Tag: statement

  • ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಅಂದ ಅಯೂಬ್ ಖಾನ್ – ಸಿಡಿದೆದ್ದ ಜೈನ ಸಮುದಾಯ

    ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಅಂದ ಅಯೂಬ್ ಖಾನ್ – ಸಿಡಿದೆದ್ದ ಜೈನ ಸಮುದಾಯ

    ಮೈಸೂರು: ಭಗವಾನ್ ಬಾಹುಬಲಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ನ್ಯೂ ಇಂಡಿಯನ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಖಾನ್‍ರನ್ನು ಉದಯಗಿರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಎಂದು ಅಯೂಬ್ ಖಾನ್ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜೈನ ಸಮುದಾಯ ಅಯೂಬ್ ಖಾನ್ ವಿರುದ್ಧ ಸಿಡಿದೆದ್ದಿದೆ. ಇದರೊಂದಿಗೆ ಅಯೂಬ್ ಖಾನ್ ಮೇಲೆ 50ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

    ಅಯೂಬ್ ಖಾನ್‍ರ ಅವಹೇಳನಕಾರಿ ಮಾತಿಗೆ ಜೈನ ಸಂಘಟನೆಗಳು ಕ್ರಿಮಿನಲ್ ಕೇಸ್ ದಾಖಲಿಸುವಂತೆ ಒತ್ತಾಯಿಸಿದೆ. ಇದಕ್ಕೆ ಮಣಿದ ಮೈಸೂರು ಪೊಲೀಸರು ಅಯೂಬ್ ಖಾನ್‍ರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ದೇಗುಲದಲ್ಲಿ ನಡೆದ ಪೂಜೆಗೆ ಬಂದು ಎಲ್ಲರನ್ನೂ ಭೇಟಿಯಾಗಿದ್ದು ಸಂತಸ ತಂದಿದೆ: ನಲಪಾಡ್

    ಅಯೂಬ್ ಖಾನ್ ಹಿಜಬ್ ವಿಚಾರವಾಗಿ ಭಗವಾನ್ ಬಾಹುಬಲಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ, ದೇಶದ ಮಾನ ಉಳಿಸಿ ಎಂದಿದ್ದು, ಈ ಹೇಳಿಕೆಗೆ ಜೈನ ಸಮುದಾಯ ಭಾರೀ ಆಕ್ರೋಶ ವ್ಯಕ್ತಪಡಿಸಿದೆ.

  • ಯಾವುದೇ ಹೆಣ್ಣಿನ ವಿರುದ್ಧ ಈ ರೀತಿ ಮಾತನಾಡುವುದು ಸರಿಯಲ್ಲ: ಹೇಮಾಮಾಲಿನಿ

    ಯಾವುದೇ ಹೆಣ್ಣಿನ ವಿರುದ್ಧ ಈ ರೀತಿ ಮಾತನಾಡುವುದು ಸರಿಯಲ್ಲ: ಹೇಮಾಮಾಲಿನಿ

    ಮುಂಬೈ: ಯಾವುದೇ ಹೆಣ್ಣಿನ ವಿರುದ್ಧ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಬಾಲಿವುಡ್ ಹಿರಿಯ ನಟಿ ಮತ್ತು ಸಂಸದೆ ಹೇಮಾಮಾಲಿನಿ ಹೇಳಿದ್ದಾರೆ.

    ತಮ್ಮ ಕ್ಷೇತ್ರದ ರಸ್ತೆಗಳನ್ನು ಹೇಮಾಲಿನಿ ಕೆನ್ನೆಗೆ ಹೋಲಿಸುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಸಚಿವ ಗುಲಾಬ್ ರಾವ್ ಪಾಟೀಲ್ ಹೇಳಿಕೆಗೆ ಇದೀಗ ಹೇಮಾಮಾಲಿನಿ ಅವರು ಪ್ರತಿಕ್ರಿಯಿಸಿದ್ದಾರೆ.  ಇದನ್ನೂ ಓದಿ: ತಮ್ಮ ಕ್ಷೇತ್ರದ ರಸ್ತೆಯನ್ನು ಹೇಮಾಮಾಲಿನಿ ಕೆನ್ನೆಗೆ ಹೋಲಿಕೆ – ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ ಸಚಿವ

    ಇದೀಗ ನಟಿ ಹೇಮಾಮಾಲಿನಿ ಅವರು ಸಂದರ್ಶನವೊಂದರಲ್ಲಿ, ನಾನು ನನ್ನ ಕೆನ್ನೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಉತ್ತಮ. ಈ ಮಾತನ್ನು ಜನಸಾಮಾನ್ಯರು ಹೇಳಿದ್ದರೆ ನಿರ್ಲಕ್ಷಿಸಬಹುದಿತ್ತು. ಆದರೆ ಈ ಹೇಳಿಕೆ ನೀಡಿರುವುದು ಓರ್ವ ಸಚಿವರು. ಅವರು ಓರ್ವ ವಿಧಾನಸಭೆಯ ಅಥವಾ ಯಾವುದೋ ಕ್ಷೇತ್ರದ ಸದಸ್ಯರಾಗಿರುವುದರಿಂದ ಈ ಮಾತು ಅವರಿಗೆ ಕ್ಷೋಭೆ ತರುವುದಿಲ್ಲ. ಯಾವುದೇ ಹೆಣ್ಣಿನ ವಿರುದ್ಧ ಈ ರೀತಿ ಹೇಳಿಕೆ ನೀಡಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: YouTube ನೋಡ್ಕೊಂಡು ಪತ್ನಿಗೆ ಡೆಲಿವರಿ ಮಾಡಿಸಿದ- ಮುಂದೆ ಆಗಿದ್ದೇನು ಗೊತ್ತಾ?

    ಇತ್ತೀಚೆಗಷ್ಟೇ ಮಹಾರಾಷ್ಟ್ರದ ಸಚಿವ ಮತ್ತು ಶಿವಸೇನೆಯ ಹಿರಿಯ ನಾಯಕ ಗುಲಾಬ್ ರಾವ್ ಪಾಟೀಲ್ ಭಾಷಣದ ವೇಳೆ 30 ವರ್ಷಗಳಿಂದ ಶಾಸಕನಾಗಿರುವ ನನ್ನ ಕ್ಷೇತ್ರಕ್ಕೆ ಬಂದು ಒಮ್ಮೆ ರಸ್ತೆ ನೋಡಿ. ಅದು ಹೇಮಾಮಾಲಿನಿ ಅವರ ಕೆನ್ನೆಯಂತೆ ಇಲ್ಲದಿದ್ದರೆ, ನಾನು ರಾಜೀನಾಮೆ ನೀಡುತ್ತೇನೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಕುರಿತಂತೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಎಚ್ಚರಿಕೆ ನೀಡಿದ್ದರು. ಹೀಗಾಗಿ ಗುಲಾಬ್ ರಾವ್ ಪಾಟೀಲ್ ನಾನು ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಕ್ಷಮೆಯಾಚಿಸಿದ್ದರು.

  • ಅತ್ಯಾಚಾರ ಘೋರ ಅಪರಾಧ, ಅದಕ್ಕೆ ಪೂರ್ಣ ವಿರಾಮ ಹಾಕಿ – ರಮೇಶ್ ಕುಮಾರ್ ವಿರುದ್ಧ ಪ್ರಿಯಾಂಕಾ ಗಾಂಧಿ ಆಕ್ರೋಶ

    ಅತ್ಯಾಚಾರ ಘೋರ ಅಪರಾಧ, ಅದಕ್ಕೆ ಪೂರ್ಣ ವಿರಾಮ ಹಾಕಿ – ರಮೇಶ್ ಕುಮಾರ್ ವಿರುದ್ಧ ಪ್ರಿಯಾಂಕಾ ಗಾಂಧಿ ಆಕ್ರೋಶ

    ನವದೆಹಲಿ: ಅತ್ಯಾಚಾರದ ವಿಚಾರವಾಗಿ ಶಾಸಕ ರಮೇಶ್ ಕುಮಾರ್ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಖಂಡಿಸಿದ್ದು, ಅವು ಅಸಮರ್ಥನೀಯ ಎಂದು ಹೇಳಿದ್ದಾರೆ.

    ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ರಮೇಶ್ ಕುಮಾರ್ ಅವರು ನೀಡಿರುವ ಹೇಳಿಕೆಯನ್ನು ನಾನು ಮನಃಪೂರ್ವಕವಾಗಿ ಖಂಡಿಸುತ್ತೇನೆ. ರಮೇಶ್ ಕುಮಾರ್ ಅಂತಹ ಪದಗಳನ್ನು ಯಾರಾದರೂ ಹೇಗೆ ಹೇಳಲು ಸಾಧ್ಯ ಎಂಬುವುದನ್ನು ವಿವರಿಸಲಾಗದು. ಅವು ಅಸಮರ್ಥನೀಯವಾಗಿದೆ. ಅತ್ಯಾಚಾರ ಒಂದು ಘೋರ ಅಪರಾಧ. ಅದಕ್ಕೆ ಪೂರ್ಣ ವಿರಾಮ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೆಣ್ಣು ಕುಲಕ್ಕೆ ಕ್ಷಮೆ ಕೇಳಿದ ರಮೇಶ್ ಕುಮಾರ್ – ಮುಂದುವರಿಸೋದು ಬೇಡ ಎಂದ ಸ್ಪೀಕರ್ ಕಾಗೇರಿ

    ಗುರುವಾರ ವಿಧಾನಸಭೆಯಲ್ಲಿ ಮಾತನಾಡುತ್ತಾ ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಆಗದಿದ್ರೆ ಮಲಗಿ ಆನಂದಿಸಿ ಎಂದು ರಮೇಶ್ ಕುಮಾರ್ ಹೇಳಿಕೆ ನೀಡಿದ್ದರು. ರಮೇಶ್ ಕುಮಾರ್ ಈ ರೀತಿ ಹೇಳುತ್ತಿದ್ದಂತೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವು ಮಂದಿ ಸದಸ್ಯರು ಇದನ್ನು ತಮಾಷೆಯಾಗಿ ತೆಗೆದುಕೊಂಡರು. ಆದರೆ ಈ ಹೇಳಿಕೆಗೆ ಇದೀಗ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ರಮೇಶ್ ಕುಮಾರ್ ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ: ಸುಧಾಕರ್

    ಈ ಹೇಳಿಕೆ ಕುರಿತಂತೆ ರಮೇಶ್ ಕುಮಾರ್ ಅವರು, ಅತ್ಯಾಚಾರ ಸಂಬಂಧ ಅಧಿವೇಶನದಲ್ಲಿ ನೀಡಿರುವ ನನ್ನ ಹೇಳಿಕೆ ಕುರಿತು ಎಲ್ಲರಿಗೂ ನನ್ನ ಪ್ರಾಮಾಣಿಕ ಕ್ಷಮೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಅತ್ಯಂತ ಹೇಯವಾದ ಅಪರಾಧವನ್ನು ಅಲಕ್ಷಿಸುವುದು ನನ್ನ ಉದ್ದೇವಾಗಿರಲಿಲ್ಲ. ಮಾತಿನ ಭರದಲ್ಲಿ ಆ ಮಾತು ಬಂದಿದೆ. ಇನ್ಮುಂದೆ ಮಾತನಾಡುವಾಗ ಎಚ್ಚರಿಕೆ ವಹಿಸುತ್ತೇನೆಂದು ಟ್ವೀಟ್ ಮೂಲಕ ಕ್ಷಮೆಯಾಚಿಸಿದ್ದರು. ಇದನ್ನೂ ಓದಿ: ಅತ್ಯಾಚಾರ ಕುರಿತ ರಮೇಶ್‌ ಕುಮಾರ್‌ ಹೇಳಿಕೆಗೆ ಕಾಂಗ್ರೆಸ್‌ ನಾಯಕರಿಂದಲೇ ಟೀಕೆ

    ಕಲಾಪ ನಡೆಯುವ ವೇಳೆ ಪ್ರಶ್ನೆ ಕೇಳುವವರ ಸಂಖ್ಯೆ ಹೆಚ್ಚಾಗಿತ್ತು. ನಾನೂ ಕೂಡ ಇದನ್ನು ಅನುಭವಿಸ್ತಿದ್ದೇನೆ ಎಂದು ನೋವು ತೋಡಿಕೊಂಡೆ ನಾನು ಇಂಗ್ಲಿಷ್ ಭಾಷೆಯಲ್ಲಿರುವ ಒಂದು ಮಾತು ಉಲ್ಲೇಖ ಮಾಡಿದೆ ಅಷ್ಟೇ. ಹೆಣ್ಣಿಗೆ ಅಪಮಾನ ಮಾಡೋದು ಅಥವಾ ಸದನದ ಗೌರವ ಕಡಿಮೆ ಮಾಡೋದು, ಲಘುವಾಗಿ ವರ್ತಿಸಬೇಕು ಎನ್ನುವ ಯಾವುದೇ ದುರುದ್ದೇಶ ಇಲ್ಲ. ಯಾವ ಸನ್ನಿವೇಶದಲ್ಲಿ ಹೇಗೆ ಹೇಳ್ತೀವಿ ಅನ್ನೋದು ನಿರ್ಧಾರವಾಗಲಿದೆ. ಸಂದರ್ಭದಲ್ಲಿ ಕಲಾಪ ನಡೆಯುವಾಗ, ನಾನು ಇಲ್ಲಿ ಉಲ್ಲೇಖ ಮಾಡಿದ ಮಾತು. ಯಾರ ಮೇಲೂ ಚಾಲೆಂಜ್ ಮಾಡುವ ಉದ್ದೇಶ ಇಲ್ಲ. ಸ್ಪೀಕರ್ ಅವರೇ ತಮ್ಮನ್ನೂ ಸಹ ಅಪರಾಧಿ ಮಾಡಿದ್ದಾರೆ. ಚಿಂತಕ ಕನ್ಫೂಶಿಯಸ್ ಒಂದು ಮಾತು ಹೇಳ್ತಾನೆ. One mistake, ends up in a single mistake.. To Deny mistake, about multiple mistakes ಅಂತಾ ಹೇಳ್ತಾನೆ. ನನ್ನಿಂದ ಅಪರಾಧ ಆಗಿದೆ ಅಂತಾ ತೀರ್ಪನ್ನೇ ಕೊಟ್ಟಿರೋದ್ರಿಂದ, ನಾನು ಕ್ಷಮೆ ಕೇಳುತ್ತೇನೆ. ಇದಕ್ಕೆ ಇಲ್ಲೇ ಸುಖಾಂತ್ಯವನ್ನು ಹಾಡಿ, ಕಲಾಪ ಮುಂದುವರೆಸೋಣ. ಗ್ರಹಚಾರಕ್ಕೆ, ನೀವು ಹೇಳಿದ ಹಾಗೆ ನಾನು ಪ್ರತಿಕ್ರಿಯಿಸಿದೆ ಎಂದು ಕಲಾಪದಲ್ಲಿ ಕೂಡ ಎಲ್ಲರ ಸಮ್ಮುಖ ಕ್ಷಮೆ ಕೇಳಿದರು.

  • ಈಶ್ವರಪ್ಪ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ: ಧ್ರುವನಾರಾಯಣ

    ಈಶ್ವರಪ್ಪ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ: ಧ್ರುವನಾರಾಯಣ

    ರಾಯಚೂರು: ಪದೇ ಪದೇ ಬೇಜವಾಬ್ದಾರಿ ಹೇಳಿಕೆ ನೀಡುವ ಈಶ್ವರಪ್ಪರನ್ನು ಸಚಿವ ಸಂಪುಟದಿಂದ ಉಚ್ಛಾಟನೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ ಹೇಳಿದ್ದಾರೆ.

    ಜಿಲ್ಲೆಯ ಸಿಂಧನೂರಿನಲ್ಲಿ ಮಾತನಾಡಿದ ಧ್ರುವನಾರಾಯಣ, ಈಶ್ವರಪ್ಪ ಕಾಂಗ್ರೆಸ್ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಮೊದಲಿನಿಂದಲೂ ಇಂತಹ ಹೇಳಿಕೆ ನೀಡುವಲ್ಲಿ ಈಶ್ವರಪ್ಪ ನಿಸ್ಸೀಮರು. ನಾಲಿಗೆಗೆ ಎಲುಬಿಲ್ಲ, ಈಶ್ವರಪ್ಪಗೆ ಮೆದುಳು ಸಹ ಇದೆಯೋ, ಇಲ್ಲವೋ ಗೊತ್ತಿಲ್ಲಾ. ಮಾನಸಿಕ ಸ್ಥಿಮಿತತೆಯನ್ನು ಈಶ್ವರಪ್ಪ ಕಳೆದುಕೊಂಡಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವುದನ್ನು ಮುಂದೆಯಾದರೂ ಬಿಡಬೇಕು ಎಂದಿದ್ದಾರೆ.

    ಇತ್ತೀಚೆಗೆ ತಲೆಗಳನ್ನು ತೆಗೆಯುವ ಬಗ್ಗೆ ಮಾತನಾಡಿದ್ದರು. ರಾಗ ದ್ವೇಷಗಳಿಲ್ಲದೆ ಆಡಳಿತ ನಡೆಸುವುದಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದ್ವೇಷ ದಳ್ಳೂರಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ಪದೇ ಪದೇ ನೀಡುವುದರಿಂದ ಜನರಲ್ಲಿ ಗೊಂದಲ ಉಂಟಾಗುತ್ತಿದೆ. ಮುಖ್ಯಮಂತ್ರಿಗಳು ಇವರನ್ನು ಕೂಡಲೇ ಸಂಪುಟದಿಂದ ಉಚ್ಛಾಟಿಸಬೇಕು ಎಂದು ಧ್ರುವನಾರಾಯಣ ಹೇಳಿದ್ದಾರೆ.   ಇದನ್ನೂ ಓದಿ:ಈಶ್ವರಪ್ಪಗೆ ಮಂಡೆ ಸರಿ ಇಲ್ಲ, ಬಿಜೆಪಿ ಶೀಘ್ರ ಚಿಕಿತ್ಸೆ ಕೊಡಿಸಲಿ: ವಿನಯ್ ಕುಮಾರ್ ಸೊರಕೆ ಸಲಹೆ

  • ನಾವು 17 ಜನ ಯಡಿಯೂರಪ್ಪ ಅವರನ್ನು ನಂಬಿ ಬಂದಿದ್ದೇವೆ: ಬಿ.ಸಿ.ಪಾಟೀಲ್

    ನಾವು 17 ಜನ ಯಡಿಯೂರಪ್ಪ ಅವರನ್ನು ನಂಬಿ ಬಂದಿದ್ದೇವೆ: ಬಿ.ಸಿ.ಪಾಟೀಲ್

    ದಾವಣಗೆರೆ: ನಾವು 17 ಜನ ಯಡಿಯೂರಪ್ಪ ಅವರನ್ನು ನಂಬಿ ಬಂದಿದ್ದೇವೆ, ಬಿಜೆಪಿಯಲ್ಲಿರುವ 70% ಜನ ಬೇರೆ ಪಕ್ಷದಿಂದ ಬಂದವರು, ಪಕ್ಷಕ್ಕೆ ಸೇರಿದ ಮೇಲೆ ಮೂಲ ಹಾಗೂ ವಲಸಿಗರು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕೃಷಿ ಸಚಿವ ಬಿಸಿ ಪಾಟೀಲ್‍ರವರು ಹೇಳಿದ್ದಾರೆ.

    ದಾವಣಗೆರೆಯಲ್ಲಿ ಮಾತನಾಡಿದ ಅವರು, ನಾವು ಪಕ್ಷಕ್ಕೆ ಸೇರಿದ ಮೇಲೆ ಮನೆಗೆ ಬಂದ ಸೊಸೆಯಾದಂತೆ, ಸೊಸೆಯಾಗಿ ಮನೆ ಸೇರಿದ ಮೇಲೆ ಮನೆ ಮಗಳಾಗುತ್ತಾಳೆ. ನಮಗೆ ಯಾವುದೇ ಅನಿಶ್ಚಿತತೆ ಇಲ್ಲ. ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಇದನ್ನು ಓದಿ:ಜಿಲ್ಲಾ ಪ್ರವಾಸಕ್ಕೂ ಮುನ್ನವೇ ಸಿಎಂ ಅನ್‍ಲಾಕ್ ಘೋಷಣೆ?

    ಐದೂ ಬೆರಳುಗಳೂ ಸಮನಾಗಿರಲ್ಲ, ಒಂದು ಮನೆ ಅಂದ ಮೇಲೆ ಹಲವಾರು ವ್ಯತ್ಯಾಸ ಮನಸ್ತಾಪಗಳು ಇರುತ್ತೆ. ಮಾಧ್ಯಮಗಳ ಪ್ರಶ್ನೆಗಳಿಂದ ರೋಸಿ ಹೋದ ಸಿಎಂ ಈ ರೀತಿ ಹೇಳಿಕೆ ನೀಡಿರಬಹುದು, ಅವರೇನು ತಪ್ಪು ಹೇಳಿಕೆ ನೀಡಿಲ್ಲ. ನಾವು ಪಕ್ಷದ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಸಿಎಂ ಪರ ಸಚಿವ ಬಿ.ಸಿ. ಪಾಟೀಲ್ ಬ್ಯಾಟಿಂಗ್ ಮಾಡಿದ್ದಾರೆ.  ಇದನ್ನು ಓದಿ:ಊರೂರು ಸುತ್ತಿ ಕೊರೊನಾ ಮುಕ್ತಿಗೆ ಪಣತೊಟ್ಟ ಕೊಡಗಿನ ಶಾಸಕರು

  • ಅಭಿಮಾನಿಗಳ ಬಳಿ ಕ್ಷಮೆ ಯಾಚಿಸಿದ ಉಪೇಂದ್ರ

    ಅಭಿಮಾನಿಗಳ ಬಳಿ ಕ್ಷಮೆ ಯಾಚಿಸಿದ ಉಪೇಂದ್ರ

    ಬೆಂಗಳೂರು: ಕೊರೊನಾದಿಂದಾಗಿ ಸಂಕಷ್ಟದಲ್ಲಿರುವವರ ಸಹಾಯಕ್ಕೆ ನಿಂತಿರುವ ಉಪೇಂದ್ರ ಅವರು ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆಯ ಕುರಿತಾಗಿ ಟ್ವೀಟ್ ಮಾಡುವ ಮೂಲಕವಾಗಿ ಕ್ಷಮೆಯಾಚಿಸಿದ್ದಾರೆ.

    ಉಪೇಂದ್ರ ಅವರು ನಿಧಿ ಸಂಗ್ರಹಿಸುವ ಮೂಲಕ ಅಗತ್ಯವಸ್ತುಗಳು ಹಾಗೂ ದಿನಸಿ ಕಿಟ್ ವಿತರಿಸುವ ಮೂಲಕ ನೆರವಾಗುತ್ತಿದ್ದಾರೆ. ಇದರ ನಡುವೆ ವಿವಾದವೊಂದಕ್ಕೀಡಾಗಿದ್ದರು. ಯೂಟ್ಯೂಬ್ ಚಾನಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಯದೆ ತಪ್ಪಾಗಿ ಹೇಳಿಕೆ ಕೊಟ್ಟಿದ್ದು, ಅದಕ್ಕೆ ಈಗ ಕ್ಷಮೆ ಯಾಚಿಸಿದ್ದಾರೆ.

    ಇತಿಹಾಸ ತಿಳಿಯದವನು ಇತಿಹಾಸ ಸೃಷ್ಟಿಸಲಾರ ಎಂದು ಹೇಳಿರುವ ಹೇಳಿಕೆ ಯಾರೋ ಇಂಗ್ಲಿಷ್‍ನವರು ಹೇಳಿರುವುದು ಎಂದು ತಿಳಿದು ಅದರ ಬಗ್ಗೆ ತಪ್ಪಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಇದರ ಬಗ್ಗೆ ಅರಿತ ಉಪೇಂದ್ರ ಈ ಹೇಳಿಕೆಯನ್ನು ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದು ಎಂದು ತಿಳಿಯದೆ ತಪ್ಪಾಗಿ ಹೇಳಿಕೆ ಕೊಟ್ಟೆ. ಕ್ಷಮೆ ಇರಲಿ ಎಂದು ಉಪೇಂದ್ರ ಟ್ವೀಟ್ ಮಾಡುವ ಮೂಲಕ ಕ್ಷಮೆ ಕೇಳಿದ್ದಾರೆ.

    ಕ್ಷಮೆ ಕೇಳುತ್ತಿದ್ದಂತೆಯೇ ಸಾಕಷ್ಟು ಮಂದಿ ತಿಳಿಯದೆ ಮಾಡಿದ್ದು ತಪ್ಪು ಅದನ್ನು ಅರಿತುಕೊಳ್ಳುವುದು ಮುಖ್ಯ. ನೀವು ಕ್ಷಮೆ ಕೇಳುವ ಅಗತ್ಯವಿರಲಿಲ್ಲ ಎಂದಿದ್ದಾರೆ. ಮೊದಲು ಸಂವಿಧಾನವನ್ನು ಓದಿಕೊಂಡು ನಂತರ ಪ್ರಜಾಕೀಯ ಮಾಡಲು ಹೋಗಿ ಎಂದು ವ್ಯಂಗ್ಯ ಮಾಡಿದ್ದಾರೆ. ಉಪೇಂದ್ರ ಅವರ ನಿಧಿ ಸಂಗ್ರಹ ಕಾರ್ಯಕ್ಕೆ ಸಾಕಷ್ಟು ಕಡೆಗಳಿಂದ ನೆರವು ಹರಿದು ಬರುತ್ತಿದೆ.

  • ವೈಯಕ್ತಿಕವಾಗಿ ಟೀಕೆ ಮಾಡ್ತಿಲ್ಲ, ನಮ್ಮ ಕುಟುಂಬದ ಬಗ್ಗೆ ಮಾತಾಡಿದ್ರೆ ನಾವೂ ಉತ್ತರ ಕೊಡ್ತೀವಿ: ನಿಖಿಲ್‍ಗೆ ಅಭಿ ತಿರುಗೇಟು

    ವೈಯಕ್ತಿಕವಾಗಿ ಟೀಕೆ ಮಾಡ್ತಿಲ್ಲ, ನಮ್ಮ ಕುಟುಂಬದ ಬಗ್ಗೆ ಮಾತಾಡಿದ್ರೆ ನಾವೂ ಉತ್ತರ ಕೊಡ್ತೀವಿ: ನಿಖಿಲ್‍ಗೆ ಅಭಿ ತಿರುಗೇಟು

    ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಅವರ ಮಗ, ನಟ ಅಭಿಷೇಕ್ ಅಂಬರೀಶ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ವೈಯಕ್ತಿಕವಾಗಿ ನಾವು ಟೀಕೆ ಮಾಡುತ್ತಿಲ್ಲ. ನಮ್ಮ ಕುಟುಂಬದ ಬಗ್ಗೆ ಅವ್ರು ಮಾತಾಡಿದ್ರೆ ನಾವು ಉತ್ತರ ಕೊಡ್ತೀವಿ ಎಂದು ನಿಖಿಲ್‍ಗೆ ತಿರುಗೇಟು ನೀಡಿದರು.

    ಮದ್ದೂರಿನ ವೈದ್ಯನಾಥಪುರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಭಿಷೇಕ್, “ಪ್ರಚಾರ ಕಾರ್ಯ ಚೆನ್ನಾಗಿ ನಡೆಯುತ್ತಿದೆ. ಪ್ರತಿ ದಿನ ಜನರ ರೆಸ್ಪಾನ್ಸ್ ಚೆನ್ನಾಗಿ ನಡೆಯುತ್ತಿದೆ. ಬೇಸಿಗೆ ಇದ್ದರೂ ಸಹ ಜನರು ನಮ್ಮ ಮಾತುಗಳನ್ನು ಕೇಳುವುದ್ದಕ್ಕೆ ಕಾಯುತ್ತಿದ್ದಾರೆ. ನಾವು ಸ್ವಲ್ಪ ತಡವಾಗಿ ಬಂದರೂ ಅವರು ಬೇಸರ ಮಾಡಿಕೊಳ್ಳಲ್ಲ. 10-15 ನಿಮಿಷ ತಡವಾದರೂ ಜನರು ತುಂಬಾ ಪ್ರೀತಿಯಿಂದ ಸ್ವಾಗತ ಮಾಡುತ್ತಾರೆ” ಎಂದರು.

    ನಾವೇನು ಟೀಕೆ ಟಿಪ್ಪಣಿಗಳನ್ನು ಮಾಡುತ್ತಿಲ್ಲ. ನಮ್ಮ ಅನಿಸಿಕೆ ಕೇಳಿದ್ದಾಗ ನಾವು ಪ್ರತಿಕ್ರಿಯಿಸುತ್ತೇವೆ ಹೊರತು ನಾವು ವೈಯಕ್ತಿಕ ಆರೋಪ, ಟೀಕೆ ಮಾಡುತ್ತಿಲ್ಲ. ನಮ್ಮ ಕುಟುಂಬದ ಬಗ್ಗೆ ಅವರು ಮಾತಾಡಿದರೆ ನಾವೂ ಉತ್ತರ ನೀಡುತ್ತೇವೆ ಅಷ್ಟೇ. ಯಾರಾದರೂ ಕುಟುಂಬದ ಬಗ್ಗೆ ಮಾತನಾಡಿದರೆ ಪ್ರತಿಕ್ರಿಯಿಸುವುದು ಸಹಜ ಎಂದರು.

    ಯಶ್ ಬಾಡಿಗೆ ಮನೆ ವಿಚಾರದ ಬಗ್ಗೆ ಮಾತನಾಡಿದ ಅವರು, ಅವರ ಹೇಳಿಕೆ ಎಷ್ಟು ಸರಿಯೋ ತಪ್ಪೋ ಎಂಬುದು ಜನರು ತೀರ್ಮಾನ ಮಾಡುತ್ತಾರೆ. ಅದು ನಿಜನೋ ಸುಳ್ಳೋ ಗೊತ್ತಿಲ್ಲ. ನಮಗೆ, ಜೆಡಿಎಸ್ ಅಭ್ಯರ್ಥಿಗೆ ಬ್ಯಾಕ್ ಗ್ರೌಂಡ್ ಇದೆ. ಆದರೆ ದರ್ಶನ್, ಯಶ್ ಗೆ ಬ್ಯಾಕ್ ಗ್ರೌಂಡ್ ಇಲ್ಲ. ಅವರು ಝೀರೋದಿಂದ ತಮ್ಮ ದುಡಿಮೆಯಿಂದ ಬೆಳೆದು ಬಂದವರು. ಚಿತ್ರರಂಗದಲ್ಲಿ ಒಂದು ಹಂತಕ್ಕೆ ಬೆಳೆದವರ ಬಗ್ಗೆ ಮಾತನಾಡಬಹುದಾ ಎಂದು ಯೋಚಿಸಿ ಮಾತಾಡಲಿ ಎಂದು ನಿಖಿಲ್ ಕುಮಾರಸ್ವಾಮಿಗೆ ಅಭಿಷೇಕ್ ತಿರುಗೇಟು ನೀಡಿದರು.

    ಕೀಳುಮಟ್ಟಕ್ಕೆ ಅವರು ಇಳಿಯಲಿ. ನಾವು ಇಳಿಯಲ್ಲ. ಅವರು ಯಾವ ಹಂತಕ್ಕಾದರೂ ಹೋಗಿ ಮಾತಾಡಲಿ. ನಾವು ಅವರ ಬಗ್ಗೆ ಎಲ್ಲೂ ಮಾತಾಡುತ್ತಿಲ್ಲ. ನಾವು ಜನರ ಪರವಾಗಿ ಬಂದಿದ್ದೇವೆ. ಜನರ ಜೊತೆ ಮಾತನಾಡಿ ಅವರ ಅಭಿಪ್ರಾಯ ಪಡೆಯುತ್ತಿದ್ದೇವೆ. ಅವರ ಬಗ್ಗೆ ನಾವು ಏಲ್ಲೂ ಮಾತನಾಡುತ್ತಿಲ್ಲ. ನಾವು ಯಾರ ಪರವಾಗಿಯೂ ಟೀಕೆ ಟಿಪ್ಪಣಿ ಮಾಡುತ್ತಿಲ್ಲ. ಅವರೇ ನಮ್ಮ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ.

    ದರ್ಶನ್, ಯಶ್ ಹಾಗೂ ನಮ್ಮ ತಾಯಿ ಅವರಿಗೆ ಟಾರ್ಗೆಟ್ ಮಾಡದೇ ಅವರಿಗೆ ಮಾತನಾಡುವುದಕ್ಕೆ ಆಗಲ್ಲ. ದರ್ಶನ್, ಯಶ್ ಹಾಗೂ ನಮ್ಮ ತಾಯಿ ಅವರನ್ನು ಟೀಕೆ ಮಾಡದೇ ಅವರು ಪ್ರಚಾರ ಮಾಡಲ್ಲ ಎಂದು ಪ್ರತಿಕ್ರಿಯಿಸಿದರು. ಇನ್ನೂ ನಾಯ್ಡು ವರ್ಸಸ್ ಒಕ್ಕಲಿಗ ಬಗ್ಗೆ ಶಿವರಾಮೇಗೌಡರ ಹೇಳಿಕೆಗೆ ಅಭಿಷೇಕ್ ಶಿವರಾಮೇಗೌಡರ ಬಗ್ಗೆ ನಾನು ಮಾತಾಡಲ್ಲ. ಅವರ ಪಕ್ಷದ ಅಧ್ಯಕ್ಷರೇ ಶಿವರಾಮೇಗೌಡ ಹೇಳಿಕೆ ಸರಿ ಇಲ್ಲ ಎಂದು ಹೇಳಿದ್ದಾರೆ ಎಂದು ಪ್ರತಿಕ್ರಿಯಿಸಿದರು.

  • ನನ್ನಕ್ಳು ಜೆಡಿಎಸ್‍ನವರನ್ನು ಹೆದರಿಸ್ಬೇಕು- ಹೇಳಿಕೆ ಸಮರ್ಥಿಸಿಕೊಂಡ್ರು ಸುರೇಶ್ ಗೌಡ

    ನನ್ನಕ್ಳು ಜೆಡಿಎಸ್‍ನವರನ್ನು ಹೆದರಿಸ್ಬೇಕು- ಹೇಳಿಕೆ ಸಮರ್ಥಿಸಿಕೊಂಡ್ರು ಸುರೇಶ್ ಗೌಡ

    ತುಮಕೂರು: ಯಾವನ್ ಬರ್ತಾನೋ ಬರ್ಲಿ, ನನ್ಮಕ್ಳು ಜೆಡಿಎಸ್‍ನವರನ್ನ ಹೆದರಿಸ್ಬೇಕು ಎಂಬ ಹೇಳಿಕೆಗೆ ಮಾಜಿ ಶಾಸಕ ಸುರೇಶ್ ಗೌಡ ಸಮರ್ಥಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಗೆ ಮಾತನಾಡಿದ ಸುರೇಶ್ ಗೌಡ, ನಾನೇ ಮಾತನಾಡಿರುವುದು. ನಾನು ಮಾತನಾಡಿದ್ದು ನಿಜ. ಅವರು ಈಗ ನಮ್ಮ ಕ್ಷೇತ್ರದ ಕೌರವನಾಗಿದ್ದಾನೆ. ಆತ ಚುನಾವಣಾ ಸಮಯದಲ್ಲಿ ಹಣ, ಹೆಂಡ, ಸೀರೆ ಹಂಚುತ್ತಾರೆ. ಚುನಾವಣಾ ಸಮಯದಲ್ಲಿ ಜನರಿಗೆ ಹಣದ ಆಮೀಶವೊಡ್ಡಿ ಕಳೆದ ಚುನಾವಣೆಯಲ್ಲಿ ಗೆದಿದ್ದಾರೆ. ಈ ವಿಷಯ ಈಗ ಕೋರ್ಟ್‍ನಲ್ಲಿ ಇದೆ. ಈ ಚುನಾವಣೆಯಲ್ಲೂ ಹೀಗೆ ಮಾಡುತ್ತಿದ್ದಾರೆ. ಹಾಗಾಗಿ ನಾನು ಊರಿಗೆ ಸೇರಿಸಬೇಡಿ. ಅವರ ಏನು ಕೆಲಸ ಮಾಡಿದ್ದಾರೆ ಎಂದು ಕೇಳಿ ಎಂದು ಹೇಳಿದೆ.

    ಹೇಮಾವತಿ ನೀರನ್ನು ನಮ್ಮ ಜೆಲ್ಲೆಗೆ ಒಂದು ಹನಿ ಕೂಡ ಬಿಟ್ಟಿಲ್ಲ. ಕೆರೆ ಪಕ್ಕದಲ್ಲಿದ್ದ ರೈತರು 5 ಕೋಟಿ ರೂ. ಒಟ್ಟು 50 ಕೋಟಿ ರೂ. ಬೋರ್ ವೆಲ್ ಹಾಕಿಸಿದ್ದಾರೆ. ಹಾಗಾಗಿ ದೇವೇಗೌಡ ಅವರನ್ನು ಕರೆದುಕೊಂಡು ಬಂದಾಗ ಪ್ರಶ್ನೆ ಮಾಡಿ. ನೀರು ಬಿಡದ ಶಾಸಕ, ಕೈ ಸಿಗದ ಶಾಸಕ ನೀನು ಊರಿಗೆ ಯಾಕೆ ಬರುತ್ತೀಯಾ. ಯಾವ ನೈತಿಕತೆಯಿಂದ ದೇವೇಗೌಡ ಅವರನ್ನು ಇಲ್ಲಿ ಕರೆದುಕೊಂಡು ಬಂದಿದ್ದೀಯಾ. ನೀನೇ ಕೆಲಸ ಮಾಡಿಲ್ಲ. ನಮ್ಮ ದುಡ್ಡಿನಲ್ಲಿ ಹೆಂಡ, ಸೀರೆ ಕೊಟ್ಟು ರಾಜಕಾರಣ ಮಾಡುತ್ತಿದ್ದೀಯಾ. ಇದನ್ನು ವಿರೋಧಿಸಿ ಎಂದು ರೈತರಿಗೆ ಸಲಹೆ ನೀಡಿದೆ.

    ನೇರವಾಗಿ ಜನರಿಗೆ ಹಣ, ಸೀರೆ, ಮೂಗುಬಟ್ಟು, ಕೋಳಿ ಮಾಂಸ, ಎಣ್ಣೆ ಬಾಟಲ್‍ಗಳನ್ನು ನೀಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಯನ್ನು ನೇರವಾಗಿ ಸ್ಪರ್ಧಿಸಬೇಕು. ಲೋಕಕಲ್ಯಾಣ ಮಾಡಿ ವೋಟ್ ಕೇಳಬೇಕು. ಆಮೀಶವೊಡ್ಡಿ ವೋಟ್ ಕೇಳುವುದು ಸರಿಯಲ್ಲ. ನಾನು ಭಾವನಾತ್ಮಕವಾಗಿ ಮಾತನಾಡಿದ್ದೇನೆ. ರಾಜಕೀಯ ವಿಷಯದಲ್ಲಿ ನಮ್ಮ ಜನರಿಗೆ ಬೇಗ ಅರ್ಥವಾಗುವುದಿಲ್ಲ. ನಮ್ಮ ನೋವುಗಳನ್ನು ವ್ಯಕ್ತಪಡಿಸಿದ್ದಾಗ ಜನರು ಅವರಿಗೆ ತಿರುಗೇಟು ನೀಡುತ್ತಾರೆ ಎಂದು ಸುರೇಶ್ ಗೌಡ ಹೇಳಿದ್ದಾರೆ.

  • ಮಂಡ್ಯದವರನ್ನು ದಡ್ಡರನ್ನಾಗಿ ಮಾಡ್ಬೇಡಿ, ಮುದಿ ಎತ್ತುಗಳನ್ನು ಸಂತೆಗೆ ಕಳಿಸ್ತೀವಿ: ಸಿಎಂಗೆ ಟಾಂಗ್ ವಿಡಿಯೋ

    ಮಂಡ್ಯದವರನ್ನು ದಡ್ಡರನ್ನಾಗಿ ಮಾಡ್ಬೇಡಿ, ಮುದಿ ಎತ್ತುಗಳನ್ನು ಸಂತೆಗೆ ಕಳಿಸ್ತೀವಿ: ಸಿಎಂಗೆ ಟಾಂಗ್ ವಿಡಿಯೋ

    ಮಂಡ್ಯ: ದರ್ಶನ್ ಹಾಗೂ ಯಶ್ ಜೋಡೆತ್ತಲ್ಲ ನಾನು, ಡಿಕೆಶಿ ಜೋಡೆತ್ತುಗಳು ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಕಾರ್ಯಕರ್ತ ವ್ಯಂಗ್ಯವಾಗಿ ಮಾತನಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಎರಡು ಎತ್ತುಗಳ ಮಧ್ಯೆ ನಿಂತು ಸಿಎಂ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನಾವೂ ಒಂಟಿ ಒಂಟಿ ಎತ್ತುಗಳನ್ನು ಜೊತೆ ಹಾಕಿದ್ದೇವೆ, ಆದರೆ ಅವು ಕೂಡಲೇ ಇಲ್ಲ. ಒಂದು ಕನಕಪುರದ ಬಿಳಿ ಎತ್ತು, ಇನ್ನೊಂದು ಹಾಸನದ ಕರಿ ಎತ್ತು. ಕರಿ ಎತ್ತಿನ ಜೊತೆ ಸೇರಿ ಬಿಳಿ ಎತ್ತು ಹಾಳಾಗಿದೆ. ಕರಿ ಎತ್ತಿನ ಜೊತೆ ಸೇರಿ ಹಾಳಾಗಬೇಡ ಎಂದು ಬಿಳಿ ಎತ್ತಿಗೆ ಕಿವಿಮಾತು ಹೇಳಿದ್ದೇನೆ ಎಂದು ಕಾರ್ಯಕರ್ತ ವ್ಯಂಗ್ಯವಾಡಿದ್ದಾರೆ.

    ಅಲ್ಲದೆ ಮುದಿ ಎತ್ತುಗಳು ಕೆಲಸ ಮಾಡಲ್ಲ, ಮೇ 23ರಂದು ಈ ಮುದಿ ಎತ್ತುಗಳನ್ನು ಸಂತೆಗೆ ಕೊಟ್ಟು ಬಿಡುತ್ತೀವಿ. ಮಂಡ್ಯ ಜನರನ್ನು ದಡ್ಡರು ಮಾಡಬೇಡಿ. ಮುದಿ ಎತ್ತುಗಳನ್ನು ಮಂಡ್ಯ ಜನರು ಸಂತೆಗೆ ಕಳುಹಿಸಲಿದ್ದಾರೆ ಎಂದು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

    ಖಾಸಗಿ ಹೋಟೆಲ್‍ನಲ್ಲಿ ಸುಮಲತಾ ನಡೆಸಿದ ಸುದ್ದಿಗೋಷ್ಠಿ ವೇಳೆ, ದರ್ಶನ್ ಇರುವಾಗ ಅಲ್ಲಿ ನಾನ್ಯಾಕೆ ಎಂಬ ಕಿಚ್ಚ ಸುದೀಪ್ ಹೇಳಿಕೆಗೆ ದರ್ಶನ್ ಪ್ರತಿಕ್ರಿಯಿಸಿ, ನಾನೊಬ್ನೇ ಇಲ್ಲ. ನಮ್ ಹೀರೋ ಯಶ್ ಸಹಾ ಇದ್ದಾರೆ. ನಮ್ಮದು ಒಂಟಿ ಎತ್ತಲ್ಲ. ನಮ್ಮದು ಜೋಡಿ ಎತ್ತು. ಸುದೀಪ್ ಪ್ರಚಾರ ಮಾಡುವ ಬಗ್ಗೆ ಗೊತ್ತಿಲ್ಲ. ಅವರನ್ನೇ ಕೇಳಬೇಕು ಎಂದು ಪ್ರತಿಕ್ರಿಯಿಸಿದ್ದರು.

    ಸಿಎಂ ಕುಮಾರಸ್ವಾಮಿ ಒಹೋ ಇವು ಜೋಡೆತ್ತುಗಳಂತೆ, ಇವು ಉಳುವ ಎತ್ತುಗಳಲ್ಲ. ರೈತರು ಬೆಳೆದ ಪೈರನ್ನು ಅರ್ಧ ರಾತ್ರಿ ಹೋಗಿ ತಿನ್ನುವ ಎತ್ತುಗಳು. ಜಿಲ್ಲೆಯಲ್ಲಿ ಹಲವು ದುರಂತಗಳು ನಡೆದಾಗ ಎಲ್ಲಿದ್ದರು? ಅಮ್ಮನ ಮೇಲಿನ ಪ್ರೀತಿಯಿಂದ ಅವರನ್ನು ಉಳಿಸಲು ಬಂದಿದ್ದಾರಲ್ಲ. ಅಂದು ನಡೆದ ದುರಂತದಲ್ಲಿ ನೀರಲ್ಲಿ ಬಿದ್ದಿದ್ದ ಶವಗಳನ್ನು ತೆಗೆಯಲು ಅವರು ಬಂದಿದ್ದರ ಎಂದು ಪ್ರಶ್ನಿಸಿ ಸಿಎಂ ದರ್ಶನ್ ಮತ್ತು ಯಶ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

  • ದರ್ಶನ್ ಇರೋವಾಗ ಅಲ್ಲಿ ನಾನ್ಯಾಕೆ – ಸುದೀಪ್ ಹೇಳಿಕೆಗೆ ಡಿ ಬಾಸ್ ಪ್ರತಿಕ್ರಿಯೆ

    ದರ್ಶನ್ ಇರೋವಾಗ ಅಲ್ಲಿ ನಾನ್ಯಾಕೆ – ಸುದೀಪ್ ಹೇಳಿಕೆಗೆ ಡಿ ಬಾಸ್ ಪ್ರತಿಕ್ರಿಯೆ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರ ಪ್ರಚಾರದ ಬಗ್ಗೆ ಈ ಹಿಂದೆ ಕಿಚ್ಚ ಸುದೀಪ್ ದರ್ಶನ್ ಇರುವಾಗ ಅಲ್ಲಿ ನಾನ್ಯಾಕೆ ಎಂದು ಹೇಳಿಕೆ ನೀಡಿದ್ದರು. ಈಗ ಈ ಹೇಳಿಕೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯಿಸಿದ್ದಾರೆ.

    ಖಾಸಗಿ ಹೋಟೆಲ್ ನಲ್ಲಿ ಸುಮಲತಾ ನಡೆಸಿದ್ದ ಸುದ್ದಿಗೋಷ್ಠಿ ವೇಳೆ ಮಾತನಾಡಿದ ದರ್ಶನ್, “ನಾನು ನನ್ನ ಬಗ್ಗೆ ಮಾತ್ರ ಹೇಳುತ್ತೇನೆ. ಅದನ್ನು ರಾಕ್‍ಲೈನ್ ಬಳಿ ಕೇಳಿ. ನಾನೊಬ್ನೇ ಇಲ್ಲ. ನಮ್ ಹೀರೋ ಯಶ್ ಸಹಾ ಇದಾರೆ. ನಮ್ಮದು ಒಂಟಿ ಎತ್ತಲ್ಲ. ಜೋಡಿ ಎತ್ತು. ಸುದೀಪ್ ಪ್ರಚಾರ ಮಾಡುವ ಬಗ್ಗೆ ಗೊತ್ತಿಲ್ಲ. ಅವರನ್ನೇ ಕೇಳಬೇಕು” ಎಂದು ಪ್ರತಿಕ್ರಿಯಿಸಿದ್ದಾರೆ.  ಇದನ್ನೂ ಓದಿ: ದರ್ಶನ್ ಇರುವಾಗ ಅಲ್ಲಿ ನಾನ್ಯಾಕೆ- ಸುಮಲತಾ ರಾಜಕೀಯ ಎಂಟ್ರಿ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ

    ಈ ಹಿಂದೆ ಕಿಚ್ಚ ಸುದೀಪ್, “ದರ್ಶನ್ ಇರುವಾಗ ಅಲ್ಲಿ ನಾನ್ಯಾಕೆ?. ಕ್ಯಾಂಪೆನ್ ವಿಚಾರವಾಗಿ ನನಗೆ ಇನ್ನೂ ಬುಲಾವ್ ಬಂದಿಲ್ಲ. ಬುಲಾವ್ ಬಂದರೆ ನಿಮಗೆ ಮೊದಲು ಹೇಳುತ್ತೇನೆ. ಸದ್ಯ ನಾನು ಈಗ ರಾಜಕೀಯದಿಂದ ತುಂಬಾ ದೂರ ಇದ್ದೇನೆ. ಅಲ್ಲದೆ ಸಾಕಷ್ಟು ನಿರ್ಮಾಪಕರು ನನ್ನನ್ನು ನಂಬಿ ಹಣ ಹಾಕಿದ್ದಾರೆ. ಹಾಗಾಗಿ ಸಿನಿಮಾದಲ್ಲಿ ಬ್ಯುಸಿ ಆಗಿದ್ದೇನೆ. ಸುಮಲತಾ ಅವರಲ್ಲೇ ಅಂಬರೀಶ್ ಎಂಬ ಹೆಸರು ಇದೆ. ಅಂಬರೀಶ್ ಒಂದು ದೊಡ್ಡ ಹೆಸರು. ಸುಮಲತಾ ಅವರಿಗೆ ಆ ಹೆಸರೇ ಸಾಕು. ಅಲ್ಲದೆ ದರ್ಶನ್ ಅವರು ಕೂಡ ಸುಮಲತಾ ಅವರ ಜೊತೆ ಇದ್ದಾರೆ. ರಾಜಕೀಯದಲ್ಲಿ ನನ್ನ ಒಲವು ಕಡಿಮೆ ಇದೆ” ಎಂದು ಸುದೀಪ್ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv