ಮುಂಬೈ: ಜಾರ್ಖಂಡ್‌ನಲ್ಲಿ ಆಗಾಗ ಎದುರಾಗುತ್ತಿರುವ ವಿದ್ಯುತ್ ಬಿಕ್ಕಟ್ಟಿನಿಂದ ಬೇಸತ್ತ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಪತ್ನಿ ಸಾಕ್ಷಿ ಧೋನಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಾಕ್ಷಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ತೆರಿಗೆ ಪಾವತಿದಾರಳಾಗಿ ಜಾರ್ಖಂಡ್‌ನಲ್ಲಿ ಇಷ್ಟು ವರ್ಷಗಳಿಂದ ವಿದ್ಯುತ್ ಬಿಕ್ಕಟ್ಟು ಏಕೆ ಇದೆ ಎಂದು ತಿಳಿಯಲು ಬಯಸುತ್ತೇನೆ. ನಾವು ವಿದ್ಯುತ್ ಉಳಿತಾಯ ಮಾಡುವಲ್ಲಿ ಪ್ರಜ್ಞಾಪೂರ್ವಕವಾಗಿ ನಮ್ಮ ಪಾಲಿನ ಕೆಲಸವನ್ನು ಮಾಡುತ್ತಿದ್ದೇವೆ ಎಂಬುದು ನಮಗೆ ತಿಳಿದಿದೆ ಎಂದು ಅವರು ಗರಂ ಆಗಿದ್ದಾರೆ. ಇದನ್ನೂ ಓದಿ: ಮೊದಲ ಪತ್ನಿಯಿಂದ ಒಪ್ಪಿಗೆ ಪಡೆದು 38 ವರ್ಷದ ಟೀಚರ್ ಜೊತೆ 66ರ ಅರುಣ್ ಲಾಲ್ ಮದುವೆ
As a tax payer of Jharkhand just want to know why is there a power crisis in Jharkhand since so many years ? We are doing our part by consciously making sure we save energy !
— Sakshi Singh ????????❤️ (@SaakshiSRawat) April 25, 2022
ರಾಜ್ಯದ ಬಹುತೇಕ ಭಾಗಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚಿನ ತಾಪಮಾನ ಇರುವುದರಿಂದ ರಾಜ್ಯದ ಜನತೆ ಪದೇ ಪದೇ ಲೋಡ್ ಶೆಡ್ಡಿಂಗ್‍ನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಪಶ್ಚಿಮ ಸಿಂಗ್ಭುಮ್, ಕೊಡೆರ್ಮಾ ಮತ್ತು ಗಿರಿದಿಹ್ ಜಿಲ್ಲೆಗಳನ್ನು ಬಿಸಿಗಾಳಿ ಆವರಿಸಿದ್ದು, ಏಪ್ರಿಲ್ 28 ರ ವೇಳೆಗೆ ರಾಂಚಿ, ಬೊಕಾರೊ, ಪೂರ್ವ ಸಿಂಗ್ಭುಮ್, ಗರ್ವಾ, ಪಲಾಮು ಮತ್ತು ಛತ್ರಕ್ಕೆ ಹರಡುವ ಸಾಧ್ಯತೆಯಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಬಾತ್‌ರೂಮ್ ಗೋಡೆಯಲ್ಲಿ ಸಿಕ್ತು 60 ವರ್ಷದ ಮೆಕ್‍ಡೊನಾಲ್ಡ್ಸ್ ಊಟ!
ಇಂದು ಮುಂಜಾನೆ, ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯ ಕೊರತೆಯಿಂದಾಗಿ ಹೆಚ್ಚುತ್ತಿರುವ ಇಂಧನ ಬಿಕ್ಕಟ್ಟಿನ ನಡುವೆ, ವಿದ್ಯುತ್ ಸಚಿವ ಆರ್ ಕೆ ಸಿಂಗ್ ಮತ್ತು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ವಿದ್ಯುತ್ ಬೇಡಿಕೆಯನ್ನು ನಿಭಾಯಿಸಲು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಕಾರ್ಯತಂತ್ರಗಳನ್ನು ರೂಪಿಸಲು ಚರ್ಚೆ ನಡೆಸಿದರು.
ಬೆಳಗಾವಿ: ʼಕನಿಷ್ಟ ಬೆಂಬಲ ಬೆಲೆ ರೈತರಿಗೆ ಏಕೆ ಬೇಕು?ʼ ಎಂಬ ವಿಚಾರವಾಗಿ ಚರ್ಚಿಸಲು ಏ.29ರಂದು ಬೆಂಗಳೂರಿನಲ್ಲಿ ಚಿಂತನ ಮಂಥನ ಸಂವಾದ ಹಮ್ಮಿಕೊಳ್ಳಲಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರ ಶಾಂತಕುಮಾರ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ರೈತರ ಉತ್ಪನ್ನಗಳಿಗೆ ಎಂಎಸ್‍ಪಿ ನಿಗದಿಗೊಳಿಸದೇ, ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಈ ವಿಷಯವಾಗಿ ಕೃಷಿ ಪರಿಣಿತರು ರೈತ ಮುಖಂಡರ ನೇತೃತ್ವದಲ್ಲಿ ಸಂವಾದ ನಡೆಸಲಾಗುವುದು. ರೈತರಿಗೆ ಎಂ.ಎಸ್.ಪಿ ಅಗತ್ಯದ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. ಇದನ್ನೂ ಓದಿ: ಲವ್ ಜಿಹಾದ್ ಬದಲಿಗೆ `ಲವ್ ಕೇಸರಿ’ ಟ್ರೆಂಡ್ ಸೃಷ್ಟಿಸಲು ಶ್ರೀರಾಮಸೇನೆ ಕರೆ
ಕಬ್ಬಿನಿಂದ ಬರುವ ಎಥೆನಾಲ್ ಉತ್ಪಾದನೆ, ಆದಾಯ ನೀತಿ ನಿಯಮಗಳ ಕುರಿತು ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಸಮಿತಿ ರಚಿಸಿದೆ. ಈ ಸಮಿತಿ ಶೀಘ್ರದಲ್ಲಿಯೇ ಉತ್ತರ ಪ್ರದೇಶದ ಲಕ್ನೋ ಹಾಗೂ ಕಾನ್ಪುರದ ಕಬ್ಬು ಸಂಶೋಧನಾ ಕೇಂದ್ರ ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಲವ್ ಕೇಸರಿಗೆ ಕರೆಕೊಟ್ಟು ಪ್ರಚೋದನಕಾರಿ ಭಾಷಣ ಪ್ರಕರಣ – ಇಬ್ಬರು ಆರೋಪಿಗಳ ಬಂಧನ
ರಾಜ್ಯದಲ್ಲಿ 70 ಸಕ್ಕರೆ ಕಾರ್ಖಾನೆಗಳಿವೆ. ಕಬ್ಬು ಪೂರೈಸಿದ ರೈತರಿಗೆ 2022ರ ಫೆಬ್ರವರಿಯಿಂದ ಈವರೆಗೆ 3,500 ಕೋಟಿ ರೂ. ಬಿಲ್ ಬರಬೇಕಿದೆ. ಅದಕ್ಕೆ ಶೇ.15 ಬಡ್ಡಿ ಸೇರಿಸಿ ಬಿಲ್ ಪಾವತಿಸುವಂತೆ ಸರ್ಕಾರ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ರಾಮದುರ್ಗ ತಾಲೂಕಿನಲ್ಲಿ ವೀರಭದ್ರೇಶ್ವರ ನೀರಾವರಿ ಯೋಜನೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಯೋಜನೆಗೆ ಭೂಮಿ ನೀಡಿರುವ ರೈತರಿಗೆ ಪರಿಹಾರ ನೀಡಿಲ್ಲ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ರೈತರಿಗೆ ಪರಿಹಾರ ಒದಗಿಸಿ, ಕಾಮಗಾರಿಗೆ ವೇಗ ನೀಡಬೇಕು. ಇಲ್ಲದಿದ್ದರೆ ಮೇ ಮೊದಲ ವಾರ ಸಾಲಹಳ್ಳಿ ಬಳಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಲಬುರಗಿ: ಹಿಜಬ್ ವಿಚಾರದಲ್ಲಿ 6 ವಿದ್ಯಾರ್ಥಿನಿಯರು ಉದ್ದೇಶಪೂರ್ವಕವಾಗಿ ವಿವಾದ ಹುಟ್ಟುಹಾಕಿದ್ದಾರೆ. ಧರ್ಮ ಸಂಘರ್ಷವೂ 6 ಜನರ ಪಾಪದ ಕೂಸು. ಈ ವಿದ್ಯಾರ್ಥಿಗಳ ಮೆದುಳಿಗೆ ಮಾನಸಿಕ ಚಿಕಿತ್ಸೆ ಆಗಬೇಕಿದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಕುಟುಕಿದ್ದಾರೆ.
ಹಿಜಬ್ ಧರಿಸಿ ಪರೀಕ್ಷೆಗೆ ಅವಕಾಶ ನೀಡುವಂತೆ 6 ವಿದ್ಯಾರ್ಥಿಗಳು ಮನವಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದ್ದು, ಇವರು ಸಂವಿಧಾನಕ್ಕೆ ಬೆಲೆ ಕೊಟ್ಟಿಲ್ಲ. ಶಾಲಾ ಮಂಡಳಿ, ಹೈಕೋರ್ಟ್ ಆದೇಶಗಳನ್ನು ಧಿಕ್ಕರಿಸಿ ವಿದ್ಯಾರ್ಥಿನಿಯರು ಹೋರಾಟ ಮಾಡಿದ್ದಾರೆ. ಈಗ ಹಿಜಬ್ ವಿವಾದ ಎದ್ದ ಮೇಲೆ ಕರ್ನಾಟಕದಲ್ಲಿ ನಡೆದ ಧರ್ಮಸಂಘರ್ಷಕ್ಕೆ ನಾವು ಕಾರಣವಲ್ಲ ಎನ್ನುತ್ತಾರೆ. ಹಾಗಾದರೆ, ಮತ್ತಾರು ಕಾರಣ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನೀವು ಮತ್ತೆ ಬಾಯಿತೆಗೆದರೆ ಜನ ನಿಮಗೆ ಉಗೀತಾರೆ: ಮುತಾಲಿಕ್
ಇವರ ಹಠದಿಂದಲೇ ರಾಜ್ಯದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಹಲಾಲ್, ಆಜಾನ್ ಮತ್ತು ಮುಸ್ಲಿಂ ವ್ಯಾಪಾರಿಗಳ ಮೇಲಿನ ನಿರ್ಬಂಧಕ್ಕೂ ಈ ವಿದ್ಯಾರ್ಥಿಗಳೇ ಮೂಲ ಕಾರಣ. ಈ ವಿವಾದಗಳೆಲ್ಲವೂ ಇವರ ಪಾಪದ ಕೂಸುಗಳು. ಇವರ ಮೆದುಳಿಗೆ ಚಿಕಿತ್ಸೆ ಆಗಬೇಕಿದೆ. ಏಕೆಂದರೆ ಇವರ ಮನಸ್ಥಿತಿ ಭಾರತ ಸಂವಿಧಾನವನ್ನು ಒಪ್ಪುತ್ತಿಲ್ಲ. ಇವರಿಂದಲೇ ರಾಜ್ಯದಲ್ಲಿ ಅಶಾಂತಿ ಉಂಟಾಗಿದೆ. ಹಿಂದೂಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಪಾರ ಪ್ರಮಾಣದಲ್ಲಿ ಗೋಮಾಂಸ ರಫ್ತಾಗುತ್ತಿದ್ದರೂ ಪ್ರಧಾನಿ ಮೋದಿ ಮೌನವೇಕೆ? ಪ್ರಮೋದ್ ಮುತಾಲಿಕ್
ಈ ವಿದ್ಯಾರ್ಥಿಗಳು ಭಯೋತ್ಪಾದಕರು, ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳ ಸೂಚನೆಗಳ ಪ್ರಕಾರವೇ ಈ ದೇಶ, ರಾಜ್ಯದಲ್ಲಿ ಹೋರಾಟ ಮಾಡಿದ್ದಾರೆ. ಒಂದು ವೇಳೆ ಸರ್ಕಾರ ಹೈಕೋರ್ಟ್ ಆದೇಶ ತಳ್ಳಿಹಾಕಿ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟರೆ, ಅದು ಮೂರ್ಖತನದ ಪರಮಾವಧಿ ಆಗುತ್ತದೆ. ನ್ಯಾಯಾಂಗ ನಿಂದನೆಯೂ ಆಗುತ್ತದೆ. ಹಾಗಾಗಿ ಸರ್ಕಾರ ಹೈಕೋರ್ಟ್ ಆದೇಶವನ್ನು ಯಥಾವತ್ತಾಗಿ ಪಾಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ದೇಶದಲ್ಲಿ ಭ್ರಷ್ಟಾಚಾರದ ಮೆಟ್ಟಿಲುಗಳನ್ನು ಹಾಕಿದ್ದೇ ಕಾಂಗ್ರೆಸ್ ಪಕ್ಷ. ಅದನ್ನು ಎಲ್ಲ ಪಕ್ಷಗಳು ಹತ್ತುತ್ತಿವೆ. ದೇಶ ಅಭಿವೃದ್ಧಿ ಆಗಬೇಕಾದರೆ, ಇದಕ್ಕೆ ಕಡಿವಾಣ ಹಾಕಲೇಬೇಕು. ಈಶ್ವರಪ್ಪ ಅವರ ವಿಚಾರದಲ್ಲಿ ಸಂಪೂರ್ಣ ತನಿಖೆಯಾಗಬೇಕು. ಹಾಗೆಯೇ ಸಂತೋಷ್ ಪಾಟೀಲ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೋ ಇಲ್ಲವೋ ಎನ್ನುವ ಬಗ್ಗೆಯೂ ತನಿಖೆಯಾಗಬೇಕು. ಸತ್ಯಾಸತ್ಯತೆ ಹೊರಬರಬೇಕು ಎಂದು ಒತ್ತಾಯಿಸಿದ್ದಾರೆ.
ರಾಯಚೂರು: ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಅಂತ ಆಗ್ರಹಿಸಿ ರಾಯಚೂರಿನಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ಹೋರಾಟಗಾರರು ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶ್ವಾಸ ದ್ರೋಹ ಮಾಡಿದ ವರ್ಷಾಚರಣೆ ಅಂಗವಾಗಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯ ಮುಖಂಡರು ಪ್ರತಿಭಟನೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾಯ್ದೆಗಳನ್ನು ಹಿಂಪಡೆಯುವಲ್ಲಿ ದ್ವಂದ್ವ ನಿಲುವು ಪ್ರದರ್ಶಿಸುತ್ತಿವೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:ತಪ್ಪು ಮಾಡಿದ್ದರೆ ಶಿಕ್ಷಿಸು, ಇಲ್ಲವೇ ರಕ್ಷಿಸು – ಮನೆದೇವರ ಮೊರೆಹೋದ ಈಶ್ವರಪ್ಪ
ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಬೇಕು ಮತ್ತು ಕೋಮು ಭಾವನೆ ಕೆರಳಿಸುತ್ತಿರುವ ಸಂಘಟನೆಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈ ಗೊಳ್ಳಬೇಕೆಂದು ಮುಖ್ಯಮಂತ್ರಿಗೆ ಒತ್ತಾಯಿಸಿ ಶಾಸಕ ಡಾ.ಶಿವರಾಜ್ ಪಾಟೀಲ್‍ಗೆ ಮನವಿ ಸಲ್ಲಿಸಿದರು. ಇದನ್ನೂ ಓದಿ: ಕುಂಭಾಭಿಷೇಕಕ್ಕೆ ಮಸೀದಿಯಿಂದ ಫ್ಲೆಕ್ಸ್- ಸಮಾನತೆ ಸಾರಿದ ಕಾಫಿನಾಡ ಮುಸ್ಲಿಮರು
ಆನೇಕಲ್: ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳು ತುಂಬಾ ನೋವು ತರಿಸಿದೆ ನಾವೆಲ್ಲರೂ ಒಂದೇ ಎನ್ನುವ ಭಾವನೆಯಿಂದ ಬದುಕಬೇಕು ಎಂದು ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ಆನೇಕಲ್ ಪಟ್ಟಣದ ಶ್ರೀ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ರಾಜಮುಡಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವೆಲ್ಲರೂ ಒಂದೇ ಎನ್ನುವ ಭಾವನೆ ನಮ್ಮಲ್ಲಿ ಮೂಡಬೇಕು. ಜಾತಿಗಳ ಒಳಗೆ ಸಂಘರ್ಷಗಳು ನಡೆಯಬಾರದು. ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೆಲವು ಘಟನೆಗಳು ಇನ್ನೂ ಮುಂದೆ ನಡೆಯದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಈಗಾಗಲೇ ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಹೇಳಿದ್ದಾರೆ. ಯಾವುದೇ ಜಾತಿ ಧರ್ಮ ಭೇದವಿಲ್ಲದೆ ಎಲ್ಲರೂ ಒಂದೇ ಎಂಬ ಮನೋಭಾವದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ವರ್ಕ್ ಆರ್ಡರ್ ಇಲ್ಲದೇ 4 ಕೋಟಿ ಕಾಮಗಾರಿ ಮಾಡಿದ್ದ ಸಂತೋಷ್ – ಆತ್ಮಹತ್ಯೆಗೆ ಕಾರಣ ಏನು?
ಆನೇಕಲ್ ಹಾಗೂ ಮೈಸೂರಿಗೆ ಈ ಹಿಂದೆ ಸಂಬಂಧ ಇತ್ತು ಎನ್ನುವ ಮಾಹಿತಿ ತಿಳಿದು ಬಂದಿದೆ. ಇದರಿಂದಾಗಿ ಆನೇಕಲ್ ಪಟ್ಟಣದ ಶ್ರೀ ತಿಮ್ಮರಾಯ ಸ್ವಾಮಿ ದೇವಾಲಯದಲ್ಲಿ ರಾಜಮುಡಿ ಉತ್ಸವವನ್ನು ಹಮ್ಮಿಕೊಂಡು ಆಹ್ವಾನ ನೀಡಿದ್ದಾರೆ. ನಾನು ತುಂಬಾ ಸಂತೋಷದಿಂದ ಇಲ್ಲಿಗೆ ಆಗಮಿಸಿ ಪೂಜೆಯಲ್ಲಿ ಭಾಗವಹಿಸಿದ್ದು ತುಂಬಾ ಸಂತೋಷ ತಂದಿದೆ ಎಂದರು. ಇದನ್ನೂ ಓದಿ: ಕುಟುಂಬ ಸದಸ್ಯರ ಸಮ್ಮುಖದಲ್ಲಿ ಉಡುಪಿ ಹೋಟೆಲ್‍ನಲ್ಲಿ ಪಂಚನಾಮೆ
ಕಲಬುರಗಿ: ಹಿಂದೂ ಸಂಘಟನೆಗಳು ಮತ್ತು ರಾಜ್ಯ ಸರ್ಕಾರ ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಕೆಡಿಸುವಲ್ಲಿ ಮುಂದಾಗಿವೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ರಾಜ್ಯ ಘಟಕದ ಅಧ್ಯಕ್ಷ ನಾಸಿರ್ ಹುಸೇನ್ ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿಂದೂ ಸಂಘಟನೆಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ಶಾಲೆಯಲ್ಲಿ ನಡೆದ ವಿಷಯವನ್ನು ಬಿಜೆಪಿ ದುಬ9ಳಕೆ ಮಾಡಿದ್ದಾರೆ. ಹಿಜಬ್, ಹಲಾಲ್ ಕಟ್, ಜಟ್ಕಾ ಕಟ್, ಅಜಾನ್ ಇಂತಹ ವಿಷಯಗಳನ್ನು ಮುನ್ನೆಲೆಗೆ ತಂದು ಶಾಂತಿ ಸೌಹಾರ್ದತೆ ಕೆಡಿಸುತ್ತಿವೆ ಎಂದರು. ಇದನ್ನೂ ಓದಿ: ಈಶ್ವರಪ್ಪನನ್ನು ಸಂಪುಟದಿಂದ ವಜಾಗೊಳಿಸಿ, ಕೂಡಲೇ ಬಂಧಿಸಬೇಕು: ಸಿದ್ದರಾಮಯ್ಯ
ಹಿಂದೂ ಸಂಘಟನೆಗಳು ದೇವಸ್ಥಾನಗಳ ಬಳಿ ಮುಸ್ಲಿಮರಿಗೆ ವ್ಯಾಪಾರ ನಿಷೇಧ ಮಾಡಿದರು. ಮಾವಿನ ಹಣ್ಣು ಕೊಡದಂತೆ ಕರಪತ್ರಗಳನ್ನು ಹಂಚಿದರು. ಹೀಗಾಗಿ ಅಜಾನ್ ಎಲ್ಲ ಧಮ9ದ ದೇವಸ್ಥಾನಗಳಿಗೆ ಅನ್ವಯವಾಗುತ್ತದೆ. ಆದರೆ ರಾಜ್ಯ ಸರ್ಕಾರ ಜನರ ಮುಂದೆ ಕೇವಲ ಅಜಾನ್ ಬಗ್ಗೆ ಮಾತ್ರ ಬಿಂಬಿಸಿತು ಎಂದರು.
ರಾಜ್ಯ ಸರ್ಕಾರ ಸಣ್ಣ ಪುಟ್ಟ ಸಂಘಟನೆಗಳನ್ನು ಕಡಿವಾಣ ಹಾಕಲು ವಿಫಲವಾಗಿವೆ. ಇದರಿಂದ ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಕೆಡಿಸಿವೆ. ಇಂತಹ ಘಟನೆಗಳನ್ನು ಜೆಡಿಎಸ್ ಪಕ್ಷ ಖಂಡಿಸುತ್ತದೆ ಎಂದರು.
ರಾಜ್ಯ ಸಕಾ9ರದ ಅಜೆಂಡಾಗಳನ್ನು ನಾವು ಯಶಸ್ವಿಯಾಗಲು ಬಿಡುವುದಿಲ್ಲ. ಆದರೆ ಇವೆಲ್ಲವೂ ಅಜೆಂಡಾಗಳು ಬಿಜೆಪಿ ಅವರಿಗೆ ಬಹುಮುಖ್ಯ ಆಗಿವೆ. ಮುಂದಿನ ಬಾರಿ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಯಡಿಯೂರಪ್ಪ ಇಲ್ಲದ ಬಿಜೆಪಿ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ ಎಂದರು.
ಧ್ರುವೀಕರಣವು ಉತ್ತರ ಪ್ರದೇಶದ ಮತ್ತು ಇತರೆ ಕಡೆಗಳಲ್ಲಿ ನಡೆಯಬಹುದು. ಆದರೆ ಕನಾ9ಟಕದಲ್ಲಿ ನಡೆಯುವುದಿಲ್ಲ. ಯಡಿಯೂರಪ್ಪ ಇಲ್ಲದ ಬಿಜೆಪಿ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋದರೆ, ಗೆಲ್ಲುವುದು ಸಾಧ್ಯವಿಲ್ಲ ಎಂದರು.
ಬೆಂಗಳೂರು: ಹಲಾಲ್ ಕಟ್, ಜಟ್ಕಾ ಕಟ್ ಬಿಟ್ಟುಬಿಡಿ. ಬೆಲೆ ಏರಿಕೆ ವಿರುದ್ಧ ಹೋರಾಡಿ. ನಾನೂ ಕೇಸರಿ ಶಾಲು ಧರಿಸಿ ಹೋರಾಟಕ್ಕೆ ಬರುತ್ತೇನೆ. ಬೆಲೆ ಏರಿಕೆ ವಿರುದ್ಧ ಹೋರಾಟಕ್ಕೆ ರೆಡಿ ಇದ್ದೀರಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಬೆಂಗಳೂರಿನ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಸ್ಲೀಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್ ಕಟ್, ಹಿಜಬ್ ವಿವಾದ ಸೇರಿದಂತೆ ಭಜರಂಗದಳ, ಹಿಂದೂಪರ ಸಂಘಟನೆಗಳ ವಿರುದ್ಧ ಟೀಕಾಪ್ರಹಾರ ಮುಂದುವರೆಸಿದರು.
ಎಲ್ಲಿ ಇತ್ತು ಜಾತಿ ವ್ಯವಸ್ಥೆ? ಎಲ್ಲಿ ಇತ್ತು ಹಿಂದೂ ದೇಶ? ಎಲ್ಲವೂ ನಮ್ಮನಮ್ಮ ಅನುಕೂಲಕ್ಕೆ ಮಾಡಿಕೊಂಡದ್ದು. ಧರ್ಮ ವಿಭಜನೆ ಮಾಡಿ ಮಜಾ ತಗೊಳ್ಳುವವರು, ಉರಿಯುವ ಮನೆಯಲ್ಲಿ ಗಳ ಇರಿಯೋ ಕಾಯಕ ಮಾಡ್ತಿದ್ದೀರಿ. ಬಿಜೆಪಿ ಹಿಂದೂ ಧರ್ಮದಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡಿಲ್ಲ, ಅವರಿಗೆ ಬೇಕಾದಗ ಮಾತ್ರ ಒಟ್ಟಿಗೆ ತೆಗೆದುಕೊಳ್ಳುತ್ತಾರೆ. ಇದನ್ನೆಲ್ಲಾ ಇಲ್ಲಿಗೇ ನಿಲ್ಲಿಸಿ, ಬಡವರನ್ನ ರಕ್ಷಿಸಿ ಎಂದು ಕರೆನೀಡಿದ್ದಾರೆ. ಇದನ್ನೂ ಓದಿ: ಗಂಡಸ್ತನ ಪದ ಬಳಕೆಗೆ ಹೆಚ್.ಡಿ.ಕುಮಾರಸ್ವಾಮಿ ವಿಷಾದ
ಬಿಜೆಪಿ ಜನರನ್ನು ನಿರ್ಗತಿಕರನ್ನಾಗಿ ಮಾಡುತ್ತಿದೆ. ಇದರಲ್ಲಿ ಕಾಂಗ್ರೆಸ್ ಪಾಲೂ ಇದೆ ಎರಡು ರಾಷ್ಟ್ರೀಯ ಪಕ್ಷಗಳು 150ರ ರೋಡ್ ಮ್ಯಾಪ್ ಪ್ಲಾನ್ ಮಾಡಿಕೊಂಡು ಮನೆ ಮನೆಗೆ ಬೆಂಕಿ ಹಚ್ಚಲು ಹೊರಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಬಿಜೆಪಿಯ ಬಿ-ಟೀಮ್ ಎಂದು ಸಾರಿದ್ದ ಸಿದ್ದರಾಮ್ಯಯ ಅವರೇ ಈಗೇನು ದೊಡ್ಡ ಸಾಧನೆ ಮಾಡಿದ್ದೀರಾ? ಹಿಜಬ್ ಹೆಸರು ಹೇಳ್ಬೇಡಿ ಹಿಂದೂ ಓಟ್ ಹೋಗುತ್ತೆ ಎಂದು ನಿಮ್ಮ ಅಧ್ಯಕ್ಷರೇ ಹೇಳಿದ್ದಾರೆ. ಹಿಂದೂ ಮುಸ್ಲಿಂ ನವರು ದಡ್ಡರಲ್ಲ. ವಿಶ್ವ ಹಿಂದೂ ಪರಿಷತ್‌ನವರು ಬೆಂಕಿ ಹಚ್ಚಲು ಬರುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಬಹಳ ಸಲ ಗಂಡಸ್ತತನ ಪ್ರೂವ್ ಮಾಡಿದ್ದಾರೆ: ಸಿ.ಟಿ.ರವಿ
ಮೌನಿ ಬಾಬಾ ಬೊಮ್ಮಾಯಿ: ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಮೌನದ ಬಗ್ಗೆ ಟೀಕಿಸಿರುವ ಹೆಚ್.ಡಿ.ಕುಮಾರಸ್ವಾಮಿ, ಇಷ್ಟೆಲ್ಲಾ ವಿವಾದ ಇದ್ದರೂ ಸಿಎಂ ಬಸವರಾಜ ಬೊಮ್ಮಾಯಿ ಮೌನಿ ಬಾಬಾ ಆಗಿದ್ದಾರೆ. ಮನ್ ಮೋಹನ್ ಸಿಂಗ್ ಮೌನಿ ಅನ್ನುತಿದ್ದರು ಈಗ ಬೊಮ್ಮಾಯಿ ಮೌನವಾಗಿದ್ದಾರೆ. ಸರ್ಕಾರ ಸ್ವತಂತ್ರವಾಗಿ ನಡೆಯುತ್ತಿಲ್ಲ ರಿಮೋಟ್ ಕಂಟ್ರೋಲ್ ನಲ್ಲಿ ನಡೆಯುತ್ತಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ರಾಜ್ಯದಲ್ಲಿ ಸೌಹಾರ್ದತೆಗೆ ಧಕ್ಕೆ ಬಂದಾಗ ಮೌನವಾಗಿದ್ದವರು ಯಾರು? ಅಧಿವೇಶನದಲ್ಲಿ ಸುಮ್ಮನೆ ಕೂತವರು ಯಾರು? ಮತಾಂತರ ಬಿಲ್ ಬಗ್ಗೆ ಬೆಳಗಾವಿಯಲ್ಲಿ ಎದುರಿಸಲಾಗದೇ ಪಲಾಯನ ಮಾಡಿದ್ದು ಯಾಕೆ? ಗೋಹತ್ಯೆ ಬಿಲ್ ಬಂದಾಗ ಸದನದಲ್ಲಿ ಗೊಂದಲ ಸೃಷ್ಟಿಸಿದ್ದು ಯಾರು? ಗೋಹತ್ಯೆ ನಿಷೇಧ ಕಾಯ್ದೆ ವಿರುದ್ದ ಮೊದಲು ರಾಷ್ಟ್ರಪತಿಗೆ ದೂರು ಕೊಟ್ಟಿದ್ದು ದೇವೇಗೌಡರು. ನಮ್ಮ ಪಕ್ಷವೇ ಮೊದಲು ಅದರ ಬಗ್ಗೆ ಧ್ವನಿ ಎತ್ತಿದ್ದು. ನಾವು ಅದರ ವಿರುದ್ಧ ಮತ ಚಲಾಯಿಸಲು ತಯಾರಿದ್ದೆವು. ಅವರ ತಪ್ಪು ಇಟ್ಕೊಂಡು ನಮ್ಮ ಬಗ್ಗೆ ಮತನಾಡಲು ಕಾಂಗ್ರೆಸ್‌ಗೆ ನೈತಿಕತೆ ಏನಿದೆ ಎಂದು ಹೇಳಿದರು. ಇದನ್ನೂ ಓದಿ: ಗಂಡಸ್ತನ ಯಾವ ಯಾವುದಕ್ಕೆ ಬಳಸಬೇಕು ಎಂದು ಕುಮಾರಸ್ವಾಮಿಗೆ ಗೊತ್ತಿದೆ: ಈಶ್ವರಪ್ಪ
ರಾಜ್ಯದಲ್ಲಿ ಬೆಂಕಿಹಚ್ಚಿದ್ದು ಕಾಂಗ್ರೆಸ್
ರಾಹುಲ್‌ಗಾಂಧಿ ಬಂದಾಗ ಸಿದ್ದರಾಮಯ್ಯ, ಹಲಾಲ್ ಹಾಗೂ ಹಿಜಬ್ ವಿಚಾರದಲ್ಲಿ ನಾವು ಮಾತನ್ನಾಡಬೇಕಿತ್ತು ಎಂದು ಹೇಳುತ್ತಾರೆ. ಇಷ್ಟಾದ ಮೇಲೂ ಜೆಡಿಎಸ್ ಬಿಜೆಪಿಯ ಬಿ-ಟೀಮ್ ಎಂದು ಹೇಳುತ್ತಾರೆ. ನೀವೆ ರಾಜ್ಯದಲ್ಲಿ ಬೆಂಕಿ ಹಚ್ಚಿದ್ದು, ನೀವೇ ಬಿಜೆಪಿ ಸರ್ಕಾರ ನಿರ್ಮಾಣ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು, ಇನ್ನಾದರೂ ಹಲಾಲ್, ಹಿಜಬ್ ವಿಚಾರದಲ್ಲಿ ಧೈರ್ಯವಾಗಿ ಎದುರಿಸಿ ಎಂದು ಕುಟುಕಿದರು.
ಅಲ್ಲದೆ, ಬಿಜೆಪಿಯವರು ನಾನು ದಾರ್ಶನಿಕ ಎನ್ನುತ್ತಾರೆ, ನಾನು ದಾರ್ಶನಿಕ ಎಂದು ಬೋರ್ಡ್ ಹಾಕಿಕೊಂಡಿಲ್ಲ, ನೀವೆ ಹಾಕಿಕೊಂಡಿರುವುದು.ನಾನು ಸಮಾಜ ಪರಿವರ್ತನಾಕಾರಕ ಅಲ್ಲ, ಇಂತ ವಿಷಯ ತೆಗೆದು ಮತಬ್ಯಾಂಕ್ ಮಾಡಲ್ಲ, ಬೆಂದ ಮನೆಯಲ್ಲಿ ಗಳ ಇಡುವ ಬುದ್ಧಿ ನನಗಿಲ್ಲ, ಕಂದಾಚಾರ ಇರುವ ನೀವು ನನಗೆ ಬುದ್ದಿ ಹೇಳುತ್ತೀರಾ? ಎಂದು ತಿರುಗೇಟು ನೀಡಿದ್ದಾರೆ.
ಯುಗಾದಿಗೆ ಇಷ್ಟು ಪ್ರಚಾರ ಯಾವತ್ತು ಸಿಕ್ಕಿರಲಿಲ್ಲ. ಒಳ್ಳೆಯ ಮನರಂಜನೆ ಸಿಕ್ಕಿತು. ಪ್ರತಿದಿನ ಯುಗಾದಿ ಮಾದರಿಯ ಸುದ್ದಿಗಳೇ ವಿಜ್ರಂಭಿಸಲಿದೆ. ಮುಂದಿನ ಚುನಾವಣೆ ವರೆಗೂ ಪರಿಸ್ಥಿತಿ ಹೀಗೆ ಇರಲಿದೆ.
ಬೆಂಗಳೂರು: 2023ರ ಚುನಾವಣೆ ಪೂರ್ವ ಸಿದ್ಧತೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 2 ದಿನಗಳ ಕಾಲ ಪ್ರವಾಸ ಕೈಗೊಂಡಿರುವ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲೇ ಅತಿ ದೊಡ್ಡ ಭ್ರಷ್ಟ ಸರ್ಕಾರ ಕರ್ನಾಟಕದಲ್ಲಿದೆ. ಬಿಜೆಪಿ ರಾಜ್ಯ ಸರ್ಕಾರ ಬಡವರಿಂದ ಹಣ ತೆಗೆದುಕೊಂಡು ಬೆರಳೆಣಿಕೆಯಷ್ಟು ಶ್ರೀಮಂತ ಉದ್ಯಮಿಗಳಿಗೆ ನೀಡುತ್ತಿದೆ. ಇದು ಶೇ.40ರಷ್ಟು ಕಮಿಷನ್ ಪಡೆಯುವ ಸರ್ಕಾರ. ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ವಿರುದ್ಧ ಸದಾ ಮಾತನಾಡುತ್ತಾರೆ. ಈಗ ಅವರು ಕರ್ನಾಟಕಕ್ಕೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಎಲ್ಲರೂ ನಗುತ್ತಾರೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಿಂದ ಆರಂಭಗೊಂಡ ಭಾರತ ದರ್ಶನ ಸುಶಾಸನ ಯಾತ್ರೆಗೆ ಅಮಿತ್ ಶಾ ಚಾಲನೆ
ಬಿಜೆಪಿ ನಿರುದ್ಯೋಗ ಮತ್ತು ಆರ್ಥಿಕತೆಯ ವಿಷಯಗಳ ಬಗ್ಗೆ ಬಿಜೆಪಿ ಮಾತನಾಡುವುದಿಲ್ಲ. ಹೀಗಾಗಿಯೇ ಕೋಮುವಾದದ ವಿಷಯವನ್ನು ಮುಂದಿಟ್ಟಿದೆ. ಬಿಜೆಪಿ ಸರ್ಕಾರದ ನೀತಿಗಳಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಂಪೂರ್ಣವಾಗಿ ನಷ್ಟಕ್ಕೆ ಒಳಗಾಗಿವೆ. ದೇಶದ ಆರ್ಥಿಕತೆ ಕುಸಿದಿದೆ. ಈ ನಡುವೆ ಹಣದುಬ್ಬರವೂ ಹೆಚ್ಚಾಗುತ್ತಿದ್ದು, ಉದ್ಯೋಗ ಕ್ಷೇತ್ರವನ್ನು ನಾಶಪಡಿಸುತ್ತಿದೆ. ಬಿಜೆಪಿ ಬಯಸಿದರೂ ಇನ್ನು ಜನರಿಗೆ ಉದ್ಯೋಗ ನೀಡಲು ಸಾಧ್ಯವಿಲ್ಲ. ಏಕೆಂದರೆ ಉದ್ಯೋಗ ಕ್ಷೇತ್ರಗಳನ್ನೇ ನಾಶಪಡಿಸಿದ್ದಾರೆ. ಆದರೆ, ಬಿಜೆಪಿ ವಿಭಜಿಸುವ ಕಾರ್ಯದಲ್ಲಿ ತೊಡಗಿದರೆ ಕಾಂಗ್ರೆಸ್ ಜೋಡಿಸುವ ಕಾರ್ಯದಲ್ಲಿ ತೊಡಗಿದೆ. ಅಂತಹ ಅವಕಾಶ ನಮಗೆ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಮೋದಿಗೆ ಸ್ಟಾಲಿನ್ ಮನವಿ
2019ರ ನಂತರ ಕಾಂಗ್ರೆಸ್ ಸರ್ಕಾರ ಪತನವಾದ ನಂತರ ಕರ್ನಾಟಕದಲ್ಲಿ ಪ್ರಕ್ಷುಬ್ಧತೆಯ ವಾತಾವರಣ ನಿರ್ಮಾಣವಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಒಂದಾಗಿ ಹೋರಾಟ ನಡೆಸುವ ಮೂಲಕ 2023ರಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆಯುವ ಗುರಿ ಹೊಂದಬೇಕು ಎಂದು ಕರೆ ನೀಡಿದ್ದಾರೆ.
ದಾವಣಗೆರೆ: ಕರ್ನಾಟಕದಲ್ಲಿ ಮೆಡಿಕಲ್ ಸೀಟುಗಳ ಶುಲ್ಕವನ್ನು ಕಡಿತಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ದಾವಣಗೆರೆಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಿ ಮೆಡಿಕಲ್ ಕಾಲೇಜುಗಳ ಸೀಟುಗಳು ಕಡಿಮೆ ಶುಲ್ಕವೇ ಇದೆ. ಖಾಸಗಿ ಕಾಲೇಜುಗಳಲ್ಲಿ ಮಾತ್ರ ಶುಲ್ಕ ಹೆಚ್ಚಾಗಿದೆ. ಶೇ.90 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೂ ಮೆಡಿಕಲ್ ಸೀಟು ಸಿಗುತ್ತಿಲ್ಲ. ಹಾಗಾಗಿ ಅವರು ಎನ್‍ಆರ್‍ಐ ಅಥವಾ ಮ್ಯಾನೇಜ್ಮೆಂಟ್ ಸೀಟುಗಳನ್ನು ಬಯಸುತ್ತಾರೆ. ಇದರಿಂದ ಶುಲ್ಕ ಹೆಚ್ಚಾಗುತ್ತಿರುವ ಕಾರಣ ಅವರು ವಿದೇಶಗಳಲ್ಲಿ ವ್ಯಾಸಂಗ ಮಾಡಲು ತೆರಳುತ್ತಿದ್ದಾರೆ. ಹಾಗಾಗಿ ಶುಲ್ಕ ಕಡಿತಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ನಮ್ಮ ರಾಜ್ಯದಲ್ಲಿ ಶುಲ್ಕ ಕಡಿತಗೊಳಿಸಲು ಎ-ಬಿ-ಸಿ ಕೆಟಗೆರಿ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ. ಈ ಬಗ್ಗೆ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಸಹ ಚಿಂತನೆ ನಡೆಸಿದೆ. ಜೊತೆಗೆ ಉಕ್ರೇನ್ ಮಾತ್ರವಲ್ಲದೇ ಬೇರೆ ದೇಶಗಳಿಂದಲೂ ವಿದ್ಯಾಭ್ಯಾಸ ಮೊಟಕುಗೊಳಿಸಿ ಕರ್ನಾಟಕಕ್ಕೆ ಆಗಮಿಸಿರುವ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ದೇಶಾದ್ಯಂತ ಸದ್ದು ಮಾಡಿತ್ತು ಬ್ಯಾನ್‍ನೀಟ್
ವಿದ್ಯಾರ್ಥಿ ನವೀನ್ ಉಕ್ರೇನ್‍ನಲ್ಲಿ ಸಾವಿಗೀಡಾದ ಬೆನ್ನಲ್ಲೇ ರಾಜ್ಯದಲ್ಲಿ ಈಚೆಗಷ್ಟೇ #ಬ್ಯಾನ್ ನೀಟ್ ಅಭಿಯಾನ ನಡೆದಿತ್ತು. ರಾಜ್ಯದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿ ಇರುವ ಮೆಡಿಕಲ್ ಕಾಲೇಜುಗಳಲ್ಲಿ ಸೀಟ್ ಸಿಗದ ಪರಿಣಾಮ ಉಕ್ರೇನ್ ನಂಹತ ದೇಶಗಳಿಗೆ ತೆರಳಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ಉಕ್ರೇನ್-ರಷ್ಯಾ ಯುದ್ಧದಿಂದ ನಮ್ಮ ರಾಜ್ಯದ ನವೀನ್ ಅವರನ್ನು ಕಳೆದುಕೊಳ್ಳಬೇಕಾಯಿತು. ಇದೆಲ್ಲಕ್ಕೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೀಟ್ ಪರೀಕ್ಷೆ ಕಾರಣವಾಗಿದೆ ಎಂದು ಹಲವರು ಆರೋಪಿಸಿ ಸೋಷಲ್ ಮೀಡಿಯಾಗಳಲ್ಲಿ #ಬ್ಯಾನ್‍ನೀಟ್’ ಅಭಿಯಾನ ಆರಂಭಿಸಿದ್ದರು. ಇದನ್ನೂ ಓದಿ:13 ಗಂಟೆಯಲ್ಲಿ ಶ್ರೀಲಂಕಾದಿಂದ ತಮಿಳುನಾಡಿಗೆ ಸ್ವಿಮ್ಮಿಂಗ್ ಮಾಡಿದ 13ರ ಬಾಲಕಿ
ಅಂಡಮಾನ್ ಮತ್ತು ನಿಕೋಬಾರ್ ಐಲ್ಯಾಂಡ್‍ನಲ್ಲಿ 1, ಆಂಧ್ರಪ್ರದೇಶದಲ್ಲಿ 31, ಅರುಣಾಚಲಂನಲ್ಲಿ 1, ಅಸ್ಸಾಂನಲ್ಲಿ 8, ಬಿಹಾರದಲ್ಲಿ 16, ಛಂಡೀಘರ್‍ನಲ್ಲಿ 1, ಛತ್ತಿಸ್‍ಘರ್‍ನಲ್ಲಿ 10, ದಾದ್ರಾ ನಗರಲ್ಲಿ 1, ದೆಹಲಿಯಲ್ಲಿ 10, ಗೋವಾದಲ್ಲಿ 1, ಗುಜರಾತ್‍ನಲ್ಲಿ 29, ಹರಿಯಾಣದಲ್ಲಿ 12, ಹಿಮಾಚಲ್ ಪ್ರದೇಶದಲ್ಲಿ 7, ಜಮ್ಮು ಮತ್ತು ಕಾಶ್ಮೀರದಲ್ಲಿ 8, ಜಾಖರ್ಂಡ್‍ನಲ್ಲಿ 7, ಕರ್ನಾಟಕದಲ್ಲಿ 60, ಕೇರಳದಲ್ಲಿ 32, ಮಧ್ಯಪ್ರದೇಶದಲ್ಲಿ 22, ಮಹಾರಾಷ್ಟ್ರದಲ್ಲಿ 22, ಮಣಿಪುರದಲ್ಲಿ 2, ಮೇಘಾಲಯ- ಮಿಜೋರಾಂನಲ್ಲಿ ತಲಾ 1, ಒಡಿಶಾದಲ್ಲಿ 12, ಪುದುಚೆರಿನಲ್ಲಿ 9, ಪಂಜಾಬ್‍ನಲ್ಲಿ 10, ರಾಜಾಸ್ತಾನ್‍ನಲ್ಲಿ 23, ಸಿಕ್ಕಿಂನಲ್ಲಿ 1, ತಮಿಳುನಾಡಿನಲ್ಲಿ 50, ತೆಲಂಗಾಣದಲ್ಲಿ 33, ತ್ರಿಪುರದಲ್ಲಿ 2 ಹಾಗೂ ಉತ್ತರ ಪ್ರದೇಶದಲ್ಲಿ 22 ವೈದ್ಯಕೀಯ ಕಾಲೇಜುಗಳು ಇವೆ. ಆದರೆ, ಇಲ್ಲಿನ ದುಬಾರಿ ವೆಚ್ಚದ ಪರಿಣಾಮದಿಂದಾಗಿ ವಿದೇಶಗಳಿಗೆ ತೆರಳಿತ್ತಿದ್ದಾರೆ ಎಂದು ಆರೋಪಿಸಿದ್ದರು.
ಮಡಿಕೇರಿ: ಉಕ್ರೇನ್‍ನಲ್ಲಿ ಯುದ್ಧದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಹುತೇಕ ಉಕ್ರೇನ್ ದೇಶವೇ ವಿನಾಶದ ಹಂತದಲ್ಲಿದೆ. ಒಂದು ಕಡೆ ಉಕ್ರೇನ್ ವಿನಾಶದ ಅಂಚು ತಲುಪಿದರೆ ಇತ್ತ ವಿದ್ಯಾಭ್ಯಾಸಕ್ಕೆಂದು ತೆರಳಿದ್ದ ವಿದ್ಯಾರ್ಥಿಗಳು ಮರಳಿ ತಮ್ಮ ಊರಿಗೆ ಬಂದಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೆಡಿಕಲ್ ಓದುತ್ತಿದ್ದವರು ಇದೀಗ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುವಂತಾಗಿದೆ.
ಕೊಡಗು ಜಿಲ್ಲೆಯ 14 ವಿದ್ಯಾರ್ಥಿಗಳು ಇದೀಗ ತಮ್ಮ ತವರಿಗೆ ಮರಳಿ ಬಂದಿದ್ದಾರೆ. ಇದೇ ತಿಂಗಳ 25 ರಿಂದ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳನ್ನ ಪಾರಂಭಿಸುತ್ತೆ ಅಂತ ಉಕ್ರೇನ್ ಯುನಿವರ್ಸಿಟಿ ಹೇಳಿತ್ತು. ಆದರೆ ಇಂತಹ ಒಂದು ಯುದ್ಧದ ಪರಿಸ್ಥಿತಿಯಲ್ಲಿ ನಿಜಕ್ಕೂ ಯುನಿವರ್ಸಿಟಿಗಳು ಆನ್ ಲೈನ್ ತರಗತಿಗಳನ್ನ ಮಾಡಲು ಸಾಧ್ಯವೇ? ಅನ್ನುವ ಪ್ರಶ್ನೆ ವಿದ್ಯಾರ್ಥಿಗಳಿಗೆ ಕಾಡತೊಡಗಿದೆ.
ಆನ್‍ಲೈನ್ ತರಗತಿಗಳನ್ನ ಮಾಡಿದರು ಅದರಿಂದ ನಮಗೆ ಏನು ಪ್ರಯೋಜನ ಆಗುವುದಿಲ್ಲ. ಕಳೆದ ಎರಡು ವರ್ಷಗಳಿಂದ ಕೂಡ ಕೋವಿಡ್ ಕಾರಣದಿಂದಾಗಿ ಆನ್‍ಲೈನ್ ತರಗತಿಗಳನ್ನ ನಡೆಸಿದರು. ಇದೀಗ ಮತ್ತೆ ಆನ್ ಲೈನ್ ತರಗತಿಗಳನ್ನ ಮಾಡುವುದರಿಂದ ಇದು ನಮ್ಮ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮವನ್ನೇ ಬೀರಲಿದೆ. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ
ಮೆಡಿಕಲ್ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳಿಗಿಂತ ಪ್ರಾಕ್ಟಿಕಲ್ ತರಗತಿ ಮುಖ್ಯವಾಗಿರುತ್ತದೆ. ಆದರೆ ಈ ಎಲ್ಲಾ ಕಾರಣಗಳಿಂದ ಇದಕ್ಕೆ ಬ್ರೇಕ್ ಬಿದ್ದಿರೋದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ಉಕ್ರೇನ್ ಬಹುತೇಕ ನಾಶವಾಗಿರುವದರಿಂದ ಇನ್ನೂ ನಾವು ಅಲ್ಲಿ ಹೋಗಿ ವಿದ್ಯಾಭ್ಯಾಸ ಮಾಡಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ನೂರಾರು ವಿದ್ಯಾರ್ಥಿಗಳಿದ್ದು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಇಲ್ಲಿಯೇ ವಿದ್ಯಾಭ್ಯಾಸವನ್ನು ಮುಂದುವರಿಸಲು ಅವಕಾಶ ಮಾಡಿಕೊಡುವಂತೆ ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ.
ಇತ್ತ ವಿದ್ಯಾರ್ಥಿಗಳ ಪೋಷಕರಿಗೂ ತಮ್ಮ ಮಕ್ಕಳು ಭವಿಷ್ಯದ ಚಿಂತೆ ಕಾಡುತ್ತಿದೆ. ಮಧ್ಯಮ ವರ್ಗದ ಜನರು ತಮ್ಮ ಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ ಕಳುಹಿಸಿದ್ದರು. ಆದರೆ ಇದೀಗ ಉಕ್ರೇನ್ ರಷ್ಯಾ ದೇಶದ ನಡುವೆ ನಡೆಯುತ್ತಿರುವ ಯುದ್ಧದ ಪರಿಸ್ಥಿತಿಯಲ್ಲಿ ತಮ್ಮ ಮಕ್ಕಳಿಗೆ ಅನ್‍ಲೈನ್ ಶಿಕ್ಷಣ ನೀಡುವುದಾಗಿ ಯುನಿವರ್ಸಿಟಿ ಅವರು ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: 2 ಕೋಟಿ ಸಾಲ ಮಾಡಿರುವ ಸಿದ್ದರಾಮಯ್ಯಗೆ ಭಾರತ ರತ್ನ ನೀಡಲಿ: ಸಾ.ರಾ ಮಹೇಶ್
ಆದರೆ ಅನ್ ಲೈನ್ ಶಿಕ್ಷಣ ದಿಂದ ತಮ್ಮಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಒಂದ ಅಷ್ಟು ಚಿಂತನೆ ನಡೆಸಿ ಸ್ಥಳೀಯವಾಗಿ ಆದರೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಅವಕಾಶ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳ ಪೋಷಕರು ಮನವಿ ಮಾಡಿದ್ದಾರೆ.