Tag: step father

  • ಬೆಂಗಳೂರು| ಉಸಿರುಗಟ್ಟಿಸಿ 7 ವರ್ಷದ ಮಗಳ ಕೊಂದ ಮಲತಂದೆ

    ಬೆಂಗಳೂರು| ಉಸಿರುಗಟ್ಟಿಸಿ 7 ವರ್ಷದ ಮಗಳ ಕೊಂದ ಮಲತಂದೆ

    ಬೆಂಗಳೂರು: ಉಸಿರುಗಟ್ಟಿಸಿ 7 ವರ್ಷದ ಬಾಲಕಿಯನ್ನು ಮಲತಂದೆ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಸಿರಿ (7) ಕೊಲೆಯಾದ ಬಾಲಕಿ. ಮಲತಂದೆ ದರ್ಶನ್ ಎಂಬಾಂತ ಹತ್ಯೆ ಮಾಡಿದ್ದಾನೆ. ಕುಂಬಳಗೊಡು ಠಾಣಾ ವ್ಯಾಪ್ತಿಯ ಕನ್ನಿಕಾ ಬಡಾವಣೆಯಲ್ಲಿ ಘಟನೆ ನಡೆದಿದೆ.

    ಮೊದಲ ಗಂಡ ಮೃತಪಟ್ಟ ಮೇಲೆ ದರ್ಶನ್ ಜೊತೆ ಬಾಲಕಿಯ ತಾಯಿ ವಿವಾಹವಾಗಿದ್ದರು. ಹೆಂಡತಿ ಜೊತೆ ಗಲಾಟೆ ಮಾಡಿ ಮಗಳನ್ನ ಆರೋಪಿ ಹತ್ಯೆ ಮಾಡಿದ್ದಾನೆ.

    ಘಟನಾ ಸ್ಥಳಕ್ಕೆ ಕುಂಬಳಗೋಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಳಿಕ ಆರೋಪಿ ದರ್ಶನ್‌ ಪರಾರಿಯಾಗಿದ್ದಾನೆ.

  • 3 ವರ್ಷದ ಮಗುವಿನ ಮೇಲೆ ಮಲತಂದೆಯ ಮೃಗೀಯ ವರ್ತನೆ – ಕಟ್ಟಿಗೆಯಿಂದ ಹೊಡೆದು ಹತ್ಯೆ

    3 ವರ್ಷದ ಮಗುವಿನ ಮೇಲೆ ಮಲತಂದೆಯ ಮೃಗೀಯ ವರ್ತನೆ – ಕಟ್ಟಿಗೆಯಿಂದ ಹೊಡೆದು ಹತ್ಯೆ

    ಬೆಳಗಾವಿ: 3 ವರ್ಷದ ಮಗುವನ್ನು ಕಟ್ಟಿಗೆಯಿಂದ ಹೊಡೆದು, ಎಲ್ಲೆಂದರಲ್ಲಿ ಸುಟ್ಟು ಮಲತಂದೆ(Stepfather) ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿಯ(Belagavi) ಬೈಲಹೊಂಗಲ ತಾಲೂಕಿನ ಹಾರೂಗೊಪ್ಪದಲ್ಲಿ(Harugoppa) ನಡೆದಿದೆ.

    ಕಾರ್ತಿಕ್ ಮುಕೇಶ್ ಮಾಂಜಿ (3) ಹತ್ಯೆಯಾದ ಮಗು. ಮಲತಂದೆ ಮಹೇಶ್ವರ್ ಮಾಂಜಿ, ಆತನ ಸ್ನೇಹಿತರು ರಾಕೇಶ್ ಮಾಂಜಿ, ಮಹೇಶ್ ಮತ್ತು ಶ್ರೀನಾಥ್ ಮಾಂಜಿ ಕೊಲೆ ಆರೋಪಿಗಳು. ಇದನ್ನೂ ಓದಿ: ನಾಲ್ಕು ರಾಜ್ಯಗಳ 5 ವಿಧಾನಸಭಾ ಕ್ಷೇತ್ರಗಳಿಗೆ ಜೂ.19ಕ್ಕೆ ಉಪಚುನಾವಣೆ

    ಮಹಿಳೆಯು ಮಹೇಶ್ವರ್ ಮಾಂಜಿಯನ್ನು ಎರಡನೇ ಮದುವೆಯಾಗಿ ಬಿಹಾರದಿಂದ(Bihar) ಬೆಳಗಾವಿಗೆ ಕೆಲಸಕ್ಕೆಂದು ಬಂದಿದ್ದರು. ಮಹಿಳೆಯು ತನ್ನೊಂದಿಗೆ 3 ವರ್ಷದ ಮಗ ಕಾರ್ತಿಕ್‌ನನ್ನ ಕರೆದುಕೊಂಡು ಬಂದಿದ್ದರು. ಇವರೆಲ್ಲ ಬೈಲಹೊಂಗಲ ತಾಲೂಕಿನ ಹಾರೂಗೊಪ್ಪ ಬಳಿ ಕೆಲಸ ಮಾಡಿಕೊಂಡಿದ್ದರು. ಇದನ್ನೂ ಓದಿ: ದೆಹಲಿಯಲ್ಲಿ ಭಾರೀ ಮಳೆ – ರಸ್ತೆಯಲ್ಲಿ ಹೊಳೆಯಂತೆ ಹರಿದ ನೀರು, ಧರೆಗುರುಳಿದ ಮರಗಳು

    ಮಹಿಳೆ ಮತ್ತು ಮಹೇಶ್ವರ್ ಹತ್ತಿ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಬಂದಿದ್ದರು. ಮಗನನ್ನ ಯಾಕೆ ಕರೆದುಕೊಂಡು ಬಂದಿದ್ದೀಯಾ ಎಂದು ಕುಡಿದು ಬಂದು ಹೆಂಡತಿ ಜೊತೆ ಮಹೇಶ್ವರ್ ಮಾಂಜಿ ಜಗಳ ಮಾಡಿದ್ದ. ಈ ವೇಳೆ ಆತನ ಮೂರು ಸ್ನೇಹಿತರು ಸೇರಿಕೊಂಡು ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಈ ವೇಳೆ ಮಗನನ್ನ ಬಿಟ್ಟು ಮಹಿಳೆ ಓಡಿಹೋಗಿದ್ದರು. ಇದನ್ನೂ ಓದಿ: ಕೋವಿಡ್ ಆತಂಕ – ಬೆಂಗಳೂರಿನ ಮಲ್ಲೇಶ್ವರಂ, ರಾಜಾಜಿನಗರದ ಇಬ್ಬರಿಗೆ ಕೊರೊನಾ ಪಾಸಿಟಿವ್

    ಈ ವೇಳೆ ಅಲ್ಲೇ ಇದ್ದ ಮಗುವಿನ ಮೇಲೆ ಪಾಪಿಗಳು ರಾಕ್ಷಸಿಯ ವರ್ತನೆ ತೋರಿಸಿ, ತಲೆಗೆ ಕಟ್ಟಿಗೆಯಿಂದ ಹೊಡೆದು, ಅದೇ ಕಟ್ಟಿಗೆಗೆ ಬೆಂಕಿ ಹಚ್ಚಿ ಎಲ್ಲೆಂದರಲ್ಲಿ ಸುಟ್ಟು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಮಹಿಳೆ ವಾಪಾಸ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕಾಲುಗಳಿಗೆ ಹಗ್ಗ ಕಟ್ಟಿ ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆ

    ಮಹಿಳೆಯು ಮುರಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು, 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

  • ದಾಸರಹಳ್ಳಿಯಲ್ಲಿ ಇಬ್ಬರು ಹೆಣ್ಣು ಮಕ್ಕಳ ಹತ್ಯೆ – ಮಲತಂದೆ ಅರೆಸ್ಟ್

    ದಾಸರಹಳ್ಳಿಯಲ್ಲಿ ಇಬ್ಬರು ಹೆಣ್ಣು ಮಕ್ಕಳ ಹತ್ಯೆ – ಮಲತಂದೆ ಅರೆಸ್ಟ್

    ಬೆಂಗಳೂರು: ಅಮೃತಹಳ್ಳಿಯ ದಾಸರಹಳ್ಳಿಯಲ್ಲಿ (Amruthahalli Dasarahalli) ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು  ಮಚ್ಚಿನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದ ಹಂತಕನನ್ನು ಅಮೃತಹಳ್ಳಿ ಪೊಲೀಸರು ಬಂಧನ ಮಾಡಿದ್ದಾರೆ.

    ಸಮಿತ್ ಬಂಧಿತ ಆರೋಪಿ. ಈತ ಕೊಲೆ ಮಾಡಿದ ಬಳಿಕ ಬಟ್ಟೆ ಬದಲಿಸಿಕೊಂಡು ಮನೆಯಿಂದ ಹೊರಗಡೆ ಹೋಗಿದ್ದ. ತಲೆಮರೆಸಿಕೊಂಡಿದ್ದವನನ್ನು ಘಟನೆ ನಡೆದ 2 ದಿನಗಳ ಒಳಗಾಗಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಲತಂದೆ ಸಮಿತ್ ಮಾತಿಗೆ ಹೆಣ್ಣು ಮಕ್ಕಳು (Daughters) ವಿರೋಧ ವ್ಯಕ್ತಪಡಿಸುತ್ತಿದ್ದರು ಎಂಬ ಕೋಪಕ್ಕೆ ಹೆಣ್ಣುಮಕ್ಕಳಿಬ್ಬರನ್ನು ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯ ವೇಳೆ ಬಹಿರಂಗವಾಗಿದೆ. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ: ಬಾಲಕೃಷ್ಣ, ಲೋಲ, ಮುರಳಿ ಕೊಳಲ ಲೀಲ- ಎಲ್ಲೆಲ್ಲೂ ಭಗವಾನ್ ಶ್ರೀಕೃಷ್ಣ ಜಪ

    ಆರೋಪಿ ಸಮಿತ್ ಮಕ್ಕಳ ಮೇಲೆ ಸಾಕಷ್ಟು ಅನುಮಾನ ಪಡುತ್ತಿದ್ದ. ಮಗಳ ಸ್ನೇಹಿತ ಯಾರಾದರೂ ಮನೆಗೆ ಬಂದಿರಬಹುದು ಎಂಬ ಅನುಮಾನದ ಮೇಲೆ ಆರೋಪಿ ಸಮಿತ್ ಮನೆಗೆ ಬಂದಿದ್ದ. ಹತ್ಯೆಯ ದಿನ ಸಮಿತ್ ಸೃಷ್ಠಿ ಮತ್ತು ಸೋನಿಯಾಯರನ್ನು ಶಾಲೆಯಿಂದ ಕರೆದುಕೊಂಡು ಬಂದಿದ್ದ. ಶನಿವಾರವಾಗಿದ್ದರಿಂದ 12:30ರ ಸುಮಾರಿಗೆ ಮಕ್ಕಳನ್ನು ಮನೆಗೆ ಕರೆದುಕೊಂಡು ಬಂದಿದ್ದ. ಮನೆಗೆ ಬಂದ ತಕ್ಷಣ ಮಗಳು ರೂಂ ಸೇರಿಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತಿರುತ್ತಾಳೆ. ಮಗಳ ರೂಂ ಬಳಿ ಬಂದು ನಿಂತುಕೊಂಡು ಮಗಳು ಮೊಬೈಲ್‌ನಲ್ಲಿ ಮಾತನಾಡುತಿದ್ದುದ್ದನ್ನು ಸಮಿತ್ ಕೇಳಿಸಿಕೊಂಡಿದ್ದಾನೆ. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ 2024: ಕೃಷ್ಣ ಜನ್ಮಭೂಮಿ ಮಥುರಾ ಅಂಗಳದ ಪ್ರಮುಖ ಕೃಷ್ಣ ಮಂದಿರಗಳು

    ಬಳಿಕ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅನುಮಾನ ಪಟ್ಟು ಸಮಿತ್ ಮನೆಗೆ ಬಂದಿದ್ದ. ಮಗಳು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವಿಷಯ ಕೇಳುವುದಕ್ಕೆ ಮುಂದಾಗುತ್ತಿದ್ದಂತೆ ಮಗಳು ಮೊಬೈಲ್ ಅನ್ನು ದಿಂಬಿನ ಕೆಳಗೆ ಮುಚ್ಚಿಟ್ಟಿದ್ದಾಳೆ. ಆರೋಪಿಗೆ ಅನುಮಾನ ಹೆಚ್ಚಾಗಿ ಮೊಬೈಲ್ ಪತ್ತೆ ಮಾಡಿ ಪರಿಶೀಲಿಸಿದ್ದಾನೆ. ಮೊಬೈಲ್ ನೋಡಿ ಮುಗಿಸುತ್ತಿದ್ದಂತೆ ಮಚ್ಚಿನಿಂದ ಹೊಡೆದು ಒಬ್ಬಳನ್ನು ಕೊಲೆ ಮಾಡಿದ್ದಾನೆ. ವಾಶ್ ರೂಂನಲ್ಲಿದ್ದ ಚಿಕ್ಕ ಮಗಳು ಹೊರಗಡೆ ಬಂದ ಕೂಡಲೇ ಅಕ್ಕನ ಬಗ್ಗೆ ಹೇಳಿದ್ದಾನೆ. ನಿನ್ನ ಅಕ್ಕ ಹೀಗೆ ಮಾಡುತ್ತಾಳೆ ನೋಡು ಎಂದು ಹೇಳಿ ಊಟ ಹಾಕಿಕೊಂಡು ಬರಲು ಹೇಳಿದ್ದಾನೆ. ಊಟ ಹಾಕಿಕೊಂಡು ಬರುವುದಕ್ಕೆ ಹೇಳಿ ಚಿಕ್ಕ ಹುಡುಗಿಯನ್ನು ಕೂಡ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆ ಬಗ್ಗೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: MUDA Scam | ರಾಜ್ಯಪಾಲರ ನಡೆಗೆ ಖಂಡನೆ – ಸಿದ್ದರಾಮಯ್ಯ ಬೆನ್ನಿಗೆ ನಿಂತ ಮಠಾಧೀಶರು

  • ಮಲ ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ

    ಮಲ ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ

    – ಎದುರು ಮನೆಯ ಯುವಕನಿಂದಲೂ ಲೈಂಗಿಕ ದೌರ್ಜನ್ಯ

    ಶಿವಮೊಗ್ಗ: ಸಾಕು ತಂದೆಯೇ ಮಗಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ ಅಮಾನವೀಯ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

    ಸಾಕು ತಂದೆ ಮಾತ್ರವಲ್ಲದೆ ಎದುರು ಮನೆಯ ಯುವಕ ಸಹ ಅಪ್ರಾಪ್ತೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ. ಘಟನೆ ಕುರಿತು ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಲೈಂಗಿಕ ದೌರ್ಜನ್ಯ ನಡೆಸಿದ ಸಾಕು ತಂದೆ ಹಾಗೂ ಎದುರು ಮನೆ ಯುವಕನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೊದಲ ಪತ್ನಿ ತೊರೆದಿದ್ದ ಸಾಕು ತಂದೆ ಕೂಲಿ ಕೆಲಸ ಮಾಡುತ್ತಿದ್ದು, ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾದ ವಿಧವೆಯನ್ನು ಮದುವೆಯಾಗಿದ್ದ. ಎರಡನೇ ಪತ್ನಿಗೆ ಹೆಣ್ಣು ಮಗುವಿತ್ತು. ಆ ಅಪ್ರಾಪ್ತ ಬಾಲಕಿಯ ಮೇಲೆ ಕಣ್ಣು ಹಾಕಿದ ಆರೋಪಿ, ಪತ್ನಿ ಇಲ್ಲದ ಸಂದರ್ಭದಲ್ಲಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲು ಶುರು ಮಾಡಿದ್ದ. ಅಲ್ಲದೆ ಎದುರು ಮನೆಯ ಯುವಕ ಕೂಡ ಬಾಲಕಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದ. ಇದನ್ನೂ ಓದಿ: ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರ ದಾಳಿ

    ಇದೀಗ ಕಳೆದ ಮೂರು ದಿನದ ಹಿಂದೆ ಶಾಲೆ ಆರಂಭಗೊಂಡಿದ್ದು, ಆರನೇ ತರಗತಿ ಓದುತ್ತಿರುವ ಬಾಲಕಿ ಶಾಲೆಗೆ ಬಂದಿದ್ದಾಳೆ. ಈ ವೇಳೆ ಬಾಲಕಿಯಲ್ಲಿನ ಬದಲಾವಣೆಯನ್ನು ಗಮನಿಸಿದ ಶಿಕ್ಷಕಿಗೆ ಅನುಮಾನ ಬಂದಿದ್ದು, ನಂತರ ಬಾಲಕಿಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಶಿಕ್ಷಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಳೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಆರೋಪಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ನಿದ್ದೆ ಮಾಡದ ಮಗನನ್ನು ಕೊಂದು, ಗೋಣಿ ಚೀಲದಲ್ಲಿ ತುಂಬಿದ ಮಲತಂದೆ

    ನಿದ್ದೆ ಮಾಡದ ಮಗನನ್ನು ಕೊಂದು, ಗೋಣಿ ಚೀಲದಲ್ಲಿ ತುಂಬಿದ ಮಲತಂದೆ

    ಮುಂಬೈ: ರಾತ್ರಿ ಮಲಗುವ ಸಮಯವಾದರೂ ಮಗ ಮಲಗಲಿಲ್ಲ ಎಂದು ಸಿಟ್ಟಿಗೆದ್ದ ಮಲತಂದೆ ಆತನನ್ನು ಕೊಂದು, ಗೋಣಿ ಚೀಲದಲ್ಲಿ ತುಂಬಿ ಹೂತಿಟ್ಟ ಭಯಾನಕ ಪ್ರಕರಣ ಮುಂಬೈನಲ್ಲಿ ಬೆಳಕಿಗೆ ಬಂದಿದೆ.

    ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮುಂಬೈನ ಪನ್ವೇಲ್ ಪ್ರದೇಶದ ನಿವಾಸಿ ರಾಕೇಶ್ ಅಂಬಾಜಿ ತಾಂಬ್ದೆ(32) ಕೃತ್ಯವೆಸೆಗಿದ ಆರೋಪಿ, ಸೂರಜ್(8) ಕೊಲೆಯಾದ ಮುಗ್ಧ ಬಾಲಕ. ಸೂರಜ್‍ಗೆ ರಾಕೇಶ್ ಮಲತಂದೆಯಾಗಿದ್ದು, ಭಾನುವಾರ ರಾತ್ರಿ ರಾಕೇಶ್ ಸೂರಜ್‍ನನ್ನು ಕೊಲೆ ಮಾಡಿದ್ದಾನೆ. ಆದರೆ ಮಂಗಳವಾರ ಈ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಆಟೋ ಚಾಲಕನಾಗಿದ್ದು, ಭಾನುವಾರ ರಾತ್ರಿ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬಂದಿದ್ದನು. ಪತ್ನಿ, ಮಗನೊಂದಿಗೆ ಊಟ ಮಾಡಿ ಮಲಗಿದ್ದನು. ಆದರೆ ಈ ವೇಳೆ ಸೂರಜ್ ಮಾತ್ರ ಮಲಗದೆ ಗಲಾಟೆ ಮಾಡುತ್ತಿದ್ದನು. ಇದರಿಂದ ಸಿಟ್ಟಿಗೆದ್ದ ರಾಕೇಶ್ ಮೊದಲು ಸೂರಜ್‍ಗೆ ಬೈದಿದ್ದಾನೆ. ಆಗಲೂ ತನ್ನ ಮಾತು ಕೇಳದೆ ಸೂರತ್ ಮಲಗದಿದ್ದಾಗ ಕೋಪಕೊಂಡು ಎರಡೇಟು ಹೊಡೆದಿದ್ದಾನೆ. ಬಳಿಕ ಬಾಲಕನ್ನು ಕೊಲೆ ಮಾಡಿ, ಗೋಣಿ ಚೀಲದಲ್ಲಿ ಮೃತದೇಹ ಕಟ್ಟಿ, ಸ್ನೇಹಿತ ರಮೇಶ್ ಸಹಾಯದಿಂದ ಅದನ್ನು ಮನೆಯಿಂದ ದೂರ ಕೊಂಡೊಯ್ದು ನಿರ್ಜನ ಪ್ರದೇಶದಲ್ಲಿ ಹೂತಿಟ್ಟು ಬಂದಿದ್ದಾನೆ.

    ಬಾಲಕ ನಾಪತ್ತೆಯಾಗಿದ್ದಾನೆ ಎಂದು ತಾಯಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ ತನಿಖೆ ನಡೆದಾಗ ಪ್ರಕರಣ ಬಯಲಾಗಿದೆ. ಮಲತಂದೆ ರಾಕೇಶ್ ಸೂರಜ್‍ನನ್ನು ಕೊಲೆ ಮಾಡಿದ್ದಾನೆ ಎಂಬುದು ತಿಳಿದು ಬಂದಿದೆ. ಸದ್ಯ ರಾಕೇಶ್ ಹಾಗೂ ರಮೇಶ್‍ನನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳನ್ನು ಡಿ. 23ರವರೆಗೂ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ.

  • 11 ವರ್ಷದ ಮಲಮಗಳ ಗುಪ್ತಾಂಗಕ್ಕೆ ಮೆಣಸಿನಪುಡಿ ಹಾಕಿದ ಕ್ರೂರಿ ತಂದೆ!

    11 ವರ್ಷದ ಮಲಮಗಳ ಗುಪ್ತಾಂಗಕ್ಕೆ ಮೆಣಸಿನಪುಡಿ ಹಾಕಿದ ಕ್ರೂರಿ ತಂದೆ!

    ಅಂಬಾಲಾ: ಮಲತಂದೆಯೊಬ್ಬ ತನ್ನ 11 ವರ್ಷದ ಮಲಮಗಳ ಗುಪ್ತಾಂಗಕ್ಕೆ ಮೆಣಸಿನಪುಡಿ ಹಾಕಿ ಲೈಂಗಿಕ ಕಿರುಕುಳ ನೀಡಿದ ಘಟನೆ ಹರಿಯಾಣದ ಅಂಬಾಲಾದಲ್ಲಿ ನಡೆದಿದೆ.

    ಆರೋಪಿ ತಂದೆ 11 ವರ್ಷದ ಬಾಲಕಿಗೆ ದೇಹದ ಮೇಲೆ ಗಾಯ ಮಾಡುವ ಮೂಲಕ ಹಾಗೂ ಆಕೆಯ ಗುಪ್ತಾಂಗಕ್ಕೆ ಮೆಣಸಿನಪುಡಿ ಹಾಕುವ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಸದ್ಯ ಬಾಲಕಿಯನ್ನು ಮಹಿಳಾ ರಕ್ಷಣಾ ಇಲಾಖೆ ಮತ್ತು ಚೈಲ್ಡ್ ಲೈನ್ ತಂಡ ರಕ್ಷಣೆ ಮಾಡಿದೆ.

    ಬಾಲಕಿಗೆ ತನ್ನ ಮಲತಂದೆ ಲೈಂಗಿಕ ಕಿರುಕುಳ ನೀಡುತ್ತಿರುವುದನ್ನು ನೋಡಿದ ಅಕ್ಕಪಕ್ಕದ ಮನೆಯವರು ಚೈಲ್ಡ್ ಲೈನ್‍ಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದರು. ಮಕ್ಕಳ ರಕ್ಷಣಾ ಇಲಾಖೆ ಹಾಗೂ ಪೊಲೀಸರ ಜೊತೆ ಸೇರಿ ಚೈಲ್ಡ್ ಲೈನ್ ಹಿರಾನಗರ್ ನಲ್ಲಿರುವ ಆರೋಪಿ ಮನೆ ಮೇಲೆ ಮಧ್ಯರಾತ್ರಿ ದಾಳಿ ನಡೆಸಿದ್ದರು.

    ಆರೋಪಿ ಮನೆ ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಮಲತಂದೆ ನೀಡಿದ ಕಿರುಕುಳದಿಂದ ಬಾಲಕಿಗೆ ಸರಿಯಾಗಿ ನಡಿಯಲು ಸಾಧ್ಯವಾಗುತ್ತಿರಲಿಲ್ಲ. ಆರೋಪಿ ಬಾಲಕಿಗೆ ತುಂಬ ಹೊಡೆಯುತ್ತಿದ್ದನು. ಹಾಗಾಗಿ ಬಾಲಕಿಗೆ ನಡಿಯಲು ಸಾಧ್ಯವಾಗುತ್ತಿಲ್ಲ ಎಂದು ಅಕ್ಕಪಕ್ಕದ ಮನೆಯವರು ಆರೋಪಿಸಿದ್ದಾರೆ.

    ಬಾಲಕಿ ತಾಯಿ 3 ವರ್ಷದಿಂದ ತನ್ನ ಗಂಡನ ಜೊತೆ ಸಂಬಂಧವನ್ನು ಕಡಿತಗೊಂಡಿದ್ದಳು. ನಂತರ ಬಾಲಕಿಯ ಮಲತಂದೆ ಜೊತೆ ವಾಸಿಸುತ್ತಿದ್ದಳು. ಸ್ನಾನ ಮಾಡುವ ವೇಳೆ ಬಾಗಿಲು ಮುಚ್ಚಬಾರದು, ಅದನ್ನು ತೆರೆದಿರಬೇಕು ಎಂದು ಬಾಲಕಿಗೆ ಆರೋಪಿ ತಂದೆ ಎಚ್ಚರಿಸುತ್ತಿದ್ದನು.

    ವೈದ್ಯಕೀಯ ಪರೀಕ್ಷೆ ಹಾಗೂ ವಿಚಾರಣೆ ನಡೆಸಿದ ಮೇಲೆ ಆರೋಪಿ ತಂದೆ ವಿರುದ್ಧ ಕ್ರಮಕೈಗಳ್ಳಲಾಗುತ್ತದೆ ಎಂದು ಪೊಲೀಸ್ ಐಒ ಮೆಹಲ್ ಸಿಂಗ್ ತಿಳಿಸಿದ್ದಾರೆ.

  • ಮಗನನ್ನು ಉಲ್ಟಾ ನೇತುಹಾಕಿ, ಚಪ್ಪಲಿ-ಬೆಲ್ಟ್ ನಿಂದ ರಕ್ತ ಬರುವಂತೆ ಥಳಿಸಿದ ನಿರ್ದಯಿ ತಂದೆ

    ಮಗನನ್ನು ಉಲ್ಟಾ ನೇತುಹಾಕಿ, ಚಪ್ಪಲಿ-ಬೆಲ್ಟ್ ನಿಂದ ರಕ್ತ ಬರುವಂತೆ ಥಳಿಸಿದ ನಿರ್ದಯಿ ತಂದೆ

    ಭೋಪಾಲ್: ನಿರ್ದಯಿ ಮಲತಂದೆಯೊಬ್ಬ 3 ವರ್ಷದ ಮಗನನ್ನು ತಲೆಕೆಳಗಾಗಿ ನೇತು ಹಾಕಿ ರಕ್ತ ಬರುವಂತೆ ಹೊಡೆದಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಶಾಜಾಪುರ್‍ನಲ್ಲಿ ನಡೆದಿದೆ.

    ನೆರೆಹೊರೆಯವರು ಈ ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ. ಬಾಲಕ ಮಾಡಿದ ತಪ್ಪಾದರೂ ಏನು ಅಂದ್ರಾ? ಆತನಿಗೆ 10ವರೆಗೆ ಸಂಖ್ಯೆ ಎಣಿಸಲು ಬರುತ್ತಿರಲಿಲ್ಲ. ಇಷ್ಟಕ್ಕೇ ಪಾಪಿ ತಂದೆ ಮೃಗದ ರೀತಿ ವರ್ತಿಸಿದ್ದಾನೆ. ಬಾಲಕನ ತಾಯಿ ಮಧ್ಯಪ್ರವೇಶಿಸಲು ಯತ್ನಿಸಿದರಾದ್ರೂ ಆಕೆಗೂ ಹೊಡೆತ ಬಿದ್ದಿದೆ. ನೆರೆಹೊರೆಯವರು ಕೂಡ ಬಾಲಕನನ್ನು ರಕ್ಷಿಸಲು ಯತ್ನಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ.

    ಕೂಡಲೇ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಅವರು ಸ್ಥಳಕ್ಕೆ ಬಂದ ಕೂಡಲೇ ರಾಕ್ಷಸ ತಂದೆ ಪರಾರಿಯಾಗಿದ್ದಾನೆ. ತಂದೆಯ ಹೊಡೆತದಿಂದ ಗಾಯಗಳಾಗಿ ರಕ್ತಸ್ರಾವವಾಗುತ್ತಿದ್ದ ಬಾಲಕನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಬಾಲಕನ ಮೈಮೇಲಿನ ಗಾಯಗಳನ್ನ ನೋಡಿದ್ರೆ ಆತನಿಗೆ ನೀಡಲಾದ ಕಿರುಕುಳದ ಬಗ್ಗೆ ಗೊತ್ತಾಗುತ್ತದೆ. ಬಾಲಕನ ಪರಿಸ್ಥಿತಿ ಮನಕಲಕುವಂತಿದೆ.

    ನಡೆದಿದ್ದೇನು?: ಬಾಲಕ ರಾಜ್‍ಗೆ 10 ವರೆಗೆ ಎಣಿಸುವಂತೆ ತಂದೆ ಧರ್ಮೇಂದ್ರ ಹೇಳಿದ್ದಾನೆ. ಆದ್ರೆ ಬಾಲಕನಿಗೆ ಎಣಿಸಲು ಬಂದಿಲ್ಲ. ಇಷ್ಟಕ್ಕೇ ರೌದ್ರಾವತಾರ ತಾಳಿದ ಧರ್ಮೇಂದ್ರ 3 ವರ್ಷದ ಬಾಲಕನನ್ನ ತಲೆಕೆಳಗಾಗಿ ನೇತು ಹಾಕಿ ಮನಬಂದಂತೆ ಹೊಡೆದಿದ್ದಾನೆ. ತಾಯಿ ಬುಲ್‍ಬುಲ್ ಮಧ್ಯಪ್ರವೇಶಿಸಿದಾಗ ಆಕೆಗೂ ಥಳಿಸಿದ್ದಾನೆ. ಬುಲ್‍ಬುಲ್ ಕಿರುಚಾಟವನ್ನು ಕೇಳಿ ಅಕ್ಕಪಕ್ಕದ ಮನೆಯವರು ಓಡಿಬಂದಿದ್ದು, ಧರ್ಮೇಂದ್ರ ಅವರನ್ನೂ ಹೊರಕಳಿಸಿದ್ದಾನೆ.

    ಧರ್ಮೇಂದ್ರನ ವರ್ತನೆ ಮಿತಿಮೀರಿ ಮುಗ್ಧ ಬಾಲಕನ ಮೇಲೆ ಕಿರುಕುಳ ನೀಡ್ತಿದ್ದನ್ನು ನೋಡಿ ಸ್ಥಳೀಯರು 100ಕ್ಕೆ ಕರೆ ಮಾಡಿದ್ದಾರೆ. ಪೊಲೀಸರು ಬಂದ ಕೂಡಲೇ ಧರ್ಮೇಂದ್ರ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ತಲೆ, ಕಣ್ಣು, ತುಟಿ ಹಾಗೂ ಹೊಟ್ಟೆಯ ಭಾಗದಲ್ಲಿ ಗಾಯಗಳಾಗಿ ರಕ್ತಸ್ರಾವವಾಗ್ತಿದ್ದ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಸದ್ಯ ಬಾಲಕ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

    ನಿರ್ದಯಿ ತಂದೆ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ತನ್ನ ಗಂಡನಿಗೆ ಮತ್ತೊಬ್ಬ ಹೆಂಡತಿಯಿದ್ದಾಳೆ ಎಂದು ಬುಲ್‍ಬುಲ್ ಹೇಳಿದ್ದಾರೆ. ಗಂಡನ ಕಿರುಕುಳದ ಬಗ್ಗೆ ಈ ಹಿಂದೆಯೂ ಪೊಲೀಸರಿಗೆ ದೂರು ನೀಡಿದ್ದ ಎಂದು ಅವರು ತಿಳಿಸಿದ್ದಾರೆ.

  • 4 ವರ್ಷದ ಮಗನನ್ನ ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಂದ

    4 ವರ್ಷದ ಮಗನನ್ನ ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಂದ

    ಮುಂಬೈ: ಮಲತಂದೆಯೇ ತನ್ನ 4 ವರ್ಷದ ಮಗನನ್ನು ಬಕೆಟ್‍ನಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಆರೋಪಿ ತಂದೆಯನ್ನು ಶುಕ್ರವಾರದಂದು ಪೊಲೀಸರು ಬಂಧಿಸಿದ್ದಾರೆ. ಆರೋಪಿ ತನ್ನ ಪತ್ನಿಯ ಜೊತೆ ಇಲ್ಲಿನ ಪೂರ್ವ ನಲ್ಲಸೋಪಾರಾದಲ್ಲಿ ವಾಸವಿದ್ದ. ಮಹಿಳೆಗೆ ತನ್ನ ಮೊದಲ ಮದುವೆಯ ಫಲವಾಗಿ ಮೂವರು ಮಕ್ಕಳಿದ್ದು, ಮೃತ ಬಾಲಕನೂ ಅದರಲ್ಲಿ ಒಬ್ಬನಾಗಿದ್ದ ಎಂದು ವರದಿಯಾಗಿದೆ.

    ಘಟನೆ ನಡೆದ ದಿನ ಮಹಿಳೆ ತನ್ನ ಮೂವರು ಮಕ್ಕಳನ್ನ ಗಂಡನ ಬಳಿ ಬಿಟ್ಟು ಕೆಲಸಕ್ಕೆ ಹೋಗಿದ್ದರು. 4 ವರ್ಷದ ಬಾಲಕ ಪಕ್ಕದ ಮನೆಗೆ ಆಟವಾಡಲು ಹೋಗಿದ್ದ. ಆತ ಮನೆಗೆ ವಾಪಸ್ ಬಂದ ನಂತರ ಆರೋಪಿ ಬಾಲಕನನ್ನು ಪೊರಕೆಯಿಂದ ಹೊಡೆದಿದ್ದು, ನೀರಿನಲ್ಲಿ ಮುಳುಗಿಸಿದ್ದಾನೆ. ಮತ್ತಿಬ್ಬರು ಮಕ್ಕಳನ್ನೂ ಥಳಿಸಿ, ವಿಷಯವನ್ನ ತಾಯಿಗೆ ತಿಳಿಸಿದ್ರೆ ನಿಮಗೂ ಇದೇ ಗತಿ ಎಂದು ಹೆದರಿಸಿದ್ದ ಎಂದು ತುಲಿಂಜ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಕೇರುಭಾವ್ ಕೊಲ್ಹೆ ಹೇಳಿದ್ದಾರೆ.

    ಪತ್ನಿ ಮನೆಗೆ ಹಿಂದಿರುಗಿದ ನಂತರ ತನ್ನ ಮಗ ನೀರಿನಲ್ಲಿ ಮುಳುಗಿರೋದನ್ನ ಕಂಡು ಆಘಾತಗೊಂಡು ನಮಗೆ ವಿಷಯ ತಿಳಿಸಿದ್ರು. ನಮಗೆ ಜೈಸ್ವಾಲ್ ಮೇಲೆ ಅನುಮಾನವಿತ್ತು. ಇಬ್ಬರು ಮಕ್ಕಳನ್ನ ಮಹಿಳಾ ಅಧಿಕಾರಿಗಳು ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರು ಸತ್ಯವನ್ನ ತಿಳಿಸಿದ್ದಾರೆ. ನಂತರ ಜೈಸ್ವಾಲ್ ಕೂಡ ತಪ್ಪೊಪ್ಪಿಕೊಂಡಿದ್ದಾನೆ ಎಂದು ಕೇರುಭಾವ್ ಹೇಳಿದ್ದಾರೆ.

    ಕೊಲೆಗೆ ಕಾರಣವೇನು?: ಆರೋಪಿ ಹಿಂದಿನ ದಿನವಷ್ಟೇ ಪಕ್ಕದ ಮನೆಯವರೊಂದಿಗೆ ಜಗಳವಾಡಿದ್ದ. ಆದ್ದರಿಂದ ಅವರ ಮನೆಗೆ ಹೋಗಬಾರದೆಂದು ತನ್ನ ಮಲ ಮಕ್ಕಳಿಗೆ ಎಚ್ಚರಿಕೆ ನೀಡಿದ್ದ. ಆದ್ರೆ ಬಾಲಕ ಅವರ ಮನೆಗೆ ಹೋಗಿದ್ದಕ್ಕೆ ಕೋಪಗೊಂಡು ಈ ರೀತಿ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಆರೋಪಿಯ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 302ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಸೈ ಕೋರ್ಟ್ ಮುಂದೆ ಆರೋಪಿಯನ್ನ ಹಾಜರುಪಡಿಸಲಾಗಿದ್ದು, 5 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

  • ಮಲತಂದೆಯಿಂದ ಅತ್ಯಾಚಾರ- 10 ವರ್ಷದ ಬಾಲಕಿ ಈಗ 5 ತಿಂಗಳ ಗರ್ಭಿಣಿ

    ಮಲತಂದೆಯಿಂದ ಅತ್ಯಾಚಾರ- 10 ವರ್ಷದ ಬಾಲಕಿ ಈಗ 5 ತಿಂಗಳ ಗರ್ಭಿಣಿ

    ರೋಹ್ಟಕ್: ಮಲತಂದೆಯಿಂದ ಸತತವಾಗಿ ಅತ್ಯಾಚಾರಕ್ಕೊಗಾಗಿ 10 ವರ್ಷದ ಬಾಲಕಿ ಗರ್ಭಿಣಿಯಾಗಿರೋ ಆಘಾತಕಾರಿ ಘಟನೆ ಹರಿಯಾಣದ ರೋಹ್ಟಕ್‍ನಲ್ಲಿ ಬೆಳಕಿಗೆ ಬಂದಿದೆ.

    ಶುಕ್ರವಾರದಂದು ಇಲ್ಲಿನ ಆಸ್ಪತ್ರೆಯೊಂದಕ್ಕೆ ಬಾಲಕಿಯನ್ನ ದಾಖಲಿಸಲಾಗಿದ್ದು, ಈ ವೇಳೆ ಆಕೆ 5 ತಿಂಗಳ ಗರ್ಭಿಣಿಯಾಗಿರುವ ವಿಷಯ ಬೆಳಕಿಗೆ ಬಂದಿದೆ.

    ಬಿಹಾರದಿಂದ ವಲಸೆ ಬಂದು ಕಾರ್ಮಿಕರಾಗಿರುವ ಬಾಲಕಿಯ ತಾಯಿ ಮಗಳ ಸ್ಥಿತಿ ನೋಡಿ ವೈದ್ಯರ ಬಳಿ ಚೆಕ್‍ಅಪ್‍ಗಾಗಿ ಕರೆದುಕೊಂಡು ಹೋಗಿದ್ದರು. ಈ ವೇಳೆ ವೈದ್ಯರು ಅತ್ಯಾಚಾರದ ಬಗ್ಗೆ ದೃಢಪಡಿಸಿದ್ದಾರೆ. ನಂತರ ಬಾಲಕಿ ಅಮ್ಮನ ಬಳಿ ನಡೆದ ವಿಷಯವನ್ನ ಹೇಳಿಕೊಂಡಿದ್ದಾಳೆ. ದೀರ್ಘ ಕಾಲದಿಂದ ಮಲತಂದೆ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಈ ವಿಷಯವನ್ನು ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದ ಎಂದು ಬಾಲಕಿ ಹೇಳಿಕೊಂಡಿದ್ದಾಳೆ.

    ಇದನ್ನೂ ಓದಿ: ಗೆಳೆಯರಿಂದ್ಲೇ ಮಗಳ ಮೇಲೆ ಗ್ಯಾಂಗ್‍ರೇಪ್ – ವೀಡಿಯೋ ಮಾಡಿದ ನಿಷ್ಕರುಣಿ ತಾಯಿ

    ನಂತರ ಬಾಲಕಿಯ ತಾಯಿ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ಈ ಬಗ್ಗೆ ದೂರು ನೀಡಿದ್ದು, ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ರೋಹ್ಟಕ್‍ನ ಪಿಜಿಐಎಮ್‍ಎಸ್‍ನ ವೈದ್ಯಕೀಯ ಮಂಡಳಿ ಸೋಮವಾರದಂದು ಸಭೆ ಸೇರಲಿದ್ದು ಮಂದಿನ ನಡೆಯ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ವರದಿಯಾಗಿದೆ.

    ಇದನ್ನೂ ಓದಿ: ಮಹಿಳೆ ಮೇಲೆ ಗ್ಯಾಂಗ್ ರೇಪ್- ಮುಖವನ್ನ ಇಟ್ಟಿಗೆಯಿಂದ ಹೊಡೆದ್ರು, ಛಿದ್ರವಾದ ಸ್ಥಿತಿಯಲ್ಲಿ ಶವ ಪತ್ತೆ