Tag: steel company

  • ಮಹಾರಾಷ್ಟ್ರದ ಸ್ಟೀಲ್ ಕಂಪನಿಯಲ್ಲಿ ಬೆಂಕಿ ಅವಘಡ – 16 ಕಾರ್ಮಿಕರಿಗೆ ಗಾಯ

    ಮಹಾರಾಷ್ಟ್ರದ ಸ್ಟೀಲ್ ಕಂಪನಿಯಲ್ಲಿ ಬೆಂಕಿ ಅವಘಡ – 16 ಕಾರ್ಮಿಕರಿಗೆ ಗಾಯ

    ಮುಂಬೈ: ಸ್ಟೀಲ್ ಕಂಪನಿಯೊಂದರಲ್ಲಿ (Steel Company) ಬೆಂಕಿ ಅವಘಡ ಸಂಭವಿಸಿದ ಪರಿಣಾಮ 16 ಮಂದಿ ಕಾರ್ಮಿಕರು ಗಾಯಗೊಂಡ ಘಟನೆ ಮಹಾರಾಷ್ಟ್ರದ (Maharashtra) ವಾರ್ಧಾ (Wardha) ಜಿಲ್ಲೆಯಲ್ಲಿ ನಡೆದಿದೆ.

    ಘಟನೆಯಲ್ಲಿ ಗಂಭೀರ ಗಾಯಗೊಂಡ ಎಲ್ಲಾ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ತಿಳಿಸಿವೆ. ಘಟನೆಯ ಮಾಹಿತಿ ಪಡೆದ ಆಡಳಿತ ಮಂಡಳಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದೆ. ಇದನ್ನೂ ಓದಿ: ಒಳ ಒಪ್ಪಂದದ ರೀತಿ ಲೋಕಾಯುಕ್ತ ಎಸ್ಪಿ ಸಿಎಂ ವಿಚಾರಣೆ ಮಾಡಿದ್ದಾರೆ: ಸ್ನೇಹಮಹಿ ಕೃಷ್ಣ ದೂರು

    ವಾರ್ಧಾ ಜಿಲ್ಲೆಯ ಭುಗಾಂವ್ ಸ್ಟೀಲ್ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡು 16 ಕಾರ್ಮಿಕರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.  ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವಾರ್ಧಾ ಜಿಲ್ಲಾಧಿಕಾರಿ ರಾಹುಲ್ ಕಾರ್ಡಿಲೆ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ದೆಹಲಿ, ಮುಂಬೈ ಮೂಲದ ಕಂಪನಿಗಳ ಮೇಲೆ ಐಟಿ ದಾಳಿ

  • ಪಕ್ಕದಲ್ಲೇ ನದಿ ಹರಿದ್ರೂ ಹನಿ ನೀರಿಲ್ಲ- ಬೋರ್‍ವೆಲ್‍ಗಳಿಂದ ಸ್ಟೀಲ್ ಕಂಪೆನಿಗಳಿಗೆ ಅಕ್ರಮ ನೀರು

    ಪಕ್ಕದಲ್ಲೇ ನದಿ ಹರಿದ್ರೂ ಹನಿ ನೀರಿಲ್ಲ- ಬೋರ್‍ವೆಲ್‍ಗಳಿಂದ ಸ್ಟೀಲ್ ಕಂಪೆನಿಗಳಿಗೆ ಅಕ್ರಮ ನೀರು

    ಕೊಪ್ಪಳ: ಕಾರ್ಖಾನೆಯೊಂದು ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಬೋರ್‍ವೆಲ್ ಮೂಲಕ ಅನಧಿಕೃತ ನೀರು ಕದಿಯುತ್ತಿರೋ ಸ್ಥಳಕ್ಕೆ ರೈತರು ನುಗ್ಗಿ ಕಾರ್ಖಾನೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮದ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಬೋರವೆಲ್ ಕೊರೆಯಿಸಿ ಕಳೆದ ನಾಲ್ಕೈದು ತಿಂಗಳಿಂದ ಕಲ್ಯಾಣಿ ಕಾರ್ಖಾನೆಯವರು ಅಂತರ್ಜಲಕ್ಕೂ ಕನ್ನಾ ಹಾಕಿ ನೀರು ಕದಿಯುತ್ತಿದ್ದಾರೆ. ನಾಲ್ಕೈದು ಬೋರ್‍ವೆಲ್ ಗಳಿಗೆ ಡೀಸೆಲ್ ಮೋಟರ್ ಅಳವಡಿಸಿ ನಿರಂತರವಾಗಿ ಟ್ಯಾಂಕರ್ ಮೂಲಕ ನೀರು ಕದಿಯುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇದ್ರಿಂದ ರೋಸಿಹೋದ ರೈತರು ಡಿಸೇಲ್ ಪಂಪಸೆಟ್ ಮೂಲಕ ನೀರು ಕದಿಯುತ್ತಿರೋದನ್ನ ನಿಲ್ಲಿಸುವಂತೆ ಕಾರ್ಖಾನೆಯವರಿಗೆ ತಾಕೀತು ಮಾಡಿದ್ದಾರೆ.

    ಇನ್ನು ಈ ರೀತಿ ಕಲ್ಯಾಣಿ ಸ್ಟೀಲ್ ಕಾರ್ಖಾನೆಯವರು ನಿರಂತರವಾಗಿ ನೀರು ಕದಿಯುತ್ತಿರುವುದರಿಂದ ಸುತ್ತಮುತ್ತಲು ರೈತರ ಜಮೀನಿನಲ್ಲಿ ಇರುವ ಬೋರ್‍ವೆಲ್ ನೀರು ಕಡಿಮೆ ಆಗಿ ಬೆಳೆಗೆ ನೀರು ಹಾಯಿಸಲು ಪರದಾಡ್ತಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ಕಾರ್ಖಾನೆಯವರು ನೀರು ಕದಿಯೋದನ್ನ ತಡೀಬೇಕು. ಜನಜಾನುವಾರುಗಳಿಗೆ ಕುಡಿಯೋಕೆ ನೀರಿಲ್ಲ. ಇದ್ರ ಮಧ್ಯೆ ಕಾರ್ಖಾನೆಯವರು ನೀರು ಕದಿಯುತ್ತಿರೋದನ್ನ ಕಂಡು ಅಧಿಕಾರಿಗಳು ಕಣ್ಮುಚ್ಚಿ ಕುಳ್ತಿದ್ದಾರೆ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.