Tag: station

  • ಲಾಕಪ್‍ನಲ್ಲಿ ಮೊದಲ ರಾತ್ರಿಯನ್ನ ಕಳೆದ ನವದಂಪತಿ

    ಲಾಕಪ್‍ನಲ್ಲಿ ಮೊದಲ ರಾತ್ರಿಯನ್ನ ಕಳೆದ ನವದಂಪತಿ

    ಗಾಂಧಿನಗರ: ನವದಂಪತಿ ಮದುವೆಯ ಮಧುರ ಮೊದಲ ರಾತ್ರಿಯನ್ನು ಲಾಕಪ್‍ನಲ್ಲಿ ಕಳೆದಿರುವ ಘಟನೆ ಗುಜರಾತ್‍ನ ವಲ್ಸಾದ್ ನಗರದಲ್ಲಿ ನಡೆದಿದೆ.

    ಮದುವೆ ಮುಗಿಸಿಕೊಂಡು ನವದಂಪತಿ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಅವರ ಜೊತೆ ಕುಟುಂಬದ ಇತರ ಸದಸ್ಯರೂ ಇದ್ದರು. ಆದರೆ ಮಾರ್ಗಮಧ್ಯೆ ಪೊಲೀಸರು ಅವರ ಕಾರನ್ನು ನಿಲ್ಲಿಸಿದ್ದಾರೆ. ಕೊರೊನಾ ಮಾರ್ಗಸೂಚಿ ಪಾಲನೆ ಕುರಿತಾಗಿ ತಪಾಸಣೆ ನಡೆಸಲಾಗಿದೆ. ಕೊರೊನಾ ನಿಯಮ ಉಲ್ಲಂಘನೆ ಗಮನಕ್ಕೆ ಬಂದಿದ್ದು, ಕೊರೊನಾ ನಿಯಮಾವಳಿ ಪಾಲಿಸದ ಕಾರಣ ಪೊಲೀಸರು ನವದಂಪತಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಹೆದ್ದಾರಿಯನ್ನು ಅಡವಿಟ್ಟು ಸಾಲ ಪಡೆದ ಪಾಕಿಸ್ತಾನ

    ದಂಪತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಾಕಪ್‍ಗೆ ಹಾಕಿದ್ದಾರೆ. ಹೀಗಾಗಿ ಮದುವೆಯ ಮೊದಲ ರಾತ್ರಿಯನ್ನು ಪತಿ-ಪತ್ನಿ ಇಬ್ಬರೂ ಲಾಕಪ್‍ನಲ್ಲಿ ಕಳೆಯಬೇಕಾಯಿತು. ಮರುದಿನ ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ. ಪೊಲಿಸರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಕಾರು ತಪಾಸಣೆ ವೇಳೆ ವರ, ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ್ದಲ್ಲದೆ ತಮ್ಮೊಡನೆ ಅನುಚಿತವಾಗಿ ನಡೆದುಕೊಂಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಗಂಡನ ಕಿರುಕುಳ ತಾಳಲಾರದೇ ಗರ್ಭಿಣಿ ಆತ್ಮಹತ್ಯೆ

  • ಠಾಣೆಗೆ ನುಗ್ಗಿ ಪೊಲೀಸರನ್ನೇ ಹೆದರಿಸಿದ ಮಂಗ!

    ಠಾಣೆಗೆ ನುಗ್ಗಿ ಪೊಲೀಸರನ್ನೇ ಹೆದರಿಸಿದ ಮಂಗ!

    ರಾಯಚೂರು: ಮಂಗವೊಂದು ಪೊಲೀಸ್‌ ಠಾಣೆಗೆ ನುಗ್ಗಿ ಅಧಿಕಾರಿಗಳನ್ನೆ ಹದರಿಸಿರಿಸುತ್ತಿರುವ ಘಟನೆಯೊಂದು ನಡೆದಿದೆ.

    ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆಗೆ ಮಂಗವೊಂದರ ಕಾಟ ಹೆಚ್ಚಾಗಿದ್ದು, ಪೊಲೀಸ್ ಸಿಬ್ಬಂದಿ ಕಪಿ ಕಾಟಕ್ಕೆ ಬೇಸತ್ತಿದ್ದಾರೆ. ಪೊಲೀಸರು ಕುಳಿತುಕೊಳ್ಳೋ ಜಾಗವನ್ನೇ ಆಕ್ರಮಿಸಿಕೊಂಡು ವಾನರ ಕೀಟಲೇ ಮಾಡಿದೆ. ಇದನ್ನೂ ಓದಿ:   ಉದ್ದೇಶಪೂರ್ವಕವಾಗಿಯೇ ಕೋವಿಡ್ ಸೋಂಕು ತಗುಲಿಸಿಕೊಂಡು ಗಾಯಕಿ ನಿಧನ

    ಕಳೆದ 5 ದಿನಗಳಿಂದ ಪೊಲೀಸರಿಗೆ ಈ ಮಂಗ ಕಾಟ ಕೊಡುತ್ತಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಪೊಲೀಸರು ಭಯಪಡುತ್ತಿದ್ದಾರೆ. ಹಗಲು ರಾತ್ರಿಯನ್ನದೆ ಠಾಣೆಗೆ ನುಗ್ಗಿ ತೊಂದರೆ ಕೊಡುತ್ತಿದೆ. ಇದನ್ನೂ ಓದಿ:  ಪತಿ ಕೊಂದು ಕತ್ತರಿಸಿದ ತಲೆ ಠಾಣೆಗೆ ತಂದು ಶರಣಾದಳು

    ಮಂಗನನ್ನ ಹಿಡಿಯುವಂತೆ ಪೊಲೀಸರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ ಮಂಗ ಯಾರ ಕೈಗೂ ಸಿಗದೇ ಎಲ್ಲರನ್ನೂ ಆಟವಾಡಿಸುತ್ತಿದೆ. ಇದನ್ನೂ ಓದಿ:   40 ಮಂದಿ ಪ್ರಯಾಣಿಕರಿದ್ದ BMTC ಬಸ್ ಧಗ ಧಗ

  • ಪತಿ ಕೊಂದು ಕತ್ತರಿಸಿದ ತಲೆ ಠಾಣೆಗೆ ತಂದು ಶರಣಾದಳು

    ಪತಿ ಕೊಂದು ಕತ್ತರಿಸಿದ ತಲೆ ಠಾಣೆಗೆ ತಂದು ಶರಣಾದಳು

    ಹೈದರಾಬಾದ್: ಪತಿಯನ್ನು ಕೊಂದು, ತಲೆ ಕತ್ತರಿಸಿ ಪೊಲೀಸ್ ಠಾಣೆಗೆ ಮಹಿಳೆ ತಂದಿರುವ ಘಟನೆ ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ತಿರುಪತಿ ಬಳಿಯ ರೇಣಿಗುಂಟದಲ್ಲಿ ನಡೆದಿದೆ.

    POLICE JEEP

    ರವಿಚಂದ್ರನ್ (53) ಮೃತನಾಗಿದ್ದಾನೆ. ರವಿಚಂದ್ರನ್ ಗುಂಟೂರು ಜಿಲ್ಲೆಯ ನರಸರಾವ್‍ಪೇಟೆಯ ಮೂಲದವರು. ವಸುಂಧರಾ ಪತಿಯನ್ನು ಕೊಂದ ಆರೋಪಿ ಪತ್ನಿಯಾಗಿದ್ದಾಳೆ. ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಿ ಠಾಣೆಗೆ ಬಂದು ಶರಣಾಗಿದ್ದಾಳೆ. ಇದನ್ನೂ ಓದಿ: 1200 ಕೋಟಿ ರೂ. ವೆಚ್ಚದ ಶಿರಾಡಿ ಘಾಟ್ ಚತುಷ್ಪಥ ರಸ್ತೆಗೆ ಕೇಂದ್ರ ಅನುಮೋದನೆ

    ವಸುಂಧರಾ ತಮ್ಮ ಮನೆಯಲ್ಲಿ ನಡೆದ ಜಗಳದಲ್ಲಿ ಪತಿ ರವಿಚಂದ್ರನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಬಳಿಕ ಆತನ ತಲೆಯನ್ನು ಕತ್ತರಿಸಿ ಬ್ಯಾಗ್‍ನಲ್ಲಿ ಹಾಕಿಕೊಂಡು ಠಾಣೆಗೆ ಬಂದು ಶರಣಾಗಿದ್ದಾಳೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಅಲ್ಲಿಗೆ ಕರೆತಂದು ಸಾಕ್ಷ್ಯ ಸಂಗ್ರಹಿಸಿದ್ದಾರೆ. ಮೃತದೇಹವನ್ನು ಶವ ಪರೀಕ್ಷೆಗಾಗಿ ಎಸ್‍ವಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.

    ದಂಪತಿ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಗುರುವಾರ ಬೆಳಗ್ಗೆ ಯಾವುದೋ ವಿಚಾರಕ್ಕೆ ದಂಪತಿ ನಡುವೆ ಮತ್ತೆ ಜಗಳ ನಡೆದಿದ್ದು, ಆಕ್ರೋಶಗೊಂಡ ಮಹಿಳೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಅಷ್ಟಕ್ಕೆ ಸುಮ್ಮನಾಗದೆ ಆತನ ತಲೆಯನ್ನು ಕತ್ತರಿಸಿ ಠಾಣೆಗೆ ಹೊತ್ತೊಯ್ದಿದ್ದಾಳೆ. ದಂಪತಿಗೆ 20 ವರ್ಷದ ಮಗನಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

  • ಮನೆ ಮಾಲೀಕರ ದುರಾಸೆ – ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಕುಟುಂಬಗಳು

    ಮನೆ ಮಾಲೀಕರ ದುರಾಸೆ – ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಕುಟುಂಬಗಳು

    ಬೆಂಗಳೂರು: ಹಣದಾಸೆಗೆ ಬಡಾವಣೆ ಮಾಡಿದ ಮಾಲೀಕರ ದುರುದ್ದೇಶಕ್ಕೆ ನಗರದ ಕುಟುಂಬಗಳು ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಿದೆ.

    ಒಂದು ಕಡೆ ರಸ್ತೆಯಲ್ಲಿ ನಿಂತು ಮನೆಕಡೆ ನೋಡಿ ನೋವು ಪಡುತ್ತಿರುವ ಮನೆ ಕಟ್ಟಿದ ಮಾಲೀಕರು. ಇನ್ನೊಂದೆಡೆ ಇತ್ತೀಚೆಗೆ ಮಹಾಮಳೆಗೆ ಜಮೀನು ಮಾಲೀಕರು ಮಾಡಿದ ತಪ್ಪಿನ ದುರುದ್ದೇಶಕ್ಕೆ ಕುಸಿಯುವ ಹಂತದಲ್ಲಿರುವ ಎರಡು ಮನೆಗಳನ್ನು ನೋಡಿ ಸಂಕಟ ಪಟ್ಟುಕೊಳ್ಳುತ್ತಿರುವ ಕುಟುಂಬಗಳು ಒಂದು ಕಡೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಮನಬಂದಂತೆ ಕಾರ್ಮಿಕರ ಮೇಲೆ ಗುಂಡಿನ ದಾಳಿ – ಇಬ್ಬರು ಬಲಿ

    ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಸೌಂದರ್ಯ ಬಡಾವಣೆಯಲ್ಲಿ ಇತ್ತೀಚೆಗೆ ಸುರಿದ ಮಹಾಮಳೆಗೆ ಮನೆಯ ಪಕ್ಕದಲ್ಲಿ ಕಟ್ಟಿದ್ದ ಕಂಪೌಂಡ್ ಕುಸಿದು ಮನೆ ಬೀಳುವ ಹಂತಕ್ಕೆ ತಲುಪಿದೆ. ಕಷ್ಟ ಪಟ್ಟು ಸಾಲಸೋಲ ಮಾಡಿ ಗೂಡು ಕಟ್ಟಿದ್ದ ಕುಟುಂಬ ಇಂದು ಕಣ್ಣೀರಿನಲ್ಲಿ ಜೀವನ ನಡೆಸುವಂತಾಗಿದೆ.

    ನಿವೇಶನ ಖರೀದಿ ಮಾಡಿದ ಕುಟುಂಬ ಇಂದು ಅಕ್ಕಪಕ್ಕದ ಮನೆಯಲ್ಲಿ ವಾಸಮಾಡುವ ಸ್ಥಿತಿಗೆ ಬಂದಿದೆ. ಹಣಕ್ಕಾಗಿ ಬಡವರಿಗೆ ಜಮೀನನ್ನ ಸೈಟ್ ಆಗಿ ಪರಿವರ್ತನೆ ಮಾಡಿದ ವ್ಯಕ್ತಿಗಳಾದ ಗುಂಡಪ್ಪ, ನಾಗರಾಜು, ಶ್ರೀನಿವಾಸ್ ಸಂಕಷ್ಟದಲ್ಲಿರುವ ಜನರ ನೆರವಿಗೆ ಬಾರದೇ ಸುಮ್ಮನಾಗಿದ್ದಾರೆ. ಇದನ್ನೂ ಓದಿ: ಸಿಲಿಂಡರ್ ಸ್ಪೋಟ – ಮನೆ ಬೆಂಕಿಗಾಹುತಿ

    ಮನೆ ಪಕ್ಕದ ಸೈಟ್ ನಲ್ಲಿ ಮಣ್ಣು ತೆರವು ಮಾಡಿದ ಪರಿಣಾಮ ಇಂದು ನಾವು ನೋವಿನಲ್ಲಿ ಕಾಲ ಕಳೆಯುವಂತೆ ಆಗಿದೆ ಎಂದು ಕುಟುಂಬಗಳು ನೋವು ತೋಡಿಕೊಂಡಿದ್ದಾರೆ.

  • ನಿಲ್ದಾಣಕ್ಕೆ ಬರುತ್ತಿದ್ದಂತೆ ಹೊತ್ತಿ ಉರಿದ ರೈಲು

    ನಿಲ್ದಾಣಕ್ಕೆ ಬರುತ್ತಿದ್ದಂತೆ ಹೊತ್ತಿ ಉರಿದ ರೈಲು

    ಲಕ್ನೋ: ರೈಲು ನಿಲ್ದಾಣಕ್ಕೆ ಬರುತ್ತಿರುವಾಗಲೇ ಶತಾಬ್ದಿ  ಎಕ್ಸ್‌ಪ್ರೆಸ್ ಪಾರ್ಸಲ್ ಕೋಚ್ ಬೆಂಕಿಯಿಂದ ಧಗಧಗನೆ ಉರಿದಿದೆ.

    ದೆಹಲಿ ಹಾಗೂ ಘಾಜಿಯಾಬಾದ್ ನಡುವೆ ಸಂಚಾರ ನಡೆಸುತ್ತಿದ್ದ ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್ ರೈಲ್ವೆ ಪಾರ್ಸೆಲ್ ಕೋಚ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ರೈಲು ನಿಲ್ದಾಣಕ್ಕೆ ಬರುತ್ತಿರುವಾಗಲೇ ಈ ಅವಘಡ ಉಂಟಾಗಿದೆ.

    ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಸಿಬ್ಬಂದಿ ಕೂಡಲೇ ಅಗ್ನಿಶಾಮಕದಳ ಇಲಾಖೆಗೆ ಮಾಹಿತಿ ಕೊಟ್ಟಿದ್ದಾರೆ. ಕೂಡಲೇ ಬೋಗಿಯನ್ನು ಇತರ ಕೋಚ್‍ಗಳಿಂದ ಬೇರ್ಪಡಿಸಲಾಯಿತ್ತು. ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟಿದ್ದಾರೆ.

  • ಎಗ್ ಬುರ್ಜಿಗಾಗಿ ನಡೆದ ಜಗಳ – ಪೊಲೀಸ್ ಠಾಣೆ ಮೆಟ್ಟಿಲೇರಿದ ದಂಪತಿ

    ಎಗ್ ಬುರ್ಜಿಗಾಗಿ ನಡೆದ ಜಗಳ – ಪೊಲೀಸ್ ಠಾಣೆ ಮೆಟ್ಟಿಲೇರಿದ ದಂಪತಿ

    – ಕಾರಣ ಕೇಳಿ ನಗಲಾರಂಭಿಸಿದ ಪೊಲೀಸರು

    ಮುಂಬೈ: ಎಗ್ ಬುರ್ಜಿಗಾಗಿ ದಂಪತಿ ಮಧ್ಯೆ ನಡೆದಿರುವ ಜಗಳ ಪೊಲೀಸ್ ಠಾಣೆ ಮೆಟ್ಟಲೇರಿರುವ ಘಟನೆ ಮಹಾಷ್ಟ್ರದ ಬುಲ್ಬಾನಾದ ಒಂದು ಗ್ರಾಮದಲ್ಲಿ ನಡೆದಿದೆ.

    ದಂಪತಿ ಮುದ್ದಾದ ಹೆಣ್ಣು ಮಗುವಿನೊಂದಿಗೆ ವಾಸವಾಗಿದ್ದರು. ಒಂದು ದಿನ ಪತಿ 3 ಮೊಟ್ಟೆಯನ್ನು ತಂದು ಎಗ್‍ಬುರ್ಜಿಯನ್ನು ಮಾಡುವಂತೆ ಪತ್ನಿಗೆ ಹೇಳಿದ್ದಾನೆ. ಅಷ್ಟರಲ್ಲಾಗಲೇ ಏನೋ ಕೆಲಸ ನೆನಪಾಗಿ ಹೊರಗೆ ಹೋಗಿ ಬರುತ್ತೇನೆ. ಊಟಕ್ಕೆ ಎಗ್ ಬಿರ್ಜಿಯನ್ನು ಮಾಡಿಡುವಂತೆ ಹೇಳಿ ಹೋಗಿದ್ದಾನೆ.

    ಪತ್ನಿ ಎಗ್ ಬುರ್ಜಿಯನ್ನು ಮಾಡಿಟ್ಟಿದ್ದಾಳೆ. ಆದರೆ ಅಡುಗೆ ಮನೆಯಲ್ಲಿದ್ದ ಎಗ್ ಬುರ್ಜಿಯನ್ನು ನೋಡಿದ ಮಗಳು ಹಸಿವಾಗಿದೆ ಎಂದು ಸಂಪೂರ್ಣ ತಿಂದು ಮುಗಿಸಿದ್ದಾಳೆ. ಪತಿ ಬದಲು ಮಗಳು ತಿಂದಿದ್ದಾಳೆ ಬಿಡು ಎಂದು ಪತ್ನಿ ಸುಮ್ಮನಾಗಿದ್ದಾಳೆ.

    ಪತಿ ಹಸಿವಿನಿಂದ ಮನೆಗೆ ಬಂದಿದ್ದಾನೆ. ಊಟ ಬಡಿಸುವಾಗ ಎಗ್ ಬುರ್ಜಿಯನ್ನು ಹಾಕು ಎಂದು ಹೇಳಿದ್ದಾನೆ. ಆಗ ನಿಮ್ಮ ಮಗಳು ತಿಂದು ಖಾಲಿ ಮಾಡಿದ್ದಾಳೆ ಎಂದು ಹೇಳಿದ್ದಾಳೆ. ಆಗ ಸಿಟ್ಟಿನಿಂದ ಹೆಂಡತಿಯ ಮೇಲೆ ರೇಗಾಡಿದ್ದಾನೆ. ಅವರಿಬ್ಬ ಮಧ್ಯೆ ಎಗ್‍ಬುರ್ಜಿಗಾಗಿ ನಡೆದ ಜಗಳ ಪೊಲೀಸ್ ಠಾಣೆಯ ಮೆಟ್ಟಿಲು ಏರುವವರೆಗೂ ಬಂದಿದೆ.

    ಜಗಳದ ಕಾರಣ ಕೇಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಬಿದ್ದು ಬಿದ್ದು ನಗಲಾರಂಭಿಸಿದ್ದಾರೆ. ನಂತರ ಸಿಬ್ಬಂದಿ ಅಂಗಡಿಗೆ ಹೋಗಿ ಮೂರು ಮೊಟ್ಟೆಯನ್ನು ತಂದು ದಂಪತಿಗೆ ಕೊಟ್ಟು ಮನೆಗೆ ಕಳುಹಿಸಿದ್ದಾರೆ.

  • ನಾಯಿಗೆ ಒದ್ದಂತೆ ಒದೆಯುವೆ – ಠಾಣೆಗೆ ತೆರಳಿ ಪೊಲೀಸರಿಗೇ ಅವಾಜ್ ಹಾಕಿದ ಭೂಪ

    ನಾಯಿಗೆ ಒದ್ದಂತೆ ಒದೆಯುವೆ – ಠಾಣೆಗೆ ತೆರಳಿ ಪೊಲೀಸರಿಗೇ ಅವಾಜ್ ಹಾಕಿದ ಭೂಪ

    ರಾಯಚೂರು: ವ್ಯಕ್ತಿಯೊಬ್ಬ ಠಾಣೆಗೆ ತೆರಳಿ ಪೊಲೀಸರಿಗೇ ಅವಾಜ್ ಹಾಕಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಈ ಮೂಲಕ ಠಾಣೆಯಲ್ಲಿಯೇ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ.

    ವ್ಯಕ್ತಿಯನ್ನು ಮಲ್ಲೇಶ ಪೂಜಾರಿ ಎಂದು ಗುರುತಿಸಲಾಗಿದ್ದು, ಈತ ಸ್ಥಳೀಯ ಪತ್ರಕರ್ತ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ಮೇಲಾಧಿಕಾರಿಗಳ ಹೆಸರು ಹೇಳಿಕೊಂಡು ಸಿಬ್ಬಂದಿಗೆ ಮನಬಂದಂತೆ ಗದರಿದ್ದಾನೆ.

    ಮಲ್ಲೇಶ್ ಗೆ ಈಗಾಗಲೇ ಮೂರು ಮದುವೆ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ತನ್ನ ತಂಗಿಗೆ ಮೋಸ ಮಾಡಿದ್ದಾನೆ ಎಂದು ಹೇಳಿ ಪತ್ನಿಯೊಬ್ಬಳ ತಮ್ಮ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ಪೊಲೀಸರು ಮಲ್ಲೇಶ್ ವಿರುದ್ಧ ಪ್ರಕರಣ ಕೂಡ ದಾಖಲಿಸಿಕೊಂಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಮಲ್ಲೇಶ್ ಕೂಡ, ಪತ್ನಿ ಕುಟುಂಬಸ್ಥರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅದೇ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲು ಮುಂದಾಗಿದ್ದನು.

    ಈ ವೇಳೆ ಪೊಲೀಸರು ಆತನ ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಮಲ್ಲೇಶ್ ಪತ್ನಿ ಕಡೆಯವರ ದೂರು ಮಾತ್ರ ಸ್ವೀಕರಿಸುತ್ತೀರಿ. ಆದರೆ ನನ್ನ ಕಡೆಯಿಂದ ಯಾಕೆ ಅವರ ವಿರುದ್ಧ ದೂರು ದಾಖಲಿಸಲ್ಲ ಅಂತ ಕ್ಯಾತೆ ತೆಗೆದು, ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಪೊಲೀಸ್ ಸಿಬ್ಬಂದಿಗೆ, ನಾಯಿಗೆ ಒದ್ದಂತೆ ಒದೆಯುವೆ. ಎಸ್‍ಪಿ ಗೊತ್ತು ಅಂತ ಮೇಜು ಕುಟ್ಟಿ, ಫೋನ್ ತೆಗೆದು ನಾಟಕವಾಡಿ ಅವಾಜ್ ಹಾಕಿದ್ದಾನೆ. ಅಲ್ಲದೆ ಠಾಣೆಯಲ್ಲಿ ಪೊಲೀಸರಿಗೆ ಅತ್ಯಂತ ಕೆಳಮಟ್ಟದ ಪದಗಳಿಂದ ಬೈದಿದ್ದಾನೆ.

    ಮಲ್ಲೇಶ್ ಇಷ್ಟೆಲ್ಲ ಅವಾಜ್ ಹಾಕಿದ್ರೂ ಪೊಲೀಸರು ಮಾತ್ರ ಗಪ್‍ಚುಪ್ ಆಗಿದ್ದರು. ಸದ್ಯ ವ್ಯಕ್ತಿ ಅವಾಜ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ರದ್ದಾಂತ ಮಾಡಿದ ಬಳಿಕ ಮಲ್ಲೇಶ್ ನೀಡಿದ ದೂರನ್ನು ಕೂಡ ಪೊಲೀಸರು ಸ್ವೀಕರಿಸಿದ್ದು, ಪತ್ನಿ ಕುಟುಂಬಸ್ಥರ ವಿರುದ್ಧವೂ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಲಾಕ್‍ಡೌನ್ ಮುಗಿದಿದ್ದೆ ತಡ ರೈಲ್ವೆ ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತ ಜನ

    ಲಾಕ್‍ಡೌನ್ ಮುಗಿದಿದ್ದೆ ತಡ ರೈಲ್ವೆ ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತ ಜನ

    ಬೆಂಗಳೂರು: ಒಂದು ವಾರದ ಲಾಕ್‍ಡೌನ್ ಅಂತ್ಯವಾಗಿದ್ದೆ ತಡ ಬೆಂಗಳೂರಿನಲ್ಲಿ ವಾಸವಿದ್ದ ಬೇರೆ ಬೇರೆ ರಾಜ್ಯದವರು ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಕಡೆ ಮುಖ ಮಾಡಿದ್ದಾರೆ.

    ಒಂದು ವಾರಗಳ ಕಾಲ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಮಾತ್ರ ಲಾಕ್‍ಡೌನ್ ಮಾಡಲಾಗಿತ್ತು. ರೈಲು ಮತ್ತು ವಿಮಾನ ಓಡಾಟವನ್ನು ನಿಲ್ಲಿಸಿರಲಿಲ್ಲ. ಆದರೆ ರೈಲ್ವೆ ನಿಲ್ದಾಣಕ್ಕೆ ಹೋಗಲು ಯಾವುದೇ ಬಸ್, ಆಟೋ, ಕ್ಯಾಬ್ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಬೇರೆ ಬೇರೆ ರಾಜ್ಯದ ಕಾರ್ಮಿಕರು ಒಂದು ವಾರ ಬೆಂಗಳೂರಿನಲ್ಲಿ ಲಾಕ್‍ಡೌನ್ ಆಗಿದ್ದರು. ಇದೀಗ ಲಾಕ್‍ಡೌನ್ ಅಂತ್ಯವಾಗುತ್ತಿದ್ದಂತೆ ಕಾರ್ಮಿಕರು ರೈಲ್ವೆ ನಿಲ್ದಾಣದ ಕಡೆ ಬರುತ್ತಿದ್ದಾರೆ.

    ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಮುಂದೆ ಜನ ಕ್ಯೂ ನಿಂತಿದ್ದು, ಸಾವಿರಾರು ಜನ ಲಗೇಜ್ ಸಮೇತ ಬೆಂಗಳೂರನ್ನ ತೊರೆಯುತ್ತಿದ್ದಾರೆ. ಬೆಳ್ಳಂಬೆಳ್ಳಗ್ಗೆ ಹೊರ ರಾಜ್ಯದವರು ಬೆಂಗಳೂರನ್ನ ತೊರೆಯಲು ಮುಂದಾಗಿದ್ದು, ಬಿಹಾರ, ಪಾಟ್ನಾ ಮತ್ತು ಅಸ್ಸಾಂ ಕಡೆ ಹೋಗುವುದಕ್ಕೆ ಕಾರ್ಮಿಕರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್ ಹಾಕಿಕೊಳ್ಳದೆ ಜನ ಲಗೇಜ್ ಇಟ್ಟಿಕೊಂಡು ಕಾಯುತ್ತಿದ್ದಾರೆ.

    ಈ ಮೂಲಕ ಲಾಕ್‍ಡೌನ್ ಅಂತ್ಯ ಆಗಿದ್ದೆ ತಡ ಬೇರೆ ಬೇರೆ ರಾಜ್ಯಗಳಿಗೆ ಹೋಗಲು ಸಾವಿರಾರು ಜನ ಸಾಲು ಗಟ್ಟಿ ನಿಂತಿದ್ದಾರೆ. ಪ್ರತಿಯೊಬ್ಬ ಪ್ರಯಾಣಿಕನಿಗೂ ಟೆಂಪ್ರೇಚರ್ ಚೆಕ್ ಮಾಡಿ, ವೈದ್ಯಕೀಯ ತಪಾಸಣೆ ಮಾಡಿ ರೈಲು ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಅಲ್ಲದೇ ಹೊಂ ಕ್ವಾರಂಟೈನ್ ಸೀಲ್ ಚೆಕ್ ಮಾಡಿ ಒಳಗಡೆ ಬಿಡಲಾಗುತ್ತಿದೆ.

  • ಪೊಲೀಸ್ ಸ್ಟೇಷನ್ ಮೇಲೆ ರೌಡಿಗಳ ಅಟ್ಯಾಕ್ – ಠಾಣೆಗೆ ಬೇಕಿದೆ ರಕ್ಷಣೆ

    ಪೊಲೀಸ್ ಸ್ಟೇಷನ್ ಮೇಲೆ ರೌಡಿಗಳ ಅಟ್ಯಾಕ್ – ಠಾಣೆಗೆ ಬೇಕಿದೆ ರಕ್ಷಣೆ

    ಬೆಂಗಳೂರು: ಪೊಲೀಸ್ ಸ್ಟೇಷನ್ ಮೇಲೆ ರೌಡಿಗಳ ಅಟ್ಯಾಕ್ ಮಾಡಿದ್ದು, ಪೊಲೀಸ್ ಠಾಣೆಗೆ ರಕ್ಷಣೆ ನೀಡಬೇಕಾದ ಪರಿಸ್ಥಿತಿ ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣವಾಗಿದೆ.

    ಬೆಂಗಳೂರಿನ ಮಾರ್ಕೆಟ್ ನಲ್ಲಿರುವ ಪೊಲೀಸ್ ಠಾಣೆಗೆ ಏಕಾಏಕಿ ನುಗ್ಗಿರುವ ಸುಮಾರು 100 ರಿಂದ 200 ಮಂದಿ ಕಲ್ಲು ತೂರಾಟ ಮಾಡಿದ್ದಾರೆ. ಇದರ ಜೊತೆಗೆ ಪೊಲೀಸರು ಅರೆಸ್ಟ್ ಮಾಡಿ ಇಟ್ಟುಕೊಂಡಿದ್ದ ಮೂವರನ್ನು ಠಾಣೆಯಿಂದ ಕರೆದುಕೊಂಡು ಹೋಗಿದ್ದಾರೆ.

    ಮಾರ್ಕೆಟ್ ಪೊಲೀಸರು ಮಾರುಕಟ್ಟೆಯಲ್ಲಿ ಮಾರಕಾಸ್ತ್ರಗಳನ್ನ ಹಿಡಿದು ಓಡಾಡುತ್ತಿದ್ದ ಮೂವರನ್ನು ಬಂಧಿಸಿ ಠಾಣೆಗೆ ಕರೆತಂದಿದ್ದರು. ಇದಕ್ಕೆ ರೊಚ್ಚಿಗೆದ್ದ ಕೆಲ ಕಿಡಿಗೇಡಿಗಳು ಠಾಣೆಗೆ ನುಗ್ಗಿ ಪೊಲೀಸರನ್ನು ಬೆದರಿಸಿ ಬಂಧಿಸಿದ್ದ ಮೂವರನ್ನು ಕರೆದುಕೊಂಡು ಹೋಗಿದ್ದಾರೆ. ಇದರ ಜೊತೆಗೆ ಠಾಣೆಯ ಮುಂದೆ ನಿಲ್ಲಿಸಿದ್ದ ಪೊಲೀಸರ ಬೈಕುಗಳನ್ನು  ಪುಡಿ ಪುಡಿ ಮಾಡಿದ್ದಾರೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರೇ ಪ್ರಯತ್ನ ಪಟ್ಟಿದ್ದರು ಎನ್ನಲಾಗಿದೆ.

  • ಕಾರು ಚಾಲಕನನ್ನು 2 ದಿನ ಠಾಣೆಯಲ್ಲೇ ಕೂಡಿ ಹಾಕಿ ಹಲ್ಲೆಗೈದ ಪೊಲೀಸ್ ಪೇದೆ!

    ಕಾರು ಚಾಲಕನನ್ನು 2 ದಿನ ಠಾಣೆಯಲ್ಲೇ ಕೂಡಿ ಹಾಕಿ ಹಲ್ಲೆಗೈದ ಪೊಲೀಸ್ ಪೇದೆ!

    ಕಲಬುರಗಿ: ರೋಲ್ ಕಾಲ್ ಮಾಡುವದನ್ನು ಪ್ರಶ್ನಿಸಿದಕ್ಕೆ ಕಾರ್ ಚಾಲಕನನ್ನು ಪೇದೆಯೋರ್ವ ಅಮಾನವಿಯವಾಗಿ ಹಲ್ಲೆ ಮಾಡಿರುವ ಘಟನೆ ಕಲಬುರಗಿಯ ಮರತೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ಕಳೆದ ಎರಡು ದಿನಗಳ ಹಿಂದೆ ಚಾಲಕ ಚಂದ್ರು ಮತ್ತು ಪೇದೆ ರವೀಂದ್ರ ಕುಮಾರ್ ನಡುವೆ ಈ ಜಗಳ ನಡೆದಿದೆ. ಘಟನೆಯ ನಂತರ ಯಾವುದೇ ದೂರು ಇಲ್ಲದೇ ಚಾಲಕನನ್ನು ಪೇದೆ ಹಾಗು ಆತನ ಸ್ನೇಹಿತರು ಎರಡು ದಿನಗಳ ಕಾಲ ಠಾಣೆಯಲ್ಲಿ ಕೂಡಿಸಿ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ.

     ಆ ಬಳಿಕ ಚಾಲಕನ ಚಿಕ್ಕಪ್ಪನ ಅಂತ್ಯಸಂಸ್ಕಾರ ನಡೆಯುತ್ತಿದ್ದು, ಬಿಡುಗಡೆ ಮಾಡುವಂತೆ ಚಾಲಕನ ಚಿಕ್ಕಪ್ಪ ವಿಶ್ವವಿದ್ಯಾಲಯ ಪಿಎಸ್‍ಐ ಜಗನಾಥ್‍ಗೆ ಕರೆ ಮಾಡಿದ್ದಾರೆ. ಈ ವೇಳೆ ಪೇದೆ ಅವರಿಗೂ ಕೂಡ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಈ ವಿಷಯ ಗ್ರಾಮಸ್ಥರಿಗೆ ತಿಳಿಯುತ್ತಿದ್ದಂತೆಯೇ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಚಾಲಕನನ್ನು ಠಾಣೆಯಿಂದ ಬಿಡುಗಡೆ ಮಾಡಲಾಗಿದೆ.

    ಸದ್ಯ ಪೊಲೀಸರ ಕೈಯಿಂದ ಬಿಡುಗಡೆಯಾದ ಚಂದ್ರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews