Tag: Steamed Kebab

  • ಹಬೆಯಲ್ಲಿ ಬೇಯಿಸಿ ಕಬಾಬ್ ಮಾಡಿ ನೋಡಿ – ಸಖತ್ ಟೇಸ್ಟಿ ಆಗಿರುತ್ತೆ

    ಹಬೆಯಲ್ಲಿ ಬೇಯಿಸಿ ಕಬಾಬ್ ಮಾಡಿ ನೋಡಿ – ಸಖತ್ ಟೇಸ್ಟಿ ಆಗಿರುತ್ತೆ

    ಬಾಬ್ ಎಂದರೆ ಚಿಕನ್ ಪ್ರೇಮಿಗಳ ಬಾಯಲ್ಲಿ ನೀರು ತರದೇ ಇರಲಾರದು. ಕಬಾಬ್ ಅನ್ನು ಎಂದಿನಂತೆ ಎಣ್ಣೆಯಲ್ಲಿ ಕಾಯಿಸಿ ಮಾಡುವುದಕ್ಕಿಂತ ಒಂದು ಬಾರಿ ಹಬೆಯಲ್ಲಿ ಬೇಯಿಸಿಯೂ ನೋಡಿ. ಒಂದು ಹೊರ ರುಚಿಕರವಾದ ರೆಸಿಪಿ ಕಲಿತಂತೆಯೂ ಆಗುತ್ತದೆ. ಹಬೆಯಲ್ಲಿ ಬೇಯಿಸಿ ಕಬಾಬ್ (Steamed Chicken Kebab) ಮಾಡುವುದು ಹೇಗೆ ಎಂದು ನಾವು ಇಂದು ತಿಳಿಸಿಕೊಡುತ್ತೇವೆ. ನೀವೂ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಚಿಕನ್ ಖೀಮಾ – ಅರ್ಧ ಕೆಜಿ
    ಶುಂಠಿ ಪೇಸ್ಟ್ – 2 ಟೀಸ್ಪೂನ್
    ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
    ಈರುಳ್ಳಿ ಪೇಸ್ಟ್ – 5 ಟೀಸ್ಪೂನ್
    ಹಸಿಮೆಣಸಿನ ಪೇಸ್ಟ್ – 1 ಟೀಸ್ಪೂನ್
    ಮೊಸರು – 1 ಟೀಸ್ಪೂನ್
    ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್
    ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಕರಿಮೆಣಸಿನ ಪುಡಿ – 2 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಸ್ಪ್ರಿಂಗ್ ಆನಿಯನ್ – ಅರ್ಧ ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು – ಅರ್ಧ ಕಪ್
    ಎಣ್ಣೆ – ಅಗತ್ಯಕ್ಕೆ ಅನುಸಾರ ಇದನ್ನೂ ಓದಿ: ಬಾಯಲ್ಲಿ ನೀರೂರಿಸುವ ಬೊಂಡಾಸ್ ಸುಕ್ಕ ಸುಲಭವಾಗಿ ಹೀಗೆ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಚಿಕನ್ ಖೀಮಾ, ಶುಂಠಿ ಪೇಸ್ಟ್, ಈರುಳ್ಳಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸಿನ ಪೇಸ್ಟ್, ಸ್ಪ್ರಿಂಗ್ ಆನಿಯನ್, ಮೊಸರು, ಕೊತ್ತಂಬರಿ ಸೊಪ್ಪು, ಪಾಲಕ್ ಸೊಪ್ಪು ಹಾಗೂ ಬ್ರೆಡ್ ಅನ್ನು ಮಿಕ್ಸರ್ ಜಾರ್‌ಗೆ ಹಾಕಿ, ತರಿತರಿಯಾಗಿ ರುಬ್ಬಿಕೊಳ್ಳಿ.
    * ಈ ಮಿಶ್ರಣವನ್ನು ಒಂದು ದೊಡ್ಡ ಪಾತ್ರೆಗೆ ವರ್ಗಾಯಿಸಿ, ಗಂಟಿಲ್ಲದಂತೆ ಕಲಸಿಕೊಳ್ಳಿ.
    * ಈಗ ಮಿಶ್ರಣಕ್ಕೆ ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ, ಕರಿಮೆಣಸಿನಪುಡಿ, ಹಾಗೂ ಉಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
    * ನಿಮ್ಮ ಕೈಗಳಿಗೆ ಎಣ್ಣೆ ಸವರಿ, 2 ಟೀಸ್ಪೂನ್‌ನಷ್ಟು ಮಿಶ್ರಣವನ್ನು ಕೈಯಲ್ಲಿ ತೆಗೆದುಕೊಂಡು, ನಯವಾಗಿ ಉಂಡೆ ಕಟ್ಟಿ, ಸ್ವಲ್ಪ ತಟ್ಟಿ. ಸಂಪೂರ್ಣ ಮಿಶ್ರಣವನ್ನು ಹೀಗೆಯೇ ಮಾಡಿ.
    * ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಕಬಾಬ್‌ಗಳನ್ನು ಚಿಕ್ಕ ಉರಿಯಲ್ಲಿ ಹುರಿಯಿರಿ.
    * ಕಬಾಬ್‌ಗಳು ಚೆನ್ನಾಗಿ ಹುರಿದ ಬಳಿಕ ಸ್ಟೀಮರ್‌ನಲ್ಲಿ ಅವುಗಳನ್ನಿಟ್ಟು, ಮುಚ್ಚಳ ಹಾಕಿ, ಹಬೆಯಲ್ಲಿ ಸುಮಾರು 15 ನಿಮಿಷಗಳ ಕಾಲ ಬೇಯಿಸಿ.
    * ಇದೀಗ ಹಬೆಯಲ್ಲಿ ಬೇಯಿಸಿದ ಕಬಾಬ್ ತಯಾರಾಗಿದ್ದು, ಯಾವುದೇ ಸಾಸ್‌ನೊಂದಿಗೆ ಸವಿಯಿರಿ. ಇದನ್ನೂ ಓದಿ: ಫಟಾಫಟ್ ಅಂತ ಮಾಡಬಹುದಾದ ಚಿಕನ್ ನೂಡಲ್ ಸೂಪ್ ರೆಸಿಪಿ

    Live Tv
    [brid partner=56869869 player=32851 video=960834 autoplay=true]