Tag: State Government

  • ʻಕೈʼ ಸರ್ಕಾರದಿಂದ ಬೀದಿ ನಾಯಿಗಳಿಗೂ ಗ್ಯಾರಂಟಿ – ಬಾಡೂಟಕ್ಕಾಗಿ ಬಿಬಿಎಂಪಿಯಿಂದ 2.80 ಕೋಟಿ ಟೆಂಡರ್

    ʻಕೈʼ ಸರ್ಕಾರದಿಂದ ಬೀದಿ ನಾಯಿಗಳಿಗೂ ಗ್ಯಾರಂಟಿ – ಬಾಡೂಟಕ್ಕಾಗಿ ಬಿಬಿಎಂಪಿಯಿಂದ 2.80 ಕೋಟಿ ಟೆಂಡರ್

    – ದೇಶದಲ್ಲೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳಿಂದ ನಾಯಿಗಳಿಗೆ ಬಾಡೂಟ

    ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ (Bengaluru) ಬೀದಿನಾಯಿಗಳಿಗೆ ಕಾಂಗ್ರೆಸ್ (Congress) ಸರ್ಕಾರ ಬಾಡೂಟದ ಭಾಗ್ಯ ಕಲ್ಪಿಸುತ್ತಿದೆ.ಇದನ್ನೂ ಓದಿ: ತಾಯಿಯನ್ನು ಬಿಟ್ಟು ವಸತಿ ನಿಲಯದಲ್ಲಿ ಇರಲಾರೆ ಎಂದ ಬಾಲಕ ನೇಣಿಗೆ ಶರಣು!

    ಕಾಂಗ್ರೆಸ್ ಸರ್ಕಾರ ಬೀದಿ ನಾಯಿಗಳಿಗೂ (Street Dogs) ಗ್ಯಾರಂಟಿ ಯೋಜನೆಯನ್ನು ಕೊಡುತ್ತಿದೆ. ಈ ಮೂಲಕ ಬೀದಿ ನಾಯಿಗಳಿಗೆ ಮಾಂಸ, ಚಿಕನ್, ಎಗ್‌ರೈಸ್ ನೀಡಲಾಗುತ್ತದೆ. ಪಾಲಿಕೆಯ 8 ವಲಯಗಳಲ್ಲಿ ನಿತ್ಯ 600-700 ಬೀದಿ ನಾಯಿಗಳಿಗೆ ಬಾಡೂಟ ನೀಡಲು ಬಿಬಿಎಂಪಿ (BBMP)  2.80 ಕೋಟಿ ರೂ. ಟೆಂಡರ್ ಕರೆದಿದೆ.

    ಕಾಂಗ್ರೆಸ್ ಸರ್ಕಾರದ ಈ ಬಾಡೂಟ ಭಾಗ್ಯಕ್ಕೆ ತೆರಿಗೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಜನರಿಗೆ ಹೊಟ್ಟೆಗೆ ಹಿಟ್ಟಿಲ್ಲ, ಬೀದಿನಾಯಿಗೆ ಬಾಡೂಟ ಕೊಡುತ್ತಿದ್ದಾರೆ. ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಈ ಐಡಿಯಾ ಮಾಡಿದ್ದಾರೆ. ನಾಯಿಗಳ ಮೇಲೆ ಪ್ರೀತಿ ಇರಲಿ, ಆದರೆ ಇದೆಲ್ಲಾ ಹೇಗೆ? ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ರೀಲ್ಸ್‌ಗಾಗಿ ಕಂಪ್ಲಿ ಸೇತುವೆಯಿಂದ ಜಿಗಿದು ಹುಚ್ಚಾಟ

  • ಕಾಂಗ್ರೆಸ್‌ನ ಎಲ್ಲಾ ಶಾಸಕರನ್ನು ಮಂತ್ರಿ ಮಾಡೋಕೆ ಆಗಲ್ಲ- ಆರ್.ವಿ.ದೇಶಪಾಂಡೆ

    ಕಾಂಗ್ರೆಸ್‌ನ ಎಲ್ಲಾ ಶಾಸಕರನ್ನು ಮಂತ್ರಿ ಮಾಡೋಕೆ ಆಗಲ್ಲ- ಆರ್.ವಿ.ದೇಶಪಾಂಡೆ

    ಬೆಂಗಳೂರು: ಕಾಂಗ್ರೆಸ್‌ನ (Congress) ಎಲ್ಲಾ ಶಾಸಕರಿಗೆ ಮಂತ್ರಿಯಾಗುವ ಅರ್ಹತೆಗಳು ಇವೆ. ಆದರೆ ಎಲ್ಲರನ್ನೂ ಮಂತ್ರಿ ಮಾಡೋಕೆ ಆಗುವುದಿಲ್ಲ ಎಂದು ಮಾಜಿ ಸಚಿವ ಆರ್.ವಿ ದೇಶಪಾಂಡೆ (RV Deshpande) ಪರೋಕ್ಷವಾಗಿ ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅರ್ಧನಾರೇಶ್ವರರನ್ನ ಹುಡುಕಿಕೊಳ್ಳಲಿ: ಹರಿಪ್ರಸಾದ್

    ಶಾಸಕರ ಜೊತೆ ಸುರ್ಜೇವಾಲಾ ಸಭೆ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಇವತ್ತು ಸುರ್ಜೇವಾಲಾ ಅವರನ್ನು ಭೇಟಿ ಮಾಡುತ್ತೇನೆ. ಏನು ಚರ್ಚೆ ಮಾಡಲ್ಲ, ಯಾವುದೇ ವಿಚಾರ ಚರ್ಚೆ ಮಾಡಲ್ಲ. ಅವರು ಆರಾಮಾಗಿದ್ದಾರೆ, ನಾವು ಆರಾಮವಾಗಿದ್ದೇವೆ ಎಂದು ಹೇಳುತ್ತೇನೆ ಎಂದರು.

    ನೀವು ಸಚಿವ ಸ್ಥಾನ ಕೇಳ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರೂ ಸಚಿವರು ಆಗಲು ಸಾಧ್ಯನಾ? 224 ಸದಸ್ಯರಿದ್ದಾರೆ. 30 ರಿಂದ 35 ಜನರು ಸಚಿವರಾಗಬಹುದು. ಮಂತ್ರಿ ಆಗಬೇಕು ಎಂಬ ಆಸೆ ಇದ್ರೆ ತಪ್ಪಿಲ್ಲ. ಅರ್ಹತೆ ಎಲ್ಲರಿಗೂ ಇದೆ, ಆದರೆ ಎಲ್ಲರೂ ಆಗಲು ಸಾಧ್ಯವಿಲ್ಲ. ಸುರ್ಜೇವಾಲಾ ನನ್ನನ್ನು ಕರೆದಿದ್ದಾರೆ. ಏನು ಹೇಳುತ್ತಾರೆ ಗೊತ್ತಿಲ್ಲ. ಏನಾದರೂ ಇದ್ದರೆ ಕಿವಿಯಲ್ಲಿ ಹೇಳಬಹುದು ಅದು ಗೊತ್ತಿಲ್ಲ ಎಂದು ಹಾಸ್ಯ ಮಾಡಿದರು.ಇದನ್ನೂ ಓದಿ: ರಾಜಮೌಳಿ ಸಿನಿಮಾ ರಿಜೆಕ್ಟ್ ಮಾಡಿದ ನಟ ವಿಕ್ರಂ – ಕಾರಣ ಏನ್ ಗೊತ್ತಾ?

  • ಮದ್ವೆಯಾದ ಹತ್ತೇ ದಿನಕ್ಕೆ ಪತ್ನಿಯ ತಾಳಿ, ಅಮ್ಮನ ಒಡವೆ ಅಡವಿಟ್ಟು 20 ಲಕ್ಷ ಲಂಚ – APMC ವಿರುದ್ಧ ಭ್ರಷ್ಟಾಚಾರದ ಆರೋಪ

    ಮದ್ವೆಯಾದ ಹತ್ತೇ ದಿನಕ್ಕೆ ಪತ್ನಿಯ ತಾಳಿ, ಅಮ್ಮನ ಒಡವೆ ಅಡವಿಟ್ಟು 20 ಲಕ್ಷ ಲಂಚ – APMC ವಿರುದ್ಧ ಭ್ರಷ್ಟಾಚಾರದ ಆರೋಪ

    – ಮಳಿಗೆ ಮಂಜೂರಿಗೆ ದುಡ್ಡಿಗೆ ಡಿಮ್ಯಾಂಡ್ ಮಾಡಿದ್ದ ಎಪಿಎಂಸಿ ಕಾರ್ಯದರ್ಶಿ

    ಬೆಂಗಳೂರು: ರಾಜ್ಯದಲ್ಲಿ ವಸತಿ ಇಲಾಖೆ ಬಳಿಕ ಇದೀಗ ಮತ್ತೊಂದು ಭ್ರಷ್ಟಾಚಾರದ (Corruption) ಆರೋಪ ಕೇಳಿಬಂದಿದೆ.

    ಹೌದು, ವಸತಿ ಇಲಾಖೆಯ ಮನೆ ಹಂಚಿಕೆಯಲ್ಲಿ `ಮನಿ ಕೊಟ್ರೆ ಮನೆ’ ಎಂಬ ಭ್ರಷ್ಟಾಚಾರದ ಆರೋಪ ಬಳಿಕ ಇದೀಗ ಎಪಿಎಂಸಿಯಲ್ಲಿ ಮಳಿಗೆ ಹಸ್ತಾಂತರಕ್ಕೆ ಲಂಚ ಪಡೆದಿರುವುದು ಬೆಳಕಿಗೆ ಬಂದಿದೆ. ಹಣ ಕೊಟ್ಟರೂ ಮಳಿಗೆ ಹಸ್ತಾಂತರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.ಇದನ್ನೂ ಓದಿ: ಮಾಜಿ ಡಿಸಿಎಂ ಈಶ್ವರಪ್ಪ, ಪುತ್ರ, ಸೊಸೆ ವಿರುದ್ಧ ಎಫ್‌ಐಆರ್

    ಈ ಕುರಿತು ವಂಚನೆಗೊಳಗಾದ ಚಂದ್ರಶೇಖರ್ `ಪಬ್ಲಿಕ್ ಟಿವಿ’ (PUBLiC TV) ಜೊತೆ ಮಾತನಾಡಿ, ದಾಸನಪುರ ಮಳಿಗೆ ಮಂಜೂರಾಗಲು ಅರ್ಜಿ ಸಲ್ಲಿಸಿದ್ದೆ. ಅರ್ಜಿ ಸಲ್ಲಿಸಿದ್ದರೂ ಮಳಿಗೆ ಹಸ್ತಾಂತರವಾಗಿರಲಿಲ್ಲ. ಹಾಗಾಗಿ ಇದನ್ನು ಕೇಳಲು ಎಪಿಎಂಸಿ ಕಾರ್ಯದರ್ಶಿಯ ಬಳಿ ಹೋದಾಗ 20 ಲಕ್ಷ ರೂ. ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಬಳಿಕ ಮದುವೆಯಾಗಿ ಹತ್ತೇ ದಿನ ಆಗಿದ್ದರೂ ನನ್ನ ಹೆಂಡತಿಯ ಮಾಂಗಲ್ಯ ಹಾಗೂ ಅಮ್ಮನ ಒಡವೆಗಳನ್ನು ಅಡವಿಟ್ಟು ದುಡ್ಡು ಹೊಂದಿಸಿ, ಲಂಚ ನೀಡಿದ್ದೇನೆ. ಆದರೂ ಕೂಡ ಮಳಿಗೆ ಹಸ್ತಾಂತರ ಆಗಿರಲಿಲ್ಲ. ಬಳಿಕ ಕಾರ್ಯದರ್ಶಿಗೆ ಹಣ ವಾಪಾಸ್ ಕೇಳಿದ್ರೂ ಕೊಟ್ಟಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

    ಸದ್ಯ ಈ ಕುರಿತು ಚಂದ್ರಶೇಖರ್ ಅವರು ಸಚಿವ ಶಿವಾನಂದ ಪಾಟೀಲ್‌ಗೆ ಪತ್ರ ಬರೆದು ಭ್ರಷ್ಟಾಚಾರದ ತನಿಖೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ಸರ್ಕಾರಕ್ಕೆ ಅನೇಕ ವರ್ತಕರು ದೂರು ನೀಡಿದ್ದರು. ಸರ್ಕಾರ ಅಧಿಕಾರಿಗಳ ವಿರುದ್ಧ ಯಾವುದೇ ರೀತಿಯ ಕ್ರಮ ಜರುಗಿಸಿರಲಿಲ್ಲ. ಇದೀಗ ಚಂದ್ರಶೇಖರ್ ಸ್ವತಃ ದೂರು ನೀಡಿದ್ದು, ಬೇರೆ ವರ್ತಕರಿಗೂ ಇದೇ ರೀತಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ದುಡ್ಡಿಗೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಈ ಅವ್ಯವಹಾರದ ಬಗ್ಗೆ ಸಿಐಡಿ ತನಿಖೆ ಮಾಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಶರಾವತಿ ಹಿನ್ನೀರಿನ ನಡುವೆ ಕೆಟ್ಟು ನಿಂತ ಲಾಂಚ್ – ತಪ್ಪಿದ ಅನಾಹುತ

  • ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಹೆಸರಿಡಲು ಜೆಡಿಎಸ್ ವಿರೋಧ

    ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಹೆಸರಿಡಲು ಜೆಡಿಎಸ್ ವಿರೋಧ

    – ಕನ್ನಡಿಗರಿಗೆ ಕಾಂಗ್ರೆಸ್‌ನಿಂದ ಮಹಾದ್ರೋಹ ಎಂದು ಕಿಡಿ

    ಬೆಂಗಳೂರು: ಇಲ್ಲಿನ ಕೇಂದ್ರ ವಿಶ್ವವಿದ್ಯಾಲಯಕ್ಕೆ (Bengaluru University) ಮಾಜಿ ಪ್ರಧಾನಿ ದಿ. ಮನಮೋಹನ್ ಸಿಂಗ್ (Manmohan Singh) ಹೆಸರು ಇಡಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನ ಜೆಡಿಎಸ್ (JDS) ಖಂಡಿಸಿದೆ.

    ಈ ಕುರಿತು ಎಕ್ಸ್‌ನಲ್ಲಿ  (X) ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿರುವ ಜೆಡಿಎಸ್, ಕಾಂಗ್ರೆಸ್ ಕನ್ನಡಿಗರಿಗೆ ಮಹಾದ್ರೋಹ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದೆ.ಇದನ್ನೂ ಓದಿ: ಸಿದ್ದರಾಮಯ್ಯ ಲಾಟರಿ ಸಿಎಂ, ಅವ್ರ ಕುರ್ಚಿ ಅಲುಗಾಡ್ತಿದೆ – ಜೆಡಿಎಸ್ ಲೇವಡಿ

    ಎಕ್ಸ್‌ನಲ್ಲಿ ಏನಿದೆ?
    ರಾಜ್ಯದಲ್ಲಿ ಗುಲಾಮಿ ಕಾಂಗ್ರೆಸ್ (Congress) ಸರ್ಕಾರದ ತೊಘಲಕ್ ಆಡಳಿತ ಹೇಗಿದೆ ನೋಡಿ ಕರ್ನಾಟಕದ ಮಹಾಜನತೆ. ರಾಮನ ಹೆಸರಿನ “ರಾಮನಗರ” (Ramanagar) ಜಿಲ್ಲೆಯನ್ನು “ಬೆಂಗಳೂರು ದಕ್ಷಿಣ” (Bengaluru South) ಎಂದು ವಿರೋಧವನ್ನು ಲೆಕ್ಕಿಸದೇ ಮರುನಾಮಕರಣ ಮಾಡಲಾಗಿದೆ. “ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ”ಕ್ಕೆ ಮಾಜಿ ಪಿಎಂ “ಮನಮೋಹನ್ ಸಿಂಗ್ ವಿವಿ ಬೆಂಗಳೂರು” ಎಂದು ಹೆಸರಿಡಲು ಈಗ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ.

    ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದ ವಿಶ್ವಮಟ್ಟದಲ್ಲಿ ಬ್ರ‍್ಯಾಂಡ್ ಆಗಿದೆ. “ಬೆಂಗಳೂರು” ಹೆಸರನ್ನೇ ವಿಶ್ವವಿದ್ಯಾಲಯಕ್ಕೂ ಇಡಲಾಗಿತ್ತು. ಪರ್ಯಾಯಾವಾಗಿ ಮರುನಾಮಕರಣ ಮಾಡುವ ಅವಶ್ಯಕತೆ, ಜರೂರು ಏನಿತ್ತು? ಅಧಿಕಾರದ ಮದ, ದರ್ಪ, ದುರಹಂಕಾರದಲ್ಲಿ ಮೆರೆಯುತ್ತಿರುವ ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ಹೈಕಮಾಂಡ್ ಮೆಚ್ಚಿಸಲು ಬೆಂಗಳೂರಿನ ಘನತೆ, ಗೌರವಕ್ಕೆ ಹಾಗೂ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ವಿರೋಧದ ನಡುವೆಯೂ ಮಾಡುತ್ತಿರುವುದು ಅಕ್ಷಮ್ಯ ಎಂದು ಆಕ್ರೋಶ ಹೊರಹಾಕಿದೆ.ಇದನ್ನೂ ಓದಿ: ಶಾಲಾ ವಾಹನ ಏರಲು ರಸ್ತೆಗೆ ಓಡಿದ ಬಾಲಕನಿಗೆ ಬಿಎಂಟಿಸಿ ಬಸ್ ಡಿಕ್ಕಿ – ವಿದ್ಯಾರ್ಥಿ ಸ್ಥಿತಿ ಗಂಭೀರ

  • ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರಕ್ಕೆ ಕೌಂಟರ್ ಓಪನ್ – ವಿಜಯೇಂದ್ರ

    ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರಕ್ಕೆ ಕೌಂಟರ್ ಓಪನ್ – ವಿಜಯೇಂದ್ರ

    -ಏಜೆಂಟರ ಮೂಲಕ ಸರ್ಕಾರ ಕಮಿಷನ್ ಮಾಫಿಯಾ ನಡೆಸುತ್ತಿದೆ ಎಂದು ಆರೋಪ

    ಬೆಂಗಳೂರು: ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರಕ್ಕೆ ಕೌಂಟರ್‌ಗಳನ್ನು ತೆರೆಯಲಾಗಿದೆ. ಸಚಿವಾಲಯದಿಂದ ಗ್ರಾಮ ಪಂಚಾಯಿತಿ ಕಚೇರಿವರೆಗೂ ಲಂಚ ಇಲ್ಲದೆ ಕೆಲಸ, ಕಾರ್ಯಗಳು ನಡೆಯುವುದಕ್ಕೆ ಸಾಧ್ಯವಿಲ್ಲ ಎಂಬಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಆರೋಪಿಸಿದರು.

    ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರ ಕಮಿಷನ್ ಮಾಫಿಯಾಗೆ ಬೆಂಬಲ ಕೊಡುತ್ತಿದೆ. ಸರ್ಕಾರ ಏಜೆಂಟರ ಮೂಲಕ ಕಮಿಷನ್ ಮಾಫಿಯಾ ನಡೆಸುತ್ತಿದೆ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವ ಏಕೈಕ ಕಾರಣಕ್ಕೆ ಸಿದ್ದರಾಮಯ್ಯನವರು ಇದೆಲ್ಲವನ್ನೂ ನೋಡಿ, ಕಣ್ಮುಚ್ಚಿ ಕುಳಿತಿದ್ದಾರೆ ಎಂದರು.ಇದನ್ನೂ ಓದಿ: ಫಸ್ಟ್ ಲವ್ ಬಿಚ್ಚಿಟ್ಟ ನಟಿ ರಶ್ಮಿಕಾ ಮಂದಣ್ಣ

    ಸಚಿವ ಕೃಷ್ಣಬೈರೇಗೌಡರು ಅಧಿಕಾರಿಗಳ ಸಭೆ ಮುಗಿಸಿ, ಯಾಕೆ ಹೊಟ್ಟೆ ಉರಿಸ್ತೀರಿ. ನಿಮ್ಮ ರೇಟ್ ಲಿಸ್ಟನ್ನೇ ಹಾಕಿ ಎಂದು ಹೇಳಿಕೆ ಕೊಟ್ಟಿದ್ದಾರೆ. ಗೃಹ ಸಚಿವ ಪರಮೇಶ್ವರ್ ಅವರು ಬಾದಾಮಿಯಲ್ಲಿ ಈಗಷ್ಟೇ ಹೇಳಿಕೆ ನೀಡಿ, ಸಿದ್ದರಾಮಯ್ಯ ಅವರ ಹತ್ರ ಕಾಸಿಲ್ಲ, ದಯವಿಟ್ಟು ಹಣ ಕೇಳಲು ಬರಬೇಡಿ ಎಂದು ತಿಳಿಸಿದರು. ಬೊಕ್ಕಸದಲ್ಲಿ ಹಣ ಇಲ್ಲ ಎಂಬ ಸಂದೇಶವನ್ನು ರಾಜ್ಯದ ಮುಖ್ಯಮಂತ್ರಿಗಳು ಗೃಹ ಸಚಿವರ ಮೂಲಕ ಕಾಂಗ್ರೆಸ್ ಶಾಸಕರಿಗೆ ತಿಳಿಸಿದಂತಿದೆ. ಶಾಸಕರು ಅನುದಾನ ಕೇಳಬೇಡಿ ಎಂದಿರುವಂತಿದೆ ಎಂದು ಹೇಳಿದರು.

    ಸಿದ್ದರಾಮಯ್ಯನವರು ದೇವರಾಜ ಅರಸು ಅವರ ದಾಖಲೆ ಮುರಿಯಬೇಕು. ಇವರು ದೇವರಾಜ ಅರಸು ಅವರ ದಾಖಲೆ ಮುರಿಯುವುದಕ್ಕೋಸ್ಕರ ರಾಜ್ಯವನ್ನು ಲೂಟಿ ಮಾಡಿ, ಯಾವುದೇ ಅಭಿವೃದ್ಧಿ ಕಾರ್ಯಗಳು ಇಲ್ಲದೇ, ಲಂಚ ಇಲ್ಲದೇ ಯಾವುದೇ ಕೆಲಸ ಕಾರ್ಯ ಆಗುತ್ತಿಲ್ಲ. ಅಂದರೆ ಈ ರಾಜ್ಯದಲ್ಲಿ ಮುಖ್ಯಮಂತ್ರಿಗಳು ತಮ್ಮ ಸಂಪೂರ್ಣ ಹಿಡಿತವನ್ನು ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.ಇದನ್ನೂ ಓದಿ: PublicTV Explainer: ಫಾಸ್ಟ್ಯಾಗ್ 3,000 ರೂ. ವಾರ್ಷಿಕ ಪಾಸ್‌ – ನಿಮಗೆ ಲಾಭನಾ, ನಷ್ಟನಾ?

    ಲಂಚ ಸಂಗ್ರಹಕ್ಕೆ ಮುಖ್ಯಮಂತ್ರಿಗಳೇ ಔಟ್‌ಸೋರ್ಸ್ ನೀಡಿದ್ದಾರೆ. ಬಿ.ಆರ್.ಪಾಟೀಲ್‌ರ ಆರೋಪದ ಬಳಿಕವೂ ಮುಖ್ಯಮಂತ್ರಿಗಳು ಜಮೀರ್ ಅಹ್ಮದ್ ಅವರ ರಾಜೀನಾಮೆ ಪಡೆದಿಲ್ಲ. ಆದರೆ, ಅದೇನೂ ದೊಡ್ಡ ವಿಚಾರವಲ್ಲ. ಭ್ರಷ್ಟಾಚಾರದ ಬಗ್ಗೆ ಸರ್ಕಾರವನ್ನು ದೂಷಿಸುವುದು ಸರಿಯಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಇದು ಜವಾಬ್ದಾರಿಯುತ ಗೃಹ ಸಚಿವರ ಹೇಳಿಕೆಯೇ ಎಂದು ಕೇಳಿದರು. ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬೆಂಗಳೂರಿನಲ್ಲಿ ಹೊಸ ಮನೆ ನಿರ್ಮಾಣ ಮುಗಿದರೂ ಎನ್‌ಒಸಿ ಸಿಗುತ್ತಿಲ್ಲ. ಜನರೇಟರ್ ಇಟ್ಟುಕೊಂಡು ಗೃಹಪ್ರವೇಶ ಮಾಡುತ್ತಿದ್ದಾರೆ. ಇದು ರಾಜ್ಯದ ಪರಿಸ್ಥಿತಿ ಎಂದು ಬೇಸರ ವ್ಯಕ್ತಪಡಿಸಿದರು.

    ರಾಜ್ಯದ ಆಡಳಿತ ಪಕ್ಷದ ಶಾಸಕರಲ್ಲೇ ಬಹುದೊಡ್ಡ ಹತಾಶೆ ಕಾಣುತ್ತಿದೆ. ಮುಖ್ಯಮಂತ್ರಿಗಳ ಆತ್ಮೀಯರಾದ ಹಿರಿಯ ಶಾಸಕ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಅವರು ವಸತಿ ಇಲಾಖೆಯ ಹಗರಣ, ಬಡವರಿಗೆ ಮನೆ ಕೊಡಲು ಲಂಚ ಇಲ್ಲದೇ ಮನೆ ಮಂಜೂರಾಗದ ಕುರಿತು ತಿಳಿಸಿದ್ದಾರೆ. ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಮನೆ ಹಂಚಿಕೆಯಲ್ಲಿ ಆಗಿರುವ ಅಕ್ರಮದ ಆರೋಪದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಗೋಲ್ಮಾಲ್‌ಗಳ ಕುರಿತು ಸದ್ಯವೇ ಇನ್ನಷ್ಟು ಶಾಸಕರು ಮಾತನಾಡಲಿದ್ದಾರೆ ಎಂದು ಬಿ.ಆರ್.ಪಾಟೀಲ್ ಹೇಳಿದ್ದಾರೆ. ಸ್ವತಃ ನಾಗೇಂದ್ರ ಅವರ ರಾಜೀನಾಮೆಗೆ ಕಾರಣವಾದ 150-160 ಕೋಟಿ ರೂ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿರುದ್ಧ ಬಿಜೆಪಿ ಹೋರಾಟ ಮಾಡಿತ್ತು. ತೆಲಂಗಾಣಕ್ಕೆ ಹಣ ಕಳಿಸಲಾಗಿತ್ತು. ಇವರು ಲೂಟಿ ಮಾಡಿದ್ದಕ್ಕೆ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಬಲಿಪಶು ಆಗಿದ್ದರು ಎಂದು ವಿವರಿಸಿದರು.

    ಮೈಸೂರು ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳೇ ಆರೋಪಿ ಸ್ಥಾನದಲ್ಲಿದ್ದರು. ಹಗರಣ ಆಗಿಲ್ಲವೆಂದು ಹೇಳಿದ್ದ ಸಿದ್ದರಾಮಯ್ಯನವರು 14 ನಿವೇಶನ ಹಿಂದಿರುಗಿಸಿದ್ದರು. ಬಿಜೆಪಿ ಹೋರಾಟ, ಜನಾಕ್ರೋಶ ಯಾತ್ರೆ ಮಾಡಿದಾಗ ಸಿದ್ದರಾಮಯ್ಯ ಮತ್ತು ಅವರ ಮಂತ್ರಿಮಂಡಲದ ಸದಸ್ಯರು ಬಹಳ ಹಗುರವಾಗಿ ಮಾತನಾಡಿದ್ದರು. ಬಿಜೆಪಿಯವರಿಗೆ ಕೆಲಸ ಇಲ್ಲ. ಗ್ಯಾರಂಟಿಗಳ ಜನಪ್ರಿಯತೆ ಸಹಿಸಲಾಗದೆ ಬೀದಿಗಿಳಿದು ಹೋರಾಟ ಮಾಡಿದ್ದಾರೆ ಎಂದಿದ್ದರು ಎಂದು ಟೀಕಿಸಿದರು.

    ಸಿದ್ದರಾಮಯ್ಯನವರೇ ಬಿ.ಆರ್.ಪಾಟೀಲ್, ರಾಜು ಕಾಗೆ, ಗೋಪಾಲಕೃಷ್ಣ ಅವರ ಹೇಳಿಕೆಗೆ ನಿಮ್ಮ ಉತ್ತರ ಏನು? ರಾಜ್ಯದ ಜನರಿಗೆ ಸಿದ್ದರಾಮಯ್ಯನವರು ಉತ್ತರಿಸಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: `ಕೈ’ ಕಂಪನ ಸಂಕಟ: 2 ವರ್ಷ ಗ್ಯಾರಂಟಿ ಪಿರಿಯೆಡ್, ವೇಯ್ಟಿಂಗ್ ಪಿರಿಯೆಡ್ ಮುಗಿತು, ಇನ್ನೇನಿದ್ರೂ ಫೈಟಿಂಗ್ ಪಿರಿಯೆಡ್!

    ಮತ್ತೊಬ್ಬ ಹಿರಿಯ ಶಾಸಕ ರಾಜು ಕಾಗೆ ಅವರು ಕಾಮಗಾರಿಗೆ ಕಾಸು ಕೊಟ್ಟು ವರ್ಕ್ ಆರ್ಡರ್ ಪಡೆಯಬೇಕಿದೆ. ಬಿ.ಆರ್.ಪಾಟೀಲ್ ಅವರ ಹೇಳಿಕೆಯನ್ನು ಬೆಂಬಲಿಸುತ್ತೇನೆ. ಅವರಿಗೆ ಆದ ಸ್ಥಿತಿ ನನಗೂ ಆಗಿದೆ. ಎರಡು ವರ್ಷಗಳ ಹಿಂದೆ ಶಂಕುಸ್ಥಾಪನೆ ಮಾಡಿದ ಕಾಮಗಾರಿಗೆ ಕೂಡ ಕಮಿಷನ್, ಲಂಚ ಕೊಡದೆ ವರ್ಕ್ ಆರ್ಡರ್ ಸಿಗುತ್ತಿಲ್ಲ ಎಂದಿರುವುದಾಗಿ ಗಮನಕ್ಕೆ ತಂದರು. ಇದು ಮೊದಲ ಬಾರಿ ಅಲ್ಲ, ಹಿಂದೆಯೂ ಮುಖ್ಯಮಂತ್ರಿಗಳ ವಿರುದ್ಧ ತಮ್ಮ ಅಸಂತೋಷ ತೋಡಿಕೊಂಡಿದ್ದರು ಎಂದು ತಿಳಿಸಿದರು.

    ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು, ನಾನು ಶಾಸಕನಾಗಿದ್ದುಕೊಂಡು ಒಂದು ಚರಂಡಿ, ಒಂದು ಶಾಲೆ ಕೆಲಸ ಆಗುತ್ತಿಲ್ಲ ಎಂದಿದ್ದಾರೆ. ಮುಖ್ಯಮಂತ್ರಿಗಳ ಆತ್ಮೀಯರಾದ ಆಡಳಿತ ಪಕ್ಷದ ಶಾಸಕರೇ ಈ ಹೇಳಿಕೆ ನೀಡುತ್ತಿದ್ದಾರೆ. ಈ ರಾಜ್ಯದಲ್ಲಿ ಆಡಳಿತ ನಡೆಯುತ್ತಿದೆಯೇ? ಸರ್ಕಾರ ಬದುಕಿದೆಯೇ? ಎಂದು ಜನರು ಪ್ರಶ್ನಿಸುತ್ತಿದ್ದಾರೆ. ರಾಜ್ಯವನ್ನು ಲೂಟಿ ಮಾಡಲು ಸರ್ಕಾರಿ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

    ಆಪ್ತ ಸಚಿವರಿಗೆ ಟಾರ್ಗೆಟ್-ನಾಗೇಂದ್ರ ಹಳ್ಳಕ್ಕೆ:
    ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು ತಮ್ಮ ಆಪ್ತ ಸಚಿವರಿಗೆ ಟಾರ್ಗೆಟ್ ನೀಡಿದ್ದಾರೆ. ಹಾಗಾಗಿಯೇ ನಾಗೇಂದ್ರ ಅವರು ಹಳ್ಳಕ್ಕೆ ಬಿದ್ದಿದ್ದರು. ಪೀಣ್ಯ ಕೈಗಾರಿಕಾ ಬಡಾವಣೆಯಲ್ಲಿ ಅಭಿವೃದ್ಧಿ ಕೆಲಸ ಆಗದೇ, ಪಕ್ಕದ ತಮಿಳುನಾಡಿಗೆ ಹೋಗುವುದಾಗಿ ಅಲ್ಲಿನ ಕೈಗಾರಿಕೆದಾರರ ಸಂಘದ ಅಧ್ಯಕ್ಷರು ಹೇಳಿಕೆ ಕೊಟ್ಟಿದ್ದಾರೆ. ಇದು ರಾಜ್ಯ ಸರ್ಕಾರ ರಾಜ್ಯವನ್ನು ನಡೆಸುವ ರೀತಿ ಎಂದು ಆಕ್ಷೇಪಿಸಿದರು.ಇದನ್ನೂ ಓದಿ: ಥಗ್ ಲೈಫ್ ಸೋಲು – ಕ್ಷಮೆ ಕೇಳಿದ ನಿರ್ದೇಶಕ ಮಣಿರತ್ನಂ

     

  • `ಕೈ’ ಕಂಪನ ಸಂಕಟ: 2 ವರ್ಷ ಗ್ಯಾರಂಟಿ ಪಿರಿಯೆಡ್, ವೇಯ್ಟಿಂಗ್ ಪಿರಿಯೆಡ್ ಮುಗಿತು, ಇನ್ನೇನಿದ್ರೂ ಫೈಟಿಂಗ್ ಪಿರಿಯೆಡ್!

    `ಕೈ’ ಕಂಪನ ಸಂಕಟ: 2 ವರ್ಷ ಗ್ಯಾರಂಟಿ ಪಿರಿಯೆಡ್, ವೇಯ್ಟಿಂಗ್ ಪಿರಿಯೆಡ್ ಮುಗಿತು, ಇನ್ನೇನಿದ್ರೂ ಫೈಟಿಂಗ್ ಪಿರಿಯೆಡ್!

    ಬೆಂಗಳೂರು: ಕಾಂಗ್ರೆಸ್‌ನಲ್ಲಿ (Congress) ಇದೀಗ ಹಣದ ಸಂಕಟ, ಅನುದಾನದ ಸಂಕಟ ಶುರುವಾಗಿದೆ. ಶಾಸಕರ ಒಳಗಿನ ಸಂಕಟ ಹೊರಗೆ ಬಂದಿದ್ದೇಗೆ? ಎಂಬ ಚರ್ಚೆ ಜೋರಾಗಿದೆ. ಸಚಿವರ ವಿರುದ್ಧ ಶಾಸಕರು ತಿರುಗಿಬಿದ್ದು ಮಾತನಾಡುತ್ತಿದ್ದರೆ, ಸಚಿವ ಪರಮೇಶ್ವರ್ ನಮ್ ಹತ್ರ ದುಡ್ಡಿಲ್ಲ ಎಂದು ಒಂದೇ ದಿನದಲ್ಲಿ ಉಲ್ಟಾ ಹೊಡೆದಿದ್ದಾರೆ. ಹಾಗಾದ್ರೆ ಶಾಸಕರ ಅಸಮಾಧಾನ ಡಬ್ಬಲ್ ಆಗುತ್ತಾ? ಸಿಎಂ ಮದ್ದು ಅರೆಯುತ್ತಾರಾ? ಎಂಬ ಕುತೂಹಲ ಉಂಟಾಗಿದೆ.

    2 ವರ್ಷ ಗ್ಯಾರಂಟಿ ಪಿರಿಯೆಡ್, ವೇಯ್ಟಿಂಗ್ ಪಿರಿಯೆಡ್ ಮುಗಿತು, ಇನ್ನೇನಿದ್ರೂ ಫೈಟಿಂಗ್ ಪಿರಿಯೆಡ್ ಎಂಬ ಆಟ. ಸದ್ಯ ಕಾಂಗ್ರೆಸ್ ಶಾಸಕರೆಲ್ಲರೂ ಒಂದೇ ಭ್ರಷ್ಟಾಚಾರದಡಿಯಲ್ಲಿ ಅನುದಾನದ ಕೊರತೆ ಆರೋಪ ಮಾಡುತ್ತಿದ್ದಾರೆ.ಇದನ್ನೂ ಓದಿ: ಮುಂಗಾರು ಚುರುಕು – ಕರಾವಳಿಗೆ ಮೂರು ದಿನ ರೆಡ್ ಅಲರ್ಟ್

    ನಮ್ಮದೇ ಸರ್ಕಾರ ಇದ್ದರೂ ಕ್ಷೇತ್ರದಲ್ಲಿ ಶಾಸಕರ ಅಸಹಾಯಕತೆಯ ವ್ಯಥೆ. ಈ ನಡುವೆ ಗೃಹ ಸಚಿವ ಪರಮೇಶ್ವರ್ ಕೂಡ ಸಿದ್ದರಾಮಯ್ಯ ಹತ್ರ, ನಮ್ ಹತ್ರ ದುಡ್ಡಿಲ್ಲ ಎಂದಿದ್ದಾರೆ. ಬಾದಾಮಿಯಲ್ಲಿ ಮಾತನಾಡುತ್ತಾ ಅಕ್ಕಿ, ಬೇಳೆ, ಎಣ್ಣೆ ಎಲ್ಲ ಕೊಟ್ಟಿದ್ದೇವೆ ಎಂದು ಹೇಳುವ ಮೂಲಕ ಶಾಸಕರ ಅಸಮಾಧಾನವನ್ನ ಪುಷ್ಟಿಕರಿಸಿದಂತಿದೆ. ಆದರೆ ಯಾವಾಗ ವಿವಾದ ಆಗುತ್ತೆ ಎಂಬ ಸುಳಿವು ಸಿಕ್ಕ ತಕ್ಷಣ ಎಚ್ಚೆತ್ತುಕೊಂಡು ಎಣ್ಣೆ ಎಣ್ಣೆ ಅಂತಾ ತಮಾಷೆ ಮಾಡಿದರು. ಸರ್ಕಾರದ ಬಳಿ ಹಣದ ಕೊರತೆ ಇಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.

    ಇನ್ನೂ ಸೋಮವಾರ ಮಾತನಾಡಿದ್ದ ಶಾಸಕ ರಾಜು ಕಾಗೆ ಇಂದು ಬೆಂಗಳೂರಲ್ಲಿಯೂ ಸಮರ್ಥನೆ ಮಾಡಿಕೊಂಡಿದ್ದಾರೆ. ನಾನು ಸಿಎಂ ಮೇಲೆ ಮಂತ್ರಿಗಳ ಆರೋಪ ಮಾಡಿಲ್ಲ. ವ್ಯವಸ್ಥೆ ಬಗ್ಗೆ ಅಸಮಾಧಾನ ಇದೆ. ನಿನ್ನೆ ನಾನು ಮಾಡಿದ ಆರೋಪಕ್ಕೆ ನಾನು ಈಗಲೂ ಬದ್ಧ ಎಂದು ಸ್ಪಷ್ಟಪಡಿಸಿದರು. ಮಂತ್ರಿಗಳು ನಮಗೆ ಸಿಗ್ತಿಲ್ಲ, ವಾರದಲ್ಲಿ ಒಂದು ದಿನವಾದರೂ ಮಂತ್ರಿಗಳು ನಮಗೆ ಸಿಗಬೇಕು. ಶಾಸಕರಿಗೆ ಬೆಲೆ ಕೊಡದೇ ಮಂತ್ರಿಗಳು ಹೋಗ್ತಾರೆ. ಯಾವ ಪುರುಷಾರ್ಥಕ ನಾನು ಶಾಸಕನಾಗಿ ಇರಬೇಕು ಎಂದು ಆಕ್ರೋಶ ಹೊರಹಾಕಿದರು. ಇನ್ನೂ ರಾಜು ಕಾಗೆಯ ಆರೋಪವನ್ನ ಸಮರ್ಥಿಸಿಕೊಂಡ ಶಾಸಕ ಬಸವರಾಜ ರಾಯರೆಡ್ಡಿ, ಹಣಕಾಸಿನ ತೊಂದರೆ ಇದೆ, ಗ್ಯಾರಂಟಿ ಅಷ್ಟೇ ಅಲ್ಲ, ಬಿಜೆಪಿ ಅವಧಿಯದ್ದು ಬಾಕಿ ಇತ್ತು. 50 ಕೋಟಿ ರೂ. ಸ್ಪೆಷಲ್ ಗ್ರ‍್ಯಾಂಟ್ ಕೊಡ್ತಾರೆ ಅಂತ ಹೇಳಿದರು.

    ಅಂದಹಾಗೆ 7 ಕಾಂಗ್ರೆಸ್ ಶಾಸಕರದ್ದು ಒಂದೊಂದು ಚಾರ್ಜ್‌ಶೀಟ್‌ ಇದೆ. ಶಾಸಕರ ಒಳಗಿನ ಸಂಕಟ ಹೊರಗೆ ಬಂದಿದ್ದೇಗೆ ಎಂಬ ಚರ್ಚೆ ಜೋರಾಗಿದೆ. ಒಟ್ಟಿನಲ್ಲಿ ಅಸಮಾಧಾನವನ್ನ ಹೀಗೆ ಬಿಟ್ಟರೆ ಶಾಸಕರ ನಂಬರ್ ಡಬಲ್ ಆಗುವ ಆತಂಕ ಇದೆ ಎನ್ನಲಾಗಿದೆ. ಹಾಗಾಗಿ ಮದ್ದು ಅರೆಯಲು ಸಿಎಂ ಪ್ಲ್ಯಾನ್ ಮಾಡಿದ್ದು, ಸಚಿವರು-ಶಾಸಕರ ನಡುವೆ ಸಮನ್ವಯತೆ ಸ್ಪೆಷಲ್ ಕ್ಲಾಸ್ ಸಾಧ್ಯತೆ ಇದೆ. ಇದರಿಂದಾದರೂ ಡ್ಯಾಮೇಜ್ ಕಂಟ್ರೋಲ್ ಆಗುತ್ತಾ ಕಾದುನೋಡಬೇಕಿದೆ.ಇದನ್ನೂ ಓದಿ: ತಿರುಪತಿಗೆ ತೆರಳುವ ಭಕ್ತರಿಗೆ ಗುಡ್ ನ್ಯೂಸ್ – ಸೇವೆಗೆ ಸಿದ್ಧವಾಯ್ತು ಕೃಷ್ಣ ರಾಜೇಂದ್ರ ಕಲ್ಯಾಣ ಮಂಟಪ

  • ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಒಬ್ಬೊಬ್ಬರೇ ಬಾಯಿ ಬಿಡ್ತಾರೆ – ಬಿಎಸ್‌ವೈ

    ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಒಬ್ಬೊಬ್ಬರೇ ಬಾಯಿ ಬಿಡ್ತಾರೆ – ಬಿಎಸ್‌ವೈ

    ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಒಬ್ಬೊಬ್ಬರಾಗಿಯೇ ಮುಂದಿನ ದಿನಗಳಲ್ಲಿ ಬಾಯಿ ಬಿಡುತ್ತಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಇದನ್ನೂ ಓದಿ:ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯಬಾರದು – ಕುಮಾರ್ ಬಂಗಾರಪ್ಪ

    ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಶಾಸಕರಾದ ಬಿ.ಆರ್.ಪಾಟೀಲ್ (BR Patil) ಮತ್ತು ರಾಜು ಕಾಗೆ (Raju Kage) ಆರೋಪಕ್ಕೆ ಬಿಜೆಪಿ (BJP) ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿ.ಆರ್.ಪಾಟೀಲ್ ಅವರು ಮನೆಗಳನ್ನು ಕೊಡುವ ಸಮಯದಲ್ಲಿ ದುಡ್ಡು ಕೊಡದೇ, ಲಂಚ ಕೊಡದೇ ಏನು ಕೆಲಸ ಆಗುವುದಿಲ್ಲ ಎಂದು ಗುರುತರದ ಆರೋಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಕರೆದರೆ ವಾಸ್ತವದ ಸ್ಥಿತಿ ಹೇಳುವುದಾಗಿ ಹೇಳಿದ್ದಾರೆ. ಸಿಎಂ ಅವರೇ ಬಿ.ಆರ್.ಪಾಟೀಲ್ ಅವರ ಬಾಯಿ ಮುಚ್ಚಿಸುವ ಆತಂಕ ನಮಗಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

    ಕೇವಲ ರಾಜು ಕಾಗೆ ಮಾತ್ರವಲ್ಲ, ಹೀಗೆ ಹತ್ತಾರು ಜನರು ಈ ರೀತಿ ಹೇಳುತ್ತಿದ್ದಾರೆ. ಒಬ್ಬೊಬ್ಬರೇ ಬಾಯಿ ಬಿಡುತ್ತಾರೆ. ನೀವೇ ಕಾದು ನೋಡಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.ಇದನ್ನೂ ಓದಿ: ಹಗರಣಗಳೇ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆ: ಕುಮಾರ್ ಬಂಗಾರಪ್ಪ

  • ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನ ಬೀದಿ-ಬೀದಿಗಳಲ್ಲಿ ಮಾತಾಡ್ತಿದ್ದಾರೆ: ಹೆಚ್‌ಡಿಕೆ

    ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನ ಬೀದಿ-ಬೀದಿಗಳಲ್ಲಿ ಮಾತಾಡ್ತಿದ್ದಾರೆ: ಹೆಚ್‌ಡಿಕೆ

    ಬೆಂಗಳೂರು: ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನರು ಬೀದಿ-ಬೀದಿಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದರು.

    ವಸತಿ ಇಲಾಖೆಯಲ್ಲಿ ಅಕ್ರಮ ಸತ್ಯ ಎಂಬ ಕಾಂಗ್ರೆಸ್ (Congress) ಶಾಸಕ ಬಿ.ಆರ್.ಪಾಟೀಲ್ (BR Patil) ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಸರ್ಕಾರದಲ್ಲಿ ಅಕ್ರಮ ಆಗಿಲ್ಲ ಅಂತಲೇ ಹೇಳಬೇಕು. ಅದು ಬಿಟ್ಟು ಇನ್ನೇನು ಹೇಳೋಕೆ ಸಾಧ್ಯ? ಈ ಸರ್ಕಾರದಲ್ಲಿ ಏನು ನಡೆಯುತ್ತಿದೆ ಅಂತ 224 ಶಾಸಕರಿಗೂ ಗೊತ್ತಿದೆ ಎಂದು ಹೇಳಿದರು.ಇದನ್ನೂ ಓದಿ: ವಿಜಯ್ ದಳಪತಿ ಹುಟ್ಟುಹಬ್ಬದ ದಿನವೇ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್

    ಶಾಸಕರು ಅವರ ಕ್ಷೇತ್ರಕ್ಕೆ ಯಾವುದಾದರೂ ಕಾರ್ಯಕ್ರಮಕ್ಕೆ ಹಣ ತೆಗೆದುಕೊಂಡು ಹೋಗಬೇಕಾದ್ರೆ ಎಲ್ಲಾ ಇಲಾಖೆಗಳಲ್ಲೂ ಪೇಮೆಂಟ್ ಆಗಬೇಕು ಇದೇ ಅವರ ಹಣೆಬರಹ ಈ ಸರ್ಕಾರದಲ್ಲಿ ನಡೆಯುತ್ತಿರೋದು ಇದೆ ಎಂದರು.

    ಮುಖ್ಯಮಂತ್ರಿಗೆ ಮಾನ, ಮರ್ಯಾದೆ ಇದ್ದರೆ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ. ಹೆಚ್.ಕೆ ಪಾಟೀಲ್ ಪತ್ರದಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಬರೆದಿದ್ದಾರೆ. ಇದೇ ಪಾಟೀಲ್‌ರನ್ನು 2015ರಲ್ಲಿ ರೆಕಮೆಂಡೇಷನ್ ಮಾಡುತ್ತಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಅದನ್ನು ಇಟ್ಟುಕೊಂಡು ದಿನಾ ಪೂಜೆ ಮಾಡ್ತಿದ್ದಾರೆ. ಈ ಸರ್ಕಾರದಲ್ಲಿ ಮಾತಾಡಲು ಬೇಕಾದಷ್ಟು ವಿಷಯವಿದೆ. ಅದನ್ನು ಮಾತಾಡಿದ್ರೆ ಕೆಸರಿನ ಮೇಲೆ ಕಲ್ಲು ಎರೆಚಿದ ಹಾಗೇ ಆಗುತ್ತದೆ. ಬೀದಿ-ಬೀದಿಯಲ್ಲಿ ಈ ಸರ್ಕಾರದ ಬಗ್ಗೆ ಚರ್ಚೆ ಆಗ್ತಿದೆ. ಎಲ್ಲರಿಗೂ ಗೊತ್ತಿದೆ. ಇವರೆಲ್ಲಾ ಮಂತ್ರಿಗಳಾ? ಇವೆಲ್ಲವು ಇಲಾಖೆಗಳಾ? ಅದೆಂತದೋ ಉಪಮುಖ್ಯಮಂತ್ರಿ ಮಾಡಬೇಕಿತ್ತಂತೆ? ಎಂದು ಜಮೀರ್ ಅಹ್ಮದ್ ವಿರುದ್ಧ ಕಿಡಿಕಾರಿದರು.ಇದನ್ನೂ ಓದಿ: ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ವೀರಶೈವ ಲಿಂಗಾಯತರ ಕೊಡುಗೆ ಅಪಾರ: ಈಶ್ವರ್ ಖಂಡ್ರೆ

  • ರಾಜ್ಯ ಸರ್ಕಾರದ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಹೈಕೋರ್ಟ್ ಮಧ್ಯಂತರ ತಡೆ

    ರಾಜ್ಯ ಸರ್ಕಾರದ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಹೈಕೋರ್ಟ್ ಮಧ್ಯಂತರ ತಡೆ

    -ಅರ್ಜಿ ವಿಚಾರಣೆ ಜೂ.4ಕ್ಕೆ ಮೂಂದೂಡಿದ ಕೋರ್ಟ್

    ಬೆಂಗಳೂರು: ರಾಜ್ಯ ಸರ್ಕಾರದ (State Government) ಸ್ಮಾರ್ಟ್ ಮೀಟರ್ (Smart Meter) ಅಳವಡಿಕೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.ಇದನ್ನೂ ಓದಿ: Pahalgam Attack | ನಿಮ್ಮ ಅವಧಿಯಲ್ಲಿ ಹಿಂದೂಗಳಿಗೆ ಅನ್ಯಾಯ ಆಯ್ತು ಅಂತ ಒಪ್ಪಿಕೊಳ್ಳಿ; ಕೇಂದ್ರದ ವಿರುದ್ಧ ಸಂತೋಷ್ ಲಾಡ್ ಕೆಂಡ

    ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಶ್ನಿಸಿ ಜಯಲಕ್ಷ್ಮಿ ಎಂಬುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠವು ಸ್ಮಾರ್ಟ್ ಮೀಟರ್ ಅಳವಡಿಕೆಗೆ ಮಧ್ಯಂತರ ತಡೆ ನೀಡಿ, ಆಕ್ಷೇಪಣೆ ಸಲ್ಲಿಸಲು ಬೆಸ್ಕಾಂ ವಕೀಲರಿಗೆ ನೋಟಿಸ್ ಜಾರಿ ಮಾಡಿದೆ.

    ಸ್ಮಾರ್ಟ್ ಮೀಟರ್ ಕಡ್ಡಾಯ ಉಚಿತ ಭಾಗ್ಯಗಳನ್ನು ಕೊಟ್ಟಿರುವ ಪರಿಣಾಮಾನಾ? ನಿಮಗೆ ಉಚಿತ ವಿದ್ಯುತ್ ಕೇಳಿದವರು ಯಾರು? ಬಡವರು ಎಲ್ಲಿಗೆ ಹೋಗಬೇಕು ಎಂದು ಸರ್ಕಾರಿ ಪರ ವಕೀಲರನ್ನು ಜಡ್ಜ್ ತರಾಟೆಗೆ ತೆಗೆದುಕೊಂಡರು. ಅರ್ಜಿ ವಿಚಾರಣೆಯನ್ನು ಜೂ.4ಕ್ಕೆ ವಿಚಾರಣೆ ಮುಂದೂಡಿದರು.ಇದನ್ನೂ ಓದಿ: ಸಿಂಧು ನದಿ ಒಪ್ಪಂದ ರದ್ದಿನಿಂದ ಪಾಕ್ ವಿಲವಿಲ – ಭಾರತದ ಉಸಿರು ನಿಲ್ಲಿಸ್ತೇವೆಂದ ಕ್ರಿಮಿ ಹಫೀಜ್

  • ಬಿಬಿಎಂಪಿ ವಿಭಜಿಸುವ ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ – ಕಾಯ್ದೆಯಲ್ಲಿ ಏನಿದೆ?

    ಬಿಬಿಎಂಪಿ ವಿಭಜಿಸುವ ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ – ಕಾಯ್ದೆಯಲ್ಲಿ ಏನಿದೆ?

    ಬೆಂಗಳೂರು: ಬಿಬಿಎಂಪಿ (BBMP) 7 ನಗರ ಪಾಲಿಕೆಗಳಾಗಿ ವಿಭಜನೆ ಮಾಡುವ ಗ್ರೇಟರ್ ಬೆಂಗಳೂರು (Greater Bengaluru) ವಿಧೇಯಕಕ್ಕೆ ರಾಜ್ಯಪಾಲರ (Governer) ಅನುಮೋದನೆ ಸಿಕ್ಕಿದೆ. ಈ ಕುರಿತು ರಾಜ್ಯ ಗೆಜೆಟ್ ಪ್ರಕಟಗೊಂಡಿದೆ.ಇದನ್ನೂ ಓದಿ: ಅಚಾನಕ್ ಗಡಿದಾಟಿದ BSF ಯೋಧನನ್ನು ಬಂಧಿಸಿದ ಪಾಕ್‌

    ಬಜೆಟ್ ಅಧಿವೇಶನದ (Budget Session) ಉಭಯ ಸದನಗಳಲ್ಲಿ ಸುದೀರ್ಘ ಚರ್ಚೆ ಬಳಿಕ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಅಂಗೀಕಾರ ಆಗಿತ್ತು. ಮಾ.17ರಂದು ರಾಜ್ಯಪಾಲರ ಅಂಕಿತಕ್ಕಾಗಿ ರಾಜಭವನಕ್ಕೆ ಕಳುಹಿಸಲಾಗಿತ್ತು. ಆದರೆ ಹೆಚ್ಚಿನ ವಿವರಣೆ ಕೋರಿ ವಿಧೇಯಕವನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ವಾಪಸ್ ಕಳಿಹಿಸಿದ್ದರು. ಬಳಿಕ ಸರ್ಕಾರ ಸ್ಪಷ್ಟನೆಯೊಂದಿಗೆ ಮತ್ತೆ ವಿಧೇಯಕವನ್ನು ರಾಜ್ಯಪಾಲರಿಗೆ ಕಳುಹಿಸಿತ್ತು. ಇದೀಗ ಮತ್ತೆ ಕಳುಹಿಸಿದ್ದ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ರಾಜ್ಯಪಾಲರ ಅಂಕಿತ ಬೆನ್ನಲ್ಲೇ ರಾಜ್ಯ ಗೆಜೆಟ್ ಪ್ರಕಟಗೊಂಡಿದೆ.

    ಗ್ರೇಟರ್ ಬೆಂಗಳೂರು ಕಾಯ್ದೆಯಲ್ಲಿ ಏನಿದೆ?
    * ಇನ್ಮುಂದೆ ಬಿಬಿಎಂಪಿ ಹೆಸರು ಇರಲ್ಲ. ಅದರ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬರಲಿದೆ.
    * ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಿಎಂ ಅಧ್ಯಕ್ಷರು. ಜನ ಪ್ರತಿನಿಧಿಗಳನ್ನು, ವಿವಿಧ ಏಜೆನ್ಸಿಯವರನ್ನು ಈ ಪ್ರಾಧಿಕಾರ ಒಳಗೊಳ್ಳಲಾಗಿದೆ.
    * ಪೊಲೀಸರು, ನೀರು ಸರಬರಾಜು, ಸಾರಿಗೆ, ಅಗ್ನಿಶಾಮಕ, ನಗರ ಯೋಜನೆ ಸೇರಿ ಎಲ್ಲರು ಸಮಿತಿ ಸದಸ್ಯರಾಗಿರುತ್ತಾರೆ.
    * ಇದರಡಿ ಬಿಬಿಎಂಪಿಯನ್ನು 7 ನಗರ ಪಾಲಿಕೆಗಳಾಗಿ ವಿಭಜಿಸಲಾಗುತ್ತದೆ. ಎಷ್ಟು ವಾರ್ಡ್ ಅಂತ ಅಂತಿಮವಾಗಿ ಇನ್ನಷ್ಟೇ ತೀರ್ಮಾನ ಆಗಬೇಕಿದೆ.
    * ಪ್ರತೀ ಪಾಲಿಕೆಗೆ 100 ಮೀರದಂತೆ 200ರ ಒಳಗೆ ವಾರ್ಡ್ಗಳ ಹಂಚಿಕೆ.
    * ಮೇಯರ್/ಉಪಮೇಯರ್ ಅವಧಿ ಈಗಿರುವ 1 ವರ್ಷದ ಬದಲು 2.5 ವರ್ಷಕ್ಕೆ ನಿಗದಿ.
    * ಸದಸ್ಯರ ಅಧಿಕಾರವಧಿ 5 ವರ್ಷಕ್ಕೆ ನಿಗದಿ.
    * ಜನಸಂಖ್ಯೆ 10 ಲಕ್ಷಕ್ಕಿಂತ ಕಡಿಮೆ ಇರಬಾರದು, 300 ಕೋಟಿ ಕನಿಷ್ಠ ಆದಾಯ ಇರಬೇಕು.
    * ಪ್ರತಿ ನಗರಪಾಲಿಕೆಗೆ ಬೆಂಗಳೂರಿನ ಹೆಸರಿನಿಂದಲೇ ಶೀರ್ಷಿಕೆ ಇರಬೇಕು. ಉದಾ-ಬೆಂ.ಉತ್ತರ, ಬೆಂ.ದಕ್ಷಿಣ.
    * ಆರು ತಿಂಗಳ ಮೊದಲು ಮೇಯರ್ ವಿರುದ್ಧ ಅವಿಶ್ವಾಸ ತರಲು ಅವಕಾಶ ಇಲ್ಲ.
    * ಶಾಸಕರು ಮತ ಹಾಕಲು ಅದೇ ಪ್ರದೇಶದಲ್ಲಿಯೇ ವಾಸ ಇರಬೇಕು
    * ಚುನಾವಣೆ ವೇಳೆ ಪಾಲಿಕೆಯ ವಾರ್ಡ್‌ಗಳಲ್ಲಿ ಎಲ್ಲಾ ಜಾತಿಗಳಿಗೆ ಮೀಸಲಾತಿ
    * ಸ್ಥಳೀಯ ಸಮಿತಿಗಳು ಶಾಸಕರ ಅಧ್ಯಕ್ಷತೆಯಲ್ಲಿ ರಚನೆಯಾಗಲಿದೆ.ಇದನ್ನೂ ಓದಿ: ಚಾಮರಾಜನಗರ | ಸಂಪುಟ ಸಭೆಯಲ್ಲಿ 3,647 ಕೋಟಿ ವೆಚ್ಚದ ಯೋಜನೆಗಳಿಗೆ ಅಸ್ತು