Tag: Steel

  • ಅವಮಾನಿಸಿದ್ದ ಕಂಪನಿಯನ್ನೇ ಖರೀದಿಸಿ ಮೆರೆದಿದ್ದ ಯಶಸ್ವಿ ಉದ್ಯಮಿ ರತನ್‌ ಟಾಟಾ!

    ಅವಮಾನಿಸಿದ್ದ ಕಂಪನಿಯನ್ನೇ ಖರೀದಿಸಿ ಮೆರೆದಿದ್ದ ಯಶಸ್ವಿ ಉದ್ಯಮಿ ರತನ್‌ ಟಾಟಾ!

    ಮಹಾನ್ ವಾಣಿಜ್ಯ ಸಾಮ್ರಾಜ್ಯವನ್ನು ಆಳಿದ ರತನ್ ಟಾಟಾ (Ratan Tata) ಅವರು ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ಈ ಬೆನ್ನಲ್ಲೇ ಅವರ ಸಾಧನೆಗಳ ಬಗ್ಗೆ ಮೆಲುಕು ಹಾಕಲಾಗುತ್ತಿದೆ. ಅದರ ಒಂದು ತುಣುಕು ಇಲ್ಲಿದೆ.

    1980-90ರ ದಶಕದಲ್ಲಿ ಭಾರತದಲ್ಲಿ ಯಾವುದೇ ಸ್ವದೇಶಿ ಕಂಪನಿಗಳು ಕಾರುಗಳನ್ನು ಉತ್ಪಾದಿಸುತ್ತಿರಲಿಲ್ಲ. ಆಗೇನಿದ್ದರೂ ವಿದೇಶಿ ಕಂಪನಿಗಳ ಸಹಭಾಗಿತ್ವದಲ್ಲಿ ಭಾರತದಲ್ಲಿ ಕಾರು ಉತ್ಪಾದನೆಯಾಗುತ್ತಿತ್ತು. ಜೊತೆಗೆ ವಿದೇಶಿ ಕಂಪನಿಗಳ ಕಾರುಬಾರೇ ಜೋರಾಗಿತ್ತು. ಈ ಹಂತದಲ್ಲಿ ರತನ್ ಟಾಟಾ ಅವರು ಮೊದಲ ಬಾರಿಗೆ ಪ್ರಯಾಣಿಕ ವಾಹನಗಳ ವಿಭಾಗಕ್ಕೆ ಲಗ್ಗೆ ಇಡುವ ಪ್ರಯತ್ನ ಮಾಡಿದರು. 1998ರಲ್ಲಿ ಭಾರತದಲ್ಲಿ ಟಾಟಾ ಕಂಪನಿಯು ಪ್ಯಾಸೆಂಜ‌ರ್ ವಾಹನದ ಮಾರುಕಟ್ಟೆಗೆ ‘ಟಾಟಾ ಇಂಡಿಕಾ’ ಕಾರ್‌ನೊಂದಿಗೆ ಸ್ವದೇಶಿ ಮಾರುಕಟ್ಟೆಗೆ ಪ್ರವೇಶಿಸಿತ್ತು.

    ರತನ್ ಟಾಟಾ ಅವರು ವೈಯಕ್ತಿಕವಾಗಿ ಈ ಕಾರಿನ ಮೇಲೆ ಬಹಳಷ್ಟು ನಿರೀಕ್ಷೆ ಇರಿಸಿಕೊಂಡಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿತ್ತು. ಭಾರತೀಯರು ಈ ಕಾರುಗಳನ್ನು ತಿರಸ್ಕರಿಸಿದ್ದರು. ಇದು ರತನ್ ಟಾಟಾ ಅವರಿಗೆ ಎಲ್ಲಿಲ್ಲದ ನೋವು ತಂದಿತ್ತು. ಕಂಪನಿ ಭಾರಿ ನಷ್ಟ ಅನುಭವಿಸುವಂತೆ ಮಾಡಿತ್ತು. ಇದರಿಂದಾಗಿ ತಮ್ಮ ವಾಹನ ತಯಾರಿಕೆ ಉದ್ಯಮವನ್ನೇ ಮಾರಾಟ ಮಾಡಲು ರತನ್ ಟಾಟಾ ನಿರ್ಧರಿಸಿದ್ದರು. ಇದನ್ನೂ ಓದಿ: ಬಿಜೆಪಿ ಒತ್ತಡಕ್ಕೆ ಮಣಿದು ಬಲವಂತವಾಗಿ ದೆಹಲಿ ಸಿಎಂ ಮನೆ ಖಾಲಿ ಮಾಡಿಸಲಾಗಿದೆ: ಎಎಪಿ ಆರೋಪ

    ಫೋರ್ಡ್‌ಗೆ ಮಾರಾಟ ಪ್ರಯತ್ನ:
    ಪ್ರಯಾಣಿಕ ವಾಹನ ಉದ್ಯಮ ಕೈಹಿಡಿಯಲ್ಲ ಎಂಬ ನಿರಾಸೆ ಹಿನ್ನೆಲೆಯಲ್ಲಿ, ಇಡೀ ಪ್ರಯಾಣಿಕ ವಾಹನ ಕಂಪನಿಯನ್ನೇ ಮಾರಾಟ ಮಾಡಲು ರತನ್ ನಿರ್ಧರಿಸಿದರು. ಅದರಂತೆ ರತನ್ ಟಾಟಾ ಮತ್ತು ಅವರ ತಂಡ ಅಮೆರಿಕದ ಫೋರ್ಡ್ ಕಂಪನಿಯ ಅಂದಿನ ಮುಖ್ಯಸ್ಥರಾದ ಬಿಲ್ ಫೋರ್ಡ್ ಅವರನ್ನು ಭೇಟಿಯಾಗಿ ಅವರಿಗೆ ತಮ್ಮ ಇಡೀ ಪ್ಯಾಸೆಂಜರ್ ತಯಾರಿಕೆ ಉದ್ಯಮವನ್ನು ಮಾರಾಟ ಮಾಡಲು ಪ್ರಸ್ತಾಪ ಮುಂದಿಟ್ಟರು. ಈ ಕುರಿತು ಅಮೆರಿಕದ ಡೆಟ್ರಾಯ್ಡ್ ಗೆ ತೆರಳಿದ ಟಾಟಾ, ಫೋರ್ಡ್ (ford) ಕಂಪನಿಯೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಆದರೆ ಬಿಲ್ ಫೋರ್ಡ್ ಮತ್ತು ಅವರ ತಂಡ ಅಹಂಕಾರದಿಂದಲೇ ಟಾಟಾ ಪ್ರಯಾಣಿಕ ವಾಹನ ವಿಭಾಗ ಖರೀದಿ ಮಾಡಲು ಮುಂದಾಯಿತು.

    ಜೊತೆಗೆ ರತನ್ ಟಾಟಾ ಅವರನ್ನು ಅತ್ಯಂತ ಕೀಳಾಗಿ ನೋಡಿತು. ‘ಕಾರುಗಳ ವ್ಯವಹಾರ ನಿಮಗೇಕೆ ಬೇಕಿತ್ತು?’ ಎಂದು ತುಂಬಾ ಹೀನಾಯವಾಗಿ ರತನ್ ಟಾಟಾ ಅವರನ್ನು ಅವಮಾನಿಸಿತ್ತು. ಹೀಗಾಗಿ ರತನ್ ಟಾಟಾ ಅವರು ಮಾರಾಟ ಮಾಡದೇ ಹಾಗೇ ಮರಳಿದ್ದರು. ಈ ಅವಮಾನವು ರತನ್ ಟಾಟಾರನ್ನು ಕಾರುಗಳ ಬಿಸಿನೆಸ್‌ನಲ್ಲಿ ಇನ್ನಷ್ಟು ಉತ್ತಮಗೊಳಿಸಿಕೊಳ್ಳುವಲ್ಲಿ ಪ್ರೇರೇಪಿಸಿತ್ತು. ಇದನ್ನೂ ಓದಿ: ರತನ್ ಟಾಟಾ ದೂರದೃಷ್ಟಿಯ ಉದ್ಯಮಿ, ಅಸಾಧಾರಣ ವ್ಯಕ್ತಿ: ಪ್ರಧಾನಿ ಮೋದಿ ಸಂತಾಪ

    ಫೋರ್ಡ್ ಕಂಪನಿಯನ್ನು ಕಾಪಾಡಿದ ರತನ್‌ ಟಾಟಾ
    2008ರಲ್ಲಿ ಅಮೆರಿಕ ಸೇರಿದಂತೆ ಜಗತ್ತಿನಾದ್ಯಂತ ಆರ್ಥಿಕ ಹಿಂಜರಿಕೆಯಾಗಿ ದೊಡ್ಡ ಕಂಪನಿಗಳೆಲ್ಲಾ ನೆಲೆಕಚ್ಚುತ್ತಿದ್ದವು. ಫೋರ್ಡ್ ಕಂಪನಿಯು ದಿವಾಳಿಯಾಗಿತ್ತು. ಅದರ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಸಂಪೂರ್ಣ ನಷ್ಟದಲ್ಲಿತ್ತು. 1989ರಲ್ಲಿ ಜಾಗ್ವಾರ್‌ನನ್ನು 2.5 ಶತಕೋಟಿ ಡಾಲರ್ ಕೊಟ್ಟು, 2000 ಇಸವಿಯಲ್ಲಿ 2.7 ಶತಕೋಟಿ ಡಾಲ‌ರ್ ಕೊಟ್ಟು ಲ್ಯಾಂಡ್ ರೋವರ್‌ನನ್ನು ಫೋರ್ಡ್ ಖರೀದಿಸಿತ್ತು. ಆದರೆ, ಇವುಗಳು ಬಿಳಿ ಆನೆ ಸಾಕಿದಂತೆ ಆಗಿತ್ತು. ಹೀಗಾಗಿ ಎರಡೂ ಕಂಪನಿಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಬಿಲ್ ಫೋರ್ಡ್, ಜಗತ್ತನ್ನು ಅಂಗಲಾಚುತ್ತಿದ್ದರು.

    ಇದೇ ಅವಕಾಶವನ್ನು ಪ್ರತೀಕಾರ ತೆಗೆದುಕೊಳ್ಳಲು ಬಳಸಿಕೊಂಡ ರತನ್ ಟಾಟಾ, ಎರಡೂ ಕಂಪನಿಗಳನ್ನು ಕೇವಲ 2.3 ಶತಕೋಟಿ ಡಾಲರ್‌ಗೆ ಖರೀದಿ ಮಾಡಿ ಭಾರಿ ಲಾಭ ಪಡೆದರು. ಟಾಟಾ ಅವರ ಈ ಖರೀದಿಗೆ ಬಿಲ್ ಫೋರ್ಡ್ ಧನ್ಯವಾದ ಸಲ್ಲಿಸಿದ್ದರು. ಬಳಿಕ ಟಾಟಾ ತೆಕ್ಕೆಯಲ್ಲಿ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಕಂಪನಿಗಳು ಜಗತ್ತಿನ ಐಷಾರಾಮಿ ಕಾರುಗಳ ಸಾಲಿನಲ್ಲಿ ರಾರಾಜಿಸುವಂತೆ ರತನ್ ಟಾಟಾ ಯಶಸ್ಸುಗಳಿಸಿ, ಪ್ರತಿಕಾರವನ್ನು ಯಶಸ್ಸಿನಲ್ಲಿ ತೆಗೆದುಕೊಳ್ಳಬೇಕು ಎಂದು ಸಂದೇಶ ಸಾರಿದ್ದರು.

  • ಮಾರಣಾಂತಿಕ ಹಲ್ಲೆಗೈದು ಲಾರಿಯಲ್ಲಿದ್ದ 13 ಟನ್ ಸ್ಟೀಲ್ ದೋಚಿ ಚಾಲಕನನ್ನು ರಸ್ತೆಗೆಸೆದ್ರು!

    ಮಾರಣಾಂತಿಕ ಹಲ್ಲೆಗೈದು ಲಾರಿಯಲ್ಲಿದ್ದ 13 ಟನ್ ಸ್ಟೀಲ್ ದೋಚಿ ಚಾಲಕನನ್ನು ರಸ್ತೆಗೆಸೆದ್ರು!

    ಹಾವೇರಿ: ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಲಾರಿಯಲ್ಲಿದ್ದ (Lorry) 13 ಟನ್ ಸ್ಟೀಲ್‍ನ್ನು (Steel) ದೋಚಿದ ಪ್ರಕರಣ ಹಾವೇರಿಯಲ್ಲಿ (Haveri) ನಡೆದಿದೆ. ದುಷ್ಕರ್ಮಿಗಳ ದಾಳಿಗೆ ತುತ್ತಾದ ಚಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

    ಮೀರಜ್‍ನಿಂದ ಚನ್ನೈನತ್ತ ಹೊರಟಿದ್ದ ಸ್ಟೀಲ್ ತುಂಬಿದ್ದ ಲಾರಿಯನ್ನು ಕಳ್ಳರು ತಡೆದಿದ್ದಾರೆ. ಲಾರಿಯಲ್ಲಿದ್ದ ಸ್ಟೀಲ್ ಕಂಡು ಲಾರಿ ಚಾಲಕನ ಮೇಲೆ ಮಾರಣಾತಿಕ ಹಲ್ಲೆ ಮಾಡಿದ್ದಾರೆ. ಬಳಿಕ ಲಾರಿ ಚಾಲಕನನ್ನು ರಸ್ತೆ ಪಕ್ಕದಲ್ಲಿ ಎಸೆದಿದ್ದಾರೆ. ಲಾರಿಯಲ್ಲಿದ್ದ 13 ಟನ್ ಸ್ಟೀಲ್‍ನ್ನು ತಮ್ಮ ಲಾರಿಗೆ ತುಂಬಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಶಾಲಾ ಕಟ್ಟಡ ಕುಸಿದು ವಿದ್ಯಾರ್ಥಿ ದುರ್ಮರಣ- ಕಳಪೆ ಕಾಮಗಾರಿ ಆರೋಪ

    ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಚಾಲಕನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಬಳಿಕ ಅಲ್ಲಿಂದ ಹುಬ್ಬಳ್ಳಿಯ (Hubballi)
    ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗುತ್ತಿತ್ತು. ಆದರೆ ಚಾಲಕ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಮಹಾರಾಷ್ಟ್ರ ಮೂಲದ ಗೋವಿಂದ ನಾರಾಯಣ ಖಂಡೇಕರ (40) ಎಂದು ತಿಳಿದು ಬಂದಿದೆ. ಈ ಸಂಬಂಧ ಹಾವೇರಿ ನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    ಹಲವು ಟ್ರಾನ್ಸ್‌ಪೋರ್ಟ್ ಕಂಪನಿಗಳು ಲಕ್ಷಾಂತರ ರೂ. ಬೆಲೆ ಬಾಳುವ ವಸ್ತುಗಳನ್ನು ಈ ದಾರಿಯಲ್ಲಿ ಸಾಗಿಸಲಾಗುತ್ತದೆ. ರಾಜ್ಯದಿಂದ ರಾಜ್ಯಕ್ಕೆ ಹಲವಾರು ಸಾಮಾಗ್ರಿಗಳನ್ನು ಲಾರಿ ಮೂಲಕ ಸಾಗಿಸಲಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಈ ರೀತಿಯ ಕಳ್ಳತನದಲ್ಲಿ ತೊಡಗಿದ್ದಾರೆ.

    ಹಾವೇರಿ ಜಿಲ್ಲೆಯಲ್ಲಿ ಕಳೆದ ಐದು ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿ ಕಂಡುಬಂದಿದೆ. 2021 ಸೆಪ್ಟೆಂಬರ್ ತಿಂಗಳು 28 ಲಕ್ಷ ರೂ. ಮೌಲ್ಯದ ಮೆಣಸಿನಕಾಯಿ ಚೀಲ ತುಂಬಿದ ಲಾರಿ ಮತ್ತು 27 ಲಕ್ಷ ರೂ. ಮೌಲ್ಯದ ಮೆಣಸಿನಕಾಯಿ ಪುಡಿ ಚೀಲ ತುಂಬಿರುವ ಲಾರಿ ಕಳ್ಳತವಾಗಿತ್ತು. ಆಗಸ್ಟ್ 2021 ರಲ್ಲಿ ಲಕ್ಷಾಂತರ ರೂ. ಮೌಲ್ಯದ ತಾಮ್ರದ ತಂತಿ ಮತ್ತು ಸಿಲ್ವರ್ ತಂತಿ ತುಂಬಿದ ಬೊಲೆರೋ ವಾಹನ ಕಳ್ಳತನವಾಗಿತ್ತು. ಅಕ್ಟೋಬರ್ 2022 ರಲ್ಲಿ 34.50 ಲಕ್ಷ ರೂ. ನಗದು 5 ಸ್ಮಾರ್ಟ್ ಫೋನ್ ಹಾಗೂ 4 ಕಾರುಗಳು, ಒಟ್ಟು 1.08 ಕೋಟಿ ರೂ. ಬೆಲೆ ಬಾಳುವ ವಿವಿಧ ವಸ್ತುಗಳು ಕಳವಾಗಿತ್ತು. ಇದನ್ನೂ ಓದಿ: ಪ್ರದೀಪ್ ಈಶ್ವರ್ ನಿಮ್ಮೊಂದಿಗೆ- ಶಾಸಕರ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ವಂಚನೆ