Tag: state flag

  • ಗಡಿ ಜಿಲ್ಲೆಯಲ್ಲಿ ಕನ್ನಡದ ಕಂಪು- 1 ಕಿ.ಮೀ ಉದ್ದದ ನಾಡ ಧ್ವಜದ ಝೇಂಕಾರ

    ಗಡಿ ಜಿಲ್ಲೆಯಲ್ಲಿ ಕನ್ನಡದ ಕಂಪು- 1 ಕಿ.ಮೀ ಉದ್ದದ ನಾಡ ಧ್ವಜದ ಝೇಂಕಾರ

    ಬೀದರ್: 1 ಕಿ.ಮೀ ಉದ್ದದ ನಾಡ ಧ್ವಜ ಮೆರವಣಿಗೆ ಮಾಡುವ ಮೂಲಕ ಇಂದು ಗಡಿ ಜಿಲ್ಲೆ ಬೀದರ್ ನಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ಕಲ್ಯಾಣ ಕರ್ನಾಟಕ ಉತ್ಸವವನ್ನು ಆಚರಿಸಲಾಯಿತು.

    ಜೈ ಕರ್ನಾಟಕ ಸಂಘಟನೆ ವತಿಯಿಂದ ಇಂದು ಬೀದರ್ ನಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ಕಲ್ಯಾಣ ಕರ್ನಾಟಕ ಉತ್ಸವವನ್ನು ಆಯೋಜಿಸಲಾಗಿತ್ತು. ಜೈ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಶ್ರೀಮಂತ ಸಪಾಟೆಯವರ ನೇತೃತ್ವದಲ್ಲಿ ಈ ಉತ್ಸವ ನಡೆಯುತ್ತಿದ್ದು, ಉತ್ಸವದ ನಿಮಿತ್ಯ ಕಾರ್ಯಕ್ರಮದಲ್ಲಿ 1 ಕಿ.ಮೀ ಉದ್ದದ ನಾಡ ಧ್ವಜದ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

    ಬೀದರ್‍ನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಆರಂಭವಾದ ಧ್ವಜ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕನ್ನಡದ ಕಂಪನ್ನು ಪಸರಿಸಿತು. ಶಾಲಾ ವಿದ್ಯಾರ್ಥಿಗಳು ನಾಡ ಧ್ವಜವನ್ನು ಹಿಡಿದು ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ರಸ್ತೆ ಉದ್ದಕ್ಕೂ ಮಕ್ಕಳು ಹಿಡಿದು ಹಾಗುತ್ತಿದ್ದ ನಾಡ ಧ್ವಜ, ಅದರ ಜೊತೆಗೆ ಕೋಲಾಟ, ಡೊಳ್ಳು ಕುಣಿತ, ಕನ್ನಡದ ಕುರಿತು ಗೀತೆಗಳು ಜನರ ಗಮನ ಸೆಳೆದವು.

  • ಹೊಸ ನಾಡ ಧ್ವಜ ವಿನ್ಯಾಸಕ್ಕೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಕಿಡಿ

    ಹೊಸ ನಾಡ ಧ್ವಜ ವಿನ್ಯಾಸಕ್ಕೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಕಿಡಿ

    ಬೆಂಗಳೂರು: ರಾಜ್ಯ ಸರ್ಕಾರದಿಂದ ಹೊಸ ನಾಡ ಧ್ವಜ ವಿನ್ಯಾಸಕ್ಕೆ ಸಿದ್ಧತೆ ನಡೆದಿದ್ದು, ಈ ಬಗ್ಗೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿ ಕಾರಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಸರ್ಕಾರಕ್ಕೆ ಧ್ವಜ ಬದಲಾವಣೆ ಕೆಲಸ ಬೇಕಾಗಿಲ್ಲ. ಹಳೆ ಧ್ವಜಕ್ಕೆ ಮತ್ತೆ ಬಿಳಿ ಬಟ್ಟೆ ಹಾಕಿಸಿ ಗಂಡಭೇರುಂಡ ಚಿಹ್ನೆ ಹಾಕಿದ್ದಾರೆ. ಇದ್ರಿಂದ ಏನು ಪ್ರಯೋಜನ? ಸಮಿತಿಯವರಿಗೆ ತಲೆ ಇಲ್ವಾ ಎಂದು ಪ್ರಶ್ನಿಸಿದ್ರು.

    ಸಮಿತಿಯಲ್ಲಿರುವವರಿಗೆ ಎಲ್ಲರಿಗೂ ಸ್ವಪ್ರತಿಷ್ಟೆ. ಸಾಹಿತ್ಯ ಪರಿಷತ್‍ನವರಿಗೆ ಏನೂ ಗೊತ್ತಿಲ್ಲ. ನಾಡಿನ ಜನರ ಮನಸಿನಲ್ಲಿರುವ ಬಾವುಟ ಹಳದಿ ಕೆಂಪು. ನಿಮ್ಮ ಹೊಸ ವಿನ್ಯಾಸ ನಾವು ಒಪ್ಪಿಕೊಳ್ಳಲ್ಲ ಎಂದರು. ಕಮಿಟಿಯಲ್ಲಿ ನಮ್ಮನ್ನು ಹಾಕಬೇಕಾಗಿತ್ತು. ಆದ್ರೆ ನಮ್ಮನ್ನು ಕಮಿಟಿಯಿಂದ ದೂರ ಇಟ್ಟಿದ್ದಾರೆ. ಸರ್ಕಾರ ಹೊಸ ಧ್ವಜ ತಂದ್ರೂ ನಾವು ಬಿಡಲ್ಲ. ಈ ಧ್ವಜ ತಂದ್ರೆ ಕನ್ನಡಿಗರು ದಂಗೆ ಏಳ್ತಾರೆ. ಸಮಿತಿಯವರಿಗೆ ಒಬ್ಬರಿಗೂ ಬುದ್ಧಿಯಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಿಗೆ ಕನ್ನಡ ಧ್ವಜದ ಇತಿಹಾಸ ಗೊತ್ತಿಲ್ಲ ಅಂತ ವಾಗ್ದಾಳಿ ನಡೆಸಿದ್ರು.