Tag: statue

  • ಗಾಂಧಿ ಪ್ರತಿಮೆಯನ್ನು ಹಾನಿಗೊಳಿಸಿದ ದುಷ್ಕರ್ಮಿಗಳು

    ಗಾಂಧಿ ಪ್ರತಿಮೆಯನ್ನು ಹಾನಿಗೊಳಿಸಿದ ದುಷ್ಕರ್ಮಿಗಳು

    ಭೋಪಾಲ್: ಮಹಾತ್ಮ ಗಾಂಧಿಯ (Mahatma Gandhi) ಪ್ರತಿಮೆಯನ್ನು (Statue) ದುಷ್ಕರ್ಮಿಗಳು ಹಾನಿಗೊಳಿಸಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ.

    ಮಧ್ಯಪ್ರದೇಶದ (Madhya Pradesh) ಖಾಂಡ್ವಾ ಜಿಲ್ಲೆ ರಂಗಾವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಜಾವರ್ ಗ್ರಾಮ ಪಂಚಾಯತ್ ಕಾರ್ಯದರ್ಶಿ ದೇವರಾಜ್ ಸಿಂಗ್ ನೀಡಿದ ದೂರಿನ ಮೇರೆಗೆ ಜವರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    POLICE JEEP

    ಸ್ಥಳೀಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕುಂದನ್ ಮಾಳವಿಯಾ ಮಾತನಾಡಿ, ಘಟನೆಯು ಗ್ರಾಮಸ್ಥರನ್ನು ಕೆರಳಿಸಿದೆ. ಇದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: BJPಯಂತೆ ಒಂದೊಂದು ಸಮಾಜಕ್ಕೆ ಒಂದೊಂದು ಸಮಾವೇಶ ಮಾಡಲ್ಲ – HDK

    ಗಾಂಧಿ ಪ್ರತಿಮೆಗೆ ಕಿಡಿಗೇಡಿಗಳು ಹಾನಿ ಮಾಡಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ಪಂಜಾಬ್‍ನ ಬಟಿಂಡಾ ಜಿಲ್ಲೆಯ ಸಾರ್ವಜನಿಕ ಉದ್ಯಾನವನದಲ್ಲಿ ಹಾಗೂ ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ಸ್ಥಾಪಿಸಲಾದ ಗಾಂಧಿ ಪ್ರತಿಮೆಗಳನ್ನು ದುಷ್ಕರ್ಮಿಗಳು ಹಾನಿಗೊಳಿಸಿದ್ದರು. ಇದನ್ನೂ ಓದಿ: ಬೆಳಗಾವಿಯಲ್ಲಿ ನಡೆಯಲಿದೆ ಅದ್ಧೂರಿ ಕನ್ನಡ ರಾಜ್ಯೋತ್ಸವ – ಕನ್ನಡಿಗರಿಗೆ 1 ಲಕ್ಷ ಹೋಳಿಗೆ ಊಟ

    Live Tv
    [brid partner=56869869 player=32851 video=960834 autoplay=true]

  • ಜೀ ಕನ್ನಡ ವಾಹಿನಿಯಿಂದ ಅಭಿಮಾನದ ‘ಅಪ್ಪು’ ಪುತ್ಥಳಿ

    ಜೀ ಕನ್ನಡ ವಾಹಿನಿಯಿಂದ ಅಭಿಮಾನದ ‘ಅಪ್ಪು’ ಪುತ್ಥಳಿ

    ಪುನೀತ್ ರಾಜ್ ಕುಮಾರ್  (Puneeth), ಇದು ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಉಳಿದುಕೊಳ್ಳುವ ಹೆಸರು. ನಟನೆ , ವ್ಯಕ್ತಿತ್ವ ಮತ್ತು ನಿಸ್ವಾರ್ಥ ಸಮಾಜಮುಖಿ ಸೇವೆಗಳಿಂದ ಜನಮಾನಸದಲ್ಲಿ ಅಚ್ಚಳಿಯದೆ ನೆಲೆಸಿರುವ ಈ ಹಸನ್ಮುಖಿ ನಮ್ಮಲ್ಲೆರನ್ನು ಅಗಲಿ ಇಂದಿಗೆ ಒಂದು ವರ್ಷವೇ ಆಗಿದೆ. ಇಡೀ ಭಾರತೀಯ ಚಿತ್ರರಂಗಕ್ಕೆ ಮರೆಯಲಾಗದಂತ ದುಃಖವಾಗಿ ಪರಿಣಮಿಸಿ ಕಣ್ಣೀರಾಗಿಸಿರುವ ಈ ದೊಡ್ಮನೆ ಕಂದ ಇಂದಿಗೂ ಎಲ್ಲರ ಮನಸಿನಲ್ಲಿ ಮುದ್ದಿನ ಮಗುವಾಗಿದ್ದಾರೆ.

    ಜೀ ಕನ್ನಡ ವಾಹಿನಿಯೊಟ್ಟಿಗೆ ವಿಶೇಷ ನಂಟು ಹೊಂದಿದ್ದ ಅಪ್ಪು ಅವರು ಎಲ್ಲಾ ಕಾರ್ಯಕ್ರಮಗಳಿಗೂ ಪ್ರೀತಿಯಿಂದ ಆಗಮಿಸಿ ಬೆಂಬಲ ಸೂಚಿಸುತ್ತಿದ್ದರು ಮತ್ತು ಮನಸಾರೆ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದರು. ಅದಕ್ಕೆ ಸಾಕ್ಷಿ ಎನ್ನುವಂತೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ , ಸರಿಗಮಪ  ಕಾರ್ಯಕ್ರಮದ ವಿಶೇಷ ಸ್ಪರ್ಧಿಗಳ ಕೋರಿಕೆಯನ್ನು ಈಡೇರಿಸಲು ಖುದ್ದು ಅವರೇ ವೇದಿಕೆಗೆ ಆಗಮಿಸಿ ಅವರ ಬೆನ್ನು ತಟ್ಟಿ ಪ್ರೀತಿಯಿಂದ ಪ್ರೋತ್ಸಾಹ ನೀಡಿದ್ದು ಇತರರಿಗೆ ಮಾದರಿಯಾಗಿತ್ತು. ಇದನ್ನೂ ಓದಿ: ಯಾರ ಹೊಟ್ಟೆಯಲ್ಲಾದ್ರೂ ಮತ್ತೊಮ್ಮೆ ಹುಟ್ಟಿ ಬಾರಪ್ಪ- ವೃದ್ಧೆ ಕಣ್ಣೀರು

    ಪುನೀತ್ (Puneeth Rajkumar) ಅವರ ಮೇಲೆ ವಿಶೇಷ ಅಭಿಮಾನ ಹೊಂದಿರುವ ಜೀ ಕನ್ನಡ ವಾಹಿನಿ ಅವರ ಪುಣ್ಯ ಸ್ಮರಣೆಯಂದು ಸಿನಿಮಾ ಮತ್ತು ಧಾರಾವಾಹಿಗಳ ಚಿತ್ರೀಕರಣಗಳಿಗೆಂದೇ ಹೆಸರುವಾಸಿಯಾಗಿರುವ ಅಬ್ಬಯ್ಯ ನಾಯ್ಡು ಸ್ಟುಡಿಯೋ ನಲ್ಲಿ ಪುತ್ಥಳಿಯೊಂದನ್ನು (statue) ಅನಾವರಣಗೊಳಿಸುತ್ತಿದೆ. ಈ ಮೂಲಕ ಹೆಜ್ಜೆ ಹಾಕಿದ ಸ್ಥಳವನ್ನು ನೆನಪುಗಳಿಂದ ಪುಣ್ಯ ಭೂಮಿಯಾಗಿಸುವ ಆಶಯ ಇದಾಗಿದೆ. ಈ ಮೂಲಕ ಮುಂದಿನ ಪೀಳಿಗೆಯ ಪ್ರತಿಭೆಗಳಿಗೆ ಅಪ್ಪು ಅವರ ಆಶೀರ್ವಾದ ಸಿಗಲಿದೆ ಎನ್ನುತ್ತದೆ ಜೀ ವಾಹಿನಿ.

    ತನ್ನ ಇಡೀ ಬದುಕನ್ನು ಸಿನಿಮಾಗೆಂದೇ ಮೀಸಲಿಟ್ಟಿದ್ದ ಅಪ್ಪು ಅವರ ವಿಶೇಷ ಪುತ್ಥಳಿ ಹಿರಿತೆರೆ ಮತ್ತು ಕಿರುತೆರೆಗೆ ಜೊತೆಗೆ ಅಪರೂಪದ ಸಂಬಂಧ ಹೊಂದಿರುವಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಅನಾವರಣಗೊಳಿಸುತ್ತಿರುವ ಜೀ ಕನ್ನಡ ವಾಹಿನಿಯ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮತ್ತೊಂದು ವಿಶೇಷವೆಂದರೆ , ಅಬ್ಬಯ್ಯ ನಾಯ್ಡು ಸ್ಟುಡಿಯೋ ಜೀ ಕನ್ನಡ ವಾಹಿನಿ ಕಾರ್ಯಕ್ರಮಗಳ ಭಾಗವಾಗಿದೆ.  ಈ ಒಂದು ಅಭಿಮಾನದ ಅಪರೂಪದ ಕಾರ್ಯಕ್ಕೆ ಅಪ್ಪು ಅವರ ಅಭಿಮಾನಿಗಳೆಲ್ಲರೂ ಭಾಗಿಯಾಗಬೇಕೆಂದು ವಾಹಿನಿ ಈ ಮೂಲಕ ವಿನಯಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತಿದೆ.ಅಷ್ಟೇ ಅಲ್ಲದೆ ವಾಹಿನಿ ಇಡೀ ದಿನವನ್ನು ಅಪ್ಪು ಅವರಿಗೆ ಅರ್ಪಿಸಿ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸಿಎಂ ಯೋಗಿ ಆದಿತ್ಯನಾಥ್ ದೇಗುಲ ನಿರ್ಮಾಣ – ಶ್ರೀರಾಮನ ಅವತಾರದಲ್ಲಿ ಯೋಗಿ

    ಸಿಎಂ ಯೋಗಿ ಆದಿತ್ಯನಾಥ್ ದೇಗುಲ ನಿರ್ಮಾಣ – ಶ್ರೀರಾಮನ ಅವತಾರದಲ್ಲಿ ಯೋಗಿ

    ಲಕ್ನೋ: ರಾಮ ಮಂದಿರ (Rama Mandir) ನಿರ್ಮಾಣ ಹಂತದಲ್ಲಿರುವ ನಡುವೆಯೇ ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರಿಗೆ ಅಯೋಧ್ಯೆಯಲ್ಲಿ (Ayodhya) ಪ್ರತ್ಯೇಕ ದೇಗುಲವನ್ನೇ ನಿರ್ಮಾಣ ಮಾಡಲಾಗಿದೆ.

    ಯೋಗಿ ಆದಿತ್ಯನಾಥ್ (Yogi Adityanath) ಅವರ ಪ್ರತಿಮೆಗೆ ವ್ಯಕ್ತಿಯೊಬ್ಬರು ಪೂಜೆ ಮಾಡುತ್ತಿರುವ ಚಿತ್ರಗಳು ಹಾಗೂ ದೇವಸ್ಥಾನದಲ್ಲಿ ನಿರ್ಮಿಸಲಾಗಿರುವ ಯೋಗಿ ಮೂರ್ತಿಯ ಚಿತ್ರಗಳು ಜಾಲತಾಣದಲ್ಲಿ (Social Media) ವೈರಲ್ ಆಗಿವೆ. ಭರತಕುಂಡ್ ಬಳಿಯ ಪುರ್ವಾ ಹಳ್ಳಿಯಲ್ಲಿರುವ ಈ ದೇವಾಲಯವು (Temple) ಯೋಗಿ ಆದಿತ್ಯನಾಥರನ್ನು ಶ್ರೀರಾಮನ (Lord SriRama) ಅವತಾರದಲ್ಲಿ ನೋಡುವಂತೆ ಮಾಡಿದೆ. ಇದನ್ನೂ ಓದಿ: ಫೋಟೋಗಾಗಿ ಬೆಂಗ್ಳೂರು ಎಫ್‍ಸಿ ನಾಯಕ ಸುನಿಲ್ ಛೆಟ್ರಿಯನ್ನು ತಳ್ಳಿದ ಬಂಗಾಳದ ಗವರ್ನರ್

    ರಾಮಮಂದಿರ ನಿರ್ಮಾಣಕ್ಕೆ ಅಂದಾಜು 1,800 ಕೋಟಿ ವೆಚ್ಚ ಆಗಿದೆ. ರಾಮ ಮಂದಿರ ನಿರ್ಮಾಣ ಕಾಮಗಾರಿ ಶೇ.40ಕ್ಕೂ ಹೆಚ್ಚು ಭಾಗ ಪೂರ್ಣಗೊಂಡಿದೆ. 2023ರ ಡಿಸೆಂಬರ್‌ನಿಂದ ಭಕ್ತರು ದೇವರಿಗೆ ಪೂಜೆ ಅರ್ಪಿಸಲು ಅವಕಾಶ ನೀಡಲು ಸಾಧ್ಯವಾಗುವ ನಿರೀಕ್ಷೆ ಇದೆ ಎಂದು ಶ್ರೀ ರಾಮಜನ್ಮಭೂಮಿ ಟ್ರಸ್ಟ್‌ನ ಅಧಿಕಾರಿಗಳು ಇತ್ತೀಚೆಗೆ ತಿಳಿಸಿದ್ದರು. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪಂಜಾಬ್ ಸಿಎಂ ತೂರಾಟ – ವಿಮಾನದಿಂದ ಕೆಳಗಿಳಿಸಿದ Lufthansa?

    ಈ ದೇವಸ್ಥಾನದಲ್ಲಿ ಪ್ರತಿದಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಎರಡು ಬಾರಿ ವಿಷೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಪ್ರಾರ್ಥನೆಯ ನಂತರ, ಭಕ್ತರಿಗೆ ಪ್ರಸಾದವನ್ನೂ ವಿತರಿಸಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ನ್ಯೂಯಾರ್ಕ್‍ನಲ್ಲಿ ಗಾಂಧಿ ಪ್ರತಿಮೆ ಧ್ವಂಸ – ಎರಡು ವಾರಗಳಲ್ಲಿ 2ನೇ ಬಾರಿಗೆ ಕೃತ್ಯ

    ನ್ಯೂಯಾರ್ಕ್‍ನಲ್ಲಿ ಗಾಂಧಿ ಪ್ರತಿಮೆ ಧ್ವಂಸ – ಎರಡು ವಾರಗಳಲ್ಲಿ 2ನೇ ಬಾರಿಗೆ ಕೃತ್ಯ

    ವಾಷಿಂಗ್ಟನ್: ನ್ಯೂಯಾರ್ಕ್‍ನ ದೇವಾಲಯದ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಈ ತಿಂಗಳು ಎರಡನೇ ಬಾರಿಗೆ ಧ್ವಂಸಗೊಳಿಸಲಾಗಿದೆ.

    ಆಗಸ್ಟ್ 16ರ ಮುಂಜಾನೆ ಈ ಘಟನೆ ನಡೆದಿದ್ದು, ಯುನೈಟೆಡ್ ಸ್ಟೇಟ್ ನಲ್ಲಿ ಗಾಂಧಿ ಪ್ರತಿಮೆಗಳ ಮೇಲೆ ನಡೆಯುತ್ತಿರುವ ದಾಳಿಗಳಲ್ಲಿ ಇದು ಇತ್ತೀಚಿನದ್ದಾಗಿದೆ. 6 ಮಂದಿ ಸೇರಿಕೊಂಡು ಶ್ರೀ ತುಳಸಿ ಮಂದಿರದಲ್ಲಿರುವ ಗಾಂಧಿ ಪ್ರತಿಮೆಯನ್ನು ಸುತ್ತಿಗೆಯಿಂದ ಹೊಡೆದು ಧ್ವಂಸಗೊಳಿಸಿದ್ದಾರೆ. ಇದರ ಸುತ್ತಲೂ ಹಾಗೂ ರಸ್ತೆ ಮೇಲೆ ಪ್ರಚೋದನಕಾರಿ ಪದಗಳನ್ನು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಹಿಂದೆ ಆಗಸ್ಟ್ 3 ರಂದು ಕೂಡ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಹೊಡೆದು ಹಾಕಿ, ಧ್ವಂಸಗೊಳಿಸಲಾಗಿತ್ತು. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಶಂಕಿತ 25 ರಿಂದ 30 ವರ್ಷ ವಯಸ್ಸಿನ ವ್ಯಕ್ತಿಗಳ ವೀಡಿಯೋವನ್ನು ಪೊಲೀಸರು ಇದೀಗ ಬಿಡುಗಡೆಗೊಳಿಸಿದ್ದಾರೆ. ವೀಡಿಯೋದಲ್ಲಿ ಆರೋಪಿಗಳು ಬಿಳಿ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಪರಾರಿಯಾಗಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಎಷ್ಟೇ ತುಷ್ಟೀಕರಣದ ರಾಜಕಾರಣ ಮಾಡಲಿ ಮೊಟ್ಟೆ ಎಸೆಯಬೇಡಿ – ಪ್ರಹ್ಲಾದ್‌ ಜೋಶಿ‌

    ಈ ಘಟನೆಯನ್ನು ನ್ಯೂಯಾರ್ಕ್ ಸ್ಟೇಟ್ ಅಸೆಂಬ್ಲಿ ಸದಸ್ಯೆ ಜೆನ್ನಿಫರ್ ರಾಜ್‍ಕುಮಾರ್ ಖಂಡಿಸಿದ್ದು, ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸಿ, ಕಾನೂನುಬದ್ಧವಾಗಿ ಪೂರ್ಣ ಪ್ರಮಾಣದಲ್ಲಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ತುಳಸಿ ಮಂದಿರದಲ್ಲಿರುವ ಗಾಂಧಿ ಪ್ರತಿಮೆಯನ್ನು ಎರಡನೇ ಬಾರಿ ಧ್ವಂಸಗೊಳಿಸಲಾಗಿದ್ದು, ಈ ಬಾರಿ ಸಂಪೂರ್ಣವಾಗಿ ಪ್ರತಿಮೆ ಧ್ವಂಸಗೊಂಡಿದೆ. ಇದನ್ನೂ ಓದಿ: ಫಿನ್‌ಲ್ಯಾಂಡ್ ಪ್ರಧಾನಿಯ ಖಾಸಗಿ ವೀಡಿಯೋ ಲೀಕ್ – ಮುಚ್ಚಿಡಲು ಏನೂ ಇಲ್ಲವೆಂದ ಮರಿನ್

    Live Tv
    [brid partner=56869869 player=32851 video=960834 autoplay=true]

  • ಕಿಡಿಗೇಡಿಗಳಿಂದ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಪ್ರತಿಮೆ ಧ್ವಂಸ

    ಕಿಡಿಗೇಡಿಗಳಿಂದ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಪ್ರತಿಮೆ ಧ್ವಂಸ

    ಭೋಪಾಲ್: ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿರುವ ಘಟನೆ ಮಧ್ಯಪ್ರದೇಶದ ಜಬುವಾ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲಾ ಕೇಂದ್ರದಿಂದ 60 ಕಿ.ಮೀ ದೂರದಲ್ಲಿರುವ ತಾಂಡ್ಲಾ ಪಟ್ಟಣದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಈ ಕುರಿತಂತೆ ಪ್ರತಿಕ್ರಿಯಿಸಿದ ತಾಂಡ್ಲಾ ನಗರ ಪರಿಷತ್ತಿನ ಮುಖ್ಯ ಮುನ್ಸಿಪಲ್ ಅಧಿಕಾರಿ ಭರತ್ ಸಿಂಗ್ ಟ್ಯಾಂಕ್ ಅವರು, ಪ್ರಿಮೆಯ ಸಣ್ಣ ಭಾಗವನ್ನು ಹಾನಿ ಮಾಡಲಾಗಿದೆ. ಚಂದ್ರಶೇಖರ್ ಆಜಾದ್ ಅವರು ಹಿಡಿದುಕೊಂಡಿದ್ದ ಪಿಸ್ತೂಲಿನ ಭಾಗವನ್ನು ಧ್ವಂಸಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪೊಲೀಸರು ರಾತ್ರಿ ಹೊತ್ತು ಗಸ್ತು ತಿರುಗುತ್ತಿದ್ದ ವೇಳೆ ಪ್ರತಿಮೆಗೆ ಹಾನಿಯಾಗಿರುವುದನ್ನು ಗಮನಿಸಿದ್ದಾರೆ. ಇದೀಗ ಸಿಸಿಟಿವಿ ದೃಶ್ಯಗಳ ಮೂಲಕ ದುಷ್ಕರ್ಮಿಗಳನ್ನು ಗುರುತಿಸಲಾಗುತ್ತದೆ ಎಂದು ಸ್ಥಳೀಯ ಪೊಲೀಸ್ ಠಾಣೆ ಪ್ರಭಾರಿ ಕೌಶಲ್ಯ ಚೌಹಾಣ್ ಹೇಳಿದ್ದಾರೆ. ಇದನ್ನೂ ಓದಿ: ನೋ ಪಾರ್ಕಿಂಗ್ ಹಾವಳಿ ತಪ್ಪಿಸಲು ವ್ಹೀಲಿಂಗ್ ಕ್ಲಾಂಪ್ ಮೊರೆ- ಸ್ಥಳದಲ್ಲೇ ದಂಡ ವಸೂಲಿಗೆ ಪ್ಲಾನ್!

    ಈ ವಿಚಾರವಾಗಿ ಸ್ಥಳೀಯ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಚಂದ್ರಶೇಖರ್ ಆಜಾದ್ ಅವರ ಪ್ರತಿಮೆಯನ್ನು 2017ರಲ್ಲಿ ಅನಾವರಣಗೊಳಿಸಲಾಗಿದೆ. ಇದನ್ನೂ ಓದಿ: ರಾಜ್ಯಾದ್ಯಂತ ವರುಣನ ಅಬ್ಬರಕ್ಕೆ 11 ಜೀವಗಳು ಬಲಿ – ಕರಾವಳಿ, ಮಲೆನಾಡಿನಲ್ಲಿ ರೆಡ್ ಅಲರ್ಟ್

    Live Tv
    [brid partner=56869869 player=32851 video=960834 autoplay=true]

  • ಹೊಸಪೇಟೆಯಲ್ಲಿ ಪುನೀತ್ ಪುತ್ಥಳಿ ಅನಾವರಣಕ್ಕೆ ಕ್ಷಣಗಣನೆ

    ಹೊಸಪೇಟೆಯಲ್ಲಿ ಪುನೀತ್ ಪುತ್ಥಳಿ ಅನಾವರಣಕ್ಕೆ ಕ್ಷಣಗಣನೆ

    ವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ 7 ತಿಂಗಳು ಕಳೆದರು. ಅಭಿಮಾನಿಗಳಿಗೆ ಅಪ್ಪು ನೆನಪು ಮಾಸಿಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ಪುನೀತ್ ಆರಾಧನೆ ಮಾಡುತ್ತಲೇ ಇರುತ್ತಾರೆ. ಈಗ ವಿಜಯನಗರದ ಹೊಸಪೇಟೆಯಲ್ಲಿ ಪುನೀತ್ ರಾಜ್‌ಕುಮಾರ್ ಪ್ರತಿಮೆ ಅನಾವರಣಕ್ಕೆ ವೇದಿಕೆ ಸಜ್ಜಾಗಿದೆ.

    ವಿಜಯನಗರದ ಹೊಸಪೇಟೆಯಲ್ಲಿ ಅಪ್ಪು ಪುತ್ಥಳಿ ಅನಾವರಣಕ್ಕೆ ವೇದಿಕೆ ಸಜ್ಜಾಗಿದೆ. ಇದೀಗ ಪುನೀತ್ ಪುತ್ಥಳಿ ಉದ್ಘಾಟನೆ ನಡೆಯಲಿದ್ದು, ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪುನೀತ್ ರಾಜ್‌ಕುಮಾರ್ ಪ್ರತಿಮೆ ಅನಾವರಣ ಹಿನ್ನೆಲೆ `ರಾಜಕುಮಾರ’ ಮತ್ತು `ಯುವರತ್ನ’ ಚಿತ್ರದ ನಿರ್ದೇಶಕ ಸಂತೋಷ ಆನಂದ್ ರಾಮ್ ಜ್ಯೋತಿಗೆ ಚಾಲನೆ ನೀಡಿದ್ದಾರೆ. ಇದನ್ನೂ ಓದಿ: ಪುಟ್ಟ ಅಭಿಮಾನಿಯ ಬರ್ತಡೇಗೆ ಹಣೆಗೆ ಮುತ್ತಿಟ್ಟು ಶುಭ ಕೋರಿದ ಸಲ್ಮಾನ್ ಖಾನ್

    ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಂಚಿನ ಪ್ರತಿಮೆ ಅನಾವರಣಕ್ಕೆ ಕ್ಷಣಗಣನೆ‌ ಶುರುವಾಗಿದೆ. ಹೊಸಪೇಟೆಯ ಪುನೀತ ರಾಜಕುಮಾರ್ ಸರ್ಕಲ್ ನಲ್ಲಿ ಅನಾವರಣಗೊಳ್ಳಲಿರುವ 7.5 ಅಡಿ ಎತ್ತರದ ಕಂಚಿನ ಪುತ್ಥಳಿ ನಟ ರಾಘವೇಂದ್ರ ರಾಜಕುಮಾರ್ ಅನಾವರಣ ಮಾಡಲಿದ್ದಾರೆ. ಇನ್ನು ಪ್ರತಿಮೆ ಅನಾವರಣಕ್ಕೂ ಮುನ್ನ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಲಿದೆ. ಅಪ್ಪು ಪ್ರತಿಮೆ ಅನಾವರಣಕ್ಕೆ ಸಾವಿರಾರು ಜನರು ಸಾಕ್ಷಿಯಾಗಿದ್ದಾರೆ. ಪುನೀತ ರಾಜಕುಮಾರ್ ಭಾವಚಿತ್ರ ಹಿಡಿದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

  • ಮೈಸೂರಿನಲ್ಲೊಂದು ಅಪರೂಪ- ಅಗಲಿದ ತಂದೆಯ ಸಿಲಿಕಾನ್ ಪ್ರತಿಮೆ ಮುಂದೆ ಮಗನ ವಿವಾಹ

    ಮೈಸೂರಿನಲ್ಲೊಂದು ಅಪರೂಪ- ಅಗಲಿದ ತಂದೆಯ ಸಿಲಿಕಾನ್ ಪ್ರತಿಮೆ ಮುಂದೆ ಮಗನ ವಿವಾಹ

    ಮೈಸೂರು: ಬೆಳೆದ ಮಕ್ಕಳಿರುವ ಮನೆಯಲ್ಲಿ ತಂದೆ-ತಾಯಿಯಂದಿರ ಆಸೆ ಒಂದೇ ಆಗಿರುತ್ತೆ. ನಮ್ಮ ಕಣ್ಣೆದುರೇ ಮಕ್ಕಳಿಗೆ ನಾಲ್ಕು ಅಕ್ಷತೆ ಕಾಳು ಹಾಕಿ ಆಶೀರ್ವಾದ ಮಾಡಬೇಕು ಅಂತ. ಆದರೆ ಎಲ್ಲದಕ್ಕೂ ವಿಧಿ ಬಿಡಲ್ಲ. ಅದೇ ರೀತಿ ಮೈಸೂರಿನಲ್ಲೂ ಮಗನ ಮದುವೆ ಆಸೆ ಕಂಡಿದ್ದ ಅಪ್ಪ ಕೊರೊನಾದಿಂದ ಸಾವನ್ನಪ್ಪಿದ್ರು. ಇದರಿಂದ ಮನನೊಂದಿದ್ದ ಮಗ ತಂದೆ ಇಲ್ಲದೇ ತಾನು ಮದ್ವೆ ಆಗಲ್ಲ ಎಂದು ಪಣ ತೊಟ್ಟಿದ್ದ. ಅದೇ ರೀತಿ ಈಗ ಅಪ್ಪನ ಸಿಲಿಕಾನ್ ಪ್ರತಿಮೆ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಮೈಸೂರು ಜಿಲ್ಲೆ ನಂಜನಗೂಡನಲ್ಲಿ ಚಿಕ್ಕಮಗಳೂರು ಮೂಲದ ಡಾ.ಯತೀಶ್ ಹಾಗೂ ಚಾಮರಾಜನಗರ ಮೂಲದ ಡಾ.ಅಪೂರ್ವ ದಂಪತಿ ಆಗಿದ್ದಾರೆ. ವರ ಯತೀಶ್ ತಂದೆ ರಮೇಶ್, ಕೋವಿಡ್‍ನಿಂದ ಮೃತಪಟ್ಟಿದ್ರು. ತಂದೆ ಇಲ್ಲದೇ ಮದುವೆ ಮಾಡಿಕೊಳ್ಳಲು ಇಷ್ಟ ಇರದ ಡಾ.ಯತೀಶ್ ತನ್ನ ಸಹೋದರನ ಜೊತೆಗೂಡಿ ತಂದೆಯ ಪ್ರತಿಮೆಯನ್ನು ಸಿಲಿಕಾನ್‍ನಲ್ಲಿ ಮಾಡಿಸಲು ನಿರ್ಧರಿಸಿದ್ರು. ಅದರಂತೆ ತಂದೆ ಸಿಲಿಕಾನ್ ಪ್ರತಿಮೆ ಮಾಡಿಸಿ ವಿವಾಹವಾಗಿದ್ದಾರೆ. ಅಲ್ಲದೇ ಎಲ್ಲರ ಮೆಚ್ಚುಗೆಗೂ ಪಾತ್ರ ರಾಗಿದ್ದಾರೆ. ಇದನ್ನೂ ಓದಿ: ರಸ್ತೆ ಗುಂಡಿಗೆ ಬಿದ್ದ ಕಿರುತೆರೆ ಕಲಾವಿದೆ – N.R ಕಾಲೋನಿ ಬಳಿ ನಟಿ ಸುನೇತ್ರಾ ಸ್ಕೂಟರ್ ಅಪಘಾತ

    ತಂದೆಯ ಸಿಲಿಕಾನ್ ಪ್ರತಿಮೆಯ ಪಕ್ಕದಲ್ಲೆ ತಾಯಿಯನ್ನು ಕೂರಿಸಿ ಪೋಷಕರ ಸಮ್ಮುಖದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರತಿಮೆ ನೋಡಿದ ಸಂಬಂಧಿಕರು ಪ್ರತಿಮೆ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿ ಕೊಂಡು ಮಕ್ಕಳ ಈ ಕಾರ್ಯಕ್ಕೆ ಶಹಭಾಷ್ ಎಂದ್ರು.

    ಈ ಪ್ರತಿಮೆ ಬಹು ವರ್ಷದ ಕಾಲ ಕಾಪಾಡಿಕೊಳ್ಳಬಹುದು. ಈ ಪ್ರತಿಮೆಯ ಬಟ್ಟೆಯನ್ನೂ ಸಹ ಬದಲಿಸಬಹುದು. ಜೊತೆಗೆ ಮೆಂಟೈನೆನ್ಸ್ ಕೂಡ ಬಹಳ ಸುಲಭ. ಈ ಮದುವೆಯ ನಂತರ ಪ್ರತಿಮೆಯನ್ನು ಮನೆಯ ಹಾಲ್‍ನಲ್ಲಿ ಶಾಶ್ವತ ವಾಗಿ ಇಡಲು ಸಹೋದರರು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಸೆಲ್ಫಿ ತೆಗೆಯಲು ಹೋಗಿ ನೀರು ಪಾಲಾದ ಗೃಹಿಣಿ

  • ಶ್ರೀಗಂಧದಿಂದ ಅಪ್ಪು ಪ್ರತಿಮೆ ಮಾಡಿಸಿದ ಅಭಿಮಾನಿ

    ಶ್ರೀಗಂಧದಿಂದ ಅಪ್ಪು ಪ್ರತಿಮೆ ಮಾಡಿಸಿದ ಅಭಿಮಾನಿ

    ಭಿಮಾನಿಯೊಬ್ಬರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಶ್ರೀಗಂಧದಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪ್ರತಿಮೆ ಮಾಡಿಸಿ, ಅಪ್ಪು ಅವರ ಪತ್ನಿಗೆ ನೆನಪಿನ ಕಾಣಿಕೆಯಾಗಿ ನೀಡಲು ಮುಂದಾಗಿದ್ದಾರೆ.

    ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಸ್ವರೂಪ್, ಪುನೀತ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಈ ಹಿನ್ನೆಲೆ ಶ್ರೀಗಂಧದಿಂದ ಅಪ್ಪುವಿನ ಪ್ರತಿಮೆಯನ್ನು ಮಾಡಿಸಿ, ಜೂನ್ ತಿಂಗಳಿನಲ್ಲಿ ತಮ್ಮ ಹುಟ್ಟುಹಬ್ಬದ ಅಂಗವಾಗಿ ಪ್ರತಿಮೆಯನ್ನು ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ಕೊಡುಗೆಯಾಗಿ ನೀಡಲು ನಿರ್ಧರಿಸಿದ್ದಾರೆ.

    ಈ ಪ್ರತಿಮೆ ಸುಮಾರು ಒಂದುವರೆ ಲಕ್ಷ ರೂ. ವೆಚ್ಚದಲ್ಲಿ ಸಿದ್ಧವಾಗಿದೆ. ಅಪ್ಪು ಪತ್ನಿ ಅಶ್ವಿನಿ ಅವರಿಗೆ ಈ ಪ್ರತಿಮೆ ನೀಡುವ ಮುನ್ನ ಇಂದು ತಾವು ನಂಬಿರುವ ಮಡಿಕೇರಿಯ ರಾಜರಾಜೇಶ್ವರಿ ದೇವಾಲಯದಲ್ಲಿ ಪ್ರತಿಮೆಗೆ ವಿಶೇಷ ಪೂಜೆ ಮಾಡಿಸಿದ್ದಾರೆ.

    ಪೂಜೆಗೆ ಸಂತೋಷ್ ಆರ್ಯ, ಪ್ರದೀಪ್, ಪುರುಷೋತ್ತಮ್ ಯೋಗೇಶ್ ಸಂಗಡಿಗರು ಸಾಥ್ ನೀಡಿದ್ದರು. ಅಲ್ಲದೇ ಮೂರು ತಿಂಗಳಿನಿಂದ ಪ್ರತಿಮೆ ಮಾಡಿಸಲು ಪ್ರಯತ್ನ ನಡೆಸಿದ್ದರು. ಆದರೆ ಈ ಮೊದಲು ಎರಡು ಪ್ರತಿಮೆಗಳನ್ನು ಮಾಡಿಸಿ ಅವು ಅಪ್ಪು ಮುಖಭಾವ ಹೋಲಿಕೆಯಾಗದ ಕಾರಣ ಅವುಗಳನ್ನು ಕೈ ಬಿಟ್ಟು ನಾಲ್ಕನೇ ಬಾರಿಗೆ ಅಪ್ಪು ಪತ್ರಿಮೆ ಸಕ್ಸಸ್ ಆಗಿದೆ.

     

  • ಐತಿಹಾಸಿಕ ಶಿವ, ಗಣೇಶನ ಮೂರ್ತಿಗಳನ್ನು ವಿರೂಪಗೊಳಿಸಿದ ಕಿಡಿಗೇಡಿಗಳು

    ಐತಿಹಾಸಿಕ ಶಿವ, ಗಣೇಶನ ಮೂರ್ತಿಗಳನ್ನು ವಿರೂಪಗೊಳಿಸಿದ ಕಿಡಿಗೇಡಿಗಳು

    ಬೀದರ್: ಐತಿಹಾಸಿಕ ಶಿವನ ಹಾಗೂ ಗಣೇಶನ ಮೂರ್ತಿಗಳನ್ನು ಕೆಲ ಕಿಡಿಗೇಡಿಗಳು ವಿರೂಪಗೊಳಿಸಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪೂರ್ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

    ಗ್ರಾಮದಲ್ಲಿರುವ ಚಾಳಕಾದೇವಿ ಬೆಟ್ಟದಲ್ಲಿರುವ ಶಿವನ ಮೂರ್ತಿಯ ಜೊತೆಗೆ ಗಣೇಶನ ಮೂರ್ತಿಯನ್ನೂ ವಿರೂಪಗೊಳಿಸಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಶ್ರೀ ಮಹಾನ್ ಸಿದ್ಧಿ ಪುರುಷ ಸಿದ್ದಾರೂಢರ ಜನ್ಮ ಸ್ಥಳದಲ್ಲಿ ಈ ಘಟನೆ ನಡೆದಿದೆ. ಶಿವನ ಹಾಗೂ ಗಣೇಶನ ಮೂರ್ತಿಗಳು ವಿರೂಪಗೊಳಿಸಿದ್ದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶಗೊಂಡಿದ್ದಾರೆ. ಇದನ್ನೂ ಓದಿ: ಶಿಕ್ಷಕರ ಒತ್ತಾಯಕ್ಕೆ 100 ಬಸ್ಕಿ ಹೊಡೆದ 7 ಮಂದಿ ವಿದ್ಯಾರ್ಥಿನಿಯರು – ಆಸ್ಪತ್ರೆಗೆ ದಾಖಲು

    POLICE JEEP

    ಐತಿಹಾಸಿಕ ಮೂರ್ತಿಗಳನ್ನು ವಿರೂಪಗೊಳಿಸಿದ ಕಿಡಿಗೇಡಿಗಳನ್ನು ಈ ಕೂಡಲೇ ಬಂಧಿಸಬೇಕು ಎಂದು ಗ್ರಾಮಸ್ಥರು ಪೊಲೀಸರಿಗೆ ಒತ್ತಾಯ ಮಾಡಿದ್ದಾರೆ. ಖಟಕ್ ಚಿಂಚೋಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಖಟಕ್ ಚಿಂಚೋಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ನೂತನ ಪ್ರಧಾನಿಗೆ ಮೋದಿ ಅಭಿನಂದನೆ

  • ಶಾಸ್ತ್ರದ ಪ್ರಕಾರ ವಿಶ್ವಕರ್ಮ ಜನಾಂಗದವರೇ ದೇವರ ಪ್ರತಿಮೆ ಕೆತ್ತಬೇಕು: ಡಾ. ಜ್ಞಾನನಂದ

    ಶಾಸ್ತ್ರದ ಪ್ರಕಾರ ವಿಶ್ವಕರ್ಮ ಜನಾಂಗದವರೇ ದೇವರ ಪ್ರತಿಮೆ ಕೆತ್ತಬೇಕು: ಡಾ. ಜ್ಞಾನನಂದ

    ಬೆಂಗಳೂರು: ಶಾಸ್ತ್ರದ ಪ್ರಕಾರ ವಿಶ್ವಕರ್ಮ ಜನಾಂಗದವರೇ ದೇವರ ಪ್ರತಿಮೆ ಕೆತ್ತಬೇಕು ಎಂದು ಸಾಂಪ್ರದಾಯಿಕ ಶಿಲ್ಪ ಕಲಾ ಕೇಂದ್ರ ಪ್ರಾಧ್ಯಾಪಕ ಡಾ. ಜ್ಞಾನನಂದ ಹೇಳಿದ್ದಾರೆ.

    ರಾಜ್ಯದಲ್ಲಿ ಧರ್ಮ ದಂಗಲ್ ಜೋರಾಗಿ ಸದ್ದು ಮಾಡುತ್ತಿದೆ. ಮುಸ್ಲಿಮರು ತಯಾರಿಸಿದ ವಿಗ್ರಹವನ್ನು ಹಿಂದೂಗಳು ತೆಗೆದುಕೊಳ್ಳಬಾರದು ಅಂತಾ ಮೇಲುಕೋಟೆಯ ಸ್ಥಾನಿಕರ ಹೇಳಿಕೆ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ. ಇದಕ್ಕೆ ಪರ ವಿರೋಧ ಚರ್ಚೆಗಳು ಜೋರಾಗಿದೆ. ಇದನ್ನೂ ಓದಿ: ಮುಸ್ಲಿಮರಿಂದ ಕೆತ್ತಿದ ಮೂರ್ತಿ ಪೂಜೆಗೆ ಯೋಗ್ಯವಲ್ಲ: ಆಂದೋಲಾ ಶ್ರೀ

    ಈ ಮಧ್ಯೆ ಬೆಂಗಳೂರಿನ ಮಲತ್ತಹಳ್ಳಿಯಲ್ಲಿರುವ ಸಾಂಪ್ರಾದಾಯಿಕ ಶಿಲ್ಪ ಗುರುಕುಲದ ಪ್ರಾಧ್ಯಪಕ ಡಾ ಜ್ಞಾನನಂದ ಶಾಸ್ತ್ರ ದ ಪ್ರಕಾರ ವಿಶ್ವ ಕರ್ಮರೇ ವಿಗ್ರಹ ಕೆತ್ತನೆ ಮಾಡಬೇಕು ಅಂತಾ ಹೇಳುತ್ತೆ. ಆದರೆ ಈಗ ಎಲ್ಲವೂ ಬದಲಾಗಿದೆ. ವಿಗ್ರಹ ಕೆತ್ತನೆ ವ್ಯವಹಾರಿಕ ಮಾತ್ರವಲ್ಲ. ಅದೊಂದು ಅನುಷ್ಠಾನದ ರೀತಿ ಮಾಡಬೇಕು ಎಂದು ವಿವರಿಸಿದರು.  

    48 ದಿನಗಳ ಕಾಲ ನಿರಂತರ ಆಯಾಯ ದೇವರ ಶ್ಲೋಕ ಪಠಣೆ, ಸಂಧ್ಯಾವಂದನೆಯನ್ನು ಮಾಡಬೇಕು ಅಂತಾ ಹೇಳಿದ್ರು. ಆದ್ರೇ ಆದುನಿಕ ಕಾಲದಲ್ಲಿ ಇದೆಲ್ಲವೂ ಮಾಯವಾಗಿದೆ ಅಂತಾ ಅವರು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳು ನಡೆಯುತ್ತಿವೆ, ಇದಕ್ಕೆ ಸರ್ಕಾರ ಹೊಣೆ ಅಲ್ಲ: ಮುನಿರತ್ನ