Tag: state budget 2023

  • ಆರೋಗ್ಯ ಇಲಾಖೆಗೆ 14 ಸಾವಿರ ಕೋಟಿ ಮೀಸಲು- ಏನೇನು ಹೊಸ ಯೋಜನೆಗಳಿವೆ?

    ಆರೋಗ್ಯ ಇಲಾಖೆಗೆ 14 ಸಾವಿರ ಕೋಟಿ ಮೀಸಲು- ಏನೇನು ಹೊಸ ಯೋಜನೆಗಳಿವೆ?

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ಮಂಡಿಸಿರುವ ಬಜೆಟ್‍ನಲ್ಲಿ (Karnataka Budget 2023) ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ 14 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ.

    ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಬಡವರಿಗೆ ಉಚಿತ ಡಯಾಲಿಸಿಸ್ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಏಕಬಳಕೆಯ ಡಯಾಲೈಸರ್ ಗಳನ್ನು ಎಲ್ಲಾ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಅಳವಡಿಸುವ ಮೂಲಕ ಸೇವೆಯ ಗುಣಮಟ್ಟವನ್ನು ಸುಧಾರಿಸಲಾಗುವುದು. ಇದರೊಂದಿಗೆ ರಾಜ್ಯದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ 173 ಡಯಾಲಿಸಿಸ್ ಕೇಂದ್ರಗಳನ್ನು 219ಕ್ಕೆ ಹೆಚ್ಚಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಒಟ್ಟು 92 ಕೋಟಿ ರೂ. ಗಳನ್ನು ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

    ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಈಗಾಗಲೇ 23 ಮೇಲ್ದರ್ಜೆಗೇರಿಸಲಾಗಿದೆ. ಪಿಹೆಚ್‍ಸಿ ಗಳನ್ನು ಈ ಸಿಹೆಚ್‍ಸಿಗಳನ್ನು ಕಾರ್ಯಗತಗೊಳಿಸಲು ಬೇಕಿರುವ ಅಗತ್ಯ ಉಪಕರಣಗಳು ಮತ್ತು ಮಾನವ ಸಂಪನ್ಮೂಲಗಳನ್ನು ಒದಗಿಸಲು 70 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದರು. ಇದನ್ನೂ ಓದಿ: Karnataka Budget 2023: ಸಿನಿಮಾ ರಂಗಕ್ಕೆ ಸಿಕ್ಕಿದ್ದೇನು? ಸಂಪೂರ್ಣ ಮಾಹಿತಿ

    ರಾಜ್ಯದಲ್ಲಿ ನವಜಾತ ಶಿಶುಗಳು, ಮಕ್ಕಳು, ಹದಿಹರೆಯದವರು, ಗರ್ಭಿಣಿಯರು, ತಾಯಂದಿರು ಮತ್ತು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆಯನ್ನು ನಿವಾರಿಸಲು ಸಮಗ್ರವಾದ ಪರೀಕ್ಷೆ, ಚಿಕಿತ್ಸೆ, ಅರಿವು ಮೂಡಿಸುವಿಕೆ ಮತ್ತು ಆರೋಗ್ಯ ಕಾರ್ಯಕರ್ತರ ಸಾಮರ್ಥ್ಯ ಬಲವರ್ಧನೆಗೆ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು. ಇದಕ್ಕಾಗಿ 25 ಕೋಟಿ ರೂ. ಗಳನ್ನು ಒದಗಿಸಲಾಗುವುದು ಎಂದು ಸಿಎಂ ಹೇಳಿದರು.

    ರಾಜ್ಯವು ಕಳೆದ ವರ್ಷ ನಿಮ್ಹಾನ್ಸ್ ಸಹಯೋಗದೊಂದಿಗೆ ಮೆದುಳಿನ ಆರೋಗ್ಯ ಆರೈಕೆ ಸೇವೆಗಳನ್ನು ಉತ್ತೇಜಿಸಲು ಮೂರು ಜಿಲ್ಲೆಗಳಲ್ಲಿ ‘ಬ್ರೈನ್ ಹೆಲ್ತ್ ಇನಿಶಿಯೇಟಿವ್’ (Brain Health Initiative) ಎಂಬ ವಿಶಿಷ್ಟ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಯಶಸ್ವಿ ಪ್ರಾಯೋಗಿಕ ಅನುಷ್ಠಾನದ ನಂತರ ಈ ಯೋಜನೆಯನ್ನು ಇಡೀ ರಾಜ್ಯಕ್ಕೆ ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ 25 ಕೋಟಿ ರೂ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

    “ಆಶಾಕಿರಣ” ಎಂಬ ಕಾರ್ಯಕ್ರಮದಡಿಯಲ್ಲಿ ಅಭಿಯಾನ ರೂಪದಲ್ಲಿ ಕಣ್ಣಿನ ಶಿಬಿರಗಳು, ಕನ್ನಡಕ ವಿತರಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಳ ಚಟುವಟಿಕೆಗಳನ್ನು ಹಂತ ಹಂತವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಸಲಾಗುವುದು. 2023-24ನೇ ಸಾಲಿನಲ್ಲಿ ಚಿತ್ರದುರ್ಗ, ರಾಯಚೂರು, ಉತ್ತರ ಕನ್ನಡ ಮತ್ತು ಮಂಡ್ಯ ಜಿಲ್ಲೆಗಳಲ್ಲಿ 21 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು ಎಂದರು.

    ಸಮಾಜದ ದುರ್ಬಲ ವರ್ಗಗಳಲ್ಲಿ ಕ್ಷಯರೋಗವನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆಹಚ್ಚಲು ಸಮುದಾಯ ಆಧಾರಿತ ತಪಾಸಣಾ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು. ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ, ಪ್ರತಿ ಜಿಲ್ಲೆಗೆ ಎರಡರಂತೆ ಕೈಚಾಲಿತ-ಕ್ಷ-ಕಿರಣ (Hand Held X-ray) ಉಪಕರಣವನ್ನು ಒದಗಿಸಲಾಗುವುದು. ಪ್ರತಿ X-ray ಯಂತ್ರಕ್ಕೆ 20 ಲಕ್ಷ ರೂ. ದಂತೆ ಒಟ್ಟು ಮೂರು ಕೋಟಿ ರೂ. ಒದಗಿಸಲಾಗುವುದು ಎಂದು ಸಿಎಂ ಘೋಷಿಸಿದರು.

    ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳನ್ನು ಪತ್ತೆಹಚ್ಚಲು ಮತ್ತು ಅಗತ್ಯ ಔಷಧಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲು ಪ್ರಾಯೋಗಿಕವಾಗಿ ರಾಜ್ಯದ ನಾಲ್ಕು ವಿಭಾಗಗಳ ಎಂಟು ಜಿಲ್ಲೆಗಳಲ್ಲಿ ಸಮಗ್ರ ತಪಾಸಣೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುವುದು ಎಂದರು.

    ಕರ್ನಾಟಕ ರತ್ನ ಡಾ. ಪುನೀತ್ ರಾಜ್‍ಕುಮಾರ್‍ರವರ ಸ್ಮರಣಾರ್ಥವಾಗಿ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು Automated External Defibrillators (AED) ಗಳನ್ನು ಜಿಲ್ಲಾ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲಾಗುವುದು. ಇದಕ್ಕಾಗಿ ಆರು ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

    ರಾಜ್ಯದಲ್ಲಿ 15 ಸಿ.ಟಿ ಸ್ಕ್ಯಾನಿಂಗ್ ಮತ್ತು ಆರು ಎಂ.ಆರ್.ಐ ಸ್ಕ್ಯಾನಿಂಗ್ ಕೇಂದ್ರಗಳನ್ನು ಕೆಲವು ಜಿಲ್ಲಾಸ್ಪತ್ರೆಗಳಲ್ಲಿ ಈಗಾಗಲೇ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಿ, ಉಚಿತ ಪ್ರಯೋಗಾಲಯ ಸೇವೆಗಳನ್ನು ನೀಡಲಾಗುತ್ತಿದೆ. ಈ ಸೇವೆಗಳನ್ನು ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಿಗೂ ವಿಸ್ತರಿಸಲಾಗುವುದು. ಹಾಗೂ ರಾಜ್ಯವು ಈಗಾಗಲೇ ಮಾಹಿತಿ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವಂತೆ ಆರೋಗ್ಯ ತಂತ್ರಜ್ಞಾನದ ಆವಿಷ್ಕಾರಗಳ ಅಳವಡಿಕೆಯಲ್ಲಿಯೂ ಪ್ರಮುಖ ಕೇಂದ್ರವಾಗುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಎಂಟು ಕೋಟಿ ರೂ.ಗಳ ವೆಚ್ಚದಲ್ಲಿ ಕರ್ನಾಟಕ ಆರೋಗ್ಯ ತಂತ್ರಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಲಾಗುವುದು ಎಂದು ನುಡಿದರು.

    ರಾಜ್ಯದಲ್ಲಿ ಆಯುಷ್ಮಾನ್ ಭಾರತ್ (Ayushman bharat) ಡಿಜಿಟಲ್ ಮಿಷನ್ ಯೋಜನೆ ಹಾಗೂ ಆರೋಗ್ಯ ದಾಖಲಾತಿಗಳ ಡಿಜಿಟಲೀಕರಣ ಸೇರಿದಂತೆ ಇಲಾಖೆಯ ಇನ್ನಿತರ ಎಲ್ಲಾ ಅಂತರ್ಜಾಲ ಉಪಕ್ರಮಗಳನ್ನು ಅನುಷ್ಠಾನ ಮಾಡಲು ಕರ್ನಾಟಕ ಡಿಜಿಟಲ್ ಹೆಲ್ತ್ ಸೊಸೈಟಿಯನ್ನು ಸ್ಥಾಪನೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ವಿವರಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Karnataka Budget 2023: ವಕ್ಫ್ ಆಸ್ತಿ ರಕ್ಷಣೆ, ಅಭಿವೃದ್ಧಿಗೆ 50 ಕೋಟಿ

    Karnataka Budget 2023: ವಕ್ಫ್ ಆಸ್ತಿ ರಕ್ಷಣೆ, ಅಭಿವೃದ್ಧಿಗೆ 50 ಕೋಟಿ

    ಬೆಂಗಳೂರು: ರಾಜ್ಯದಲ್ಲಿರುವ 40 ಸಾವಿರಕ್ಕೂ ಅಧಿಕ ವಕ್ಫ್ (Waqf Property) ಆಸ್ತಿಗಳ ರಕ್ಷಣೆ ಹಾಗೂ ಅಭಿವೃದ್ಧಿಗೆ 50 ಕೋಟಿ ರೂ. ಹಣವನ್ನು ಸಿದ್ದರಾಮಯ್ಯ ಬಜೆಟ್‍ನಲ್ಲಿ (Karnataka Budget 2023) ಮೀಸಲಿಟ್ಟಿದ್ದಾರೆ.

    ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು (1 ರಿಂದ 8ನೇ ತರಗತಿಯವರೆಗೆ) ಕೇಂದ್ರ ಸರ್ಕಾರವು ಸ್ಥಗಿತಗೊಳಿಸಿರುತ್ತದೆ. ಇದರಿಂದ ಅಲ್ಪಸಂಖ್ಯಾತ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವುದನ್ನು ಮನಗಂಡು ಈ ಯೋಜನೆಯನ್ನು ಮುಂದುವರಿಸಲು 60 ಕೋಟಿ ರೂ. ಅನುದಾನವನ್ನು ಒದಗಿಸಲಿದೆ ಎಂದು ಸಿಎಂ ಹೇಳಿದರು.

    ಅಲ್ಪಸಂಖ್ಯಾತರ ಪದವಿ ಪೂರ್ವ ವಸತಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದಿಂದಲೇ ನೀಟ್, ಜೆಇಇ, ಸಿಇಟಿ ಹಾಗೂ ಇತರೆ ಪ್ರವೇಶ ಪರೀಕ್ಷೆಗಳ ತಯಾರಿಗಾಗಿ ಪ್ರತಿಷ್ಠಿತ ಸಂಸ್ಥೆಗಳಿಂದ 2 ವರ್ಷಗಳ ತರಬೇತಿಯನ್ನು ನೀಡಲು 8 ಕೋಟಿ ರೂ. ಗಳ ಅನುದಾನ ನೀಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದರು. ಇದನ್ನೂ ಓದಿ: ಮತ್ತಷ್ಟು ದುಬಾರಿಯಾಗಲಿದೆ ಎಣ್ಣೆ – ಈಗ ಎಷ್ಟು ಸುಂಕವಿದೆ? ಎಷ್ಟು ಏರಿಕೆಯಾಗುತ್ತೆ?

    ಬೆಂಗಳೂರು ನಗರದಲ್ಲಿರುವ ಹಜ್ ಭವನದಲ್ಲಿ (Haj Bhavan) ಐಎಎಸ್ (IAS) ಹಾಗೂ ಕೆಎಎಸ್ (KAS) ಮತ್ತು ಇತರೆ ಸ್ಪರ್ದಾತ್ಮಕ ಪರೀಕ್ಷೆಗಳ ತರಬೇತಿಗಳನ್ನು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಪ್ರಾರಂಭ ಮಾಡಲಾಗುವುದು. ವಿದೇಶದಲ್ಲಿ ವ್ಯಾಸಂಗ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶೂನ್ಯ ಬಡ್ಡಿಯಲ್ಲಿ 20 ಲಕ್ಷ ಸಾಲ ನೀಡಲಾಗುವುದಾಗಿ ಇದೇ ವೇಳೆ ತಿಳಿಸಿದರು.

    126 ಶಾದಿ ಮಹಲ್ (Shaadi Mahal) ಮತ್ತು ಸಮುದಾಯ ಭವನ ನಿರ್ಮಾಣಕ್ಕೆ 54 ಕೋಟಿ ಮೀಸಲಿಡಲಾಗುವುದು. ಅಲ್ಪಸಂಖ್ಯಾತ 10 ಸಾವಿರ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಸಲುವಾಗಿ 20% ರಷ್ಟು ಅಥವಾ ಗರಿಷ್ಠ 1 ಲಕ್ಷದವರೆಗೆ ಸಹಾಯಧನ ನೀಡಲಾಗುವುದು ಎಂದು ಸಿಎಂ ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 8 ತಿಂಗಳು ಎಲ್ಲಾ ಶಾಸಕರು ಸಹಕರಿಸಿ- ಸಿದ್ದರಾಮಯ್ಯ ಮನವಿ

    8 ತಿಂಗಳು ಎಲ್ಲಾ ಶಾಸಕರು ಸಹಕರಿಸಿ- ಸಿದ್ದರಾಮಯ್ಯ ಮನವಿ

    ಬೆಂಗಳೂರು: ಎಂಟು ತಿಂಗಳು ಎಲ್ಲಾ ಶಾಕರು ಸಹಕರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮನವಿ ಮಾಡಿದ್ದಾರೆ.

    ಬಿಜೆಟ್ ಮಂಡನೆಗೂ ಮುನ್ನ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ (CLP Meeting) ಮಾತನಾಡಿದ ಸಿಎಂ, ಗ್ಯಾರಂಟಿಗಳ ಜಾರಿ ಕಾರಣದಿಂದಾಗಿ ಮೊದಲಿನಂತೆ ಶಾಸಕರಿಗೆ (MLA) ನೂರಾರು ಕೋಟಿ ಅನುದಾನ ಕೊಡುವುದು ಕಷ್ಟವಾಗುತ್ತದೆ. 5-10 ಕೋಟಿ ಅನುದಾನಕ್ಕೇನು ಸಮಸ್ಯೆ ಇಲ್ಲ, ಅದನ್ನ ಕೊಡುತ್ತೇನೆ. ಹೀಗಾಗಿ ಮುಂದಿನ ಬಜೆಟ್ ವರೆಗೆ 8 ತಿಂಗಳ ಕಾಲ ಸಹಕರಿಸುವಂತೆ ಮನವಿ ಮಾಡಿದರು. ಇದನ್ನೂ ಓದಿ: Karnataka Budget 2023: ಬೆಂಗಳೂರಿಗೆ ಸಿಂಹಪಾಲು ಸಾಧ್ಯತೆ- ಗರಿಗೆದರಿದ ಹಲವು ನಿರೀಕ್ಷೆಗಳು

    ಗ್ಯಾರಂಟಿ ಯೋಜನೆಗಳೆ ನಮಗೆ ಆಕ್ಸಿಜನ್. ಲೋಕಸಭಾ ಚುನಾವಣೆವರೆಗೆ (Loksabha Election) ಗ್ಯಾರಂಟಿ ಯೋಜನೆಗಳೆ ನಮ್ಮನ್ನು ಕೈ ಹಿಡಿಯಬೇಕಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚೆಚ್ಚು ಜನರಿಗೆ ತಿಳಿಸಿಕೊಡಿ. ಜನರ ಮನಸ್ಸಿಗೆ ಮುಟ್ಟುವಂತೆ ಅದನ್ನ ಪ್ರಚಾರ ಮಾಡಿ ಅದೇ ನಿಮ್ಮನ್ನು ಕೈ ಹಿಡಿಯುತ್ತೆ ಎಂದು ಇದೇ ವೇಳೆ ಸಿಎಂ ಅವರು ಶಾಸಕರಿಗೆ ಕಿವಿಮಾತು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Karnataka Budget 2023: ಬೆಂಗಳೂರಿಗೆ ಸಿಂಹಪಾಲು ಸಾಧ್ಯತೆ- ಗರಿಗೆದರಿದ ಹಲವು ನಿರೀಕ್ಷೆಗಳು

    Karnataka Budget 2023: ಬೆಂಗಳೂರಿಗೆ ಸಿಂಹಪಾಲು ಸಾಧ್ಯತೆ- ಗರಿಗೆದರಿದ ಹಲವು ನಿರೀಕ್ಷೆಗಳು

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು 14ನೇಯ ಇಂದು ಬಜೆಟ್ ಮಂಡನೆ (Karnataka Budget 2023) ಮಾಡುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿಗರಲ್ಲಿ ಹಲವು ನಿರೀಕ್ಷೆಗಳು ಹುಟ್ಟಿಕೊಂಡಿವೆ.

    ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು `ಬ್ರ್ಯಾಂಡ್ ಬೆಂಗಳೂರು’ ಬಿಲ್ಡ್ ಗೆ ಉತ್ಸುಕತೆ ತೋರಿದ್ದಾರೆ. ಡಿಕೆಶಿ ನಗರಾಭಿವೃದ್ಧಿ ಖಾತೆ ವಹಿಸಿಕೊಂಡಿರೋ ಹಿನ್ನಲೆಯಲ್ಲಿ ಡಿಸಿಎಂ ಹೊಸ ಮೆಟ್ರೋ (Metro) ಮಾರ್ಗಗಳ ಬಗ್ಗೆ ಉತ್ಸಾಹ ತೋರಿಸಿದ್ದಾರೆ. ಹೀಗಾಗಿ ಮೆಟ್ರೋ ನಿಗಮವು ಮೂರು ಮಾರ್ಗಗಳ ಬಗ್ಗೆ ಬೇಡಿಕೆ ಇಟ್ಟಿದ್ದು, ಹೀಗಾಗಿ ಹೊಸ ಮೆಟ್ರೋ ಮಾರ್ಗವನ್ನು ಸಿಎಂ ಇಂದು ಘೋಷಣೆ ಮಾಡ್ತಾರಾ ಎಂಬ ಕುತೂಹಲ ಹುಟ್ಟಿದೆ. ವೈಟ್ ಫೀಲ್ಡ್ – ಹೊಸಕೋಟೆ 17 ಕಿ.ಮೀ ಮೆಟ್ರೋ ಮಾರ್ಗ, ಒಳ ವರ್ತುಲ ರಸ್ತೆಯಲ್ಲಿ 35 ಕಿ.ಮೀ ಮೆಟ್ರೋ ಮಾರ್ಗ ಹಾಗೂ ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಕಾಡುಗೋಡಿ ವರೆಗೆ 25 ಕಿ.ಮೀ ಮಾರ್ಗ ವಿಸ್ತರಣೆ ಮಾಡುವ ನಿರೀಕ್ಷೆ ಇದೆ.

    ಬೆಂಗಳೂರು ನಗರಕ್ಕೆ‌ (Bengaluru) ಹೊಸ ಫ್ಲೈಓವರ್ ಗಳ ನಿರೀಕ್ಷೆಯೂ ಇದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ಹೊಸ ಫ್ಲೈಓವರ್ (New Flyover) ಘೋಷಣೆ ಮಾಡುವ ಸಾಧ್ಯತೆಗಳಿವೆ. ಈ ಹಿಂದಿನ ಸರ್ಕಾರ 17 ಹೊಸ ಫ್ಲೈಓವರ್ ಒಪ್ಪಿಗೆ ಸೂಚಿಸಿತ್ತು. ಹೀಗಾಗಿ ಇಂದಿನ ಬಜೆಟ್‍ನಲ್ಲಿ ಈ ಬಗ್ಗೆ ಘೋಷಣೆ ಆಗೋ ಸಾಧ್ಯತೆ ಹೆಚ್ಚಿದೆ.

    ಇಂದಿನ ಬಜೆಟ್ ನಲ್ಲಿ ಸುರಂಗ ಮಾರ್ಗ (Subway)  ಘೋಷಣೆ ಮಾಡುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ 100 ಕಿ.ಮೀ ಸುರಂಗ ನಿರ್ಮಾಣದ ಚರ್ಚೆ ಮಾಡಲಾಗಿದೆ. 100 ರಲ್ಲಿ ಅರ್ಧದಷ್ಟಾದ್ರೂ ಮೊದಲ ಭಾಗವಾಗಿ ಘೋಷಣೆ ಸಾಧ್ಯತೆ ಇದೆ. ಈಗಾಗಲೇ ಸುರಂಗ ಮಾರ್ಗ ನಿರ್ಮಾಣ ಸಂಸ್ಥೆಗಳ ಜೊತೆಗೆ ಡಿಸಿಎಂ ಚರ್ಚೆ ಮಾಡಿದ್ದಾರೆ. ಬೆಂಗಳೂರನ್ನು ಟ್ರಾಫಿಕ್ (Bengaluru Traffic) ಮುಕ್ತ ಮಾಡಲು ಡಿಕೆಶಿ ಪಣತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪೂರ್ಣಪ್ರಮಾಣದಲ್ಲಿ ಘೋಷಣೆ ಆಗದಿದ್ರೂ 50 ಕಿ.ಮೀ ಘೋಷಣೆ ಮಾಡಬಹುದು ಎನ್ನಲಾಗಿದ್ದು, ಈ ಬಗ್ಗೆ ಈಗಾಗಲೇ ಸಿಎಂ ಬಳಿ ಡಿಸಿಎಂ ಮನವಿ ಕೂಡ ಮಾಡಿದ್ದಾರೆ. ಇದನ್ನೂ ಓದಿ: ಗ್ಯಾರಂಟಿಗಳ ಜಾರಿ ನಡುವೆ ಹೊಸ ಭರವಸೆ ಹುಟ್ಟಿಸುತ್ತಾ ರಾಜ್ಯ ಸರ್ಕಾರದ ಬಜೆಟ್?

    ಇತ್ತ ಬಿಬಿಎಂಪಿ (BBMP) ಕೂಡ ಇಂದಿನ ಬಜೆಟ್ ಬಗ್ಗೆ ಬಾರಿ ನಿರೀಕ್ಷೆಯಲ್ಲಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚುವರಿ ಅನುದಾನಕ್ಕೆ ಪಾಲಿಕೆ ಆಡಳಿತ ವರ್ಗ ಪ್ರಸ್ತಾವನೆ ಸಲ್ಲಿಸಿದೆ. ಈ ಬಾರಿ 7,500ಕೋಟಿ ಅನುದಾನದ ಬಿಡುಗಡೆಗೆ ಬೇಡಿಕೆ ಇಟ್ಟಿದೆ. ಬಿಜೆಪಿ ಸರ್ಕಾರದಲ್ಲಿ (BJP Govt) ನಿರೀಕ್ಷಿತ ಪ್ರಮಾಣದ ಅನುದಾನ ಸಿಗದೇ ನಿರಾಸೆಗೊಂಡಿದ್ದ ಬಿಬಿಎಂಪಿ, ಈ ಬಾರಿಯ ಸಿದ್ದರಾಮಯ್ಯ ಬಜೆಟ್‍ನಲ್ಲಿ ಬಿಬಿಎಂಪಿ ಜಾಕ್ ಪಾಟ್ ಹೊಡೆಯುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಕಳೆದ ಬಾರಿ ಕೇವಲ 3,500 ಕೋಟಿ ಬಿಬಿಎಂಪಿ ಗೆ ಅನುದಾನ ಬಿಡುಗಡೆಯಾಗಿತ್ತು. ಆದರೆ ಅನೇಕ ಕಾಮಗಾರಿ ಹಾಗೂ ಯೋಜನೆಗೆ 3,500 ಕೋಟಿಗೂ ಅಧಿಕ ಹಣ ವೆಚ್ಚವಾಗಿತ್ತು. ಹೀಗಾಗಿ ಈ ಬಾರಿ 7,500ಕೋಟಿ ಅನುದಾನದ ನಿರೀಕ್ಷೆಯ ಬೇಡಿಕೆಯನ್ನು ಬಿಬಿಎಂಪಿ ಇಟ್ಟಿದೆ. ಇನ್ನು ಇಂದಿರಾ ಕ್ಯಾಂಟೀನ್ (Indira Canteen) ರೀ ಲಾಂಚ್ ಘೋಷಣೆ ಮಾಡುವ ಸಾಧ್ಯತೆಗಳಿವೆ. ಜೊತೆಗೆ ಹೆಚ್ಚುವರಿ 200 ಕೋಟಿ ಅನುದಾನದ ನಿರೀಕ್ಷೆ ಇದ್ದು, ಹೊಸ ವಾರ್ಡ್ ಗಳಿಗೆ ಹೊಸ ಕ್ಯಾಂಟೀನ್ ಘೋಷಣೆಯಾಗುವನಿರೀಕ್ಷೆಗಳಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]