Tag: state president

  • ರಾಜ್ಯಾಧ್ಯಕ್ಷರ ಬದಲಿಸುವ ಪ್ರಸ್ತಾಪ ದೆಹಲಿಯಲ್ಲಿ ಕೇಳಿ ಬಂದಿಲ್ಲ: ಆರ್.ಅಶೋಕ್

    ರಾಜ್ಯಾಧ್ಯಕ್ಷರ ಬದಲಿಸುವ ಪ್ರಸ್ತಾಪ ದೆಹಲಿಯಲ್ಲಿ ಕೇಳಿ ಬಂದಿಲ್ಲ: ಆರ್.ಅಶೋಕ್

    ನವದೆಹಲಿ: ಬಿಜೆಪಿ (BJP) ರಾಜ್ಯಾಧ್ಯಕ್ಷರ ನೇಮಿಸುವ ಬಗ್ಗೆ ದೆಹಲಿಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಬೇರೆ ರಾಜ್ಯಗಳ ಅಧ್ಯಕ್ಷರ ನೇಮಕದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಕರ್ನಾಟಕದ ಬಗ್ಗೆ ಈವರೆಗೂ ಪ್ರಸ್ತಾಪ ಕೇಳಿ ಬಂದಿಲ್ಲ. ಈ ಬಗ್ಗೆ ಚರ್ಚಿಸಲು ನಾನು ದೆಹಲಿಗೆ ಬಂದಿಲ್ಲ, ನಾನು ಆ ರೇಸ್‌ನಲ್ಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashok) ಹೇಳಿದ್ದಾರೆ.

    ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿರುವ ಆರ್.ಅಶೋಕ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ರಾಜ್ಯಾಧ್ಯಕ್ಷ ಬದಲಾವಣೆ ಚರ್ಚೆ ಬೆನ್ನಲ್ಲೇ ಹೀಗೆ ಭೇಟಿಯಾಗಿರುವುದು ಕುತೂಹಲ ಮೂಡಿಸಿತ್ತು.ಇದನ್ನೂ ಓದಿ: ಇರಾನ್‌ನ ಪರಮಾಣು ಯೋಜನೆಗೆ 30 ಶತಕೋಟಿ ಡಾಲರ್‌ ನೆರವು ಪ್ರಸ್ತಾಪಿಸಿದ ಅಮೆರಿಕ

    ವರಿಷ್ಠರ ಭೇಟಿ ಬಳಿಕ ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯಾಧ್ಯಕ್ಷರ ಬಗ್ಗೆ ಚರ್ಚೆ ನಡೆದಿಲ್ಲ. ಆ ಬಗ್ಗೆ ಚರ್ಚಿಸಲು ನಾನು ಬಂದಿಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ಬಂದು ರಾಜ್ಯದಲ್ಲಿ ನಡೆಯುವ ಬೆಳವಣಿಗೆ ಬಗ್ಗೆ ಮಾಹಿತಿ ನೀಡಲು ಸೂಚಿಸಿದ್ದರು. ಅದರಂತೆ ನಾನು ಮಾಹಿತಿ ನೀಡಲು ಬಂದಿದ್ದೇನೆ ಎಂದರು.

    ನಮ್ಮ ವರಿಷ್ಠರ ಜೊತೆಗೆ ಸುಧೀರ್ಘ ಮಾತುಕತೆ ನಡೆಸಿದ್ದೇನೆ. ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಗೊಂದಲ, ಶಾಸಕರ ಹೇಳಿಕೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ನಾವು ಹೋರಾಟ ಮಾಡುತ್ತಿದ್ದೇವೆ, ನಮ್ಮ ಹೋರಾಟದಿಂದ ಸಚಿವರೊಬ್ಬರು ರಾಜೀನಾಮೆ ನೀಡಿದರು. ಸಿಎಂ ಸಿದ್ದರಾಮಯ್ಯ ಸೈಟ್ ವಾಪಸ್ ನೀಡಿದರು. ಸರ್ಕಾರದ ವಿರುದ್ಧ ಹೋರಾಟ ಮಾಡಲು ನಮಗೆ ಮಾರ್ಗದರ್ಶನ ಮಾಡುತ್ತಾರೆ, ಹೋರಾಟದಲ್ಲಿ ಹಿಂದೆ ಉಳಿಯುವ ಪ್ರಶ್ನೆಯೇ ಇಲ್ಲ ಎಂದರು.

    ದೆಹಲಿಗೆ ಬಂದು ರಾಜ್ಯಾಧ್ಯಕ್ಷರ ಬಗ್ಗೆ ಚರ್ಚಿಸುವ ಅಗತ್ಯ ಇಲ್ಲ. ಬೆಂಗಳೂರಿಗೆ ಬಂದಾಗಲೇ ಅಮಿತ್ ಶಾ ಅವರ ಜೊತೆಗೆ ಸುದೀರ್ಘವಾಗಿ ಮಾತುಕತೆ ನಡೆಸಿದ್ದೇನೆ. ಕಾಂಗ್ರೆಸ್ ಸರ್ಕಾರ ನಿರ್ಗಮಿತ ಸರ್ಕಾರ, ಸರ್ಕಾರದ ವಿರುದ್ಧ ಅವರ ಶಾಸಕರೇ ಮಾತನಾಡುತ್ತಿದ್ದಾರೆ. ಶಾಸಕರು ರೆಬಲ್ ಆದರೆ, ಸರ್ಕಾರದ ಅವಧಿ ಮುಗಿತು ಎಂದರ್ಥ. ಮುಂದಿನ ಬಾರಿ ಈ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.ಇದನ್ನೂ ಓದಿ: ಮಾದಕ ಲುಕ್‌ನಲ್ಲಿ ಸಪ್ತಮಿ ಶೈನ್‌ – ಅದೆಷ್ಟು ಅಂತ ನಮ್ಮ ಎದೆಗೆ ಕೊಳ್ಳಿ ಇಡ್ತೀರಿ ಅಂದ್ರು ಪಡ್ಡೆ ಹೈಕ್ಳು

  • ಬಿಜೆಪಿ ನೂತನ ರಾಷ್ಟ್ರಾಧ್ಯಕರ ಆಯ್ಕೆ ಪ್ರಕ್ರಿಯೆ ಚುರುಕು – ಶೀಘ್ರದಲ್ಲಿ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲೂ ಅಧ್ಯಕ್ಷರ ಬದಲಾವಣೆ?

    ಬಿಜೆಪಿ ನೂತನ ರಾಷ್ಟ್ರಾಧ್ಯಕರ ಆಯ್ಕೆ ಪ್ರಕ್ರಿಯೆ ಚುರುಕು – ಶೀಘ್ರದಲ್ಲಿ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲೂ ಅಧ್ಯಕ್ಷರ ಬದಲಾವಣೆ?

    ನವದೆಹಲಿ: ಬಿಜೆಪಿ (BJP) ತನ್ನ ಹೊಸ ರಾಷ್ಟ್ರಾಧ್ಯಕರ ಆಯ್ಕೆ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದು, ಪ್ರಮುಖ ಪ್ರದೇಶಗಳಲ್ಲಿ ರಾಜ್ಯಾಧ್ಯಕ್ಷರನ್ನು ಅಂತಿಮಗೊಳಿಸಲು ಪಕ್ಷದ ಉನ್ನತ ಮಟ್ಟದ ನಾಯಕರು ಚರ್ಚೆ ನಡೆಸಿದ್ದಾರೆ. ಮಂಗಳವಾರ (ಏ.15) ರಾತ್ರಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಾಲಿ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಹಿರಿಯ ನಾಯಕರು ಈ ಬಗ್ಗೆ ಚರ್ಚೆ ನಡೆಸಿದ್ದಾರೆ.

    ಈಗಾಗಲೇ 14 ರಾಜ್ಯಾಧ್ಯಕ್ಷರನ್ನು ನೇಮಿಸಲಾಗಿದೆ. ಆದರೆ ಪಕ್ಷದ ಸಂವಿಧಾನದ ಪ್ರಕಾರ ರಾಷ್ಟ್ರೀಯ ಅಧ್ಯಕ್ಷೀಯ ಚುನಾವಣೆಯನ್ನು ನಡೆಸುವ ಮೊದಲು ಕನಿಷ್ಠ 19 ರಾಜ್ಯಗಳಲ್ಲಿ ಚುನಾವಣೆ ನಡೆಸಬೇಕು. ಈ ಹಿನ್ನೆಲೆ ಬಾಕಿ ಐದು ರಾಜ್ಯಗಳ ಅಧ್ಯಕ್ಷರ ಬದಲಾವಣೆಗೆ ಬಗ್ಗೆ ಚರ್ಚೆ ನಡೆದಿದೆ ಎಂದು ಉನ್ನತ ಮೂಲಗಳು ಹೇಳಿವೆ.ಇದನ್ನೂ ಓದಿ: ಚಿಕ್ಕಮಗಳೂರು | ಸುಗ್ಗಿ ಹಬ್ಬದ ಜಾತ್ರಾ ಮಹೋತ್ಸವದಲ್ಲಿ ಗನ್ ಹಿಡಿದು ಗುರಿಯಿಟ್ಟ ಸಿ.ಟಿ ರವಿ

    ಬಿಜೆಪಿ ಹೈಕಮಾಂಡ್ (BJP High Command) ನಾಯಕರು ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಮತ್ತು ಒಡಿಶಾ ರಾಜ್ಯಗಳಿಗೆ ಹೊಸ ರಾಜ್ಯ ಘಟಕದ ಮುಖ್ಯಸ್ಥರ ನೇಮಕದ ಕುರಿತು ಚರ್ಚೆ ನಡೆಸಿದ್ದಾರೆ. ಉಳಿದ ಪ್ರಮುಖ ರಾಜ್ಯಗಳ ರಾಜ್ಯಾಧ್ಯಕ್ಷರ ಹೆಸರುಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸುವ ಸಾಧ್ಯತೆಯಿದೆ. ಈ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ಬಿಜೆಪಿಯ ರಾಷ್ಟ್ರೀಯ ಚುನಾವಣಾ ಅಧಿಕಾರಿ ಮುಂದಿನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ವೇಳಾಪಟ್ಟಿಯನ್ನು ಔಪಚಾರಿಕವಾಗಿ ಘೋಷಣೆ ಮಾಡಬಹುದು.

    ಮೂಲಗಳ ಪ್ರಕಾರ, ಈ ತಿಂಗಳ ಅಂತ್ಯದ ವೇಳೆಗೆ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಚುನಾವಣೆ ನಡೆಯಬಹುದು. ಹವಾಮಾನ ವೈಪರೀತ್ಯದಿಂದಾಗಿ ಜಮ್ಮುವಿಗೆ ನಿಗದಿಪಡಿಸಲಾಗಿದ್ದ ಭೇಟಿಯನ್ನು ಮುಂದೂಡಲಾಗಿದ್ದರಿಂದ, ಪ್ರಧಾನಿಯವರ ವೇಳಾಪಟ್ಟಿಯಲ್ಲಿ ಸಂಬಂಧವಿಲ್ಲದ ಬದಲಾವಣೆಗಳ ಮಧ್ಯೆ ಆಂತರಿಕ ಬೆಳವಣಿಗೆಗಳು ಸಂಭವಿಸಿವೆ. ವಿದೇಶ ಪ್ರವಾಸದಿಂದ ಹಿಂದಿರುಗಿದ ನಂತರ ಪ್ರಧಾನಿ ಮತ್ತು ರಾಷ್ಟ್ರಪತಿಗಳ ನಡುವಿನ ಇತ್ತೀಚಿನ ಸಭೆಯನ್ನು ನಿಯಮಿತ ಶಿಷ್ಟಾಚಾರ ಎಂದು ವಿವರಿಸಲಾಗಿದೆ.

    ಈ ಬೆಳವಣಿಗೆಗಳ ಆಧಾರದ ಮೇಲೆ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಮಹತ್ವದ ಬೆಳವಣಿಗೆಯಾಗುವ ಸಾಧ್ಯತೆಗಳಿದೆ. ಬಿ.ವೈ ವಿಜಯೇಂದ್ರ (BY Vijayendra) ಅವರನ್ನು ಬದಲಿಸಬೇಕು ಎನ್ನುವ ಒತ್ತಡಗಳಿದ್ದು, ಹೈಕಮಾಂಡ್ ವಿಜಯೇಂದ್ರ ಅವರನ್ನು ಬದಲಿಸಲಿದೆಯಾ ಅಥವಾ ಮುಂದುವರಿಸಲಿದೆಯಾ ಎನ್ನುವುದು ತಿಂಗಳಾಂತ್ಯಕ್ಕೆ ತಿಳಿಯಲಿದೆ.ಇದನ್ನೂ ಓದಿ: ಮುಸ್ಲಿಮರನ್ನು ಭಯೋತ್ಪಾದಕರಂತೆ ಬಿಂಬಿಸಿದ್ದೀರಿ: ವಿಜಯ್‌ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಜಮಾತ್‌

  • ವಿಜಯೇಂದ್ರನ ಕರ್ಮಕಾಂಡದ ಬಗ್ಗೆ ವಿವರಿಸಲು ದೆಹಲಿಗೆ ಹೊರಟಿದ್ದೇವೆ – ಯತ್ನಾಳ್ ಲೇವಡಿ

    ವಿಜಯೇಂದ್ರನ ಕರ್ಮಕಾಂಡದ ಬಗ್ಗೆ ವಿವರಿಸಲು ದೆಹಲಿಗೆ ಹೊರಟಿದ್ದೇವೆ – ಯತ್ನಾಳ್ ಲೇವಡಿ

    ವಿಜಯಪುರ: ಯಡಿಯೂರಪ್ಪ ಮಗನ ಕರ್ಮಕಾಂಡ ವಿವರಿಸಲು ಮಂಗಳವಾರ ಮಧ್ಯಾಹ್ನ ದೆಹಲಿಗೆ ಹೊರಟಿದ್ದೇವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು.

    ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ತಟಸ್ಥರಿದ್ದವರು ಇದೀಗ ನಮ್ಮ ನಿಷ್ಠಾವಂತರ ಗುಂಪು ಸೇರಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಹೈಕಮಾಂಡ್ ಗಮನಕ್ಕೆ ತರಲು ಹೊರಟಿದ್ದೇವೆ. ವಂಶಪಾರಂಪರಿಕ, ಕುಟುಂಬಶಾಹಿ ವಿರುದ್ಧ ನಮ್ಮ ಹೋರಾಟ ಇದೆ. ಯಡ್ಡಿಯೂರಪ್ಪ ಅವರ ಮಗನ ಕರ್ಮಕಾಂಡದ ಬಗ್ಗೆ ವಿವರಿಸಲು ಹೊರಟಿದ್ದೇವೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಈ ವರ್ಷ SSLC ವಿದ್ಯಾರ್ಥಿಗಳಿಗೆ 10% ಗ್ರೇಸ್ ಅಂಕ ಇಲ್ಲ: ಮಧು ಬಂಗಾರಪ್ಪ ಘೋಷಣೆ

    ಇನ್ನೂ ಕುಟುಂಬಶಾಹಿ ರಾಜಕಾರಣ ಬಿಜೆಪಿಯಲ್ಲಿ ಕೊನೆಗೊಳ್ಳಬೇಕು. ಭ್ರಷ್ಟಾಚಾರ ಕುಟುಂಬ ಈ ರಾಜ್ಯದಿಂದ ತೊಲಗಬೇಕು. ಹಿಂದುತ್ವದ ಪರ ಇರುವ ನಾಯಕತ್ವ ಬರಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಯಾರು ಕೂಡ ಹಿಂದೂತ್ವದ ರಕ್ಷಣೆ ಮಾಡಲಿಲ್ಲ. ಹಿಂದೂಗಳ ಕೊಲೆಯಾದರೂ ಯಾರು ಕೇಳಲಿಲ್ಲ. ಕೇವಲ ಕಠಿಣ ಕ್ರಮ ಅನ್ನೋದನ್ನು ಬಿಟ್ಟರೆ ಏನು ಮಾಡಲಿಲ್ಲ. ಅದಕ್ಕಾಗಿಯೇ ರಾಜ್ಯದಲ್ಲಿ ಬಿಜೆಪಿ ಹೀನಾಯ ಪರಿಸ್ಥಿತಿ ತಲುಪಿದೆ. ಅದಕ್ಕೆ ಕಾರಣ ಹಿಂದುತ್ವ ಕೈಬಿಟ್ಟು ರಾಜಕಾರಣ ಮಾಡಿದ್ದು. ನಮ್ಮ ಟೀಂ ಈಗ ಬಹಳ ದೊಡ್ಡದಾಗಿದೆ. ತಟಸ್ಥ ಎಂದು ಎರಡು ಕಡೆ ಆಟ ಆಡುತ್ತಿದ್ದರು. ಈಗ ಅವರಿಗೂ ಗೊತ್ತಾಗಿದೆ. ಅವರೆಲ್ಲ ನಿಷ್ಠಾವಂತರಾಗಿದ್ದಾರೆ ಎಂದರು.

    ವಿಜಯೇಂದ್ರನನ್ನು ರಾಜ್ಯಾಧ್ಯಕ್ಷನಾಗಿ ಮುಂದುವರೆಸಿದ್ರೆ ಕರ್ನಾಟಕದಲ್ಲಿ ಹೀನಾಯ ಸ್ಥಿತಿ ಬರುತ್ತದೆ. ಮೊನ್ನೆ ವಿಜಯೇಂದ್ರನಿಗೆ ಬಗ್ಗೆ ಹೀನಾಯವಾಗಿ ಬೈದರೂ ಉತ್ತರ ಕೊಡಲಿಲ್ಲ. ಯಡ್ಡಿಯೂರಪ್ಪನಿಗೆ ಮತ್ತು ಮಗನಿಗೆ ಡಿಕೆಶಿ ಭಯಪಡಿಸಿಬಿಟ್ಟಿದ್ದಾರೆ. ನೀವೇನಾದರೂ ನಮ್ಮ ಹಗರಣ ಹೊರತೆಗೆದರೆ ನಿಮ್ಮ ಪೋಕ್ಸೋ ಕೇಸ್ ಇದೆ, ನಕಲಿ ಸಹಿ ಮಾಡಿದಿಯಾ, ಅವನೆಲ್ಲ ಹೊರತೆಗೆಯುತ್ತೇವೆ ಅಂತಾ ಹೆದರಿಸಿದ್ದಾರೆ. ಇಂತಹವರು ಬೇಕಾ ಅಂತಾ ನಾವು ಹೈಕಮಾಂಡ್‌ಗೆ ಕೇಳುತ್ತಿದ್ದೇವೆ ಎಂದರು.ಇದನ್ನೂ ಓದಿ: ಮಂಡ್ಯ | ವಿಸಿ ನಾಲೆಗೆ ಕಾರು ಪಲ್ಟಿ – ಓರ್ವ ಸಾವು, ಇಬ್ಬರು ನಾಪತ್ತೆ

     

  • ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ತುಳುಕುತ್ತಿದೆ: ಬಿಎಸ್‍ವೈ

    ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ತುಳುಕುತ್ತಿದೆ: ಬಿಎಸ್‍ವೈ

    ಶಿವಮೊಗ್ಗ: ಬಿ.ವೈ ವಿಜಯೇಂದ್ರ  (BY Vijayendra) ಅವರು ರಾಜ್ಯಾಧ್ಯಕ್ಷರಾದ ಬಳಿಕ ರಾಜ್ಯದ ಉದ್ದಗಲಕ್ಕೆ ಅಭೂತಪೂರ್ವ ಸ್ವಾಗತ ಸಿಗುತ್ತಿದೆ. ಅಲ್ಲದೆ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ತುಳುಕುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (bS Yediyurappa) ಹೇಳಿದ್ದಾರೆ.

    ಬಿ.ವೈ.ವಿಜಯೇಂದ್ರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರದ ಬಗ್ಗೆ ಜನ ಬೇಸತ್ತಿದ್ದಾರೆ. ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಅಧಿಕಾರಕ್ಕೆ ಇರಲು ಹಕ್ಕಿಲ್ಲ ರಾಜೀನಾಮೆ ಕೊಟ್ಟು ಹೋಗಿ ಅಂತಿದ್ದಾರೆ ಎಂದರು.

    ಇವತ್ತು ಚುನಾವಣೆ ನಡೆದರೂ ರಾಜ್ಯದಲ್ಲಿ 135-136 ಬಿಜೆಪಿ (BJP) ಸೀಟು ಬರುತ್ತದೆ. ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಅಂತಹ ವಾತಾವರಣ ಸೃಷ್ಟಿಯಾಗಿದೆ. ಮಾಧ್ಯಮದಲ್ಲಿ ಬಂದ ವರದಿ ಆಧಾರದ ಮೇಲೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಈಗ ಚುನಾವಣೆ ನಡೆದರೂ ಸ್ಪಷ್ಟ ಬಹುಮತ ಬರೋದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಇಡೀ ದೇಶ ಪ್ರಾರ್ಥಿಸುತ್ತಿದ್ರೆ ಗಾಂಧಿ ಕುಟುಂಬ ಮಾತ್ರ ಡ್ಯಾನ್ಸ್ ಮಾಡ್ತಿತ್ತು: ಅಸ್ಸಾಂ ಸಿಎಂ ಕಿಡಿ

    ಲೋಕಸಭೆಯಲ್ಲಿ 28 ಕ್ಕೆ 28 ಗೆಲ್ಲಬೇಕು. 28 ಕ್ಕೆ 28 ಗೆಲ್ಲುವ ಮೂಲಕ ನಮ್ಮ ಶಕ್ತಿ ಏನು ಎಂಬುದನ್ನು ತೋರಿಸಬೇಕಿದೆ ಎಂದು ಬಿಎಸ್‍ವೈ ತಿಳಿಸಿದರು.

  • ಈಗ ನಾನೊಬ್ಬ ಸಾಮಾನ್ಯ ಕಾರ್ಯಕರ್ತ: ಅಸಮಾಧಾನ ಹೊರಹಾಕಿದ ಸಿಟಿ ರವಿ

    ಈಗ ನಾನೊಬ್ಬ ಸಾಮಾನ್ಯ ಕಾರ್ಯಕರ್ತ: ಅಸಮಾಧಾನ ಹೊರಹಾಕಿದ ಸಿಟಿ ರವಿ

    ಚಿಕ್ಕಬಳ್ಳಾಪುರ: ಬಿಜೆಪಿ (BJP) ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ (BY Vijayendra) ಆಯ್ಕೆ ಹಿನ್ನೆಲೆ ಮಾಜಿ ಸಚಿವ ಸಿಟಿ ರವಿ (CT Ravi) ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

    ಮಧ್ಯಪ್ರದೇಶದಿಂದ ಆಗಮಿಸಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬದಲಾಗದೇ ಇರೋದು ಕಾರ್ಯಕರ್ತ ಅನ್ನೋದು. ಈಗ ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಪಕ್ಷ ನೇಮಕ ಮಾಡಿದೆ. ವೈಚಾರಿಕ ಭದ್ರತೆ ಜೊತೆಗೆ ಪಕ್ಷ ಕಟ್ಟುವ, ಬೆಳೆಸುವ ಕೆಲಸ ಮಾಡಬೇಕಿದೆ. ಜೊತೆಗೆ 28ಕ್ಕೆ 28 ಸ್ಥಾನ ಗೆಲ್ಲಿಸುವ ಹೊಣೆಗಾರಿಕೆ ಇದೆ, ಯಶಸ್ವಿಯಾಗಲಿ ಎಂದು ತಿಳಿಸಿದರು. ಇದನ್ನೂ ಓದಿ: ಸಾಮಾನ್ಯ ಕಾರ್ಯಕರ್ತನ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಭೇಟಿ – ಸಿಹಿ ತಿನ್ನಿಸಿ, ಸನ್ಮಾನಿಸಿ ಸಂಭ್ರಮಾಚರಣೆ

    ನೂತನ ಅಧ್ಯಕ್ಷನ ಆಯ್ಕೆ ಬಗ್ಗೆ ಕಾಂಗ್ರೆಸ್ (Congress) ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಸಮಾಧಾನದ ಬಗ್ಗೆ ಈಗ ನಾನು ಏನು ಮಾತನಾಡಲ್ಲ. ಈಗಾಗಲೆ ಬಹಳಷ್ಟು ಮಾತನಾಡಿದ್ದೇನೆ. 35 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದೇನೆ. ಬೂತ್ ಅಧ್ಯಕ್ಷನಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವರೆಗೂ ಜವಾಬ್ದಾರಿ ನಿರ್ವಹಿಸಿದ್ದೇನೆ. ಈಗಾಗಲೆ ಬಹಳ ವಿಷಯ ಮಾತನಾಡಿ ಬಿಟ್ಟಿದ್ದೇನೆ. ಈಗ ಏನಾದರೂ ಮಾತನಾಡಿದರೇ ನಮ್ಮ ಮಾತೇ ನಮಗೆ ತಿರುಗುಬಾಣವಾಗುತ್ತೆ ಎಂದು ಹೇಳಿದರು. ಇದನ್ನೂ ಓದಿ: ಸಿ.ಟಿ.ರವಿ ಆಪ್ತನಿಂದಲೇ ಬಿಜೆಪಿಗೆ ಭಾರೀ ಮುಖಭಂಗ; ಅವಿಶ್ವಾಸ ಮಂಡನೆಯಲ್ಲಿ ಬಿಜೆಪಿಗೆ ಸೋಲು

  • ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆಯಲ್ಲಿ ದೆಹಲಿ ನಾಯಕರು ಪ್ರಯೋಗ ಮಾಡುತ್ತಿದ್ದಾರೆ: ಜಗದೀಶ್ ಶೆಟ್ಟರ್ ವ್ಯಂಗ್ಯ

    ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆಯಲ್ಲಿ ದೆಹಲಿ ನಾಯಕರು ಪ್ರಯೋಗ ಮಾಡುತ್ತಿದ್ದಾರೆ: ಜಗದೀಶ್ ಶೆಟ್ಟರ್ ವ್ಯಂಗ್ಯ

    ಹುಬ್ಬಳ್ಳಿ: ಬಿಜೆಪಿ (BJP) ರಾಜ್ಯಾಧ್ಯಕ್ಷ (State President) ಸ್ಥಾನಕ್ಕೆ ಬರೀ ಹೆಸರು ಕೇಳಿ ಬರುವುದೇ ಆಯಿತು. ಯಾರು ಅಧ್ಯಕ್ಷರು ಎಂದು ಬಹಿರಂಗವಾಗಿ ಹೇಳಲಿ. ದೆಹಲಿ ವರಿಷ್ಠರು ಒಂದು ಹೆಸರು ಬಿಟ್ಟು ಪ್ಲಸ್ ಮೈನಸ್ ನೋಡಿ ಅದು ಫೇಲ್ ಆಯಿತು ಅಂದರೆ ಮತ್ತೆ ಬೇರೆ ಹೆಸರು ಬಿಡುತ್ತಾರೆ. ರಾಜ್ಯಾಧ್ಯಕ್ಷ ಆಯ್ಕೆಯಲ್ಲಿ ಪ್ರಯೋಗ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ವ್ಯಂಗ್ಯವಾಡಿದ್ದಾರೆ.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಶೋಭಾ ಕರಂದ್ಲಾಜೆ ಅವರು ಅಧ್ಯಕ್ಷ ಸ್ಥಾನದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ಇದು ಊಹಾಪೋಹ ಎಂದು ಹೇಳಿದ್ದಾರೆ. ಇದನ್ನು ಹೇಗೆ ಅಧಿಕೃತ ಎಂದು ಹೆಳುತ್ತೀರಿ. ಇದಕ್ಕೆ ಯಾವುದೇ ಅರ್ಥ ಇಲ್ಲ. ಒಂದು ರಾಷ್ಟ್ರೀಯ ಪಕ್ಷದ ಸೋಲು ಆಗಬೇಕು ಎನ್ನುವ ಉದಾಹರಣೆ ಇದ್ದರೆ ಇದಕ್ಕೆ ರಾಜ್ಯ ಬಿಜೆಪಿ ಪರಿಸ್ಥಿತಿಯೇ ಸಾಕ್ಷಿ ಎಂದರು. ಇದನ್ನೂ ಓದಿ: ಸದ್ದಿಲ್ಲದೇ ನಡೆಯುತ್ತಿದೆ ಮಲಪ್ರಭಾ ನದಿ ಪ್ರದೇಶ ಒತ್ತುವರಿ ಕಾರ್ಯ – ಕಣ್ಮುಚ್ಚಿ ಕುಳಿತಿದೆ ಜಿಲ್ಲಾಡಳಿತ

    ರಾಜ್ಯಾಧ್ಯಕ್ಷರನ್ನು, ವಿಪಕ್ಷ ನಾಯಕರನ್ನು ಆಯ್ಕೆ ಮಾಡದ ಶೋಚನೀಯ ಪರಿಸ್ಥಿತಿ ಬಿಜೆಪಿಗೆ ಬಂದಿದೆ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕೆಂದಿದ್ದಾರೆ. ಸಂಕ್ರಾಂತಿ ನಂತರ ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಆಗುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಏನು ಆಗೋದಿಲ್ಲ. ಕಾಂಗ್ರೆಸ್ ಸರ್ಕಾರ ಗಟ್ಟಿಮುಟ್ಟಾಗಿ ಐದು ವರ್ಷ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: 2022ರಲ್ಲೇ ಹುಲಿ ಚರ್ಮ ಹಿಂದಿರುಗಿಸಲಾಗಿದೆ- ವಿನಯ್ ಗುರೂಜಿ ಆಶ್ರಮದಿಂದ ಸ್ಪಷ್ಟನೆ

    104 ಸೀಟು ಇದ್ದಾಗಾಲೇ ಏನು ಮಾಡಲು ಆಗಿಲ್ಲ. ಈಗ ಏನು ಮಾಡಲು ಸಾಧ್ಯ? ಆದರೆ ಸಂಕ್ರಾಂತಿ ನಂತರ ಅಲ್ಲೋಲ ಕಲ್ಲೋಲ ಆಗುತ್ತದೆ ಎಂದು ಆಶಾಭಾವನೆ ಮೂಡಿಸಿ ಕಾರ್ಯಕರ್ತರನ್ನು ಪಕ್ಷ ಬಿಟ್ಟು ಹೋಗುತ್ತಿರುವ ನಾಯಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಬಿಜೆಪಿ ಮಾಡುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸರ್ಕಾರದ ಹಣ ತಿಂದಿಲ್ಲವೆಂದು ಹೆಚ್‍ಡಿಕೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡ್ಲಿ: ಬಾಲಕೃಷ್ಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಕೌಂಟ್‍ಡೌನ್?- ಶೋಭಾ ಕರಂದ್ಲಾಜೆ ಹೆಸರು ಮುಂಚೂಣಿ

    ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಕೌಂಟ್‍ಡೌನ್?- ಶೋಭಾ ಕರಂದ್ಲಾಜೆ ಹೆಸರು ಮುಂಚೂಣಿ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಇನ್ನೆರಡು ದಿನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಮಾಡಲಾಗುತ್ತದೆ ಎಂಬ ವಿಚಾರ ಪಕ್ಷದ ಒಳಗೆ ಗುಸು ಗುಸು ಚರ್ಚೆ ಶುರುವಾಗಿದೆ. ಈ ಮೂಲಕ ಬಿಜೆಪಿ ಹೈಕಮಾಂಡ್ ಮೂರು ಶಕ್ತಿ.. ಸ್ತ್ರೀಶಕ್ತಿ ಅಸ್ತ್ರ್ರ ಪ್ರಯೋಗಿಸುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನೂ ಎದುರಿಸಬೇಕು. ಸ್ವಪಕ್ಷೀಯ ಬಣಗಳ ಕಿತ್ತಾಟಕ್ಕೂ ಬ್ರೇಕ್ ಹಾಕಬೇಕು. ಈ ಸಂಬಂಧ ಎಕ್ಸ್‌ಕ್ಲೂಸಿವ್ ಸುದ್ದಿಯೊಂದು ನಿಮ್ಮ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಡಿಕೆಶಿ ವಾರ್ನಿಂಗ್‍ಗೂ ಡೋಂಟ್‍ಕೇರ್- ಸಚಿವ ಆಕಾಂಕ್ಷಿಗಳಿಂದ ಬದಲಾವಣೆ ಚರ್ಚೆ

    ಮಂಗಳವಾರ ಅಥವಾ ಬುಧವಾರದ ಒಳಗೆ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕಟವಾಗುವ ಸಾಧ್ಯತೆ ಇದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಮುಂಚೂಣಿಗೆ ಬಂದಿದೆ. ಹಿಂದುತ್ವ ಫೈರ್ ಬ್ರ್ಯಾಂಡ್, ಮಹಿಳಾ ಮತದಾರರ ಚಿತ್ತ, ಒಕ್ಕಲಿಗ ಅಸ್ತ್ರ ಪ್ರಯೋಗವಾಗಲಿದೆ ಎನ್ನಲಾಗಿದ್ದು, ಒಟ್ಟಿನಲ್ಲಿ ಸಿದ್ದರಾಮಯ್ಯ, ಡಿಕೆಶಿಯನ್ನ ಎದುರಿಸಬಲ್ಲ ಸ್ತ್ರೀಶಕ್ತಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಮೆಗಾ ಪ್ಲಾನ್ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೇಟ್ ಆದ್ರೂ ಲೇಟೆಸ್ಟ್ ಆಗಿ ಒಂದೆರಡು ತಿಂಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ: ರಾಜೂ ಗೌಡ

    ಲೇಟ್ ಆದ್ರೂ ಲೇಟೆಸ್ಟ್ ಆಗಿ ಒಂದೆರಡು ತಿಂಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ: ರಾಜೂ ಗೌಡ

    ಯಾದಗಿರಿ: ಬಿಜೆಪಿ (BJP) ವಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಸಚಿವ ರಾಜೂಗೌಡ (Raju Gowda) ಯಾದಗಿರಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಹೈಕಮಾಂಡ್‍ಗೆ ರಾಜ್ಯ ನಾಯಕರ ಮೇಲೆ ನಂಬಿಕೆಯಿದೆ. ಲೇಟ್ ಆಗಿ ಆದ್ರೂ ಲೇಟೆಸ್ಟ್ ಆಗಿ ಒಳ್ಳೆಯ ನಾಯಕನ ಆಯ್ಕೆಗಾಗಿ ಆಲೋಚನೆ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.

    ಒಂದೆರಡು ತಿಂಗಳಲ್ಲಿ ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷನ ಆಯ್ಕೆ ಮಾಡ್ತಾರೆ ಎಂದ ರಾಜೂಗೌಡ, ಬಾಂಬೆ ಬಾಯ್ಸ್ ಘರ್ ವಾಪ್ಸಿ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಚರ್ಚೆ ಮಾಡಿದಾಗ ಪಕ್ಷ ಬಿಟ್ಟು ಹೋಗಲ್ಲ ಎಂದಿದ್ದಾರೆ. ಈಗ ಯಾರು ಹೋಗ್ತಿನಿ ಅಂತ ಹೇಳಂಗಿಲ್ಲ, ಅವರ ಮನಸ್ಸಿನಲ್ಲಿ ಇದ್ದದ್ದನ್ನ ಮಾಡ್ತಾರೆ. ನಾವು ಸ್ನೇಹಿತರಾಗಿ ಕೆಲವು ಸಲಹೆ ಕೊಡ್ತಿವಿ ಅಷ್ಟೇ. ಪಕ್ಷದಲ್ಲಿ ಅಸಮಾಧಾನ ಆಗಿದ್ರಿಂದ ಸ್ವಲ್ಪ ಕೋಪಗೊಂಡಿದ್ದು ನಿಜ ಎಂದಿದ್ದಾರೆ. ನೆಗಡಿ ಆಗೇತಿ ಅಂತ ಮೂಗು ಕೋಯ್ಕಂಡ್ರೆ ತಪ್ಪು. ಕಾದು ನೋಡೋಣ ಯಾರು ಯಾವಾಗ ಹೋಗ್ತಾರೆ. ನಮಗೂ ಅಧಿಕಾರ ಸಿಗುತ್ತೆ ಅಂತ ಬಾಂಬೆ ಟಿಂ ಸೇರಿಸ್ಕೊಂಡಿದ್ದೇವೆ. ಈಗ ಅವರು ಹೋಗ್ತಿದ್ದಾರೆ ಅಂದ್ರೆ ಯಾಕೆ ಹೋಗ್ತಾರೆ ಕೇಳೋಣ ಎಂದರು. ಇದನ್ನೂ ಓದಿ: ಕಾಣೆಯಾಗಿದ್ದ ಹಸ್ಕಿ ತಳಿಯ ಕುರುಡು ಶ್ವಾನ ಪತ್ತೆ ಹಚ್ಚಿದ ಪೊಲೀಸರು – ಸಂತಸ ಹಂಚಿಕೊಂಡ ಕುಟುಂಬ

    ಇನ್ನೂ ರೇಣುಚಾರ್ಯ (Renukacharya) ಕಾಂಗ್ರೆಸ್ ಸೇರ್ಪಡೆ ವದಂತಿ ವಿಚಾರಕ್ಕೆ ವ್ಯಂಗ್ಯವಾಡಿದ ರಾಜೂಗೌಡ, ನಮ್ಮ ರೇಣುಕಾ ಮುತ್ಯಾ ಏನ್ ಕಾಂಗ್ರೆಸ್ (Congress) ಸೇರೋದಿಲ್ಲ. ನಮ್ಮ ಮುತ್ಯಾಗ ಸ್ವಲ್ಪ ಭೇಟಿಯಾಗುವ ಚಾಳಿ ಇದೆ. ಅದಕ್ಕಾಗಿ ಕಾಂಗ್ರೆಸ್ ನಾಯಕರನ್ನ ಭೇಟಿ ಆಗಿದ್ದಾರೆ ಅಷ್ಟೇ. ಇದಕ್ಕಾಗಿ ನಾನು ಇವತ್ತೇ ಹೇಳ್ತಿದ್ದೀನಿ ರೈತರ ಹೊಲಗಳಿಗೆ ನೀರು ಹರಿಸೋ ವಿಚಾರವಾಗಿ ನಾನು ಸಿಎಂ ಹಾಗೂ ಡಿಸಿಎಂ ಭೇಟಿಯಾಗಿ ರೈತರಿಗೆ ನೀರು ಹರಿಸುವ ಬಗ್ಗೆ ಚರ್ಚಿಸ್ತೀನಿ. ಕಾಂಗ್ರೆಸ್ ನಾಯಕರನ್ನ ಭೇಟಿಯಾದ ರಾಜುಗೌಡ ಅಂತಾ ಬ್ರೇಕಿಂಗ್ ಮಾಡ್ಬೇಡಿ ಎಂದು ನಗೆಯಾಡಿದ್ರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಸನ್ನಿಹಿತ – ವರಿಷ್ಠರ ಭೇಟಿಗೆ ದೆಹಲಿಗೆ ಸಿಟಿ ರವಿ

    ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಸನ್ನಿಹಿತ – ವರಿಷ್ಠರ ಭೇಟಿಗೆ ದೆಹಲಿಗೆ ಸಿಟಿ ರವಿ

    ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ (BJP) ರಾಜ್ಯಾಧ್ಯಕ್ಷ (State President) ಆಯ್ಕೆ ಸಂಬಂಧ ಒಂದಷ್ಟು ಪೂರಕ ಬೆಳವಣಿಗೆಗಳು ಚುರುಕು ಪಡೆದುಕೊಂಡಿವೆ. ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ ರವಿ (C.T.Ravi) ಹೆಸರು ಕೈಬಿಟ್ಟಿರುವ ವರಿಷ್ಠರು, ಅವರಿಗೆ ಸೋಮವಾರ ದೆಹಲಿಗೆ (Delhi) ಬುಲಾವ್ ಕೊಟ್ಟಿರೋದು ಕುತೂಹಲ ಮೂಡಿಸಿದೆ.

    ಈ ಮಧ್ಯೆ ಭಾನುವಾರ ಬೆಳಗ್ಗೆ ಆರ್‌ಎಸ್‌ಎಸ್ (RSS) ಮುಖಂಡರನ್ನು ಸಿ.ಟಿ ರವಿ ಭೇಟಿ ಮಾಡಿರುವುದು ಈ ನಿಟ್ಟಿನಲ್ಲಿ ಇನ್ನಷ್ಟು ಪುಷ್ಠಿ ಕೊಟ್ಟಿದೆ. ಬರೋಬ್ಬರಿ ಎರಡೂವರೆ ತಿಂಗಳ ಬಳಿಕ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಮೇಲೆ ಗಮನ ಹರಿಸುವ ಲಕ್ಷಣ ಕಾಣಿಸುತ್ತಿದೆ. ರಾಜ್ಯ ಬಿಜೆಪಿಗೆ ಮುಂದಿನ ಸಮರ್ಥ ಸಾರಥಿಯ ಆಯ್ಕೆಗೆ ಹೈಕಮಾಂಡ್ ಮುಂದಾಗಿದೆ. ಈ ನಿಟ್ಟಿನಲ್ಲಿ ಒಂದಷ್ಟು ಸುಳಿವುಗಳು ಸಿಗುತ್ತಿದ್ದು, ಪೂರಕ ವಿದ್ಯಮಾನಗಳು ನಡೆಯುತ್ತಿವೆ. ಮುಂದಿನ ಬಿಜೆಪಿ ಸಾರಥಿಯಾಗಿ ಮಾಜಿ ಶಾಸಕ ಸಿ.ಟಿ ರವಿ ಹೆಸರು ಮುಂಚೂಣಿಯಲ್ಲಿದೆ. ಇದನ್ನೂ ಓದಿ:‌ ಸರ್ಕಾರದಿಂದ ವರ್ಗಾವಣೆ ದಂಧೆ, ಸಿಎಂ ಕುರ್ಚಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ: ಬೊಮ್ಮಾಯಿ

    ಶನಿವಾರವಷ್ಟೇ ಅವರ ಹೆಸರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೊಕ್ ಕೊಟ್ಟಿರೋದು ಈ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿರುವ ಸಿ.ಟಿ ರವಿ, ತಾವೀಗ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಷ್ಟೇ. ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲದಿದ್ದರೂ ವರಿಷ್ಠರು ಕೊಡುವ ಯಾವುದೇ ಜವಾಬ್ದಾರಿ ನಿಭಾಯಿಸುವುದಾಗಿ ಹೇಳುವ ಮೂಲಕ ಪರೋಕ್ಷವಾಗಿ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾರ್ಯಕ್ರಮಕ್ಕೆ ಆಟೋ ಚಲಾಯಿಸಿಕೊಂಡು ಬಂದ ಶಾಸಕ ಪ್ರದೀಪ್ ಈಶ್ವರ್

    ಸೋಮವಾರ ದೆಹಲಿಗೆ ಬರುವಂತೆ ಸಿ.ಟಿ ರವಿಗೆ ಹೈಕಮಾಂಡ್ ನಾಯಕರು ಬುಲಾವ್ ಕೊಟ್ಟಿದ್ದಾರೆ. ಸೋಮವಾರ ದೆಹಲಿಯಲ್ಲಿ ವರಿಷ್ಠರ ಭೇಟಿ ಮಾಡಿ ಸಿ.ಟಿ ರವಿ ಮಾತುಕತೆ ನಡೆಸಲಿದ್ದಾರೆ. ಇನ್ನು ಇದೇ ವೇಳೆ ಭಾನುವಾರ ಬೆಳಗ್ಗೆ ಸಿ.ಟಿ ರವಿ ಬೆಂಗಳೂರಿನಲ್ಲಿ ಹಿರಿಯ ಆರ್‌ಎಸ್‌ಎಸ್ ಮುಖಂಡರನ್ನೂ ಭೇಟಿ ಮಾಡಿ ಮಾತನಾಡಿರುವುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ನನ್ನ ಆತ್ಮಗೌರವಕ್ಕೆ ಧಕ್ಕೆಯಾದ್ರೆ ರಾಜೀನಾಮೆ ಕೊಡುತ್ತೇನೆ ಅಂತ ಹೇಳಿರೋದು ನಿಜ – ಬಿ.ಆರ್ ಪಾಟೀಲ್

    ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗ ಮತ್ತು ವಿಧಾನಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ಲಿಂಗಾಯತ ಸಮೀಕರಣದ ಜೊತೆಗೆ ಎರಡೂ ಹುದ್ದೆಗಳಿಗೂ ಹಿಂದೂ ಫೈರ್ ಬ್ರ್ಯಾಂಡ್ ನಾಯಕರನ್ನೇ ನೇಮಕ ಮಾಡುವ ಲೆಕ್ಕಾಚಾರ ಇದೆ ಎನ್ನಲಾಗಿದೆ. ಆದರೆ ಸದ್ಯಕ್ಕೆ ರಾಜ್ಯಾಧ್ಯಕ್ಷ ಸ್ಥಾನಕ್ಕಷ್ಟೇ ನೇಮಕ ಆಗುತ್ತಾ ಅಥವಾ ಉಭಯ ಸದನಗಳ ವಿಪಕ್ಷ ನಾಯಕರ ಆಯ್ಕೆಯೂ ಫೈನಲ್ ಆಗುತ್ತಾ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಪ್ರವಾಹ ಬಂದ್ರೂ ವೀಡಿಯೋ ಸಂವಾದ ಬಿಟ್ರೆ ಸಿಎಂ ಏನೂ ಮಾಡಿಲ್ಲ: ಬೊಮ್ಮಾಯಿ ಕಿಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿ- ಪತ್ರಕ್ಕೆ ರಕ್ತದ ಹೆಬ್ಬೆಟ್ಟು ಒತ್ತಿ ಮಂಡ್ಯದಲ್ಲಿ ಆಗ್ರಹ

    ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿ- ಪತ್ರಕ್ಕೆ ರಕ್ತದ ಹೆಬ್ಬೆಟ್ಟು ಒತ್ತಿ ಮಂಡ್ಯದಲ್ಲಿ ಆಗ್ರಹ

    ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷ (BJP State President) ಸ್ಥಾನಕ್ಕೆ ಜಟಾಪಟಿ ನಡೆಯುತ್ತಿದ್ದು, ಈ ನಡುವೆ ಮಂಡ್ಯದಲ್ಲಿ ಬಿ.ವೈ ವಿಜಯೇಂದ್ರಗೆ (B Y Vijayendra) ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ವಿನೂತನ ಪ್ರತಿಭಟನೆ ಕೈಗೊಳ್ಳಲಾಗಿದೆ.

    ಮಂಡ್ಯ ಬಿಜೆಪಿ ಕಾರ್ಯಕರ್ತರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾಗೆ (J.P Nadda) ಪತ್ರ ಬರೆದಿದ್ದಾರೆ. ಮಂಡ್ಯದ ಪೋಸ್ಟ್ ಆಫೀಸ್ ಬಳಿ ಈ ಪ್ರತಿಭಟನೆ ನಡೆದಿದ್ದು, ಅಂಚೆ ಕಚೇರಿ (PostOffice) ಮೂಲಕ ನಡ್ಡಾಗೆ ಪತ್ರ ಪೋಸ್ಟ್ ಮಾಡಲಾಗಿದೆ. ಈ ಪತ್ರಕ್ಕೆ ರಕ್ತದ ಹೆಬ್ಬೆಟ್ಟು ಮುದ್ರೆ ಒತ್ತಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಆಗ್ರಹಿಸಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷನಾಗಿ ಬಿ.ವೈ.ವಿಜಯೇಂದ್ರರನ್ನ ನೇಮಕ ಮಾಡಿ. ಯಡಿಯೂರಪ್ಪ (B. S Yediyurappa) ಒಂದು ಸೀಟನ್ನ 114 ಸೀಟ್ ಮಾಡಿ ಪಕ್ಷವನ್ನ ಅಧಿಕಾರಕ್ಕೆ ತಂದ್ರು. ಆದರೆ ಈಗ ರಾಜ್ಯದ ನಾಯಕರ ಬೇಜವ್ದಾರಿತನದಿಂದ ಬಿಜೆಪಿ ಸೋತಿದೆ. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರಿಗೆ ಪಟ್ಟಕಟ್ಟಿ. ಲೋಕಸಭಾ ಚುನಾವಣೆಯಲ್ಲಿ (Loksabha Election) ರಾಜ್ಯದಲ್ಲಿ ಹೆಚ್ಚು ಸೀಟನ್ನು ಬಿಜೆಪಿ ಗೆಲ್ಲುತ್ತೆ. ಪತ್ರದಲ್ಲಿ ರಕ್ತದ ಸಹಿ ಮಾಡಿ ನಿಮಗೆ ಅರ್ಪಣೆ ಮಾಡಿದ್ದೇವೆ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]