Tag: State Government

  • ಬೀದಿ ಬದಿ ವ್ಯಾಪಾರಿಗಳಿಗೆ ಇನ್ಮುಂದೆ ಸಿಗಲಿದೆ ಬಡ್ಡಿಯೇ ಇಲ್ಲದ ದಿನದ ಸಾಲ: ಏನಿದು ಬಡವರ ಬಂಧು ಯೋಜನೆ? ಯಾರು ಅರ್ಹರು?

    ಬೀದಿ ಬದಿ ವ್ಯಾಪಾರಿಗಳಿಗೆ ಇನ್ಮುಂದೆ ಸಿಗಲಿದೆ ಬಡ್ಡಿಯೇ ಇಲ್ಲದ ದಿನದ ಸಾಲ: ಏನಿದು ಬಡವರ ಬಂಧು ಯೋಜನೆ? ಯಾರು ಅರ್ಹರು?

    ಬೆಂಗಳೂರು: ಮೀಟರ್ ಬಡ್ಡಿ ದಂಧೆಗೆ ಶಾಶ್ವತ ಪರಿಹಾರ ನೀಡುವ ಕ್ರಮಕ್ಕೆ ಮುಂದಾಗಿರುವ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ, ಬಡ್ಡಿ, ಸಾಲದ ಶೂಲಕ್ಕೆ ಸಿಲುಕಿರುವ ಜನರ ನೆರವಿಗೆ ಬರಲು `ಬಡವರ ಬಂಧು’ ಯೋಜನೆ ಶೀಘ್ರವೇ ಜಾರಿ ಮಾಡಲು ಸಿದ್ಧತೆ ನಡೆಸಿದೆ.

    ಸರ್ಕಾರದ ಈ ಯೋಜನೆ ಇಂದ ಬೀದಿ ಬದಿ ವ್ಯಾಪಾರಿಗಳಿಗೆ ಇನ್ನು ಮುಂದೆ ಬಡ್ಡಿಯೇ ಇಲ್ಲದ ದಿನದ ಸಾಲ ಲಭ್ಯವಾಗಲಿದೆ. ಬಡವರ ಬಂಧು ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 53 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಕಿರುಸಾಲ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

    ಎಲ್ಲಿ, ಎಷ್ಟು ಮಂದಿಗೆ ಸಾಲ?
    ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯ 10 ಮಹಾನಗರ ಪಾಲಿಕೆಗಳು ಹಾಗೂ ಜಿಲ್ಲಾ ಕೇಂದ್ರದ ಪ್ರಮುಖ ನಗರಗಳಲ್ಲಿ ಸಾಲ ಸೌಲಭ್ಯ ಸಿಗಲಿದೆ. ಪ್ರಮುಖವಾಗಿ ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ 5 ಸಾವಿರ ರೂ., 10 ಮಹಾನಗರ ಪಾಲಿಕೆಗಳಲ್ಲಿ 3 ಸಾವಿರ ರೂ., ಜಿಲ್ಲಾ ನಗರ ಪ್ರದೇಶ 1 ಸಾವಿರ ರೂ. ಸಾಲ ಸೌಲಭ್ಯ ಲಭ್ಯವಾಗಲಿದೆ.

    ರಾಜ್ಯ ಪ್ರಮುಖ ಮಹಾನಗರ ಪಾಲಿಕೆಗಳಾದ ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ ನಗರಗಳಲ್ಲಿ 3 ಸಾವಿರ ರೂ. ಸಾಲ ಸೌಲಭ್ಯವಾಗಲಿದೆ. ಬಾಗಲಕೋಟೆ, ಬೀದರ್, ಚಾಮರಾಜನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದೊಡ್ಡಬಳ್ಳಾಪುರ, ಹಾಸನ, ಹಾವೇರಿ, ಕಾರವಾರ, ಕೋಲಾರ, ಕೊಪ್ಪಳ, ಮಡಿಕೇರಿ, ಮಂಡ್ಯ, ರಾಯಚೂರು, ರಾಮನಗರ, ಉಡುಪಿ, ಯಾದಗಿರಿ ಜಿಲ್ಲಾ ಕೇಂದ್ರಗಳ ನಗರಗಳಲ್ಲಿ 1 ಸಾವಿರ ರೂ. ಸಾಲ ಸೌಲಭ್ಯ ಪಡೆಯಬಹುದಾಗಿದೆ.

    ಯಾರಿಗೆ ಅನ್ವಯ.?
    ತಳ್ಳುಬಂಡಿ ಹಾಗೂ ಮೋಟಾರು ವಾಹನಗಳಲ್ಲಿ ಪಾನೀಯ, ತಿಂಡಿ, ಊಟ ಮಾರಾಟ ಮಾಡುವವರು, ಮನೆ ಮನೆಗೆ ತೆರಳಿ ಹೂವು, ಹಣ್ಣ, ತರಕಾರಿ ವಿತರಿಸುವವರು ಹಾಗೂ ಬುಟ್ಟಿಯಲ್ಲಿ ವಸ್ತುಗಳನ್ನು ಮಾರಾಟ ಮಾಡುವವರು, ಪಾದರಕ್ಷೆ, ಚರ್ಮ ಉತ್ಪನ್ನ ರಿಪೇರಿ ಮತ್ತು ಮಾರಾಟ ಮಾಡುವವರು, ಆಟದ ಸಾಮಾನು, ಗೃಹೋಪಯೋಗಿ ವಸ್ತು ಮಾರಾಟ ಮಾಡುವವರು ಈ ಯೋಜನೆ ವ್ಯಾಪ್ತಿಯಲ್ಲಿ ಬರುತ್ತಾರೆ.

    ಯಾರಿಗೆ ಅನ್ವಯಿಸಲ್ಲ?
    ದುಡಿಯುವ ಕೈಗಳಿಗೆ ಹಣ ನೀಡುವುದು ಮಾತ್ರವಲ್ಲದೇ ಯೋಜನೆಯಲ್ಲಿ ಕೆಲ ನಿಯಮಗಳನ್ನ ಅಳವಡಿಸಿದ್ದು, ರಸ್ತೆ ಬದಿ ಸ್ವಚ್ಛತೆ ಹಾಳು ಮಾಡುವವರಿಗೆ ಹಾಗೂ ಪರಿಸರಕ್ಕೆ ಹಾನಿಯುಂಟು ಮಾಡುವ ವಸ್ತುಗಳನ್ನು ಮಾರಾಟ ಮಾಡುವವರಿಗೆ ಯೋಜನೆ ಅನ್ವಯಿಸುವುದಿಲ್ಲ ಎಂಬ ನಿಯಮ ರೂಪಿಸಲಾಗಿದೆ.

    ಸಾಲ ವಿತರಣೆ ಹೇಗೆ?
    ಮಹತ್ವದ ಯೋಜನೆಯನ್ನು ಜಾರಿ ಮಾಡಲು ಈಗಾಗಲೇ ಸಿದ್ಧತೆಯನ್ನು ನಡೆಸಿರುವ ಸರ್ಕಾರ ಸಾಲ ವಿತರಣೆಯನ್ನು ಸಹಕಾರಿ ಬ್ಯಾಂಕ್ ಗಳ ಮೂಲಕ ಮಾಡಲು ನಿರ್ಧರಿಸಿದೆ. ಪ್ರಮುಖವಾಗಿ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕುಗಳು, ಮಹಿಳಾ ಸಹಕಾರಿ ಬ್ಯಾಂಕುಗಳು, ಪಟ್ಟಣ ಸಹಕಾರ ಬ್ಯಾಂಕು ಇದರಲ್ಲಿ ಸೇರಿದೆ.

    ಸರ್ಕಾರದ ನೀಡುವ ಹಣಕ್ಕೆ ಸಮಯ ಮೀತಿಯಲ್ಲಿ ಬಡ್ಡಿಯನ್ನು ವಿಧಿಸಲು ತೀರ್ಮಾನ ಮಾಡಲಾಗಿದ್ದು, 2 ಸಾವಿರದಿಂದ 10 ಸಾವಿರ ಸಾಲ ಪಡೆದರೆ 3 ತಿಂಗಳ ಅವಧಿಗೆ ಶೇ.4ರಷ್ಟು ಬಡ್ಡಿ ವಿಧಿಸಲಿದೆ. ಸಾಲ ವಿತರಣೆ ಪ್ರತ್ಯೇಕ 8 ರೂಪೇ ಕಾರ್ಡ್ ನೀಡಲಿದೆ. ಯೋಜನೆ ಲಾಭ ಪಡೆಯಲು ಬಿಪಿಎಲ್ ಕಾರ್ಡ್ ಕಡ್ಡಾಯ ಮಾಡಿದ್ದು, ಗುರುತಿನಚೀಟಿ ಇಲ್ಲದವರಿಗೆ ಸಾಲ ವಿತರಿಸಲು ಅವಕಾಶ ನೀಡಿಲ್ಲ.

    ಫಲಾನುಭವಿಗಳ ಶೂನ್ಯ ಬಾಲೆನ್ಸ್ ಉಳಿತಾಯ ಖಾತೆ ತೆರೆದು, ಸಾಲ ಅರ್ಜಿಗಳನ್ನು ಸ್ವೀಕಾರ ಮಾಡಲಿದೆ. ಯೋಜನೆ ಅಡಿ ಸಾಲ ಪಡೆದು ಸಮರ್ಪಕವಾಗಿ ಮರುಪಾವತಿಸಿದರೆ, ಸಾಲ ನವೀಕರಿಸಲು ಮತ್ತು ಶೇ.10ರಷ್ಟು ಮಿತಿ ಅಂದರೆ 15 ಸಾವಿರ ರೂ.ಗೆ ಹೆಚ್ಚಿಸಲು ಅವಕಾಶ ನೀಡಲಾಗಿದೆ. ಅಲ್ಲದೇ ಸಾಲ ಸೌಲಭ್ಯ ಹೆಚ್ಚು ಮಂದಿಗೆ ಲಭ್ಯವಾಗುವಂತೆ ಮಾಡಲು ಬೀದಿಬದಿ ವ್ಯಾಪಾರಿಗಳು ಹೆಚ್ಚು ಇರುವ ಮಾರುಕಟ್ಟೆ ಪ್ರದೇಶದಲ್ಲಿ ಮೊಬೈಲ್ ಘಟಕ ಸ್ಥಾಪನೆ ಮಾಡಲು ನಿರ್ಧಾರಿಸಿದೆ. ಉಳಿದಂತೆ ಜಿಲ್ಲಾಮಟ್ಟದ ಸಮಿತಿ ಸಭೆ ಸೇರಿ ನಗರ ಪ್ರದೇಶಕ್ಕೆ ಒಂದು ಬ್ಯಾಂಕ್ ರಚನೆ ಹಾಗೂ ಈ ಬ್ಯಾಂಕ್‍ನವರಿಗೆ ಬೀದಿಬದಿ ವ್ಯಾಪಾರಿಗಳ ಪಟ್ಟಿ ಸಿದ್ಧಪಡಿಸುವ ಹೊಣೆ ನೀಡಲಾಗುತ್ತದೆ. ಸಾಲ ವಾಪಸ್ ಸಂಗ್ರಹಿಸಲು ಪಿಗ್ಮಿ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಮಾಡಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿ ಗಲಾಟೆ ಮಾಡೋದು ಸಹಜ, ಟಿಪ್ಪು ಜಯಂತಿ ಮಾಡೇ ಮಾಡ್ತೀವಿ : ಡಿಸಿಎಂ ಪರಮೇಶ್ವರ್

    ಬಿಜೆಪಿ ಗಲಾಟೆ ಮಾಡೋದು ಸಹಜ, ಟಿಪ್ಪು ಜಯಂತಿ ಮಾಡೇ ಮಾಡ್ತೀವಿ : ಡಿಸಿಎಂ ಪರಮೇಶ್ವರ್

    ಬೆಂಗಳೂರು: ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಸಜ್ಜಾಗುತ್ತಿದೆ. ಜನರಾಗಲೀ, ಜನಪ್ರತಿನಿಧಿಗಳಾಗಲೀ ಯಾರಾದರು ಅಡ್ಡ ಪಡಿಸಿದರೆ ಕಾನೂನು ಕ್ರಮ ಕೈಗೊಳ್ಳಲು ಸಿದ್ಧರಾಗಿದ್ದೇವೆ ಎಂದು ಗೃಹ ಸಚಿವ, ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

    ಈ ಕುರಿತು ನಗರದಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ್ ಅವರು, ಟಿಪ್ಪು ಜಯಂತಿ ಭದ್ರತೆ ಕುರಿತು ಚರ್ಚೆ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆಯಲಾಗಿದೆ. ಬಿಜೆಪಿ ಅವರು ವಿರೋಧ ಮಾಡುವುದು ಅವರಿಗೆ ಮಾಮೂಲಿಯಾಗಿದೆ. ಬಿಜೆಪಿ 2019 ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಆಕ್ಷೇಪ ವ್ಯಕ್ತಪಡಿಸಿದೆ. ಜಯಂತಿ ಮಾಡಲು ಎಂದಿನಂತೆ ಗುಪ್ತಚರ ಮಾಹಿತಿ ಆಧರಿಸಿ ಹೆಚ್ಚಿನ ಭದ್ರತೆ ಬೇಕಾದ ಕಡೆ ಪೊಲೀಸ್ ನಿಯೋಜಿಸಿ ಶಾಂತಿಯುತವಾಗಿ ಟಿಪ್ಪು ಜಯಂತಿ ಆಚರಿಸಲಾಗುವುದು ಎಂದರು.

    ಪ್ರೋಟೋಕಾಲ್ ಇದಂತೆ ಮಾಡುತ್ತೇವೆ: ಇದೇ ವೇಳೆ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಅನಂತಕುಮಾರ್ ಹೆಗಡೆ ಅವರು ಹೆಸರು ಬೇಡ ಎಂದು ಮನವಿ ಮಾಡಿದ್ದರೆ ಎಂಬ ಪ್ರಶ್ನೆಗೆ ಉತ್ತರಿಸಿ ಪ್ರೋಟೋಕಾಲ್ ಇದಂತೆ ಮಾಡುತ್ತೇವೆ ಎಂದರು.

    ಶೀಘ್ರ ಸಂಪುಟ ವಿಸ್ತರಣೆ: ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮಾಡುವುದು ಖಚಿತವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಸಂಪುಟದ 6 ಸಚಿವ ಸ್ಥಾನ ತುಂಬುವ ಕೆಲಸ ಮಾಡುತ್ತೇವೆ. ಈ ಕುರಿತು ಸಮನ್ವಯ ಸಮಿತಿ ಸಭೆ ಕರೆದು ತೀರ್ಮಾನ ಮಾಡಿ, ಇದರೊಂದಿಗೆ ನಿಗಮ ಮಂಡಳಿ ನೇಮಕವೂ ನಡೆಯಲಿದೆ ಎಂದು ಖಚಿತ ಪಡಿಸಿದರು.

    ಸಮ್ಮಿಶ್ರ ಸರ್ಕಾರದ ರಚನೆ ಆದಾಗಿನಿಂದಲೂ ಸಚಿವ ಸಂಪುಟ ವಿಸ್ತರಣೆಗೆ ಅಡೆತಡೆ ಎದುರಾಗುತ್ತಿದ್ದು, ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಯ್ತು ಎನ್ನುವಾಗಲೇ ಉಪ ಚುನಾವಣೆ ಘೋಷಣೆ ಆಯಿತು. ಆದರೆ ಇದೀಗ ಉಪ ಚುನಾವಣೆ ಮತದಾನ ಮುಗಿದಿದ್ದು, ಉಪ ಚುನಾವಣೆ ಫಲಿತಾಂಶದ ಬಳಿಕ ಸಂಪುಟ ವಿಸ್ತರಣೆಯಾಗಲಿದೆ ಎಂಬುವುದು ಖಚಿತವಾಗಿದೆ.

    ನಮ್ಮದೇ ಗೆಲುವು: ಲೋಕಸಭಾ ಉಪಚುನಾವಣೆಯಲ್ಲಿ 5 ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳು ವಿಜಯಗಳಿಸಲಿದ್ದಾರೆ. ರಾಮನಗರ ಬಿಜೆಪಿ ಅಭ್ಯರ್ಥಿಗೆ ಹಣದ ಆಮಿಷ ತೋರಿಲ್ಲ ಎಂಬ ವಿಚಾರವಾಗಿ ಉತ್ತರಿಸಿದ ಅವರು, ಚಾಮುಂಡೇಶ್ವರಿ ಮೇಲೆ ಅಣೆ ಮಾಡಿ ಎಂಬುವುದು ಅವರ ಸಂಸ್ಕೃತಿ. ಚಂದ್ರಶೇಖರ್ ಮೂಲತಃ ಕಾಂಗ್ರೆಸ್ ನವರು ಹಾಗಾಗಿ ವಾಪಸ್ ಆಗಿದ್ದಾರೆ. ಇದಕ್ಕೆ ಹಣದ ಆಮಿಷದ ಬಣ್ಣ ಬೇಡ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟಿಪ್ಪು ಜಯಂತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಜಯಮಾಲಾ

    ಟಿಪ್ಪು ಜಯಂತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಜಯಮಾಲಾ

    ಮಡಿಕೇರಿ: ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ಟಿಪ್ಪು ಜಯಂತಿಯನ್ನು ಆಚರಿಸಲು ಸಮ್ಮಿಶ್ರ ಸರ್ಕಾರ ಮುಂದಾಗಿದೆ.

    ಸರ್ಕಾರದ ಸೂಚನೆ ಮೇರೆಗೆ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಸುವ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚರ್ಚೆ ನಡೆಸಿದೆ. ಜಯಂತಿ ಆಚರಣೆ ಸಂಬಂಧಪಟ್ಟಂತೆ ಸಿಎಂ ಸೂಚನೆಯ ಮೇರೆಗೆ ಸಭೆ ಕರೆಯಲಾಗಿದೆ ಎಂದು ಸಚಿವೆ ಜಯಮಾಲಾ ಸ್ಪಷ್ಟಪಡಿಸಿದ್ದಾರೆ.

    ಸಭೆ ಬಳಿಕ ಮಾತನಾಡಿದ ಸಚಿವೆ ಜಯಮಾಲಾ ಅವರು, ಸದ್ಯ ವಿರೋಧ ಪಕ್ಷದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರು ಟಿಪ್ಪು ಜಯಂತಿ ಆಚರಣೆ ಮಾಡಿದ ಫೋಟೋಗಳು ಇದೆ. ಅವರೇ ಆಚರಣೆ ಮಾಡಿದ್ದ ಜಯಂತಿಗೆ ಅವರೇ ಏಕೆ ವಿರೋಧ ವ್ಯಕ್ತಪಡಿಸುತ್ತಾರೆ. ಸರ್ಕಾರದಲ್ಲಿ ಈ ಕುರಿತು ನಿಯಮ ಜಾರಿ ಮಾಡಲಾಗಿದೆ. ಅದ್ದರಿಂದ ಜಯಂತಿ ಆಚರಣೆ ನಡೆಯುತ್ತದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ವಿರೋಧಿ ಚಟುವಟಿಕೆ ನಡೆಸಿದರೆ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಆದರೆ ಜನರ ರಕ್ಷಣೆ ಅವರ ಕರ್ತವ್ಯವೂ ಆಗಿದೆ. ಇದಕ್ಕೆ ಏನೇ ಆದರೂ ಅವರೇ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳಿದರು.

    ನಂ.10ರ ಆಚರಣೆಗೆ ಸಿದ್ಧತೆ ನಡೆಸಲು ಅಧಿಕೃತವಾಗಿ ಸಭೆ ನಡೆಸುವ ಮೂಲಕ ಖಚಿತ ಮಾಹಿತಿ ನೀಡಿದೆ. ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಆಚರಣೆ ಮಾಡುವ ಕುರಿತು ಸಿದ್ಧತೆ ನಡೆಸಲಾಗಿದೆ. ಸಭೆಯಲ್ಲಿ ಸಚಿವೆ ಜಯಮಾಲಾ ಅವರೊಂದಿಗೆ ಸಚಿವ ಜಮೀರ್ ಅಹ್ಮದ್ ಭಾವಹಿಸಿದ್ದರು. ಇದಕ್ಕೆ ಸಮ್ಮಿಶ್ರ ಸರ್ಕಾರ ಬೆಂಬಲವೂ ಇದೆ ಎಂಬ ಸೂಚನೆಯನ್ನು ಈ ಸಭೆಯ ಮೂಲಕ ನೀಡಲಾಗಿದೆ. ಅಲ್ಲದೇ ಕಳೆದ 2 ದಿನಗಳ ಟಿಪ್ಪು ಜಯಂತಿ ಆಚರಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು, ಈ ಹಿಂದಿನ ಸರ್ಕಾರ ಯಾವ ಯೋಜನೆಗಳನ್ನು ಜಾರಿಗೆ ತಂದಿದೆ ಅದೆಲ್ಲವನ್ನು ಮುಂದುವರಿಸಲಾಗುತ್ತದೆ ಎಂದು ತಿಳಿಸಿದ್ದರು.

    ಕನ್ನಡ ವಿರೋಧಿ ಟಿಪ್ಪು: ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಸಿಟಿ ರವಿ ಅವರು, ಟಿಪ್ಪು ಕನ್ನಡ ವಿರೋಧಿ ಆಗಿದ್ದು. ಅಂತಹ ಟಿಪ್ಪು ವಿರೋಧಿ ಮಾಡುವುದಕ್ಕೆ ನಮ್ಮ ವಿರೋಧ ಇದೆ. ಒಂದೊಮ್ಮೆ ಇಂತಹ ಪ್ರಯತ್ನ ಮುಂದುವರಿಸಿದರೆ ಅವರ ರಕ್ತದ ಗುಂಪು ಯಾವುದು ಎಂದು ಪ್ರಶ್ನೆ ಮಾಡಬೇಕಾಗುತ್ತದೆ. ಸಂತ ಶಿಶುನಾಳ ಶರೀಫರ ಜಯಂತಿ ಆಚರಣೆ ಮಾಡಿ ಎಂದು ಸಲಹೆ ನೀಡಿದರು.

    ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿ, ಜಯಂತಿ ಆಚರಣೆಗೆ ನಮ್ಮ ವಿರೋಧ ಇದೆ. ಕಳೆದ ಬಾರಿ ಸರ್ಕಾರದ ಭಂಡತನದಿಂದ ಒಂದು ಸಾವು ಸಂಭವಿಸಿದೆ. ಅದ್ದರಿಂದ ಮೈಸೂರು ದಿವಾನ್ ಅಗಿದ್ದ ಸರ್. ಮಿರ್ಜಾ ಇಸ್ಮಾಯಿಲ್ ಅವರ ದಿನಾಚರಣೆ ಆಚರಣೆ ಮಾಡಲಿ. ನಾವು ಬೆಂಬಲ ನೀಡುತ್ತೇವೆ. ಅದ್ದರಿಂದ ಇತಿಹಾಸಕ್ಕೆ ಅಪಚಾರ ಮಾಡುವುದು ಬೇಡ. ಇದರ ವಿರುದ್ಧ ನ.5ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದರು.

    ಮಡಿಕೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಅಭಿಮನ್ಯು ಕುಮಾರ್ ಸಿಎಂ ಅವರಿಗೆ ಆಚರಣೆ ಮಾಡದಂತೆ ಆಗ್ರಹಿಸಿದ್ದಾರೆ. ಈ ಹಿಂದೆ ಒಂದು ಕಡೆ ರಾಜ್ಯದಲ್ಲಿ ಟಿಪ್ಪು ಜಯಂತಿಯನ್ನು ಜಾರಿಗೆ ತಂದು ಗಲಭೆಗೆ ಕಾರಣವಾಗಿದ್ದ ಕಾಂಗ್ರೆಸ್‍ಗೆ ಇದೆಲ್ಲಾ ಬೇಕಿತ್ತಾ ಎಂದು ಕುಮಾರಸ್ವಾಮಿ ಅವರು ಅಂದು ಹೇಳಿದ್ದರು. ಅಲ್ಲದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿಯನ್ನು ಆಚರಿಸುವುದಿಲ್ಲ ಎಂದು ಹೇಳಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ, ಜಯಂತಿಯನ್ನು ನಿಷೇಧಿಸಲಿ ಎಂದು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗೋಕರ್ಣ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಲು ಸರ್ಕಾರ ಆದೇಶ

    ಗೋಕರ್ಣ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಲು ಸರ್ಕಾರ ಆದೇಶ

    ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಆಡಳಿತವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಮಹಾಬಲೇಶ್ವರ ದೇವಸ್ಥಾನದ ಆಡಳಿವನ್ನು ಮುಂದಿನ ಸೋಮವಾರದ ಒಳಗಾಗಿ ರಾಮಚಂದ್ರಪುರ ಮಠಕ್ಕೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಸೂಚನೆ ನೀಡಿತ್ತು. ಹೀಗಾಗಿ ರಾಜ್ಯ ಸರ್ಕಾವು ಮಹಾಬಲೇಶ್ವರ ದೇವಸ್ಥಾನದ ಚರ-ಸ್ಥಿರ ಆಸ್ತಿ, ದಾಖಲೆ ಹಾಗೂ ಆಭರಣಗಳು ರಾಮಚಂದ್ರಪುರ ಮಠಕ್ಕೆ ವರ್ಗಾವಣೆಗೆ ಅಧಿಕೃತ ಆದೇಶ ನೀಡಿದೆ.

    ಸುಪ್ರೀಂಕೋರ್ಟ್ ಹೇಳಿದ್ದೇನು?:
    ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ಎ.ಎಂ.ಕನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರಿದ್ದ ನ್ಯಾಯ ಪೀಠವು, ಕೋರ್ಟ್‍ನ ಈ ಹಿಂದಿನ ಆದೇಶಗಳಲ್ಲಿ ಯಾವುದೇ ಗೊಂದಲಗಳಿಲ್ಲ. ದೇವಸ್ಥಾನದ ಆಡಳಿತ ನಿರ್ವಹಣೆ ರಾಮಚಂದ್ರಾಪುರ ಮಠಕ್ಕೆ ಸೇರಬೇಕು ಎಂದು ಸ್ಪಷ್ಟವಾಗಿಯೇ ನಾವು ಹೇಳಿದ್ದೇವೆ. ಈಗಲೂ ಅದನ್ನೇ ಹೇಳುತ್ತಿದ್ದೇವೆ. ಸೋಮವಾರದೊಳಗೆ ಮಠಕ್ಕೆ ದೇವಸ್ಥಾನದ ಆಡಳಿತ ವಹಿಸಿಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.

    ಏನಿದು ಪ್ರಕರಣ?
    2008ರ ಆಗಸ್ಟ್ 12ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಗೋಕರ್ಣದ ಐತಿಹಾಸಿಕ ಗೋಕರ್ಣ ದೇವಾಲಯವನ್ನು ರಾಮಚಂದ್ರಾಪುರ ಮಠದ ಸುಪರ್ದಿಗೆ ನೀಡಿತ್ತು. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬಾಲಚಂದರ್ ದೀಕ್ಷಿತ್ ಮತ್ತು ನರಹರಿ ಕೃಷ್ಣ ಹೆಗ್ಡೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕಳೆದ 10 ವರ್ಷಗಳಿಂದ ಗೋಕರ್ಣ ದೇಗುಲದ ಆಡಳಿತ ನಡೆಸುತ್ತಿದ್ದ ರಾಮಚಂದ್ರಾಪುರ ಮಠಕ್ಕೆ ಹೈಕೋರ್ಟ್ ಬ್ರೇಕ್ ಹಾಕಿ, ಸೆಪ್ಟೆಂಬರ್ 10ರಿಂದ ಉಸ್ತುವಾರಿ ಸಮಿತಿ ಅಸ್ಥಿತ್ವಕ್ಕೆ ಬರಬೇಕು ಎಂದು ಆದೇಶ ಹೊರಡಿಸಿತ್ತು.

    ಹೈಕೋರ್ಟ್ ಆದೇಶ ಪ್ರಶ್ನಿಸಿ ಮಠದ ಪರವಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತ್ತು. ಕಳೆದ ಸೆಪ್ಟೆಂಬರ್ 7 ರಂದು ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಆಗಸ್ಟ್ 10 ರಂದು ರಾಜ್ಯ ಹೈಕೋರ್ಟ್ ಹೊರಡಿಸಿದ್ದ ಅಂತಿಮ ಆದೇಶದ ನಂತರ ತಾನು ಹೊರಡಿಸಿರುವ ಮಧ್ಯಾಂತರ ತೀರ್ಪು ಮುಂದುವರಿಯಲಿದೆ ಎಂದು ಹೇಳಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಲ್ಲಿ ನೋಡಿದ್ರೂ ಬಿಎಸ್‍ವೈ ಆಸ್ತಿ, ಅಡಿಕೆಗೆ ನೀರು ಕಟ್ಟಿ ಬೆಳೆದು ಸಂಪಾದಿಸಿದ್ರಾ: ಎಚ್‍ಡಿಕೆ ಪ್ರಶ್ನೆ

    ಎಲ್ಲಿ ನೋಡಿದ್ರೂ ಬಿಎಸ್‍ವೈ ಆಸ್ತಿ, ಅಡಿಕೆಗೆ ನೀರು ಕಟ್ಟಿ ಬೆಳೆದು ಸಂಪಾದಿಸಿದ್ರಾ: ಎಚ್‍ಡಿಕೆ ಪ್ರಶ್ನೆ

    ಶಿವಮೊಗ್ಗ: ನಗರದಲ್ಲಿ ಎಲ್ಲಿ ನೋಡಿದರೂ ಮಾಜಿ ಸಿಎಂ ಯಡಿಯೂರಪ್ಪ ಅವರ ಕಟ್ಟಡಗಳೇ ಕಾಣಿಸುತ್ತವೆ. ಇಷ್ಟೆಲ್ಲಾ ಆಸ್ತಿ ಮಾಡಿದ್ದಾರಲ್ಲ, ಅವರೇನು ಅಡಿಕೆಗೆ ನೀರು ಕಟ್ಟಿ ಬೆಳೆದು ಆಸ್ತಿ ಮಾಡಿದ್ರಾ ಎಂದು ಸಿಎಂ ಎಚ್‍ಡಿಕೆ ಪ್ರಶ್ನಿಸಿ ಕಿಡಿಕಾರಿದ್ದಾರೆ.

    ಉಪಚುನಾವಣೆಯಲ್ಲಿ ಮಧು ಬಂಗಾರಪ್ಪ ಪರ ಮತಯಾಚನೆ ಮಾಡುತ್ತಿರುವ ಸಿಎಂ ಎಚ್‍ಡಿಕೆ ಇಂದು ಸೊರಬ ನಗರದಲ್ಲಿ ನಡೆದ ಬಹಿರಂಗ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ನಾನು ಆಸ್ತಿ ಮಾಡಲು ಕಾಂಗ್ರೆಸ್ ಬೆಂಬಲ ಪಡೆದು ಸಿಎಂ ಆಗಿಲ್ಲ. ನಾನು ನಿಮಗೋಸ್ಕರ ಬದುಕಿದ್ದೇನೆ ಎಂದು ಹೇಳಿದ ಎಚ್‍ಡಿಕೆ, ಬಿಎಸ್‍ವೈ ವಿರುದ್ಧ ವಾಗ್ದಾಳಿ ನಡೆಸಿದರು.

    ಎಚ್‍ಡಿಕೆ ಸವಾಲು: ನ.6 ರಂದು ಕುಮಾರಸ್ವಾಮಿ ಮನೆಗೆ ಹೋಗುತ್ತಾರೆ. ಸರ್ಕಾರ ಉರುಳುತ್ತದೆ ಎಂದು ಬಿಎಸ್‍ವೈ ಹೇಳಿದ್ದಾರೆ. ಆದರೆ ಅವರ ಕೈಯಿಂದ ನನ್ನನ್ನು ಮನೆಗೆ ಕಳುಹಿಸಲು ಆಗಲ್ಲ. ಅದು ದೇವರ ಕೈಯಿಂದ ಮಾತ್ರ ಆಗುತ್ತದೆ. ಸರ್ಕಾರ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿ ಮುಖಂಡರು ವರ್ಗಾವಣೆ ದಂಧೆ ಬಗ್ಗೆ ಸಾಕ್ಷಿ ನೀಡಿ ಸಾಬೀತು ಪಡಿಸಿದರೆ ನಾನು ಒಂದು ಕ್ಷಣ ಕೂಡ ಸಿಎಂ ಸ್ಥಾನದಲ್ಲಿ ಇರುವುದಿಲ್ಲ ಎಂದರು. ಅಲ್ಲದೇ ಒಂದೇ ವೇದಿಕೆಯಲ್ಲಿ ವರ್ಗಾವಣೆ ದಂಧೆ ಬಗ್ಗೆ ಬಹಿರಂಗ ಚರ್ಚೆ ನಡೆಸಲು ಆಗಮಿಸುವಂತೆ ಬಿಎಸ್‍ವೈಗೆ ಸವಾಲು ಎಸೆದರು.

    ಮಧು ನನ್ನ ಸಹೋದರ: ಬಂಗಾರಪ್ಪ ಅವರು ನನ್ನನ್ನು ಸ್ವಂತ ಮಗನಂತೆ ಸಿಎಂ ಮಾಡಲು ಕನಸು ಕಂಡಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಮಧು ಸೋತಿದ್ದು ನನಗೆ ನೋವು ತಂದಿದೆ. ಮಧು ಏನು ತಪ್ಪು ಮಾಡಿದ್ದ. ರಕ್ತ ಹಂಚಿಕೊಂಡು ಹುಟ್ಟದಿದ್ದರೂ ಮಧು ಬಂಗಾರಪ್ಪ ನನ್ನ ಸಹೋದರ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇವತ್ತೇ ನಾರಿಯರಿಗೆ ಮಣಿಕಂಠನ ದರ್ಶನ ಸಿಗುತ್ತಾ – ಅಯ್ಯಪ್ಪನ ಊರಲ್ಲಿ ಗಲಾಟೆ ಜೋರು

    ಇವತ್ತೇ ನಾರಿಯರಿಗೆ ಮಣಿಕಂಠನ ದರ್ಶನ ಸಿಗುತ್ತಾ – ಅಯ್ಯಪ್ಪನ ಊರಲ್ಲಿ ಗಲಾಟೆ ಜೋರು

    ತಿರುವನಂತಪುರ: ಇಂದು ಸಂಜೆ 5 ಗಂಟೆ ವೇಳೆಗೆ ದೇವಾಲಯದ ಬಾಗಿಲು ತೆರೆಯಲಿರುವ ಹಿನ್ನೆಲೆಯಲ್ಲಿ ಕೇರಳಾದ್ಯಂತ ಅಯ್ಯಪ್ಪಸ್ವಾಮಿ ಉಳಿಸಿ ಆಂದೋಲನ ಜೋರಾಗಿದೆ.

    ಸುಪ್ರೀಂ ಕೋರ್ಟ್ ಪ್ರವೇಶಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಯಾವೊಬ್ಬ ಮಹಿಳೆಯರು ದೇವಾಲಯಕ್ಕೆ ತೆರಳದಂತೆ ಭಕ್ತರು ಹಾಗೂ ಮಹಿಳಾ ಹೋರಾಟಗಾರರು ಸ್ಥಳದಲ್ಲಿ ಅಡ್ಡಗಟ್ಟಿ ಪ್ರತಿ ವಾಹನವನ್ನು ಪರಿಶೀಲನೆ ನಡೆಸಿ ಮುಂದಕ್ಕೆ ಬಿಡುತ್ತಿದ್ದಾರೆ. ದೇವಾಲಯದ ಆಡಳಿತ ಮಂಡಳಿಕಾರ್ಯಕರ್ತರು, ಭಕ್ತರು ದೇವಾಲಯದ ಬೆಟ್ಟದ ಕೆಳಭಾಗದ ಅಂದರೆ ದೇವಾಲಯದಿಂದ 20 ಕಿಮೀ ದೂರದ ನಿಳಕ್ಕಲ್ ಬಳಿಯೇ ವಾಹನಗಳನ್ನು ತಡೆಯುತ್ತಿದ್ದಾರೆ.

    ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿರುವ ಭಕ್ತರು ಸ್ಥಳದಲ್ಲಿ ಭದ್ರಕೋಟೆ ನಿರ್ಮಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿರುವವರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಮಂಗಳವಾರ ತಿರುವಾಂಕೂರು ಆಡಳಿತ ಮಂಡಳಿ, ಪಂದಳಂ ರಾಜಮನೆತನ ಹಾಗೂ ಸರ್ಕಾರ ನಡುವೆ ಏರ್ಪಡಿಸಿದ್ದ ಸಂಧಾನ ಸಭೆಯೂ ವಿಫಲವಾಗಿದೆ. ಪೊಲೀಸರು ನಡೆಸಬೇಕಾದ ಕಾರ್ಯವನ್ನು ಕಾರ್ಯಕರ್ತರು ಕೈಗೆತ್ತುಕೊಂಡಿದ್ದು ದೇವಾಲಯ ಪ್ರದೇಶದಲ್ಲಿ ಹೈ ಆಲರ್ಟ್ ಘೋಷಣೆ ಮಾಡಲಾಗಿದೆ.

    ಈ ನಡುವೆ ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಪತ್ತನಂತಿಟ್ಟಂ ಕ್ಷೇತ್ರದ ಸಂಸದ ಆಂಟೋ ಆ್ಯಂಟನಿ ಅವರು, ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿ ಕೋರ್ಟ್ ತೀರ್ಪು ಜಾರಿಗೆ ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ. ದೇವಾಲಯದ ಪ್ರದೇಶದಲ್ಲಿ ಶಾಂತಿ ಕಾಪಾಡಲಿ ಸರ್ಕಾರ ಕೂಡ ಕ್ರಮಕೈಗೊಂಡಿದ್ದು ಜಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನೇಮಕ ಮಾಡಿ ಪ್ರದೇಶವನ್ನು ವಶಕ್ಕೆ ಪಡೆದಿದೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ವಿಚಾರವಾದಿ ಪ್ರೋ ಭಗವಾನ್, ದೇವಾಲಯ ಪ್ರವೇಶಕ್ಕೆ ತಡೆ ನೀಡಿರುವುದು ಅವೈಜ್ಞಾನಿಕ ನಡೆ. ಮಹಿಳೆಯರಿಗೆ ತಡೆ ನೀಡಿರುವುದು ಕಂದಚಾರ ಆಚರಣೆ ಪ್ರತಿರೂಪ. ಮಹಿಳೆಯಲ್ಲಿ ನಡೆಯುವ ಕ್ರೀಯೆ ಪ್ರಕೃತಿಯ ವರ. ಆದರೆ ಈ ಕಾರಣದಿಂದ ಪ್ರವೇಶ ನಿರಾಕರಿಸಬಾರದು. ಮಹಿಳೆಯರೇ ಅಲ್ಲಿ ಪ್ರತಿಭಟನೆ ನಡೆಸುತ್ತಿರುವುದು ವಿಷಾದನೀಯ. ಆಡಳಿತ ಮಂಡಳಿ ಹಾಗೂ ರಾಜಮನೆತನ ನಡೆ ಕೂಡ ಅವರ ಮೌಢ್ಯವನ್ನು ಬೆಳೆಸುತ್ತಿದೆ. ಆದರೆ ಕೇರಳ ಸರ್ಕಾರ ಸುಪ್ರೀಂ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸದೇ ಇರುವುದು ಉತ್ತಮ ನಡೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿರಾಕರಣೆ ಮಾಡಿರುವುದು ವೈಜ್ಞಾನಿಕ ಕಾರಣಕ್ಕೂ ಆಗಿರಬಹುದು, ಏಕೆಂದರೆ ದೇವದಾಸಿ ಪದ್ಧತಿ ಜಾರಿ ಇದ್ದ ವೇಳೆ ಅಂತಹ ಘಟನೆಗಳು ಅಲ್ಲಿ ನಡೆಯಬಾರದು ಎಂಬ ಕಾರಣದಿಂದಲೂ ನಿಷೇಧ ಮಾಡಿರಬಹುದು. ಆದರೆ ಇಂದು ಸಂವಿಧಾನ ಎಲ್ಲಾ ಜನರಿಗೂ ಸಮಾನತೆ ಹಕ್ಕು ನೀಡಿದೆ. ಅದ್ದರಿಂದ ಮಹಿಳೆಯ ಪ್ರವೇಶಕ್ಕೆ ತಡೆ ನೀಡಬಾರದು ಎಂದು ತಿಳಿಸಿದರು.

    ತುಲಾ ಮಾಸದ ಆರಂಭದ ಕಾರಣ ಇಂದಿನಿಂದ 6 ದಿನಗಳ ಕಾಲ ದೇವಾಲಯ ತೆರೆಯಲಾಗುತ್ತದೆ, 6 ದಿನಗಳ ಕಾಲ ನಡೆಯುವ ವಿಶೇಷ ಪೂಜೆಯ ಬಳಿಕ ಮತ್ತೆ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಪತ್ರಕರ್ತೆಯೊಬ್ಬರು ಕಾರಿನಲ್ಲಿ ತೆರಳಲು ಯತ್ನಿಸಿದ ವೇಳೆ ಮಹಿಳಾ ಪ್ರತಿಭಟನಕಾರರೇ ಕಾರಿನ ಗಾಜನ್ನು ಧ್ವಂಸಗೊಳಿಸಿದ್ದಾರೆ. ಈ ವೇಳೆ ಕೆಲ ಕಾಲ ಸ್ಥಳದಲ್ಲಿ ಅಂತಕದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೇ ಮಹಿಳೆಯರು ದೇವಾಲಯ ಪ್ರವೇಶ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಶಿವಸೇನೆಯ ಮಹಿಳಾ ಕಾರ್ಯಕರ್ತೆಯರು ಬೆದರಿಕೆ ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಧಾನಸೌಧದಲ್ಲಿ ತುರ್ತುಪರಿಸ್ಥಿತಿ – ಮೂರನೇ ಮಹಡಿಯಿಂದ ಮಾಧ್ಯಮಗಳು ದೂರ ದೂರ!

    ವಿಧಾನಸೌಧದಲ್ಲಿ ತುರ್ತುಪರಿಸ್ಥಿತಿ – ಮೂರನೇ ಮಹಡಿಯಿಂದ ಮಾಧ್ಯಮಗಳು ದೂರ ದೂರ!

    – ವರದಿ ಬೆನ್ನಲ್ಲೇ ಸಿಎಂ ಎಚ್‍ಡಿಕೆ `ಯೂ ಟರ್ನ್’

    ಬೆಂಗಳೂರು: ಸಮ್ಮಿಶ್ರ ಸರ್ಕಾರ ಮೇಲೆ ಮಾಧ್ಯಮಗಳಿಗೆ ಮುನಿಸು ಎಂದು ಹಲವು ಬಾರಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದ ಸಿಎಂ ಕುಮಾರಸ್ವಾಮಿ ಅವರು ಇಂದು ಯಾವುದೇ ಮುಂದಾಲೋಚನೆ ಇಲ್ಲದೇ ಮಾಧ್ಯಮ ಕೊಠಡಿಯನ್ನು ಬದಲಾವಣೆ ಮಾಡಲು ಯತ್ನಿಸಿ, ಬಳಿಕ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

    ವಿಧಾನಸೌಧದ ಮೂರನೇ ಮಹಡಿಗೆ ಕ್ಯಾಮೆರಾ ತರುವ ಆಗಿಲ್ಲ ಎಂದು ನಿಯಮ ಮಾಡಿ ಮಾಧ್ಯಮ ಪ್ರತಿನಿಧಿಗಳನ್ನು ದೂರ ಮಾಡಲು ಸರ್ಕಾರ ಪ್ರಯತ್ನಿಸಿತ್ತು. ಇದರಂತೆ ವಿಧಾನಸೌಧದ ನೆಲಮಹಡಿಯ ನಂ.9 ಕೊಠಡಿಯನ್ನು ಮಾಧ್ಯಮಗಳಿಗೆ ಹಂಚಿಕೆ ಮಾಡಿತ್ತು. ಈ ಕುರಿತು ವಿಧಾನಸೌಧದಿಂದ ಡಿಪಿಎಆರ್ ನಿಂದ ಅಧಿಕೃತ ಆದೇಶವೂ ಜಾರಿಯಾಗಿತ್ತು.

    ಮಾಜಿ ಸಿಎಂ ದೇವರಾಜ್ ಅರಸು ಕಾಲದಿಂದಲೂ ಮೂರನೇ ಮಹಡಿಯ ಕೊಠಡಿ ಸಂಖ್ಯೆ 333 ರಲ್ಲಿಯೇ ಮಾಧ್ಯಮಗಳಿಗೆ ಅವಕಾಶ ನೀಡಲಾಗಿದೆ. ಇಲ್ಲಿ ಸಭೆ, ಸಚಿವರ ಭೇಟಿ ಎಲ್ಲವೂ ಸುಲಭವಾಗಿ ನಡೆಯುತ್ತಿತ್ತು. ಆದರೆ ಈಗ ವಿಧಾನಸೌಧದ ನೆಲಮಹಡಿಯ ಮಹಿಳಾ ಶೌಚಾಲಯ ಪಕ್ಕದಲ್ಲಿ ಕೊಠಡಿ ಹಂಚಿಕೆ ಮಾಡಲಾಗಿತ್ತು. ಈ ಮೂಲಕ ಸಚಿವರು, ಶಾಸಕರು, ಅಧಿಕಾರಿಗಳು ಸಂಪರ್ಕಕ್ಕೆ ಸಿಗದಂತೆ ಮಾಡಲೆಂದೇ ಸರ್ಕಾರ ಈ ನಿರ್ಧಾರ ಕೈಗೊಂಡಿದ್ಯಾ ಎನ್ನುವ ಪ್ರಶ್ನೆ ಎದ್ದಿತ್ತು.

    ಸಿಎಂ ಯೂ ಟರ್ನ್: `ಮಾಧ್ಯಮಗಳಿಗೆ ವಿಧಾನಸೌಧದಲ್ಲಿ ತುರ್ತುಪರಿಸ್ಥಿತಿ’ ಎನ್ನುವ ಶೀರ್ಷಿಕೆಯೊಂದಿಗೆ ಪಬ್ಲಿಕ್ ಟಿವಿ ಈ ಕುರಿತು ವರದಿ ಮಾಡುತ್ತಿದ್ದಂತೆ ಎಚ್ಚೆತ್ತ ಸಿಎಂ ಕುಮಾರಸ್ವಾಮಿ ಅವರು ವಿಧಾನಸೌಧದ ಮೂರನೇ ಮಹಡಿಯ ಕೊಠಡಿಯನ್ನೇ ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ. ಈ ಕುರಿತು ಸಿಎಂ ತಮ್ಮ ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿ ಮಾಧ್ಯಮ ಕೊಠಡಿ ಬದಲಾವಣೆ ಮಾಡದಂತೆ ಸೂಚನೆ ನೀಡಿದ್ದಾರೆ.

    ಇದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ್ದ ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್, ಮಾಧ್ಯಮಗಳ ವಿರುದ್ಧ ಇಂತಹ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಒಂದೊಮ್ಮೆ ಇಂತಹ ಕ್ರಮ ನಡೆದಿದ್ದರೆ ತನ್ನ ಕೊಠಡಿಯನ್ನೇ ಮಾಧ್ಯಮಗಳಿಗೆ ಬಿಟ್ಟು ಕೊಡುವುದಾಗಿ ತಿಳಿಸಿದ್ದರು.

    ಮಾಧ್ಯಮ ಕೊಠಡಿ ಬದಲಾವಣೆ ಅವೈಜ್ಞಾನಿಕ:
    ಮಾಧ್ಯಮ ಕೊಠಡಿ ಬದಲಾವಣೆ ಮಾಡುವಂತೆ ಸಿಎಂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೈಗೊಂಡಿದ್ದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ ಈ ನಿರ್ಧಾರ ಸಂಪೂರ್ಣ ಆವೈಜ್ಞಾನಿಕವಾಗಿತ್ತು. ಏಕೆಂದರೆ ವಿಧಾನಸೌಧದ ಮೊದಲ ಮಹಡಿಯ ಕೊಠಡಿ ಸಂಖ್ಯೆ 9 ರಲ್ಲಿ ಸರ್ಕಾರಿ ಭರವಸೆಗಳ ಸಮಿತಿ ಮತ್ತು ಪತ್ರಾಗಾರ ಇಲಾಖೆಯ ಸೂಕ್ಷ್ಮ ಚಿತ್ರ ಘಟಕ ಕಾರ್ಯನಿರ್ವಹಿಸುತ್ತಿದೆ. ಪತ್ರಾಗಾರ ಇಲಾಖೆಯ ಸೂಕ್ಷ್ಮ ಚಿತ್ರ ಘಟಕದಲ್ಲಿ ಅಳವಡಿಸಿರುವ ಮೈಕ್ರೋ ಫಿಲಂ ರೀಡರ್ ಯಂತ್ರದ ಬೆಲೆಯೇ ಮೂರು ಕೋಟಿ ರೂಪಾಯಿ. ಇದನ್ನು ಬದಲಾವಣೆ ಮಾಡಿದರೆ ಮತ್ತೆ ಕಾರ್ಯನಿರ್ವಹಿಸುವುದು ಅನುಮಾನ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

    ಉಳಿದಂತೆ ನಂ.9 ಕೊಠಡಿ ಸಂಖ್ಯೆಯ ಪಕ್ಕದಲ್ಲೇ ಮಹಿಳಾ ಶೌಚಾಲಯವಿದ್ದು, ಈ ಕೊಠಡಿಗೆ ಸರಿಯಾಗಿ ಬಾಗಿಲು ಇಲ್ಲ. ಹಾಗಾಗಿ ಮಾಧ್ಯಮದವರಿಗೆ ಈ ಕೊಠಡಿ ನೀಡಿದರೆ ಇಲ್ಲಿ ತುಂಬಾ ಜನ ಬರುವುದರಿಂದ ಶೌಚಾಲಯಕ್ಕೆ ತೆರಳಲು ನಮಗೆ ತೊಂದರೆ ಆಗುತ್ತದೆ ಎಂದು ಮಹಿಳಾ ಸಿಬ್ಬಂದಿ ಹೇಳಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾವೇನು ರಾಜಕೀಯ ಸನ್ಯಾಸಿಗಳಾ? – ಒಂದೆರಡು ತಿಂಗಳಲ್ಲಿ ಸರ್ಕಾರ ರಚನೆ ಶತಸಿದ್ಧ: ಆರ್ ಅಶೋಕ್ ಘೋಷಣೆ

    ನಾವೇನು ರಾಜಕೀಯ ಸನ್ಯಾಸಿಗಳಾ? – ಒಂದೆರಡು ತಿಂಗಳಲ್ಲಿ ಸರ್ಕಾರ ರಚನೆ ಶತಸಿದ್ಧ: ಆರ್ ಅಶೋಕ್ ಘೋಷಣೆ

    ಬೆಂಗಳೂರು: 37 ಶಾಸಕರನ್ನು ಹೊಂದಿರುವವರು ಸಿಎಂ ಆಗಬಹುದು, 104 ಶಾಸಕರನ್ನು ಹೊಂದಿರುವ ಬಿಎಸ್‍ವೈ ಏಕೆ ಸಿಎಂ ಆಗಬಾರದು ಎಂದು ಪ್ರಶ್ನಿಸಿರುವ ಮಾಜಿ ಡಿಸಿಎಂ ಆರ್ ಆಶೋಕ್ ಆಪರೇಷನ್ ಕಮಲ ಮುಂದುವರೆದಿದೆ ಎಂದು ಹೇಳಿದ್ದಾರೆ.

    ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಯಾವ ಮನುಷ್ಯನಿಗೆ ಕನಸು ಇರುತ್ತೆ, ಅವನು ಗುರಿಯನ್ನು ಸಾಧಿಸುವುದು ಮುಖ್ಯ. ಅಂತೇ ನಾವು ಸರ್ಕಾರ ರಚನೆ ಮಾಡುವುದು ಶತಸಿದ್ಧ. 104 ಸ್ಥಾನಗಳನ್ನ ನೀಡುವ ಮೂಲಕ ಜನರು ನಮಗೆ ಬೆಂಬಲ ನೀಡಿದ್ದಾರೆ. 38 ಸ್ಥಾನ ಬಂದಿರುವ ಜೆಡಿಎಸ್ ಪಕ್ಷ ಎಚ್‍ಡಿ ಕುಮಾರಸ್ವಾಮಿ ಅವರು ಸಿಎಂ ಆದರೆ 104 ಸ್ಥಾನ ಪಡೆದಿರುವ ಬಿಎಸ್‍ವೈ ಏಕೆ ಸಿಎಂ ಆಗಬಾರದು. ನಾವೇನು ರಾಜಕೀಯ ಸನ್ಯಾಸಿಗಳಾ? ಪ್ರತಿಯೊಂದು ಎಂಎಲ್‍ಎ ಸ್ಥಾನ ಮುಖ್ಯ. ಅದ್ದರಿಂದಲೇ ನಾನು ಚುನಾವಣೆ ಸ್ಪರ್ಧೆ ಮಾಡಿಲ್ಲ ಎಂದು ಹೇಳಿದರು.

    ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಹೊಂದಿರುವ ಶಾಸಕರ ಸಂಪರ್ಕದಲ್ಲಿ ನಿರಂತರವಾಗಿದ್ದು, ಮತ್ತೆ ಬಿಎಸ್ ವೈ ಅವರು ಪ್ರಮಾಣ ವಚನ ಸ್ವೀಕರಿಸಿ ಸಿಎಂ ಆಗ್ತಾರೆ. ಬಿಎಸ್ ವೈ ಅವರು ಕೂಡ ಈ ಕುರಿತು ಮುಂಖಡರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.

    ರಾಜ್ಯ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯ ಉಪಕದನದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವ ಬಿಜೆಪಿಗೆ ಅಪರೇಷನ್ ಕಮಲ ಬಗ್ಗೆ ಮಾತನಾಡಿದ್ದು, 2 ತಿಂಗಳ ಬಳಿಕ ಸರ್ಕಾರ ರಚನೆ ಮಾಡುವ ಚಿಂತನೆಯಲ್ಲಿದೆ. ಈಗಾಗಲೇ ಮಂಡ್ಯ ಉಪಕದನಕ್ಕೆ ಡಾ. ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೋಟಿ ಕೋಟಿ ಸಂಪತ್ತು ಪ್ರಕರಣ – ಟಿ.ಆರ್ ಸ್ವಾಮಿಗೆ ಶಾಕಿಂಗ್ ನ್ಯೂಸ್

    ಕೋಟಿ ಕೋಟಿ ಸಂಪತ್ತು ಪ್ರಕರಣ – ಟಿ.ಆರ್ ಸ್ವಾಮಿಗೆ ಶಾಕಿಂಗ್ ನ್ಯೂಸ್

    ಬೆಂಗಳೂರು: ನಗರದಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್ ಸ್ವಾಮಿಯನ್ನು ಅಮಾನತು ಮಾಡಲಾಗಿದೆ.

    ಕಳೆದ ವಾರ ಎಸಿಬಿ ತಂಡ ಕೆಐಎಡಿಬಿಯ ಚೀಫ್ ಎಂಜಿನಿಯರ್ ಟಿ.ಆರ್.ಸ್ವಾಮಿ ಹಾಗೂ ಬಿಡಿಎ ಅಧೀಕ್ಷಕ ಅಭಿಯಂತರ ಎನ್.ಜಿ.ಗೌಡಯ್ಯ ಅವರ ಇಬ್ಬರು ಅಧಿಕಾರಿಗಳ ಮನೆ, ಕಚೇರಿ, ಕುಟುಂಬಸ್ಥರ ಮನೆಗಳ ಮೇಲೆ ದಾಳಿ ಮಾಡಿತ್ತು. ಈ ವೇಳೆ ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಇದನ್ನೂ ಓದಿ: ಇಬ್ಬರು ಭ್ರಷ್ಟ ಅಧಿಕಾರಿಗಳ ಬಳಿಯಿದೆ ಕೋಟ್ಯಂತರ ಆಸ್ತಿ: ಯಾರ ಬಳಿ ಎಷ್ಟು ಆಸ್ತಿ?

    ದಾಳಿ ಮಾಡಿದ ಬಳಿಕ ಎಸಿಬಿ ಅಧಿಕಾರಿಗಳು ಮಂಗಳವಾರ ರಾಜ್ಯ ಸರ್ಕಾರಕ್ಕೆ ಪತ್ರ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಎಸಿಬಿ ಮಾಡಿದ್ದ ಶಿಫಾರಸ್ಸು ಆಧರಿಸಿ ಟಿ.ಆರ್ ಸ್ವಾಮಿಯನ್ನು ಅಮಾನತು ಮಾಡಲಾಗಿದ್ದು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತರಿಂದ ಅಮಾನತು ಆದೇಶ ಹೊರಡಿಸಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ KIADB, BDA, ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ – ಅಧಿಕಾರಿಗಳನ್ನು ನೋಡ್ತಿದ್ದಂತೇ ಕಂತೆಕಂತೆ ನೋಟುಗಳ ಬ್ಯಾಗ್ ಬಿಸಾಕಿದ್ರು!

    ಮಾಹಿತಿ ಮೆರೆಗೆ ಎಸಿಬಿ ಅಧಿಕಾರಿಗಳು ಇಬ್ಬರು ಅಧಿಕಾರಿಗಳ ಮನೆಯ ಮೇಲೆ ದಾಳಿ ಮಾಡಿದ್ದರು. ಆದರೆ ಎಸಿಬಿ ಅಧಿಕಾರಿಗಳು ರೇಡ್ ಮಾಡುವುದನ್ನು ಮೊದಲೇ ತಿಳಿದ ಟಿ.ಆರ್ ಸ್ವಾಮಿ ಬಾಗಿಲು ತೆಗೆಯದೇ ಡ್ರಾಮಾ ಮಾಡಿದ್ರು. ಆದ್ರೂ ಪಟ್ಟು ಬಿಡದ ಎಸಿಬಿ ಅಧಿಕಾರಿಗಳು ಬಲವಂತವಾಗಿ ಬಾಗಿಲು ತೆಗೆಸಿ ಪರಿಶೀಲನೆ ನಡೆಸಿದಾಗ ಕೋಟಿ ಕೋಟಿ ದುಡ್ಡು ಸಿಕ್ಕಿತ್ತು.  ಇದನ್ನೂ ಓದಿ: ಎಸಿಬಿ ದಾಳಿ ವೇಳೆ ಪಾರ್ಕಿಂಗ್ ಕಾರಿನಲ್ಲಿ ಹಣ, ಪೈಪಿನಲ್ಲಿ ಚಿನ್ನ ಪತ್ತೆ!

    ಮನೆಯಲ್ಲಿ ಏನೇನು ಸಿಕ್ಕಿದೆ?
    ಸ್ವಾಮಿ ಅವರ ಕುಟುಂಬಸ್ಥರ ಮತ್ತು ಸಂಬಂಧಿಕರ ಹೆಸರಿನಲ್ಲಿ 8 ಮನೆ, 10 ನಿವೇಶನಗಳು, ವಿವಿಧೆಡೆ 10 ಎಕರೆ ಕೃಷಿ ಜಮೀನು, 1.6 ಕೆಜಿ ಚಿನ್ನ, 3 ಕಾರು, 4.52 ಕೋಟಿ ರೂ ಪತ್ತೆಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • Exclusive: PWDಯಲ್ಲಿ ದುಡ್ಡು ಕೊಟ್ರೆ ಮಾತ್ರ ಕೆಲಸ- ಪತ್ರ ಬರೆದು ದೂರು ಕೊಟ್ಟ ಮಹಿಳಾ ಅಧಿಕಾರಿ

    Exclusive: PWDಯಲ್ಲಿ ದುಡ್ಡು ಕೊಟ್ರೆ ಮಾತ್ರ ಕೆಲಸ- ಪತ್ರ ಬರೆದು ದೂರು ಕೊಟ್ಟ ಮಹಿಳಾ ಅಧಿಕಾರಿ

    ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ ದುಡ್ಡು ನೀಡಿದರೆ ಮಾತ್ರ ಕೆಲಸ ಮಾಡಲಾಗುತ್ತಿದೆ ಎಂದು ಉಲ್ಲೇಖಿಸಿ ಐಎಎಸ್ ಅಧಿಕಾರಿಯೊಬ್ಬರು ಪಿಡಬ್ಲ್ಯುಡಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಅವರಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ಲೋಕೊಪಯೋಗಿ ಇಲಾಖೆಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಿಚ್ಚಿಟ್ಟಿದ್ದಾರೆ.

    ಐಎಎಸ್ ಅಧಿಕಾರಿ ಪಲ್ಲವಿ ಅಕುರಾತಿ ಈ ಕುರಿತು ಪತ್ರ ಬರೆದಿದ್ದು, ನಗರದಲ್ಲಿ ತಾವು ವಾಸವಿರುವ ಕೆಪಿಡಬ್ಲ್ಯುಡಿ ವಸತಿ ಗೃಹ ರಿಪೇರಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ಕುರಿತು ಪಿಡಬ್ಲ್ಯುಡಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದರೂ ಕೆಲಸವೇ ಆಗಿಲ್ಲ. ಅಲ್ಲದೇ ಅಸಿಸ್ಟೆಂಟ್ ಎಂಜಿನಿಯರ್ ಗಿರೀಶ್‍ಗೆ ಸೂಚಿಸಿದ್ದರೂ ಕೆಲಸ ಮಾಡಿಲ್ಲ. ಇಲಾಖೆಯಲ್ಲಿ ದುಡ್ಡು ಕೊಡದಿದ್ದರೆ ಇಲ್ಲಿ ಕೆಲಸವೇ ಆಗಲ್ಲ. ಹಣ ನೀಡಿದರೆ ಮಾತ್ರ ಕೆಲಸ ಆಗುತ್ತೆ ಎಂದು ಪತ್ರ ಬರೆದಿದ್ದಾರೆ.

    ತಾವು ವಾಸಿಸುವ ಜೀವನ್ ಭೀಮಾ ನಗರದಲ್ಲಿ ಕುರಿತ ಅವ್ಯವಸ್ಥೆಯ ಬಗ್ಗೆ ನಿಮ್ಮ ಗಮನಕ್ಕೆ ತಂದಿದ್ದು, ನೀವು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ನಿಮ್ಮ ಸೂಚನೆ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಇಲಾಖೆಯ ಎಇ, ಎಇಇ ಅಧಿಕಾರಿಗಳು ಬಳಿಕ ಯಾವುದೇ ಕೆಲಸ ಮಾಡದೇ ಸುಮ್ಮನಾಗಿದ್ದಾರೆ. ಈ ಕುರಿತು ಅವರನ್ನು ಸಂಪರ್ಕಿಸಲು ಎಷ್ಟು ಸಾರಿ ಯತ್ನಿಸಿದರೂ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ಇಲ್ಲಿನ ಅವ್ಯವಸ್ಥೆಯಿಂದ ಕಾನೂನು ಬಾಹಿರ ಚಟುವಟಿಕೆಗಳು ಕೂಡ ಹೆಚ್ಚಾಗಿದೆ ಎಂದು ವಿವರಿಸಿದ್ದಾರೆ.

    ಪತ್ರದಲ್ಲಿ ಮತ್ತೊಂದು ಮುಖ್ಯ ಅಂಶವನ್ನು ನಮೂದಿಸಿದ್ದು, ತಾವು ವಾಸಿಸುವ ಪಕ್ಕದ ಪ್ರದೇಶ ನಿವಾಸಿಗಳು ಹಣ ನೀಡಿದಕ್ಕೆ ಮಾತ್ರ ಕೆಲಸ ಮಾಡಿದ್ದಾರೆ. ನಾನು ಹಣ ನೀಡಿಲ್ಲ ಎಂಬ ಕಾರಣಕ್ಕೆ ಕೆಲಸ ಮಾಡಿಲ್ಲ. ಈ ಪ್ರದೇಶದ ಎಇ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು ಇದುವರೆಗೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆರೋಪಿಸಿದ್ದಾರೆ.

    2009ನೇ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿರುವ ಪಲ್ಲವಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಡಿಪಿಎಆರ್) ಜಾಗೃತ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2018ರ ಜುಲೈ 18ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅವರು, ಪ್ರಸ್ತುತ ಹೆರಿಗೆ ರಜೆಯಲ್ಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv