ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನುದಾನ ನೀಡಲು ಸಿಎಂ, ಡಿಸಿಎಂರಿಂದ ಪತ್ರ ಬರೆದಿರುವವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಅವರು ಬಜೆಟ್ ಮಾಡೋಕೆ ಈ ಸರ್ಕಾರದ ಬಳಿ ಹಣ ಇಲ್ಲ. ಸಾಲ ಮಾಡಿ ಬಜೆಟ್ ಮಾಡಬೇಕು. ಕೇಂದ್ರ ಹಣ ಕೊಡಬೇಕು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಡಿಸಿಎಂ ಅವರು ಬೆಂಗಳೂರಿಗೆ 60 ಕೋಟಿ ರೂ. ಕೊಡಬೇಕು ಎನ್ನುತ್ತಾರೆ. ಮನಮೋಹನ್ ಸಿಂಗ್ ಇದ್ದಾಗ ಮುತ್ತು ರತ್ನಗಳನ್ನು ಸೇರುಗಳಲ್ಲಿ ಬೆಂಗಳೂರಿಗೆ ಕೊಟ್ಟಿದ್ದರೇನು? ನೀರಾವರಿಗೆ ಹಣ ಕೇಂದ್ರ ಕೊಡಬೇಕು ಎನ್ನುತ್ತಾರೆ. ಆರೋಗ್ಯ ಸಚಿವರು ಬಾಣಂತಿಯರ ಸಾವಿಗೆ ಕೇಂದ್ರ ಕಾರಣ ಎಂದು ಹೇಳುತ್ತಾರೆ. ಎಲ್ಲದಕ್ಕೂ ಕೇಂದ್ರ ಎನ್ನುವುದಾದರೆ, ಏನು ಕತ್ತೆ ಕಾಯ್ತಿದ್ದೀರಾ ಎಂದು ಗರಂ ಆದರು.
ಕೇಂದ್ರ ಅನ್ಯಾಯ ಮಾಡಿದೆ ಎಂದರೆ ನರೇಂದ್ರ ಮೋದಿ, ಮನಮೋಹನ್ ಸಿಂಗ್ ಸರ್ಕಾರ ರಾಜ್ಯಕ್ಕೆ ಎಷ್ಟು ಹಣ ಬಿಡುಗಡೆ ಮಾಡಿದ್ದರು ಎಂದು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿ. ಯಡಿಯೂರಪ್ಪ ಸಿಎಂ ಇದ್ದಾಗ ಮನಮೋಹನ್ ಸಿಂಗ್ ಎಷ್ಟು ಹಣ ಕೊಟ್ಟಿದ್ದರು? ಅಂಕಿ ಅಂಶಗಳ ಬಿಡುಗಡೆ ಮಾಡಿ, ಲೆಕ್ಕ ಕೊಡಿ ಎಂದು ಎಂದು ಸರ್ಕಾರಕ್ಕೆ ಆಗ್ರಹಿಸಿದರು.ಇದನ್ನೂ ಓದಿ: ಮೋದಿ, ಅಮಿತ್ ಶಾ ಸ್ವರ್ಗಕ್ಕೆ ಹೋಗಲ್ಲ: ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕರ್ನಾಟಕದ ವಿಕಾಸಕ್ಕೆ ಆದ್ಯತೆ ನೀಡುತ್ತಿದ್ದೇವೆ. ಆದ್ರೆ ಈಗಾಗಲೇ ಬಿಡುಗಡೆ ಮಾಡಿರುವ ಅನುದಾನದ ಸದ್ಬಳಕೆ ಆಗಬೇಕಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರು ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಜ್ಯದ ಕೃಷಿ, ಗ್ರಾಮೀಣಾಭಿವೃದ್ಧಿ, ಕಂದಾಯ ಸಚಿವರ ಜೊತೆ ಕೇಂದ್ರ ಸರ್ಕಾರದ ಯೋಜನೆಗಳ ಸಾಧನೆಯನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಅನುದಾನ ಕೇಳದೇ ಇದ್ದರೂ ನಾವೇ ಘೋಷಣೆ ಮಾಡಿದ್ದೇವೆ. ಬಹಳಷ್ಟು ಅನುದಾನ ಈಗಾಗಲೇ ಕೊಟ್ಟಿದ್ದು, ಅದನ್ನು ಇನ್ನೂ ಕರ್ನಾಟಕ ಸರ್ಕಾರ ಖರ್ಚು ಮಾಡಿಲ್ಲ. ಪ್ರತಿ ಬಡವನಿಗೂ ಮನೆ ಸಿಗಬೇಕು ಎಂಬುದು ಮೋದಿಯವರ ಸಂಕಲ್ಪ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕಳೆದ ಸೆಪ್ಟೆಂಬರ್‌ನಲ್ಲಿ ಕರ್ನಾಟಕಕ್ಕೆ 2,57,246 ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ ಕೊಟ್ಟು, ಅನುದಾನವನ್ನೂ ಕೊಟ್ಟಿದ್ದೆವು. ಇಂದು ಮತ್ತೆ ಕರ್ನಾಟಕದ ಬಡಜನರಿಗೆ ಮನೆ ಕಟ್ಟಲು ಇರುವ ಗುರಿ ಹೆಚ್ಚಿಸಲಾಗಿದೆ ಎಂದು ವಿವರಿಸಿದರು.ಇದನ್ನೂ ಓದಿ: ಮುದ್ದೇನಹಳ್ಳಿ ವಿಟಿಯು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ – ಪ್ರೀತಿ, ಪ್ರೇಮದ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಶಂಕೆ
ಇಂದು 4,67,580 ಮನೆಗಳನ್ನು ಕಟ್ಟಲು ಒಪ್ಪಿಗೆ ಕೊಟ್ಟಿದ್ದೇವೆ. ಬಡವರ ಸೇವೆಯೇ ಭಗವಂತನ ಸೇವೆ ಎಂಬ ಚಿಂತನೆ ನಮ್ಮದು. ಎಲ್ಲ ಬಡವರಿಗೆ ಮನೆ ನಿರ್ಮಿಸಿ ಕೊಡುವ ಉದ್ದೇಶ ಈಡೇರಿಸಬೇಕಿದೆ. ಅದಕ್ಕಾಗಿ ಮನೆಗಳ ನಿರ್ಮಾಣ ಕಾರ್ಯಕ್ಕೆ ವೇಗ ಕೊಡಲು ಸೂಚಿಸಲಾಗಿದೆ. ಹಿಂದೆ ನೀಡಿದ್ದ ಅನುದಾನ ಪೂರ್ತಿ ಬಳಕೆ ಮಾಡಲು ತಿಳಿಸಲಾಗಿದೆ. ಆತ್ಮ ಯೋಜನೆಯಡಿ ಹೆಚ್ಚುವರಿ ಸಿಬ್ಬಂದಿ ನೀಡಲು ಒಪ್ಪಿಗೆ ಕೊಡಲಾಗಿದೆ. ವಿಕಸಿತ ಭಾರತ ನಿರ್ಮಾಣದ ಸಂಕಲ್ಪ ನಮ್ಮದು. ವಿಕಸಿತ ಭಾರತಕ್ಕಾಗಿ ವಿಕಸಿತ ಕರ್ನಾಟಕ ಎಂಬುದು ನಮ್ಮ ಚಿಂತನೆಯಾಗಿದೆ. ರಾಜ್ಯ ಸರ್ಕಾರವು ಸಕಾಲದಲ್ಲಿ ಅನುದಾನವನ್ನು ಬಳಸಿ, ಬಳಕೆ ಸಂಬಂಧಿತ ದೃಢಪತ್ರ ಕಳಿಸಬೇಕು ಎಂದು ಸೂಚಿಸಿದರು.
ಮಂಗಳೂರು: ರಾಜಕೀಯ ಮೈಲೇಜ್‌ಗೋಸ್ಕರ ಶರಣಾಗತಿ ಪ್ರಕ್ರಿಯೆ ನಡೆಸಲಾಗಿದೆ ಎಂದು ರಾಜ್ಯದಲ್ಲಿ ನಕ್ಸಲರ ಶರಣಾಗತಿಯ ಕುರಿತು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ಟೀಕಿಸಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ ನಕ್ಸಲರ ಶರಣಾಗತಿ ಸಂಶಯ ಮೂಡಿಸುತ್ತಿದೆ. 6 ಮಂದಿ ನಕ್ಸಲರ ಶರಣಾಗತಿಯ ಕುರಿತು ಸರ್ಕಾರ ನಡೆದುಕೊಂಡ ರೀತಿ ಹಾಗೂ ನಾಯಕ ವಿಕ್ರಂಗೌಡ ಎನ್‌ಕೌಂಟರ್ ಕೂಡ ಸಂಶಯ ಮೂಡಿಸುತ್ತಿದೆ. ಈ ಹಿಂದೆ ನಾನು ಚಿಕ್ಕಮಗಳೂರು ಎಸ್ಪಿ ಆಗಿದ್ದ ಸಂದರ್ಭದಲ್ಲಿ ನಕ್ಸಲರು ಶರಣಾಗಿದ್ದರು. ನಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ನಾನು ಭಾಗವಹಿಸಿದ್ದೆ. ನಿಯಮಗಳ ಪ್ರಕಾರ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಎದುರು ನಕ್ಸಲರು ಶರಣಾಗಬೇಕು. ಆನಂತರ ಬೇರೆ ಪ್ರಕ್ರಿಯೆಗಳು ನಡೆಯುತ್ತದೆ. ಇಲ್ಲಿ ರಾಜಕೀಯ ಮೈಲೇಜ್‌ಗೋಸ್ಕರ ಶರಣಾಗತಿ ಪ್ರಕ್ರಿಯೆ ನಡೆಸಲಾಗಿದೆ ಎಂದರು.ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿ, ನಾದಿನಿ ಜೊತೆ ಸೇರಿ ತಮ್ಮನನ್ನೇ ಕೊಲೆಗೈದ ಅಣ್ಣ
ನಕ್ಸಲ್ ಬೆಂಬಲಿಗರು ಸರ್ಕಾರದ ಮೇಲೆ ಹಾಗೂ ನಾಗರಿಕ ಸಮಾಜದ ಮೇಲೆ ಪ್ರಭಾವ ಬೀರಲಿದ್ದಾರೆ. ನಕ್ಸಲರು ಶರಣಾದಾಗ ಜನರಿಗೆ ವಿಶ್ವಾಸ ಬರಬೇಕು. ಆದರೆ ಜನರಿಗೆ ವಿಶ್ವಾಸವಿಲ್ಲ. ಶರಣಾಗತಿಯ ಬಗ್ಗೆ ಗೃಹ ಸಚಿವರಿಗೆ ಮಾಹಿತಿಯ ಕೊರತೆಯಿದ್ದ ಹಾಗೆ ಉಲ್ಟಾ-ಪಲ್ಟಾ ಮಾತನಾಡುತ್ತಾರೆ. ಶರಣಾದ ನಕ್ಸಲರು ನಾಗರಿಕ ಸಮಾಜದ ಮೇಲೆ ಪ್ರಭಾವ ಬೀರುವ ಅಪಾಯವಿದೆ ಎಂದು ಹೇಳಿದರು.
ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದ ಮಾಜಿ ಕ್ರಿಕೆಟಿಗ ಅಶ್ವಿನ್ ಹೇಳಿಕೆ ವಿಚಾರವಾಗಿ, ಹಿಂದಿ ಒಂದು ಅಧಿಕೃತ ಭಾಷೆ, ಪ್ರಧಾನ ಮಂತ್ರಿಯವರು ಎಲ್ಲಾ ಭಾಷೆಯೂ ರಾಷ್ಟ್ರೀಯ ಭಾಷೆ ಅಂತ ಹೇಳಿದ್ದಾರೆ. ನಮ್ಮ ಸರ್ಕಾರದ ಪ್ರಕಾರ ಎಲ್ಲಾ ಭಾಷೆಯು ರಾಷ್ಟ್ರೀಯ ಭಾಷೆ. ಪ್ರಧಾನಿ ಕೂಡ ಕನ್ನಡ ಹಾಗೂ ತಮಿಳುಗೂ ತುಂಬಾ ಮರ್ಯಾದಿ ಕೊಡುತ್ತಾರೆ. ಅಶ್ವಿನ್ ಒಂದು ದೃಷ್ಟಿಕೋನದಲ್ಲಿ ಹೇಳಿದ್ದಾರೆ. ಎಲ್ಲಾ ಭಾಷೆಯು ರಾಷ್ಟ್ರೀಯ ಭಾಷೆ ಆ ಅರ್ಥದಲ್ಲಿ ಅಶ್ವಿನಿ ಹೇಳಿದ್ದಾರೆ ಅಷ್ಟೇ. ಬೇರೆ ಏನು ವಿಚಾರ ಇಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ರಮ್ಯಾಗೆ ಮದುವೆಯ ಆಮಂತ್ರಣ ನೀಡಿದ ಡಾಲಿ
– ಸರ್ಕಾರಕ್ಕೆ ಬ್ಯಾಲೆಟ್‌ಗಿಂತ ಬುಲೆಟ್ ಮೇಲೆ ನಂಬಿಕೆ – ನಕ್ಸಲರಿಗೆ ಹಣ, ಶಸ್ತ್ರಾಸ್ತ್ರ ಎಲ್ಲಿಂದ ಬಂತು? ಎಂದು ಪ್ರಶ್ನೆ|
ಚಿಕ್ಕಮಗಳೂರು: ರಾಜ್ಯ ಸಾವಿನ ಮನೆಯಾಗಿದೆ. ಆದ್ರೆ ಸರ್ಕಾರಕ್ಕೆ ಡಿನ್ನರ್ ಪಾಲಿಟಿಕ್ಸ್‌ದ್ದೇ ಚಿಂತೆಯಾಗಿದೆ. ಡಿನ್ನರ್ ಮೀಟಿಂಗ್, ಟೆಂಪಲ್ ರನ್ ಸ್ವಾರ್ಥಕ್ಕಾಗಿ ಮಾಡ್ತಿರೋದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಕಿಡಿಕಾರಿದರು.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ನಡೆಯುತ್ತಿದ್ದು, ಕರ್ನಾಟಕ ಸಾವಿನ ಮನೆಯಂತಾಗಿದೆ. 2,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳು ಜೀವ ಕಳೆದುಕೊಳ್ಳುತ್ತಿದ್ದಾರೆ. ತಜ್ಞರ ಸಮಿತಿ ರಚನೆಯಾಗಿದ್ದರೂ ಬಾಣಂತಿಯರು, ಹಸುಗೂಸುಗಳ ಸಾವಿಗೆ ಕಾರಣವೇನೆಂದು ತಿಳಿದಿಲ್ಲ ಎಂದರು.ಇ
ಇಂತಹ ಸಂದರ್ಭದಲ್ಲಿ ಡಿನ್ನರ್ ಮೀಟಿಂಗ್ ಅಲ್ಲ, ಸಾವಿಗೆ ಕಾರಣವಾದ ಸಂಬಂಧ ಉನ್ನತ ಮೀಟಿಂಗ್ ಮಾಡಬೇಕಿತ್ತು. ಸಾವಿಗೆ ಕಾರಣ ಆಸ್ಪತ್ರೆಯೋ, ವೈದ್ಯರೋ, ಔಷಧಿಯೋ ಏನು ಎಂದು ತಿಳಿಯಬೇಕಿತ್ತು. ಆದರೆ, ರಾಜ್ಯ ಸರ್ಕಾರಕ್ಕೆ ಸಂವೇದನೆ ಇಲ್ಲದಂತಾಗಿದೆ. ಕಲ್ಲು ಹೃದಯ, ಹೃದಯ ಹೀನರಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.
ನಕ್ಸಲರು ತಂತ್ರಗಾರಿಕೆ ಕಾರಣಕ್ಕೆ ಶರಣಾದ್ರಾ?
ನಕ್ಸಲರು ತಂತ್ರಗಾರಿಕೆ ಕಾರಣಕ್ಕೆ ಶರಣಾಗಿದ್ದಾರೋ ಅಥವಾ ನಕ್ಸಲ್ ಸಿದ್ಧಾಂತದಿಂದ ಹೊರಬಂದು ಶರಣಾಗಿದ್ದಾರೋ ಎಂಬುದನ್ನು ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು. ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ. ನಕ್ಸಲರ ಶರಣಾಗತಿ ಹೆಸರಿನಲ್ಲಿ ಕಾರ್ಯಚಟುವಟಿಕೆ ಬಲಗೊಳಿಸಲು ಅವಕಾಶ ನೀಡಿದಂತೆ ಆಗಬಾರದು. ಅವರ ಚಲನವಲನಗಳ ಮೇಲೆ ನಿಗಾ ಇಡುವುದರ ಜೊತೆಗೆ ಅವರು ತನಿಖೆಗೆ ಸಹಕರಿಸಬೇಕು ಎಂದರು.
ಬ್ಯಾಲೆಟ್‌ಗಿಂತ ಬುಲೆಟ್ ಮೇಲೆ ನಂಬಿಕೆ:
ನಕ್ಸಲರ ಬಳಕೆ ಶಸ್ತ್ರಾಸ್ತ್ರ ಪತ್ತೆ ಕುರಿತು ಪ್ರತಿಕ್ರಿಯಿಸಿದ ಅವರು, ನಕ್ಸಲರು ಎಲ್ಲಿ ಕಾರ್ಯಾಚರಣೆ ಮಾಡಿದ್ದರು? ಹಣ, ಶಸ್ತ್ರಾಸ್ತ್ರ ಎಲ್ಲಿಂದ ಬಂತು? ಯಾವ ವ್ಯಕ್ತಿ, ಸಂಘಟನೆ ಸಹಾಯ ಮಾಡಿದ್ದಾರೆ? ಎಲ್ಲಾ ಮಾಹಿತಿ ಹಂಚಿಕೊಂಡರೆ ಶರಣಾಗತಿಗೆ ಅರ್ಥ ಬರುತ್ತದೆ? ನಕ್ಸಲ್ ಸಿದ್ಧಾಂತ ಸಂವಿಧಾನಕ್ಕೆ ವಿರುದ್ಧವಾದ ಸಿದ್ಧಾಂತ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ಸಿದ್ಧಾಂತ. ಅವರಿಗೆ ಬ್ಯಾಲೆಟ್ ಮೇಲೆ ನಂಬಿಕೆ ಇಲ್ಲ, ಬುಲೆಟ್ ಮೇಲೆ ನಂಬಿಕೆ ಇದೆ. ನಕ್ಸಲರಿಂದ ನಾಗರಿಕರು, ಪೊಲೀಸರು, ಸೈನಿಕರು ಪ್ರಾಣತ್ಯಾಗ ಮಾಡಿದ್ದಾರೆ. ಈ ಹಿನ್ನೆಲೆ ಪ್ಯಾಕೇಜ್ ನೀಡುವ ಮುನ್ನ ಎಲ್ಲಾ ಮಾಹಿತಿ ಕಲೆ ಹಾಕಬೇಕು. ನಕ್ಸಲ್ ಶರಣಾಗತಿ ಒಂದು ತಂತ್ರಗಾರಿಕೆ ಆಗಬಾರದು ಎಂದು ಆಗ್ರಹಿಸಿದರು.
ಬೆಂಗಳೂರು: ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಸಿಕ್ಕಿಲ್ಲ ಎಂದರೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ, ಡಿನ್ನರ್ ಮೀಟಿಂಗ್ ಯಾಕೆ ಎಂದು ಕಾಂಗ್ರೆಸ್‌ನಲ್ಲಿ (Congress) ದಲಿತ ನಾಯಕರ ಡಿನ್ನರ್ ಮೀಟಿಂಗ್ ಕುರಿತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.
ದಲಿತ ನಾಯಕರ ಡಿನ್ನರ್ ಮೀಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದಲಿತ ಶಾಸಕರು, ನಾಯಕರು, ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಟ್ಟಿಲ್ಲ ಅದಕ್ಕೆ ಸಭೆ ಮಾಡ್ತೀನಿ ಎಂದು ಹೇಳುತ್ತಾರೆ. ಡಿನ್ನರ್ ಪಾರ್ಟಿ ಮಾಡಿ ಚರ್ಚೆ ಮಾಡ್ತೀವಿ ಅಂತಾರೆ. ಡಿನ್ನರ್ ಪಾರ್ಟಿಯಲ್ಲಿ ಚರ್ಚೆ ಮಾಡೋದಾದ್ರೆ ಕ್ಯಾಬಿನೆಟ್ ಇರೋದು ಯಾಕೆ ಅಂತ ಪ್ರಶ್ನೆ ಮಾಡಿದರು.ಇದನ್ನೂ ಓದಿ: Kempegowda International Airport | 2024ರಲ್ಲಿ ದಾಖಲೆಯ 4 ಕೋಟಿ ಪ್ರಯಾಣಿಕರ ಸಂಖ್ಯೆ
ಎಸ್ಸಿ-ಎಸ್ಟಿ ಇರಲಿ ಯಾವುದೇ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಗದೇ ಇದ್ದರೆ ಕ್ಯಾಬಿನೆಟ್ ಚರ್ಚೆ ಮಾಡಬೇಕಾ? ಅಥವಾ ಬೇರೆಕಡೆ ಊಟಕ್ಕೆ ಸೇರಿ ಡಿನ್ನರ್‌ನಲ್ಲಿ ಚರ್ಚೆ ಮಾಡ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ಹೊಸ ಬಜೆಟ್‌ಗೆ ಇನ್ನೆರಡು ತಿಂಗಳು ಬಾಕಿಯಿದೆ. ಆದರೆ ಕಳೆದ ವರ್ಷ ಘೋಷಣೆ ಮಾಡಿದ್ದ ಅನುದಾನ ಹಣವನ್ನೇ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಸರ್ಕಾರಕ್ಕೆ ಹಣದ ಸಮಸ್ಯೆ ಶುರುವಾಗಿದೆಯಾ ಎನ್ನುವ ಪ್ರಶ್ನೆ ಮೂಡಿದೆ.
2024-25ನೇ ಸಾಲಿನ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಎಲ್ಲಾ ಇಲಾಖೆಗೂ 3,10,248 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಈ ಪೈಕಿ ಇಲ್ಲಿಯವರೆಗೂ 1,81,785 ಲಕ್ಷ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಹಂಚಿಕೆಯಾದ ಅನುದಾನದಲ್ಲಿ 80% ಇಲಾಖೆಗಳಿಗೆ 50% ಹಣವನ್ನು ಸರ್ಕಾರ ನೀಡಿದೆ. ಆದರೆ ಎಲ್ಲಾ ಇಲಾಖೆಗಳಿಗೂ ಸರಿಯಾಗಿ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರಿ ಇಲಾಖೆಗಳಿಗೆ ಹೊಡೆತ ಬೀಳುತ್ತಿದೆ. ಹಂಚಿಕೆ ಮಾಡಿದ್ದ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಹಣದ ಕೊರತೆ ಕಾಡ್ತಿದೆಯಾ? ಸರ್ಕಾರದ ಖಜಾನೆ ಬರಿದಾಗಿದೆಯಾ? ಎನ್ನುವಂತಾಗಿದೆ.ಇದನ್ನೂ ಓದಿ: ಬೆಂಗಳೂರು | ದರ್ಶನಕ್ಕೆ ಪಾಸ್ ಸಿಗದಿದ್ದಕ್ಕೆ ತಿರುಪತಿ ತಿಮ್ಮಪ್ಪನನ್ನೇ ಮನೆಗೆ ಕರೆಸಿದ ಭಕ್ತ!
2024-25ನೇ ಸಾಲಿನಲ್ಲಿ ಹಾಗಾದರೆ ಯಾವ ಯಾವ ಇಲಾಖೆಗೆ ಸಿಎಂ ಎಷ್ಟು ಬಜೆಟ್ ಮೀಸಲಿಟ್ಟಿದ್ದರು? ಈವರೆಗೂ ಎಷ್ಟು ಹಣ ಬಿಡುಗಡೆ ಆಗಿದೆ ಎನ್ನುವ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಈ ಕುರಿತು ಸರ್ಕಾರವೇ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.
ಪ್ರಮುಖ ಇಲಾಖೆಗಳಿಗೆ ಬಿಡುಗಡೆ ಆದ ಅನುದಾನ ಎಷ್ಟು? ಕೃಷಿ ಇಲಾಖೆ
ನಿಗದಿಯಾದ ಅನುದಾನ-4,991 ಕೋಟಿ ರೂ.
ಬಿಡುಗಡೆಯಾದ ಅನುದಾನ- 2,351 ಕೋಟಿ ರೂ.
ನಗರಾಭಿವೃದ್ಧಿ ಇಲಾಖೆ
ನಿಗದಿಯಾದ ಅನುದಾನ-14,935 ಕೋಟಿ ರೂ.
ಬಿಡುಗಡೆಯಾದ ಅನುದಾನ-7,372 ಕೋಟಿ ರೂ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ನಿಗದಿಯಾದ ಅನುದಾನ- 34,439 ಕೋಟಿ ರೂ.
ಬಿಡುಗಡೆಯಾದ ಅನುದಾನ-18,646 ಕೋಟಿ ರೂ.
ಅರೋಗ್ಯ ಇಲಾಖೆ
ನಿಗದಿಯಾದ ಅನುದಾನ- 10,697 ಕೋಟಿ ರೂ.
ಬಿಡುಗಡೆಯಾದ ಅನುದಾನ-6,299 ಕೋಟಿ ರೂ.
ಆಹಾರ ಇಲಾಖೆ
ನಿಗದಿಯಾದ ಅನುದಾನ- 99,48 ಕೋಟಿ ರೂ.
ಬಿಡುಗಡೆಯಾದ ಅನುದಾನ-4,082 ಕೋಟಿ ರೂ.
ಇಂಧನ ಇಲಾಖೆ
ನಿಗದಿಯಾದ ಅನುದಾನ-23,173 ಕೋಟಿ ರೂ.
ಬಿಡುಗಡೆಯಾದ ಅನುದಾನ-14,892 ಕೋಟಿ ರೂ.
ಜಲಸಂಪನ್ಮೂಲ ಇಲಾಖೆ
ನಿಗದಿಯಾದ ಅನುದಾನ-16,809 ಕೋಟಿ ರೂ.
ಬಿಡುಗಡೆಯಾದ ಅನುದಾನ-7,587 ಕೋಟಿ ರೂ.
ಗ್ರಾಮೀಣಾಭಿವೃದ್ಧಿ ಇಲಾಖೆ
ನಿಗದಿಯಾದ ಅನುದಾನ-21,512 ಕೋಟಿ ರೂ.
ಬಿಡುಗಡೆಯಾದ ಅನುದಾನ-70,95 ಕೋಟಿ ರೂ.
ಲೋಕೋಪಯೋಗಿ ಇಲಾಖೆ
ನಿಗದಿಯಾದ ಅನುದಾನ-10,176 ಕೋಟಿ ರೂ.
ಬಿಡುಗಡೆಯಾದ ಅನುದಾನ-5,684 ಕೋಟಿ ರೂ.
ವಸತಿ ಇಲಾಖೆ
ನಿಗದಿಯಾದ ಅನುದಾನ-3,067 ಕೋಟಿ ರೂ.
ಬಿಡುಗಡೆಯಾದ ಅನುದಾನ-1,606 ಕೋಟಿ ರೂ.
ಶಾಲಾ ಶಿಕ್ಷಣ ಇಲಾಖೆ
ನಿಗದಿಯಾದ ಅನುದಾನ- 37,055 ಕೋಟಿ ರೂ.
ಬಿಡುಗಡೆಯಾದ ಅನುದಾನ-22,932 ಕೋಟಿ ರೂ.
ಸಾರಿಗೆ ಇಲಾಖೆ
ನಿಗದಿಯಾದ ಅನುದಾನ-65,34 ಕೋಟಿ ರೂ.
ಬಿಡುಗಡೆಯಾದ ಅನುದಾನ-4,023 ಕೋಟಿ ರೂ.
ಸಮಾಜ ಕಲ್ಯಾಣ ಇಲಾಖೆ
ನಿಗದಿಯಾದ ಅನುದಾನ-5,095 ಕೋಟಿ ರೂ.
ಬಿಡುಗಡೆಯಾದ ಅನುದಾನ-3,028 ಕೋಟಿ ರೂ.
ಯೋಜನೆ ಇಲಾಖೆ
ನಿಗದಿಯಾದ ಅನುದಾನ- 3,841 ಕೋಟಿ ರೂ.
ಬಿಡುಗಡೆಯಾದ ಅನುದಾನ-429 ಕೋಟಿ ರೂ.
ವೈದ್ಯಕೀಯ ಶಿಕ್ಷಣ ಇಲಾಖೆ
ನಿಗದಿಯಾದ ಅನುದಾನ-4,331 ಕೋಟಿ ರೂ.
ಬಿಡುಗಡೆಯಾದ ಅನುದಾನ- 3,062 ಕೋಟಿ ರೂ.
ಶಿಮ್ಲಾ: ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದ ಹಿಮಾಚಲ ಸರ್ಕಾರ (Himchal Government) ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ರಾಜ್ಯದಲ್ಲಿ ವಿದ್ಯುತ್ ಸಬ್ಸಿಡಿ ವಾಪಸ್ ಅಭಿಯಾನ ಶುರುವಾಗಿದೆ.
ಪ್ರತಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸುಖ್ವೀಂದರ್ ಸಿಂಗ್ ಸುಖು (Sukhvinder Singh Sukhu) ಮಾತನಾಡಿ, ಆರ್ಥಿಕ ಸಂಕಷ್ಟದಲ್ಲಿರುವುದರಿಂದ ರಾಜ್ಯದಲ್ಲಿ ಹಣ ಉಳಿಸುವ ಕ್ರಮಕ್ಕೆ ಸರ್ಕಾರ ಮುಂದಾಗಿದ್ದು, ವಿದ್ಯುತ್ ಸಬ್ಸಿಡಿಯನ್ನು ತ್ಯಜಿಸುವಂತೆ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಯುವತಿಯರ ಅಂಗಾಗ ವಿಡಿಯೋ ಮಾಡ್ತಿದ್ದ ಕಾಮುಕ ಪೊಲೀಸ್ ವಶಕ್ಕೆ
ಮುಖ್ಯಮಂತ್ರಿ ಸುಖ್ವೀಂದರ್ ಸಿಂಗ್ ಸುಖು ಅವರು ತಮ್ಮ ಹೆಸರಿನಲ್ಲಿ ನೋಂದಣಿಯಾಗಿದ್ದ ವಿದ್ಯುತ್ ಸಬ್ಸಿಡಿ (Power Subsidy) ವಾಪಸ್ ನೀಡಿದ್ದಾರೆ. ಅಲ್ಲದೇ ಇತರೆ ಅರ್ಹರಿಗೂ ಸಬ್ಸಿಡಿ ಯೋಜನೆಯಿಂದ ಹಿಂದೆ ಸರಿಯುವಂತೆ ಕರೆ ನೀಡಿದ್ದಾರೆ. ಒಟ್ಟು ತಮ್ಮ ಹೆಸರಿನಲ್ಲಿ ನೋಂದಣಿಯಾಗಿದ್ದ 5 ವಿದ್ಯುತ್ ಸಂಪರ್ಕಗಳಿಗೆ ಸಿಗುತ್ತಿದ್ದ ಸಬ್ಸಿಡಿಯನ್ನು ಹಿಂದಿರುಗಿಸಿದ್ದು, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಬಹುವಿದ್ಯುತ್ ಸಂಪರ್ಕವನ್ನು ಹೊಂದಿರುವ ಜನರು, ಸಬ್ಸಿಡಿಯನ್ನು ವಾಪಸ್ ನೀಡುವಂತೆ ಕೋರಿದ್ದಾರೆ.
ಸರ್ಕಾರ ವಿದ್ಯುತ್ ಸಬ್ಸಿಡಿಗಾಗಿ ವಾರ್ಷಿಕ 2,200 ಕೋಟಿ ರೂ. ಖರ್ಚು ಮಾಡುತ್ತದೆ. ವಿದ್ಯುತ್ ಇಲಾಖೆಯ ನೌಕರರ ಸಂಬಳ ಮತ್ತು ಪಿಂಚಣಿಗಾಗಿ ತಿಂಗಳಿಗೆ 200 ಕೋಟಿ ರೂ. ಖರ್ಚು ಮಾಡುತ್ತಿದೆ. ಸಬ್ಸಿಡಿ ಅಗತ್ಯ ಇರುವವರಿಗೆ ಮೀಸಲು, ಅನುಕೂಲಸ್ಥರು ರಾಜ್ಯದ ಅಭಿವೃದ್ಧಿ ಕಾರಣಕ್ಕೆ ವಾಪಸ್ ನೀಡಬೇಕು ಎಂದಿದ್ದಾರೆ.
ಇದಕ್ಕೂ ಮುನ್ನ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯದಲ್ಲಿ ಹಲವು ವೆಚ್ಚಗಳಿಗೆ ಕಡಿವಾಣ ಹಾಕಿತ್ತು. ಸಿಎಂ, ಪಕ್ಷದ ಶಾಸಕರು, ಉನ್ನತ ಅಧಿಕಾರಿಗಳ ವೇತನ ಪಾವತಿಯಲ್ಲಿ ವಿಳಂಬವಾಗಿತ್ತು. ಅಲ್ಲದೇ ಕೆಲ ಸರ್ಕಾರಿ ಹೋಟೆಲ್‌ಗಳನ್ನು ಕೂಡ ಮಾರಾಟ ಮಾಡಲಾಗಿತ್ತು. ಅನರ್ಹ ಶಾಸಕರಿಗೆ ಪಿಂಚಣಿ ನಿಲ್ಲಿಸುವ ನಿರ್ಧಾರ ಪ್ರಕಟಿಸಿತ್ತು. ಉದ್ಯಮ, ಹೋಟೆಲ್‌ಗಳಿಗೆ ನೀಡುವ ವಿದ್ಯುತ್ ಸಬ್ಸಿಡಿ ಕಡಿತ ಮಾಡಲಾಗಿತ್ತು.ಇದನ್ನೂ ಓದಿ: ನಮ್ಮ ಮೆಟ್ರೋ ‘ಯೆಲ್ಲೋ ಲೈನ್’ ಸೇವೆ ಆರಂಭ ಯಾವಾಗ?- ವಿಳಂಬಕ್ಕೆ ಕಾರಣ ಬಿಚ್ಚಿಟ್ಟ ತೇಜಸ್ವಿ ಸೂರ್ಯ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ (Karnataka Examination Authority) ಸೀಟ್ ಬ್ಲಾಕಿಂಗ್ ಅಕ್ರಮ (Seat Blocking) ಆಗಿರುವುದು ಸತ್ಯ. ಅಕ್ರಮ ತನಿಖೆಗೆ ಸರ್ಕಾರವೇ ಕೆಇಎಗೆ (KEA) ಸೂಚನೆ ನೀಡಿ ಪೊಲೀಸರಿಗೆ ದೂರು ನೀಡುವಂತೆ ತಿಳಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಸೀಟ್ ಬ್ಲಾಕ್ ಅಕ್ರಮ ಆಗಿರುವ ಬಗ್ಗೆ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯೆ ನೀಡಿದ ಅವರು, ಸೀಟ್ ಬ್ಲಾಕ್ ಬಗ್ಗೆ ನಮ್ಮ ಗಮನಕ್ಕೆ ಬಂದ ಕೂಡಲೇ ಅಧಿಕಾರಿಗಳಿಂದ ಮಾಹಿತಿ ಪಡೆದು ದೂರು ನೀಡಿದ್ದೇವೆ. ಯಾವ ರೀತಿ ಅಕ್ರಮ ಆಗಿದೆ? ಈ ವರ್ಷ ಆಗಿದೆಯಾ? ಕಳೆದ ವರ್ಷ ಆಗಿದೆಯಾ? ಎಲ್ಲದರ ಬಗ್ಗೆ ತನಿಖೆಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ನಾನಿ ನಿರ್ಮಾಣದ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟ ಮೆಗಾಸ್ಟಾರ್
ಕಳೆದ ಎರಡು ವರ್ಷಗಳ ಐಪಿ ಅಡ್ರೆಸ್‌ನಲ್ಲಿ ಹೇಗೆ ಆಪ್ಶನ್ ಎಂಟ್ರಿ ಮಾಡಿದ್ದಾರೆ ಎಂದು ತನಿಖೆ ಆಗುತ್ತಿದೆ. ಸೀಟು ಪಡೆಯದ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಗಿದೆ. ಕೆಲವು ಕಾಲೇಜುಗಳಲ್ಲಿ ಒಂದೇ ಐಪಿ ಅಡ್ರೆಸ್‌ನಿಂದ ಆಪ್ಶನ್ ಎಂಟ್ರಿ ಆಗಿರುವುದು ಗಮನಕ್ಕೆ ಬಂದಿದೆ. ನಾವೇ ಪ್ರಾಥಮಿಕ ತನಿಖೆ ಮಾಡಿ, ಮಾಹಿತಿ ಸಂಗ್ರಹ ಮಾಡಿ ಪೊಲೀಸರಿಗೆ ತನಿಖೆ ಮಾಡಲು ದೂರು ಕೊಟ್ಟಿದ್ದೇವೆ ಎಂದಿದ್ದಾರೆ.
ಈ ಅಕ್ರಮ ಜಾಲದ ಪತ್ತೆಗೆ ದೂರು ನೀಡಲಾಗಿದ್ದು, ಪೊಲೀಸರು 10 ಜನರನ್ನು ಬಂಧಿಸಿದ್ದಾರೆ. ಇದಕ್ಕೆ ಯಾರು ಕಿಂಗ್ ಪಿನ್ ಎಂದು ಪತ್ತೆ ಹಚ್ಚಬೇಕು? ಹೆಚ್ಚಿನ ತನಿಖೆ ಆಗುತ್ತಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೀವಿ. ಕೆಇಎ ಬೋರ್ಡ್ ಇದರಲ್ಲಿ ಶಾಮೀಲು ಆಗಿಲ್ಲ. ಅಲ್ಲಿ ಕೆಲಸ ಮಾಡುತ್ತಿರುವ ಅವಿನಾಶ್ ಎಂಬ ಹುಡುಗ ಮಾಹಿತಿ ಕೊಟ್ಟಿದ್ದಾನೆ. ಇದರ ಬಗ್ಗೆ ತನಿಖೆ ಆಗಬೇಕು. ಪೊಲೀಸರು ಕೊಡುವ ವರದಿ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೀಟ್ ಬ್ಲಾಕ್‌ನಿಂದ ಅನ್ಯಾಯವಾಗಿದೆ. ಇದನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತೇವೆ. ಕಾಲೇಜುಗಳ ಮೇಲೆ ಕ್ರಮಕ್ಕೆ ಪೊಲೀಸರು ವರದಿ ಕೊಡಲಿ. ಪೊಲೀಸರು ವರದಿ ಕೊಟ್ಟ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಅಪರಿಚಿತ ವಾಹನ ಹಿಟ್ ಅಂಡ್ ರನ್ – ತಾಯಿ ಸಾವು, ಮಗು ಸ್ಥಿತಿ ಗಂಭೀರ
ವಿಜಯಪುರ: ಜಿಲ್ಲೆಯಲ್ಲಿ ವಕ್ಫ್ ದಂಗಲ್ ಕಿಚ್ಚು ಹತ್ತಿ ರಾಜ್ಯಾದ್ಯಂತ ವ್ಯಾಪಿಸಿತ್ತು. ಇದೀಗ ಜಿಲ್ಲೆಯಲ್ಲಿ ಬಿಪಿಎಲ್ (BPL) ದಂಗಲ್ ಶುರುವಾಗಿದೆ. ರಾಜ್ಯ ಸರ್ಕಾರ ಮತ್ತೊಂದು ಯಡವಟ್ಟು ಮಾಡಿ, ಬಡಜನರ ಕೆಂಗಣ್ಣಿಗೆ ಗುರಿಯಾಗಿದೆ.
ವಿಜಯಪುರದಲ್ಲಿ (Vijayapura) ವಕ್ಫ್ ದಂಗಲ್ ಮುಗಿಯುವ ಮುನ್ನವೇ ಬಿಪಿಎಲ್ ಕಾರ್ಡ್ ಸಮಸ್ಯೆ ಶುರುವಾಗಿದೆ. ಜಿಲ್ಲೆಯಲ್ಲಿ ಒಟ್ಟು 4,359 ಬಿಪಿಎಲ್ ಕಾರ್ಡ್ ರದ್ದಾಗಿವೆ. ಐಟಿ ರಿಟರ್ನ್ ಮಾಡಿದ 1,932 ಜನರು ಸೇರಿದಂತೆ ಸರ್ಕಾರಿ ನೌಕರರ 1,71,012 ರೂ. ಗಿಂತ ಹೆಚ್ಚು ಆದಾಯ ಹೊಂದಿರುವ 2,256 ಜನರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಆದರೆ ಇದರಲ್ಲಿ ಕೆಲ ಬಡ ಜನರ ಬಿಪಿಎಲ್ ಕಾರ್ಡ್‌ಗಳು ರದ್ದಾಗಿವೆ. ಇದನ್ನೂ ಓದಿ: ಉಡುಪಿಯ ಕಬ್ಬಿನಾಲೆಯಲ್ಲಿ ಎನ್‌ಕೌಂಟರ್ – ನಕ್ಸಲ್ ನಾಯಕ ವಿಕ್ರಂ ಗೌಡ ಹತ್ಯೆ
ನಗರದ ಜಾಡರ ಓಣಿಯ ಮುಸ್ಲಿಂ ಬಡ ಕುಟುಂಬ ಅನವರಬೀ ಗಿರಗಾವ ಎಂಬುವವರ ಬಿಪಿಎಲ್ ಕಾರ್ಡ್ ರದ್ದಾಗಿದೆ. ಅನವರಬೀ ಅವರ ಪತಿ ಹಾಸಿಂಸಾಬ ಗಿರಗಾವ ಕಳೆದ 7 ವರ್ಷ ಹಿಂದೆ ತೀರಿ ಹೋಗಿದ್ದಾರೆ. ಸದ್ಯ ಅನವರಬೀ ಮಗ ಮೋತಿಲಾಲ ಸೇರಿದಂತೆ 7 ಜನರು ಕುಟುಂಬಸ್ಥರು ಇದ್ದಾರೆ. ಅನವರಬೀ ಮಗ ಮೋತಿಲಾಲ ಬಟ್ಟೆ ಅಂಗಡಿಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಾನೆ.
ಮನೆಯಲ್ಲಿ ಉಳಿದರ‍್ಯಾರು ಕೆಲಸ ಮಾಡಲ್ಲ. ಬಿಪಿಎಲ್ ಕಾರ್ಡ್‌ನ ರೇಷನ್‌ನಿಂದ, ಗೃಹಲಕ್ಷ್ಮಿಯ ಹಣದಿಂದ ಬಡ ಕುಟುಂಬ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಆದರೆ 15 ವರ್ಷದ ಕೆಳಗೆ ಅನವರಬೀ ಅವರ ಪತಿ ಹಾಸಿಂಸಾಬ ಮಾರುಕಟ್ಟೆಯ ರಸ್ತೆ ಬದಿ ಬಟ್ಟೆ ವ್ಯಾಪರ ಮಾಡುತ್ತಿದ್ದರಂತೆ. ಯಾರೋ ಹೇಳಿದ್ದಕ್ಕೆ ಜಿಎಸ್‌ಟಿ ಕಟ್ಟಿದ್ದರಂತೆ. ಈಗ ಜಿಎಸ್‌ಟಿ ಕಟ್ಟಿದ ಆಧಾರದ ಮೇಲೆ ಇವರ ಬಿಪಿಎಲ್ ಕಾರ್ಡ ರದ್ದಾಗಿದೆ ಎಂದು ಹೇಳಿದ್ದಾರೆ.
ಮನೆಗೆ ಬಂದು ಸರಿಯಾಗಿ ಪರಿಶೀಲನೆ ಮಾಡದೆ ಏಕಾಏಕಿ ನಮ್ಮ ಕಾರ್ಡ್ ರದ್ದು ಮಾಡಿರುವುದು ವಿಪರ್ಯಾಸ. ಬಿಪಿಎಲ್ ಕಾರ್ಡ್ ರೇಷನ್ ನಂಬಿ ಬದುಕುತ್ತಿದ್ದ ಜನರು ಮುಂದೆ ಜೀವನ ಸಾಗಿಸುವುದು ಕಷ್ಟ ಎಂದು ರಾಜ್ಯ ಸರ್ಕಾರಕ್ಕೆ ಶಾಪ ಹಾಕುವಂತಾಗಿದೆ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ: 19-11-2024
ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ಪ್ರಕರಣಗಳನ್ನು ಕಡಿಮೆ ಮಾಡುವ ಮುಖ್ಯ ಉದ್ದೇಶದಿಂದ ಮಹಿಳಾ ಆಯೋಗ ಈ ಪ್ರಸ್ತಾವನೆಯನ್ನು ಸರ್ಕಾರದ ಮುಂದಿರಿಸಿದೆ. ಸಲ್ಲಿಸಿದ ಪ್ರಸ್ತಾವನೆಯಲ್ಲಿ ಪುರುಷ ಟೈಲರ್‌ಗಳು ಇನ್ನು ಮುಂದೆ ಮಹಿಳೆಯರ ಅಳತೆಗಳನ್ನು ತೆಗೆದುಕೊಳ್ಳುವಂತಿಲ್ಲ. ಜಿಮ್‌ಗಳಲ್ಲಿ ಅಥವಾ ಯೋಗ ತರಬೇತಿ ಕೇಂದ್ರಗಳಲ್ಲಿ ಪುರುಷರು ಮಹಿಳೆಯರಿಗೆ ತರಬೇತಿ ನೀಡುವಂತಿಲ್ಲ. ಶಾಲಾ ಬಸ್‌ಗಳಲ್ಲಿ ಮಹಿಳಾ ಸಿಬ್ಬಂದಿ, ಮಹಿಳೆಯರಿಗೆ ಉಡುಪುಗಳಿಗೆ ಸಂಬಂಧಿಸಿದ ಅಂಗಡಿಗಳಲ್ಲಿ ಮಹಿಳಾ ಸಿಬ್ಬಂದಿ ಇರುವಂತೆ ಶಿಫಾರಸು ಮಾಡಿದೆ.
ಲಕ್ನೋದಲ್ಲಿ ಅ.28 ರಂದು ನಡೆದ ಸಭೆಯಲ್ಲಿ ಈ ಸಲಹೆಗಳ ಕುರಿತು ಚರ್ಚಿಸಲಾಯಿತು. ಆಯೋಗದ ಸದಸ್ಯರು ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಪರಿಹರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ಚಿಂತನೆ ನಡೆಸಲಾಯಿತು. ಇದೇ ವೇಳೆ ಆಯೋಗದ ಸದಸ್ಯರಾದ ಮನೀಶಾ ಅಹ್ಲಾವತ್ ಮಾತನಾಡಿ, ಪ್ರಸ್ತಾವನೆಗೆ ಸಂಬಂಧಿಸಿದಂತೆ ಪ್ರಾಥಮಿಕವಾಗಿ ಚರ್ಚೆಯನ್ನು ನಡೆಸಲಾಗಿದ್ದು, ಯಾವುದೇ ನಿರ್ಧಾರಗಳನ್ನು ಕೈಗೊಂಡಿಲ್ಲ. ಅನುಮೋದನೆಗೊಂಡ ನಂತರ ಪ್ರಸ್ತಾವನೆಗಳ ಅನುಷ್ಠಾನಕ್ಕಾಗಿ ಕರಡು ನೀತಿಯನ್ನು ರಚಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದರು.
ಶಾಮ್ಲಿ ಜಿಲ್ಲಾ ಪರೀಕ್ಷಾಧಿಕಾರಿ ಹಮೀದ್ ಹುಸೇನ್ ಮಾತನಾಡಿ, ಈಗಾಗಲೇ ಈ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲು ಸಂಸ್ಥೆಗಳಿಗೆ ಸೂಚನೆಗಳನ್ನು ನೀಡಿದ್ದಾರೆ. ಮಹಿಳಾ ಜಿಮ್‌ಗಳು, ಯೋಗ ಕೇಂದ್ರಗಳಲ್ಲಿ ಕಡ್ಡಾಯ ಮಹಿಳಾ ತರಬೇತುದಾರರು ಅಥವಾ ಶಿಕ್ಷಕರು ಮತ್ತು ಡಿವಿಆರ್ ಹೊಂದಿರುವ ಸಿಸಿಟಿವಿ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ತಿಳಿಸಿದರು.ಇದನ್ನೂ ಓದಿ: ದಲಿತ ಯುವತಿಗೆ ನಿಂದನೆ – ಅಥಣಿ ಡಿವೈಎಸ್‌ಪಿ ಪ್ರಶಾಂತ್ ಮುನ್ನೋಳಿ ವಿರುದ್ಧ ಎಫ್‌ಐಆರ್
ಬಾಟಿಕ್ ಸೆಂಟರ್‌ಗಳಲ್ಲಿ ಸಕ್ರಿಯ ಸಿಸಿಟಿವಿ ಮಾನಿಟರಿಂಗ್‌ನೊಂದಿಗೆ ಮಹಿಳೆಯರ ಅಳತೆಗಳನ್ನು ತೆಗೆದುಕೊಳ್ಳಲು ಮಹಿಳಾ ಟೈಲರ್‌ಗಳನ್ನು ನೇಮಿಸಿಕೊಳ್ಳಬೇಕು. ಕೋಚಿಂಗ್ ಸೆಂಟರ್‌ಗಳು ಸಿಸಿಟಿವಿ ಕಣ್ಗಾವಲು ಮತ್ತು ಸರಿಯಾದ ಶೌಚಾಲಯ ಹಾಗೂ ವಿಶ್ರಾಂತಿ ಕೋಣೆಗಳನ್ನು ಹೊಂದಿರಬೇಕು ಎಂದರು.