Tag: State Transport Organization

  • ರೂಟ್ ಬಸ್‍ಗಳ ಪೂಜೆ ವೆಚ್ಚಕ್ಕೆ 10 ರೂ. ಕೊಟ್ಟ ಸಾರಿಗೆ ಸಂಸ್ಥೆ!

    ರೂಟ್ ಬಸ್‍ಗಳ ಪೂಜೆ ವೆಚ್ಚಕ್ಕೆ 10 ರೂ. ಕೊಟ್ಟ ಸಾರಿಗೆ ಸಂಸ್ಥೆ!

    ಕೊಪ್ಪಳ: ದಸರಾ ಹಬ್ಬ ಆಚರಣೆಯಲ್ಲಿ ನಡೆಯುವ ಆಯುಧ ಪೂಜೆ ಹಿನ್ನೆಲೆಯಲ್ಲಿ ಬಸ್‍ಗಳ ಪೂಜೆಗಾಗಿ ನೀಡಿರುವ ಹಣ ಎಷ್ಟು ಎಂದು ಕೇಳಿದರೆ ಆಶ್ಚರ್ಯವಾಗುತ್ತದೆ. ಜೊತೆಗೆ ಅದು ಅಪಹಾಸ್ಯಕ್ಕೂ ಗುರಿಯಾಗುತ್ತಿದೆ. ರಾಜ್ಯ ಸಾರಿಗೆ ಸಂಸ್ಥೆ ರೂಟ್ ಬಸ್‍ಗಳಿಗೆ ಪೂಜೆ ವೆಚ್ಚವೆಂದು ಕೇವಲ 10 ರೂ ಕೊಟ್ಟಿದೆ.

    ಇಂದು ನಡೆಯುವ ಆಯುಧ ಪೂಜೆ ಹಿನ್ನೆಲೆಯಲ್ಲಿ ರೂಟ್ ಬಸ್‍ಗಳಿಗೆ 10 ರೂಪಾಯಿ ಪೂಜಾ ವೆಚ್ಚವನ್ನಾಗಿ ನೀಡಲು ಆದೇಶ ಮಾಡಲಾಗಿದೆ. ಹೀಗಾಗಿ ಆಯಾ ಘಟಕಗಳಿಂದ ರೂಟ್ ಬಸ್‍ಗಳಿಗೆ ಪೂಜಾ ವೆಚ್ಚವಾಗಿ 10 ರೂಪಾಯಿಯನ್ನು ನೀಡಲಾಗಿದೆ. ಸಂಸ್ಥೆ ನೀಡಿರುವ ಈ ಪೂಜಾ ವೆಚ್ಚದ ಭಾರೀ ಮೊತ್ತದಲ್ಲಿ ಏನನ್ನು ಖರೀದಿಸಬೇಕು ಎಂದು ಚಾಲಕರು ಹಾಗೂ ನಿರ್ವಾಹಕರು ಯೋಚನೆ ಮಾಡುವಂತಾಗಿದೆ. ಅಲ್ಲದೆ ಇಷ್ಟೊಂದು ಹಣವನ್ನು ಹೇಗೆ ಖರ್ಚು ಮಾಡಬೇಕು ಎಂದು ಲೆಕ್ಕ ತಿಳಿಯದಂತಾಗಿದ್ದಾರೆ.

    ಕೆಲ ಚಾಲಕರು ಹಾಗೂ ನಿರ್ವಾಹಕರು ಆ 10 ರೂಪಾಯಿಯನ್ನು ತೆಗೆದುಕೊಳ್ಳದೆ ಸಂಸ್ಥೆಗೆ ಇರಲಿ ಎಂದು ಬಿಟ್ಟು ಬಂದಿದ್ದಾರೆ. ಸಿಬ್ಬಂದಿಬಡತನದಲ್ಲಿರುವ ನಮ್ಮ ಸಂಸ್ಥೆಗಾಗಿ ಆ 10 ರೂಪಾಯಿ ಜಮೆಯಾಗಲಿ ಎಂದು ಬಿಟ್ಟು ಹೋಗಿದ್ದಾರೆ ಎನ್ನುತ್ತಾರೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 5 ಘಟಕಗಳಿದ್ದು ಕೊಪ್ಪಳ ಘಟಕದ 137, ಕುಷ್ಟಗಿ ಘಟಕದ 97, ಯಲಬುರ್ಗಾ ಘಟಕದ 66, ಗಂಗಾವತಿ ಘಟಕದ 132 ಹಾಗೂ ಕುಕನೂರು ಘಟಕದ 40 ರೂಟ್ ಬಸ್‍ಗಳು ಸೇರಿದಂತೆ ಒಟ್ಟು 472 ರೂಟ್ ಬಸ್‍ಗಳಿಗೆ ತಲಾ 10 ರೂಪಾಯಿಯಂತೆ ಪೂಜಾ ವೆಚ್ಚ 4,720 ರೂಪಾಯಿ ಮಂಜೂರು ಮಾಡಲಾಗಿದೆ.

    10 ರೂಪಾಯಿಯಲ್ಲಿ ಈಗ ಮೊಳ ಹೂವು ಬರುವುದಿಲ್ಲ. ಕಳೆದ ಬಾರಿ ಪೂಜಾ ವೆಚ್ಚಕ್ಕಾಗಿ ಕೇವಲ 7 ರೂಪಾಯಿ ನೀಡಲಾಗಿತ್ತು. ಆಗಲೂ ಬಹುತೇಕ ಸಿಬ್ಬಂದಿ ಇದನ್ನು ಸ್ವೀಕರಿಸಿರಲಿಲ್ಲ. ಈ ವರ್ಷ ಉದಾರಭಾವ ತೋರಿ 3 ರೂಪಾಯಿ ಹೆಚ್ಚಳ ಮಾಡಿ ಒಟ್ಟು 10 ರೂಪಾಯಿಯಂತೆ ಪೂಜಾ ವೆಚ್ಚ ನೀಡುತ್ತಿದ್ದಾರೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಸಾರಿಗೆ ಸಂಸ್ಥೆಯ ಪೂಜಾ ವೆಚ್ಚದ ಈ ಆದೇಶ ಈಗ ಅಪಹಾಸ್ಯಕ್ಕೆ ಗುರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾಲು ಸಾಲು ರಜೆ ಬಸ್ ಪ್ರಯಾಣ ದರ ಏರಿಕೆ- ಪ್ರಯಾಣಿಕರ ಪರದಾಟ

    ಸಾಲು ಸಾಲು ರಜೆ ಬಸ್ ಪ್ರಯಾಣ ದರ ಏರಿಕೆ- ಪ್ರಯಾಣಿಕರ ಪರದಾಟ

    ಬೆಂಗಳೂರು: ಇಂದಿನಿಂದ ಸಾಲು ಸಾಲು ಸರ್ಕಾರಿ ರಜೆಗಳು ಬಂದಿದ್ದು, ಜನರು ತಮ್ಮ ತಮ್ಮ ಊರುಗಳತ್ತ ಪ್ರಯಾಣ ಬೆಳೆಸುತ್ತಿದ್ದಾರೆ.

    ಜನ ಸಂದಣಿ ಹೆಚ್ಚಿರುವ ಇದೇ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ಪ್ರಯಾಣ ದರವನ್ನು ಹೆಚ್ಚಿಸಿದೆ. ಕೆಎಸ್‍ಆರ್ ಟಿಸಿ, ಖಾಸಗಿ ಬಸ್ ಮತ್ತು ವಿಶೇಷ ಬಸ್ ಸೇವೆಯ ಪ್ರಯಾಣ ದರವನ್ನು ಹೆಚ್ಚಿಸಲಾಗಿದ್ದು. ರಾಜ್ಯದಲ್ಲಿ ಸಂಚರಿಸುವ ಬಸ್ ದರ 20% ರಷ್ಟು ಏರಿಕೆಯಾಗಿದೆ.

    ಹೊರ ರಾಜ್ಯಕ್ಕೆ ಹೋಗುವ ಬಸ್ ನ ದರ 50% ರಷ್ಟು ಏರಿಕೆಯಾಗಿದೆ. ಇನ್ನೂ ಖಾಸಗಿ ಬಸ್ ದರ ಅಂತೂ ಮೂರು ಪಟ್ಟು ಅಧಿಕವಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

    ಸಾರಿಗೆ ಸಂಸ್ಥೆಯ ಬದಲಾದ ಪ್ರಯಾಣ ದರ ಹೀಗಿದೆ.

                                                      ಪ್ರಯಾಣ ದರ (ರೂ.ಗಳಲ್ಲಿ)

                                                     ಸಾಮಾನ್ಯ ದಿನಗಳಲ್ಲಿ                ವಿಶೇಷ ದಿನಗಳಲ್ಲಿ
    1. ಬೆಂಗಳೂರು – ಬೆಳಗಾವಿ                     919                                        1081
    2. ಬೆಂಗಳೂರು – ಧರ್ಮಸ್ಥಳ                    676                                        805
    3. ಬೆಂಗಳೂರು – ತಿರುಪತಿ                      683                                       1008
    4. ಬೆಂಗಳೂರು – ಮುಂಬೈ                      1365                                      1985
    5. ಬೆಂಗಳೂರು – ಪಣಜಿ                         998                                        1444
    6. ಬೆಂಗಳೂರು – ಚೆನ್ನೈ                         893                                        1316