Tag: state bank of india

  • ದಾವಣಗೆರೆ | ಬ್ಯಾಂಕ್‍ನಲ್ಲಿದ್ದ 13 ಕೋಟಿ ಮೌಲ್ಯದ ಚಿನ್ನಾಭರಣ ಹೊತ್ತೊಯ್ದ ಕಳ್ಳರು!

    ದಾವಣಗೆರೆ | ಬ್ಯಾಂಕ್‍ನಲ್ಲಿದ್ದ 13 ಕೋಟಿ ಮೌಲ್ಯದ ಚಿನ್ನಾಭರಣ ಹೊತ್ತೊಯ್ದ ಕಳ್ಳರು!

    – 17.705 ಕೆಜಿ ಚಿನ್ನ ಕಳ್ಳತನ
    – ಶ್ವಾನದಳದ ಕಣ್ತಪ್ಪಿಸಲು ಖಾರದ ಪುಡಿ ಬಳಕೆ!

    ದಾವಣಗೆರೆ: ನ್ಯಾಮತಿಯ ಎಸ್‍ಬಿಐ ಬ್ಯಾಂಕ್‍ನಲ್ಲಿದ್ದ 12.95 ಕೋಟಿ ರೂ. ಮೌಲ್ಯದ 17.705 ಕೆಜಿ ಚಿನ್ನಾಭರಣವನ್ನು (Gold) ಕಳ್ಳರು ಹೊತ್ತೊಯ್ದಿದ್ದಾರೆ ಎಂದು ಬ್ಯಾಂಕ್ ಮ್ಯಾನೇಜರ್ ಸುನೀಲ್ ಕುಮಾರ್ ಯಾದವ್ ಮಾಹಿತಿ ನೀಡಿದ್ದಾರೆ.

    ನಗರದ ನೆಹರು ರಸ್ತೆಯಲ್ಲಿರುವ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (State Bank of India) ಶಾಖೆಯಲ್ಲಿ ಕಿಟಕಿ ಸರಳುಗಳನ್ನು ಮುರಿದು ಲಾಕರ್‌ನಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ಕಳ್ಳರು ಹೊತ್ತೊಯ್ದಿದ್ದರು. ಎರಡು ದಿನಗಳ ಹಿಂದೆ ಕಳ್ಳರು ಈ ಕೃತ್ಯ ಎಸಗಿರುವ ಬಗ್ಗೆ ನ್ಯಾಮತಿ ಪೊಲೀಸರು (Police) ಶಂಕೆ ವ್ಯಕ್ತಪಡಿಸಿದ್ದಾರೆ. ಶನಿವಾರ ಹಾಗೂ ಭಾನುವಾರ ಎರಡು ದಿನ ಬ್ಯಾಂಕ್ ರಜೆ ಇದ್ದ ಕಾರಣ ಶುಕ್ರವಾರ ರಾತ್ರಿ ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.

    ಕಳ್ಳರು ಗುರುತು ಪತ್ತೆಯಾಗದಂತೆ ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಸಮೇತ ಪರಾರಿಯಾಗಿದ್ದರು. ಅಲ್ಲದೇ ಶ್ವಾನದಳದ ಶ್ವಾನಗಳಿಗೆ ವಾಸನೆ ಗ್ರಹಿಸಲು ಸಾಧ್ಯವಾಗದಂತೆ ಬ್ಯಾಂಕ್‌ನ ಒಳಗಡೆ ಖಾರದ ಪುಡಿ ಎರಚಿದ್ದಾರೆ. ಕಳ್ಳರನ್ನು ಹಿಡಿಯಲು ಎಎಸ್ಪಿ ಸ್ಯಾಮ್ ವರ್ಗೀಸ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ.

    ಐದು ವರ್ಷಕ್ಕೊಮ್ಮೆ ಬ್ಯಾಂಕ್ ಕಳ್ಳತನ!
    ಹೊನ್ನಾಳಿ- ನ್ಯಾಮತಿಯಲ್ಲಿ ಐದು ವರ್ಷಕ್ಕೊಮ್ಮೆ ಬ್ಯಾಂಕ್ ಕಳ್ಳತನವಾಗುತ್ತಿದೆ. 2014ರಲ್ಲಿ ಅರಕೆರೆ ಬಳಿಯ ಕರ್ನಾಟಕ ಬ್ಯಾಂಕ್‌ನಲ್ಲಿ ಕಳ್ಳತನ ನಡೆದಿತ್ತು. 2019ರಲ್ಲಿ ಅದೇ ಬ್ಯಾಂಕ್ ಮತ್ತೆ ಕಳ್ಳತನ ಮಾಡಿ 2 ಕೋಟಿ ರೂ. ಮೌಲ್ಯದ ನಗದು ಚಿನ್ನಾಭರಣ ಕಳವು ಮಾಡಲಾಗಿತ್ತು. ಈಗ 2024 ರಲ್ಲಿ ನ್ಯಾಮತಿಯಲ್ಲಿ ಎಸ್‌ಬಿಐ ಬ್ಯಾಂಕ್ ಕಳ್ಳತನ ನಡೆದಿದೆ.

  • ದಾವಣಗೆರೆ | ಎಸ್​ಬಿಐಗೆ ಕನ್ನ – ನಗದು, ಚಿನ್ನಾಭರಣದ ಜೊತೆಗೆ ಸಿಸಿಟಿವಿ ಡಿವಿಆರ್‌ ಹೊತ್ತೊಯ್ದ ಕಳ್ಳರು!

    ದಾವಣಗೆರೆ | ಎಸ್​ಬಿಐಗೆ ಕನ್ನ – ನಗದು, ಚಿನ್ನಾಭರಣದ ಜೊತೆಗೆ ಸಿಸಿಟಿವಿ ಡಿವಿಆರ್‌ ಹೊತ್ತೊಯ್ದ ಕಳ್ಳರು!

    ದಾವಣಗೆರೆ: ಬ್ಯಾಂಕ್‌ನ ಕಿಟಕಿ ಸರಳುಗಳನ್ನು ಮುರಿದು ಲಾಕರ್‌ನಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ಕಳ್ಳರು ಹೊತ್ತೊಯ್ದ ಘಟನೆ ನ್ಯಾಮತಿ ಪಟ್ಟಣದಲ್ಲಿ ನಡೆದಿದೆ.

    ನಗರದ ನೆಹರು ರಸ್ತೆಯಲ್ಲಿರುವ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (State Bank of India) ಶಾಖೆಯಲ್ಲಿ ಎರಡು ದಿನಗಳ ಹಿಂದೆ ಕಳ್ಳರು ಈ ಕೃತ್ಯ ಎಸಗಿರುವ ಬಗ್ಗೆ ನ್ಯಾಮತಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶನಿವಾರ ಹಾಗು ಭಾನುವಾರ ಎರಡು ದಿನ ಬ್ಯಾಂಕ್ ರಜೆ ಇದ್ದ ಕಾರಣ ಶುಕ್ರವಾರ ರಾತ್ರಿ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಕಿಟಕಿಯ ಸರಳುಗಳನ್ನು ಮುರಿದು ಬ್ಯಾಂಕ್‌ಗೆ ನುಗ್ಗಿರುವ ಕಳ್ಳರು ಲಾಕರ್​ ಒಡೆದು ಅದರಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಹಣ ದೋಚಿದ್ದಾರೆ. ಇಷ್ಟೇ ಅಲ್ಲದೇ ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಸಮೇತ ಪರಾರಿಯಾಗಿದ್ದಾರೆ.

    ಇಂದು (ಸೋಮವಾರ) ಬೆಳಗ್ಗೆ ಕರ್ತವ್ಯಕ್ಕೆ ಆಗಮಿಸಿದ ಬ್ಯಾಂಕ್ ಸಿಬ್ಬಂದಿ ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕೋಟ್ಯಂತರ ಮೌಲ್ಯದ ಚಿನ್ನಾಭರಣ ಹಾಗೂ ಹಣ ದರೋಡೆಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

  • ಗ್ರಾಹಕರ ಗಿರವಿ ಚಿನ್ನ ಎಗರಿಸಿ ನಕಲಿ ಚಿನ್ನ ತಂದಿಟ್ಟು 1 ಕೋಟಿ ರೂ. ವಂಚಿಸಿದ ಬ್ಯಾಂಕ್ ನೌಕರ ಅರೆಸ್ಟ್

    ಗ್ರಾಹಕರ ಗಿರವಿ ಚಿನ್ನ ಎಗರಿಸಿ ನಕಲಿ ಚಿನ್ನ ತಂದಿಟ್ಟು 1 ಕೋಟಿ ರೂ. ವಂಚಿಸಿದ ಬ್ಯಾಂಕ್ ನೌಕರ ಅರೆಸ್ಟ್

    ಹಾಸನ: ಗ್ರಾಹಕರು ಬ್ಯಾಂಕ್‍ನಲ್ಲಿ (Bank) ಗಿರಿವಿ ಇಟ್ಟಿದ್ದ ಚಿನ್ನವನ್ನು ಕಳ್ಳತನ ಮಾಡಿ, ನಕಲಿ ಚಿನ್ನ (Gold) ತಂದಿಟ್ಟ ಆರೋಪದ ಮೇಲೆ ಬ್ಯಾಂಕ್ ಸಿಬ್ಬಂದಿಯೊಬ್ಬನನ್ನು ಬಂಧಿಸಿದ ಪ್ರಕರಣ ಹಾಸನದ (Hassan) ಬೆಳವಾಡಿಯಲ್ಲಿ (Belavadi) ನಡೆದಿದೆ.

    ಬಂಧಿತ ಆರೋಪಿಯನ್ನು ಲವ ಬಿ.ಎನ್ ಎಂದು ಗುರುತಿಸಲಾಗಿದೆ. ಆರೋಪಿ 1 ಕೋಟಿ ರೂ. ಮೌಲ್ಯದ ಚಿನ್ನವನ್ನು ಕಳ್ಳತನ ಮಾಡಿದ್ದಾನೆ. ಅಲ್ಲದೇ ಆ ಜಾಗದಲ್ಲಿ ನಕಲಿ ಚಿನ್ನವನ್ನು ತಂದಿಟ್ಟಿದ್ದ ಎಂದು ಬ್ಯಾಂಕ್‍ನ ಪ್ರಧಾನ ವ್ಯವಸ್ಥಾಪಕಿ ಅನುರಾಧ ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಆಸ್ತಿ ವಿವಾದ ವ್ಯಕ್ತಿಗೆ ಚಾಕು ಇರಿತ – 10 ದಿನಗಳ ಕಾಲ ಒದ್ದಾಡಿ ಪ್ರಾಣಬಿಟ್ಟ

    ಆರೋಪಿ ಬೆಳವಾಡಿ ಗ್ರಾಮದ ಎಸ್‍ಬಿಐ (SBI) ಶಾಖೆಯಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಬ್ಯಾಂಕ್ ಅಧಿಕಾರಿಗಳ ಜೊತೆ ವಿಶ್ವಾಸಗಳಿಸಿ 2013 ರಿಂದ ಚಿನ್ನದ ಸಾಲದ ದಾಸ್ತಾನು ಉಸ್ತುವಾರಿ ವಹಿಸಿಕೊಂಡಿದ್ದ. ಇದನ್ನೇ ದುರ್ಬಳಕೆ ಮಾಡಿಕೊಂಡು ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

    ಇತ್ತೀಚೆಗೆ ಗಿರವಿ ವಿಭಾಗದ ಚಿನ್ನವನ್ನು ಪರಿಶೀಲನೆ ಮಾಡಿದ ವೇಳೆ ವಂಚನೆ ಬಯಲಾಗಿದೆ. 30 ಪ್ಯಾಕೆಟ್ ಚಿನ್ನದಲ್ಲಿ 18 ಪ್ಯಾಕೆಟ್ ಚಿನ್ನದಲ್ಲಿ ನಕಲಿ ಚಿನ್ನ ಇರುವುದು ಪತ್ತೆಯಾಗಿತ್ತು. ಅದರಲ್ಲಿ 2 ಪ್ಯಾಕೆಟ್ ಚಿನ್ನವನ್ನು ಸಂಪೂರ್ಣ ಕಳ್ಳತನ ಮಾಡಲಾಗಿದೆ. ಉಳಿದ ಪ್ಯಾಕೆಟ್‍ಗಳಲ್ಲಿ ಕೆಲವು ಚಿನ್ನದ ಆಭರಣವನ್ನು ಕಳ್ಳತನ ಮಾಡಲಾಗಿದೆ. ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ (FIR) ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಮಾವಿನ ಹಣ್ಣಿಗಾಗಿ ನಡೆದ ಗಲಾಟೆ- ಸಹೋದರರರನ್ನು ಬಡಿದು ಕೊಂದ ದುಷ್ಕರ್ಮಿಗಳು

  • 21 ಬ್ಯಾಂಕ್ ಗಳಿಗೆ 25,775 ಕೋಟಿ ರೂ. ವಂಚನೆ!- ಯಾವ ಬ್ಯಾಂಕಿಗೆ ಎಷ್ಟು ಕೋಟಿ ನಷ್ಟ?

    21 ಬ್ಯಾಂಕ್ ಗಳಿಗೆ 25,775 ಕೋಟಿ ರೂ. ವಂಚನೆ!- ಯಾವ ಬ್ಯಾಂಕಿಗೆ ಎಷ್ಟು ಕೋಟಿ ನಷ್ಟ?

    ಇಂದೋರ್: 2017-18 ನೇ ಸಾಲಿನ ಆರ್ಥಿಕ ವರ್ಷದಲ್ಲಿ 21 ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಒಟ್ಟು 25,775 ಕೋಟಿ ರೂ. ವಂಚನೆಯಾಗಿದೆ ಎಂದು ಮಾಹಿತಿ ಹಕ್ಕಿನ ಅಡಿ ಬಹಿರಂಗವಾಗಿದೆ.

    ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಹೆಚ್ಚಿನ 6,461.13 ಕೋಟಿ ರೂ. ವಂಚನೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್‍ಟಿಐ ಕಾರ್ಯಕರ್ತ ರಾಜಶೇಖರ ಗಾವದ್ ಅವರಿಗೆ ಮಾಹಿತಿ ನೀಡಿದೆ.

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2,390.75 ಕೋಟಿ ರೂ., ಬ್ಯಾಂಕ್ ಆಫ್ ಇಂಡಿಯಾ ಗೆ 2,224.86 ಕೋಟಿ ರೂ., ಬ್ಯಾಂಕ್ ಆಫ್ ಬರೋಡಾಗೆ 1,928.25 ಕೋಟಿ ರೂ., ಅಲಹಾಬಾದ್ ಬ್ಯಾಂಕ್ ಗೆ 1,520.37 ಕೋಟಿ ರೂ., ಆಂಧ್ರ ಬ್ಯಾಂಕ್ ಗೆ 1,303.30 ಕೋಟಿ ರೂ. ಮತ್ತು ಯುಕೋ ಬ್ಯಾಂಕ್ ಗೆ 1,224.64 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ.

    ಪಟ್ಟಿಯಲ್ಲಿ ಕೊಟ್ಟಿರುವ ಮಾಹಿತಿಯು 1 ಲಕ್ಷ ರೂ ಗಿಂತ ಮೇಲ್ಪಟ್ಟು ಆಗಿರುವ ವಂಚನೆಗಳಾಗಿವೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ಯಾವ ರೀತಿಯ ವಂಚನೆಗಳು ಅಥವಾ ವಂಚನೆಗಳ ಸಂಖ್ಯೆಯನ್ನು ಆರ್ ಬಿಐ ಬಹಿರಂಗ ಮಾಡಿಲ್ಲ.

    ಇನ್ನುಳಿದಂತೆ ಕಾರ್ಪೊರೇಷನ್ ಬ್ಯಾಂಕ್ ಗೆ 970.89 ಕೋಟಿ ರೂ. ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಗೆ 880.53 ಕೋಟಿ ರೂ. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಗೆ 650.28 ಕೋಟಿ ರೂ. ಮತ್ತು ಸಿಂಡಿಕೇಟ್ ಬ್ಯಾಂಕ್ ಗೆ 455.05 ಕೋಟಿ ರೂ. ನಷ್ಟವಾಗಿದೆ.

    ಕೆನರಾ ಬ್ಯಾಂಕ್ ಗೆ 190.77 ಕೋಟಿ ರೂ. ಪಂಜಾಬ್ ಮತ್ತು ಸಿಂದ್ ಬ್ಯಾಂಕ್ ಗೆ 90.01 ಕೋಟಿ ರೂ. ದೇನಾ ಬ್ಯಾಂಕ್ ಗೆ 89.25 ಕೋಟಿ ರೂ. ವಿಜಯ ಬ್ಯಾಂಕ್ ಗೆ 28.58 ಕೋಟಿ ರೂ. ಮತ್ತು ಇಂಡಿಯನ್ ಬ್ಯಾಂಕ್ ಗೆ 24.23 ಕೋಟಿ ರೂ. ವಂಚನೆಯಾಗಿದೆ ಎಂದು ಆರ್ ಟಿ ಐ ಮಾಹಿತಿಯಲ್ಲಿ ಬಹಿರಂಗವಾಗಿದೆ.

    ಮಾಹಿತಿ ಹಕ್ಕಿನ ಅಡಿ ಬೆಳಕಿಗೆ ಬಂದ ಉತ್ತರಕ್ಕೆ ಆರ್ಥಿಕ ತಜ್ಞ ಜಯಂತಿಲಾಲ್ ಭಂಡಾರಿ ಪ್ರತಿಕ್ರಿಯಿಸಿ, ವಂಚನೆಗೊಳಗಾಗಿರುವ 21 ಸಾರ್ವಜನಿಕ ವಲಯದ ಬ್ಯಾಂಕ್ ಗಳು ತೀರ ಸಂಕಷ್ಟದಲ್ಲಿವೆ. ಬ್ಯಾಂಕ್ ಗಳಿಗೆ ಆಗಿರುವ ಅಪಾರ ಪ್ರಮಾಣದ ವಂಚನೆಯಿಂದ ಮುಂದೆ ಸಾಲಗಳನ್ನು ನೀಡಲು ತೊಂದರೆಯಾಗುತ್ತದೆ. ಇದು ದೇಶದ ಆರ್ಥಿಕತೆಗೆ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಜನ್‍ಧನ್ ಎಫೆಕ್ಟ್: ಗ್ರಾಮೀಣ ಭಾಗದಲ್ಲಿ ಮದ್ಯ, ತಂಬಾಕು ಖರೀದಿ ಇಳಿಕೆ

    ಜನ್‍ಧನ್ ಎಫೆಕ್ಟ್: ಗ್ರಾಮೀಣ ಭಾಗದಲ್ಲಿ ಮದ್ಯ, ತಂಬಾಕು ಖರೀದಿ ಇಳಿಕೆ

    ನವದೆಹಲಿ: ಜನ್‍ಧನ ಖಾತೆ ಆರಂಭದಿಂದ ಗ್ರಾಮೀಣ ಭಾಗದ ಜನರ ಆದಾಯದ ಉಳಿತಾಯ ಪ್ರಮಾಣ ಹೆಚ್ಚಳವಾಗಿದ್ದು. ಅದರಲ್ಲೂ ಮದ್ಯ, ತಂಬಾಕು ಉತ್ಪನ್ನ ಕೊಳ್ಳುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ ಆರ್ಥಿಕ ಸಂಶೋಧನಾ ವಿಭಾಗ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದ್ದೆ. ಗ್ರಾಮೀಣ ಭಾಗದಲ್ಲಿ ಪ್ರಧಾನ ಮಂತ್ರಿ ಜನ್‍ಧನ್ ಯೋಜನೆ(ಪಿಎಂಜೆಡಿವೈ)ಯ ಮೂಲಕ ಬ್ಯಾಂಕ್‍ನಲ್ಲಿ ಖಾತೆಯನ್ನು ಆರಂಭಸಿದ ನಂತರ ಜನರ ಉಳಿತಾಯ ಪ್ರಮಾಣ ಹೆಚ್ಚಳವಾಗಿದೆ ಎಂಬ ಅಭಿಪ್ರಾಯವನ್ನು ಸಾರ್ವಜನಿಕ ಹಣಕಾಸು ಮತ್ತು ನೀತಿ ರಾಷ್ಟ್ರೀಯ ಸಂಸ್ಥೆಯ ಪ್ರಾಧ್ಯಾಪಕರಾದ ಎನ್.ಆರ್.ಭಾನುಮೂರ್ತಿ ವ್ಯಕ್ತಪಡಿಸಿದ್ದಾರೆ.

    ಸಮೀಕ್ಷೆಯಲ್ಲಿ ತಿಳಿದು ಬಂದಿರುವ ಮತ್ತೊಂದು ಪ್ರಮುಖ ಅಂಶವೆಂದರೆ ಗ್ರಾಮೀಣ ಭಾಗದಲ್ಲಿ ಹಣದುಬ್ಬರ ಪ್ರಮಾಣವು ಇಳಿಕೆಯಾಗಿದೆ. ಪಿಎಂಜೆಡಿವೈ ಯೋಜನೆಯಿಂದ ದೇಶಾದ್ಯಂತ ತೆರೆಯಲಾಗಿರುವ ಒಟ್ಟು ಖಾತೆಗಳಲ್ಲಿ ಶೇ.50 ರಷ್ಟು ಖಾತೆಗಳು ಗ್ರಾಮೀಣ ಭಾಗದಲ್ಲಿ ಆರಂಭವಾಗಿದ್ದು, ಸ್ಥಳೀಯ ಮಟ್ಟದಲ್ಲಿ ಎಲ್ಲರಿಗೂ ಬ್ಯಾಂಕ್‍ಗಳ ಉತ್ತಮ ಸೌಲಭ್ಯ ಲಭ್ಯವಾಗುತ್ತಿದೆ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಕಳೆದ ನವೆಂಬರ್ ತಿಂಗಳಿಗೆ ಕೊನೆಯ ವೇಳೆ ಸುಮಾರು 30 ಕೋಟಿಗೂ ಹೆಚ್ಚು ಜನ್‍ಧನ್ ಖಾತೆಗಳನ್ನು ತೆರೆಯಲಾಗಿದೆ. ಇದರಲ್ಲಿ ಪ್ರಮುಖವಾಗಿ ಕೇಂದ್ರ ಸರ್ಕಾರ ನೋಟ್ ಬ್ಯಾನ್ ತೀರ್ಮಾನವನ್ನು ಪ್ರಕಟಿಸಿದ ನಂತರ ಅತೀ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ ಎಂಬುವುದು ಗಮನಿಸಬೇಕಾದ ಅಂಶವಾಗಿದೆ.

    ದೇಶಾದ್ಯಂತ ತೆರೆಯಲಾಗಿರುವ ಒಟ್ಟು ಖಾತೆಗಳಲ್ಲಿ ಶೇ.75 ರಷ್ಟು ಪ್ರಮಾಣ ಆಂದರೆ 23 ಕೋಟಿ ಬ್ಯಾಂಕ್ ಖಾತೆಗಳನ್ನು ಕೇವಲ 10 ರಾಜ್ಯಗಳಲ್ಲಿ ಹಂಚಿಕೊಂಡಿವೆ. ಇದರಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು ಸುಮಾರು 4.7 ಕೋಟಿ ಖಾತೆಗಳನ್ನು ಆರಂಭಿಸಲಾಗಿದೆ. ಇನ್ನುಳಿದಂತೆ ಬಿಹಾರ ರಾಜ್ಯದಲ್ಲಿ 3.2 ಕೋಟಿ ಖಾತೆಗಳು, ಪಶ್ಚಿಮ ಬಂಗಾಳದಲ್ಲಿ 2.9 ಕೋಟಿ ಖಾತೆಗಳನ್ನು ತೆರೆಯಲಾಗಿದೆ.

    ಜನ್‍ಧನ್ ಯೋಜನೆ ಜಾರಿಗೆ ಬಂದ ನಂತರ ಕರ್ನಾಟಕದಲ್ಲಿ ತೆರೆಯಲಾದ ಒಟ್ಟು ಖಾತೆಗಳಲ್ಲಿ ಶೇ.61 ರಷ್ಟು ಖಾತೆಗಳು ಪಿಎಂಜೆಡಿವೈ ಯೋಜನೆಯ ಅಡಿಯಲ್ಲಿ ಆರಂಭಿಸಿರುವ ಖಾತೆಗಳಾಗಿದ್ದು, ದೇಶಾದ್ಯಂತ ಆರಂಭಿಸಲಾದ ಒಟ್ಟು ಖಾತೆಗಳ ಪ್ರಮಾಣದಲ್ಲಿ ಕರ್ನಾಟಕವು ಆರನೇ ಸ್ಥಾನವನ್ನು ಪಡೆದಿದೆ.

    ಜನ್‍ಧನ್ ಖಾತೆಯ ಮೂಲಕ ಆರಂಭಿಸಲಾಗಿರುವ ಬ್ಯಾಂಕ್ ಖಾತೆಗಳ ಪರಿಣಾಮವಾಗಿ ಗ್ರಾಮೀಣ ಭಾಗದ ಜನರ ಉಳಿತಾಯ ಪ್ರಮಾಣ ಹೆಚ್ಚಳವಾಗಿದ್ದು, ಜನರು ಮಾದಕ ದ್ರವ್ಯಗಳನ್ನು ಕೊಳ್ಳಲು ಖರ್ಚು ಮಾಡುವ ಪ್ರಮಾಣವು ಕಡಿಮೆಯಾಗಿದೆ ಎಂದು ಸಂಶೋಧನೆಯ ಕೈಗೊಂಡಿರುವ ಎಸ್‍ಬಿಐ ಆರ್ಥಿಕ ವಿಭಾಗದ ಮುಖ್ಯಸ್ಥ ಸೌಮ್ಯ ಕಾಂತಿ ಘೋಷ್ ತಿಳಿಸಿದ್ದಾರೆ.

    ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ್ ರಾಜ್ಯಗಳಲ್ಲಿ ಮನೆಯಲ್ಲಿ ಆರೋಗ್ಯಕ್ಕೆ ಸಂಬಂಧಸಿದ ವೈದ್ಯಕೀಯ ವೆಚ್ಚಗಳು ಅಧಿಕವಾಗಿದೆ ಎಂಬ ಅಂಶವು ಬೆಳಕಿಗೆ ಬಂದಿದೆ. ಅಲ್ಲದೇ ನೋಟು ನಿಷೇಧದ ನಂತರ ಜನರು ಖಚ್ಚು ಮಾಡುವ ವಿಧಾನದಲ್ಲೂ ಸುಧಾರಣೆಗಳಾಗಿವೆ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಮಾಜಿ ಮುಖ್ಯ ಸಂಖ್ಯಾಶಾಸ್ತ್ರಜ್ಞ ಪ್ರೊ. ನಾಬ್ ಸೇನ್ ತಿಳಿಸಿದರು.

    ಸಂಶೋಧನೆಯ ಮುಂದಿನ ಭಾಗವಾಗಿ ಜನ್‍ಧನ್ ಖಾತೆಯಲ್ಲಿ ಉಳಿತಾಯವಾದ ಹಣದ ಚಲಾವಣೆಯ ಪ್ರಮಾಣದ ಕುರಿತು ಹೆಚ್ಚಿನ ಅಧ್ಯಯನಗಳನ್ನು ನಡೆಸಲಾಗುವುದು. ಅಲ್ಲದೇ ಮಾರುಕಟ್ಟೆಯ ಹಲವು ಉತ್ಪನ್ನಗಳ ಮೌಲ್ಯಗಳ ಮೇಲು ಇದರ ಪ್ರಭಾವ ಉಂಟಾಗಿದೆ ಎಂದು ಇನ್ಫೋಸಿಸ್ ನ ಅಂತರಾಷ್ಟ್ರೀಯ ಆರ್ಥಿಕ ಸಂಬಂಧಗಳ ಪ್ರ್ರಾಧ್ಯಾಪಕರಾದ ಅಶೋಕ್ ಗುಲಾಟಿ ತಿಳಿಸಿದರು.

     

  • ಎಸ್‍ಬಿಐ ಖಾತೆದಾರರಿಗೆ ಶಾಕ್- ಎಟಿಎಂಗಳಲ್ಲಿ ತಿಂಗಳಿಗೆ 5ಕ್ಕಿಂತ ಹೆಚ್ಚು ಬಾರಿ ವಿತ್‍ಡ್ರಾ ಮಾಡಿದ್ರೆ ಶುಲ್ಕ

    ಎಸ್‍ಬಿಐ ಖಾತೆದಾರರಿಗೆ ಶಾಕ್- ಎಟಿಎಂಗಳಲ್ಲಿ ತಿಂಗಳಿಗೆ 5ಕ್ಕಿಂತ ಹೆಚ್ಚು ಬಾರಿ ವಿತ್‍ಡ್ರಾ ಮಾಡಿದ್ರೆ ಶುಲ್ಕ

    – ಖಾತೆಗಳಲ್ಲಿ ಕನಿಷ್ಠ ಬಾಕಿ ಉಳಿಸಿಕೊಳ್ಳದಿದ್ದರೆ ದಂಡ

    ನವದೆಹಲಿ: ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರೋ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾತೆದಾರರು ಇಂದಿನಿಂದ ತಮ್ಮ ಖಾತೆಯಲ್ಲಿ ಕನಿಷ್ಠ ಬಾಕಿ ಉಳಿಸಿಕೊಳ್ಳದಿದ್ದರೆ ದಂಡ ಕಟ್ಟಬೇಕಾಗುತ್ತದೆ.

    ಮೆಟ್ರೋ ನಗರಗಳಲ್ಲಿರುವ ಶಾಖೆಗಳ ಎಸ್‍ಬಿಐ ಖಾತೆದಾರರು ತಿಂಗಳಿಗೆ ಕನಿಷ್ಠ 5 ಸಾವಿರ ರೂ. ಬ್ಯಾಲೆನ್ಸ್ ಹೊಂದಿರಬೇಕು. ಕನಿಷ್ಠ ಬಾಕಿ ಉಳಿಸಿಕೊಂಡಿಲ್ಲವಾದ್ರೆ 50 ರಿಂದ 100 ರೂ. ದಂಡ ಕಟ್ಟಬೇಕು. ಇನ್ನು ನಗರ ಪ್ರದೇಶಗಳ ಶಾಖೆಗಳಲ್ಲಿ ಖಾತೆ ಹೊಂದಿರುವವರು 3 ಸಾವಿರ ರೂ., ಅರೆನಗರ ಪ್ರದೇಶಗಳ ಖಾತೆದಾರರು 2 ಸಾವಿರ ರೂ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಖಾತೆದಾರರು 1 ಸಾವಿರ ರೂ. ಕನಿಷ್ಠ ಬಾಕಿ ಉಳಿಸಿಕೊಂಡಿರಬೇಕು. ಈ ನಿಯಮ ಉಲ್ಲಂಘಿಸಿದ್ರೆ 20 ರಿಂದ 50 ರೂ.ವರೆಗೆ ದಂಡ ತೆರಬೇಕು.

    ಎಟಿಎಂ ವಿತ್‍ಡ್ರಾವಲ್‍ಗೂ ನಿಯಮ: ಇನ್ಮುಂದೆ ಎಸ್‍ಬಿಐ ಖಾತೆದಾರರು ಎಟಿಎಂಗಳಿಂದ ಹೆಚ್ಚು ಬಾರಿ ಹಣ ವಿತ್‍ಡ್ರಾ ಮಾಡಿದ್ರೂ ಶುಲ್ಕ ತೆರಬೇಕು. ಇತರೆ ಬ್ಯಾಂಕ್‍ಗಳ ಎಟಿಎಂಗಳಲ್ಲಿ ಎಸ್‍ಬಿಐ ಖಾತೆದಾರರು ತಿಂಗಳಿಗೆ 3ಕ್ಕಿಂತ ಹೆಚ್ಚು ಬಾರಿ ಹಣ ವಿತ್‍ಡ್ರಾ ಮಾಡಿದ್ರೆ 20 ರೂ.ವರೆಗೆ ಶುಲ್ಕ ತೆರಬೇಕು. ಹಾಗೂ ಎಸ್‍ಬಿಐ ಎಟಿಎಂಗಳಲ್ಲಿ ತಿಂಗಳಿಗೆ 5ಕ್ಕಿಂತ ಹೆಚ್ಚು ಬಾರಿ ಹಣ ಡ್ರಾ ಮಾಡಿದ್ರೆ 10 ರೂ. ಶುಲ್ಕ ಕಟ್ಟಬೇಕು. ಒಂದು ವೇಳೆ ಖಾತೆಯಲ್ಲಿ ಡ್ರಾ ಮಾಡಿದ ಬಳಿಕವೂ 25 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣ ಇದ್ದರೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಹಾಗೆಯೇ ಬೇರೆ ಬ್ಯಾಂಕ್‍ಗಳ ಎಟಿಎಂನಲ್ಲಿ ಡ್ರಾ ಮಾಡಿದ ಬಳಿಕವೂ ಖಾತೆಯಲ್ಲಿ 1 ಲಕ್ಷ ರೂ.ಗಿಂತ ಹೆಚ್ಚಿನ ಹಣ ಇದ್ದರೆ ಶುಲ್ಕ ಕಟ್ಟಬೇಕಿಲ್ಲ. ಈ ಎಲ್ಲಾ ನಿಯಮಗಳು ಇಂದಿನಿಂದಲೇ ಜಾರಿಯಾಗಲಿದೆ.

    ಈ ಹೊಸ ನಿಯಮಗಳನ್ನ ಜಾರಿಗೆ ತಂದಿರುವುದನ್ನ ಎಸ್‍ಬಿಐ ಬ್ಯಾಂಕ್ ಸಮರ್ಥಿಸಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ್‍ಧನ್ ಖಾತೆಗಳು ಇರೋದ್ರಿಂದ ಅದನ್ನು ನಿರ್ವಹಿಸುವ ಸಲುವಾಗಿ ಕೆಲವೊಂದಿಷ್ಟು ಶುಲ್ಕ ವಿಧಿಸುವುದು ಅನಿವಾರ್ಯ ಎಂದು ಹೇಳಿದೆ.

    ಇವತ್ತು ನಮ್ಮ ಬಳಿ 11 ಕೋಟಿಯಷ್ಟು ಜನ್‍ಧನ್ ಖಾತೆಗಳಿವೆ. ಇಷ್ಟು ಹೆಚ್ಚಿನ ಸಂಖ್ಯೆಯ ಖಾತೆಗಳನ್ನ ನಿರ್ವಹಣೆ ಮಾಡಲು ಈ ಶುಲ್ಕ ಅಗತ್ಯ. ಹಲವಾರು ಅಂಶಗಳನ್ನ ಪರಿಗಣಿಸಿ, ಸೂಕ್ಷ್ಮವಾಗಿ ಪರಿಶೀಲಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ಹಿಂದೆಯೂ ದಂಡ ವಿಧಿಸಲಾಗುತ್ತಿತ್ತು. ಆದರೆ 2012ರಲ್ಲಿ ಅದನ್ನು ಹಿಂಪಡೆದ ಏಕೈಕ ಬ್ಯಾಂಕ್ ಎಸ್‍ಬಿಐ ಆಗಿತ್ತು ಎಂದು ಎಸ್‍ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ.

    ಇಂದಿನಿಂದ ಎಸ್‍ಬಿಐಗೆ ಸಹವರ್ತಿ ಬ್ಯಾಂಕ್‍ಗಳಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೋರ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ್ ಹಾಗೂ ಭಾರತೀಯ ಮಹಿಳಾ ಬ್ಯಾಂಕ್ ವಿಲೀನವಾಗಿದೆ.

  • ನಿಮ್ಮ ಎಸ್‍ಬಿಐ ಖಾತೆಯಲ್ಲಿ ಇಷ್ಟು ಮಿನಿಮಮ್ ಬ್ಯಾಲೆನ್ಸ್ ಇಲ್ಲವಾದ್ರೆ ಏಪ್ರಿಲ್.1 ರಿಂದ ಬೀಳುತ್ತೆ ದಂಡ!

    ನಿಮ್ಮ ಎಸ್‍ಬಿಐ ಖಾತೆಯಲ್ಲಿ ಇಷ್ಟು ಮಿನಿಮಮ್ ಬ್ಯಾಲೆನ್ಸ್ ಇಲ್ಲವಾದ್ರೆ ಏಪ್ರಿಲ್.1 ರಿಂದ ಬೀಳುತ್ತೆ ದಂಡ!

    ನವದೆಹಲಿ: ಎಸ್‍ಬಿಐ ಖಾತೆದಾರರು ತಮ್ಮ ಅಕೌಂಟ್‍ಗಳಲ್ಲಿ ಕನಿಷ್ಠ ಬಾಕಿಯನ್ನು ಹೊಂದಿಲ್ಲವಾದ್ರೆ ಏಪ್ರಿಲ್ 1ರ ನಂತರ ದಂಡ ಕಟ್ಟಬೇಕಾಗುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

    ಏಪ್ರಿಲ್ 1ರಿಂದ ಮೆಟ್ರೊಪಾಲಿಟನ್ ಪ್ರದೇಶಗಳಲ್ಲಿನ ಎಸ್‍ಬಿಐ ಖಾತೆದಾರರು ತಮ್ಮ ಖಾತೆಯಲ್ಲಿ 5 ಸಾವಿರ ರೂ. ಕನಿಷ್ಠ ಬಾಕಿ ಹೊಂದಿರಬೇಕು. ಹಾಗೆ ನಗರ ಪ್ರದೇಶಗಳಲ್ಲಿ 3 ಸಾವಿರ ರೂ., ಅರೆ ನಗರ ಪ್ರದೇಶಗಳಲ್ಲಿ 2 ಸಾವಿರ ರೂ., ಗ್ರಾಮೀಣ ಪ್ರದೇಶಗಳಲ್ಲಿ 1 ಸಾವಿರ ರೂ. ಮಿನಿಮಮ್ ಬ್ಯಾಲೆನ್ಸ್ ಹೊಂದಿರುವುದು ಕಡ್ಡಾಯ ಎಂದು ಎಸ್‍ಬಿಐ ತಿಳಿಸಿದೆ.

    ಒಂದು ವೇಳೆ ನಿಗದಿಪಡಿಸಿದಂತೆ ಕನಿಷ್ಠ ಬಾಕಿ ಹಣ ಖಾತೆಗಳಲ್ಲಿ ಉಳಿಸಿಲ್ಲವಾದ್ರೆ ಕನಿಷ್ಠ ಬಾಕಿಗೆ ಕೊರತೆ ಇರುವ ಮೊತ್ತಕ್ಕೆ ಅನುಗುಣವಾಗಿ ದಂಡ ಕಟ್ಟಬೇಕಾಗುತ್ತದೆ. ಅಂದ್ರೆ ಒಂದು ವೇಳೆ ಮೆಟ್ರೊಪಾಲಿಟನ್ ಪ್ರದೇಶದಲ್ಲಿನ ಖಾತೆಯಲ್ಲಿ ಕನಿಷ್ಠ ಬಾಕಿಗಿಂತ ಶೇ.75 ರಷ್ಟು ಹಣ ಕೊರತೆ ಇದ್ದರೆ 100 ರೂ. ದಂಡದ ಜೊತೆಗೆ ಸೇವಾ ತೆರಿಗೆಯನ್ನು ತೆರಬೇಕಾಗುತ್ತದೆ. ಶೇ.50 ರಿಂದ 75ರಷ್ಟು ಕೊರತೆ ಇದ್ದರೆ ಸೇವಾ ತೆರಿಗೆ ಜೊತೆಗೆ 75 ರೂ. ಶುಲ್ಕ ಕಟ್ಟಬೇಕು. ಹಾಗೇ ಶೇ. 50 ರಷ್ಟು ಕೊರತೆಯಿದ್ದರೆ ಸೇವಾ ತೆರಿಗೆ ಜೊತೆಗೆ 50 ರೂ. ದಂಡ ಕಟ್ಟಬೇಕಾಗುತ್ತದೆ ಎಂದು ಎಸ್‍ಬಿಐನ ಹೊಸ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಅದರಂತೆ ಗ್ರಾಮೀಣ ಪ್ರದೇಶಗಳಲ್ಲಿನ ಖಾತೆದಾರರು ಕನಿಷ್ಠ ಬಾಕಿ ಹೊಂದಿಲ್ಲವಾದ್ರೆ 20 ರೂ. ನಿಂದ 50 ರೂ. ಜೊತೆಗೆ ಸೇವಾ ತೆರಿಗೆ ಕಟ್ಟಬೇಕು ಎಂದು ಎಸ್‍ಬಿಐ ಹೇಳಿದೆ. ಈ ಹೊಸ ನಿಯಮ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.