Tag: State BJP

  • ನಾಳೆಯಿಂದ ಎರಡು ದಿನ ಬಿಜೆಪಿ ಚಿಂತನ ಮಂಥನ

    ನಾಳೆಯಿಂದ ಎರಡು ದಿನ ಬಿಜೆಪಿ ಚಿಂತನ ಮಂಥನ

    ಬೆಂಗಳೂರು: ನಾಳೆ ಮತ್ತು ನಾಡಿದ್ದು ಬಿಜೆಪಿಯ ಅಭ್ಯಾಸವರ್ಗ ನಡೆಯಲಿದೆ ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ (N.Ravikumar) ತಿಳಿಸಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಭ್ಯಾಸವರ್ಗದ ಉದ್ಘಾಟನೆಗೆ ಕೇಂದ್ರ ಮಾನವ ಸಂಪನ್ಮೂಲ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇರಲಿದ್ದಾರೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್, ರಾಜ್ಯದ ಪ್ರಭಾರಿ ಡಾ.ರಾಧಾಮೋಹನ್ ಅಗರವಾಲ್ ಅವರೂ ಆಗಮಿಸುತ್ತಾರೆ ಎಂದು ವಿವರಿಸಿದರು.ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ಗುಂಡಿಗಳನ್ನ ಮುಚ್ಚಲು ಡೆಡ್‌ಲೈನ್‌ ಫಿಕ್ಸ್‌ ಮಾಡಿದ ಡಿಸಿಎಂ ಡಿಕೆಶಿ

    ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರಿಗೆ 75 ವರ್ಷ ತುಂಬಿದೆ. 2047ರ ವೇಳೆಗೆ ದೇಶವನ್ನು ವಿಕಸಿತ ಭಾರತವಾಗಿ ಮಾಡಲು, ಭಾರತವನ್ನು ನಂ.1 ದೇಶವಾಗಿ ಮಾಡಲು ಅತ್ಯಂತ ಉತ್ಸಾಹ, ಉಲ್ಲಾಸದಿಂದ ಕೆಲಸ ಮಾಡಿ ಅಭಿವೃದ್ಧಿ ಪಥದೆಡೆಗೆ ಒಯ್ಯುತ್ತಿದ್ದಾರೆ. ಅವರ ಹುಟ್ಟುಹಬ್ಬದ ನಿಮಿತ್ತವಾಗಿ ದೇಶಾದ್ಯಂತ ಸೇವಾ ಚಟುವಟಿಕೆಗಳನ್ನು ನಾವು ಮಾಡುತ್ತಿದ್ದೇವೆ ಎಂದರು.

    ಇವತ್ತು ರಾಜ್ಯಾದ್ಯಂತ ರಕ್ತದಾನ ಶಿಬಿರಗಳು, ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಸ್ವಚ್ಛತಾ ಕಾರ್ಯಕ್ರಮಗಳು, ವಸ್ತು ಪ್ರದರ್ಶನ, ನೂರಾರು-ಸಾವಿರಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ವಿವರಿಸಿದರು. ಮೋದಿಜೀ ಅವರು 25 ವರ್ಷದ ತರುಣರಂತೆ ಕೆಲಸ ಮಾಡುತ್ತಿದ್ದಾರೆ. ಅವರ ನಿವೃತ್ತಿಯ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಕುರುಬರನ್ನು ಎಸ್‌ಟಿಗೆ ಸೇರಿಸಿ ನಮ್ಮನ್ನು ತುಳಿಯುವ ಹುನ್ನಾರ: ಸಿಎಂ ವಿರುದ್ಧ ವಾಲ್ಮೀಕಿ ನಾಯಕ ಒಕ್ಕೂಟ ಆಕ್ರೋಶ

     

  • ಬಿಎಸ್‍ವೈ ಇರೋವಾಗ್ಲೇ ಉತ್ತರಾಧಿಕಾರಿಗೆ ತಲಾಶ್- ಡಿಸಿಎಂ ಸೃಷ್ಟಿಯಿಂದ ನಾಯಕತ್ವ ಟೆಸ್ಟ್

    ಬಿಎಸ್‍ವೈ ಇರೋವಾಗ್ಲೇ ಉತ್ತರಾಧಿಕಾರಿಗೆ ತಲಾಶ್- ಡಿಸಿಎಂ ಸೃಷ್ಟಿಯಿಂದ ನಾಯಕತ್ವ ಟೆಸ್ಟ್

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದಲ್ಲಿ ಇರುವಾಗಲೇ ಉತ್ತರಾಧಿಕಾರಿ ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.

    ನಮಗೆ ಬಿ.ಎಸ್.ಯಡಿಯೂರಪ್ಪ ಸರ್ಕಾರಕ್ಕಿಂತ ನಾಯಕತ್ವವೇ ಮುಖ್ಯ. ಯಡಿಯೂರಪ್ಪನವರ ನಂತರ ಬಿಜೆಪಿ ನಡೆಸುವ ಜನ ಗಟ್ಟಿ ಇರಬೇಕು ಅಂತ ಹೈಕಮಾಂಡ್ ಹೊಸ ವರಸೆ ಆರಂಭಿಸಿದೆ. ಹೀಗಾಗಿ ಮೂವರು ನಾಯಕರಿಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಬಿ.ಎಸ್.ಯಡಿಯೂರಪ್ಪ ಅವರು ಹೆಚ್ಚು ಅಂದರೆ ಈ ಅವಧಿಯ ಸರ್ಕಾರಕ್ಕೆ ಮಾತ್ರ ಸೀಮಿತ ಎನ್ನುವ ಲೆಕ್ಕಚಾರಕ್ಕೆ ಬಿಜೆಪಿ ಹೈಕಮಾಂಡ್ ಬಂದಂಗಿದೆ. ಬಿಎಸ್‍ವೈ ಸದ್ಯ ಬಿಜೆಪಿಯ ಮಾಸ್ ಲೀಡರ್. ಅವರ ನಂತರ ಬಿಜೆಪಿಗೆ ಮಾಸ್ ಲೀಡರ್ ಕೊರತೆ ಎದುರಾಗುವ ಸಾಧ್ಯತೆ ಇದೆ. ಈ ಕೊರತೆ ನಿವಾರಿಸಲು ಗಟ್ಟಿ ನಾಯಕತ್ವ ಅನಿವಾರ್ಯ ಎಂಬುದನ್ನು ಮನಗಂಡಿರುವ ಹೈಕಮಾಂಡ್, ಬಿಎಸ್‍ವೈ ನಂತರದ ನಾಯಕತ್ವ ಸೃಷ್ಟಿಗೆ ಕೈ ಹಾಕಿದೆ.

    ವಿಶೇಷವೆಂದರೆ ಬಿಎಸ್‍ವೈ ಅವರ ಆಪ್ತರೇ ಉತ್ತರಾಧಿಕಾರಿ ಪ್ರಯೋಗ ಶಾಲೆಯಲ್ಲಿ ಪ್ರಯೋಗಕ್ಕೆ ಒಳಗಾಗುತ್ತಿದ್ದಾರೆ. ಸಿಎಂ ಬಿಎಸ್‍ವೈ ಜೊತೆ ಚರ್ಚಿಸಿಯೇ ಹೈಕಮಾಂಡ್ ಈ ಪ್ರಯೋಗಕ್ಕೆ ಮುಂದಾಗಿದೆ. ಹೀಗಾಗಿ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ್ ಹಾಗೂ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಲು ನಿರ್ಧರಿಸಲಾಗಿದೆ. ಈ ವಿನೂತನ ತಂತ್ರಗಾರಿಕೆಯ ಪ್ರಯೋಗ ಶಾಲೆಯಲ್ಲಿ ಯಾರು ಪಾಸ್ ಆಗುತ್ತಾರೋ ಅವರೇ ರಾಜ್ಯ ಬಿಜೆಪಿಯ ಮುಂದಿನ ಲೀಡರ್ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಈ ನಡುವೆ ಹೈಕಮಾಂಡ್ ಪ್ರಯೋಗದಿಂದ ಇಬ್ಬರು ನಾಯಕರಿಗೆ ಖುಷಿಯಾಗಿದೆ. ಬಿಎಸ್‍ವೈ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಅವರಿಗೆ ನಾಯಕತ್ವ ತಪ್ಪುತ್ತೆ ಎನ್ನುವುದು ಕೆಲವರಿಗೆ ಖುಷಿಗೆ ಕಾರಣವಾಗಿದೆಯಂತೆ. ಆರ್.ಅಶೋಕ್ ಅವರಿಗೆ ನಾಯಕತ್ವ ತಪ್ಪುತ್ತೆ ಎನ್ನುವ ಸಂತಸದಲ್ಲಿ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಇದ್ದಾರೆ ಎನ್ನಲಾಗಿದೆ.