Tag: state Excise Department

  • ಅಕ್ರಮವಾಗಿ ಮದ್ಯ ಸಾಗಾಟ – ಲಾರಿಯನ್ನು ವಶಕ್ಕೆ ಪಡೆದ ಅಬಕಾರಿ ಇಲಾಖೆ

    ಅಕ್ರಮವಾಗಿ ಮದ್ಯ ಸಾಗಾಟ – ಲಾರಿಯನ್ನು ವಶಕ್ಕೆ ಪಡೆದ ಅಬಕಾರಿ ಇಲಾಖೆ

    ಬೆಂಗಳೂರು: ಸಿಮೆಂಟ್ ತುಂಬಿದ್ದ ಲಾರಿಯಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮಾಲು ಸಮೇತವಾಗಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಹೊಸಕೋಟೆ ಸಮೀಪದ ಕಮಸಂದ್ರ ಗ್ರಾಮದ ಅಬಕಾರಿ ಅಧಿಕಾರಿಗಳು ಲಾರಿಯನ್ನು ತಡೆದು ತಪಾಸಣೆ ಮಾಡಿದಾಗ ಲಾರಿಯಲ್ಲಿ ಅಕ್ರಮವಾಗಿ ಮದ್ಯ ಸಾಗಟ ಮಾಡುತ್ತಿರುವುದು ಕಂಡುಬಂದಿದೆ. ತಕ್ಷಣ ಲಾರಿ ಚಾಲಕ ಶಿವಕುಮಾರ್‍ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಲಾಕ್‍ಡೌನ್ ಹಿನ್ನೆಲೆ ಆಂಧ್ರಪ್ರದೇಶದ ಕರ್ನೂಲ್‍ನಿಂದ ತಮಿಳುನಾಡಿನ ಸೇಲಂಗೆ ಮದ್ಯವನ್ನು ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಮಾಡಲು ಮುಂದಾಗಿದ್ದ ವಿಚಾರ ಬಹಿರಂಗಗೊಂಡಿದೆ.

    ಅದೇ ರೀತಿ ಸಿಮೆಂಟ್ ತುಂಬಿದ್ದ ಲಾರಿಯಲ್ಲಿ ಅಕ್ರಮವಾಗಿ 18 ಲಕ್ಷ 73 ಸಾವಿರ ಮೌಲ್ಯದ ಮದ್ಯವನ್ನು ತೆಗೆದುಕೊಂಡು ಬರುತ್ತಿದ್ದಾಗ ಖಚಿತ ಮಾಹಿತಿ ಕಲೆಹಾಕಿದ ಹೊಸಕೋಟೆ ಅಬಕಾರಿ ಇಲಾಖೆಯ ಅಧಿಕಾರಿಗಳಾದ ದಿಲೀಪ್ ಕುಮಾರ್ ಹಾಗೂ ರಾಜಶೇಖರ್ ನೇತೃತ್ವದ ಅಧಿಕಾರಿಗಳ ತಂಡ ವಾಹನವನ್ನು ಪರಿಶೀಲನೆ ನಡೆಸಿದಾಗ ಕ್ಯಾಬಿನ್‍ನಲ್ಲಿ ಬರೋಬ್ಬರಿ ಮದ್ಯದ ಬಾಕ್ಸ್‍ಗಳನ್ನು ಶೇಖರಣೆ ಮಾಡಿದ್ದು, ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮಾಲಿನ ಸಮೇತವಾಗಿ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಕ್ಕೆ ಒಪ್ಪಿಸಿದ್ದಾರೆ. ಇದನ್ನು ಓದಿ: ಶಿಕಾರಿಗೆ ತೆರಳಿದ್ದ ಗೆಳೆಯರ ನಡುವೆ ಗಲಾಟೆ- ಕಾಲಿಗೆ ಗುಂಡು ಹೊಡೆದ ಸ್ನೇಹಿತ