸಿಸಿಐ

    ಮುಂಬೈ: ಟೀಂ ಇಂಡಿಯಾದ (Team India) ಕೋಚ್‌ ಹುದ್ದೆ ನ್ಯೂಜಿಲೆಂಡ್‌ (New Zealand) ಮಾಜಿ ನಾಯಕ, ನಿವೃತ್ತ ಆಟಗಾರ ಸ್ಟೀಫನ್ ಫ್ಲೆಮಿಂಗ್ (Stephen Fleming) ಅವರನ್ನು ಮನವೊಲಿಸಲು ಬಿಸಿಸಿಐ (BCCI) ಎಂಎಸ್ ಧೋನಿ ಅವರ ಸಹಾಯವನ್ನು ಕೋರಿದೆ ಎಂದು ವರದಿಯಾಗಿದೆ.

    2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ (CSK) ಸಂಬಂಧ ಹೊಂದಿರುವ ಫ್ಲೆಮಿಂಗ್ ಮುಖ್ಯ ಕೋಚ್ (Coach) ಹುದ್ದೆಯಲ್ಲಿದ್ದಾರೆ. 5 ಬಾರಿ ಸಿಎಸ್‌ಕೆ ಚಾಂಪಿಯನ್‌ ಆಗಿ ಹೊರಹೊಮ್ಮುವಲ್ಲಿ ಇವರ ಶ್ರಮವಿದೆ. ಅಷ್ಟೇ ಅಲ್ಲದೇ ಧೋನಿ (MS Dhoni) ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ.  ಇದನ್ನೂ ಓದಿ: ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ – ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದ ಭಾರತದ ದೀಪ್ತಿ!

    ನವೆಂಬರ್‌ 2021 ರಿಂದ ದ್ರಾವಿಡ್‌ (Rahul Dravid) ಕೋಚ್‌ ಹುದ್ದೆಯನ್ನು ಅಲಂಕರಿಸಿದ್ದು ಜೂನ್‌ನಲ್ಲಿ ಅವಧಿ ಅಂತ್ಯವಾಗಲಿದೆ. ವಿಶ್ವಕಪ್‌ ಕ್ರಿಕೆಟ್‌ (World Cup Cricket) ನಂತರ ಟೀಂ ಇಂಡಿಯಾದ ಕೋಚ್‌ ಹುದ್ದೆಗೆ ಬಿಸಿಸಿಐ ಈಗಾಗಲೇ ಜಾಹೀರಾತು ಪ್ರಕಟಿಸಿದೆ. ಸ್ಟಿಫನ್‌ ಫ್ಲೇಮಿಂಗ್‌ ಟ್ರ್ಯಾಕ್‌ ರೆಕಾರ್ಡ್‌ ಉತ್ತಮವಾಗಿರುವ ಹಿನ್ನೆಲೆಯಲ್ಲಿ ಅವರನ್ನೇ ಕೋಚ್‌ ಆಗಿ ನೇಮಕ ಮಾಡಲು ಬಿಸಿಸಿಐ ಉತ್ಸುಕವಾಗಿದೆ ಎಂದು ವರದಿಯಾಗಿದೆ.

    2027ರವರೆಗೆ ಒಪ್ಪಂದಕ್ಕೆ ಸಹಿ ಹಾಕಬೇಕಾದ ಕಾರಣ ಫ್ಲೇಮಿಂಗ್‌ ಕಡೆಯಿಂದ ಇಲ್ಲಿಯವರೆಗೆ ಯಾವುದೇ ಖಚಿತ ನಿರ್ಧಾರ ಪ್ರಕಟವಾಗಿಲ್ಲ.

    ಹಿಂದೆ ರಾಹುಲ್‌ ದ್ರಾವಿಡ್‌ ಅವರನ್ನು ಕೋಚ್‌ ಹುದ್ದೆ ನೇಮಿಸಲು ಮುಂದಾದಾಗ ಆಸಕ್ತಿ ತೋರಿಸಿರಲಿಲ್ಲ. ಮನವೊಲಿಸಿದ ಬಳಿಕ ಅವರು ಒಪ್ಪಿಕೊಂಡಿದ್ದರು. ಅದೇ ರೀತಿ ಫ್ಲೇಮಿಂಗ್‌ ವಿಚಾರದಲ್ಲೂ ಸಂಭವಿಸಿದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಗೌತಮ್ ಗಂಭೀರ್, ಜಸ್ಟಿನ್ ಲ್ಯಾಂಗರ್, ಮಹೇಲಾ ಜಯವರ್ಧನೆ ಸೇರಿದಂತೆ ಹಲವರು ಹೆಸರು ಕೋಚ್‌ ಹುದ್ದೆಗೆ ಕೇಳಿ ಬಂದಿದೆ. ಚೆನ್ನೈ ಐಪಿಎಲ್‌ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಗಿರುವ ಕಾರಣ ಈಗ ಧೋನಿ ಮೂಲಕ ಬಿಸಿಸಿಐ ಫ್ಲೇಮಿಂಗ್‌ ಅವರನ್ನು ಮನವೊಲಿಸುತ್ತಿದೆ ಎನ್ನಲಾಗುತ್ತಿದೆ.

    ಭಾರತ ಇಲ್ಲಿಯವರೆಗೆ 5 ಐಸಿಸಿ ಟ್ರೋಫಿಯನ್ನು ಗೆದ್ದುಕೊಂಡಿದೆ. 2013ರಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ನಂತರ ಇಲ್ಲಿಯವರೆಗೆ ಯಾವುದೇ ಐಸಿಸಿ ಟ್ರೋಫಿಯನ್ನು ಭಾರತ ಗೆದ್ದುಕೊಂಡಿಲ್ಲ.

     

  • ರೈನಾ, ರಾಯುಡು ಅನುಪಸ್ಥಿತಿ ಚೆನ್ನೈ ತಂಡವನ್ನು ಕಾಡುತ್ತಿದೆ: ಕೋಚ್ ಫ್ಲೆಮಿಂಗ್

    ರೈನಾ, ರಾಯುಡು ಅನುಪಸ್ಥಿತಿ ಚೆನ್ನೈ ತಂಡವನ್ನು ಕಾಡುತ್ತಿದೆ: ಕೋಚ್ ಫ್ಲೆಮಿಂಗ್

    ಅಬುಧಾಬಿ: ಸುರೇಶ್ ರೈನಾ ಮತ್ತು ಅಂಬಾಟಿ ರಾಯುಡು ಅವರು ಅನುಪಸ್ಥಿತಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕಾಡುತ್ತಿದೆ ಎಂದು ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ.

    ಐಪಿಎಲ್-2020ಯಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿರಾಸೆಯ ಪ್ರದರ್ಶನ ತೋರುತ್ತಿದೆ. ಮೂರು ಬಾರಿ ಕಪ್ ಗೆದ್ದಿರುವ ಚಾಂಪಿಯನ್ ತಂಡ ಈ ಬಾರಿ ಆಡಿದ ಮೂರು ಪಂದ್ಯಗಳಲ್ಲಿ ಮೊದಲ ಪಂದ್ಯದಲ್ಲಿ ಬಿಟ್ಟರೆ ಉಳಿದ ಎರಡು ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಈಗ ತಂಡದ ಸ್ಥಿತಿಯ ಬಗ್ಗೆ ಕೋಚ್ ಫ್ಲೆಮಿಂಗ್ ಮಾತನಾಡಿದ್ದಾರೆ.

    ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಾವು ಕೀ ಪ್ಲೇಯರ್ಸ್ ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಇದರಿಂದ ತಂಡವನ್ನು ಬ್ಯಾಲೆನ್ಸ್ ಮಾಡುವುದು ಕಷ್ಟವಾಗಿದೆ. ರೈನಾ, ರಾಯುಡು ಅವರು ಇಲ್ಲದೇ ಬ್ಯಾಟಿಂಗ್ ಲೈನ್‍ಅಫ್ ಅನ್ನು ಸೆಟ್ ಮಾಡುವುದು ಕಷ್ಟವಾಗಿದೆ. ಹೀಗಾಗಿ ಹೊಸ ಹೊಸ ಆಟಗಾರರಿಗೆ ಚಾನ್ಸ್ ಕೊಡುತ್ತಿದ್ದೇವೆ. ಈ ಮೂಲಕ ಟೂರ್ನಿಯ ಆರಂಭದಲ್ಲೇ ಬ್ಯಾಟಿಂಗ್ ಕ್ರಮವನ್ನು ಸಿದ್ಧ ಮಾಡಿಕೊಳ್ಳುತ್ತಿದ್ದೇವೆ ಎಂದು ಫ್ಲೆಮಿಂಗ್ ತಿಳಿಸಿದ್ದಾರೆ.

    ನಮ್ಮ ತಂಡದಲ್ಲಿ ಬಹಳ ಆಟಗಾರರು ಇದ್ದಾರೆ. ಆದರೆ ಅವರನ್ನು ಜೋಡಣೆ ಮಾಡುವಲ್ಲಿ ನಮಗೆ ಸ್ವಲ್ಪ ಗೊಂದಲವಿದೆ. ಹೀಗಾಗಿ ಆ ಗೊಂದಲಕ್ಕೆ ಪರಿಹಾರ ಹುಡುಕುತ್ತಿದ್ದೇವೆ. ಟಾಪ್ ಆರ್ಡರ್ ನಲ್ಲಿ ಒಳ್ಳೆಯ ಆಟಗಾರರು ಮಿಸ್ ಆಗಿದ್ದಾರೆ. ಇದರಿಂದ ಬ್ಯಾಟಿಂಗ್ ಕ್ರಮಾಂಕ ಜೋಡಣೆ ಆಗುತ್ತಿಲ್ಲ. ಮುಂದಿನ ಪಂದ್ಯಕ್ಕೆ ಇನ್ನೂ ಆರು ದಿನ ಬಾಕಿಯಿದ್ದು, ನಾವು ಉತ್ತಮ ಆಟಗಾರರು ಮತ್ತು ತಂಡದೊಂದಿಗೆ ಕಮ್‍ಬ್ಯಾಕ್ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಟೂರ್ನಿಗೂ ಮೊದಲೇ ಚೆನ್ನೈ ತಂಡದ ಸ್ಟಾರ್ ಆಟಗಾರನಾದ ಸುರೇಶ್ ರೈನಾ ಅವರು ವೈಯಕ್ತಿಕ ಕಾರಣದಿಂದ ಟೂರ್ನಿಯಿಂದ ಹೊರಬಂದಿದ್ದರು. ಇದರ ಜೊತೆಗೆ ಮೊದಲ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದ ಅಂಬಾಟಿ ರಾಯುಡು ಅವರು ಕೂಡ ಗಾಯದ ಸಮಸ್ಯೆಯಿಂದ ಪಂದ್ಯಗಳಿಂದ ದೂರ ಉಳಿದಿದ್ದಾರೆ. ಇದರ ನಡುವೆ ತಂಡದಲ್ಲಿ ಸ್ಪಿನ್ನರ್ ಗಳ ಕೊರೆತೆ ಇದೆ. ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಕೂಡ ಟೂರ್ನಿಯಿಂದ ಹೊರ ಉಳಿದಿದ್ದಾರೆ.

    ನಿನ್ನೆ ನಡೆದ ಪಂದ್ಯದಲ್ಲಿ ಚೆನ್ನೈ ಹೀನಾಯವಾಗಿ ಸೋತ್ತಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಬಂದ ಡೆಲ್ಲಿ ಕ್ಯಾಪಿಟಲ್ ತಂಡ ಪೃಥ್ವಿ ಶಾ ಅವರು ಭರ್ಜರಿ ಅರ್ಧಶತಕ ಮತ್ತು ಪಂತ್ ಅವರ ಸೂಪರ್ ಬ್ಯಾಟಿಂಗ್ ಫಲದಿಂದ ನಿಗದಿತ 20 ಓವರಿನಲ್ಲಿ 175 ರನ್ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನತ್ತಿದ್ದ ಚೆನ್ನೈ ಆರಂಭದಿಂದಲೂ ಮಂದಗತಿಯ ಬ್ಯಾಟಿಂಗ್‍ಗೆ ಮುಂದಾಗಿತ್ತು. ಪರಿಣಾಮ ನಿಗದಿತ 20 ಓವರಿನಲ್ಲಿ ಕೇವಲ 131 ಗಳಿಸಿ ಟೂರ್ನಿಯಲ್ಲಿ ಎರಡನೇ ಸೋಲು ಕಂಡಿತು.