Tag: state

  • ಮಂಗಳೂರು ಸಂಗ್ರಹಗಾರದಿಂದ ಕಚ್ಚಾ ತೈಲ ಮಾರಾಟಕ್ಕೆ ಮುಂದಾದ ಸರ್ಕಾರ

    ಮಂಗಳೂರು ಸಂಗ್ರಹಗಾರದಿಂದ ಕಚ್ಚಾ ತೈಲ ಮಾರಾಟಕ್ಕೆ ಮುಂದಾದ ಸರ್ಕಾರ

    ಬೆಂಗಳೂರು: ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆಯಾದ ಕಾರಣ ಇಂಧನ ದರ ಪ್ರತಿ ದಿನ ಏರಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಕಚ್ಚಾ ತೈಲವನ್ನು ಭೂಗತ ತೈಲ ಸಂಗ್ರಹಗಾರಗಳಿಂದ ರಾಜ್ಯ ತೈಲ ಶುದ್ಧೀಕರಣ ಘಟಕಗಳಿಗೆ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ.

    “ನಾವು ತೈಲ ಮಾರುಕಟ್ಟೆ ಕಂಪನಿಗಳಿಗೆ ಮಾರಾಟ ಮಾಡಲು ಆರಂಭಿಸಿದ್ದೇವೆ ಎಂದು ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐಎಸ್‌ಪಿಆರ್‌ಎಲ್) ಸಿಇಒ ಎಚ್‌ಪಿಎಸ್ ಅಹುಜಾ ಹೇಳಿದ್ದಾರೆ.

    ಕಳೆದ ವರ್ಷ ಕೋವಿಡ್‌ 19 ಹಿನ್ನೆಲೆಯಲ್ಲಿ ತೈಲ ಬೆಲೆ ಭಾರೀ ಕುಸಿತ ಕಂಡಿತ್ತು. ಈ ವೇಳೆ ಸರ್ಕಾರ  ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ 0.3 ದಶಲಕ್ಷ  ಟನ್ ಕಚ್ಚಾ ತೈಲ ಖರೀದಿಸಿ ಮಂಗಳೂರು ತೈಲ ಸಂಗ್ರಾಹಗಾರದಲ್ಲಿಟ್ಟಿತ್ತು. ಇದೀಗ ಈ ಕಚ್ಚಾ ತೈಲವನ್ನು ರಾಜ್ಯ ಮಾಲೀಕತ್ವದ ಮಂಗಳೂರು ತೈಲ ಶುದ್ಧೀಕರಣ ಘಟಕಕ್ಕೆ ಮಾರಾಟ ಮಾಡಿದೆ. ಈ ಮೂಲಕ ದೇಶದಲ್ಲಿ ತೈಲ ಬೆಲೆ ಏರಿಕೆಯಿಂದ ಉಂಟಾಗಿರುವ ನಷ್ಟವನ್ನು ಸರಿದೂಗಿಸಿಕೊಳ್ಳಲು ಸರ್ಕಾರ ಹೊಸ ಪ್ಲ್ಯಾನ್ ಮಾಡಿಕೊಂಡಿದೆ. ಇದನ್ನೂ ಓದಿ: ವಿಮಾನದ ಇಂಧನಕ್ಕಿಂತಲೂ ದುಬಾರಿ ಆಯ್ತು ಪೆಟ್ರೋಲ್‌ ಬೆಲೆ

    ಮಂಗಳೂರು ಕಚ್ಚಾ ತೈಲ ಸಂಗ್ರಹಾಗಾರ ಸುಮಾರು 1.5 ದಶಲಕ್ಷ ಟನ್ ಟನ್ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ ಶೇ. ಅರ್ಧದಷ್ಟನ್ನು ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ತೈಲ ದರವನ್ನು ಸರಿದೂಗಿಸುವ ಕಾರ್ಯಕ್ಕೆ ಮುಂದಾಗುತ್ತಿದೆ.ಈ ವರ್ಷದ ಅಂತ್ಯಕ್ಕೆ  0.45 ದಶಲಕ್ಷ  ಟನ್ ಮಾರಾಟ ಮಾಡಲು ಐಎಸ್‌ಪಿಆರ್‌ಎಲ್ ಮುಂದಾಗಿದೆ.

    ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ ಗೆ 36 ಪೈಸೆ ಏರಿಕೆ ಕಂಡು 110.61 ರೂ., ಡೀಸೆಲ್ 37 ಪೈಸೆ ಏರಿಕೆ ಕಂಡು 101.49 ರೂ. ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ಲೀಟರ್‍ ಗೆ 35 ಪೈಸೆ ಏರಿಕೆ ಕಂಡು ಲೀಟರ್‌ ಗೆ 106.89 ರೂ. ಆದರೆ ಡೀಸೆಲ್‍ಗೆ 35 ಪೈಸೆ ಏರಿಕೆ ಕಂಡು 95.62 ರೂ. ದಾಖಲಾಗಿದೆ. ಇದನ್ನೂ ಓದಿ: 100 ಕೋಟಿ ಕೇವಲ ಅಂಕಿಯಲ್ಲ, ಇತಿಹಾಸದಲ್ಲಿ ದಾಖಲಾದ ಹೊಸ ಅಧ್ಯಾಯ: ಮೋದಿ

    ಭಾರತದ ತೈಲ ಸಂಗ್ರಹ ಏನೇನು ಸಾಲದು. ಒಟ್ಟು 90 ದಿನಗಳ ಬಳಕೆಗೆ ಆಗುವಷ್ಟು 13.32 ಮೆಟ್ರಿಕ್ ಟನ್ ತೈಲ ಸಂಗ್ರಹ ಅಗತ್ಯತೆ ಭಾರತಕ್ಕಿದೆ. ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐಎಸ್‍ಪಿಆರ್ ಎಲ್) ಮಂಗಳೂರು, ಉಡುಪಿ ಬಳಿಯ ಪಾದೂರು, ವಿಶಾಖಪಟ್ಟಣಂನಲ್ಲಿ ಭೂಗತ ತೈಲ ಸಂಗ್ರಹಣ ಘಟಕಗಳನ್ನು ಸ್ಥಾಪಿಸಿದೆ.

    ಮೂರು ತೈಲ ಸಂಗ್ರಹಗಾರಗಳ ಪೈಕಿ ಪಾದೂರಿನಲ್ಲಿ ಅತಿ ಹೆಚ್ಚು ತೈಲವನ್ನು ಸಂಗ್ರಹ ಮಾಡಬಹುದಾಗಿದೆ. ಪಾದೂರಿನಲ್ಲಿ 2.5 ದಶಲಕ್ಷ ಟನ್(17 ದಶಲಕ್ಷ ಬ್ಯಾರೆಲ್), ಮಂಗಳೂರಿನಲ್ಲಿ 1.5 ದಶಲಕ್ಷ ಟನ್, ವಿಶಾಖಪಟ್ಟಣದಲ್ಲಿ 1.33 ದಶಲಕ್ಷ ಟನ್ ತೈಲವನ್ನು ಸಂಗ್ರಹಿಸಬಹುದಾಗಿದೆ.  ಇದನ್ನೂ ಓದಿ: ಉಡುಪಿಯಲ್ಲಿ ತೈಲ ಸಂಗ್ರಹಿಸಲಿದೆ ಸೌದಿ ಅರಾಮ್ಕೊ

    ಶೇ.83ರಷ್ಟು ತೈಲವನ್ನು ಭಾರತ ಆಮದು ಮಾಡುತ್ತಿದೆ. 65 ದಿನಗಳಿಗೆ ಆಗುವಷ್ಟು ತೈಲವನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ರಿಫೈನರಿಗಳಿಗೆ ಇದೆ. 90 ದಿನಗಳ ಬಳಕೆಗೆ ಆಗುವಷ್ಟು ತೈಲ ಸಂಗ್ರಹಿಸುವ ನಿಟ್ಟಿನಲ್ಲಿ ಐಎಸ್‌ಪಿಆರ್‌ಎಲ್ ಒಡಿಶಾದ ಚಂಡಿಕೋಲ್, ರಾಜಸ್ಥಾನದ ಬಿಕಾನೆರ್, ಗುಜರಾತಿನ ರಾಜ್‍ಕೋಟ್ ಬಳಿ ಭೂಗತ ತೈಲಗಾರ ನಿರ್ಮಿಸಲು ಮುಂದಾಗುತ್ತಿದೆ. ಇದನ್ನೂ ಓದಿ: ಅಮೆರಿಕದ ಸಂಗ್ರಹಾಗಾರಗಳಲ್ಲಿ ಸಂಗ್ರಹವಾಗಲಿದೆ ಭಾರತದ ಕಚ್ಚಾ ತೈಲ

    ವಿಶ್ವದಲ್ಲೇ ತುರ್ತು ಸಂದರ್ಭಕ್ಕೆಂದು ತೈಲ ಸಂಗ್ರಹ ಮಾಡುವ ಸಾಮರ್ಥ್ಯ ಹೊಂದಿರುವ ದೇಶಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, 714 ದಶಲಕ್ಷ ಬ್ಯಾರೆಲ್‌ ತೈಲವನ್ನು ಸಂಗ್ರಹ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯ ಭಾರತ 5.33 ದಶಲಕ್ಷ ಟನ್‌( 38 ದಶಲಕ್ಷ ಬ್ಯಾರೆಲ್‌) ತೈಲವನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ತೈಲವನ್ನು ತುರ್ತು ಸಂದರ್ಭದಲ್ಲಿ 9 ದಿನಗಳ ಕಾಲ ಬಳಸಬಹುದು. ಇಂಟರ್‌ನ್ಯಾಷನಲ್‌ ಎನರ್ಜಿ ಏಜೆನ್ಸಿ(ಐಇಎ) ತನ್ನ ಸದಸ್ಯ ರಾಷ್ಟ್ರಗಳು 90 ದಿನಗಳ ಕಾಲ ತೈಲ ಸಂಗ್ರಹವನ್ನು ಹೊಂದಿರಬೇಕೆಂದು ಹೇಳಿದೆ.

  • ರಾಜ್ಯದ ಹವಾಮಾನ ವರದಿ: 22-10-2021

    ರಾಜ್ಯದ ಹವಾಮಾನ ವರದಿ: 22-10-2021

    ಳೆದ ಕೆಲದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೇರಳದ ಸಮೀಪದಲ್ಲಿರುವ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದು, ಅಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಹಿಂಗಾರು ಮಾರುತಗಳಿಂದ ಅಕ್ಟೋಬರ್ ಕೊನೆಯ ವಾರದ ಹೊತ್ತಿಗೆ ಮತ್ತೆ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 28-20
    ಮಂಗಳೂರು: 30-24
    ಶಿವಮೊಗ್ಗ: 31-21
    ಬೆಳಗಾವಿ: 32-19
    ಮೈಸೂರು: 30-19

    rain

    ಮಂಡ್ಯ: 31-21
    ರಾಮನಗರ: 28-18
    ಮಡಿಕೇರಿ: 26-17
    ಹಾಸನ: 28-19
    ಚಾಮರಾಜನಗರ: 29-21

    ಚಿಕ್ಕಬಳ್ಳಾಪುರ: 27-18
    ಕೋಲಾರ: 29-21
    ತುಮಕೂರು: 29-20
    ಉಡುಪಿ: 31-24
    ಕಾರವಾರ: 32-26

    ಚಿಕ್ಕಮಗಳೂರು: 27-19
    ದಾವಣಗೆರೆ: 30-21
    ಚಿತ್ರದುರ್ಗ: 29-21
    ಹಾವೇರಿ: 32-21
    ಬಳ್ಳಾರಿ: 33-22

    ಗದಗ: 32-21
    ಕೊಪ್ಪಳ: 32-22
    ರಾಯಚೂರು: 33-22
    ಯಾದಗಿರಿ: 33-21

    ವಿಜಯಪುರ: 33-21
    ಬೀದರ್: 29-18
    ಕಲಬುರಗಿ: 32-20
    ಬಾಗಲಕೋಟೆ: 34-22

  • ರಾಜ್ಯದ ಹವಾಮಾನ ವರದಿ: 21-10-2021

    ರಾಜ್ಯದ ಹವಾಮಾನ ವರದಿ: 21-10-2021

    ಕಳೆದ ಕೆಲದಿನಗಳಿಂದ ವರುಣ ಆರ್ಭಟಿಸುತ್ತಿದ್ದು, ಬೆಂಗಳೂರು ಸಹಿತ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ.

    ಕೇರಳದ ಸಮೀಪವಿರುವ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದು, ಅಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಹಿಂಗಾರು ಮಾರುತಗಳಿಂದ ಅಕ್ಟೋಬರ್ ಕೊನೆಯ ವಾರದ ಹೊತ್ತಿಗೆ ಮತ್ತೆ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 27-20
    ಮಂಗಳೂರು: 29-25
    ಶಿವಮೊಗ್ಗ: 28-21
    ಬೆಳಗಾವಿ: 31-19
    ಮೈಸೂರು: 29-21

    ಮಂಡ್ಯ: 29-21
    ರಾಮನಗರ: 28-21
    ಮಡಿಕೇರಿ: 24-17
    ಹಾಸನ: 27-19
    ಚಾಮರಾಜನಗರ: 28-21

    ಚಿಕ್ಕಬಳ್ಳಾಪುರ: 25-18
    ಕೋಲಾರ: 28-21
    ತುಮಕೂರು: 27-20
    ಉಡುಪಿ: 29-24
    ಕಾರವಾರ: 32-26

    ಚಿಕ್ಕಮಗಳೂರು: 26-18
    ದಾವಣಗೆರೆ: 30-21
    ಚಿತ್ರದುರ್ಗ: 28-21
    ಹಾವೇರಿ: 31-21
    ಬಳ್ಳಾರಿ: 32-23

    ಗದಗ: 32-21
    ಕೊಪ್ಪಳ: 32-22
    ರಾಯಚೂರು: 33-23
    ಯಾದಗಿರಿ: 32-21

    ವಿಜಯಪುರ: 33-21
    ಬೀದರ್: 29-18
    ಕಲಬುರಗಿ: 32-20
    ಬಾಗಲಕೋಟೆ: 33-22

  • ರಾಜ್ಯದ ಹವಾಮಾನ ವರದಿ: 20-10-2021

    ರಾಜ್ಯದ ಹವಾಮಾನ ವರದಿ: 20-10-2021

    ರಾವಳಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಕಳೆದ ಕೆಲದಿನಗಳಿಂದ ವರುಣ ಆರ್ಭಟಿಸುತ್ತಿದ್ದು, ಬೆಂಗಳೂರು ಸಹಿತ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ.

    ಮುಂದಿನ ವಾರ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಹಿಂಗಾರು ಮಾರುತಗಳಿಂದ ಅಕ್ಟೋಬರ್ ಕೊನೆಯ ವಾರದ ಹೊತ್ತಿಗೆ ಮತ್ತೆ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ರಾಜ್ಯದ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು, ಮಂಗಳೂರಲ್ಲಿ ಭಾರೀ ಮಳೆ ಸಾಧ್ಯತೆ ಇದ್ದು, ಎಲ್ಲಾ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 28-20
    ಮಂಗಳೂರು: 31-25
    ಶಿವಮೊಗ್ಗ: 31-21
    ಬೆಳಗಾವಿ: 31-19
    ಮೈಸೂರು: 30-21

    ಮಂಡ್ಯ: 31-21
    ರಾಮನಗರ: 28-21
    ಮಡಿಕೇರಿ: 26-17
    ಹಾಸನ: 29-19
    ಚಾಮರಾಜನಗರ: 28-21

    ಚಿಕ್ಕಬಳ್ಳಾಪುರ: 27-19
    ಕೋಲಾರ: 28-20
    ತುಮಕೂರು: 29-21
    ಉಡುಪಿ: 31-25
    ಕಾರವಾರ: 32-26

    rain

    ಚಿಕ್ಕಮಗಳೂರು: 28-18
    ದಾವಣಗೆರೆ: 32-21
    ಚಿತ್ರದುರ್ಗ: 31-21
    ಹಾವೇರಿ: 33-22
    ಬಳ್ಳಾರಿ: 34-23

    ಗದಗ: 32-21
    ಕೊಪ್ಪಳ: 33-22
    ರಾಯಚೂರು: 33-22
    ಯಾದಗಿರಿ: 33-22

    ವಿಜಯಪುರ: 33-21
    ಬೀದರ್: 29-18
    ಕಲಬುರಗಿ: 32-21
    ಬಾಗಲಕೋಟೆ: 33-22

  • ರಾಜ್ಯದ ಹವಾಮಾನ ವರದಿ: 18-10-2021

    ರಾಜ್ಯದ ಹವಾಮಾನ ವರದಿ: 18-10-2021

    ರಬ್ಬಿ ಸಮುದ್ರದ ಮೇಲ್ಮೈನಲ್ಲಿರುವ ಸುಳಿಗಾಳಿಯಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 1 ವಾರದಿಂದ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾಯ್ತು. ಈಗ ಆಂಧ್ರದ ಕರಾವಳಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ ಮುಂದುವರೆದಿದೆ. ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ತಜ್ಞ ಸದಾನಂದ ಅಡಿಗ ಮಾಹಿತಿ ನೀಡಿದ್ದಾರೆ.


    ಅ.18 ರವರೆಗೆ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು, ಮಂಗಳೂರಲ್ಲಿ ಭಾರೀ ಮಳೆ ಸಾಧ್ಯತೆ ಇದ್ದು, ಎಲ್ಲಾ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಮೋಡ ಕವಿದ ವಾತಾವರಣ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 27-19
    ಮಂಗಳೂರು: 29-24
    ಶಿವಮೊಗ್ಗ: 28-20
    ಬೆಳಗಾವಿ: 29-19
    ಮೈಸೂರು: 28-19

    ಮಂಡ್ಯ: 29-19
    ರಾಮನಗರ: 29-20
    ಮಡಿಕೇರಿ: 23-16
    ಹಾಸನ: 27-18
    ಚಾಮರಾಜನಗರ: 28-10

    ಚಿಕ್ಕಬಳ್ಳಾಪುರ: 26-18
    ಕೋಲಾರ: 28-20
    ತುಮಕೂರು: 28-19
    ಉಡುಪಿ: 30-24
    ಕಾರವಾರ: 31-26

    ಚಿಕ್ಕಮಗಳೂರು: 26-17
    ದಾವಣಗೆರೆ: 29-21
    ಚಿತ್ರದುರ್ಗ: 29-20
    ಹಾವೇರಿ: 31-20
    ಬಳ್ಳಾರಿ: 33-23

    ಗದಗ: 32-20
    ಕೊಪ್ಪಳ: 33-22
    ರಾಯಚೂರು: 33-23
    ಯಾದಗಿರಿ: 33-23

    ವಿಜಯಪುರ: 33-23
    ಬೀದರ್: 29-21
    ಕಲಬುರಗಿ: 32-22
    ಬಾಗಲಕೋಟೆ: 33-21

  • ರಾಜ್ಯದ ಹವಾಮಾನ ವರದಿ: 17-10-2021

    ರಾಜ್ಯದ ಹವಾಮಾನ ವರದಿ: 17-10-2021

    ರಬ್ಬಿ ಸಮುದ್ರದ ಮೇಲ್ಮೈನಲ್ಲಿ ಸುಳಿಗಾಳಿಯಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 1 ವಾರದಿಂದ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾಯ್ತು. ಈಗ ಆಂಧ್ರದ ಕರಾವಳಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ ಮುಂದುವರೆದಿದೆ.

    rain

    ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ತಜ್ಞ ಸದಾನಂದ ಅಡಿಗ ಮಾಹಿತಿ ನೀಡಿದ್ದಾರೆ. ಅ.18 ರವರೆಗೆ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು, ಮಂಗಳೂರಲ್ಲಿ ಭಾರೀ ಮಳೆ ಸಾಧ್ಯತೆ ಇದ್ದು, ಎಲ್ಲಾ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 26-20
    ಮಂಗಳೂರು: 28-24
    ಶಿವಮೊಗ್ಗ: 29-21
    ಬೆಳಗಾವಿ: 30-20
    ಮೈಸೂರು: 26-21

    rain

    ಮಂಡ್ಯ: 27-21
    ರಾಮನಗರ: 29-21
    ಮಡಿಕೇರಿ: 22-18
    ಹಾಸನ: 25-20
    ಚಾಮರಾಜನಗರ: 27-21

    ಚಿಕ್ಕಬಳ್ಳಾಪುರ: 28-20
    ಕೋಲಾರ: 27-21
    ತುಮಕೂರು: 27-21
    ಉಡುಪಿ: 29-24
    ಕಾರವಾರ: 31-26

    ಚಿಕ್ಕಮಗಳೂರು: 26-19
    ದಾವಣಗೆರೆ: 31-22
    ಚಿತ್ರದುರ್ಗ: 29-21
    ಹಾವೇರಿ: 32-22
    ಬಳ್ಳಾರಿ: 34-23

    ಗದಗ: 32-21
    ಕೊಪ್ಪಳ: 33-22
    ರಾಯಚೂರು: 33-23
    ಯಾದಗಿರಿ: 32-23

    ವಿಜಯಪುರ: 27-20
    ಬೀದರ್: 27-21
    ಕಲಬುರಗಿ: 31-22
    ಬಾಗಲಕೋಟೆ: 33-22

  • ರಾಜ್ಯದ ಹವಾಮಾನ ವರದಿ: 16-10-2021

    ರಾಜ್ಯದ ಹವಾಮಾನ ವರದಿ: 16-10-2021

    ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಮಳೆಯ ಆರ್ಭಟ ಹೆಚ್ಚಾಗುತ್ತಿದ್ದು, ಈಗಾಗಲೇ ಅಕ್ಟೋಬರ್ 6ಕ್ಕೆ ಮುಂಗಾರು ಅಂತ್ಯವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಪ್ರತಿನಿತ್ಯ ಮಳೆಯಾಗುತ್ತಿದೆ. ಇಂದು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ.

    ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗಿನಲ್ಲಿ ಮಳೆ ಹೆಚ್ಚಾಗುವ ಸೂಚನೆ ಇದ್ದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮತ್ತೊಂದೆಡೆ ಉತ್ತರ ಒಳನಾಡಿನ ಜಿಲ್ಲೆಗಳಾದ ತುಮಕೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯಪುರ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಸಹ ಹೆಚ್ಚಿನ ಮಳೆ ನಿರೀಕ್ಷೆ ಇದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 28-21
    ಮಂಗಳೂರು: 29-25
    ಶಿವಮೊಗ್ಗ: 31-22
    ಬೆಳಗಾವಿ: 31-20
    ಮೈಸೂರು: 29-21

    ಮಂಡ್ಯ: 29-22
    ರಾಮನಗರ: 34-23
    ಮಡಿಕೇರಿ: 24-18
    ಹಾಸನ: 28-19
    ಚಾಮರಾಜನಗರ: 28-21

    ಚಿಕ್ಕಬಳ್ಳಾಪುರ: 27-19
    ಕೋಲಾರ: 28-21
    ತುಮಕೂರು: 28-21
    ಉಡುಪಿ: 31-25
    ಕಾರವಾರ: 32-26

    ಚಿಕ್ಕಮಗಳೂರು: 27-19
    ದಾವಣಗೆರೆ: 32-22
    ಚಿತ್ರದುರ್ಗ: 31-21
    ಹಾವೇರಿ: 33-22
    ಬಳ್ಳಾರಿ: 34-23

    ಗದಗ: 32-21
    ಕೊಪ್ಪಳ: 33-22
    ರಾಯಚೂರು: 32-23
    ಯಾದಗಿರಿ: 30-22

    ವಿಜಯಪುರ: 27-21
    ಬೀದರ್: 26-21
    ಕಲಬುರಗಿ: 29-22
    ಬಾಗಲಕೋಟೆ: 33-22

  • ಪಕ್ಷದ ವರಿಷ್ಠರು ಒಪ್ಪಿದರೆ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುತ್ತೇನೆ: ಬಿ.ವೈ ರಾಘವೇಂದ್ರ

    ಪಕ್ಷದ ವರಿಷ್ಠರು ಒಪ್ಪಿದರೆ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುತ್ತೇನೆ: ಬಿ.ವೈ ರಾಘವೇಂದ್ರ

    ಕಾರವಾರ: ಪಕ್ಷದ ವರಿಷ್ಠರು, ಸಂಘಟನೆಗೆ ಒಪ್ಪಿದರೆ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಪುತ್ರ ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.

    ಇಂದು ಶಿರಸಿ ನಗರದ ಗೋಪಾಲಕೃಷ್ಣ ದೇವಸ್ಥಾನದ ಸಮುದಾಯ ಭವನ ಕಾಮಗಾರಿ ಭೂಮಿಪೂಜೆಗೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ನಮ್ಮನ್ನು ಬಿಜೆಪಿ ಬೆಳೆಸಿದೆ. ಪಕ್ಷ ಎಂದಿಗೂ ನಮಗೆ ತಾಯಿಯಂತೆ, ವರಿಷ್ಠರು ಬಯಸಿದರೆ ನಾನು ವಿಧಾನಸಭೆ ಚುನಾವಣೆಗೆ ಸ್ಪರ್ದಿಸಲು ಸಿದ್ದ ಎಂದಿದ್ದಾರೆ.

    ಪಕ್ಷವು ಯಡಿಯೂರಪ್ಪ ಅವರನ್ನು ಕಡೆಗಣಿಸುವ ಪ್ರಶ್ನೆಯೆ ಇಲ್ಲ, ಸಂಘಟನೆ ಅವರನ್ನು ಬೆಳಸಿದೆ. ಸಂಘಟನೆ ಹಾಗೂ ಪಕ್ಷದ ಹಿರಿಯ ನಾಯಕರೊಂದಿಗೆ ಪಕ್ಷ ಕಟ್ಟಲು ರಾಜ್ಯಾದ್ಯಂತ ಪ್ರವಾಸ ಮಾಡುತಿದ್ದಾರೆ. ಬೈ ಎಲಕ್ಷನ್‍ನಲ್ಲಿ ಎರಡೂ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಯಡಿಯೂರಪ್ಪನವರ ನೇತ್ರತ್ವದಲ್ಲಿ ಆಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮದುವೆಗಾಗಿ ಮತಾಂತರ ತಪ್ಪು: ಮೋಹನ್ ಭಾಗವತ್

    ಯಡಿಯೂರಪ್ಪ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ರಾಜಕೀಯ ಷಡ್ಯಂತ್ರವಲ್ಲ. ಅದು ತನಿಖಾದಳಗಳ ಸಹಜ ಪ್ರಕ್ರಿಯೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪ ಸತ್ಯಕ್ಕೆ ದೂರವಾದದ್ದು, ಉಮೇಶ್, ಯಡಿಯೂರಪ್ಪ ಅವರ ಕಚೇರಿಯಲ್ಲಿ ಹಲವು ವರ್ಷ ಕೆಲಸ ಮಾಡಿದ್ದು ನಿಜ. ಅವರ ತನಿಖೆ ಪಾರದರ್ಶಕವಾಗಿ ನಡೆಯಲಿದೆ. ಆ ಬಳಿಕ ಸತ್ಯಾಸತ್ಯತೆ ಸ್ಪಷ್ಟವಾಗಲಿದೆ ಎಂದರು. ಇದನ್ನೂ ಓದಿ: ಕನ್ನಡಕ್ಕೆ ಆಗುತ್ತಿರುವ ಅನ್ಯಾಯಗಳು ಒಂದೆರಡಲ್ಲ: ಎಚ್‍ಡಿಕೆ

  • ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ

    ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ

    ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದ್ದು, ಇಂದೂ ರಾಜ್ಯದ ಕರಾವಳಿ ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯಪುರ, ಧಾರವಾಡ, ಗದಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.  ಇದನ್ನೂ ಓದಿ: ರಾತ್ರಿಯಿಂದ ಬೆಂಗಳೂರಲ್ಲಿ ಜಿಟಿಜಿಟಿ ಮಳೆ – ಮಲೆನಾಡು, ಗದಗ, ಕಲಬುರಗಿ, ಕೋಲಾರ, ಚಿತ್ರದುರ್ಗದಲ್ಲೂ ವರ್ಷಧಾರೆ

    ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಕೂಡ ಇಂದು ಭಾರೀ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ರಾಮನಗರ, ಕೊಡಗಿನಲ್ಲಿ ಮೈಸೂರು, ಮಂಡ್ಯದಲ್ಲಿ ಇಂದು ಭಾರೀ ಮಳೆ ಸುರಿಯುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

  • ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ 29 ಕೋಟಿ ಡೋಸ್ ಲಸಿಕೆ ಪೂರೈಕೆ

    ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ 29 ಕೋಟಿ ಡೋಸ್ ಲಸಿಕೆ ಪೂರೈಕೆ

    ನವದೆಹಲಿ: ದೇಶದಲ್ಲಿ ಇದುವರೆಗೂ 29 ಕೋಟಿಗೂ ಅಧಿಕ ಡೋಸ್ ಲಸಿಕೆಯನ್ನು ಕೇಂದ್ರ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪೂರೈಕೆ ಮಾಡಿದೆ. 29,10,54,050 ಡೋಸ್ ಲಸಿಕೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಉಚಿತವಾಗಿ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

    ಲಸಿಕೆ ವ್ಯರ್ಥವಾಗಿರುವುದು ಸೇರಿದಂತೆ ಇಲ್ಲಿಯ ತನಕ ಒಟ್ಟಾರೆಯಾಗಿ ದೇಶದಲ್ಲಿ 26,04,19,412 ಡೋಸ್ ಲಸಿಕೆ ಹಾಕಲಾಗಿದೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಬಾಕಿ ಇದೆ ಅವುಗಳನ್ನು ಕೆಲವೇ ದಿನಗಳಲ್ಲಿ ಹಾಕಲಾಗುವುದು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪೂರೈಕೆ ಮಾಡಿರುವ ಒಟ್ಟಾರೆ ಲಸಿಕೆಯ ಪೈಕಿ ಇನ್ನೂ 3.06 ಕೋಟಿ ಡೋಸ್ ಲಸಿಕೆ ಬಾಕಿ ಇದೆ. ಇಂದು ಬೆಳಗ್ಗೆಯ ತನಕ 3,06,34638 ಲಸಿಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ದಾಸ್ತಾನು ಇದೆ ಎಂದು ಕೇಂದ್ರ ಸಚಿವಾಲಯ ತನ್ನ ಮಾಹಿತಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಕಾಶ್ಮೀರದ ನಾಯಕರ ಜೊತೆ ಮೋದಿ ಸಭೆಗೆ ಪಾಕ್ ಕಿರಿಕ್

    ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಂದಿನ ಮೂರು ದಿನಗಳಲ್ಲಿ 24.53,080 ಡೋಸ್ ಲಸಿಕೆಯನ್ನು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದ್ದು, ದೇಶದಾದ್ಯಂತ ನಾಳೆಯಿಂದ ಉಚಿತವಾಗಿ ಲಸಿಕೆ ಹಾಕುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.